ವಿಜಯ ದಶಮಿ ನಿಮಿತ್ತ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಸಂದೇಶ

ಹಿಂದೂಗಳೇ, ‘ಶತ್ರುಗಳು ದಾಳಿ ಮಾಡುವ ಧೈರ್ಯ ತೋರಿಸದಂತಹ ರೀತಿಯಲ್ಲಿ ಸೀಮೋಲ್ಲಂಘನೆ ಮಾಡಿ’ !

‘ವಿಜಯದಶಮಿ’ ಇದು ಹಿಂದೂಗಳ ದೇವತೆ ಹಾಗೂ ಮಹಾಪುರುಷರ ವಿಜಯದ ದಿನವಾಗಿದೆ. ‘ಆಸುರೀ  ಶಕ್ತಿಗಳ ಪರಾಜಯ ಹಾಗೂ ದೈವೀ ಶಕ್ತಿಯ ವಿಜಯ’, ಇದು ಆ ದಿನದ ಇತಿಹಾಸವಾಗಿದೆ. ಅದಕ್ಕಾಗಿ ಈ ದಿನದಂದು ಅಪರಾಜಿತಾಪೂಜೆ ಮತ್ತು ಸೀಮೋಲ್ಲಂಘನೆ ಮಾಡುವ ಸನಾತನ ಪರಂಪರೆಯಾಗಿದೆ. ಇಂದು ಶತ್ರುಗಳು ಕಾಶ್ಮೀರದ ಗಡಿ ಮಾತ್ರವಲ್ಲ ದೆಹಲಿಯ ಓಣಿಯ ತನಕ ಸೀಮೋಲ್ಲಂಘನೆ ಮಾಡಿ ಹಿಂದೂಗಳನ್ನು ಗುರಿಯಾಗಿಸುತ್ತಿರುವಾಗ ನಾವು ಮನೆಯಲ್ಲಿ ಕುಳಿತು ಕರ್ಮಕಾಂಡವೆಂದು ಅಪರಾಜಿತಾಪೂಜೆ ಮಾಡುವುದು, ಹಾಗೂ ಸೀಮೋಲ್ಲಂಘನೆ ಎಂದು ಅಪರಾಹ್ನ ಗ್ರಾಮದ ಗಡಿಯಲ್ಲಿನ ದೇವಸ್ಥಾನದಲ್ಲಿ ದರ್ಶನ ಪಡೆಯುವ ಔಪಚಾರಿಕೆಯನ್ನು ಪೂರ್ಣ ಮಾಡುತ್ತಿದ್ದೇವೆ. ಹಿಂದೂಗಳೇ, ಇದು ವಿಜಯದಶಮಿ ಮಾತ್ರವಲ್ಲ !

ಹಿಂದೂ ಸಮಾಜ ಅಜೇಯವಾಗಿರಬೇಕು, ಅದಕ್ಕಾಗಿ ನಿಷ್ಠೆಯಿಂದ ಹಾಗೂ ಭಕ್ತಿಯಿಂದ ಅಪರಾಜಿತಾದೇವಿಯನ್ನು ಪೂಜಿಸಿರಿ. ಅವಳು ಖಂಡಿತವಾಗಿಯೂ ನಿಮ್ಮ ಮೇಲೆ ವಿಜಯದ ಕೃಪೆ ತೋರುವಳು. ಅದರಂತೆ ‘ಶತ್ರುಗಳು ದಾಳಿ ಮಾಡುವ ಧೈರ್ಯ ಮಾಡುವುದಿಲ್ಲ’, ಆ ರೀತಿಯಲ್ಲಿ ಸೀಮೋಲ್ಲಂಘನೆ ಮಾಡಿ. ಇದರಿಂದಲೇ ವಿಜಯದಶಮಿ ಹಬ್ಬ ಆಚರಿಸುವುದರ ನಿಜವಾದ ಆನಂದ ಸಿಗಲಿದೆ !’

– (ಸಚ್ಚಿದಾನಂದ ಪರಬ್ರಹ್ಮ) ಡಾ. ಜಯಂತ ಆಠವಲೆ, ಸಂಸ್ಥಾಪಕರು, ಸನಾತನ ಸಂಸ್ಥೆ. (೧೨.೯.೨೦೨೨)

Leave a Comment