ಮಹಾಲಯ ಶ್ರಾದ್ಧದ ಶ್ರಾದ್ಧಕರ್ತನ (ಶ್ರಾದ್ಧ ಮಾಡುವವನ) ಮೇಲೆ ಆಗುವ ಆಧ್ಯಾತ್ಮಿಕ ಸ್ತರದ ಪರಿಣಾಮದ ವೈಜ್ಞಾನಿಕ ಸಂಶೋಧನೆ

ಯುನಿವರ್ಸಲ್ ಔರಾ ಸ್ಕ್ಯಾನರ್ (ಯು.ಎ.ಎಸ್) ಉಪಕರಣದ ಮೂಲಕ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯವು ಮಾಡಿದ ವೈಜ್ಞಾನಿಕ ಪರೀಕ್ಷಣೆ !

ಭಾದ್ರಪದ ಕೃಷ್ಣ ಪಕ್ಷದಲ್ಲಿ (ಪಿತೃಪಕ್ಷದಲ್ಲಿ) ಪಿತೃಗಳಿಗೆ ಮಹಾಲಯ ಶ್ರಾದ್ಧವನ್ನು ಮಾಡಿದರೆ, ಅವರು ವರ್ಷವಿಡೀ ತೃಪ್ತರಾಗಿರುತ್ತಾರೆ, ಎನ್ನುವ ನಂಬಿಕೆಯಿದೆ. ಈ ವರ್ಷ 21 ಸೆಪ್ಟೆಂಬರ್ ರಿಂದ 6 ಅಕ್ಟೋಬರ್ ಪಿತೃಪಕ್ಷದ ಕಾಲವಾಗಿದೆ. ಈ ಕಾಲಾವಧಿಯಲ್ಲಿ ಮಹಾಲಯ ಶ್ರಾದ್ಧವನ್ನು ಮಾಡುವವರಿಗೆ ಆಗುವ ಆಧ್ಯಾತ್ಮಿಕ ಸ್ತರದ ಪರಿಣಾಮವನ್ನು ವೈಜ್ಞಾನಿಕ ದೃಷ್ಟಿಯಲ್ಲಿ ಅಧ್ಯಯನ ಮಾಡಲು ‘ಯುನಿವರ್ಸಲ್ ಔರಾ ಸ್ಕ್ಯಾನರ್’ (ಯು.ಎ.ಎಸ್.) ಈ ಉಪಕರಣದ ಮೂಲಕ ಪರೀಕ್ಷಣೆ ಮಾಡಲಾಯಿತು. ಈ ಪರೀಕ್ಷಣೆಯ ನಿರೀಕ್ಷಣೆ ಮತ್ತು ಅದರ ವಿವರಣೆಯನ್ನು ಇಲ್ಲಿ ನೀಡಲಾಗಿದೆ.

೧. ವೈಜ್ಞಾನಿಕ ಪರೀಕ್ಷಣೆ ಮಾಡುವ ಉದ್ದೇಶ

ಪಿತೃಪಕ್ಷದಲ್ಲಿ ಮಹಾಲಯ ಶ್ರಾದ್ಧವನ್ನು ಮಾಡಿದರೆ ಶ್ರಾದ್ಧವನ್ನು ಮಾಡುವ ವ್ಯಕ್ತಿಗೆ ಲಾಭವಾಗುತ್ತದೆಯೇ ?, ಎಂಬುದನ್ನು ವೈಜ್ಞಾನಿಕ ದೃಷ್ಟಿಯಿಂದ ಅಧ್ಯಯನ ಮಾಡುವುದು ಈ ಪರೀಕ್ಷಣೆಯ ಉದ್ದೇಶವಾಗಿದೆ.

೨. ಪರೀಕ್ಷಣೆಯ ಸ್ವರೂಪ

22.9.2016 ರಂದು ಸಾಧಕರೊಬ್ಬರು ಮಹಾಲಯ ಶ್ರಾದ್ಧ ಮಾಡುವ ಮೊದಲು ಮತ್ತು ಶ್ರಾದ್ಧ ಮಾಡಿದ ನಂತರ ಯು.ಎ.ಎಸ್. ಉಪಕರಣದ ಮೂಲಕ ಅವರ ನಿರೀಕ್ಷಣೆಯನ್ನು ಮಾಡಲಾಯಿತು. ನಂತರ ಇವೆರಡೂ ನಿರೀಕ್ಷಣೆಗಳ ತುಲನಾತ್ಮಕ ಅಧ್ಯಯನವನ್ನು ಮಾಡಲಾಯಿತು.

ಪಿತೃಗಳಿಗೆ ನಮಸ್ಕರಿಸುತ್ತಿರುವ ಶ್ರಾದ್ಧಕರ್ತ ಶ್ರೀ. ಶಾನ್ ಕ್ಲಾರ್ಕ್

೩. ವೈಜ್ಞಾನಿಕ ಪರೀಕ್ಷಣೆಯಲ್ಲಿನ ಘಟಕಗಳ ಮಾಹಿತಿ

ಶ್ರಾದ್ಧಕರ್ತ, ಶ್ರಾದ್ಧಕ್ಕಾಗಿ ಉಪಯೋಗಿಸಿದ ಸಾಮಗ್ರಿಗಳು ಮತ್ತು ಶ್ರಾದ್ಧದ ಪೌರೋಹಿತ್ಯವನ್ನು ಮಾಡುವ ಪುರೋಹಿತರು ಸಾತ್ತ್ವಿಕರಾಗಿದ್ದರೆ ಶ್ರಾದ್ಧ ವಿಧಿಯ ಪರಿಣಾಮವು ಎಲ್ಲಕ್ಕಿಂತ ಹೆಚ್ಚಿರುತ್ತದೆ.

೩ ಅ. ಶ್ರಾದ್ಧಕರ್ತ (ಪರೀಕ್ಷಣೆಯಲ್ಲಿ ಭಾಗವಹಿಸಿದ) ಸಾಧಕ : ತನ್ನ ಪಿತೃಗಳಿಗಾಗಿ ಶ್ರಾದ್ಧವನ್ನು ಮಾಡುವ ವ್ಯಕ್ತಿಗೆ ಶ್ರಾದ್ಧಕರ್ತನೆಂದು ಹೇಳುತ್ತಾರೆ. ಪರೀಕ್ಷಣೆಯಲ್ಲಿ ಭಾಗವಹಿಸಿದ ಶ್ರಾದ್ಧಕರ್ತ ಸಾಧಕನು (ಶ್ರೀ. ಶಾನ್ ಕ್ಲಾರ್ಕ್) ಕಳೆದ ೧೦ ವರ್ಷಗಳಿಗಿಂತಲೂ ಹೆಚ್ಚು ಸಮಯದಿಂದ ಸಾಧನೆಯನ್ನು ಮಾಡುತ್ತಿದ್ದಾನೆ.

೩ ಆ. ಶ್ರಾದ್ಧದ ಪೌರೋಹಿತ್ಯವನ್ನು ಮಾಡುವವರು : ಈ ಶ್ರಾದ್ಧದ ಪೌರೋಹಿತ್ಯವನ್ನು ಸನಾತನ-ಸಾಧಕ ಪುರೋಹಿತ ಪಾಠಶಾಲೆಯ ಪುರೋಹಿತರು ಮಾಡಿದ್ದರು. ಅವರು ನಿಯಮಿತವಾಗಿ ಸಾಧನೆಯನ್ನು ಮಾಡುತ್ತಿರುವುದರಿಂದ ಸಾತ್ತ್ವಿಕರಾಗಿದ್ದಾರೆ. ಧರ್ಮಶಾಸ್ತ್ರದಲ್ಲಿ ನೀಡಿರುವ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು, ಶುದ್ಧ ಹಾಗೂ ಸ್ಪಷ್ಟ ಮಂತ್ರೋಚ್ಚಾರವನ್ನು ಮಾಡುವುದು, ಧಾರ್ಮಿಕ ವಿಧಿಗಳಲ್ಲಿನ ಕೃತಿಗಳನ್ನು ಪರಿಪೂರ್ಣ ಹಾಗೂ ಭಾವಪೂರ್ಣವಾಗಿ ಮಾಡುವುದು, ಧಾರ್ಮಿಕ ವಿಧಿಗಳನ್ನು ಮಾಡುವವರಿಗೆ ವಿಧಿಗಳಲ್ಲಿನ ಕೃತಿಗಳ ಹಿಂದಿನ ಅಧ್ಯಾತ್ಮಶಾಸ್ತ್ರವನ್ನು ಹೇಳಿ ಅವರ ಶ್ರದ್ಧೆಯನ್ನು ದೃಢಪಡಿಸುವುದು ಇತ್ಯಾದಿಗಳು ಸನಾತನ-ಸಾಧಕ ಪುರೋಹಿತ ಪಾಠಶಾಲೆಯಲ್ಲಿನ ಪುರೋಹಿತರ ವೈಶಿಷ್ಟ್ಯಗಳಾಗಿವೆ. ಸ್ವಲ್ಪದರಲ್ಲಿ ಹೇಳುವುದಾದರೆ, ಸನಾತನ-ಸಾಧಕ ಪುರೋಹಿತ ಪಾಠಶಾಲೆಯ ಪುರೋಹಿತರು ಪೌರೋಹಿತ್ಯವನ್ನು ತಮ್ಮ ಸಾಧನೆಯೆಂದು ಮಾಡುತ್ತಾರೆ. ಆದ್ದರಿಂದ ಶ್ರಾದ್ಧಕರ್ತನಿಗೆ ವಿಧಿಯನ್ನು ಮಾಡುವುದರಿಂದ ಹೆಚ್ಚು ಲಾಭವಾಗುತ್ತದೆ.

೩ ಇ. ಶ್ರಾದ್ಧದ ಸ್ಥಳ, ದಿನಾಂಕ ಮತ್ತು ಸಮಯ : ಶ್ರಾದ್ಧಕರ್ತನು 22.9.2016 ರಂದು ಬೆಳಗ್ಗೆ ಸುಮಾರು 10 ರಿಂದ ಸಾಯಂಕಾಲ 4.3೦ ಈ ಅವಧಿಯಲ್ಲಿ ಗೋವಾದ ಸನಾತನದ ಆಶ್ರಮದಲ್ಲಿ ಶ್ರಾದ್ಧವಿಧಿಯನ್ನು ಮಾಡಿದನು. ಭಾದ್ರಪದ ತಿಂಗಳಿನ ಕೃಷ್ಣ ಪಕ್ಷಕ್ಕೆ ಪಿತೃಪಕ್ಷ ಅಥವಾ ಮಹಾಲಯ ಪಕ್ಷ ಎಂದು ಹೇಳುತ್ತಾರೆ. ಈ ಪಕ್ಷದಲ್ಲಿ ಪಿತೃಗಳ ಮಹಾಲಯ ಶ್ರಾದ್ಧವನ್ನು ಮಾಡಬೇಕೆಂದು ಧರ್ಮಶಾಸ್ತ್ರವು ಹೇಳಿದೆ. ಶ್ರಾದ್ಧಕ್ಕಾಗಿ ಅಪರಾಹ್ನಕಾಲ, (ಅಂದರೆ ಮಧ್ಯಾಹ್ನ ಸುಮಾರು 12.30 ರಿಂದ 3.30) ಯೋಗ್ಯವೆಂದು ತಿಳಿಯಲಾಗುತ್ತದೆ.

(ಶ್ರಾದ್ಧದ ವಿಷಯದಲ್ಲಿನ ಸವಿಸ್ತಾರವಾದ ಮಾಹಿತಿಯನ್ನು ಸನಾತನದ ‘ಶ್ರಾದ್ಧ‘ ವಿಷಯದ ಗ್ರಂಥಗಳಲ್ಲಿ ನೀಡಲಾಗಿದೆ.)

ಯು.ಎ.ಎಸ್ ಮೂಲಕ ಶ್ರಾದ್ಧಕರ್ತನ ಪ್ರಭಾವಲಯ ಅಳೆಯುವಾಗ

೪. ಯು.ಎ.ಎಸ್ ನಿರೀಕ್ಷಣೆಗಳು, ಅವುಗಳ ವಿವೇಚನೆ ಮತ್ತು ನಿಷ್ಕರ್ಷ

ನಿರೀಕ್ಷಣೆಯ ಅಂಶಗಳು ಮಹಾಲಯ ಶ್ರಾದ್ಧ ಮಾಡುವ ಮೊದಲು ಮಹಾಲಯ ಶ್ರಾದ್ಧ ಮಾಡಿದ ನಂತರ
ಯು.ಎ.ಎಸ್ ಮೂಲಕ ದಾಖಲಿಸಿಕೊಂಡಿರು ಸಮಯ ಬೆಳಗ್ಗೆ 9.35 ಸಾಯಂಕಾಲ 5.10
1. ನಕಾರಾತ್ಮಕ ಶಕ್ತಿ (ಅಂಶ 4 ಅ ನೋಡಿ)
1 ಅ. ಇನ್ರಾರೆಡ್
1 ಅ 1. ಸ್ಕ್ಯಾನರ್ ಭುಜಗಳು ಮಾಡಿದ ಕೋನ (ಅಂಶ)
1 ಅ 2. ಪ್ರಭಾವಲಯ (ಮೀಟರ್) ಇಲ್ಲ ಇಲ್ಲ
1 ಆ. ಅಲ್ಟ್ರಾ ವೈಲೆಟ್
1 ಅ 1. ಸ್ಕ್ಯಾನರ್ ಭುಜಗಳು ಮಾಡಿದ ಕೋನ (ಅಂಶ)
1 ಅ 2. ಪ್ರಭಾವಲಯ (ಮೀಟರ್) ಇಲ್ಲ ಇಲ್ಲ
2. ಸಕಾರಾತ್ಮಕ ಶಕ್ತಿ (ಅಂಶ 4 ಆ ನೋಡಿ)
2 ಅ 1. ಸ್ಕ್ಯಾನರ್ ಭುಜಗಳು ಮಾಡಿದ ಕೋನ (ಅಂಶ) 90 180
2 ಅ 2. ಪ್ರಭಾವಲಯ (ಮೀಟರ್) ಇಲ್ಲ 1.02
3. ಶ್ರಾದ್ಧಕರ್ತನ ಲಾಲಾರಸ ಉಪಯೋಗಿಸಿ ಅಳತೆ ಮಾಡಿದ ಪ್ರಭಾವಲಯ (ಮೀಟರ್) (ಅಂಶ 4 ಇ ನೋಡಿ) 1.31 2.64

ಟಿಪ್ಪಣಿ : ಸ್ಕ್ಯಾನರ್‌ನ ಭುಜಗಳು 180 ಅಂಶ ಕೋನದಲ್ಲಿ ತೆರೆದರೆ ಮಾತ್ರ ಆ ಘಟಕದ ಪ್ರಭಾವಲಯವನ್ನು ಅಳೆಯಲು ಬರುತ್ತದೆ. 180ಕ್ಕಿಂತ ಕಡಿಮೆ ಅಂಶದ ಕೋನದಲ್ಲಿ ಸ್ಕ್ಯಾನರ್‌ನ ಭುಜಗಳು ತೆರೆದರೆ, ಅದರ ಅರ್ಥ ಆ ಘಟಕದ ಸುತ್ತಲೂ ಪ್ರಭಾವಲಯ ಇಲ್ಲ, ಎಂದಾಗುತ್ತದೆ.

೪ ಅ. ಕೋಷ್ಟಕದಲ್ಲಿನ ನಕಾರಾತ್ಮಕ ಶಕ್ತಿಗೆ ಸಂಬಂಧಿಸಿದ ವಿವೇಚನೆ

೪ ಅ ೧. ನಕಾರಾತ್ಮಕ ಶಕ್ತಿ ಇಲ್ಲದಿರುವುದು : ಸರ್ವಸಾಧಾರಣ ವಾಸ್ತುಗಳಲ್ಲಿ ಅಥವಾ ವಸ್ತುಗಳಲ್ಲಿ ನಕಾರಾತ್ಮಕ ಶಕ್ತಿ ಇರಬಹುದು; ಆದರೆ ಪರಿಶೀಲನೆಯಲ್ಲಿನ ಸಾಧಕನಲ್ಲಿ ಮಹಾಲಯ ಶ್ರಾದ್ಧವನ್ನು ಮಾಡುವ ಮೊದಲು ಮತ್ತು ಮಾಡಿದ ನಂತರವೂ ನಕಾರಾತ್ಮಕ ಶಕ್ತಿವು ಕಂಡುಬರಲಿಲ್ಲ.

೪ ಆ. ಕೋಷ್ಟಕದಲ್ಲಿನ ಸಕಾರಾತ್ಮಕ ಶಕ್ತಿಕ್ಕೆ ಸಂಬಂಧಿಸಿದ ನಿರೀಕ್ಷಣೆಯ ವಿವೇಚನೆ

೪ ಆ ೧. ಸಾಧಕನಲ್ಲಿ ಮಹಾಲಯ ಶ್ರಾದ್ಧವನ್ನು ಮಾಡುವ ಮೊದಲು ಸಕಾರಾತ್ಮಕ ಶಕ್ತಿಯಿತ್ತು, ಶ್ರಾದ್ಧವನ್ನು ಮಾಡಿದ ನಂತರ ಅದು ತುಂಬಾ ಹೆಚ್ಚಾಯಿತು : ಎಲ್ಲ ವಾಸ್ತುಗಳಲ್ಲಿ ಅಥವಾ ವಸ್ತುಗಳಲ್ಲಿ ಸಕಾರಾತ್ಮಕ ಶಕ್ತಿ ಇರುತ್ತದೆ ಎಂದೇನಿಲ್ಲ; ಆದರೆ ಶ್ರಾದ್ಧ ಮಾಡುವ ಮೊದಲಿನ ನಿರೀಕ್ಷಣೆಯಲ್ಲಿ ಸ್ಕ್ಯಾನರ್‌ನ ಭುಜಗಳು 90 ಅಂಶ ಕೋನದಲ್ಲಿ ತೆರೆದೆವು ಅಂದರೆ, ಸಾಧಕನಲ್ಲಿ ಸ್ವಲ್ಪ ಪ್ರಮಾಣದಲ್ಲಿ ಸಕರಾತ್ಮಕ ಶಕ್ತಿ ಕಂಡು ಬಂದಿತು. ಮಹಾಲಯ ಶ್ರಾದ್ಧ ಮಾಡಿದ ನಂತರದ ನಿರೀಕ್ಷಣೆಯಲ್ಲಿ ಸ್ಕ್ಯಾನರ್‌ನ ಭುಜಗಳು 180 ಅಂಶದ ಕೋನದಲ್ಲಿ ತೆರೆದವು, ಅಂದರೆ ಸಾಧಕನಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬಂದಿತು ಹಾಗೂ ಅದರ ಪ್ರಭಾವಲಯ 1.02 ಮೀಟರ್ ಇತ್ತು. ಇದರ ಕಾರಣವೇನೆಂದರೆ ಶ್ರಾದ್ಧಕರ್ತನು ನಿಯಮಿತವಾಗಿ ಸಾಧನೆ ಮಾಡುವವನಾಗಿರುವುದರಿಂದ ಅವನಲ್ಲಿ ಶ್ರಾದ್ಧವನ್ನು ಮಾಡುವ ಮೊದಲೇ ಸಕಾರಾತ್ಮಕ ಶಕ್ತಿಯಿತ್ತು ಹಾಗೂ ಅದು ಶ್ರಾದ್ಧ ಮಾಡಿದ ನಂತರ ಇನ್ನೂ ಹೆಚ್ಚಾಯಿತು. ಮಹಾಲಯ ಶ್ರಾದ್ಧದಲ್ಲಿನ ವಿಧಿಯಿಂದಾಗಿ ಸಾಧಕನಲ್ಲಿರುವ ಸಕಾರಾತ್ಮಕ ಶಕ್ತಿಯ ಪ್ರಮಾಣವು ತುಂಬಾ ಹೆಚ್ಚಾಗಿರುವುದು ಶ್ರಾದ್ಧವಿಧಿಯ ಪರಿಣಾಮವಾಗಿದೆ.

೪ ಇ. ಕೋಷ್ಟಕದಲ್ಲಿನ ವಸ್ತುಗಳ ಪ್ರಭಾವಲಯದ ಸಂದರ್ಭದಲ್ಲಿನ ನಿರೀಕ್ಷಣೆಗಳ ವಿವೇಚನೆ

೪ ಇ ೧. ಶ್ರಾದ್ಧಕರ್ತ ಸಾಧಕನ ಮಹಾಲಯ ಶ್ರಾದ್ಧ ಮಾಡಿದ ನಂತರದ ಪ್ರಭಾವಲಯವು ಮಹಾಲಯ ಶ್ರಾದ್ಧವನ್ನು ಮಾಡುವ ಮೊದಲಿನ ಪ್ರಭಾವಲಯಕ್ಕಿಂತ ತುಂಬಾ ಹೆಚ್ಚಾಗಿರುವುದು : ಸಾಮಾನ್ಯ ವ್ಯಕ್ತಿಯ ಪ್ರಭಾವಲಯ ಸುಮಾರು 1 ಮೀಟರ್‌ನಷ್ಟಿರುತ್ತದೆ, ಪರಿಶೀಲನೆಯಲ್ಲಿನ ಶ್ರಾದ್ಧಕರ್ತ ಸಾಧಕನ ಮಹಾಲಯ ಶ್ರಾದ್ಧ ಮಾಡುವ ಮೊದಲಿನ ಪ್ರಭಾವಲಯವು 1.31 ಮೀಟರ್ ಇದೆ. ಅದು ಮಹಾಲಯ ಶ್ರಾದ್ಧ ಮಾಡಿದ ನಂತರ ತುಂಬಾ ಹೆಚ್ಚಾಗಿ 2.64 ಮೀಟರ್ ಆಯಿತು. ಅದು ಮಹಾಲಯ ಶ್ರಾದ್ಧದಲ್ಲಿನ ವಿಧಿಯಲ್ಲಿನ ಚೈತನ್ಯದ ಪರಿಣಾಮವಾಗಿದೆ.

ನಿಷ್ಕರ್ಷ

ವ್ಯಕ್ತಿಗೆ ಪೂರ್ವಜರ ತೊಂದರೆ ಇದ್ದರೆ ಅಥವಾ ಭವಿಷ್ಯದಲ್ಲಿ ಅದು ಆಗಬಾರದೆಂದು ಶ್ರಾದ್ಧವನ್ನು ಮಾಡಲು ಧರ್ಮಶಾಸ್ತ್ರದಲ್ಲಿ ಹೇಳಲಾಗಿದೆ. ಅದಕ್ಕನುಸಾರ ಪಿತೃಪಕ್ಷದಲ್ಲಿ ಮಹಾಲಯ ಶ್ರಾದ್ಧವನ್ನು ಮಾಡುವುದು ಶ್ರಾದ್ಧಕರ್ತ ವ್ಯಕ್ತಿಗೆ ಆಧ್ಯಾತ್ಮಿಕ ದೃಷ್ಟಿಯಲ್ಲಿ ಲಾಭದಾಯಕವಾಗಿರುತ್ತದೆ, ಎಂಬುದು ಈ ಪರಿಶೀಲನೆಯಿಂದ ಅರಿವಾಗುತ್ತದೆ.

– ಸೌ. ಮಧುರಾ ಕರ್ವೆ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ (೨೩.೯.೨೦೧೬)

ಇದನ್ನು ಓದಿ ನಿಮಗೂ ಶ್ರಾದ್ಧದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯುವ ಇಚ್ಛೆಯಿದ್ದಲ್ಲಿ ಇಲ್ಲಿ ಕ್ಲಿಕ್ ಮಾಡಿ !

ವಾಚಕರಿಗೆ ಸೂಚನೆ : ಸ್ಥಳದ ಅಭಾವದಿಂದ ಈ ಲೇಖನದಲ್ಲಿನ ಯು.ಎ.ಎಸ್ ಉಪಕರಣದ ಪರಿಚಯ, ಉಪಕರಣದ ಮೂಲಕ ಮಾಡುವ ಪರೀಕ್ಷಣೆಯಲ್ಲಿನ ಘಟಕಗಳು ಮತ್ತು ಅವುಗಳ ವಿವರಣೆ, ಘಟಕದ ಪ್ರಭಾವಲಯವನ್ನು ಅಳೆಯುವುದು, ಪರೀಕ್ಷಣೆಯ ಪದ್ಧತಿ ಮತ್ತು ಪರೀಕ್ಷಣೆಯಲ್ಲಿ ಸಮಾನತೆಯು ಬರಲು ವಹಿಸಿದ ಜಾಗರೂಕತೆ ಇತ್ಯಾದಿ ಅಂಶಗಳನ್ನು ಈ ಲಿಂಕ್‌ನಲ್ಲಿ ಇಡಲಾಗಿದೆ.

Leave a Comment