ಆಧ್ಯಾತ್ಮಿಕ ಪ್ರಗತಿಗಾಗಿ ಪೂರಕ ವಾತಾವರಣ !

‘ಉತ್ತಮ ಸಾಧಕ’ನನ್ನು ರೂಪಿಸುವ ಕಾರ್ಯಶಾಲೆ !

ಆಧ್ಯಾತ್ಮಿಕ ಪ್ರಗತಿ ವೇಗವಾಗಿ ಆಗಲು ಸಾಧಕನು ಕೃತಿಯ ಸ್ತರದಲ್ಲಿ ಸಾಧನೆ ಮಾಡುವುದು ಆವಶ್ಯಕವಾಗಿರುತ್ತದೆ. ಆಶ್ರಮದಲ್ಲಿ ತೆಗೆದುಕೊಳ್ಳಲಾಗುವ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯ ಸತ್ಸಂಗ, ಭಾವವೃದ್ಧಿ ಸತ್ಸಂಗ, ವ್ಯಷ್ಟಿ ಸಾಧನೆಯ ವರದಿ ಮುಂತಾದವುಗಳಿಂದ ಸಾಧಕರಿಗೆ ಸಾಧನೆಯ ಬಗ್ಗೆ ಪ್ರಾಯೋಗಿಕ ಮಾರ್ಗದರ್ಶನ ಸಿಗುವುದರಿಂದ ಸಾಧನೆ ಯಲ್ಲಿ ಅವರ ಪ್ರಗತಿಯು ವೇಗವಾಗಿ ಆಗುತ್ತದೆ.

ಸಂತರನ್ನು ನಿರ್ಮಿಸುವ ಪವಿತ್ರ ವಾಸ್ತು !

ಡಿಸೆಂಬರ್ 2017 ರವರೆಗೆ ಸನಾತನದ ರಾಮನಾಥಿ ಆಶ್ರಮದಲ್ಲಿ ಪರಾತ್ಪರ ಗುರು ಡಾಕ್ಟರರ ಮಾರ್ಗದರ್ಶನದಲ್ಲಿ ‘ಗುರುಕೃಪಾ ಯೋಗಾನುಸಾರ ಸಾಧನೆ’ ಮಾಡಿ 19 ಸಾಧಕರು ಸಂತಪದವಿಯಲ್ಲಿ ವಿರಾಜಮಾನರಾಗಿದ್ದಾರೆ ಮತ್ತು 113 ಸಾಧಕರು ಶೇ. 60 ಮತ್ತು ಅದಕ್ಕಿಂತಲೂ ಹೆಚ್ಚಿನ ಆಧ್ಯಾತ್ಮಿಕ ಮಟ್ಟವನ್ನು ತಲುಪಿದ್ದಾರೆ ಮತ್ತು ಅವರೂ ಸಂತರಾಗುವ ಮಾರ್ಗದಲ್ಲಿದ್ದಾರೆ !

‘ಸನಾತನದ ರಾಮನಾಥಿ ಆಶ್ರಮ ಕೇವಲ ವೈಕುಂಠಧಾಮವಲ್ಲ, ಪರಮಧಾಮ ! ಇಲ್ಲಿನ ಸಾಧಕರಲ್ಲಿ ಪ್ರೇಮಭಾವ ತುಳುಕುತ್ತಿದ್ದು, ಅವರು ಭಾವ ಪೂರ್ಣ ಮತ್ತು ಅಹಂರಹಿತ ಸೇವೆ ಮಾಡುತ್ತಾರೆ. ಇಲ್ಲಿ ಬಂದು ಧನ್ಯಳಾದೆ.’
ಗುರು ಮಾ ಗೀತೇಶ್ವರೀಜೀ, ಗೀತಾ ಆಶ್ರಮ, ದೆಹಲಿ. (7.2.2015)

Leave a Comment