ತುಂಗೆಗಡ್ಡೆ (ತುಂಗಮುಸ್ತೆ, ಕೊರನಾರಗಡ್ಡೆ, ನಾಗರಮೋಥಾ) ಚೂರ್ಣ
ಅ. ಗುಣಧರ್ಮ ಮತ್ತು ಆಗಬಹದಾದ ಉಪಯೋಗ
ಈ ಔಷಧಿ ತಂಪು ಗುಣಧರ್ಮವನ್ನು ಹೊಂದಿದ್ದು, ಪಿತ್ತ ಹಾಗೂ ಕಫನಾಶಕವಾಗಿದೆ. ರೋಗಗಳಲ್ಲಿನ ಇದರ ಉಪಯೋಗವನ್ನು ಮುಂದೆ ಕೊಡಲಾಗಿದೆ; ಆದರೆ ಪ್ರಕೃತಿ, ಪ್ರದೇಶ, ಋತು ಮತ್ತು ವ್ಯಕ್ತಿಗಿರುವ ಇತರ ರೋಗಗಳಿಗನುಸಾರ ಉಪಚಾರದಲ್ಲಿ ಬದಲಾವಣೆ ಆಗಬಹುದು. ಆದ್ದರಿಂದ ಔಷಧಿಯನ್ನು ವೈದ್ಯರ ಸಲಹೆಗನುಸಾರವೇ ತೆಗೆದುಕೊಳ್ಳಬೇಕು.

| ಉಪಯೋಗ | ಔಷಧಿಯನ್ನು ಸೇವಿಸುವ ಪದ್ಧತಿ | ಅವಧಿ |
|---|---|---|
| 1. ಬಾಯಾರಿಕೆಯಾಗುವುದು, ಮೈ ಸಿಡಿತ, ಮೈನೋವು | ಪ್ರತಿ 1 ಲೀಟರ ಕುಡಿಯುವ ನೀರಿನಲ್ಲಿ ಅರ್ಧಚಮಚದಷ್ಟು ತುಂಗೆ ಗಡ್ಡೆಯ ಚೂರ್ಣವನ್ನು ಹಾಕಿ ನೀರು 5 ನಿಮಿಷ ಕುದಿಸಬೇಕು. ಬಾಯಾರಿಕೆಯಾದರೆ ಇದೇ ನೀರು ಕುಡಿಯಬೇಕು. | 3-4 ದಿನ |
| 2. ಹೊಟ್ಟೆ ತೊಳೆಸುವುದು, ವಾಂತಿ, ಅತಿಸಾರ (ಭೇದಿ) ಆಗುವುದು ಮತ್ತು ಮಲದೊಂದಿಗೆ ರಕ್ತ ಕಾಣಿಸುವುದು | ಲಾವಂಚ ಚೂರ್ಣ, ಕೊರನಾರಿಗೆಡ್ಡೆಯ ಚೂರ್ಣ, ಕೊತ್ತಂಬರಿ ಪುಡಿ ಮತ್ತು ಬಡಿಸೋಪಿನ ಪುಡಿಯನ್ನು ಸಮಪ್ರಮಾಣದಲ್ಲಿ ಬೆರೆಸಬೇಕು. ಇದರ 1 ಚಮಚ ಔಷಧಿಯನ್ನು ದಿನದಲ್ಲಿ 3-4 ಸಲ 1 ಬಟ್ಟಲು ಬಿಸಿನೀರಿನೊಂದಿಗೆ ಸೇವಿಸಬೇಕು. | 3-4 ದಿನ |
| ೩. ಮೈ ಭಾರವೆನಿಸುವುದು, ಹಸಿವೆಯಾಗದಿರುವುದು, ಮೂತ್ರದ ಬಣ್ಣ ಬದಲಾಗುವುದು, ಜ್ವರ ಬಂದಾಗ, ಹಾಗೂ ರಕ್ತಶುದ್ಧಿಗಾಗಿ | 1 ಚಮಚ ತುಂಗೆ ಗಡ್ಡೆ ಚೂರ್ಣ 1 ಬಟ್ಟಲು ಬಿಸಿ ನೀರಿನಲ್ಲಿ ಸೇರಿಸಿ ದಿನದಲ್ಲಿ 3-4 ಸಲ ಸೇವಿಸಬೇಕು. | 7 ದಿನ |
| ೪. ಚಿಕ್ಕಮಕ್ಕಳಿಗೆ ಹಲ್ಲು ಬರುವಾಗ ಉಂಟಾಗುವ ಜ್ವರ ಅಥವಾ ಈ ಸಮಯದಲ್ಲಿ ಉದ್ಭವಿಸುವ ಇತರ ಕಾಯಿಲೆಗಳು, ಅಲ್ಲದೇ ಸ್ತನಪಾನ ಮಾಡುವ ಶಿಶುಗಳಿಗೆ ಬರುವ ಜ್ವರ | 1 ಲೋಟ ನೀರಿನಲ್ಲಿ 1 ಚಮಚ ತುಂಗೆ ಗಡ್ಡೆಯ ಚೂರ್ಣವನ್ನು ಹಾಕಿ ಕುದಿಸಿ ಸೋಸಿ ತೆಗೆದು ದಿನದಲ್ಲಿ 5-6 ಸಲ ಇದರ ಸ್ವಲ್ಪ ಸ್ವಲ್ಪ ನೀರನ್ನು ಶಿಶುವಿಗೆ ಕುಡಿಸಬೇಕು. | 7 ದಿನ |
ಆ. ಸೂಚನೆ

8 ರಿಂದ 14 ವಯಸ್ಸಿನ ಮಕ್ಕಳು ಹಿರಿಯರ ಅರ್ಧ ಪ್ರಮಾಣದಲ್ಲಿ ಮತ್ತು 3 ರಿಂದ 7 ವಯಸ್ಸಿನ ಮಕ್ಕಳು ಹಿರಿಯರ ಕಾಲು ಪ್ರಮಾಣದಲ್ಲಿ ಔಷಧಿಯ ಚೂರ್ಣವನ್ನು ತೆಗೆದುಕೊಳ್ಳಬೇಕು.
– ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (11.6.2021)
ಮಳೆಗಾಲದಲ್ಲಾಗುವ ನೆಗಡಿ, ಕೆಮ್ಮು, ಜ್ವರ ಇವುಗಳಿಗೆ ಉಪಯುಕ್ತ ಆಯುರ್ವೇದದ ಔಷಧಿಗಳು
ಮಳೆಗಾಲದಲ್ಲಿನ ರೋಗಗಳ ಮೇಲೆ ಉಪಯುಕ್ತ ಆಯುರ್ವೇದದ ಔಷಧಿಗಳು
ಕುಟಜ ಘನವಟಿ (ಮಾತ್ರೆಗಳು)
ಗಂಧರ್ವ ಹರೀತಕೀ ವಟಿ (ಮಾತ್ರೆಗಳು)
ಚಂದ್ರಾಮೃತ ರಸ (ಮಾತ್ರೆಗಳು)
ಲಶುನಾದಿ ವಟಿ (ಮಾತ್ರೆ)