ನಾಮಜಪಾದಿ ಉಪಚಾರಗಳಿಗಾಗಿ ಕುಳಿತುಕೊಳ್ಳುವಾಗ ಪೂರ್ವ ಅಥವಾ ಪಶ್ಚಿಮ ದಿಕ್ಕಿಗೆ ಮುಖ ಮಾಡಿ ಕುಳಿತುಕೊಳ್ಳಿ

ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ

ಸನಾತನದ ಆಶ್ರಮ, ಸೇವಾಕೇಂದ್ರಗಳು ಅಥವಾ ಸಾಧಕರ ನಿವಾಸಸ್ಥಾನಗಳಲ್ಲಿ ಸಾಧಕರು ಪ್ರತಿದಿನ ತಮ್ಮ ಮೇಲೆ ನಾಮಜಪಾದಿ ಉಪಚಾರಗಳಿಗಾಗಿ ಕುಳಿತುಕೊಳ್ಳುತ್ತಾರೆ. ಆಶ್ರಮ ಅಥವಾ ಸೇವಾಕೇಂದ್ರಗಳಲ್ಲಿ ಉನ್ನತರು (ಉದಾ. ಸಂತರು ಅಥವಾ ಶೇ. ೬೧ ರಷ್ಟು ಮತ್ತು ಅದಕ್ಕಿಂತ ಅಧಿಕ ಆಧ್ಯಾತ್ಮಿಕ ಮಟ್ಟದ ಸಾಧಕರು) ನಾಮಜಪಕ್ಕಾಗಿ ಕುಳಿತುಕೊಳ್ಳುತ್ತಾರೆ ಮತ್ತು ಅವರ ಎದುರಿಗೆ ಇತರ ಸಾಧಕರು ಆಧ್ಯಾತ್ಮಿಕ ಲಾಭವಾಗಲು ನಾಮಜಪಕ್ಕೆ ಕುಳಿತುಕೊಳ್ಳುತ್ತಾರೆ. ನಾಮಜಪ ಉಪಚಾರಗಳಿಂದ ಲಾಭವಾಗಲು ನಾಮಜಪಕ್ಕೆ ಕುಳಿತುಕೊಳ್ಳುವಾಗ ಸಾಧಕರು ಮುಂದಿನ ಅಂಶಗಳನ್ನು ಗಮನದಲ್ಲಿಡಬೇಕು.

೧. ಆಶ್ರಮ ಅಥವಾ ಸೇವಾಕೇಂದ್ರಗಳಲ್ಲಿ ಉನ್ನತರು ನಾಮಜಪಕ್ಕೆ ಕುಳಿತುಕೊಳ್ಳುವಾಗ ಕುಳಿತುಕೊಳ್ಳುವ ರಚನೆ ಪೂರ್ವ-ಪಶ್ಚಿಮವಾಗಿರಬೇಕು. ಇದರಲ್ಲಿ ಉನ್ನತರು ನಾಮಜಪಕ್ಕೆ ಕುಳಿತುಕೊಳ್ಳುವಾಗ ಆದಷ್ಟು ಪಶ್ಚಿಮ ದಿಕ್ಕಿಗೆ ಮುಖ ಮಾಡಿ ಕುಳಿತುಕೊಳ್ಳಬೇಕು. ಇಂತಹ ಸಮಯದಲ್ಲಿ ಅವರ ಎದುರಿಗೆ ಉಪಾಯಕ್ಕಾಗಿ ನಾಮಜಪಕ್ಕೆ ಕುಳಿತುಕೊಳ್ಳುವ ಸಾಧಕರು ಉನ್ನತರ ಕಡೆಗೆ ಮುಖ ಮಾಡಿ (ಪೂರ್ವ ದಿಕ್ಕಿಗೆ ಮುಖ) ಕುಳಿತುಕೊಳ್ಳಬೇಕು. ಈ ರಚನೆ ಸಾಧ್ಯವಿಲ್ಲದಿದ್ದರೆ, ಉನ್ನತರು ಪೂರ್ವ ದಿಕ್ಕಿಗೆ ಮುಖ ಮಾಡಿ ಕುಳಿತುಕೊಳ್ಳಬಹುದು. ಆಗ ಉಪಾಯಕ್ಕಾಗಿ ನಾಮಜಪಕ್ಕೆ ಕುಳಿತುಕೊಳ್ಳುವ ಸಾಧಕರು ಉನ್ನತರ ಕಡೆಗೆ ಮುಖ ಮಾಡಿ (ಪಶ್ಚಿಮ ದಿಕ್ಕಿಗೆ ಮುಖ) ಕುಳಿತುಕೊಳ್ಳಬೇಕು.

೨. ಸಾಧಕರು ತಮ್ಮ ನಿವಾಸಸ್ಥಾನಗಳಲ್ಲಿ ಅಥವಾ ಇತರ ಸ್ಥಳಗಳಲ್ಲಿ ವೈಯಕ್ತಿಕ ಸ್ತರದಲ್ಲಿ ನಾಮಜಪಕ್ಕೆ ಕುಳಿತುಕೊಳ್ಳುವಾಗ ಆದಷ್ಟು ಪೂರ್ವ ದಿಕ್ಕಿಗೆ ಮುಖ ಮಾಡಿ ಕುಳಿತುಕೊಳ್ಳಬೇಕು ಮತ್ತು ಒಂದು ವೇಳೆ ಅದು ಸಾಧ್ಯವಿಲ್ಲದಿದ್ದಲ್ಲಿ ಪಶ್ಚಿಮ ದಿಕ್ಕಿಗೆ ಮುಖ ಮಾಡಿ ಕುಳಿತುಕೊಳ್ಳಬಹುದು.

೩. ಯಾರಿಗೆ ಪೂರ್ವ ದಿಕ್ಕಿಗೆ ಅಥವಾ ಪಶ್ಚಿಮ ದಿಕ್ಕಿಗೆ ಮುಖ ಮಾಡಿ ಕುಳಿತುಕೊಳ್ಳಲು ಸಾಧ್ಯವಾಗುವುದಿಲ್ಲವೋ, ಅವರು ಉತ್ತರ ದಿಕ್ಕಿಗೆ ಮುಖ ಮಾಡಿ ಕುಳಿತುಕೊಳ್ಳಬೇಕು. ಆದರೆ ದಕ್ಷಿಣ ದಿಕ್ಕಿಗೆ ಮುಖ ಮಾಡಿ ನಾಮಜಪವನ್ನು ಮಾಡಬಾರದು.

೪. ದಕ್ಷಿಣ ದಿಕ್ಕಿಗೆ ಮುಖ ಮಾಡಿ ನಾಮಜಪ ಮಾಡಲು ಕುಳಿತುಕೊಂಡರೆ ಅನಿಷ್ಟ ಶಕ್ತಿಗಳ ತೊಂದರೆಯು ಹೆಚ್ಚಾಗುತ್ತದೆ ಮತ್ತು ಆಗ ನಮಗೆ ನಾಮಜಪ ಮಾಡಲು ಸಾಧ್ಯವಾಗುವುದಿಲ್ಲ. ದಕ್ಷಿಣ ದಿಕ್ಕಿನಿಂದ ತೊಂದರೆದಾಯಕ ಸ್ಪಂದನಗಳು ಬರುತ್ತಿರುತ್ತವೆ. ತದ್ವಿರುದ್ಧ ಪೂರ್ವ ಅಥವಾ ಪಶ್ಚಿಮ ದಿಕ್ಕಿಗೆ ಒಳ್ಳೆಯ ಸ್ಪಂದನಗಳು ಬರುತ್ತಿರುತ್ತವೆ. ಆದುದರಿಂದ ಪೂರ್ವ ದಿಕ್ಕಿಗೆ ಅಥವಾ ಪಶ್ಚಿಮ ದಿಕ್ಕಿಗೆ ಮುಖ ಮಾಡಿ ಕುಳಿತುಕೊಳ್ಳುವುದರಿಂದ ನಾಮಜಪ ಚೆನ್ನಾಗಿ ಆಗುತ್ತದೆ. ಹಾಗೆಯೇ ಅನಿಷ್ಟ ಶಕ್ತಿಗಳ ತೊಂದರೆಯಾಗುವ ಸಾಧ್ಯತೆಗಳು ಕಡಿಮೆಯಾಗುತ್ತವೆ. ಆಗ ನಾಮಜಪದಿಂದ ಆಧ್ಯಾತ್ಮಿಕ ಸ್ತರದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಲಾಭವಾಗುತ್ತದೆ.

– ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ, ಸನಾತನ ಆಶ್ರಮ, ರಾಮನಾಥಿ, ಗೋವಾ (೨೫.೫.೨೦೨೧)

Leave a Comment