ಮೊದಲು ನನ್ನ ಮನಸ್ಸಿನಲ್ಲಿ ನಾಮಜಪಾದಿ ಉಪಾಯಗಳನ್ನು ಮಾಡುವಾಗ ಅನೇಕ ಪ್ರಶ್ನೆಗಳು ಬರುತ್ತಿದ್ದವು; ಆದ್ದರಿಂದ ‘ನನ್ನ ನಾಮಜಪಾದಿ ಉಪಾಯಗಳು ಸರಿಯಾಗಿ ಆಗುತ್ತಿರಲಿಲ್ಲ’, ಎಂವುದುರ ಬಗ್ಗೆ ನನಗೆ ಒತ್ತಡವಿರುತ್ತಿತ್ತು ಮತ್ತು ನಾಮಜಪ ನಡೆದ ನಂತರವೂ ನನಗೆ ಸಮಾಧಾನವಾಗುತ್ತಿರಲಿಲ್ಲ. ೧೮.೮.೨೦೨೪ ರಂದು ಗೋವಾದ ರಾಮನಾಥಿಯಲ್ಲಿನ ಸನಾತನದ ಆಶ್ರಮಮದಲ್ಲಿ ನನಗೆ ಸದ್ಗುರು ಡಾ. ಮುಕುಲ ಗಾಡಗೀಳ ಇವರ ಮಾರ್ಗದರ್ಶನ ಲಭಿಸಿತು. ಅವರ ಮಾರ್ಗದರ್ಶನವನ್ನು ಕೇಳಿ ನನ್ನ ಮನಸ್ಸು ಸಕಾರಾತ್ಮಕವಾಯಿತು. ಆದುದರಿಂದ ನನಗೆ ದೇವರ ಕೃಪೆಯಿಂದ ನಾಮಜಪಾದಿ ಉಪಾಯಗಳ ಪರಿಣಾಮವನ್ನು ಸ್ವಲ್ಪ ಪ್ರಮಾಣದಲ್ಲಿ ಅನುಭವಿಸಲು ಸಾಧ್ಯವಾಗತೊಡಗಿತು. ನಾನು ನಾಮಜಪಾದಿ ಉಪಾಯಗಳ ಬಗ್ಗೆ ಸದ್ಗುರು ಡಾ. ಮುಕುಲ ಗಾಡಗೀಳ ಇವರಿಗೆ ಕೇಳಿದ ಪ್ರಶ್ನೆಗಳು ಮತ್ತು ಅವರು ನೀಡಿದ ಉತ್ತರಗಳನ್ನು ಮುಂದೆ ಕೊಟ್ಟಿದ್ದೇನೆ. – ಕು. ಪ್ರಿಯಾಂಕಾ ಪ್ರಭುದೇಸಾಯಿ
ಶರೀರದ ಮೇಲಿರುವ ತೊಂದರೆದಾಯಕ ಶಕ್ತಿಯ ಆವರಣ ಸಂಪೂರ್ಣವಾಗಿ ತೆಗೆಯುವ ಪ್ರಕ್ರಿಯೆ
ಪ್ರಶ್ನೆ : ಶರೀರದ ಮೇಲಿರುವ ತೊಂದರೆದಾಯಕ ಶಕ್ತಿಯ ಆವರಣ ದೂರವಾಗುವ ಪ್ರಕ್ರಿಯೆ ಹೇಗಿರುತ್ತದೆ?
ಉತ್ತರ
೧. ಸದ್ಯ ನಮ್ಮ ಎರಡಕ್ಕಿಂತ ಹೆಚ್ಚು ಕುಂಡಲಿನಿಚಕ್ರಗಳ ಮೇಲೆ ಆವರಣದ (ತೊಂದರೆದಾಯಕ ಶಕ್ತಿಯ) ದಪ್ಪ ಪಟ್ಟಿ ಬರುತ್ತಿದೆ ಎಂಬ ವಿಷಯ ಅನುಭವಕ್ಕೆ ಬರುತ್ತಿದೆ.
೨. ಮೊದಲಿಗೆ, ‘ಅಂಗೈಗಳ ಹಿಮ್ಮುಖ-ಮುಮ್ಮುಖ ಮುದ್ರೆ’ಯನ್ನು ಮಾಡಿ ಆವರಣವನ್ನು ತೆಗೆಯಬೇಕು. (ಛಾಯಾಚಿತ್ರ ನೋಡಿ) ಈ ಮುದ್ರೆಯನ್ನು ‘ಸಹಸ್ರಾರದಿಂದ ಸ್ವಾಧಿಷ್ಠಾನ ಚಕ್ರ’ ಹೀಗೆ ಪ್ರತಿಯೊಂದು ಚಕ್ರದ ಮುಂದೆ ೧-೨ ಸೆಂ.ಮೀ. ಅಂತರದಲ್ಲಿ ೧೫ ರಿಂದ ೩೦ ಸೆಕೆಂಡುಗಳ ಕಾಲ ಹಿಡಿಯಬೇಕು. ಇದರಲ್ಲಿ, ಅಂಗೈಯ ಮುಮ್ಮುಖ ಮುದ್ರೆಯು ನಮ್ಮ ಶರೀರದ ಕಡೆಗೆ ಇರುತ್ತದೆ ಮತ್ತು ಅದು ಶರೀರದ ಮೇಲೆ ಉಪಾಯ ಮಾಡುತ್ತದೆ. ಅಂಗೈಯ ಮುಮ್ಮುಖ ಮುದ್ರೆಯ ಮೇಲೆ ಇರಿಸಲಾದ ಮತ್ತೊಂದು ಅಂಗೈಯ ಹಿಮ್ಮುಖ ಮುದ್ರೆಯು ಶರೀರದ ಹೊರಗಿನ ದಿಕ್ಕಿಗೆ ಇರುತ್ತದೆ. ಈ ಮುದ್ರೆಯು ಹೊರಗಿನಿಂದ ನಮ್ಮ ಶರೀರದ ಮೇಲೆ ಬರುವ ತೊಂದರೆದಾಯಕ ಶಕ್ತಿಯನ್ನು ತಡೆಯುತ್ತದೆ ಮತ್ತು ಅದನ್ನು ನಾಶಪಡಿಸುತ್ತದೆ. ಇದರಿಂದಾಗಿ, ‘ಅಂಗೈಗಳ ಹಿಮ್ಮುಖ-ಮುಮ್ಮುಖ ಮುದ್ರೆ’ಯನ್ನು ಮಾಡಿ ಆವರಣವನ್ನು ತೆಗೆದರೆ, ಹೊರಗಿನಿಂದ ಶರೀರದ ಮೇಲಾಗುವ ಕೆಟ್ಟ ಶಕ್ತಿಗಳ ಆಕ್ರಮಣಗಳನ್ನು ತಡೆಯಲಾಗುತ್ತದೆ, ಹಾಗೆಯೇ ಶರೀರದ ಮೇಲಿರುವ ಆವರಣವೂ ಕಡಿಮೆಯಾಗಲು ಸಹಾಯವಾಗುತ್ತದೆ. ಈ ಮುದ್ರೆಯಿಂದಾಗಿ ಶರೀರದ ಮೇಲಿನ ಆವರಣದ ಪಟ್ಟಿಯ ದಪ್ಪ ಬಹಳಷ್ಟು ಕಡಿಮೆಯಾಗುತ್ತದೆ.

೩. ಇದರ ನಂತರ ‘ಮುಷ್ಟಿಗಳಿಂದ ಆವರಣವನ್ನು ತೆಗೆಯುವುದು (ಶರೀರದ ಮೇಲೆ ಬಂದಿರುವ ತೊಂದರೆದಾಯಕ ಶಕ್ತಿಯ ಆವರಣವನ್ನು ಎರಡೂ ಕೈಗಳ ಮುಷ್ಟಿಗಳಲ್ಲಿ ಸಂಗ್ರಹಿಸುವುದು ಮತ್ತು ಅದನ್ನು ಶರೀರದಿಂದ ದೂರ ಎಸೆಯುವುದು) ಈ ಪದ್ಧತಿಯಿಂದ ತಲೆಯ ಸುತ್ತಲೂ ಇರುವ, ಹಾಗೆಯೇ ಪ್ರತಿಯೊಂದು ಚಕ್ರದ ಮೇಲಿರುವ ಆವರಣವನ್ನು ತೆಗೆದರೆ, ಶರೀರದ ಸುತ್ತಲೂ ಮಂದವಾಗಿ ಹರಡಿರುವ ತೊಂದರೆದಾಯಕ ಶಕ್ತಿ ಯನ್ನು ದೂರ ಮಾಡಬಹುದು.
![]() |
![]() |
೪. ಇದರ ನಂತರ, ಶರೀರದ ಮೇಲೆ ಉಳಿದಿರುವ ಆವರಣದ ಪಟ್ಟಿಯನ್ನು ದೂರ ಮಾಡಲು ‘ಗೋಪುರ (ಟಾವರ್) ಮುದ್ರೆ’ಯನ್ನು ಉಪಯೋಗಿಸಬೇಕು. ಈ ಮುದ್ರೆಯನ್ನು ‘ಸಹಸ್ರಾರದಿಂದ ಸ್ವಾಧಿಷ್ಠಾನ ಚಕ್ರ’ ಹೀಗೆ ಪ್ರತಿಯೊಂದು ಚಕ್ರದ ಮುಂದೆ ೧೫ ರಿಂದ ೩೦ ಸೆಕೆಂಡುಗಳ ಕಾಲ ಹಿಡಿಯಬೇಕು. ಈ ಮುದ್ರೆಯಲ್ಲಿ, ಎರಡೂ ಕೈಗಳ ಪರಸ್ಪರ ಜೋಡಿಸಿದ ಮಧ್ಯದ ಬೆರಳುಗಳ ತುದಿಗಳಿಂದ (ಗೋಪುರದಂತೆ ಮಾಡಿದ ಬೆರಳುಗಳ ರಚನೆಯಿಂದ) ನಾಮಜಪದ ಸ್ಪಂದನಗಳು ಎರಡೂ ಅಂಗೈಗಳ ಮಧ್ಯಭಾಗಕ್ಕೆ ಬಂದು, ಅವು ಶರೀರದ ಮೇಲೆ ಹರಡುತ್ತವೆ, ಹಾಗೆಯೇ ಚಕ್ರಗಳ ಮಾಧ್ಯಮದಿಂದ ಶರೀರದ ಒಳಗೂ ಹೋಗುತ್ತವೆ. ನಾಮಜಪದ ಸ್ಪಂದನಗಳಿಂದಾಗಿ ಶರೀರದಲ್ಲಿ ಮತ್ತು ಶರೀರದ ಮೇಲೆ ನಿರಂತರವಾಗಿ ಬಂದಿರುವ ಆವರಣದ ಪಟ್ಟಿಯು ನಾಶವಾಗುತ್ತದೆ ಹಾಗೂ ಶರೀರದೊಳಗಿನ ಆವರಣವೂ ನಾಶವಾಗಲು ಸಹಾಯವಾಗುತ್ತದೆ.

೫. ಇದರ ನಂತರ ಪುನಃ ‘ಮುಷ್ಟಿಗಳಿಂದ ಆವರಣವನ್ನು ತೆಗೆಯುವ’ ಪದ್ಧತಿಯಿಂದ ಆವರಣವನ್ನು ತೆಗೆದರೆ, ಶರೀರದ ಸುತ್ತಲಿರುವ ಆವರಣವು ಸಂಪೂರ್ಣ ದೂರವಾಗುತ್ತದೆ.
ಶರೀರದ ಮೇಲಿನ ಆವರಣವನ್ನು ತೆಗೆಯುವಾಗ ಮನಸ್ಸಿನ ಏಕಾಗ್ರತೆಯ ಆವಶ್ಯಕತೆ
ಪ್ರಶ್ನೆ : ನಾಮಜಪವನ್ನು ಹುಡುಕಿದ ನಂತರ ನಾವು ನಾಮಜಪವನ್ನು ಮಾಡುತ್ತಾ ಆವರಣವನ್ನು ತೆಗೆಯುತ್ತೇವೆ. ಆಗ ನಾಮಜಪವು ಅಪ್ರಸ್ತುತವಾಗಿದ್ದರೆ ಆವರಣವು ಹೋಗುವುದಿಲ್ಲವೇ?
ಉತ್ತರ : (ಮೊದಲು ನೀಡಿರುವಂತೆ ಅಂಗೈಗಳ ಹಿಮ್ಮುಖ-ಮುಮ್ಮುಖ ಮುದ್ರೆ ಹಾಗೂ ಟಾವರ್) ಮುದ್ರೆಗಳಿಂದ ಶರೀರದ ಮೇಲಿನ ಆವರಣವನ್ನು ತೆಗೆಯುವಾಗ ನಾಮಜಪದ ಕಡೆಗೆ ಗಮನವನ್ನು ಏಕಾಗ್ರಗೊಳಿಸದೆ, ಯಾವ ಸ್ಥಾನದ ಮೇಲೆ ಆ ಮುದ್ರೆಯನ್ನು ಹಿಡಿಯುತ್ತೇವೆಯೋ, ಆ ಸ್ಥಾನದ ಮೇಲೆ ಗಮನವನ್ನು ಏಕಾಗ್ರಗೊಳಿಸಬೇಕು. ಇದರಿಂದ ಆ ಸ್ಥಾನದ ಮೇಲೆ ನಿಖರವಾದ ಉಪಾಯಗಳು ಆಗುತ್ತವೆ ಮತ್ತು ಆವರಣವು ಬೇಗನೆ ಹೋಗುತ್ತದೆ. ಹಾಗೆ ನೋಡಿದರೆ, ನಾಮಜಪ ಮಾಡುವುದಕ್ಕಿಂತ ಕೇವಲ ನಮ್ಮ ಶ್ವಾಸದ ಮೇಲೆ ಗಮನ ಕೊಟ್ಟರೂ ನಡೆಯುತ್ತದೆ. ಆವರಣವನ್ನು ತೆಗೆಯುವಾಗ ಮಾಡುತ್ತಿರುವ ಮುದ್ರೆಯಲ್ಲಿಯೇ ಶಕ್ತಿ ಇರುತ್ತದೆ. ಆವರಣವನ್ನು ತೆಗೆದ ನಂತರ ಉಪಾಯ ಮಾಡಲು ನೀವು ಮತ್ತೆ ನಾಮಜಪವನ್ನು ಹುಡುಕಬಹುದು.
ಕಣ್ಣುಗಳ ಮೇಲಿರುವ ಆವರಣ
ಪ್ರಶ್ನೆ : ಕೋಣೆಯಲ್ಲಿರುವ ಬೆಳಕಿಗಿಂತ ಕಡಿಮೆ ಬೆಳಕು ಕಾಣಿಸುತ್ತಿದೆ ಅಥವಾ ಕಣ್ಣುಗಳು ಭಾರವಾದಂತೆ ಅನಿಸಿದರೆ ಏನು ಮಾಡಬೇಕು ?
ಉತ್ತರ : ಆ ಸಮಯದಲ್ಲಿ ‘ನಮ್ಮ ಕಣ್ಣುಗಳ ಮೇಲೆ ತೊಂದರೆದಾಯಕ ಶಕ್ತಿಯ ಆವರಣ ಬಂದಿದೆ’ ಎಂದು ತಿಳಿಯಬೇಕು. ಕಣ್ಣುಗಳ ಮೇಲಿನ ಆವರಣವನ್ನು ತೆಗೆಯಲು ಕಣ್ಣುಗಳ ಮುಂದೆ ೧-೨ ಸೆಂ.ಮೀ. ಅಂತರದಲ್ಲಿ ಬಲ ಅಂಗೈಯನ್ನು ಹಿಡಿದು ಮತ್ತು ತಲೆಯ ಹಿಂದಿನ ಭಾಗದ ಮುಂದೆ ೧-೨ ಸೆಂ.ಮೀ. ಅಂತರದಲ್ಲಿ ಎಡ ಅಂಗೈಯನ್ನು ಹಿಡಿದು ‘ಮಹಾಶೂನ್ಯ’ ಈ ನಾಮಜಪವನ್ನು ೫ ರಿಂದ ೧೦ ನಿಮಿಷಗಳ ಕಾಲ ಮಾಡಬೇಕು. ‘ಕಣ್ಣುಗಳ ಮೇಲಿನ ಭಾರ ಕಡಿಮೆಯಾಗಿದೆ’ ಎಂದು ಅರಿವಾದರೆ ಉಪಾಯವನ್ನು ನಿಲ್ಲಿಸಬೇಕು. ಅನಂತರ ಕಣ್ಣುಗಳ ಮೇಲೆ ಮತ್ತು ತಲೆಯ ಸುತ್ತಲೂ ಸ್ವಲ್ಪ ಪ್ರಮಾಣದಲ್ಲಿ ಉಳಿದಿರುವ ತೊಂದರೆದಾಯಕ ಶಕ್ತಿಯನ್ನು ೧-೨ ನಿಮಿಷಗಳ ಕಾಲ ‘ಮುಷ್ಟಿಗಳಿಂದ ಆವರಣ ತೆಗೆಯುವ’ ಪದ್ಧತಿಯಿಂದ ದೂರ ಮಾಡಬೇಕು.
ಹುಡುಕಿದ ಜಪ ಮಡಿಯೂ ಒತ್ತಡ ಕಡಿಮೆಯಾಗಲು ಬಹಳ ಸಮಯ ಬೇಕಾಗುವುದು ಅಥವಾ ಆ ಸಮಯದಲ್ಲಿ ಯಾವುದೇ ಒತ್ತಡ ಅನುಭವಕ್ಕೆ ಬಾರದಿರುವ ಕಾರಣ
ಪ್ರಶ್ನೆ : ಕಂಡುಹಿಡಿದ ನಾಮಜಪವು ಯೋಗ್ಯವಲ್ಲವೆಂದು ಹೇಗೆ ತಿಳಿಯುತ್ತದೆ?
ಉತ್ತರ
೧. ನಿರ್ಗುಣ ಸ್ತರದ ನಾಮಜಪಗಳಾದ ‘ಶೂನ್ಯ, ಮಹಾಶೂನ್ಯ, ನಿರ್ಗುಣ ಮತ್ತು ಓಂ’ ಇವು ಸ್ತರಕ್ಕನುಸಾರ ಏರಿಕೆ ಕ್ರಮದಲ್ಲಿವೆ. ಮೇಲಿನ ಮಟ್ಟದ ನಾಮಜಪ, ಉದಾ. ‘ನಿರ್ಗುಣ’ ನಾಮಜಪದ ಅವಶ್ಯಕತೆ ಇದ್ದಾಗ ‘ಮಹಾಶೂನ್ಯ’ ನಾಮಜಪವನ್ನು ಮಾಡಿದರೆ, ನಮ್ಮ ಮೇಲಿನ ಒತ್ತಡವು ೧೦ ನಿಮಿಷಗಳಲ್ಲಿ ಕಡಿಮೆಯಾಗುವ ಬದಲು, ಅದು ಕಡಿಮೆಯಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಆಗ ‘ಮೇಲಿನ ಮಟ್ಟದ ನಾಮಜಪವನ್ನು ಮಾಡುವ ಆವಶ್ಯಕತೆ ಇದೆ’, ಎಂದು ಗಮನದಲ್ಲಿಟ್ಟುಕೊಂಡು ಮೇಲಿನ ಮಟ್ಟದ ನಾಮಜಪವನ್ನು ಮಾಡಿ ನೋಡಬೇಕು.
೨. ಕೆಳಗಿನ ಮಟ್ಟದ ನಾಮಜಪ (ಉದಾ. ‘ಮಹಾಶೂನ್ಯ’) ಆವಶ್ಯಕವಿರುವಾಗ ಮೇಲಿನ ಮಟ್ಟದ ‘ನಿರ್ಗುಣ’ ನಾಮಜಪವನ್ನು ಮಾಡಿದರೆ ನಮಗೆ ಒತ್ತಡ ಅನಿಸುವುದೇ ಇಲ್ಲ. ಇದರಿಂದ ನಮ್ಮ ಮೇಲೆ ನಾಮಜಪದ ಯಾವುದೇ ಪರಿಣಾಮವಾಗುತ್ತಿಲ್ಲ ಎಂದು ಅರ್ಥವಾಗುತ್ತದೆ. ಆಗ ‘ಕೆಳಗಿನ ಮಟ್ಟದ ನಾಮಜಪವನ್ನು ಮಾಡುವುದು ಆವಶ್ಯಕವಾಗಿದೆ’, ಎಂಬುದನ್ನು ಗಮನದಲ್ಲಿಡಬೇಕು.
೩. ‘ನಾಮಜಪವು ಅಯೋಗ್ಯವಾಗಿದೆ’, ಎಂದು ಗಮನಕ್ಕೆ ಬಂದರೆ ನಾಮಜಪವನ್ನು ಮತ್ತೊಮ್ಮೆ ಹುಡುಕಿ ಯೋಗ್ಯ ನಾಮಜಪವನ್ನು ಮಾಡಬೇಕು.
ಯೋಗ್ಯ ನಾಮಜಪವನ್ನು ಹುಡುಕುವ ಪ್ರಕ್ರಿಯೆ
ಪ್ರಶ್ನೆ : ಯಾವುದಾದರೊಂದು ನಾಮಜಪವನ್ನು ಸ್ವಲ್ಪ ಕಾಲಾವಧಿಯ ತನಕ ಮಾಡಿಯೂ ನಮ್ಮ ತೊಂದರೆಯ ಪ್ರಮಾಣ ಸ್ವಲ್ಪವೂ ಕಡಿಮೆಯಾಗದಿದ್ದರೆ, ಏನು ಮಾಡಬೇಕು?
ಉತ್ತರ : ಕೆಲವೊಮ್ಮೆ ೧೦-೧೫ ನಿಮಿಷಗಳ ಕಾಲ ಯಾವುದಾದರೊಂದು ನಾಮಜಪವನ್ನು ಮಾಡಿದರೂ ನಮ್ಮ ತೊಂದರೆ ಸ್ವಲ್ಪವೂ ಕಡಿಮೆಯಾಗುವುದಿಲ್ಲ. ಆಗ ನಮ್ಮಲ್ಲಿ ಅಡಗಿರುವ ಅವ್ಯಕ್ತ ಕಪ್ಪು ಶಕ್ತಿ ವ್ಯಕ್ತವಾಗುತ್ತಿರುತ್ತದೆ ಮತ್ತು ನಮ್ಮ ತೊಂದರೆ ಹೆಚ್ಚಾಗಿರುತ್ತದೆ; ಆದುದರಿಂದ ‘ಆ ನಾಮಜಪದಿಂದ ನಮ್ಮ ತೊಂದರೆ ಸ್ವಲ್ಪವೂ ಕಡಿಮೆಯಾಗುವುದಿಲ್ಲ’, ಎಂದು ನಮಗೆ ತಿಳಿಯುತ್ತದೆ. ಈ ಸಮಯದಲ್ಲಿ ನಾವು ಮಾಡುತ್ತಿರುವ ನಾಮಜಪಕ್ಕಿಂತ ಮೇಲಿನ ಮಟ್ಟದ ನಾಮಜಪವನ್ನು (ನಮ್ಮ ಹೆಚ್ಚಾಗಿರುವ ತೊಂದರೆಗೆ ಆವಶ್ಯಕವಾಗಿರುವ ಮೇಲಿನ ಸ್ತರದ ನಾಮಜಪವನ್ನು) ಮಾಡಬೇಕು (ಉದಾ. ನಾವು ‘ಶೂನ್ಯ’ ನಾಮಜಪವನ್ನು ಮಾಡುತ್ತಿದ್ದರೆ, ಅದಕ್ಕಿಂತಲೂ ಮೇಲಿನ ಸ್ತರದ ‘ಮಹಾಶೂನ್ಯ’ ನಾಮಜಪವನ್ನು ಮಾಡಬೇಕು) ಮತ್ತು ಏನು ಪರಿಣಾಮವಾಗುತ್ತಿದೆ ಎಂದು ಗಮನಿಸಬೇಕು. ಪ್ರತಿಯೊಂದು ಪ್ರಸಂಗದಿಂದ ಮತ್ತು ಅನುಭೂತಿಯಿಂದ ಕಲಿಯಬೇಕು. ಹೀಗೆ ಕಲಿತರೆ ಮಾತ್ರ ಈಶ್ವರನು ಸಹಾಯ ಮಾಡುವನು.
ಉಪಾಯಕ್ಕಾಗಿ ಯೋಗ್ಯ ಮುದ್ರೆಗಳನ್ನು ಹುಡುಕುವ ಪ್ರಕ್ರಿಯೆ
ಪ್ರಶ್ನೆ : ಉಪಾಯಕ್ಕಾಗಿ ಮುದ್ರೆಗಳನ್ನು ಹುಡುಕುವಾಗ ‘ಸತತವಾಗಿ ಬರುವ ೨ ಮುದ್ರೆಗಳಲ್ಲಿ ನಿರ್ದಿಷ್ಟವಾಗಿ ಯಾವುದು ಸರಿಯಾದ ಮುದ್ರೆ ಎಂಬ ಸಂದೇಹವಿದ್ದರೆ’, ಆಗ ಏನು ಮಾಡಬೇಕು?
ಉತ್ತರ : ಆ ಸಮಯದಲ್ಲಿ ಆ ಎರಡೂ ಮುದ್ರೆಗಳ ಪ್ರತ್ಯಕ್ಷ ಉಪಾಯ ಮಾಡಿ ನೋಡಬೇಕು. ಮೊದಲು ಕನಿಷ್ಠ ಸ್ತರದ ಮುದ್ರೆಯನ್ನು (ಉದಾ. ‘ಹೆಬ್ಬೆರಳಿನ ತುದಿಯನ್ನು ತೋರುಬೆರಳಿನ ಬುಡಕ್ಕೆ ತಾಗಿಸುವ’ ವಾಯುತತ್ತ್ವದ ಮುದ್ರೆ – ಛಾಯಾಚಿತ್ರ ೧) ನ್ಯಾಸಸ್ಥಾನದಲ್ಲಿ ಹಿಡಿದು ೧-೨ ನಿಮಿಷಗಳ ಕಾಲ ನಾಮಜಪವನ್ನು ಮಾಡಬೇಕು ಮತ್ತು ‘ಎಷ್ಟು ಪ್ರಮಾಣದಲ್ಲಿ ತೊಂದರೆಯಾಗುತ್ತಿದೆ’, ಎಂಬುದನ್ನು ಗಮನಿಸಬೇಕು. ಅನಂತರ ಅದರೆ ಮೇಲಿನ ಸ್ತರದ ಮುದ್ರೆಯನ್ನು (ಉದಾ. ‘ತೋರುಬೆರಳಿನ ತುದಿಯನ್ನು ಹೆಬ್ಬೆರಳಿನ ಬುಡಕ್ಕೆ ತಾಗಿಸುವ’ ಆಕಾಶತತ್ತ್ವದ ಮುದ್ರೆ – ಛಾಯಾಚಿತ್ರ ೨) ನ್ಯಾಸಸ್ಥಾನದ ಮೇಲೆ ಹಿಡಿದು ೧-೨ ನಿಮಿಷಗಳ ಕಾಲ ನಾಮಜಪವನ್ನು ಮಾಡಬೇಕು ಮತ್ತು ‘ಎಷ್ಟು ಪ್ರಮಾಣದಲ್ಲಿ ತೊಂದರೆಯಾಗುತ್ತಿದೆ’, ಎಂಬುದನ್ನು ನೋಡಬೇಕು. ಯಾವ ಮುದ್ರೆಯಿಂದ ಎಲ್ಲಕ್ಕಿಂತ ಹೆಚ್ಚು ತೊಂದರೆಯಾಗುತ್ತದೆಯೋ, ಅದೇ ಆ ಸಮಯದಲ್ಲಿ ಉಪಾಯ ಮಾಡಲು ನಿಮಗಾಗಿ ಇರುವ ಯೋಗ್ಯ ಮುದ್ರೆ ಆಗಿದೆ ಎಂದು ತಿಳಿಯಬೇಕು.
ಹುಡುಕಿದ ಸ್ಥಾನ ಬಿಟ್ಟು ಇತರೆಡ ಒತ್ತಡದ ಅರಿವಾಗುವ ಬಗ್ಗೆ
ಪ್ರಶ್ನೆ :ನಾಮಜಪಾದಿ ಉಪಾಯಗಳನ್ನು ಮಾಡುವಾಗ ಕಂಡು ಹಿಡಿದ ಸ್ಥಾನವನ್ನು ಹೊರತುಪಡಿಸಿ ಬೇರೆ ಸ್ಥಳದಲ್ಲಿ ಒತ್ತಡ ಅರಿವಾದರೆ ಏನು ಮಾಡಬೇಕು?
ಉತ್ತರ : ನಾಮಜಪಾದಿ ಉಪಾಯಗಳನ್ನು ಮಾಡುವಾಗ ಬೇರೆ ಸ್ಥಳದಲ್ಲಿ ಒತ್ತಡದ ಅರಿವಾದರೆ, ಎದೆ ಬಡಿತ ಹೆಚ್ಚಾದರೆ, ಕಣ್ಣುಗಳ ಮುಂದೆ ಕತ್ತಲು ಕವಿದರೆ, ಆ ಸಮಯದಲ್ಲಿ ‘ಅಂಗೈಗಳ ಹಿಮ್ಮುಖ-ಮುಮ್ಮುಖ ಮುದ್ರೆ’ಯನ್ನು ತೊಂದರೆಯಾಗುತ್ತಿರುವ ಸ್ಥಳದಲ್ಲಿ ೨-೩ ನಿಮಿಷಗಳ ಕಾಲ ಹಿಡಿದು ನಾಮಜಪವನ್ನು ಮಾಡಬೇಕು. ಆ ತೊಂದರೆ ಕಡಿಮೆಯಾದ ನಂತರ ತೊಂದರೆಯಾಗುತ್ತಿರುವ ಮೊದಲಿನ ಸ್ಥಳದಲ್ಲಿ ಮೊದಲಿನಂತೆ ನಾಮಜಪಾದಿ ಉಪಾಯಗಳನ್ನು ಮುಂದುವರೆಸಬೇಕು.
ತಲೆಯ ಮೇಲೆ ಒತ್ತಡದ ಅರಿವಾಗುವುದು
ಪ್ರಶ್ನೆ : ನಾಮಜಪಾದಿ ಉಪಾಯಗಳನ್ನು ಮಾಡುವಾಗ ತಲೆಯ ಮೇಲೆ ಒತ್ತಡದ ಅರಿವಾದರೆ ಏನು ಮಾಡಬೇಕು?
ಉತ್ತರ : ನಾಮಜಪಾದಿ ಉಪಾಯಗಳನ್ನು ಆರಂಭಿಸಿದ ಮೇಲೆ ಶರೀರದ ಕೆಳಗಿನ ಸ್ಥಾನಗಳಲ್ಲಿನ (ಉದಾ. ಸ್ವಾಧಿಷ್ಠಾನಚಕ್ರ ಅಥವಾ ಮಣಿಪುರಚಕ್ರ) ಕಪ್ಪು ಶಕ್ತಿಯು ಸಡಿಲವಾಗಿ ಮೇಲೆ ಮೇಲೆ ಬರಲಾರಂಭಿಸುತ್ತದೆ. ಸಡಿಲವಾದ ಈ ತೊಂದರೆದಾಯಕ ಶಕ್ತಿಯು ಆಜ್ಞಾಚಕ್ರದಲ್ಲಿ ಮತ್ತು ತಲೆಯ ಮೇಲೆ ಸಂಗ್ರಹವಾಗುತ್ತದೆ. ಎಲ್ಲಿಯವರೆಗೆ ಉಪಾಯ ಪೂರ್ಣಗೊಳ್ಳುವುದಿಲ್ಲವೋ ಅಲ್ಲಿಯವರೆಗೆ ಇದು ನಡೆಯುತ್ತಲೇ ಇರುತ್ತದೆ. ಆದುದರಿಂದ ಉಪಾಯ ಪೂರ್ಣಗೊಳ್ಳುವವರೆಗೆ ತಲೆಯ ಮೇಲೆ ಒತ್ತಡ ಇದ್ದೇ ಇರುತ್ತದೆ; ಆದುದರಿಂದ ಆ ಸಮಯದಲ್ಲಿ ತಲೆಯ ಮೇಲೆ ಅರಿವಾಗುವ ಒತ್ತಡದ ಕಡೆಗೆ ಗಮನ ಕೊಡದೇ ಉಪಾಯವನ್ನು ಪೂರ್ಣಗೊಳಿಸುವುದರತ್ತ ಗಮನ ಕೊಡಬೇಕು.
ಭಾವವಿಡುವುದರ ಮಹತ್ವ
ಪ್ರಶ್ನೆ : ನಾಮಜಪಾದಿ ಉಪಾಯಗಳನ್ನು ಮಾಡುವಾಗ ಭಾವವಿಡುವುದರ ಮಹತ್ವ ಏನು?
ಉತ್ತರ : ನಾಮಜಪಾದಿ ಉಪಾಯಗಳನ್ನು ಮಾಡುವಾಗ ಆಧ್ಯಾತ್ಮಿಕ ಭಾವವನ್ನು ಇಟ್ಟುಕೊಂಡರೆ ಉಪಾಯಗಳು ಹೆಚ್ಚು ಪರಿಣಾಮಕಾರಿಯಾಗುತ್ತವೆ. ಉಪಾಯ ಮಾಡುವಾಗ ಕೆಲವೊಮ್ಮೆ ಕೃತಜ್ಞತಾಭಾವ ಮತ್ತು ಕೆಲವೊಮ್ಮೆ ಶರಣಾಗತಭಾವವನ್ನು ಇಡಬೇಕು. ಕೆಲವೊಮ್ಮೆ ಯಾವುದಾದರೂ ದೇವತೆಯನ್ನು ಸ್ಮರಿಸಬೇಕು. ಕೆಲವೊಮ್ಮೆ ಗುರುದೇವರನ್ನು ಸ್ಮರಿಸಬೇಕು. ಪ್ರತಿ ಬಾರಿಯೂ ಬೇರೆ ಬೇರೆ ಭಾವವನ್ನು ಇಡಲು ಪ್ರಯತ್ನಿಸಬೇಕು. ಇದರಿಂದ ಉಪಾಯಗಳಲ್ಲಿ ಹೊಸತನವಿರುತ್ತದೆ, ಹಾಗೆಯೇ ಪ್ರತಿ ಬಾರಿಯೂ ವಿಭಿನ್ನ ಭಾವವನ್ನಿಟ್ಟುಕೊಳ್ಳುವುದರಿಂದ ಕೆಟ್ಟ ಶಕ್ತಿಗಳಿಗೆ ಉಪಾಯ ಮಾಡುವವರ ಮೇಲೆ ಸುಲಭವಾಗಿ ಆಕ್ರಮಣ ಮಾಡಲು ಸಾಧ್ಯವಾಗುವುದಿಲ್ಲ.
ರಜ-ತಮಾತ್ಮಕ ವಾತಾವರಣದಲ್ಲಿ ಭಾವವನ್ನು ಇಟ್ಟುಕೊಂಡರೆ ಆಗುವ ಲಾಭ
ಪ್ರಶ್ನೆ : ಮುಂಬೈಯಂತಹ ನಗರಗಳಲ್ಲಿ ಬಹಳ ರಜ-ತಮವಿದೆ. ಅಲ್ಲಿ ನಾಮಜಪಾದಿ ಉಪಾಯಗಳು ಪರಿಣಾಮಕಾರಿಯಾಗಬಲ್ಲದೇ?
ಉತ್ತರ : ‘ನಗರಗಳಲ್ಲಿ ಬಹಳ ರಜ-ತಮಇದೆ’ ಎಂಬ ವಿಚಾರವನ್ನೇ ಮಾಡಬಾರದು. ನಾವು ಎಲ್ಲಿದ್ದರೂ ಗೋವಾದ ರಾಮನಾಥಿಯಲ್ಲಿರುವ ಸನಾತನದ ಆಶ್ರಮದ ‘ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಕೋಣೆಯಲ್ಲಿದ್ದೇವೆ’, ಎಂಬ ಭಾವವನ್ನೇ ಇಡಬೇಕು. ಹೀಗೆ ಮಾಡಿದರೆ ನಮ್ಮ ಸುತ್ತಲೂ ಕೂಡಲೇ ಚೈತನ್ಯ ನಿರ್ಮಾಣವಾಗುತ್ತದೆ. ಚೈತನ್ಯವು ಎಲ್ಲಿಯೂ ಕಡಿಮೆ ಇಲ್ಲ. ಅದು ನಮ್ಮೊಳಗಿನ ಭಾವವನ್ನು ಅವಲಂಬಿಸಿರುತ್ತದೆ; ಏಕೆಂದರೆ ಈಶ್ವರನು ಎಲ್ಲೆಡೆ ಇದ್ದಾನೆ.
ಕೃತಜ್ಞತಾಭಾವದಲ್ಲಿರುವುದರ ಮಹತ್ವ
ಪ್ರಶ್ನೆ : ಉಪಾಯ ಮಾಡುವಾಗ ಮನಸ್ಸಿನಲ್ಲಿನ ವಿಚಾರಪ್ರಕ್ರಿಯೆ ಹೇಗಿರಬೇಕು?
ಉತ್ತರ : ಕಲಿಯುವ ವೃತ್ತಿಯನ್ನಿಟ್ಟುಕೊಂಡು ಸಾಧನೆಯೆಂದು ನಾಮಜಪಾದಿ ಉಪಾಯಗಳನ್ನು ಮಾಡಬೇಕು. ‘ಕಲಿಯುವುದರಲ್ಲಿ ಆನಂದವಿದೆ, ಅದನ್ನು ಪಡೆಯಲು ಈಶ್ವರನು ಅವಕಾಶವನ್ನು ನೀಡುತ್ತಿದ್ದಾನೆ’, ಅದಕ್ಕಾಗಿ ಕೃತಜ್ಞತಾಭಾವದಲ್ಲಿರಬೇಕು.
ಹುಣ್ಣಿಮೆ ಮತ್ತು ಅಮಾವಾಸ್ಯೆಯಂದು ಮಾಡಬೇಕಾದ ವಿಶೇಷ ಪ್ರಯತ್ನಗಳು
ಪ್ರಶ್ನೆ : ಹುಣ್ಣಿಮೆ ಮತ್ತು ಅಮವಾಸ್ಯೆಯ ದಿನ ಏನಾಗುತ್ತದೆ ?
ಉತ್ತರ : ಹುಣ್ಣಿಮೆಯಂದು ನಕಾರಾತ್ಮಕ ವಿಚಾರಗಳಿಂದ ತೊಂದರೆಯಾಗುತ್ತದೆ, ಅಮಾವಾಸ್ಯೆಯಂದು ತುಂಬಾ ಆವರಣ ಬರುತ್ತದೆ. ಅದ್ದರಿಂದ ಈ ಎರಡೂ ದಿನಗಳಂದು ಜಾಗರೂಕರಾಗಿದ್ದು ನಾಮಜಪಾದಿ ಉಪಾಯಗಳತ್ತ ಗಮನವಿಡಬೇಕು. ಇಷ್ಟು ಮಾತ್ರವಲ್ಲ, ಅಮಾವಾಸ್ಯೆಯ ಮೊದಲು ಎರಡು ದಿನಗಳಿಂದಲೇ ಹೆಚ್ಚು ಪ್ರಮಾಣದಲ್ಲಿ ತೊಂದರೆಯಾಗುತ್ತದೆ ಮತ್ತು ಹುಣ್ಣಿಮೆಯ ನಂತರದ ೨ ದಿನ ಹೆಚ್ಚು ಪ್ರಮಾಣದಲ್ಲಿ ತೊಂದರೆಯಾಗುತ್ತದೆ. ಅದ್ದರಿಂದ ಹುಣ್ಣಿಮೆ ಮತ್ತು ಅಮವಾಸ್ಯೆಯ ಎರಡು ದಿನ ಮೊದಲು, ಆ ದಿನ ಮತ್ತು ಅವುಗಳ ನಂತರದ ೨ ದಿನ ಸಾಧಕರಿಗೆ ಪ್ರಾರ್ಥನೆ ಮತ್ತು ನಾಮಜಪ ಹೆಚ್ಚಿಸಲು ಹೇಳಲಾಗುತ್ತದೆ.
ಉಪಾಯಗಳ ಪ್ರಭಾವ
ಪ್ರಶ್ನೆ : ನಾಮಜಪಾದಿ ಉಪಾಯಗಳ ಎರಡನೆಯ ಸತ್ರವನ್ನು (ಸೆಶ್ಶನ್) ಮಾಡುವ ಆವಶ್ಯಕತೆ ಯಾವಾಗ ಇರುತ್ತದೆ ?
ಉತ್ತರ : ಬೆಳಗ್ಗಿನ ನಾಮಜಪಾದಿ ಉಪಾಯ ಪರಿಣಾಮಕಾರಿಯಾದರೆ, ನಂತರ ೪-೫ ಗಂಟೆಗಳ ಕಾಲ ಅದರ ಪರಿಣಾಮ ಇರುತ್ತದೆ. ಅದರ ನಂತರ ಪುನಃ ನಾಮಜಪಾದಿ ಉಪಾಯದ ಎರಡನೇ ಸತ್ರ ಮಾಡಬಹುದು. ಆಗ ನಾಮಜಪವನ್ನು ಹುಡುಕಿದಾಗ ಮೊದಲಿನ ಸತ್ರಕ್ಕಿಂತ ಕೆಳಮಟ್ಟದ ನಾಮಜಪ ಸಿಗಬಹುದು (ಉದಾ. ಬೆಳಗ್ಗಿನ ಉಪಾಯದ ಸತ್ರದಲ್ಲಿ ‘ಮಹಾಶೂನ್ಯ’ ಈ ಜಪ ಬಂದಿದ್ದರೆ, ೪-೫ ಗಂಟೆಯ ನಂತರ ಎರಡನೆಯ ಸತ್ರ ಮಾಡುವಾಗ ‘ಶೂನ್ಯ’ ಅಂದರೆ ಕೆಳಗಿನ ಮಟ್ಟದ ನಾಮಜಪ ಸಿಗಬಹುದು). ಅದೇ ರೀತಿ ‘ಉಪಾಯ ಬೇಗನೆ ಪೂರ್ಣವಾಯಿತು’ ಎಂದು ಅನಿಸುತ್ತದೆ.
ಉಪಾಯ ಮಾಡುವಾಗ ಧ್ಯಾನ ತಗಲಿದರೆ ಆಗುವ ಪರಿಣಾಮ
ಪ್ರಶ್ನೆ : ನಾಮಜಪಾದಿ ಉಪಾಯಗಳನ್ನು ಮಾಡುವಾಗ ಧ್ಯಾನವನ್ನು ತಗಲಿಸುವಾಗ ಭಾವಜಾಗೃತಿಯ ಪ್ರಯೋಗವನ್ನು ಮಾಡಬಹುದೇ?
ಉತ್ತರ : ಧ್ಯಾನವನ್ನು ತಗಲಿಸುವಾಗ ಮನಸ್ಸು ನಿರ್ವಿಚಾರವಾಗಿರಬೇಕು. ನಿರ್ವಿಚಾರ ಸ್ಥಿತಿಯು ನಿರ್ಗುಣ ಸ್ಥಿತಿಯಾಗಿರುತ್ತದೆ. ಆದ್ದರಿಂದ ೨ ನಿಮಿಷ ಆ ಸ್ಥಿತಿಯಲ್ಲಿದ್ದರೂ ತುಂಬಾ ಉಪಾಯವಾಗುತ್ತದೆ.
ಉಪಾಯ ಮಾಡುವಾಗ ಒಂದು ನಾಮಜಪದ ಮೂಲಕ ಉಪಾಯವಾದರೆ ೨ ನಿಮಿಷ ಧ್ಯಾನ ಮಾಡಲು ಹೇಳಲಾಗಿದೆ. ನಂತರ ಪುನಃ ನಾಮಜಪವನ್ನು ಹುಡುಕಿ ಉಪಾಯ ಮಾಡುವುದು. ಆಗ ಮೊದಲಿಗಿಂತ ಕೆಳಗಿನ ಹಂತದ ನಾಮಜಪ ಸಿಗುತ್ತದೆ. ಚೆನ್ನಾಗಿ ಧ್ಯಾನ ತಗಲಿದರೆ ಹಾಗೂ ನಿರ್ಗುಣ ಸ್ಥಿತಿಗೆ ಹೋದರೆ, ಕೆಲವೊಮ್ಮೆ ಎರಡು ಹಂತದ ಕೆಳಗಿನ ನಾಮಜಪ ಕೂಡ ಸಿಗಬಹುದು. ಉದಾ. ‘ನಿರ್ಗುಣ’ ನಾಮಜಪದ ಮೂಲಕ ಉಪಾಯ ಮಾಡಿ ಅನಂತರ ೨ ನಿಮಿಷ ಧ್ಯಾನದಲ್ಲಿದ್ದು ಪುನಃ ನಾಮಜಪ ಹುಡುಕಿದಾಗ ಅದು ‘ಮಹಾಶೂನ್ಯ’ವಾಗಿರದೇ ‘ಶೂನ್ಯ’ ಈ ನಾಮಜಪ ಬರುತ್ತದೆ. ಧ್ಯಾನಾವಸ್ಥೆಯಲ್ಲಿರುವಾಗ ಭಾವಜಾಗೃತಿಯ ಪ್ರಯೋಗ ಮಾಡಬಾರದು; ಏಕೆಂದರೆ ಭಾವಜಾಗೃತಿಯ ಪ್ರಯೋಗ ಮಾಡುವುದರಿಂದ ನಾವು ಸಗುಣಕ್ಕೆ ಬರುತ್ತೇವೆ. ಧ್ಯಾನದಲ್ಲಿ ನಾವು ನಿರ್ಗುಣದತ್ತ ಹೋಗಬೇಕು.
ನಾಮಜಪಾದಿ ಉಪಾಯಗಳನ್ನು ಮಾಡುವಾಗ ತೊಂದರೆಯಾದರೆ ಮಾಡಬೇಕಾದ ಉಪಾಯ
ಅ. ಪ್ರಶ್ನೆ : ನಾಮಜಪಾದಿ ಉಪಾಯ ಮಾಡುವಾಗ ತೊಂದರೆಯಾದರೆ ಏನು ಮಾಡಬೇಕು?
ಉತ್ತರ : ನಾಮಜಪಾದಿ ಉಪಾಯ ಮಾಡುವಾಗ ವಿಪರೀತ ತೊಂದರೆಯಾದರೆ ೫ ನಿಮಿಷ ನಿಲ್ಲಿಸಿ ಆಗ ಧ್ಯಾನಕ್ಕೆ ಹೋಗಬಹುದು. ಇದರಿಂದ ನಿರ್ಗುಣ ಮಟ್ಟದಲ್ಲಿ ಉಪಾಯವಾಗಿ ತೊಂದರೆ ಕಡಿಮೆಯಾಗುತ್ತದೆ. ಅನಂತರ ಪುನಃ ಉಪಾಯ ಆರಂಭಿಸಬಹುದು. ಉಪಾಯ ಮಾಡುವಾಗ ಕೆಟ್ಟಶಕ್ತಿಗಳ ಮುಖ ಕಾಣಿಸಿದರೆ ಅಥವಾ ಆಯಾಸವಾದರೆ ‘ನನ್ನ ಸುತ್ತಲೂ ರಕ್ಷಣಾಕವಚ ನಿರ್ಮಾಣವಾಗಲಿ’, ಎಂದು ಗುರುದೇವರಿಗೆ ಪ್ರಾರ್ಥನೆ ಮಾಡಬೇಕು.
ಕ್ಷಮಾಯಾಚನೆಯ ಲಾಭ
ಪ್ರಶ್ನೆ : ನಾಮಜಪಾದಿ ಉಪಾಯ ಮಾಡುವಾಗ ೨ ನಿಮಿಷ ಕ್ಷಮಾಯಾಚನೆ ಮಾಡಿದರೆ ಯಾವ ಲಾಭಗಳು ಆಗುತ್ತವೆ ?
ಉತ್ತರ : ಕ್ಷಮಾಯಾಚನೆ ಮಾಡುವುದರಿಂದ ನಮ್ಮಲ್ಲಿ ಶರಣಾಗತಭಾವ ನಿರ್ಮಾಣವಾಗುತ್ತದೆ. ಅದರಿಂದ ಉಪಾಯ ಇನ್ನೂ ಹೆಚ್ಚು ಪರಿಣಾಮಕಾರಿಯಾಗುತ್ತದೆ.
ಗುರುದೇವರ ಅಪಾರ ಕೃಪೆಯಿಂದ ನನಗೆ ಸದ್ಗುರು ಗಾಡಗೀಳ ರವರ ಮಾರ್ಗದರ್ಶನ ಲಭಿಸಿತು’, ಅದಕ್ಕಾಗಿ ನಾನು ಗುರುದೇವರು ಮತ್ತು ಸದ್ಗುರು ಗಾಡಗೀಳ ರವರ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. – ಕು. ಪ್ರಿಯಾಂಕಾ ಪ್ರಭುದೇಸಾಯಿ


ಪ್ರಾಣಶಕ್ತಿ ವಹನ ವ್ಯೂಹದಲ್ಲಿನ ಅಡಚಣೆಗಳನ್ನು ಸ್ವತಃ ಹುಡುಕಿ ದೂರಗೊಳಿಸಿ ! (ಭಾಗ ೩)
ಪ್ರಾಣಶಕ್ತಿ ವಹನ ವ್ಯೂಹದಲ್ಲಿನ ಅಡಚಣೆಗಳನ್ನು ಸ್ವತಃ ಹುಡುಕಿ ದೂರಗೊಳಿಸಿ ! (ಭಾಗ ೨)
ಪ್ರಾಣಶಕ್ತಿ (ಚೇತನಾ) ವಹನ ವ್ಯೂಹದಲ್ಲಿನ ಅಡಚಣೆಗಳಿಂದಾಗುವ ರೋಗಗಳಿಗೆ ಉಪಾಯ – ಭಾಗ ೧
ತುಂಬಾ ಚೆನ್ನಾಗಿತ್ತು
ಜೈ ಶ್ರೀರಾಮ ☘️
ಜೈ ಸನಾತನ ಸತ್ಸಂಗ