ಕೊರೊನಾ, ಶ್ರಾದ್ಧಕರ್ಮಗಳು ಮತ್ತು ಅವಕಾಶವಾದಿ ನಾಸ್ತಿಕರು !

ಈಗಿನ ಸಮಯ ನಾಸ್ತಿಕರ ಪರವಾಗಿದೆ. ಅವರು ಕೊರೊನಾದ ತೆರೆಮರೆಯಲ್ಲಿ ಹಿಂದೂ ಧರ್ಮವನ್ನು ಗುರಿ ಮಾಡುವ ಒಂದೇ ಒಂದು ಅವಕಾಶವನ್ನು ಬಿಡುವುದಿಲ್ಲ. ಇತ್ತೀಚೆಗೆ ಶ್ರಾದ್ಧಕರ್ಮಗಳನ್ನು ಗುರಿ ಮಾಡುವ ನಾಸ್ತಿಕರು ಒಂದು ವಾಟ್ಸಆಪ್ ಸಂದೇಶ ಎಲ್ಲೆಡೆ ಹರಡುತ್ತಿರುವುದನ್ನು ಓರ್ವ ಧರ್ಮನಿಷ್ಠ ವ್ಯಕ್ತಿಯು ತೋರಿಸಿದರು. ಈ ಸಂದೇಶದಿಂದ ದಿಗ್ಭ್ರಾಂತಗೊಂಡ ಅನೇಕರ ಮನಸ್ಸಿನಲ್ಲಿ ಮೂಡುವ ಸಂಶಯ ನಿವಾರಣೆಯಾಗಲು ಉತ್ತರ ನೀಡುವುದು ಆವಶ್ಯಕವಾಗಿತ್ತು. ಆದ್ದರಿಂದ ಈ ಲೇಖನ….
– ಶ್ರೀ. ಚೇತನ ರಾಜಹಂಸ, ರಾಷ್ಟ್ರೀಯ ವಕ್ತಾರರು, ಸನಾತನ ಸಂಸ್ಥೆ

೧. ಶ್ರಾದ್ಧಕರ್ಮವನ್ನು ಗುರಿ ಮಾಡುವ ನಾಸ್ತಿಕರ ಅಯೋಗ್ಯ ವಿಚಾರ

ಕೊರೋನಾದಿಂದ ಮೃತರಾಗುತ್ತಿರುವವರ ಪಿಂಡದಾನವಾಗುತ್ತಿಲ್ಲ, ಹದಿಮೂರನೇ ದಿನದ ಕ್ರಿಯೆಗಳು ಆಗುತ್ತಿಲ್ಲ ಅಥವಾ ಗರುಡಪುರಾಣದ ಪಾರಾಯಣ ಆಗುತ್ತಿಲ್ಲ, ಯಾರೂ ದಾನ-ದಕ್ಷಿಣೆ, ಅಸ್ಥಿ ವಿಸರ್ಜನೆ ಮಾಡಲು ನಾಶಿಕ, ಆಳಂದಿ, ಪಂಚಗಂಗಾ, ಕಾಶಿ, ಓಂಕಾರೇಶ್ವರ, ಪೈಠಣಗೆ ಹೋಗುತ್ತಿಲ್ಲ. ಅಲ್ಲಿ ಯಾರಿಗೂ ದಾನವನ್ನು ಕೊಡುತ್ತಿಲ್ಲ. ಆದರೂ ಆತ್ಮಗಳು ಎಲ್ಲಿಗೆ ಹೋಗಬೇಕಾಗಿವೆಯೋ, ಅಲ್ಲಿಗೆ ಸರಿಯಾಗಿ ಹೋಗಿ ಸೇರುತ್ತಿವೆ. ಅನಿಷ್ಠ ರೂಢಿ-ಪರಂಪರೆಗಳ ಮೇಲೆ ಅನಾವಶ್ಯಕವಾಗಿ ದುಂದುವೆಚ್ಚ ಮಾಡುವುದಕ್ಕಿಂತ ಆರೋಗ್ಯ, ಶಿಕ್ಷಣ ಇವುಗಳ ಮೇಲೆ ಖರ್ಚು ಮಾಡಿ !

೨. ಅಧ್ಯಾತ್ಮಶಾಸ್ತ್ರದ ಅಧ್ಯಯನ ಮಾಡದೇ, ಬೌದ್ಧಿಕ ದಿವಾಳಿತನದಿಂದ ನಿಷ್ಕರ್ಷವನ್ನು ತೆಗೆಯುವ ಬುದ್ಧಿಜೀವಿಗಳು!

ನಿಜ ಹೇಳಬೇಕೆಂದರೆ ಈ ರೀತಿಯ ಸಂದೇಶಗಳನ್ನು ಹರಡುವ ಮೊದಲು ನಾಸ್ತಿಕರು ಮೃತ್ಯುವಿನ ಬಳಿಕ ಅಂತ್ಯವಿಧಿ, ೧೩ ದಿನಗಳ ಸಂಸ್ಕಾರ ಮತ್ತು ಗರುಡ ಪುರಾಣದ ಪಾರಾಯಣ ಇವುಗಳನ್ನು ಏಕೆ ಮಾಡಲಾಗುತ್ತದೆ ಎನ್ನುವುದನ್ನು ಅರಿತುಕೊಳ್ಳುವ ಪರಿಶ್ರಮ ತೆಗೆದುಕೊಂಡಿದ್ದರೆ, ಈ ರೀತಿ ಬರೆಯುವ ಧೈರ್ಯವನ್ನು ಮಾಡುತ್ತಿರಲಿಲ್ಲ. ಯಾವುದೇ ಅಧ್ಯಯನವನ್ನು ಮಾಡದೇ ಇವರು ‘ಚಿಂತನೆ’ಯನ್ನು ಮಂಡಿಸುವುದನ್ನು ಗಮನಿಸಿದರೆ ಆಧುನಿಕ ಬುದ್ಧಿಜೀವಿಗಳ ಸೀಮಿತ ಜ್ಞಾನದ ಅರಿವಾಗುತ್ತದೆ. ಅಧ್ಯಾತ್ಮದ ಅಧ್ಯಯನವನ್ನು ಮಾಡದಿರುವುದರಿಂದ ಈ ರೀತಿಯ ನಿರರ್ಥಕ ನಿಷ್ಕರ್ಷಗಳನ್ನು ತೆಗೆಯಲಾಗುತ್ತದೆ.

೨ ಅ. ಲಿಂಗದೇಹಕ್ಕೆ ಉತ್ತಮ ಗತಿ ಪ್ರಾಪ್ತವಾಗಲು ಶ್ರಾದ್ಧಾದಿ ಕರ್ಮಗಳು ಆವಶ್ಯಕ !

ಸನಾತನ ಧರ್ಮದಲ್ಲಿ ಪುನರ್ಜನ್ಮದ ಸಿದ್ಧಾಂತವನ್ನು ಹೇಳಲಾಗಿದೆ. ‘ವ್ಯಕ್ತಿಯ ಕರ್ಮಾನುಸಾರ ಮೃತ್ಯುವಿನ ನಂತರದ ಗತಿ ದೊರಕುತ್ತದೆ’ ಎಂದು ಶಾಸ್ತ್ರವು ಹೇಳುತ್ತದೆ. ಜೀವನವಿಡೀ ಸತ್ಕರ್ಮಗಳನ್ನು ಮಾಡಿದ್ದರೆ, ಜೀವಕ್ಕೆ ಮೃತ್ಯುವಿನ ಬಳಿಕ ಸದ್ಗತಿ ಸಿಗುತ್ತದೆ; ಆದರೆ ಜೀವನದಲ್ಲಿ ಪಾಪ, ಪರಪೀಡೆ, ಅನೈತಿಕತೆ ಇತ್ಯಾದಿ ಕೃತ್ಯಗಳನ್ನು ಮಾಡಿದ್ದರೆ, ಈ ಕುಕರ್ಮಗಳ ಫಲವು ಪರಲೋಕದಲ್ಲಿ ಅಧೋಗತಿಯತ್ತ ಕರೆದುಕೊಂಡು ಹೋಗುತ್ತವೆ. ಇಂತಹವರಿಗೆ ಪುನರ್ಜನ್ಮ ಮನುಷ್ಯ ರೂಪದಲ್ಲಿ ಅಲ್ಲ, ಕೀಟ, ಇರುವೆ, ನಾಯಿ, ವನಸ್ಪತಿ ಇತ್ಯಾದಿ ೮೪ ಲಕ್ಷ ಯೋನಿಗಳಲ್ಲಿ ದೊರಕಬಹುದು.

ಮೃತ್ಯುವಿನ ತನಕ ಸತ್ಕರ್ಮಗಳನ್ನು ಮಾಡದಿರುವುದರಿಂದ ಮತ್ತು ಮೃತ್ಯುವಿನ ಮೊದಲಿನ ಆಸೆ-ಆಕಾಂಕ್ಷೆಗಳಿಂದ ಶರೀರವನ್ನು ತ್ಯಜಿಸಿರುವ ಲಿಂಗದೇಹಗಳು ಮೃತ್ಯುವಿನ ಬಳಿಕ ಪೃಥ್ವಿಯ ಮೇಲಿರುವ ಭುವರ್‌ಲೋಕದಲ್ಲಿ ಸಿಲುಕುತ್ತವೆ. ಅವು ಅಲ್ಲಿ ಸಿಲುಕಬಾರದು ಮತ್ತು ಅವುಗಳಿಗೆ ಅದರ ಮುಂದಿನ ಗತಿ ಸಿಗಬೇಕು, ಅಂದರೆ ಸ್ವರ್ಗ ಇತ್ಯಾದಿ ಉಚ್ಚಲೋಕಗಳು ಸಿಗಬೇಕೆಂದು ಶ್ರಾದ್ಧ ಕರ್ಮಾದಿ ಕೃತಿಗಳನ್ನು ಹೇಳಲಾಗಿದೆ. ಅಂತ್ಯವಿಧಿ, ಹದಿಮೂರನೆಯ ದಿನದ ಸಂಸ್ಕಾರ, ಗರುಡ ಪುರಾಣದ ಪಾರಾಯಣ ಇತ್ಯಾದಿ ಮಾಡುವ ಪರಂಪರೆಯು ಅದಕ್ಕಾಗಿಯೇ ಇದೆ.

ಇಲ್ಲಿ ಗಮನಿಸಬೇಕಾದ ಮಹತ್ವದ ವಿಷಯವೇನೆಂದರೆ, ಯಾರು ಭುವರ್‌ಲೋಕದಲ್ಲಿ ಸಿಲುಕಿದ್ದಾರೆಯೋ, ಅವರ ಮುಕ್ತಿಗಾಗಿ ಈ ಧಾರ್ಮಿಕ ಕೃತಿಗಳನ್ನು ಮಾಡಲಾಗುತ್ತದೆ. ಯಾರು ಜೀವನವಿಡೀ ಸತ್ಕರ್ಮ ಮತ್ತು ಧರ್ಮದ ಮಾರ್ಗದಿಂದ ಹೋಗುತ್ತಾರೆಯೋ, ಅವರು ತಮ್ಮ ಧರ್ಮದ ಬಲದಿಂದ ಪರಮಗತಿಯನ್ನು ಪಡೆಯುತ್ತಾರೆ. ಅವರಿಗೋಸ್ಕರ ಯಾರಾದರು ಶ್ರಾದ್ಧವನ್ನು ಮಾಡಿದರೂ ಅಥವಾ ಮಾಡದಿದ್ದರೂ ಯಾವುದೇ ವ್ಯತ್ಯಾಸ ಆಗುವುದಿಲ್ಲ. ಸಾಧನೆಯಲ್ಲಿ ಉನ್ನತಿ ಹೊಂದಿರುವವರಂತೂ ಪೃಥ್ವಿಯ ಮೇಲೆ ಪುನಃ ಜನ್ಮವನ್ನು ಪಡೆಯುವುದಿಲ್ಲ. ಅವರು ಸಪ್ತಲೋಕಗಳನ್ನು ಭೇದಿಸುತ್ತಾ ಮೋಕ್ಷವನ್ನು ಪ್ರಾಪ್ತ ಮಾಡಿಕೊಳ್ಳುತ್ತಾರೆ.

ಇಂತಹ ಸಮಯದಲ್ಲಿ ಬರುವ ಪ್ರಶ್ನೆಯೆಂದರೆ, ನಿಜವಾಗಿಯೂ ನಾವು ಜೀವನವಿಡೀ ಸತ್ಕರ್ಮಗಳನ್ನು ಮಾಡುತ್ತಿದ್ದೇವೆಯೇ ? ಮತ್ತು ಜೀವನವಿಡೀ ಧರ್ಮದ ಮಾರ್ಗದಿಂದ ನಡೆದಿದ್ದೇವೆಯೇ ? ನಮ್ಮ ಉತ್ತರ ‘ಇಲ್ಲ’ ಎಂದಾಗಿದ್ದರೆ, ನಮಗೆ ನಮ್ಮ ಮೃತ್ಯುವಿನ ಬಳಿಕ ನಮ್ಮ ವಂಶಜರು ಶ್ರಾದ್ಧ ಕರ್ಮಗಳನ್ನು ಮಾಡುವ ಆವಶ್ಯಕತೆಯಿದೆ. ಕೊರೋನಾ ಮಹಾಮಾರಿಯ ಕಾಲದಲ್ಲಿ ಶ್ರಾದ್ಧವಿಧಿ, ಅಂತ್ಯವಿಧಿ ಇತ್ಯಾದಿಗಳಿಗೆ ಬಂಧನಗಳಿವೆ ಎಂದು ಒಪ್ಪುತ್ತೇವೆ; ಆದರೆ ಧರ್ಮವು ಅದರ ವ್ಯವಸ್ಥೆಯನ್ನು ಸಹ ಮಾಡಿ ಇಟ್ಟಿದೆ. ಇಂತಹ ಕಾಲಕ್ಕಾಗಿ ಆಪದ್ಧರ್ಮದ ವ್ಯವಸ್ಥೆಯಿದೆ. ಕೇವಲ ಜಿಜ್ಞಾಸುವೇ ಜ್ಞಾನದ ಅಧಿಕಾರಿಯಾಗಿರುತ್ತಾನೆ, ಆದುದರಿಂದ ನಾವು ಅದನ್ನು ಇಲ್ಲಿ ವಿಸ್ತಾರವಾಗಿ ಹೇಳಿಲ್ಲ. ತಮಗೆ ಆಪದ್ಧರ್ಮದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳುವ ಆಸಕ್ತಿಯಿದ್ದರೆ ಇಲ್ಲಿ ಕ್ಲಿಕ್ ಮಾಡಿ !

೨ ಆ. ಗರುಡ ಪುರಾಣದ ಶ್ರವಣ ಮಾಡುವ ಮಹತ್ವವನ್ನು ಅರಿತುಕೊಳ್ಳಿ !

ಪಕ್ಷಿರಾಜ ಗರುಡನು ಭಗವಾನ ಶ್ರೀವಿಷ್ಣುವಿನ ವಾಹನ. ಒಮ್ಮೆ ಪಕ್ಷಿರಾಜ ಗರುಡನು ಭಗವಾನ ವಿಷ್ಣುವಿಗೆ ಮೃತ್ಯುವಿನ ಬಳಿಕ ಆಗುವ ಜೀವಿಗಳ ಸ್ಥಿತಿ, ಜೀವದ ಯಮಲೋಕಯಾತ್ರೆ, ವಿಭಿನ್ನ ದುಷ್ಕರ್ಮಗಳಿಂದ ದೊರಕುವ ನರಕ, ೮೪ ಲಕ್ಷ ಯೋನಿಗಳು, ಪಾಪ ಮಾಡುವವರಿಗೆ ಆಗುವ ದುರ್ಗತಿ ಇತ್ಯಾದಿಗಳಿಗೆ ಸಂಬಂಧಿಸಿದಂತೆ ಅನೇಕ ಗೂಢ ಪ್ರಶ್ನೆಗಳನ್ನು ಕೇಳಿತು. ಅದಕ್ಕೆ ಭಗವಾನ ಶ್ರೀವಿಷ್ಣುವು ಮಾಡಿದ ಜ್ಞಾನಮಯ ಉಪದೇಶವನ್ನು ಈ ಪುರಾಣದಲ್ಲಿ ವಿವರವಾಗಿ ನೀಡಲಾಗಿದೆ. ಜೀವದ ಮೃತ್ಯುವಿನ ಬಳಿಕ ಆ ಪರಿವಾರವು ಈ ಪುರಾಣವನ್ನು ಕೇಳಿ ಸನ್ಮಾರ್ಗದಿಂದ ನಡೆಯಬೇಕು ಮತ್ತು ಆಯುಷ್ಯವಿಡೀ ಸತ್ಕರ್ಮಗಳನ್ನು ಮಾಡುವ ಸಂಕಲ್ಪವನ್ನು ಮಾಡಬೇಕು. ಮೃತ್ಯುವಿನ ಬಳಿಕ ಸದ್ಗತಿ ಪಡೆಯಲು ಗರುಡ ಪುರಾಣದ ಶ್ರವಣವನ್ನು ಮಾಡುವ ಧರ್ಮಶಾಸ್ತ್ರೀಯ ಅವಕಾಶವಿದೆ. ನಾಸ್ತಿಕವಾದಿಗಳಿಗೆ ಸತ್ಕರ್ಮ ಮಾಡುವ ಕಟ್ಟುಪಾಡುಗಳು ಬೇಡವಾಗಿರುವುದರಿಂದ ಅವರು ಗರುಡ ಪುರಾಣವನ್ನು ಕೇಳಲು ವಿರೋಧಿಸುತ್ತಾರೆ.

೨ ಇ. ಕಾಲದ ಸತ್ತ್ವಪರೀಕ್ಷೆಯಲ್ಲಿ ಸ್ಥಿರವಾಗಿ ಉಳಿದಿರುವ ಚೈತನ್ಯಮಯ ಶ್ರಾದ್ಧ ಪರಂಪರೆ !

ರಾಮ-ಕೃಷ್ಣ ಇತ್ಯಾದಿ ಅವತಾರಗಳು ಸಹ ಶ್ರಾದ್ಧಕರ್ಮಗಳನ್ನು ಮಾಡಿವೆ. ಇಂದು ಲಕ್ಷಾಂತರ ವರ್ಷಗಳಿಂದ ಶ್ರಾದ್ಧಪರಂಪರೆಯು ನಡೆದುಕೊಂಡು ಬಂದಿದೆ. ಯಾವುದಾದರೊಂದು ಪರಂಪರೆಯಲ್ಲಿ ಚೈತನ್ಯವಿದ್ದರೆ ಮಾತ್ರ ಅದು ಲಕ್ಷಾಂತರ ವರ್ಷಗಳವರೆಗೆ ಸ್ಥಿರವಾಗಿ ಉಳಿಯುತ್ತದೆ.

೨. ಊ. ‘ಪೂರ್ವಜರಿಗಾಗಿ ಹಣವನ್ನು ಖರ್ಚು ಮಾಡಬೇಡಿ’, ಎಂದು ಹೇಳುವುದು ಕೃತಘ್ನತೆ !

‘ಶ್ರಾದ್ಧ ಕರ್ಮಗಳಿಗೆ ಅನಾವಶ್ಯಕ ಖರ್ಚು ಮಾಡುವುದಕ್ಕಿಂತ ಆರೋಗ್ಯ, ಶಿಕ್ಷಣಕ್ಕಾಗಿ ಖರ್ಚು ಮಾಡಿ !’, ಎಂದು ನಾಸ್ತಿಕರು ಪುಕ್ಕಟೆ ಸಲಹೆ ನೀಡುತ್ತಾರೆ. ಈ ಜನರು ಸ್ವತಃ ಸಮಾಜದ ಆರೋಗ್ಯ, ಶಿಕ್ಷಣದ ಮೇಲೆ ಖರ್ಚು ಮಾಡುವುದಿಲ್ಲ. ಅವರ ಶಿಕ್ಷಣ ಸಂಸ್ಥೆಗಳು ಇರುವುದಿಲ್ಲ. ಆಸ್ಪತ್ರೆಗಳೂ ಇರುವುದಿಲ್ಲ. ಅವರು ತಮ್ಮ ಜೇಬಿನಿಂದ (ಹಣದಿಂದ) ಸಮಾಜಸೇವೆಯನ್ನು ಮಾಡುವುದಿಲ್ಲ; ಕೇವಲ ಶ್ರದ್ಧಾವಂತರಿಗೆ ತಪ್ಪು ಬೋಧನೆ ಮಾಡಿ ಅನಾಯಾಸವಾಗಿ ದೊರೆಯುವ ಹಣದ ಮೇಲೆ ಸಮಾಜಕಾರ್ಯವನ್ನು ಮಾಡುತ್ತಾರೆ. ತದ್ವಿರುದ್ಧ ಶ್ರದ್ಧಾವಂತರು ಧಾರ್ಮಿಕ ಸಂಸ್ಥೆಗಳ ಮಾಧ್ಯಮದಿಂದ ದೊಡ್ಡ ಪ್ರಮಾಣದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಮತ್ತು ಆಸ್ಪತ್ರೆಗಳನ್ನು ನಡೆಸುತ್ತಾರೆ. ಪೂರ್ವಜರ ಬಗ್ಗೆ ಕೃತಘ್ನರಾಗಿರುವ ನಾಸ್ತಿಕರಿಗೆ ಹೀಗೆ ಹೇಳುವ ನೈತಿಕ ಅಧಿಕಾರವಾದರೂ ಇದೆಯೇ?

೩. ಶ್ರದ್ಧಾವಂತ ಸಮಾಜಕ್ಕೆ ಕರೆ

ನಾಸ್ತಿಕರು ಇಂತಹ ‘ವ್ಯಾಟ್ಸಅಪ್ ಮೆಸೇಜ್’ ಕಳುಹಿಸಿ ಜನರನ್ನು ಧರ್ಮದ ಮಾರ್ಗದಿಂದ ದೂರ ಒಯ್ಯುತ್ತಾರೆ. ನಾಸ್ತಿಕರಿಗೆ ರಾಮ-ಕೃಷ್ಣರ ಮೇಲೆಯೂ ಶ್ರದ್ಧೆಯಿರುವುದಿಲ್ಲ. ಆದುದರಿಂದ ಎಲ್ಲರೂ ಇಂತಹ ನಾಸ್ತಿಕರ ಬಗ್ಗೆ ಎಚ್ಚರವಹಿಸಬೇಕೆಂದು ಕರೆ ನೀಡುತ್ತೇವೆ. ಪೂರ್ವಜರಿಗೆ ಸದ್ಗತಿ ದೊರೆಯಬೇಕೆಂದು ಮಹಾರಾಜ ಭಗೀರಥ ಮತ್ತು ಅವರ ಪೂರ್ವಜ ರಾಜಪುರುಷರು ಸಾವಿರಾರು ವರ್ಷಗಳ ಕಾಲ ತಪಸ್ಸು ಮಾಡಿದರು; ಆದ್ದರಿಂದ ಇಂದು ದೇವನದಿ ಗಂಗೆಯ ದಿವ್ಯ ಸಾನ್ನಿಧ್ಯವನ್ನು ಅನುಭವಿಸುತ್ತಿದ್ದೇವೆ. ಶ್ರಾದ್ಧಕರ್ಮದ ಫಲ ಉತ್ತಮವೇ ಆಗಿರುತ್ತದೆ; ಆದ್ದರಿಂದ ಶ್ರಾದ್ಧಕರ್ಮಗಳನ್ನು ಶ್ರದ್ಧೆಯಿಂದ ಮಾಡಿರಿ !

Leave a Comment