ಶತಮಾನಗಳು ಕಳೆದರೂ ಆದಿಶಂಕರಾಚಾರ್ಯರ ಜನ್ಮಸ್ಥಾನ ಮತ್ತು ಅದಕ್ಕೆ ಸಂಬಂಧಿಸಿದ ಘಟಕಗಳಲ್ಲಿ ಚೈತನ್ಯಶಕ್ತಿ ಶಾಶ್ವತವಾಗಿರುವುದು


ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯವು ‘ಯು.ಎ.ಎಸ್’ (ಯುನಿವರ್ಸಲ್ ಆರಾ ಸ್ಕ್ಯಾನರ್) ಈ ಉಪಕರಣದ ಮೂಲಕ ಮಾಡಿದ ವೈಜ್ಞಾನಿಕ ಪರಿಶೀಲನೆ

ಸೌ. ಮಧುರಾ ಕರ್ವೆ

ಮಾರ್ಚ್-ಎಪ್ರಿಲ್ ೨೦೧೯ ರಲ್ಲಿ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಂಶೋಧನಾ ತಂಡವು ಕೇರಳ ರಾಜ್ಯದ ಪ್ರವಾಸ ಮಾಡಿತು. ಕೇರಳ ರಾಜ್ಯದಲ್ಲಿನ ‘ಆದಿಶಂಕರಾಚಾರ್ಯ ಕೀರ್ತಿಸ್ತಂಭ, ಕಾಲಾಡಿ’ (ಕಾಲಾಡಿಯಲ್ಲಿ ಆದಿಶಂಕರಾಚಾರ್ಯರು ತಮ್ಮ ಬಾಲ್ಯವನ್ನು ಕಳೆದಿದ್ದರು.) ಮತ್ತು ಪೆಪಥಿ, ವೆಲಿನಾಡ್‌ನಲ್ಲಿನ ‘ಮೆಲಾಪುಝರಮಣ್ಣಾ’ (ಇಲ್ಲಿ ಆದಿಶಂಕರಾಚಾರ್ಯರ ತಾಯಿ ಆರ್ಯಂಬಾ ಇವರ ಹಿರಿಯರ ಮನೆಯಿದೆ. ಅದಕ್ಕೆ ‘ಮೆಲಾಪುಝರಮಣ್ಣಾ’ ಎಂದು ಹೇಳುತ್ತಾರೆ. ಈ ಮನೆಯಲ್ಲಿಯೇ ಆದಿಶಂಕರಾಚಾರ್ಯರು ಜನಿಸಿದ್ದು.) ಈ ಸ್ಥಳಗಳಿಗೆ ಬೇಟಿ ನೀಡಿದರು. ಇಲ್ಲಿ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ವತಿಯಿಂದ ‘ಯು.ಎ.ಎಸ್’ ಈ ವೈಜ್ಞಾನಿಕ ಉಪಕರಣದ ಮೂಲಕ ಸಂಶೋಧನೆ ಮಾಡಲಾಯಿತು. ಈ ಉಪಕರಣದ ಮೂಲಕ ಮಾಡಿದ ಘಟಕಗಳ ಮಾಪನವನ್ನು ಮತ್ತು ಅದರ ವಿವರಣೆಯನ್ನು ಇಲ್ಲಿ ಕೊಡಲಾಗಿದೆ.

‘ಯು.ಎ.ಎಸ್’ ಉಪಕರಣದ ಬಗ್ಗೆ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ !

ನಿರೀಕ್ಷಣೆಯ ಘಟಕಗಳು

ಈ ಪರಿಶೀಲನೆಯಲ್ಲಿ ‘ಯು.ಎ.ಎಸ್’ ಉಪಕರಣದ ಮೂಲಕ ಮುಂದಿನ ಘಟಕಗಳ ಅಳತೆಯನ್ನು ದಾಖಲಿಸಿಕೊಳ್ಳಲಾಯಿತು.

ಅ. ಆದಿಶಂಕರಾಚಾರ್ಯರ ಬೆಳ್ಳಿಯ ಪಾದುಕೆಗಳಿಗೆ ಅರ್ಪಿಸಿದ ಹೂವುಗಳು : ಆದಿಶಂಕರಾಚಾರ್ಯ ಕೀರ್ತಿಸ್ತಂಭ, ಕಾಲಾಡಿಯಲ್ಲಿನ ಮಠದಲ್ಲಿ ಆದಿ ಶಂಕರಾಚಾರ್ಯರ ಬೆಳ್ಳಿಯ ಪಾದುಕೆಗಳಿವೆ. ಅವುಗಳಿಗೆ ಅರ್ಪಿಸಿದ ಹೂವುಗಳಿವು.

ಆ. ಹೋಮಕುಂಡದ ಭಸ್ಮ : ಇದು ಮಠದ ಹೋಮಕುಂಡದಲ್ಲಿನ ಭಸ್ಮವಾಗಿದೆ.

ಇ. ಆರ್ಯಂಬಾ ಇವರ ಸಮಾಧಿಯ ಮಣ್ಣು : ಕಾಲಾಡಿಯಲ್ಲಿ ಆದಿ ಶಂಕರಾಚಾರ್ಯರ ತಾಯಿ ಆರ್ಯಂಬಾ ಇವರ ಸಮಾಧಿ ಇದೆ.

ಈ. ಕಾಲಾಡಿಯಲ್ಲಿ ಹರಿಯುವ ಪೂರ್ಣಾ ನದಿಯ ನೀರು ಮತ್ತು ನದಿತೀರದ ಮಣ್ಣು : ಕಾಲಾಡಿಯಲ್ಲಿ ಹರಿಯುವ ಪೂರ್ಣಾ ನದಿಯ ತೀರದಲ್ಲಿ ಒಂದು ಘಟನೆ ನಡೆಯಿತು. ಆದಿ ಶಂಕರಾಚಾರ್ಯರಿಗೆ ಬಾಲ್ಯಾದಲ್ಲಿಯೆ ಸನ್ಯಾಸ ಸ್ವೀಕರಿಸಲಿಕ್ಕಿತ್ತು; ಆದರೆ ಅವರ ತಾಯಿ ಅವರಿಗೆ ಅನುಮತಿ ಕೊಡುತ್ತಿರಲಿಲ್ಲ. ಒಂದು ದಿನ ನದಿಯ ತೀರದಲ್ಲಿ ಒಂದು ಮೊಸಳೆ ಅವರ ಕಾಲನ್ನು ಹಿಡಿದುಕೊಂಡಿತು. ಅದನ್ನು ನೋಡಿ ತಾಯಿಗೆ ಗಾಬರಿಯಾಯಿತು. ಆಗ ಅವರು ತಾಯಿಗೆ ಹೇಳಿದರು, ‘ಅಮ್ಮ ನೀನು ನನಗೆ ಸನ್ಯಾಸವನ್ನು ಸ್ವೀಕರಿಸಲು ಅನುಮತಿಯನ್ನು ಕೊಡು, ಇಲ್ಲದಿದ್ದರೆ ಈ ಮೊಸಳೆ ನನ್ನನ್ನು ತಿಂದೇ ಬಿಡುವುದು’. ಇರುವ ಒಬ್ಬನೇ ಮಗನ ಜೀವ ಅಪಾಯದಲ್ಲಿರುವುದನ್ನು ನೋಡಿ ತಾಯಿ ತಕ್ಷಣ ಅನುಮತಿಯನ್ನು ನೀಡಿದರು. ಅವರು ಅನುಮತಿ ಕೊಟ್ಟ ತಕ್ಷಣ ಮೊಸಳೆ ಅವರ ಕಾಲನ್ನು ಬಿಟ್ಟು ದೂರ ಹೋಯಿತು, ಅವರ ಜೀವ ಉಳಿಯಿತು. ಅ ಪವಾಡ ನಡೆದ ನದಿಯ ನೀರಿದು.

ಉ. ಆದಿ ಶಂಕರಾಚಾರ್ಯರು ಜನಿಸಿದ ಮನೆಯ ನೀರು, ದೇವರ ಕೋಣೆಯಲ್ಲಿರುವ ಹೋಮಕುಂಡದ ಭಸ್ಮ, ಮತ್ತು ಸುಗಂಧಭರಿತ ವಿಭೂತಿ : ಪೇಪಥೀ, ವೆಲಿನಾಡ್‌ನಲ್ಲಿನ ‘ಮೆಲಾಪುಝರಮಣ್ಣಾ’ದಲ್ಲಿ ಆದಿ ಶಂಕರಾಚಾರ್ಯರ ಜನ್ಮವಾಯಿತು. ಅವರು ಜನಿಸಿದ ಕೋಣೆಯ ಹೊರಗೆ ಭಕ್ತರಿಗೆ ಹಚ್ಚಲು ವಿಭೂತಿಯನ್ನು ಇಡಲಾಗುತ್ತದೆ. ಅದು ಸುಗಂಧಭರಿತವಾಗಿದೆ.

ನಿರೀಕ್ಷಣೆ, ಅದರ ವಿವೇಚನೆ ಮತ್ತು ನಿಷ್ಕರ್ಷ

೨ ಅ. ನಕರಾತ್ಮಕ ಶಕ್ತಿ ವಿಷಯದಲ್ಲಿ ನಿರೀಕ್ಷಣೆಯ ವಿವೇಚನೆ : ನಿರೀಕ್ಷಣೆಯ ಘಟಕಗಳಲ್ಲಿ ನಕರಾತ್ಮಕ ಶಕ್ತಿ ಕಂಡುಬರಲಿಲ್ಲ.

೨ ಆ. ಸಕಾರಾತ್ಮಕ ಶಕ್ತಿ ವಿಷಯದಲ್ಲಿ ನಿರೀಕ್ಷಣೆಯ ವಿವೇಚನೆ : ಎಲ್ಲ ವ್ಯಕ್ತಿ, ವಾಸ್ತು ಅಥವಾ ವಸ್ತುಗಳಲ್ಲಿ ಸಕರಾತ್ಮಕ ಶಕ್ತಿ ಇದ್ದೇ ಇರುತ್ತದೆ, ಎಂದು ಹೇಳಲು ಸಾಧ್ಯವಿಲ್ಲ.

೨ ಆ ೧. ನಿರೀಕ್ಷಣೆಯ ಘಟಕಗಳಲ್ಲಿ ಸಕರಾತ್ಮಕ ಶಕ್ತಿಯಿರುವುದು

ನಿರೀಕ್ಷಣೆಯ ಘಟಕಗಳು  ಸಕಾರಾತ್ಮಕ ಶಕ್ತಿಯ ಪ್ರಭಾವಲಯ (ಮೀಟರ್)
ಆದಿಶಂಕರಾಚಾರ್ಯರ ಬೆಳ್ಳಿಯ ಪಾದುಕೆಗಳಿಗೆ ಅರ್ಪಿಸಿದ ಹೂವುಗಳು ೧.೦೦
ಹೋಮಕುಂಡದ ಭಸ್ಮ ೧.೧೫
ಆರ್ಯಂಬಾ ಇವರ ಸಮಾಧಿಯ ಮಣ್ಣು ೧.೭೦
ಪೂರ್ಣಾ ನದಿಯ ನೀರು ೧.೯೩
ಪೂರ್ಣಾ ನದಿತೀರದ ಮಣ್ಣು ೧.೫೦
ಆದಿ ಶಂಕರಾಚಾರ್ಯರು ಜನಿಸಿದ ಮನೆಯ ನೀರು ೧.೬೦
ದೇವರ ಕೋಣೆಯಲ್ಲಿರುವ ಹೋಮಕುಂಡದ ಭಸ್ಮ ೨.೩೦
ಸುಗಂಧಭರಿತ ವಿಭೂತಿ ೨.೬೦

೨ ಇ. ಒಟ್ಟು ಪ್ರಭಾವಲಯಕ್ಕೆ (ಟಿಪ್ಪಣಿ) ಸಂಬಂಧಿಸಿದ ನಿರೀಕ್ಷಣೆಯ ವಿವೇಚನೆ : ಸಾಮಾನ್ಯ ವ್ಯಕ್ತಿ ಅಥವಾ ವಸ್ತುವಿನ ಒಟ್ಟು ಪ್ರಭಾವಲಯವು ಸುಮಾರು ೧ ಮೀಟರ್‌ನಷ್ಟು ಇರುತ್ತದೆ.

ಟಿಪ್ಪಣಿ – ಒಟ್ಟು ಪ್ರಭಾವಲಯ : ವ್ಯಕ್ತಿಯ ಸಂದರ್ಭದಲ್ಲಿ ಅವರ ಲಾಲಾರಸ, ವಸ್ತುಗಳ ಸಂದರ್ಭದಲ್ಲಿ ಅದರ ಮೇಲಿನ ಧೂಳಿನ ಕಣಗಳನ್ನು ಅಥವಾ ಸ್ವಲ್ಪ ಭಾಗವನ್ನು ಮಾದರಿಯೆಂದು ಉಪಯೋಗಿಸಿ ಆ ವ್ಯಕ್ತಿ ಅಥವಾ ಆ ವಸ್ತುವಿನ ‘ಒಟ್ಟು ಪ್ರಭಾವಲಯ’ವನ್ನು ಅಳೆಯಲಾಗುತ್ತದೆ.

೨ ಇ ೧. ನಿರೀಕ್ಷಣೆಯ ಘಟಕಗಳ ಒಟ್ಟು ಪ್ರಭಾವಲಯ

ನಿರೀಕ್ಷಣೆಯ ಘಟಕಗಳು ನಿರೀಕ್ಷಣೆಯ ಘಟಕಗಳ ಒಟ್ಟು ಪ್ರಭಾವಲಯ (ಮೀಟರ್)
ಆದಿಶಂಕರಾಚಾರ್ಯರ ಬೆಳ್ಳಿಯ ಪಾದುಕೆಗಳಿಗೆ ಅರ್ಪಿಸಿದ ಹೂವುಗಳು ೧.೯೦
ಹೋಮಕುಂಡದ ಭಸ್ಮ ೨.೦೦
ಆರ್ಯಂಬಾ ಇವರ ಸಮಾಧಿಯ ಮಣ್ಣು ೨.೩೦
ಪೂರ್ಣಾ ನದಿಯ ನೀರು ೨.೫೦
ಪೂರ್ಣಾ ನದಿತೀರದ ಮಣ್ಣು ೨.೨೫
ಆದಿ ಶಂಕರಾಚಾರ್ಯರು ಜನಿಸಿದ ಮನೆಯ ನೀರು ೨.೫೫
ದೇವರ ಕೋಣೆಯಲ್ಲಿರುವ ಹೋಮಕುಂಡದ ಭಸ್ಮ ೩.೨೦
ಸುಗಂಧಭರಿತ ವಿಭೂತಿ ೩.೪೫

ಈ ಮೇಲಿನ ಎಲ್ಲ ವಿಷಯಗಳ ಬಗ್ಗೆ ವಿಶ್ಲೇಷಣೆಯನ್ನು ‘ವಿಷಯ ೩’ರಲ್ಲಿ ಕೊಡಲಾಗಿದೆ.

೩. ವಿಶ್ಲೇಷಣೆ

೩ ಅ. ಆದಿಶಂಕರಾಚಾರ್ಯ : ಹಿಂದೂ ಧರ್ಮದ ಪುನರುತ್ಥಾನದ ಜನಕರು !

ಭಾರತದಲ್ಲಿ ಕೆಲವು ಹೊಸ ಪಂಥಗಳ ಉದಯವಾಯಿತು ಹಾಗೂ ವೈದಿಕ ಧರ್ಮದೊಂದಿಗೆ ಅವುಗಳ ಸಂಘರ್ಷ ಆರಂಭವಾಯಿತು. ಸಾಮ್ರಾಟ ಅಶೋಕನ ನಂತರ ಬೌದ್ಧರು ವೈದಿಕ ಧರ್ಮವನ್ನು ಕಾಲಿನಡಿ ತುಳಿಯುವ ಪ್ರಯತ್ನ ಮಾಡಿದರು. ಇತರ ಪಂಥಗಳ ಜೊತೆಗೆ ದೇಶದಲ್ಲಿನ ಶೈವ, ಶಾಕ್ತ, ವೈಷ್ಣವ, ಗಾಣಪತ್ಯ, ಕಾಪಾಲಿಕ ಇತ್ಯಾದಿ ಸಂಪ್ರದಾಯಗಳು ಅವರೊಳಗೆ ಜಗಳವಾಡಿ ಧರ್ಮವನ್ನು ಒಳಗಿಂದಲೇ ಕೊರೆಯುತಿದ್ದುವು. ಕ್ರಮೇಣ ತಾಂತ್ರಿಕರ ಉದಯವಾಯಿತು ಹಾಗೂ ತಂತ್ರವಿದ್ಯೆಯ ಹೆಸರಿನಲ್ಲಿ ಅನಾಚಾರಗಳು ಹರಡಲು ಆರಂಭವಾದವು. ಉಪಾಸನೆಯ ಹೆಸರಿನಲ್ಲಿ ಸಾಮಾನ್ಯ ಜನರ ದಾರಿ ತಪ್ಪಿಸುವುದು ಆರಂಭವಾಯಿತು. ಅದರಿಂದ ಸಾಮಾನ್ಯ ಜನರು ಗೊಂದಲಕ್ಕೀಡಾಗಿದ್ದರು. ನಿಜವಾದ ಧರ್ಮವು ಮೂಲೆಗುಂಪಾಯಿತು. ಭಾರತದಲ್ಲಿ ಎಲ್ಲೆಡೆ ಧಾರ್ಮಿಕ ಅರಾಜಕತೆ ನಿರ್ಮಾಣವಾಗಿತ್ತು. ಇಂತಹ ಸಮಯದಲ್ಲಿ ಕೇರಳದ ಕಾಲಾಡಿಯಲ್ಲಿ ಆದಿಶಂಕರಾಚಾರ್ಯರ ಜನ್ಮವಾಯಿತು. ಅವರ ಹೆಸರು ಶಂಕರ ಎಂದಿತ್ತು. ಅವರು ಬಾಲ್ಯಾದಲ್ಲಿಯೇ ಮನೆಯನ್ನು ತ್ಯಜಿಸಿ ಸನ್ಯಾಸವನ್ನು ಸ್ವೀಕರಿಸಿದ್ದರು. ಗೋವಿಂದ ಯತಿಗಳು ಅವರನ್ನು ಶಿಷ್ಯರೆಂದು ಸ್ವೀಕರಿಸಿದರು. ಅವರಿಗೆ ವಿಧಿವತ್ತಾಗಿ ಸನ್ಯಾಸದೀಕ್ಷೆಯನ್ನು ನೀಡಿ ‘ಶಂಕರಾಚಾರ್ಯ’ ಎಂದು ನಾಮಕರಣವನ್ನು ಮಾಡಿದರು.

ಪೆಪಥೀ, ವೆಲಿನಾಡ್‌ನಲ್ಲಿನ ಆದಿಶಂಕರಾಚಾರ್ಯರ ಜನ್ಮಸ್ಥಾನ

ಇತರ ಪಂಥಗಳ ಜೊತೆಗೆ ದೇಶದಲ್ಲಿ ಶೈವ, ಶಾಕ್ತ, ವೈಷ್ಣವ, ಗಾಣಪತ್ಯ, ಕಾಪಾಲಿಕ ಮುಂತಾದವರಿಂದಾಗಿ ಹಿಂದೂ ಧರ್ಮವು ಸಂಕಟಕ್ಕೀಡಾಗಿತ್ತು. ಪ್ರಚಂಡ ಬುದ್ಧಿಶಕ್ತಿ ಮತ್ತು ತಪಶ್ಚರ್ಯೆಯ  ಪ್ರಭಾವದಿಂದ ಶಂಕರಾಚಾರ್ಯರು ಇತರ ಪಂಥಗಳ ತತ್ವಶಾಸ್ತ್ರವನ್ನು ವಿರೋಧಿಸಿ, ಅವರನ್ನು ಸೋಲಿಸಿ ಹಿಂದೂ ಧರ್ಮದ ಪುನರುತ್ಥಾನ ಮಾಡಿದರು. ಶಂಕರಾಚಾರ್ಯರು ವೈದಿಕ ಧರ್ಮದ ಮೇಲಿನ ಆಘಾತವನ್ನು ಹಿಮ್ಮೆಟ್ಟಿ ಧರ್ಮದಲ್ಲಿ ನಿರ್ಮಾಣವಾದ ವಿಕೃತಿಗಳನ್ನು ದೂರ ಮಾಡಿದರು, ಕಾಲದ ಪ್ರಭಾವದಿಂದ ಧರ್ಮದ ಮೇಲೆ ಬಂದಿರುವ ಸಂಕಟವನ್ನು ದೂರಗೊಳಿಸಿ ಆಚಾರಪ್ರಧಾನ ಮತ್ತು ಅದ್ವೈತಪ್ರಧಾನವಾದ ವೈದಿಕ ಧರ್ಮದ ಪ್ರಕಾಶವನ್ನು ಭಾರತಭೂಮಿಯಲ್ಲಿ ಎಲ್ಲೆಡೆ ಹರಡಿಸಿದರು; ಧರ್ಮಕ್ಕೆ ತೇಜತ್ವವು ಪ್ರಾಪ್ತಿಯಾಯಿತು. ಆದಿಶಂಕರಾಚಾರ್ಯರು ಓರ್ವ ಶ್ರೇಷ್ಠ ಯತಿ, ಗ್ರಂಥಕರ್ತ, ಅದ್ವೈತ ಮತದ ಪ್ರಚಾರಕ, ಸ್ತೋತ್ರ ರಚನಾಕಾರ ಮತ್ತು ಧರ್ಮಸಾಮ್ರಾಜ್ಯದ ಸಂಸ್ಥಾಪಕರಾಗಿದ್ದರು. ಈ ಲೋಕಕಲ್ಯಾಣ ಕಾರ್ಯದಿಂದ ಶಂಕರಾಚಾರ್ಯರು ‘ಜಗದ್ಗುರು’ ಆದರು.

೩ ಆ. ಆದಿಶಂಕರಾಚಾರ್ಯರಿಗೆ ಸಂಬಂಧಿಸಿದ ನಿರೀಕ್ಷಣೆಯ ಎಲ್ಲ ಘಟಕಗಳಲ್ಲಿ ಚೈತನ್ಯವು ಕಂಡುಬರುತ್ತದೆ : ‘ಆದಿಶಂಕರಾಚಾರ್ಯರು ಭಗವಾನ ಶಿವನ ಅವತಾರವಾಗಿದ್ದರು’, ಎಂಬ ನಂಬಿಕೆಯಿದೆ. ಅವರು ಹಿಂದೂ ಧರ್ಮದ ಪುನರುತ್ಥಾನದಂತಹ ಮಹತ್ವದ ಕಾರ್ಯವನ್ನು ಮಾಡಿದರು. ವೈದಿಕ ಹಿಂದೂ ಧರ್ಮವು ಭವಿಷ್ಯದಲ್ಲಿ ಶಾಶ್ವತವಾಗಿ ಉಳಿಯಬೇಕೆಂದು ಅವರು ಭಾರತದ ನಾಲ್ಕೂ ದಿಕ್ಕುಗಳಲ್ಲಿ ೪ ಧರ್ಮಪೀಠಗಳನ್ನು ಸ್ಥಾಪಿಸಿದರು. ಆದಿಶಂಕರಾಚಾರ್ಯರಿಗೆ ಸಂಬಂಧಿಸಿದ ನಿರೀಕ್ಷಣೆಯ ಎಲ್ಲ ಘಟಕಗಳಲ್ಲಿ ಚೈತನ್ಯವಿದ್ದ ಕಾರಣ ಅವುಗಳಲ್ಲಿ ಸಕರಾತ್ಮಕ ಶಕ್ತಿವು ಕಂಡುಬಂದಿದೆ. ಅದರ ವಿಶ್ಲೇಷಣೆಯನ್ನು ಮುಂದೆ ಕೊಡಲಾಗಿದೆ.

ಕಾಲಾಡಿಯಲ್ಲಿನ ಆದಿಶಂಕರಾಚಾರ್ಯ ಕೀರ್ತಿಸ್ತಂಭ

೩ ಆ೧. ಆದಿಶಂಕರಾಚಾರ್ಯರ ಬೆಳ್ಳಿಯ ಪಾದುಕೆಗಳಿಗೆ ಅರ್ಪಿಸಿದ ಹೂವುಗಳಲ್ಲಿ ಚೈತನ್ಯಮಯವಾಗಿರುವುದು : ಆದಿಶಂಕರಾಚಾರ್ಯ ಕೀರ್ತಿಸ್ತಂಭ, ಕಾಲಾಡಿಯಲ್ಲಿನ ಮಠದಲ್ಲಿ ಆದಿಶಂಕರಾಚಾರ್ಯರ ಬೆಳ್ಳಿಯ ಪಾದುಕೆಗಳಿವೆ. ಅವರ ಪಾದುಕೆಗಳಿಂದ ತುಂಬಾ ಚೈತನ್ಯವು ಪ್ರಕ್ಷೇಪಣೆಯಾಗುತ್ತದೆ. ಪಾದುಕೆಗಳಿಂದ ಪ್ರಕ್ಷೇಪಣೆಯಾಗುವ ಚೈತನ್ಯದ ಪ್ರಭಾವದಿಂದ ಪಾದುಕೆಗಳಿಗೆ ಅರ್ಪಿಸಿದ ಹೂವುಗಳಲ್ಲಿಯೂ ಚೈತನ್ಯ ನಿರ್ಮಾಣವಾಗಿದೆ.

೩ ಆ೨. ಹೋಮಕುಂಡದ ಭಸ್ಮದಲ್ಲಿ ಚೈತನ್ಯವಿರುವುದು : ಮಠದಲ್ಲಿನ ಹೋಮಕುಂಡದಲ್ಲಿ ನಡೆಯುವ ಹವನಗಳಿಂದಾಗಿ ವಾತಾವರಣದಲ್ಲಿ ಚೈತನ್ಯವು ಪ್ರಕ್ಷೇಪಣೆಯಾಗುತ್ತದೆ. ಹೋಮಕುಂಡದ ಭಸ್ಮದಲ್ಲಿಯೂ (ಬೂದಿಯಲ್ಲಿ) ಚೈತನ್ಯವಿದೆ.

೩ ಆ೩. ಆದಿಶಂಕರಾಚಾರ್ಯರ ತಾಯಿ ಆರ್ಯಂಬಾ ಇವರ ಸಾಧನೆಯಿಂದಾಗಿ ಅವರ ಸಮಾಧಿಸ್ಥಳವು ಚೈತನ್ಯಮಯವಾಗಿರುವುದು : ಕಾಲಾಡಿಯಲ್ಲಿ ಆದಿಶಂಕರಾಚಾರ್ಯರ ತಾಯಿ ಆರ್ಯಂಬಾ ಇವರ ಸಮಾಧಿಯಿದೆ. ಅವರು ಸಾತ್ವಿಕ ಸ್ವಭಾವದವರಾಗಿದ್ದರು. ಪತಿಯ ನಿಧನದನಂತರ ಅವರು ತಮ್ಮ ಪುತ್ರನ ಪಾಲನೆ-ಪೋಷಣೆ ಮಾಡಿದರು. ಮಗನು ಕಿರಿ ವಯಸ್ಸಿನಲ್ಲಿಯೇ ಸನ್ಯಾಸವನ್ನು ಸ್ವೀಕರಿಸಿ ತನ್ನನ್ನು ಧರ್ಮಕಾರ್ಯಕ್ಕಾಗಿ ಸಮರ್ಪಿಸಿಕೊಂಡರು. ಅವರು ಸ್ವತಃ ಕೂಡ ಸಾಧನೆ ಮಾಡುತಿದ್ದ ಕಾರಣ ಅವರು ಮಗನನ್ನು ಧರ್ಮಕಾರ್ಯಕ್ಕಾಗಿ ಸಮರ್ಪಿಸಿಕೊಳ್ಳಲು ಅನುಮತಿ ನೀಡಿದರು. ಅವರು ಮಗನಿಗೆ ಕೇವಲ ತನ್ನ ಒಂದು ಇಚ್ಛೆಯನ್ನು ನೆರವೇರಿಸಲು ಹೇಳಿದರು. ಅದೇನೆಂದರೆ, ‘ನನ್ನ ಅಂತ್ಯಕಾಲದಲ್ಲಿ ನೀನು ನನ್ನ ಸಮೀಪವಿರಬೇಕು’, ಎಂಬುದು. ಅದಕ್ಕನುಸಾರ ತಾಯಿಯ ಅಂತ್ಯ ಕಾಲದ ವಿಷಯ ಶಂಕರಾಚಾರ್ಯರಿಗೆ ದಿವ್ಯದೃಷ್ಟಿಯಿಂದ ತಿಳಿಯುತ್ತದೆ ಹಾಗೂ ಅವರು ಆ ಸಮಯದಲ್ಲಿ ತಾಯಿ ಇದ್ದಲ್ಲಿಗೆ ಹೋಗುತ್ತಾರೆ, ಅನಂತರ ತಾಯಿ ದೇಹತ್ಯಾಗ ಮಾಡುತ್ತಾರೆ. ತಾಯಿಗೆ ಸಮಾಧಿಯನ್ನು ನಿರ್ಮಾಣ ಮಾಡಲಾಗುತ್ತದೆ. ಅವರ ತಾಯಿಯ ಸಾಧನೆಯಿಂದಾಗಿ ಅವರ ಸಮಾಧಿಯ ಸ್ಥಳದಲ್ಲಿಯೂ ಚೈತನ್ಯವಿದೆ.

೩ ಆ೪. ಕಾಲಾಡಿಯಲ್ಲಿನ ಪೂರ್ಣಾ ನದಿಯ ನೀರು, ನದಿಯ ತೀರದ ಮಣ್ಣಿನಲ್ಲಿ ಸಾತ್ವಿಕತೆ ಇರುವುದು : ಭಾರತದ ಹೆಚ್ಚಿನ ನದಿಗಳ ತೀರದಲ್ಲಿ ದೇವಸ್ಥಾನಗಳು ಮತ್ತು ತೀರ್ಥಕ್ಷೇತ್ರಗಳಿವೆ. (ಹಿಂದಿನ ಕಾಲದಲ್ಲಿ ಋಷಿಮುನಿಗಳ ಆಶ್ರಮವೂ ನದಿಗಳ ಸಮೀಪವಿರುತಿತ್ತು.) ಅವರ ಚೈತನ್ಯದಿಂದಾಗಿ ಅಲ್ಲಿನ ವಾತಾವರಣವೂ ಸಾತ್ವಿಕವಾಗಿರುವುದರಿಂದ ಅಲ್ಲಿನ ನದಿಗಳ ನೀರು ಮತ್ತು ಅಲ್ಲಿನ ಮಣ್ಣಿನಲ್ಲಿ ಸಾತ್ವಿಕತೆ ಇರುತ್ತದೆ. ಆದಿಶಂಕರಾಚಾರ್ಯರ ಬಾಲ್ಯಾವಸ್ಥೆಯು ಕಾಲಾಡಿಯಲ್ಲಿ ಕಳೆಯಿತು. ಅವರಲ್ಲಿರುವ ಸಾತ್ವಿಕತೆಯಿಂದಾಗಿ ಅದು ತೀರ್ಥಕ್ಷೇತ್ರವಾಯಿತು.

೩ ಆ೫. ಆದಿಶಂಕರಾಚಾರ್ಯರ ಜನ್ಮಸ್ಥಾನದ (ಮನೆಯ) ನೀರು, ದೇವರ ಕೋಣೆಯ ಹೋಮಕುಂಡದ ಭಸ್ಮ ಮತ್ತು ಸುಗಂಧಭರಿತ ವಿಭೂತಿಯಲ್ಲಿ ಸಾತ್ವಿಕತೆ ಇರುವುದು : ಪೆಪಥೀ, ವೆಲಿನಾಡ್‌ನ ‘ಮೆಲಾಪುಝರಮಣ್ಣಾ’ದಲ್ಲಿ ಆದಿಶಂಕರಾಚಾರ್ಯರ ಜನ್ಮವಾಯಿತು. ಯಾವ ಕೋಣೆಯಲ್ಲಿ ಅವರ ಜನ್ಮವಾಯಿತೋ, ಆ ಕೋಣೆಯ ಹೊರಗೆ ಭಕ್ತರಿಗೆ ಹಚ್ಚಿಕೊಳ್ಳಲು ವಿಭೂತಿಯನ್ನು ಇಡಲಾಗುತ್ತದೆ. ಅದು ಸುಗಂಧಭರಿತವಾಗಿದೆ. ಅನೇಕ ಶತಮಾನಗಳ ನಂತರವೂ ಆದಿಶಂಕರಾಚಾರ್ಯರ ಜನ್ಮಸ್ಥಾನಕ್ಕೆ ಸಂಬಂಧಿಸಿದ ಘಟಕಗಳಲ್ಲಿ (ಮನೆಯ ನೀರಿನಲ್ಲಿ, ದೇವರ ಕೋಣೆಯ ಹೋಮಕುಂಡದಲ್ಲಿನ ಭಸ್ಮ ಮತ್ತು ಸುಗಂಧಯುಕ್ತ ವಿಭೂತಿ) ಸಾತ್ವಿಕತೆಯು ಶಾಶ್ವತವಾಗಿ ಉಳಿದಿದೆ.

೪. ಹಿಂದೂ ಧರ್ಮದಲ್ಲಿ ಸಂತರಿಗೆ ಸಂಬಂಧಿಸಿದ ವಸ್ತುಗಳನ್ನು ಜೋಪಾನ ಮಾಡುವ ಪ್ರಾಚೀನ ಪರಂಪರೆಯಿದೆ, ಏಕೆಂದರೆ ಸಂತರು ಮತ್ತು ಗುರುಗಳೆಂದರೆ ಈಶ್ವರನ ಸಗುಣರೂಪವಾಗಿರುತ್ತಾರೆ ! : ಅವರಲ್ಲಿ ತುಂಬಾ ಚೈತನ್ಯ ವಿರುತ್ತದೆ. ಅದರಿಂದ ಭಕ್ತರಿಗೆ, ಸಾಧಕರಿಗೆ ಮತ್ತು ಶಿಷ್ಯರಿಗೆ ಆಧ್ಯಾತ್ಮಿಕ ಲಾಭವಾಗುತ್ತದೆ. ಆದ್ದರಿಂದಲೆ ಇಂದಿನ ವಿಜ್ಞಾನಯುಗದಲ್ಲಿಯೂ ಭಕ್ತರು ಸಂತರ ಪಾದುಕೆಗಳಿಗೆ ಶರಣಾಗತರಾಗಿ ಶಿರಬಾಗಿ ನಮಸ್ಕಾರ ಮಾಡುತ್ತಾರೆ. ಅದೇ ರೀತಿ ಸಂತರ ಸಮಾಧಿಸ್ಥಳಕ್ಕೆ ಹೋಗಿ ಭಾವಪೂರ್ಣ ದರ್ಶನ ಪಡೆಯುತ್ತಾರೆ. ಸಂತರು ದೇಹತ್ಯಾಗ ಮಾಡಿದ ನಂತರವೂ ಅವರು ಸೂಕ್ಷ್ಮದಲ್ಲಿ ಭಕ್ತರ ಕರೆಗೆ ಓಗೊಟ್ಟು ಓಡಿ ಬಂದು ಅವರಿಗೆ ಅನುಭೂತಿಯನ್ನು ಕೊಡುತ್ತಾರೆ. ಹಿಂದೂ ಧರ್ಮದಲ್ಲಿ ಸಂತರ ಜನ್ಮಸ್ಥಾನ, ಅವರ ತಪೋಭೂಮಿ, ಅವರು ಸ್ಥಾಪಿಸಿದ ಮಠ ಅಥವಾ ಆಶ್ರಮ, ಅವರ ನಿತ್ಯೋಪಯೋಗದ ವಸ್ತುಗಳು ಮತ್ತು ಅವರ ಸಮಾಧಿಸ್ಥಾನ ಇತ್ಯಾದಿಗಳಲ್ಲಿ ತುಂಬಾ ಸಾತ್ವಿಕತೆ ಇರುವುದರಿಂದ ಅದನ್ನು ಜೋಪಾನ ಮಾಡುವ ಪರಂಪರೆಯು ನಡೆದುಬಂದಿದೆ.

– ಸೌ. ಮಧುರಾ ಧನಂಜಯ ಕರ್ವೆ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ, (೨೯.೪.೨೦೨೦) ವಿ-ಅಂಚೆ : [email protected]

Leave a Comment