ದಸರಾದ ದಿನದಂದು ಮಂದಾರದ ಎಲೆಗಳ ಮೇಲಾಗುವ ಸಕಾರಾತ್ಮಕ ಪರಿಣಾಮ ತೋರಿಸುವ ವೈಶಿಷ್ಟ್ಯಪೂರ್ಣ ಸಂಶೋಧನೆ !

ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯವು ಯೂನಿವರ್ಸಲ್ ಔರಾ ಸ್ಕ್ಯಾನರ್ (ಯೂ.ಎ.ಎಸ್.) ಈ ಉಪಕರಣದ ಮೂಲಕ ಮಾಡಿದ ವೈಜ್ಞಾನಿಕ ಪರೀಕ್ಷೆ

ಆಶ್ವಯುಜ ಶುಕ್ಲ ದಶಮಿ, ಅಂದರೆ ದಸರಾ ಇದು ಮೂರೂವರೆ ಮುಹೂರ್ತಗಳಲ್ಲಿ ಒಂದಾಗಿದೆ. ದಸರಾದ ದಿನದಂದು ಮಂದಾರದ ಎಲೆಗಳನ್ನು ನೀಡುವುದಕ್ಕೆ ವಿಶೇಷ ಮಹತ್ವವಿದೆ. ೨೦೧೮ ನೇ ಇಸವಿಯಲ್ಲಿ ಪರಾತ್ಪರ ಗುರು ಪಾಂಡೆ ಮಹಾರಾಜರು ಮತ್ತು ಸನಾತನದ ಓರ್ವ ಸಾಧಕರು ಪರಾತ್ಪರ ಗುರು ಡಾ. ಆಠವಲೆಯವರಿಗೆ ದಸರಾದ ನಿಮಿತ್ತ ಮಂದಾರದ ಎಲೆಗಳನ್ನು ಕಳುಹಿಸಿದ್ದರು. ‘ದಸರಾದ ದಿನದಂದು ಮಂದಾರದ ಎಲೆಗಳ ಮೇಲೆ ಯಾವ ಪರಿಣಾಮವಾಗುತ್ತದೆ ?’, ಎಂದು ವೈಜ್ಞಾನಿಕ ಅಧ್ಯಯನ ಮಾಡಲು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ವತಿಯಿಂದ ಗೋವಾದ ರಾಮನಾಥಿಯಲ್ಲಿರುವ ಸನಾತನದ ಆಶ್ರಮದಲ್ಲಿ ಒಂದು ಪರೀಕ್ಷಣೆಯನ್ನು ಮಾಡಲಾಯಿತು. ಈ ಪರೀಕ್ಷಣೆಯಲ್ಲಿ ಯೂನಿವರ್ಸಲ್ ಔರಾ ಸ್ಕ್ಯಾನರ್ (ಯೂ.ಎ.ಎಸ್.) ಈ ಉಪಕರಣವನ್ನು ಉಪಯೋಗಿಸಲಾಯಿತು. ಪರೀಕ್ಷಣೆಯ ನಿರೀಕ್ಷಣೆಯ ವಿವೇಚನೆ, ನಿಷ್ಕರ್ಷ ಮತ್ತು ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆಯನ್ನು ಮುಂದೆ ಕೊಡಲಾಗಿದೆ.

೧. ಪರೀಕ್ಷಣೆಯಲ್ಲಿ ಮಾಡಿದ ನಿರೀಕ್ಷಣೆಯ ವಿವೇಚನೆ

ಈ ಪರೀಕ್ಷಣೆಯಲ್ಲಿ ಪರಾತ್ಪರ ಗುರು ಪಾಂಡೆ ಮಹಾರಾಜರು ಮತ್ತು ಓರ್ವ ಸಾಧಕರು ಪರಾತ್ಪರ ಗುರು ಡಾ. ಆಠವಲೆಯವರಿಗೆ ದಸರಾದ ನಿಮಿತ್ತ ನೀಡಿದ ಮಂದಾರದ ಎಲೆಗಳು ಮತ್ತು ತುಲನೆಗಾಗಿ ಗೋವಾದ ರಾಮನಾಥಿಯಲ್ಲಿರುವ ಸನಾತನ ಆಶ್ರಮದ ತೋಟದಲ್ಲಿರುವ ಮಂದಾರದ ಎಲೆಗಳು ಇವುಗಳ ಸಂದರ್ಭದಲ್ಲಿ ಯೂ.ಎ.ಎಸ್. ಉಪಕರಣದ ಮೂಲಕ ಮಾಡಲಾದ ನಿರೀಕ್ಷಣೆಯ ವಿವೇಚನೆಯನ್ನು ಮುಂದೆ ಕೊಡಲಾಗಿದೆ.

೧ ಅ. ನಕಾರಾತ್ಮಕ ಊರ್ಜೆಯ ಸಂದರ್ಭದಲ್ಲಿ ನಿರೀಕ್ಷಣೆಯ ವಿವೇಚನೆ : ಪರೀಕ್ಷಣೆಯಲ್ಲಿ ಮೂರೂ ಮಂದಾರದ ಎಲೆಗಳಲ್ಲಿ ಇನ್ಫ್ರಾರೆಡ್ ಮತ್ತು ಅಲ್ಟ್ರಾವೈಲೆಟ್ ಈ ಎರಡೂ ವಿಧಗಳ ನಕಾರಾತ್ಮಕ ಊರ್ಜೆಯು ಕಂಡು ಬರಲಿಲ್ಲ.

೧ ಆ. ಸಕಾರಾತ್ಮಕ ಊರ್ಜೆಯ ವಿಷಯದಲ್ಲಿ ನಿರೀಕ್ಷಣೆಯ ವಿವೇಚನೆ : ದಸರಾ ದಿನದಂದು ಪರಾತ್ಪರ ಗುರು ಪಾಂಡೆ ಮಹಾರಾಜರು ನೀಡಿದ ಮಂದಾರದ ಎಲೆಯ ಸಕಾರಾತ್ಮಕ ಊರ್ಜೆಯ ಪ್ರಭಾವಳಿಯಲ್ಲಿ ಅತ್ಯಧಿಕ ಹೆಚ್ಚಳವಾಗುವುದು – ಪರೀಕ್ಷಣೆಯ ಮೂರೂ ಎಲೆಗಳಲ್ಲಿ ದಸರಾದ ಹಿಂದಿನ ದಿನವೂ ಸಕಾರಾತ್ಮಕ ಊರ್ಜೆಯಿತ್ತು. ದಸರಾ ದಿನದಂದು ಮೂರೂ ಎಲೆಗಳ ಸಕಾರಾತ್ಮಕ ಊರ್ಜೆಯಲ್ಲಾದ ಹೆಚ್ಚಳದ ಬಗ್ಗೆ ಮುಂದೆ ಕೊಡಲಾಗಿದೆ.

ಪರೀಕ್ಷಿಸಲಾದ ಮಂದಾರದ ಎಲೆಗಳು ಮಂದಾರದ ಎಲೆಯ ಸಕಾರಾತ್ಮಕ ಊರ್ಜೆಯ ಪ್ರಭಾವಳಿ (ಮೀಟರ್)
ದಸರಾ ಹಿಂದಿನ ದಿನ ದಸರಾದ ದಿನದಂದು ಸಕಾರಾತ್ಮಕ ಊರ್ಜೆಯ ಪ್ರಭಾವಳಿಯಲ್ಲಿ ಆದ ಹೆಚ್ಚಳ
1. ಆಶ್ರಮದ ತೋಟದ ಮಂದಾರದ ಎಲೆ 1.36 2.97 1.61
2. ಸಾಧಕನು ನೀಡಿದ ಮಂದಾರದ ಎಲೆ 1.21 3.06 1.85
3. ಪರಾತ್ಪರ ಗುರು ಪಾಂಡೆ ಮಹಾರಾಜರು ನೀಡಿದ ಮಂದಾರದ ಎಲೆ 2.27 4.18 1.91

ಮೇಲಿನ ಕೋಷ್ಟಕದಿಂದ ಮುಂದಿನ ಅಂಶಗಳು ಗಮನಕ್ಕೆ ಬರುತ್ತವೆ.

೧. ದಸರಾದ ದಿನದಂದು ಆಶ್ರಮದ ತೋಟದಲ್ಲಿನ ಎಲೆಯ ತುಲನೆಯಲ್ಲಿ ಸಾಧಕನು ನೀಡಿದ ಎಲೆಯ ಸಕಾರಾತ್ಮಕ ಊರ್ಜೆಯ ಪ್ರಭಾವಳಿಯು ಹೆಚ್ಚು ಪ್ರಮಾಣದಲ್ಲಿ ಹೆಚ್ಚಳವಾಯಿತು.

೨. ಪರಾತ್ಪರ ಗುರು ಪಾಂಡೆ ಮಹಾರಾಜರು ದಸರಾದ ದಿನದಂದು ನೀಡಿದ ಮಂದಾರ ಎಲೆಯ ಸಕಾರಾತ್ಮಕ ಊರ್ಜೆಯ ಪ್ರಭಾವಳಿಯಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಹೆಚ್ಚಳವಾಯಿತು.

೨. ನಿಷ್ಕರ್ಷ

ಮಂದಾರದ ಎಲೆಗಳಲ್ಲಿ ಮೂಲತಃ ಸಕಾರಾತ್ಮಕ ಸ್ಪಂದನಗಳಿದ್ದು ದಸರಾದ ದಿನದಂದು ಅವುಗಳಲ್ಲಿರುವ ಸಕಾರಾತ್ಮಕ ಸ್ಪಂದನಗಳು ಹೆಚ್ಚಾಗುತ್ತದೆ. ಮೇಲಿನ ಎಲ್ಲ ಅಂಶಗಳಿಗೆ ಸಂಬಂಧಿಸಿದ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆಯನ್ನು ‘ಅಂಶ ೩’ರಲ್ಲಿ ಕೊಡಲಾಗಿದೆ.

೩. ಪರೀಕ್ಷಣೆಯಲ್ಲಿ ಮಾಡಿದ ನಿರೀಕ್ಷಣೆಯ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ

೩ ಅ. ದಸರಾದ ಹಿಂದಿನ ದಿನವೂ ಪರೀಕ್ಷಣೆಯಲ್ಲಿದ್ದ ಮಂದಾರದ ಮೂರೂ ಎಲೆಗಳಲ್ಲಿ ಸಕಾರಾತ್ಮಕ ಊರ್ಜೆಯು ಇರುವ ಹಿಂದಿನ ಕಾರಣ : ಇತರ ವೃಕ್ಷಗಳಿಗೆ ಹೋಲಿಸಿದರೆ ಮಂದಾರದ ಎಲೆಗಳಲ್ಲಿ ಪತ್ರಹರಿತ್ತಿನ ಪ್ರಮಾಣ ಹೆಚ್ಚಿರುತ್ತದೆ. ಈ ಎಲೆಗಳ ಮೇಲೆ ಸೂರ್ಯನ ಕಿರಣಗಳು ಬಿದ್ದಾಗ ಅವುಗಳಲ್ಲಿದ್ದ ತೇಜತತ್ತ್ವ ಕಾರ್ಯನಿರತವಾಗಲು ಪ್ರಾರಂಭವಾಗುತ್ತದೆ. ಎಲೆಗಳಿಂದ ಪ್ರಕ್ಷೇಪಿಸುವ ತೇಜೋಲಹರಿಗಳು ವಾತಾವರಣದಲ್ಲಿ ದೀರ್ಘಕಾಲ ಉಳಿಯುತ್ತವೆ.

(ಆಧಾರ : ಸನಾತನದ ಗ್ರಂಥ ‘ಹಬ್ಬಗಳನ್ನು ಆಚರಿಸುವ ಯೋಗ್ಯ ಪದ್ಧತಿ ಮತ್ತು ಶಾಸ್ತ್ರ‘)

ಪರೀಕ್ಷಣೆ ಮಾಡಿದ ಮಂದಾರದ ಮೂರೂ ಎಲೆಗಳಲ್ಲಿ ತೇಜತತ್ತ್ವವು (ಚೈತನ್ಯ) ಇರುವುದರಿಂದ ದಸರಾದ ಹಿಂದಿನ ದಿನವೂ ಆ ಎಲೆಗಳಲ್ಲಿ ಸಕಾರಾತ್ಮಕ ಊರ್ಜೆ ಇರುವುದು ಪರೀಕ್ಷಣೆಯಿಂದ ಕಂಡು ಬಂದಿತು.

೩ ಆ. ಸಾಧಕನು ದಸರಾದ ಹಿಂದಿನ ದಿನ ನೀಡಿದ ಮಂದಾರದ ಎಲೆಗಿಂತ ಆಶ್ರಮದ ತೋಟದಲ್ಲಿನ ಮಂದಾರದ ಎಲೆಯಲ್ಲಿ ಸಕಾರಾತ್ಮಕ ಊರ್ಜೆಯು ಹೆಚ್ಚಿರುವುದರ ಹಿಂದಿನ ಕಾರಣ : ಸನಾತನದ ಆಶ್ರಮದಲ್ಲಿ ಸಂತರು ಮತ್ತು ಸಾಧಕರ ವಾಸ್ತವ್ಯ, ಅವರ ದೈನಂದಿನ ಸಾಧನೆ ಮತ್ತು ನಿರಂತರವಾಗಿ ನಡೆಯುವ ರಾಷ್ಟ್ರ-ಧರ್ಮಕ್ಕೆ ಸಂಬಂಧಿಸಿದ ಅದ್ವಿತೀಯ ಕಾರ್ಯ ಇವುಗಳಿಂದಾಗಿ ಸನಾತನದ ಆಶ್ರಮ ಮತ್ತು ಆಶ್ರಮದ ಪರಿಸರ ಇವುಗಳಲ್ಲಿ ಅಗಾಧ ಪ್ರಮಾಣದಲ್ಲಿ ಸಾತ್ತ್ವಿಕತೆ (ಚೈತನ್ಯ)ಯಿದೆ. ಇದರ ಸಕಾರಾತ್ಮಕ ಪರಿಣಾಮವು ಅಲ್ಲಿನ ವ್ಯಕ್ತಿ, ವನಸ್ಪತಿ, ವಸ್ತು ಇವುಗಳ ಮೇಲಾಗುತ್ತದೆ. ಆಶ್ರಮದ ತೋಟದಲ್ಲಿರುವ ಮಂದಾರದ ಎಲೆಗಳ ಮೇಲೆ ಅಲ್ಲಿನ ಚೈತನ್ಯದಿಂದ ಒಳ್ಳೆಯ ಪರಿಣಾಮವಾಗಿದೆ. ಆದ್ದರಿಂದ ಸಾಧಕನು ನೀಡಿದ ಎಲೆಗಿಂತ ಆಶ್ರಮದ ತೋಟದಲ್ಲಿರುವ ಮಂದಾರದ ಎಲೆಯಲ್ಲಿ ಹೆಚ್ಚು ಸಕಾರಾತ್ಮಕವಿರುವುದು ಪರೀಕ್ಷಣೆಯಿಂದ ಕಂಡು ಬಂದಿತು. ಇದರಿಂದ ‘ಸಾತ್ತ್ವಿಕ ವಾತಾವರಣದಿಂದ ವನಸ್ಪತಿಗಳ ಮೇಲೆ ಒಳ್ಳೆಯ ಪರಿಣಾಮವಾಗುತ್ತದೆ’, ಎಂದು ಗಮನಕ್ಕೆ ಬರುತ್ತದೆ.

೩ ಇ. ದಸರಾದ ಹಿಂದಿನ ದಿನ ಪರಾತ್ಪರ ಗುರು ಪಾಂಡೆ ಮಹಾರಾಜರು ಕಳುಹಿಸಿದ ಮಂದಾರ ಎಲೆಯಲ್ಲಿ ಅತ್ಯಧಿಕ ಸಕಾರಾತ್ಮಕ ಊರ್ಜೆ ಇರುವುದರ ಹಿಂದಿನ ಕಾರಣ : ಪರಾತ್ಪರ ಗುರು ಪಾಂಡೆ ಮಹಾರಾಜರು ‘ಪರಾತ್ಪರ ಗುರು’ ಪದದಲ್ಲಿರುವ ಸಂತರಿರುವುದರಿಂದ ಅವರಲ್ಲಿ ತುಂಬಾ ಚೈತನ್ಯವಿದೆ. ಸಂತರಲ್ಲಿರುವ ಚೈತನ್ಯದಿಂದ ಅವರ ದೇಹ, ಅವರ ಸುತ್ತಲಿನ ವಾತಾವರಣ, ಅವರ ಬಳಕೆಯಲ್ಲಿನ ವಸ್ತು, ಅವರ ಸಂಪರ್ಕಕ್ಕೆ ಬರುವ ವ್ಯಕ್ತಿ ಮುಂತಾದವರ ಮೇಲೆ ಪರಿಣಾಮವಾಗುತ್ತದೆ. ಪರಾತ್ಪರ ಗುರು ಪಾಂಡೆ ಮಹಾರಾಜರು ನೀಡಿದ ಎಲೆಗೆ ಅವರ ಚೈತನ್ಯಮಯ ಹಸ್ತಸ್ಪರ್ಶವಾಗಿದೆ. ಆ ಎಲೆಯ ಸಾತ್ತ್ವಿಕತೆಯು ತುಂಬಾ ಹೆಚ್ಚಾಯಿತು. ಆದ್ದರಿಂದ ದಸರಾದ ಹಿಂದಿನ ದಿನ ಸಂತರು (ಪರಾತ್ಪರ ಗುರು ಪಾಂಡೆ ಮಹಾರಾಜರು) ನೀಡಿದ ಮಂದಾರದ ಎಲೆಯಲ್ಲಿ ಅತ್ಯಧಿಕ ಸಕಾರಾತ್ಮಕ ಊರ್ಜೆ ಇರುವುದು ಪರೀಕ್ಷಣೆಯಲ್ಲಿ ಕಂಡು ಬಂದಿತು. ಇದರಿಂದ ‘ಸಂತರಲ್ಲಿರುವ ಚೈತನ್ಯದಿಂದ ವನಸ್ಪತಿಗಳ ಮೇಲೆ ಎಷ್ಟು ಸಕಾರಾತ್ಮಕ ಪರಿಣಾಮವಾಗುತ್ತದೆ’, ಎಂದು ಗಮನಕ್ಕೆ ಬರುತ್ತದೆ.

೩ ಈ. ದಸರಾದ ದಿನದಂದು ಪ್ರಯೋಗದಲ್ಲಿದ್ದ ಮಂದಾರದ ಮೂರೂ ಎಲೆಗಳ ಸಕಾರಾತ್ಮಕ ಊರ್ಜೆಯ ಪ್ರಭಾವಳಿಯು ಹೆಚ್ಚಳವಾಗುವ ಹಿಂದಿನ ಕಾರಣ : ಆಶ್ವಯುಜ ಶುಕ್ಲ ದಶಮಿ, ಅಂದರೆ ದಸರಾದ ದಿನವು ಮೂರೂವರೆ ಶುಭ ಮುಹೂರ್ತಗಳ ಪೈಕಿ ಒಂದಾಗಿದೆ. ಈ ದಿನದಂದು ಬ್ರಹ್ಮಾಂಡಮಂಡಲದಿಂದ ದೈವೀ ಸ್ಪಂದನಗಳು ಭೂಮಂಡಲದ ಕಡೆಗೆ ಹೆಚ್ಚು ಪ್ರಮಾಣದಲ್ಲಿ ಆಕರ್ಷಿತವಾಗುತ್ತವೆ ಮತ್ತು ಭೂಮಂಡಲದಲ್ಲಿ ಕಾರ್ಯನಿರತವಾಗುತ್ತವೆ. ದಸರಾದಂದು ಮಂದಾರ ಎಲೆಗಳಲ್ಲಿರುವ ತೇಜತತ್ತ್ವವು ಹೆಚ್ಚು ಪ್ರಮಾಣದಲ್ಲಿ ಜಾಗೃತವಾಗುವುದರಿಂದ ಆ ದಿನ ಮಂದಾರದ ಎಲೆಗಳನ್ನು ಕೊಡುವುದಕ್ಕೆ ವಿಶೇಷ ಮಹತ್ವವಿದೆ.

ಪ್ರಯೋಗದಲ್ಲಿದ್ದ ಮಂದಾರದ ಮೂರೂ ಎಲೆಗಳಲ್ಲಿರುವ ತೇಜತತ್ತ್ವವು ದಸರಾದ ದಿನ ಹೆಚ್ಚು ಪ್ರಮಾಣದಲ್ಲಿ ಜಾಗೃತವಾಗುವುದರಿಂದ ಆ ಎಲೆಗಳ ಸಕಾರಾತ್ಮಕ ಊರ್ಜೆಯ ಪ್ರಭಾವಳಿಯಲ್ಲಿ ಹೆಚ್ಚಳವಾಯಿತು. ಇದರಿಂದ ‘ಹಿಂದೂ ಧರ್ಮದಲ್ಲಿ ವಿಶಿಷ್ಟ ತಿಥಿಗೆ ವಿಶಿಷ್ಟ ಹಬ್ಬವನ್ನು ಆಚರಿಸುವ ಹಿಂದೆ ಅಧ್ಯಾತ್ಮ ಶಾಸ್ತ್ರವಿದೆ’, ಎಂದು ಗಮನಕ್ಕೆ ಬರುತ್ತದೆ.

೩. ಉ. ದಸರಾದ ದಿನದಂದು ಆಶ್ರಮದ ತೋಟದಲ್ಲಿ ಮಂದಾರದ ಎಲೆಯ ತುಲನೆಯಲ್ಲಿ ಸಾಧಕನು ನೀಡಿದ ಮಂದಾರ ಎಲೆಯ ಸಕಾರಾತ್ಮಕ ಊರ್ಜೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹೆಚ್ಚಳವಾಗುವ ಹಿಂದಿನ ಕಾರಣ : ಗುರು ಎಂದರೆ ಈಶ್ವರನ ಸಗುಣ ರೂಪ ! ಸಾಧಕರಿಗೆ ಗುರುಗಳೇ ಸರ್ವಸ್ವವಾಗಿರುತ್ತಾರೆ. ಸಾಧಕನಿಗೆ ಗುರುಗಳ ಬಗ್ಗೆ ಭಾವವಿರುತ್ತದೆ. ಆದ್ದರಿಂದ ಗುರುಗಳು ಹೇಳಿದ ಸಾಧನೆಯನ್ನು ಅವನು ತಳಮಳದಿಂದ ಮಾಡುತ್ತಾನೆ. ಸಾಧಕನು ದಸರಾ ನಿಮಿತ್ತ ಕೃತಜ್ಞತಾಭಾವದಿಂದ ಪರಾತ್ಪರ ಗುರು ಡಾ. ಆಠವಲೆಯವರಿಗೆ ಮಂದಾರದ ಎಲೆಯನ್ನು ಕಳುಹಿಸಿದ್ದನು.ಪ್ರಯೋಗದಲ್ಲಿ ಇತರ ಎಲೆಗಳಂತೆ ಸಾಧಕನು ನೀಡಿದ ಮಂದಾರದ ಎಲೆಯಲ್ಲಿಯೂ ದಸರಾದ ದಿನದಂದು ಹೆಚ್ಚು ಪ್ರಮಾಣದಲ್ಲಿ ತೇಜತತ್ತ್ವವು ಜಾಗೃತವಾಯಿತು. ಅವನಲ್ಲಿ ಗುರುಗಳ ಬಗ್ಗೆ ಇರುವ ಭಾವದಿಂದ ಆ ಎಲೆಯಲ್ಲಿ ಚೈತನ್ಯವು ಇನ್ನೂ ಹೆಚ್ಚಳವಾಯಿತು. ಆದ್ದರಿಂದ ತೋಟದ ಎಲೆಯ ತುಲನೆಯಲ್ಲಿ ಸಾಧಕನು ನೀಡಿದ ಮಂದಾರದ ಎಲೆಯ ಸಕಾರಾತ್ಮಕ ಊರ್ಜೆಯ ಪ್ರಮಾಣವು ದಸರಾದ ದಿನದಂದು ಹೆಚ್ಚಳವಾಗಿರುವುದು ಪರೀಕ್ಷಣೆಯಲ್ಲಿ ಕಂಡು ಬಂದಿತು. ಇದರಿಂದ ಸಾಧಕರಲ್ಲಿ ಗುರುಗಳ ಬಗ್ಗೆ ಭಾವವಿರುವ ಮಹತ್ವವು ಗಮನಕ್ಕೆ ಬರುತ್ತದೆ.

೩ ಊ. ದಸರಾದ ದಿನ ಪರಾತ್ಪರ ಗುರು ಪಾಂಡೆ ಮಹಾರಾಜರು ಕಳುಹಿಸಿದ ಮಂದಾರದ ಎಲೆಯ ಸಕಾರಾತ್ಮಕ ಊರ್ಜೆಯಲ್ಲಿ ಅತ್ಯಧಿಕ ಹೆಚ್ಚಳವಾಗುವುದು : ಪರಾತ್ಪರ ಗುರು ಪಾಂಡೆ ಮಹಾರಾಜರ ಆಧ್ಯಾತ್ಮಿಕ ಅಧಿಕಾರವು ದೊಡ್ಡದಾಗಿದೆ, ಆದರೂ ಅವರು ಪರಾತ್ಪರ ಗುರು ಡಾಕ್ಟರರನ್ನು (ಪರಾತ್ಪರ ಗುರು ಡಾ. ಆಠವಲೆಯವರನ್ನು) ಗುರುಸ್ಥಾನದಲ್ಲಿ ನೋಡುತ್ತಾರೆ. ಅವರಿಗೆ ಪರಾತ್ಪರ ಗುರು ಡಾಕ್ಟರರ ಬಗ್ಗೆ ಅಪಾರ ಭಾವವಿದೆ. ಅವರು ದಸರಾ ನಿಮಿತ್ತ ಕೃತಜ್ಞತಾಭಾವದಿಂದ ಪರಾತ್ಪರ ಗುರು ಡಾಕ್ಟರರಿಗೆ ಮಂದಾರದ ಎಲೆಯನ್ನು ಕಳುಹಿಸಿದ್ದರು. ಈ ಎಲೆಯಲ್ಲಿ ಮೂಲತಃ (ಅಂದರೆ ದಸರಾದ ಹಿಂದಿನ ದಿನವೂ) ಬಹಳ ಸಾತ್ತ್ವಿಕತೆ ಇತ್ತು. ಈ ಎಲೆಯನ್ನು ಶಿಷ್ಯಭಾವದಲ್ಲಿನ ‘ಪರಾತ್ಪರ ಗುರು’ ಪದದಲ್ಲಿನ ಸಂತರು (ಪರಾತ್ಪರ ಗುರು ಪಾಂಡೆ ಮಹಾರಾಜರು) ಕೃತಜ್ಞತಾಭಾವದಿಂದ ತಮ್ಮ ಗುರುಗಳಿಗೆ (ಪರಾತ್ಪರ ಗುರು ಡಾಕ್ಟರರಿಗೆ) ನೀಡಿದ್ದರಿಂದ ದಸರಾದ ದಿನ ಆ ಎಲೆಯ ತೇಜತತ್ತ್ವದಲ್ಲಿ (ಚೈತನ್ಯದಲ್ಲಿ) ಬಹಳ ಹೆಚ್ಚಳವಾಯಿತು. ಆದ್ದರಿಂದ ಪರಾತ್ಪರ ಗುರು ಪಾಂಡೆ ಮಹಾರಾಜರು ನೀಡಿದ ಮಂದಾರದ ಎಲೆಯ ಸಕಾರಾತ್ಮಕ ಊರ್ಜೆಯಲ್ಲಿ ದಸರಾದ ದಿನ ಅತ್ಯಧಿಕ ಹೆಚ್ಚಳವಾಗಿರುವುದು ಪರೀಕ್ಷಣೆಯಲ್ಲಿ ಕಂಡು ಬಂದಿತು.

– ಶ್ರೀ. ಅಭಿಜಿತ ಕುಲಕರ್ಣಿ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೨೯.೮.೨೦೧೯)

ಈ-ಮೆಲ್ : [email protected]

Leave a Comment