ಕೈದೋಟಕ್ಕೆ ಸಂಬಂಧಿಸಿದ ಸಂದೇಹಗಳ ನಿವಾರಣೆ

ಸೂಚನೆ : ಇಲ್ಲಿ ಸನಾತನದ ‘ಮನೆ ಮನೆಯಲ್ಲಿ ಕೈದೋಟ’ ಅಭಿಯಾನಕ್ಕೆ ಸಂಬಂಧಿಸಿದಂತೆ ಬಂದ ಪ್ರಶ್ನೆಗಳಿಗೆ ಕೃಷಿ ತಜ್ಞರೊಬ್ಬರು ಮಾಡಿದ ಮಾರ್ಗದರ್ಶನವನ್ನು ನೀಡಿದ್ದೇವೆ.

ಪ್ರಶ್ನೆ : ನನ್ನ ಬಂಗಲೆಯ ತೋಟದಲ್ಲಿ ಸ್ವಲ್ಪ ಖಾಲಿ ಜಾಗ ಇದೆ; ಆದರೆ ಸಮೀಪ ತೆಂಗಿನ ಮರಗಳು ಮತ್ತು ರಾಮಫಲದ ಗಿಡಗಳಿರುವುದರಿಂದ ನೆರಳು ಬರುತ್ತದೆ. ಆ ಜಾಗದಲ್ಲಿ ಹೆಚ್ಚು ಬಿಸಿಲು ಬರುವುದಿಲ್ಲ. ಆ ಜಾಗದಲ್ಲಿ ತರಕಾರಿಗಳನ್ನು ಬೆಳೆಸಬಹುದೇ ? (ಮೇಲ್ಛಾವಣಿಯ (ಟೆರೇಸ್) ಮೇಲೆಯೂ ತರಕಾರಿಗಳನ್ನು ಬೆಳೆಸಬಹುದು.) – ಸೌ. ಸ್ಮಿತಾ ಮಾಯೀಣಕರ

ಉತ್ತರ : ‘ಪ್ರತಿಯೊಂದು ವನಸ್ಪತಿಯ ಸೂರ್ಯಪ್ರಕಾಶದ ಆವಶ್ಯಕತೆ ಬೇರೆಬೇರೆ ಆಗಿರುತ್ತದೆ. ಹೆಚ್ಚಿನ ಹಣ್ಣಿನ ಗಿಡಗಳಿಗೆ ಮತ್ತು ತರಕಾರಿಗಳಿಗೆ ಒಳ್ಳೆಯ ಬೆಳವಣಿಗೆಯಾಗಲು ಕನಿಷ್ಟಪಕ್ಷ ೪ ರಿಂದ ೫ ಗಂಟೆ ಬೆಳಗ್ಗಿನ ಬಿಸಿಲು ಸಿಗುವುದು ಆವಶ್ಯಕವಾಗಿರುತ್ತದೆ. ಮಸಾಲೆಯ ವನಸ್ಪತಿಗಳಿಗೆ (ಉದಾ. ಮೆಣಸಿನ ಬಳ್ಳಿ) ಹೆಚ್ಚು ಸೂರ್ಯಪ್ರಕಾಶದ ಆವಶ್ಯಕತೆ ಇರುವುದಿಲ್ಲ. ಅವು ನೆರಳಿನಲ್ಲಿ ಅಥವಾ ಸ್ವಲ್ಪ ತೀವ್ರವಿರುವ ಸೂರ್ಯಪ್ರಕಾಶದಲ್ಲಿ ಚೆನ್ನಾಗಿ ಬೆಳೆಯುತ್ತವೆ. ಆದುದರಿಂದ ಗಿಡಗಳ ನೆರಳು ಬೀಳುವ ಜಾಗದಲ್ಲಿ ಮಸಾಲೆ ವನಸ್ಪತಿಗಳನ್ನು ಬೆಳೆಸಬಹುದು ಮತ್ತು ಮೇಲ್ಛಾವಣಿಯ (ಟೆರೇಸ್) ಸೂರ್ಯಪ್ರಕಾಶದಲ್ಲಿ ತರಕಾರಿಗಳನ್ನು ಬೆಳೆಸಬಹುದು.

ಪ್ರಶ್ನೆ : ಇತ್ತೀಚೆಗೆ ಪ್ಲ್ಯಾಸ್ಟಿಕಿನ ಕುಂಡಗಳು ಸಿಗುತ್ತವೆ. ಅವುಗಳಲ್ಲಿ ಗಿಡಗಳನ್ನು ಬೆಳೆಸಬಹುದೇ ? – ಸೌ. ಸ್ಮಿತಾ ಮಾಯೀಣಕರ

ಉತ್ತರ : ಆದಷ್ಟು ಪ್ಲಾಸ್ಟಿಕನ್ನು ಉಪಯೋಗಿಸಬಾರದು; ಆದರೆ ಹಳೆಯ ಪ್ಲಾಸ್ಟಿಕಿನ ಕುಂಡಗಳು, ಪ್ಲಾಸ್ಟಿಕಿನ ಭರಣಿಗಳು (ಡಬ್ಬಿಗಳು) ಅಥವಾ ಪ್ಲಾಸ್ಟಿಕಿನ ಚೀಲಗಳಿದ್ದರೆ, ಅವುಗಳನ್ನು ಎಸೆಯದೇ ಉಪಯೋಗಿಸಬಹುದು. ಮಣ್ಣಿನ ಕುಂಡಗಳು ಅಥವಾ ಇಟ್ಟಿಗೆಗಳ ಪಾತಿಯನ್ನು ಮಾಡುವುದು ಹೆಚ್ಚು ಯೋಗ್ಯವಾಗಿದೆ.

ಪ್ರಶ್ನೆ :ಕೆಲವು ಜನರು ಬಾಡಿಗೆಯ ಮನೆಗಳಲ್ಲಿರುತ್ತಾರೆ. ಇದರಿಂದ ಗಿಡಗಳನ್ನು ಬೆಳೆಸಲು ಅಡಚಣೆ ಬರುತ್ತದೆ. ಇಂತಹ ಸಮಯದಲ್ಲಿ ಏನು ಮಾಡಬೇಕು ? -ಅನಿತಾ ಜಗತಾಪ, ಮೀರಾ ರೋಡ, ಠಾಣೆ

ಉತ್ತರ : ಮನೆಗೆ ಯಾವುದೇ ರೀತಿಯ ಹಾನಿಯಾಗಬಾರದು, ಹಾಗೆಯೇ ಅಕ್ಕ-ಪಕ್ಕದ ಜನರಿಗೆ ಅಥವಾ ನಿಮ್ಮ ಕಟ್ಟಡದಲ್ಲಿನ ಜನರಿಗೆ ಯಾರಿಗೂ ಯಾವುದೇ ರೀತಿಯ ತೊಂದರೆಗಳು ಆಗಬಾರದು, ಈ ರೀತಿಯಿಂದ ಕೃಷಿಯನ್ನು ಮಾಡಿದರೆ, ಸಾಮಾನ್ಯವಾಗಿ ಯಾರೂ ವಿರೋಧ ಮಾಡುವುದಿಲ್ಲ. ಸೊಸೈಟಿ ಇದ್ದಲ್ಲಿ, ಸೊಸೈಟಿಯ ಸಾರ್ವಜನಿಕ ಜಾಗದಲ್ಲಿ ಮುಂದಾಳತ್ವವನ್ನು ವಹಿಸಿ ಕೃಷಿ ಮಾಡಿದರೆ ಉತ್ತಮ ಬೆಂಬಲ ಸಿಗುತ್ತದೆ. ನಮಗೆ ಇತರರ ಪರಿಚಯವೂ ಹೆಚ್ಚಾಗುತ್ತದೆ ಮತ್ತು ಈ ರೀತಿ ಸಮಷ್ಟಿ ಸೇವೆಯೂ ಆಗುತ್ತದೆ. ಸ್ಥಳೀಯ ಪರಿಸ್ಥಿತಿಗನುಸಾರ ಇದನ್ನು ತಾರತಮ್ಯದಿಂದ ನಿರ್ಧರಿಸಬೇಕು.

ಪ್ರಶ್ನೆ : ಗಿಡಗಳಿಗೆ ಬೂಸ್ಟು (ಫಂಗಸ್) ಬರುತ್ತದೆ. ಅದಕ್ಕೆ ಏನು ಮಾಡಬೇಕು ? – ಸೌ. ನೇಹಾ ಜೋಶಿ

ಉತ್ತರ : ಗೋಮೂತ್ರ, ಜೀವಾಮೃತ, ಹುಳಿ ಮಜ್ಜಿಗೆ ಇವುಗಳಲ್ಲಿನ ಯಾವುದಾದರೊಂದು ಪದಾರ್ಥದಲ್ಲಿ ೧೦ ಪಟ್ಟು ನೀರು ಹಾಕಿ ಗಿಡಗಳ ಮೇಲೆ ಸಿಂಪಡಿಸಬೇಕು.

ಪ್ರಶ್ನೆ : ಅರಿಶಿಣದ ಗಿಡಗಳು ಬೆಳೆಯುತ್ತಿವೆ; ಆದರೆ ಅದರ ಕೆಳಗಿನ ಎಲೆಗಳು ಹಳದಿಯಾಗಿವೆ. ಇದಕ್ಕೆ ಕಾರಣವೇನು ? – ಸೌ. ನೇಹಾ ಜೋಶಿ

ಉತ್ತರ : ಅರಿಶಿಣದ ಗಿಡಗಳಿಗೆ ೪ ತಿಂಗಳಿಗಿಂತ ಹೆಚ್ಚಾಗಿದ್ದರೆ, ಹಳೆಯ ಎಲೆಗಳು ಹಳದಿಯಾಗುತ್ತವೆ, ಇದು ನೈಸರ್ಗಿಕ ಪ್ರಕ್ರಿಯೆಯಾಗಿದೆ. ಸಂಪೂರ್ಣ ಗಿಡಗಳೂ ಬೇಗ ಹಳದಿಯಾಗುತ್ತವೆ.

ಪ್ರಶ್ನೆ : ಕಳೆದ ೫ ತಿಂಗಳುಗಳಿಂದ ನಮ್ಮ ಮನೆಯಲ್ಲಿನ ಅಮೃತಬಳ್ಳಿಗೆ ಎಲೆಗಳು ಬರುವುದಿಲ್ಲ; ಆದರೆ ಅದು ಜೀವಂತವಾಗಿದೆ. ಇದಕ್ಕೆ ಕಾರಣವೇನು ? – ಸೌ. ನೇಹಾ ಜೋಶಿ

ಉತ್ತರ : ಅಮೃತಬಳ್ಳಿಗೆ ಮಳೆಗಾಲದಲ್ಲಿಯೇ ಎಲೆಗಳಿರುತ್ತವೆ. ನಂತರ ಎಲೆಗಳು ಕಡಿಮೆಯಾಗುತ್ತವೆ. ಅಮೃತಬಳ್ಳಿಯು ಜೀವಂತವಾಗಿದ್ದರೆ, ಅದಕ್ಕೆ ಎಲೆಗಳು ಬರುತ್ತವೆ. ಜೀವಾಮೃತ ಮತ್ತು ಹುಳಿ ಮಜ್ಜಿಗೆಯನ್ನು (೧೦ ಪಟ್ಟು ನೀರಿನಲ್ಲಿ ಸೇರಿಸಿ) ವಾರಕ್ಕೊಮ್ಮೆ ಸಿಂಪಡಿಸಬೇಕು.

Leave a Comment