ಅನುಭೂತಿಗಳಲ್ಲಿ ಅಥವಾ ಸಿದ್ಧಿಗಳಲ್ಲಿ ಸಿಲುಕಿಸದೇ ಸಗುಣದಿಂದ ನಿರ್ಗುಣದ ಕಡೆಗೆ ಕರೆದೊಯ್ಯುವ ಪರಾತ್ಪರ ಗುರು ಡಾ. ಆಠವಲೆ !

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಅಮೂಲ್ಯ ವಿಚಾರಸಂಪತ್ತು !

ಶ್ರೀಚಿತ್‌ಶಕ್ತಿ ಸೌ. ಅಂಜಲಿ ಗಾಡಗೀಳ

೧. ಸಂತರೊಬ್ಬರ ಅಧ್ಯಾತ್ಮದಲ್ಲಿನ ಮುಂದಿನ ಸ್ಥಿತಿ, ಮತ್ತು ಆ ಅವಸ್ಥೆಯಲ್ಲಿ ‘ತಮ್ಮಿಂದ ಏನಾದರೂ ತಪ್ಪು ಅಥವಾ ಹುಚ್ಚುತನದಂತಹ ಕೃತಿಗಳು ಆಗಬಾರದು’ ಎಂದೆನಿಸುವುದು

ಓರ್ವ ಸಂತರಿಗೆ ಅಧ್ಯಾತ್ಮದಲ್ಲಿನ ಮುಂದಿನ ಹಂತದ, ಅಂದರೆ ಕುಂಡಲಿನಿ ಶಕ್ತಿಯ ಜಾಗೃತಿಯ ಅನುಭೂತಿ ಬಂದುದರಿಂದ, ಆ ಅವಸ್ಥೆಯಲ್ಲಿ ‘ತಮ್ಮಿಂದ ಏನಾದರೂ ತಪ್ಪು ಅಥವಾ ಹುಚ್ಚುತನದಂತಹ ಕೃತಿಗಳು ಆಗಬಾರದು’, ಎಂದು ಅವರು ಮನೆಯಿಂದ ಹೊರಗಡೆ ಹೋಗುವುದನ್ನು ಮತ್ತು ಜನರಲ್ಲಿ ಸೇರಿಕೊಳ್ಳುವುದನ್ನು ತಪ್ಪಿಸುವುದು :

‘ನಾಲ್ಕು-ಐದು ವರ್ಷಗಳ ಹಿಂದೆ ನಾವು ಪ್ರವಾಸದಲ್ಲಿರುವಾಗ ನಾನು ಒಂದು ರಾಜ್ಯದಲ್ಲಿನ ಓರ್ವ ಸಂತರನ್ನು ಭೇಟಿಯಾಗಿದ್ದೆ. ಆಗ ಆ ಸಂತರು, ಅವರು ಅನುಭವಿಸುತ್ತಿರುವ ಆಧ್ಯಾತ್ಮಿಕ ಅವಸ್ಥೆಯ ಬಗ್ಗೆ ನನಗೆ ಹೇಳಿದರು. ಅವರು, “ಈಗ ನನಗೆ ಅಧ್ಯಾತ್ಮದಲ್ಲಿನ ಮುಂದಿನ ಹಂತದ, ಅಂದರೆ ‘ಉನ್ಮನಿ’ ಅವಸ್ಥೆಯ ಅನುಭೂತಿಯು ಬರುತ್ತಿದೆ. ಆದುದರಿಂದ ನಾನು ಸದ್ಯ ಹೆಚ್ಚು ಸಮಯ ಮನೆಯ ಹೊರಗಡೆ ಹೋಗುವುದನ್ನು ಮತ್ತು ಸಮಾಜದ ಜನರನ್ನು ಭೇಟಿಯಾಗುವುದನ್ನು ತಪ್ಪಿಸುತ್ತಿದ್ದೇನೆ. ಏಕೆಂದರೆ ಈ ಅವಸ್ಥೆಯಲ್ಲಿ ನಮ್ಮ ಮನಸ್ಸು ಸಂಪೂರ್ಣ ಈಶ್ವರನೊಂದಿಗೆ ಏಕರೂಪವಾಗುತ್ತದೆ. ಈ ಅವಸ್ಥೆಯನ್ನು ಪ್ರಾಪ್ತ ಮಾಡಿಕೊಂಡ ವ್ಯಕ್ತಿಯು ತನ್ನ ದೇಹಬುದ್ಧಿಯನ್ನು ಕಳೆದುಕೊಳ್ಳುತ್ತಾನೆ. ಕೆಲವೊಮ್ಮೆ ಇಂತಹ ವ್ಯಕ್ತಿಯು ಇತರರ ದೃಷ್ಟಿಯಿಂದ ಯಾವುದಾದರೊಂದು ಅಸಂಬದ್ಧ ಕೃತಿಯನ್ನು ಮಾಡುತ್ತಾನೆ, ಅವನು ಒಂದು ಬೇರೆಯೇ ರೀತಿಯಲ್ಲಿ ವರ್ತಿಸುತ್ತಾನೆ. ಅವನ ವರ್ತನೆಗೆ ಸಾಮಾನ್ಯ ಮನುಷ್ಯರ ಭಾಷೆಯಲ್ಲಿ ‘ಅಪ್ಪಟ ಹುಚ್ಚುತನ’ ಎಂದು ಹೇಳಬಹುದು. ನನ್ನಿಂದ ಹೀಗೆ ಯಾವುದೇ ತಪ್ಪಾಗಬಾರದು ಎಂಬ ಭಯದಿಂದ ನಾನು ಈಗ ಮನೆಯ ಹೊರಗಡೆ ಹೋಗುವುದನ್ನು ಮತ್ತು ಜನರನ್ನು ಭೇಟಿಯಾಗುವುದನ್ನು ತಪ್ಪಿಸುತ್ತಿದ್ದೇನೆ”, ಎಂದು ಹೇಳಿದರು.

೨. ಈ ರೀತಿಯ ‘ಕುಂಡಲಿನಿಶಕ್ತಿಯ ಜಾಗೃತಿ’ಯ ಒಂದು ಅನುಭೂತಿಯು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರಿಗೆ ಬಂದಾಗ, ಪರಾತ್ಪರ ಗುರು ಡಾ. ಆಠವಲೆಯವರು ‘ಶಕ್ತಿಯ ಸ್ತರದ ಅನುಭೂತಿಗಳಲ್ಲಿ ಸಿಲುಕದಿರಲು’ ಹೇಳುವುದು

ಇದರ ಸಂದರ್ಭದಲ್ಲಿ ನನಗೆ ಬಂದ ಒಂದು ಅನುಭೂತಿಯನ್ನು ಇಲ್ಲಿ ಹೇಳಬೇಕೆಂದು ಅನಿಸುತ್ತದೆ. ೨೦೦೧ ರಲ್ಲಿ ಪ.ಪೂ. ಡಾಕ್ಟರರು ಹೇಳಿದಂತೆ ಸಂಗೀತದ ಪ್ರಯೋಗಗಳು ನಡೆದಿರುವಾಗ ಒಮ್ಮೆ ನಾನು ಧ್ಯಾನಕ್ಕೆ ಕುಳಿತಿದ್ದೆನು. ಆಗ ನನಗೆ ಇದ್ದಕ್ಕಿದ್ದಂತೆಯೇ ಸ್ಥೂಲದಲ್ಲಿ, ನನ್ನ ಮೂಲಾಧಾರಚಕ್ರದಿಂದ ವಿಶುದ್ಧಚಕ್ರದವರೆಗೆ ಊರ್ಜಾಶಕ್ತಿಯ ಒಂದು ಪ್ರವಾಹ ಬೆನ್ನುಮೂಳೆಗಳ ಒಳಗಿನಿಂದ ನೇರವಾಗಿ ಮೇಲಿನ ದಿಕ್ಕಿನಲ್ಲಿ ಹೋಗಿ ಕುತ್ತಿಗೆಯಲ್ಲಿ ಸಿಲುಕಿಕೊಂಡಿತು. ಇದಕ್ಕೂ ಮೊದಲು ನಾನು ಈ ರೀತಿ ಎಂದಿಗೂ ಅನುಭವಿಸಿರಲಿಲ್ಲ. ನಾನು ಪರಾತ್ಪರ ಗುರು ಡಾ. ಆಠವಲೆಯವರಿಗೆ ಈ ಬಗ್ಗೆ ಕೇಳಿದಾಗ ಅವರು, “ನಿಮಗೆ ಬಂದ ಈ ಅನುಭೂತಿಯು ‘ಕುಂಡಲಿನಿಶಕ್ತಿಯ ಜಾಗೃತಿ’ಯದ್ದಾಗಿದೆ. ಹಠಯೋಗಿ, ಧ್ಯಾನಯೋಗಿ, ಶಕ್ತಿಪಾತ ಯೋಗಿಗಳಿಗೆ ಇದು ಒಂದು ಉಚ್ಚ ಸ್ತರದಲ್ಲಿನ ಅನುಭೂತಿಯಾಗಿದೆ; ಆದರೆ ನಮಗೆ ಇಂತಹ ಯಾವುದೇ ಶಕ್ತಿಯ ಸ್ತರದಲ್ಲಿನ ಅನುಭೂತಿಗಳಲ್ಲಿ ಸಿಲುಕಲಿಕ್ಕಿಲ್ಲ’ ಎಂದು ಹೇಳಿದರು.

೩. ಪರಾತ್ಪರ ಗುರು ಡಾ. ಆಠವಲೆಯವರು ಇಂತಹ ಅನುಭೂತಿಗಳಲ್ಲಿ ಸಿಲುಕುವುದು ಬೇಡ ಎಂದು ಹೇಳಿದುದರ ಕಾರಣಗಳು

ಅ. ಮನುಷ್ಯ ಜನ್ಮವು ಅತ್ಯಂತ ಕಡಿಮೆ ಕಾಲಾವಧಿಯದ್ದಾಗಿದೆ. ನಾವು ಬೇಗನೆ ಅಧ್ಯಾತ್ಮದ ಮುಂದಿನ ಮುಂದಿನ ಹಂತಗಳಿಗೆ ಹೋಗಬೇಕು. ಸಾಧನೆಯ ವಿವಿಧ ಹಂತಗಳನ್ನು ಅನುಭವಿಸಿ ಅವುಗಳಿಂದ ಕಲಿತು ಮುಂದೆ ಹೋಗಬೇಕಾಗಿದೆ.

ಆ. ‘ಶಕ್ತಿ, ಭಾವ, ಚೈತನ್ಯ, ಆನಂದ ಮತ್ತು ಶಾಂತಿ’ ಸಾಧನೆಯ ಈ ವಿವಿಧ ಹಂತಗಳ ಅನುಭವವನ್ನು ಪಡೆದುಕೊಂಡು ಮುಂದೆ ಹೋಗುವುದು ಮತ್ತು ಬೇಗನೆ ಈಶ್ವರಪ್ರಾಪ್ತಿಯನ್ನು ಮಾಡಿಕೊಳ್ಳುವುದು, ನಮ್ಮ ಧ್ಯೇಯವಾಗಿದೆ.

ಇ. ಶಕ್ತಿಯ ಸ್ತರದ ಇಂತಹ ಅನುಭೂತಿಗಳಲ್ಲಿ ಸಿಲುಕಿದರೆ, ನಮಗೆ ಸಮಾಜದಲ್ಲಿದ್ದು ಸಮಷ್ಟಿ ಸಾಧನೆಯನ್ನು ಮಾಡುವುದು ಕಠಿಣವಾಗುವುದು. ಸಮಷ್ಟಿ ಸಾಧನೆಯಿಂದ ಬೇಗನೆ ಮನೋಲಯ ಮತ್ತು ಬುದ್ಧಿಲಯವಾಗುತ್ತದೆ.

೪. ಪರಾತ್ಪರ ಗುರು ಡಾ. ಆಠವಲೆಯವರು ಈಗ ಕಾಲಾನುಸಾರ ಸಾಧನೆಗೆ ಮಹತ್ವವಿರುವುದರಿಂದ ಇಂತಹ ಶಕ್ತಿಯ ಸ್ತರದಲ್ಲಿನ ಅನುಭೂತಿಗಳನ್ನು ದುರ್ಲಕ್ಷಿಸಲು ಹೇಳುವುದು ಮತ್ತು ಅದರ ನಂತರ ಇಂತಹ ಅನುಭೂತಿಗಳು ಬರುವುದು ತಾನಾಗಿಯೇ ನಿಲ್ಲುವುದು

‘ಕಾಲಾನುಸಾರ ಸಾಧನೆಯನ್ನು ಮಾಡುವುದಕ್ಕೆ ಸದ್ಯ ಬಹಳ ಮಹತ್ವವಿದೆ. ಇಂದು ಸಮಾಜದ ಸ್ಥಿತಿ ಬಹಳ ಹದಗೆಟ್ಟಿದೆ. ಸಮಾಜಕ್ಕೆ ಧರ್ಮಶಿಕ್ಷಣವನ್ನು ನೀಡುವುದು ಮಹತ್ವದ್ದಾಗಿದೆ. ಅಧ್ಯಾತ್ಮ ಪ್ರಸಾರ ಮಾಡುವುದಕ್ಕೆ ಶೇ. ೮೦ ರಷ್ಟು ಮಹತ್ವವಿದೆ. ನೀವು ಇಂತಹ ಶಕ್ತಿಯ ಸ್ತರದ ಅನುಭೂತಿಗಳನ್ನು ದುರ್ಲಕ್ಷಿಸಿ, ಅಂದರೆ ನೀವು ಅವುಗಳಲ್ಲಿ ಸಿಲುಕಿಕೊಳ್ಳುವುದಿಲ್ಲ. ಶಕ್ತಿಯ ಸ್ತರದ ಹಂತವನ್ನು ಜೀವನದಲ್ಲಿ ಬೇಗನೆ ಮುಗಿಸಿ ಮುಂದೆ ನಡೆಯಿರಿ’. ಅನಂತರ ನಾನು ಇಂತಹ ಅನುಭೂತಿಗಳ ಕಡೆಗೆ ಗಮನ ನೀಡಲಿಲ್ಲ. ಕೆಲವು ದಿನಗಳ ನಂತರ ನನಗೆ ಇಂತಹ ಅನುಭೂತಿಗಳು ಬರುವುದು ತಾನಾಗಿಯೇ ನಿಂತುಹೋಯಿತು. ಪ.ಪೂ. ಡಾಕ್ಟರರು ಬೇಗನೆ ನನ್ನನ್ನು ಇಂತಹ ಅನುಭೂತಿಗಳ ಹಂತದಿಂದ ಮುಂದೆ ಕರೆದುಕೊಂಡು ಹೋದರು.

೫. ವ್ಯಷ್ಟಿ ಸ್ತರದ ‘ಕುಂಡಲಿನಿಶಕ್ತಿಯ ಜಾಗೃತಿ’ಯ ಅನುಭೂತಿಯಲ್ಲಿ ಸಿಲುಕಿಕೊಂಡರೆ ಆಗುವ ಹಾನಿ

೫ ಅ. ‘ಕುಂಡಲಿನಿ ಶಕ್ತಿಯ ಜಾಗೃತಿ’ ಇದುವೇ ಅಧ್ಯಾತ್ಮದಲ್ಲಿನ ಅಂತಿಮ ಸತ್ಯವಾಗಿದೆ ಎಂದು ತಿಳಿದು ವ್ಯಕ್ತಿಯ ಜೀವನ (ಸಾಧನೆ) ಒಂದು ಹಂತಕ್ಕೆ ಬಂದು ನಿಲ್ಲುವುದು : ‘ಕುಂಡಲಿನಿ ಶಕ್ತಿಯ ಜಾಗೃತಿಯಾಗುವುದು’, ವ್ಯಷ್ಟಿ ಅನುಭೂತಿಗಳ ಜಗತ್ತಾಗಿದೆ. ಇದರಲ್ಲಿ ‘ನಾನು ಮತ್ತು ನನ್ನ ಅನುಭೂತಿಗಳು’ ಇಷ್ಟೇ ವಿಶ್ವವು ನಿರ್ಮಾಣವಾಗುತ್ತದೆ. ಸಮಾಜದಲ್ಲಿ ಜನರು ಹೆಚ್ಚಿನ ಸಲ ಇಂತಹ ಅನುಭೂತಿಗಳಿಗೆ ಮರುಳಾಗುತ್ತಾರೆ ಮತ್ತು ಅವರಿಗೆ ‘ಇದೇ ಅಂತಿಮ ಸತ್ಯವಾಗಿದೆ’ ಎಂದು ಅನಿಸುತ್ತದೆ. ‘ನನಗೆ ಈಗ ಅಧ್ಯಾತ್ಮದಲ್ಲಿನ ಉಚ್ಚ ಸ್ತರದ ಅನುಭೂತಿಯು ಬಂದುದರಿಂದ ನನಗೆ ಎಲ್ಲ ಜ್ಞಾನ ಪ್ರಾಪ್ತವಾಗಿದೆ’, ಎಂದು ಅನಿಸುತ್ತದೆ. ಈ ಭ್ರಮೆಯಲ್ಲಿ ಅವರ ಜೀವನವು ಒಂದು ಹಂತಕ್ಕೆ ಬಂದು ನಿಲ್ಲುತ್ತದೆ.

೫ ಆ. ಮುಂದಿನ ಹಂತಕ್ಕೆ ಹೋಗುವ ಜಿಜ್ಞಾಸೆ ಉಳಿಯದಿರುವುದರಿಂದ ಸಾಧನೆಯಲ್ಲಿ ಅಧೋಗತಿಯಾಗುವುದು : ‘ಅಧ್ಯಾತ್ಮದಲ್ಲಿ ಮುಂದಿನ ಹಂತದಲ್ಲಿಯೂ ಏನಾದರೂ ಇರುತ್ತದೆ’, ಎಂಬ ಜಿಜ್ಞಾಸೆಯೇ ಅವರಲ್ಲಿ ಇಲ್ಲದಿರುವುದರಿಂದ ಈಶ್ವರನ ವ್ಯಾಪಕ ರೂಪದ ವರೆಗೆ ಅವರಿಗೆ ತಲುಪಲು ಸಾಧ್ಯವಾಗುವುದಿಲ್ಲ. ತದ್ವಿರುದ್ಧ ಅವರ ಅಹಂ ಹೆಚ್ಚಾಗಿ ಸಾಧನೆಯಲ್ಲಿ ಅಧೋಗತಿಯಾಗುತ್ತದೆ.

೫ ಇ. ಇಂತಹ ಅನುಭೂತಿಗಳ ಯೋಗ್ಯ ಮಾಹಿತಿ ಇಲ್ಲದಿರುವುದರಿಂದ ಕೆಲವು ಜನರು ಹೆದರಿ ಸಾಧನೆಯನ್ನು ನಿಲ್ಲಿಸುತ್ತಾರೆ : ಕೆಲವು ಜನರಿಗೆ ಇಂತಹ ಅನುಭೂತಿಗಳ ಯೋಗ್ಯ ಮಾಹಿತಿ ಇಲ್ಲದಿರುವುದರಿಂದ, ಹೀಗೇನಾದರೂ ಆದರೆ ಅವರು ಹೆದರುತ್ತಾರೆ ಮತ್ತು ‘ಇನ್ನು ಮುಂದೆ ಇನ್ನೂ ಏನಾದರೂ ವಿಚಿತ್ರವಾಗುವುದು ಬೇಡ’, ಎಂದು ಸಾಧನೆ ಮಾಡುವುದನ್ನೇ ನಿಲ್ಲಿಸುತ್ತಾರೆ.

೬. ಇಂತಹ ಅನುಭೂತಿಗಳಲ್ಲಿ ಸಿಲುಕದೇ ಅವುಗಳಿಂದ ಕಲಿತು ಸಾಧನೆಯಲ್ಲಿ ಮುಂದೆ ಹೋಗಲು ಅವುಗಳ ಲಾಭವನ್ನು ಪಡೆದುಕೊಳ್ಳುವುದು ಆವಶ್ಯಕವಾಗಿದೆ !

ಕೊನೆಗೆ ಎಲ್ಲವೂ ಮಾಯೆಯೇ ಆಗಿದೆ. ಕೇವಲ ‘ನಿರ್ಗುಣ ನಿರಾಕಾರ ಈಶ್ವರ’ ಮಾತ್ರ ಏಕೈಕ ಸತ್ಯವಾಗಿದೆ; ನಾವು ಸಾಧಕರಾಗಿರುವುದರಿಂದ ಇವೆಲ್ಲವುಗಳಿಂದ ಕಲಿತು ಅವುಗಳಲ್ಲಿ ಸಿಲುಕದೇ ಸಾಧನೆಯಲ್ಲಿ ಮುಂದೆ ಮುಂದೆ ಹೋಗಲು ಅವುಗಳ ಲಾಭವನ್ನು ಮಾಡಿಕೊಳ್ಳಬೇಕು. ‘ಯಾವುದಾದರೊಂದು ಸಿದ್ಧಿಯು ಪ್ರಾಪ್ತವಾದರೆ ಅಥವಾ ಯಾವುದಾದರೊಂದು ಅವಸ್ಥೆಯನ್ನು ಅನುಭವಿಸಿದರೆ ಅಥವಾ ಯಾವುದಾದರೊಂದು ವೈಶಿಷ್ಟ್ಯಪೂರ್ಣ ಅನುಭೂತಿ ಬಂದರೆ’, ಅವು ವರ್ತಮಾನದಲ್ಲಿ ಕಲಿಯುವುದಕ್ಕಾಗಿಯೇ ಇವೆ. ಇದರಿಂದ ನಮಗೆ ಸಾಧನೆಯ ಮಹತ್ವ ತಿಳಿಯುತ್ತದೆ. ನಮ್ಮ ಉತ್ಸಾಹವು ಹೆಚ್ಚಾಗುತ್ತದೆ.

೭. ಇಂತಹ ಅನುಭವಗಳಿಂದ ಹೊಸ ಪೀಳಿಗೆಗೆ ಸಾಧನೆಯಲ್ಲಿ ಯೋಗ್ಯ ದಿಶೆ ದೊರಕಿ ಅವರ ಪ್ರಗತಿ ಬೇಗನೆ ಆಗುವುದು

ನಮ್ಮ ಅನುಭವಗಳಿಂದ ಮುಂದೆ ಜನ್ಮ ಪಡೆಯುವ ಹೊಸ ಪೀಳಿಗೆಗೆ ಕಲಿಯಲು ಸಿಗುವುದು. ಅವರಿಗೆ ಸಾಧನೆಯಲ್ಲಿ ಯೋಗ್ಯ ದಿಶೆ ಸಿಗುವುದು ಮತ್ತು ನಮ್ಮಿಂದಾದ ತಪ್ಪುಗಳು ಅವರಿಂದಾಗಲಾರವು. ಇದರಿಂದ ಸಾಧನೆಯಲ್ಲಿ ಶೀಘ್ರ ಪ್ರಗತಿಯನ್ನು ಮಾಡಿಕೊಳ್ಳಲು ಅವರಿಗೆ ಸಹಾಯವಾಗುವುದು.

೮. ಸನಾತನ ಸಂಸ್ಥೆಯ ಸಾಧಕರಿಗಾಗಿ ಏಕಮೇವ ಅವಸ್ಥೆ ಎಂದರೆ ‘ಸತತವಾಗಿ ಕಲಿಯುವ ಸ್ಥಿತಿಯಲ್ಲಿಡುವ ಶಿಷ್ಯಾವಸ್ಥೆ !’

ಸಾಧಕರು ಇಂತಹ ಯಾವುದೇ ವಿಷಯಗಳಲ್ಲಿ ಸಿಲುಕದಿರುವುದರಿಂದ ಅವರು ಎಲ್ಲ ಅವಸ್ಥೆಗಳಲ್ಲಿ ಸ್ಥಿರವಾಗಿದ್ದು ತಮ್ಮ ನಿತ್ಯ ಕರ್ಮಗಳನ್ನೂ ಅಷ್ಟೇ ಜವಾಬ್ದಾರಿಯಿಂದ ಪೂರ್ಣಗೊಳಿಸುತ್ತಾರೆ. ‘ಸನಾತನ ಸಂಸ್ಥೆಯ ಸಾಧಕರ ಏಕಮೇವ ಅವಸ್ಥೆಯೆಂದರೆ ‘ಸತತವಾಗಿ ಕಲಿಯುವ ಸ್ಥಿತಿಯಲ್ಲಿಡುವ ಶಿಷ್ಯಾವಸ್ಥೆ.’ ಕೊನೆಯವರೆಗೆ ಪ್ರತಿಯೊಬ್ಬರಿಂದ ಕಲಿಯುವುದು ಮತ್ತು ತಮ್ಮಲ್ಲಿ ಯಾವುದೇ ರೀತಿಯ ಸಾಂಪ್ರದಾಯಿಕತೆ ಬರಲು ಬಿಡದೇ ವ್ಯಾಪಕವಾಗಲು ಪ್ರಯತ್ನಿಸುವುದೇ ನಿಜವಾದ ಶೀಘ್ರ ಮೋಕ್ಷಪ್ರಾಪ್ತಿ ಮಾಡಿಕೊಳ್ಳುವ ಸಾಧನವಾಗಿದೆ.

ಗುರುಗಳ ಬೋಧನೆಗನುಸಾರ ಸಾದಾ ಸರಳ ರೀತಿಯಿಂದ ಕೊನೆಯವರೆಗೆ ಪ್ರಾಮಾಣಿಕ ಪ್ರಯತ್ನಗಳನ್ನು ಮಾಡುತ್ತಿರುವುದು ಮತ್ತು ಅದಕ್ಕನುಸಾರ ಸಂಪೂರ್ಣ ಸಮರ್ಪಿಸಿಕೊಂಡು ಸಮಷ್ಟಿ ಸೇವೆಯನ್ನು ಮಾಡುವುದು, ಇಷ್ಟೇ ಸಾಧಕರಿಗೆ ಗೊತ್ತಿದೆ ಮತ್ತು ಇದರಲ್ಲಿಯೇ ಅವರಿಗೆ ಆನಂದವೂ ಇದೆ.

೯. ಪರಾತ್ಪರ ಗುರು ಡಾ. ಆಠವಲೆಯವರು ಸಾಧಕರಿಗೆ ತನು, ಮನ ಮತ್ತು ಧನ ಇವುಗಳ ತ್ಯಾಗ ಮಾಡುವುದನ್ನು ಕಲಿಸಿ ಅವರಿಗೆ ಪ್ರಾಯೋಗಿಕ ಸ್ತರದಲ್ಲಿ ‘ಶೂನ್ಯ’ವಾಗುವ ತರಬೇತಿಯನ್ನು ನೀಡಿದುದರಿಂದ ಅವರಿಗೆ ಮೋಕ್ಷಪ್ರಾಪ್ತಿ ಮಾಡಿಕೊಳ್ಳುವಾಗ ಶೂನ್ಯಕ್ಕೆ ಹೋಗುವುದು ಕಠಿಣವಾಗಿಲ್ಲ

ಪರಾತ್ಪರ ಗುರು ಡಾ. ಆಠವಲೆಯವರು ಸಾಧಕರನ್ನು ಸಹಜ ರೀತಿಯಿಂದ ಸಗುಣದಿಂದ ನಿರ್ಗುಣದ ಕಡೆಗೆ ಕರೆದೊಯ್ಯಲು ಆರಂಭಿಸಿದ್ದಾರೆ. ನಿರ್ಗುಣದಲ್ಲಿ ಕೊನೆಗೆ ಏನೂ ಇರುವುದಿಲ್ಲ. ಪ.ಪೂ. ಡಾಕ್ಟರರು ತನು, ಮನ ಮತ್ತು ಧನದ ತ್ಯಾಗವನ್ನು ಕಲಿಸಿ ಸಾಧಕರಿಗೆ ಪ್ರಾಯೋಗಿಕ ಸ್ತರದಲ್ಲಿ ‘ಸ್ವತಃ ಶೂನ್ಯವಾಗುವ’ ಬಗ್ಗೆ ಒಂದು ರೀತಿಯಲ್ಲಿ ತರಬೇತಿಯನ್ನೇ ನೀಡಿರುವುದರಿಂದ ಮೋಕ್ಷಪ್ರಾಪ್ತಿಯನ್ನು ಮಾಡಿಕೊಳ್ಳುವಾಗ ಸಾಧಕರಿಗೆ ‘ಶೂನ್ಯಕ್ಕೆ ಹೋಗುವುದು’ ಕಠಿಣವಾಗಲಾರದು, ಎಂಬುದು ಅಷ್ಟೇ ನಿಜ.

– ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ (೧೧.೪.೨೦೨೦)

Leave a Comment