ನ್ಯೂರೋಸೈನ್ಸ್‌ಗನುಸಾರ ಸಂಸ್ಕೃತ ಭಾಷೆಯಿಂದ ಮೆದುಳಿನ ಮೇಲೆ ಸಕಾರಾತ್ಮಕ ಪರಿಣಾಮವಾಗುತ್ತದೆ !

ವೈದಿಕ ಮಂತ್ರಗಳ ಜಪ ಮಾಡುವುದರ ಸಾಮರ್ಥ್ಯವನ್ನು ವಿಜ್ಞಾನ ಸಿದ್ಧಪಡಿಸುತ್ತಿದೆ !

ಕಠಿಣ ಪರಿಶ್ರಮಪಟ್ಟು ಮಾಡಿದ ಬಾಯಿಪಾಠವು ಮೆದುಳಿಗೆ ಹೇಗೆ ಸಹಾಯ ಮಾಡುತ್ತದೆ, ಎಂಬುದನ್ನು ನ್ಯೂರೋಸೈನ್ಸ್ (ನರ ವಿಜ್ಞಾನ) ಸಿದ್ಧಪಡಿಸುತ್ತಿದೆ. ನ್ಯೂರೋಸೈನ್ಸ್ ವಿಜ್ಞಾನಿ ಡಾ. ಜೇಮ್ಸ್ ಹಾರ್ಟ್‌ಝೇಲ್ ಇವರು Sanskrit Effect (ಸಂಸ್ಕೃತದ ಪರಿಣಾಮವನ್ನು) ಮೊದಲ ಬಾರಿಗೆ ಖಚಿತಪಡಿಸಿದ್ದಾರೆ. ಅದಕ್ಕಾಗಿ ಅವರು ೨೧ ಜನ ಸಂಸ್ಕೃತ ಪಂಡಿತರ ಅಧ್ಯಯನವನ್ನು ಮಾಡಿದರು. ಅವರು ಸಂಶೋಧನೆ ಮಾಡಿ, ವೈದಿಕ ಮಂತ್ರಗಳ ಕಂಠಪಾಠವು ಮೆದುಳಿನ ಸಂಜ್ಞಾನಾತ್ಮಕ ಕಾರ್ಯಕ್ಕೆ (Cognitive function) ಸಂಬಂಧಿಸಿದ ಕ್ಷೇತ್ರದ ಆಕಾರವನ್ನು ಹೆಚ್ಚಿಸುತ್ತದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಇದರಲ್ಲಿ ಅಲ್ಪ ಮತ್ತು ದೀರ್ಘ ಕಾಲದ ಸ್ಮರಣೆಯ (ನೆನಪಿನ) ಸಮಾವೇಶವಿದೆ. ಅವರು ಮಾಡಿದ ಈ ಸಂಶೋಧನೆಯಿಂದ ‘ವೈದಿಕ ಮಂತ್ರಗಳ ಪಠಣವನ್ನು ಮಾಡುವುದರಿಂದ ಸ್ಮರಣ ಶಕ್ತಿ ಮತ್ತು ವಿಚಾರಶಕ್ತಿ ಹೆಚ್ಚಾಗುತ್ತದೆ’ ಎನ್ನುವ ಭಾರತೀಯ ಪರಂಪರೆಯ ಶ್ರದ್ಧೆಗೆ ಪುಷ್ಟಿ ಸಿಗುತ್ತದೆ.

ಸಂಶೋಧಕ ಡಾ. ಹಾರ್ಟ್‌ಝೇಲ್ ಇವರ ಕಠಿಣ ಪರಿಶ್ರಮ !

ಡಾ. ಹಾರ್ಟ್‌ಝೇಲ್ ಇವರು ಸ್ಪೇನ್ ದೇಶದ ಬಾಸ್ಕ್‌ನಲ್ಲಿರುವ ‘ಸೆಂಟರ್ ಆನ್ ಕಾಗ್ನಿಶನ್, ಬ್ರೇನ್ ಎಂಡ್ ಲ್ಯಾಂಗ್ವೇಜ್’ ವಿಭಾಗದ ಪದವ್ಯೋತ್ತರ ಸಂಶೋಧಕರಾಗಿದ್ದಾರೆ. ಸಂಸ್ಕೃತ ಭಾಷೆಗೆ ತಮ್ಮನ್ನು ಸಮರ್ಪಿಸಿಕೊಂಡಿರುವ ಅವರು ಸಂಸ್ಕೃತ ಭಾಷೆಯ ಅಧ್ಯಯನ ಮತ್ತು ಭಾಷಾಂತರ ಮಾಡುವುದರಲ್ಲಿ ಬಹಳಷ್ಟು ವರ್ಷಗಳನ್ನು ವ್ಯಯಿಸಿದ್ದು, ಸಂಸ್ಕೃತ ಭಾಷೆಯಿಂದ ಮೆದುಳಿನ ಮೇಲಾಗುವ ಪರಿಣಾಮಗಳಿಂದ ಅವರು ಆಶ್ಚರ್ಯಚಕಿತರಾಗಿದ್ದಾರೆ.

ಸಂಶೋಧನೆ ಮಾಡುವಾಗಲೇ ಡಾ. ಹಾರ್ಟ್‌ಝೇಲ್ ಇವರ ಸ್ಮರಣಶಕ್ತಿಯು ಹೆಚ್ಚಾಗುವುದು !

ಡಾ. ಹಾರ್ಟ್‌ಝೇಲ್ ಇವರು “ನಾನು ಸಂಸ್ಕೃತ ಭಾಷೆಯ ಅಧ್ಯಯನ ಮತ್ತು ಭಾಷಾಂತರವನ್ನು ಹೆಚ್ಚು ಮಾಡಿದ್ದಷ್ಟು ನನ್ನ ಸ್ಮರಣಶಕ್ತಿಯು ಹೆಚ್ಚಾಯಿತು ಎಂದು ನನಗೆ ಆನಿಸುತ್ತದೆ” ಎಂದು ಹೇಳುತ್ತಾರೆ. “ನಾನು ತರಗತಿಯಲ್ಲಿ ನೀಡುವ ಯಾವುದಾದರೊಂದು ವ್ಯಾಖ್ಯಾನವನ್ನು ಇನ್ನೊಂದು ತರಗತಿಯಲ್ಲಿ ಪುನಃ ಹಾಗೆಯೆ ಪುನರುಚ್ಚರಿಸುತ್ತಿರುವುದನ್ನು ನೋಡಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಆಶ್ಚರ್ಯಗೊಂಡರು. ಸಂಸ್ಕೃತ ಭಾಷೆಯ ಭಾಷಾಂತರವನ್ನು ಮಾಡುವ ಇನ್ನೂ ಕೆಲವರು ಕೂಡ ಅವರಲ್ಲಿ ಸ್ಮರಣಶಕ್ತಿ ಹೆಚ್ಚಾಗಿರುವುದರ ಬಗ್ಗೆ ನನಗೆ ಹೇಳಿದ್ದಾರೆ”.

ಭಾರತದ ವೈದಿಕ ಸಂಸ್ಕೃತ ಪಂಡಿತರು ೩ ಸಾವಿರ ವರ್ಷಗಳಷ್ಟು ಪ್ರಾಚೀನ ಗ್ರಂಥಗಳಲ್ಲಿರುವ ೪೦ ಸಾವಿರದಿಂದ ೧೦೦ ಸಾವಿರ ಶಬ್ದಗಳಿರುವ ವಿಷಯವನ್ನು ಬಾಯಿಪಾಠ ಮಾಡಿ ಅದನ್ನು ಇದ್ದಂತೆಯೇ ಇತರರಿಗೆ ಅನೇಕ ವರ್ಷಗಳಿಂದ ಹೇಳುತ್ತಿದ್ದಾರೆ. ಸಂಸ್ಕೃತದ ಇಂತಹ ಶಬ್ದಗಳ ಸ್ಮರಣೆಯ ಕಠೋರ ತರಬೇತಿಯಿಂದ ಅವರ ಮೆದುಳಿನ ರಚನೆಯ ಮೇಲೆ ಏನು ಪರಿಣಾಮವಾಗುತ್ತದೆ, ಎಂಬುವುದು ನಮ್ಮ ಅಧ್ಯಯನದ ಕೇಂದ್ರವಾಗಿತ್ತು.

೨೧ ಜನ ಸಂಸ್ಕೃತ ಪಂಡಿತರು ಮತ್ತು ೨೧ ಜನ ಸಾಮಾನ್ಯ ಜನರ ಮೇಲಿನ ಸಂಶೋಧನೆ !

ಡಾ. ಹಾರ್ಟ್‌ಝೇಲ್‌ರ ಸಂಶೋಧನೆಯು ಸಂಸ್ಕೃತ ಅಧ್ಯಯನಕಾರರ ಮೆದುಳಿನ ಪರೀಕ್ಷಣೆ ಮಾಡುವುದು ಮೊದಲ ಪ್ರಯತ್ನವಾಗಿತ್ತು. ಭಾರತದ ನ್ಯಾಶನಲ್ ಬ್ರೇನ್ ರಿಸರ್ಚ್ ಸೆಂಟರ್ನಲ್ಲಿ (ರಾಷ್ಟ್ರೀಯ ಮೆದುಳು ಸಂಶೋಧನಾ ಕೇಂದ್ರದಲ್ಲಿ) ಡಾ. ಹಾರ್ಟ್‌ಝೇಲ್‌ರವರು ಸ್ಟ್ರಕ್ಚರಲ್ ಮ್ಯಾಗ್ನೇಟಿಕ್ ರೆಝೋನನ್ಸ್ ಇಮೇಜಿಂಗ್ (ಎಮ್.ಆರ್.ಐ.) ಅನ್ನು ಉಪಯೋಗಿಸಿ ೨೧ ಜನ ಸಂಸ್ಕೃತ ಪಂಡಿತರ ಮತ್ತು ೨೧ ಸಾಮಾನ್ಯ ಜನರ ಮೆದುಳಿನ ಪರೀಕ್ಷಣೆಯನ್ನು (ಸ್ಕ್ಯಾನ್) ಮಾಡಿದರು.

ಡಾ. ಹಾರ್ಟ್‌ಝೇಲ್ “ಸ್ಟ್ರಕ್ಚರಲ್ ಎಮ್.ಆರ್.ಐ. ಸ್ಕ್ಯಾನಿಂಗ್‌ನಲ್ಲಿ ನಮಗೆ ಏನು ಕಂಡುಬಂದಿತೋ, ಅದು ಅಸಾಧಾರಣವಾಗಿತ್ತು” ಎಂದು ಹೇಳುತ್ತಾರೆ. ಪಂಡಿತರ ಮೆದುಳಿನ ಹೆಚ್ಚಿನ ಭಾಗವು ಸಾಮಾನ್ಯ ಜನರ ಮೆದುಳಿನ ತುಲನೆಯಲ್ಲಿ ಹೆಚ್ಚು ವಿಕಸಿತವಾಗಿತ್ತು. ಪಂಡಿತರ ಮೆದುಳಿನ ಎರಡೂ ಭಾಗಗಳಿಗೆ (ಮೆದುಳಿನ ಬಲ ಮತ್ತು ಎಡ ಭಾಗಗಳಿಗೆ) ಸಂಬಂಧಿಸಿದ (ಸೆರೆಬ್ರಲ್) ಗೋಲಾರ್ಧದಲ್ಲಿ (ಹೆಮಿಸ್ಫಿಅರ್) ‘ಗ್ರೆ ಮ್ಯಾಟರ್’ (ನ್ಯೂರಲ್ ಟಿಶ್ಯೂ) ಶೇ. ೧೦ ಕ್ಕಿಂತ ಹೆಚ್ಚಿರುವುದು ಹಾಗೂ ಅವುಗಳ ಕಾರ್ಟಿಕಲ್ (cortical) ಗಾತ್ರವು (thickness) ತುಂಬಾ ಹೆಚ್ಚಾಗಿರುವುದು ಕಂಡುಬಂದಿತು. ಸಂಸ್ಕೃತ ಪಂಡಿತರ ಮೆದುಳಿನ ಗ್ರೆ ಮ್ಯಾಟರ್ ಹೆಚ್ಚಳದ ಮತ್ತು ಕಾರ್ಟಿಕಲ್ ಗಾತ್ರದ ಕಾರಣಗಳ ನಿರ್ದಿಷ್ಟ ಅಳತೆಗಳನ್ನು ಮಾಡುವ ಸಂಶೋಧನೆಯ ಕಾರ್ಯವು ಇನ್ನೂ ನಡೆಯದಿದ್ದರೂ ಅವರಲ್ಲಿ ‘ಹೆಚ್ಚಾಗಿರುವ ಅರಿವು ಮತ್ತು ನೆನಪಿನ ಕ್ಷಮತೆಗೆ’ ಅದು ಹೊಂದಾಣಿಕೆಯಾಗುತ್ತದೆ.

ಡಾ. ಹಾರ್ಟ್‌ಝೇಲ್‌ರರ ವರದಿಗನುಸಾರ ಅಲ್ಪ ಮತ್ತು ದೀರ್ಘಕಾಲದ ಸ್ಮರಣಶಕ್ತಿಯಲ್ಲಿ ಮಹತ್ವಪೂರ್ಣ ಪಾತ್ರ ವಹಿಸುವ ಹಾಗೆಯೇ ಧ್ವನಿ, ದೃಶ್ಯ ಮತ್ತು ಕಾಲಕ್ಕೆ ಸಂಬಂಧಿಸಿದ ಸ್ಮರಣೆಯ ಸಂದರ್ಭದಲ್ಲಿ ವೈಶಿಷ್ಟ್ಯಪೂರ್ಣ ಕಾರ್ಯವನ್ನು ಮಾಡುವ ಬಲ ಮೆದುಳಿನ ‘ಹಿಪ್ಪೋಕ್ಯಾಂಪಸ್’ ಎಂಬ ಭಾಗದಲ್ಲಿ ಗ್ರೆ ಮ್ಯಾಟರ್ ಹೆಚ್ಚಿರುವ ಪ್ರಮಾಣವು ಸಾಮಾನ್ಯ ವ್ಯಕ್ತಿಗಳಿಂತ ಸಂಸ್ಕೃತ ಪಂಡಿತರಲ್ಲಿ ಹೆಚ್ಚಿತ್ತು. ಮಾತನಾಡುವುದರಲ್ಲಿನ ಛಂದಶಾಸ್ತ್ರ ಮತ್ತು ಧ್ವನಿಯ ಪರಿಚಯ ಇವುಗಳೊಂದಿಗೆ ಸಂಬಂಧಿಸಿದ ಯೋಗ್ಯ ಬಲ ಮೆದುಳಿನ ‘ಟೆಂಪೋರಲ್ ಕಾರ್ಟೆಕ್ಸ್’ ಎಂಬ ಭಾಗವೂ ಸಂಸ್ಕೃತ ಪಂಡಿತರಲ್ಲಿ ಸಾಮಾನ್ಯರಿಗಿಂತ ತುಂಬಾ ದಪ್ಪಾಗಿತ್ತು.

ಇನ್ನಷ್ಟು ಸಂಶೋಧನೆ ಮಾಡುವ ಅವಕಾಶ !

ಗಮನಕ್ಕೆ ಬಂದಿರುವ ಈ ಮೇಲಿನ ಬದಲಾವಣೆಗಳು ಕೇವಲ ಸಂಸ್ಕೃತ ಭಾಷೆಯ ಪರಿಣಾಮವಾಗಿವೆಯೇ, ಎಂಬುದರ ಬಗ್ಗೆ ಡಾ. ಹಾರ್ಟ್‌ಝೇಲ್‌ರಿಗೆ ಖಾತ್ರಿಯಿಲ್ಲ; ಆದ್ದರಿಂದ ಅವರು ಮುಂದಿನ ಸಂಶೋಧನೆ ಯನ್ನು ಮಾಡುವ ಯೋಜನೆಯನ್ನು ಮಾಡಿದ್ದಾರೆ. ಅವರಿಂದ ‘ಧ್ವನಿ ಮತ್ತು ಮಂತ್ರಜಪಗಳ ಸಾಮರ್ಥ್ಯದ’ ಬಗ್ಗೆ ವ್ಯಾಪಕ ಸ್ವರೂಪದ ಅಧ್ಯಯನ ಮತ್ತು ಲೇಖನ ನಡೆಯುತ್ತಿದೆ.

ಡಾ. ಹಾರ್ಟ್‌ಝೇಲ್‌ರ ಇತ್ತೀಚೆಗಿನ ಅಧ್ಯಯನಕ್ಕನುಸಾರ, ಪ್ರಾಚೀನ ಧರ್ಮಗ್ರಂಥಗಳಲ್ಲಿರುವ ಶ್ಲೋಕಗಳ ಬಾಯಿಪಾಠವು ಅಲ್ಝಾಯಿಮರ್ ಮತ್ತು ಸ್ಮರಣ ಶಕ್ತಿಗೆ ಸಂಬಂಧಿಸಿದ ಇತರ ಕಾಯಿಲೆಗಳು ಕಡಿಮೆಯಾಗಲು ಉಪಯೋಗವಾಗಬಹುದೇ ಎಂಬ ಒಂದು ಪ್ರಶ್ನೆ ನಿರ್ಮಾಣವಾಗಿದೆ ? ಭಾರತದ ಆಯುರ್ವೇದೀಯ ವೈದ್ಯರು ಇದಕ್ಕೆ ಹೌದೆನ್ನುತ್ತಾರೆ, ‘ಈ ವಿಷಯದಲ್ಲಿ ಭವಿಷ್ಯದಲ್ಲಿ ಅಧ್ಯಯನ ಮಾಡಲಾಗುವುದು ಹಾಗೂ ಸಂಸ್ಕೃತ ವಿಷಯದಲ್ಲಿ ಹೆಚ್ಚಿನ ಸಂಶೋಧನೆಯನ್ನೂ ಮಾಡಲಾಗುವುದು ಎಂದು ಹೇಳುತ್ತಾರೆ.

ವೈದಿಕ ಮಂತ್ರಗಳು ಅಥವಾ ಶ್ಲೋಕಗಳನ್ನು ಜಪಿಸುವವರ ದೇಹದಲ್ಲಿ ಮತ್ತು ಅತೀ ಚಿಕ್ಕ ಜಪವನ್ನು ಮಾಡುವುದರಿಂದಲೂ ಮನಸ್ಸಿನಲ್ಲಿ ಉತ್ಸಾಹ ನಿರ್ಮಾಣವಾಗಿ ಆಧ್ಯಾತ್ಮಿಕ ಉಪಾಯವಾಗಲು ಸಾಧ್ಯವಾಗಬಹುದು, ಎಂಬುದೂ ಗಮನಕ್ಕೆ ಬಂದಿದೆ.

Leave a Comment

Download ‘Ganesh Puja and Aarti’ App