ಭಾವಪೂರ್ಣವಾಗಿ ಸೇವಾಭಾವದಿಂದ ನಿರ್ಮಿಸಿದ ಮೂರ್ತಿಯಿಂದ ಅಪಾರ ಚೈತನ್ಯ ಪ್ರಕ್ಷೇಪಿಸುತ್ತದೆ !

ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯವು ‘ಯು.ಎ.ಎಸ್. (ಯುನಿವರ್ಸಲ್ ಆರಾ ಸ್ಕ್ಯಾನರ್)’ ಎಂಬ ಉಪಕರಣದ ಮೂಲಕ ಮಾಡಿದ ವೈಜ್ಞಾನಿಕ ಪರೀಕ್ಷಣೆ

ಮೂರ್ತಿಕಾರ ಶ್ರೀ. ವಿವೇಕಾನಂದ ಆಚಾರಿಯವರು ಭಾವಪೂರ್ಣ ಮತ್ತು ಸೇವಾಭಾವದಿಂದ ನಿರ್ಮಿಸಿದ ರಿದ್ಧಿ-ಸಿದ್ಧಿಸಹಿತ ಶ್ರೀ ಸಿದ್ಧಿವಿನಾಯಕ ಮೂರ್ತಿಯಿಂದ ಅಪಾರ ಚೈತನ್ಯ ಪ್ರಕ್ಷೇಪಿಸುತ್ತದೆ

ಸಪ್ತರ್ಷಿಗಳು ಪೂ. (ಡಾ.) ಓಂ ಉಲಗನಾಥನ್‌ರವರ ಮಾಧ್ಯಮದಿಂದ ಮಾಡಿದ ಮಾರ್ಗದರ್ಶನಕ್ಕನುಸಾರ ರಾಮನಾಥಿಯ (ಗೋವಾ) ಸನಾತನದ ಆಶ್ರಮದಲ್ಲಿ ಮಹಾಶಿವರಾತ್ರಿಯ ದಿನ ಅಂದರೆ, ೨೧.೨.೨೦೨೦ ರಂದು ರಿದ್ಧಿ-ಸಿದ್ಧಿ ಸಹಿತ ಶ್ರೀ ಸಿದ್ಧಿವಿನಾಯಕನ ಶುಭಾಗಮನವಾಯಿತು. ಹಿಂದೂ ರಾಷ್ಟ್ರದ ಸ್ಥಾಪನೆಯ ಕಾರ್ಯದಲ್ಲಿನ ಆಧ್ಯಾತ್ಮಿಕ ಅಡತಡೆಗಳು ದೂರವಾಗಬೇಕು ಮತ್ತು ಈ ಧರ್ಮಕಾರ್ಯವು ಪೂರ್ಣತ್ವಕ್ಕೆ ಹೋಗಬೇಕು, ಪರಾತ್ಪರ ಗುರು ಡಾ. ಆಠವಲೆಯವರ ಮೇಲಿನ ಮಹಾಮೃತ್ಯುಯೋಗದ ಸಂಕಟಗಳು ದೂರವಾಗಿ ಅವರಿಗೆ ದೀರ್ಘಾಯುಷ್ಯ ಲಭಿಸಬೇಕು, ಹಾಗೆಯೇ ಎಲ್ಲ ಸಾಧಕರ ರಕ್ಷಣೆಯಾಗಬೇಕೆಂದು ಸನಾತನದ ರಾಮನಾಥಿ ಆಶ್ರಮದಲ್ಲಿ ರಿದ್ಧಿ-ಸಿದ್ಧಿಸಹಿತ ಶ್ರೀ ಸಿದ್ಧಿವಿನಾಯಕನ ಮೂರ್ತಿಯ ಪ್ರಾಣಪ್ರತಿಷ್ಠಾಪನೆಯನ್ನು ಮಾಡಲಾಗುವುದು.

ಶ್ರೀ ಸಿದ್ಧಿವಿನಾಯಕನ ಮೂರ್ತಿಯ ಆಧ್ಯಾತ್ಮಿಕ ವೈಶಿಷ್ಟ್ಯಗಳನ್ನು ವಿಜ್ಞಾನದ ಮೂಲಕ ಅಧ್ಯಯನ ಮಾಡಲು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ವತಿಯಿಂದ ಒಂದು ಪರೀಕ್ಷಣೆಯನ್ನು ಮಾಡಲಾಯಿತು. ಈ ಪರೀಕ್ಷಣೆಗಾಗಿ ‘ಯು.ಎ.ಎಸ್. (ಯುನಿವರ್ಸಲ್ ಆರಾ ಸ್ಕ್ಯಾನರ್)’ ಎಂಬ ಉಪಕರಣದ ಉಪಯೋಗವನ್ನು ಮಾಡಲಾಯಿತು. ಈ ಪರೀಕ್ಷಣೆಯ ಸ್ವರೂಪ, ಮಾಡಿದ ಅಳತೆಗಳ ನೋಂದಣಿ ಮತ್ತು ಅವುಗಳ ವಿವರಣೆಯನ್ನು ಮುಂದೆ ಕೊಡಲಾಗಿದೆ.

೧. ಪರೀಕ್ಷಣೆಯ ಸ್ವರೂಪ

ರಿದ್ಧಿ-ಸಿದ್ಧಿ ಸಹಿತ ಶ್ರೀ ಸಿದ್ಧಿವಿನಾಯಕ

ಈ ಪರೀಕ್ಷಣೆಯಲ್ಲಿ ಶ್ರೀ ಸಿದ್ಧಿವಿನಾಯಕನ ಮೂರ್ತಿ ಮತ್ತು ಪಾರಿಜಾತ ವೃಕ್ಷದ ಸಸಿ (ಟಿಪ್ಪಣಿ) ಇವುಗಳ ‘ಯು.ಎ.ಎಸ್.’ ಉಪಕರಣದ ಮೂಲಕ ಮಾಡಿದ ಅಳತೆಗಳ ನೋಂದಣಿಯನ್ನು ಮಾಡಲಾಯಿತು.

ಟಿಪ್ಪಣಿ – ಆಶ್ರಮದ ಪ್ರವೇಶದ್ವಾರದ ಪರಿಸರದಲ್ಲಿರುವ ಪಾರಿಜಾತ ವೃಕ್ಷ.

೨. ಅಳತೆಗಳ ನೋಂದಣಿಗಳ ವಿವೇಚನೆ

೨ ಅ. ನಕಾರಾತ್ಮಕ ಊರ್ಜೆಯ ಸಂದರ್ಭದಲ್ಲಿ ಮಾಡಿದ ಅಳತೆಗಳ ನೋಂದಣಿಗಳ ವಿವೇಚನೆ

ಶ್ರೀ ಸಿದ್ಧಿವಿನಾಯಕನ ಮೂರ್ತಿ ಮತ್ತು ಪಾರಿಜಾತ ವೃಕ್ಷದ ಸಸಿ ಇವುಗಳಲ್ಲಿ ನಕಾರಾತ್ಮಕ ಊರ್ಜೆಯು ಕಂಡು ಬರಲಿಲ್ಲ.

೨ ಆ. ಸಕಾರಾತ್ಮಕ ಊರ್ಜೆಯ ಸಂದರ್ಭದಲ್ಲಿ ಮಾಡಿದ ಅಳತೆಗಳ ನೋಂದಣಿಗಳ ವಿವೇಚನೆ

ಶ್ರೀ ಸಿದ್ಧಿವಿನಾಯಕನ ಮೂರ್ತಿ ಮತ್ತು ಪಾರಿಜಾತ ವೃಕ್ಷದ ಸಸಿ ಇವುಗಳಲ್ಲಿ ಬಹಳಷ್ಟು ಪ್ರಮಾಣದಲ್ಲಿ ಸಕಾರಾತ್ಮಕ ಊರ್ಜೆ ಇದೆ : ಎಲ್ಲ ವ್ಯಕ್ತಿ, ವಾಸ್ತು ಅಥವಾ ವಸ್ತುಗಳಲ್ಲಿ ಸಕಾರಾತ್ಮಕ ಊರ್ಜೆ ಇದ್ದೇ ಇರುತ್ತದೆ, ಎಂದೇನಿಲ್ಲ. ಶ್ರೀ ಸಿದ್ಧಿವಿನಾಯಕನ ಮೂರ್ತಿ ಮತ್ತು ಮತ್ತು ಪಾರಿಜಾತ ವೃಕ್ಷದ ಸಸಿ ಇವುಗಳಲ್ಲಿ ಬಹಳಷ್ಟು ಸಕಾರಾತ್ಮಕ ಊರ್ಜೆಯಿತ್ತು ಮತ್ತು ಅವುಗಳ ಪ್ರಭಾವಲಯವು ಅನುಕ್ರಮವಾಗಿ ೧೪೨.೩೫ ಮೀಟರ್ ಮತ್ತು ೧೦.೪೭ ಮೀಟರ್ ಇತ್ತು.

೨ ಇ. ಒಟ್ಟು ಪ್ರಭಾವಲಯದ ಸಂದರ್ಭದಲ್ಲಿ ಮಾಡಿದ ಅಳತೆಗಳ ನೋಂದಣಿಗಳ ವಿವೇಚನೆ

೨ ಇ. ೧. ಶ್ರೀ ಸಿದ್ಧಿವಿನಾಯಕನ ಮೂರ್ತಿ ಮತ್ತು ಪಾರಿಜಾತ ವೃಕ್ಷದ ಸಸಿ ಇವುಗಳ ಒಟ್ಟು ಪ್ರಭಾವಲಯ : ಸಾಮಾನ್ಯ ವ್ಯಕ್ತಿ ಅಥವಾ ವಸ್ತುಗಳ ಒಟ್ಟು ಪ್ರಭಾವಲಯವು ಸಾಧಾರಣ ೧ ಮೀಟರ್‌ನಷ್ಟಿರುತ್ತದೆ. ಶ್ರೀ ಸಿದ್ಧಿವಿನಾಯಕನ ಮೂರ್ತಿ ಮತ್ತು ಪಾರಿಜಾತ ವೃಕ್ಷದ ಸಸಿ ಇವುಗಳ ಒಟ್ಟು ಪ್ರಭಾವಲಯಗಳು ಅನುಕ್ರಮವಾಗಿ ೧೭೦.೧೫ ಮೀಟರ್ ಮತ್ತು ೧೯.೪೦ ಮೀಟರ್ ಇತ್ತು.

ಮೇಲಿನ ಎಲ್ಲ ಅಂಶಗಳ ಬಗ್ಗೆ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆಯನ್ನು ‘ಅಂಶ ೩’ ರಲ್ಲಿ ಕೊಡಲಾಗಿದೆ.

೩. ಅಳತೆಗಳ ನೋಂದಣಿಗಳ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ

ಶ್ರೀ ಸಿದ್ಧಿವಿನಾಯಕನ ಮೂರ್ತಿಯ ಬಗ್ಗೆ ಸದ್ಗುರು ಡಾ. ಮುಕುಲ ಗಾಡ್ಗೀಳರವರಿಗೆ ಬಂದ ಅನುಭೂತಿಗಳ ಬಗ್ಗೆ, ಅವರಿಗೆ ಅರಿವಾದ ಮೂರ್ತಿಯ ವೈಶಿಷ್ಟ್ಯಗಳ ಬಗ್ಗೆ ಓದಲು ಕ್ಲಿಕ್ ಮಾಡಿ !

೩ ಅ. ರಿದ್ಧಿ-ಸಿದ್ಧಿಸಹಿತ ಶ್ರೀ ಸಿದ್ಧಿವಿನಾಯಕನ ಮೂರ್ತಿಯ ವೈಶಿಷ್ಟ್ಯಗಳು

ಈ ಮೂರ್ತಿಯನ್ನು ಅಖಂಡ ‘ಕೃಷ್ಣಶಿಲೆ’ ಕಲ್ಲಿನಲ್ಲಿ ಕೆತ್ತಿ ನಿರ್ಮಿಸಲಾಗಿದೆ ಮತ್ತು ಅದರ ತೂಕ ೫೦೦ ಕಿಲೋದಷ್ಟಿದೆ. ಶ್ರೀ ಸಿದ್ಧಿವಿನಾಯಕನ ಮೂರ್ತಿಯು ಕಮಲದ ಆಸನದ ಮೇಲಿದೆ. ಸಪ್ತರ್ಷಿಗಳು ಮಾಡಿದ ಮಾರ್ಗದರ್ಶನಕ್ಕನುಸಾರ ಈ ಮೂರ್ತಿಯನ್ನು ತಯಾರಿಸಲಾಗಿದೆ. ಒಂದು ಶುಭಮುಹೂರ್ತದಲ್ಲಿ ಸನಾತನದ ರಾಮನಾಥಿ ಆಶ್ರಮದಲ್ಲಿ ಅದರ ಪ್ರಾಣಪ್ರತಿಷ್ಠಾಪನೆಯನ್ನು ಮಾಡಲಾಗುವುದು.

೩ ಆ. ಶ್ರೀ ಸಿದ್ಧಿವಿನಾಯಕನ ಮೂರ್ತಿಯ ಮೂರ್ತಿಕಾರರಾದ ಶ್ರೀ. ವಿವೇಕಾನಂದ ಆಚಾರಿಯವರ ಸಾಧನೆಯಿಂದಾಗಿ ಮೂರ್ತಿಯಲ್ಲಿ ಅಪಾರ ಚೈತನ್ಯ ನಿರ್ಮಾಣವಾಗಿದೆ

ಶ್ರೀ. ವಿವೇಕಾನಂದ ಆಚಾರಿಯವರ ದೇವತೆಯ ಬಗೆಗಿನ ಉನ್ನತ ಭಾವ, ಶ್ರದ್ಧೆ, ಅವರ ಸಾಧನೆ ಮತ್ತು ಮೂರ್ತಿಯನ್ನು ನಿರ್ಮಿಸುವಾಗ ಅವರಿಗೆ ಲಭಿಸಿದ ದೈವೀ ಮಾರ್ಗದರ್ಶನದಿಂದಾಗಿ ಅವರು ನಿರ್ಮಿಸಿದ ಶ್ರೀಸಿದ್ಧಿವಿನಾಯನಕನ ಮೂರ್ತಿಯಲ್ಲಿ ಬಹಳಷ್ಟು ಚೈತನ್ಯವು ನಿರ್ಮಾಣವಾಗಿದೆ. ಮೂರ್ತಿಯ ಕಡೆಗೆ ನೋಡಿ ಅದು ಸಜೀವವಾಗಿರುವುದರ ಅರಿವಾಗುತ್ತದೆ ಮತ್ತು ನೋಡುವವರ ಭಾವಜಾಗೃತಿಯಾಗುತ್ತದೆ.

೩ ಇ. ಶ್ರೀ ಸಿದ್ಧಿವಿನಾಯಕನ ಮೂರ್ತಿ ಮತ್ತು ಪಾರಿಜಾತ ವೃಕ್ಷದ ಸಸಿ ಇವುಗಳಲ್ಲಿ ಬಹಳಷ್ಟು ಸಕಾರಾತ್ಮಕ ಊರ್ಜೆ ಇರುವುದರ ಕಾರಣಗಳು

ಶ್ರೀ ಸಿದ್ಧಿವಿನಾಯಕನ ಮೂರ್ತಿಯಲ್ಲಿ ಅಪಾರ ಪ್ರಮಾಣದಲ್ಲಿ ಶ್ರೀ ಗಣೇಶನ ತತ್ತ್ವ ಆಕರ್ಷಿತವಾಗಿ ಅದು ಜಾಗೃತವಾಗಿದೆ. ಈ ಮೂರ್ತಿಯಿಂದ ಬಹಳಷ್ಟು ಪ್ರಮಾಣದಲ್ಲಿ ಚೈತನ್ಯ ಪ್ರಕ್ಷೇಪಿತವಾಗುವುದರಿಂದ ಅದರ ಸಕಾರಾತ್ಮಕ ಊರ್ಜೆಯ ಪ್ರಭಾವಲಯ (೧೪೨.೩೫ ಮೀಟರ್) ಮತ್ತು ಅದರ ಒಟ್ಟು ಪ್ರಭಾವಲಯವು (೧೭೦.೧೫ ಮೀಟರ್) ಬಹಳ ಹೆಚ್ಚಿರುವುದು ವೈಜ್ಞಾನಿಕ ಪರೀಕ್ಷಣೆಯಲ್ಲಿ ಕಂಡು ಬಂದಿತು. ಆಶ್ರಮದಲ್ಲಿ ಶ್ರೀ ಸಿದ್ಧಿ ವಿನಾಯಕನ ಶುಭಾಗಮನವಾದಾಗ, ಆಶ್ರಮದ ಪ್ರವೇಶದ್ವಾರದ ಬಳಿ ಇಡಲಾಗಿದ್ದ ಪಾರಿಜಾತ ವೃಕ್ಷದ ಸಸಿಯು ತನ್ನ ಕ್ಷಮತೆಗನುಸಾರ ಮೂರ್ತಿಯಿಂದ ಪ್ರಕ್ಷೇಪಿತವಾಗುವ ಚೈತನ್ಯವನ್ನು ಗ್ರಹಣ ಮಾಡಿತು. ಆದುದರಿಂದ ಅದರಲ್ಲಿ ಬಹಳಷ್ಟು ಸಕಾರಾತ್ಮಕ ಊರ್ಜೆಯು ಕಂಡು ಬಂದಿತು.’

– ಸೌ. ಮಧುರಾ ಧನಂಜಯ ಕರ್ವೆ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೨೭.೨.೨೦೨೦)

ಈ-ಮೆಲ್ : [email protected]

Leave a Comment