ಸಾಮಾನ್ಯ ಮನುಷ್ಯ, ಸಾಧಕ ಮತ್ತು ಶಿಷ್ಯನು ಸುಖ-ದುಃಖದ ಪ್ರಸಂಗಗಳನ್ನು ನೋಡುವ ದೃಷ್ಟಿಕೋನ

ಸದ್ಗುರು ಡಾ. ಚಾರುದತ್ತ ಪಿಂಗಳೆ ಇವರು ಹೇಳಿದ ಸುಖ-ದುಃಖದ ಪ್ರಸಂಗಗಳನ್ನು ನೋಡುವ ಸಾಮಾನ್ಯ ಮನುಷ್ಯ, ಸಾಧಕ ಮತ್ತು ಶಿಷ್ಯನ ದೃಷ್ಟಿಕೋನದಲ್ಲಿನ ವ್ಯತ್ಯಾಸ !

ಸದ್ಗುರು ಡಾ. ಚಾರುದತ್ತ ಪಿಂಗಳೆ

‘ಜೀವನದಲ್ಲಿ ಸುಖ-ದುಃಖಗಳ ಪ್ರಸಂಗಗಳು ಬಂದಾಗ ಸಾಮಾನ್ಯ ಮನುಷ್ಯ, ಸಾಧಕ ಮತ್ತು ಶಿಷ್ಯನ ದೃಷ್ಟಿಕೋನ ಮತ್ತು ಅವುಗಳಲ್ಲಿನ ವ್ಯತ್ಯಾಸ ಹೇಗಿರುತ್ತದೆ ? ಎಂಬುದರ ಬಗ್ಗೆ ಸದ್ಗುರು ಡಾ. ಚಾರುದತ್ತ ಪಿಂಗಳೆ ಇವರು ಮಾಡಿದ ಮಾರ್ಗದರ್ಶನದ ಅಂಶಗಳನ್ನು ಮುಂದೆ ನೀಡುತ್ತಿದ್ದೇನೆ.

೧. ಸಾಮಾನ್ಯ ಮನುಷ್ಯ

ಯಾವಾಗ ಸಾಮಾನ್ಯ ಮನುಷ್ಯನ ಜೀವನದಲ್ಲಿ ಸುಖ ಬರುತ್ತದೆಯೋ, ಆಗ ಅವನು ಅದರ ಕರ್ತೃತ್ವವನ್ನು ತನ್ನ ಬಳಿ ತೆಗೆದುಕೊಳ್ಳುತ್ತಾನೆ ಮತ್ತು ಯಾವಾಗ ಅವನ ಜೀವನದಲ್ಲಿ ದುಃಖ ಬರುತ್ತದೆಯೋ, ಆಗ ಅವನು ಭಗವಂತನನ್ನು ದೂರುತ್ತಾನೆ. ಅವನು, ‘ದೇವರು ಹೀಗೇಕೆ ಮಾಡಿದರು ?’ ಎಂದು ಕೇಳುತ್ತಾನೆ.

೨. ಸಾಧಕ

ಯಾವಾಗ ಸಾಧಕನ ಜೀವನದಲ್ಲಿ ಸುಖದ ಕ್ಷಣ ಬರುತ್ತದೆಯೋ, ಆಗ ಅವನು ‘ಎಲ್ಲವೂ ಈಶ್ವರನ ಕೃಪೆಯಿಂದ ಅಥವಾ ಗುರುಕೃಪೆಯಿಂದ ಆಯಿತು’, ಎಂದು ಹೇಳುತ್ತಾನೆ ಮತ್ತು ಜೀವನದಲ್ಲಿ ದುಃಖದ ಪ್ರಸಂಗ ಬಂದಾಗ ‘ಇದು ನನ್ನ ಪ್ರಾರಬ್ಧದಿಂದಾಯಿತು’, ಎಂದು ಹೇಳುತ್ತಾನೆ. ಸಾಧಕನು ಸುಖ-ದುಃಖಗಳನ್ನು ಜಯಿಸಲು ಪ್ರಯತ್ನಿಸುತ್ತಿರುವುದರಿಂದ ಅವನು ಕಠಿಣ ಪ್ರಸಂಗಳಲ್ಲಿ ನಿರಾಶನಾಗದೇ ಅವುಗಳಿಂದ ಹೊರಗೆ ಬರುತ್ತಾನೆ.

೩. ಶಿಷ್ಯ

‘ಶಿಷ್ಯನಿಗೆ ಜೀವನದಲ್ಲಿ ಬರುವ ಸುಖ-ದುಃಖಗಳೆಂದರೆ ಗುರುಕೃಪೆಯಾಗಿದೆ’, ಎಂದು ಅನಿಸುತ್ತದೆ. ಯಾವಾಗ ಜೀವನದಲ್ಲಿ ಸುಖ ಬರುತ್ತದೆಯೋ, ಆಗ ಅವನಿಗೆ ನನ್ನ ಪುಣ್ಯ ಮುಗಿಯುತ್ತಿದೆ ಮತ್ತು ಯಾವಾಗ ದುಃಖ ಬರುತ್ತದೆಯೋ ಆಗ ಅವನಿಗೆ, ನನ್ನ ಪಾಪ ನಾಶವಾಗುತ್ತಿದೆ ಎಂದು ಅನಿಸುತ್ತದೆ. ಅವನು ಸುಖ-ದುಃಖದ ಆಚೆಗೆ, ಅಂದರೆ ಆನಂದಾವಸ್ಥೆಯ ಕಡೆಗೆ ಹೋಗುತ್ತಾನೆ. ನಿರಾಶೆ ಮತ್ತು ದುಃಖದ ಬದಲು ಪಾಪ ನಾಶವಾಗುತ್ತಿದೆ ಎಂಬ ವಿಚಾರದಿಂದ ಶಿಷ್ಯನಿಗೆ ಕೃತಜ್ಞತೆ ಅನಿಸುತ್ತದೆ.

ಸದ್ಗುರು ಪಿಂಗಳೆರವರು ಮೇಲಿನಂತೆ ನೀಡಿದ ದೃಷ್ಟಿಕೋನದಿಂದ ಶಿಷ್ಯನಾಗಲು ಹೇಗೆ ಪ್ರಯತ್ನಿಸಬೇಕು ಎಂಬುದು ಸಾಧಕರಿಗೆ ಕಲಿಯಲು ಸಿಕ್ಕಿತು.

– ಕು. ಮನೀಷಾ ಮಾಹುರ, ದೆಹಲಿ ಸೇವಾಕೇಂದ್ರ, ದೆಹಲಿ. (೨೩.೯.೨೦೨೧)

Leave a Comment