ಕೊರೋನಾ ರೋಗಾಣು (ವೈರಸ್) ಸೋಂಕು ತಡೆಯಲು ಉಪಯುಕ್ತ ಮಾಹಿತಿ

೧. ನೊವೆಲ್ ಕೊರೊನಾ ರೋಗಾಣು (ವೈರಸ್) ಎಂದರೇನು ?

‘ಕೊರೋನಾ ರೋಗಾಣು, ಇದು ರೋಗಾಣುಗಳ ಒಂದು ದೊಡ್ಡ ಗುಂಪಿದ್ದು, ಈ ರೋಗಾಣುವಿನಿಂದ ನೆಗಡಿಯಂತಹ ಸಾಮಾನ್ಯ ರೋಗಗಳಿಂದ ಉಸಿರಾಟಕ್ಕೆ ಸಂಬಂಧಿಸಿದ ಗಂಭೀರ ರೋಗಗಳಿಗೆ ತುತ್ತಾಗಬಹುದು.

೨. ಈ ರೋಗ ಯಾವ ಮಾಧ್ಯಮದಿಂದ ಹರಡುತ್ತದೆ ?

ಅ. ಈ ರೋಗವು ಶೇ. ೮೦ ರಷ್ಟು ಕೈಗಳ ಮಾಧ್ಯಮದಿಂದ ಹರಡುತ್ತದೆ.

ಆ. ಈ ರೋಗಾಣುವಿನಿಂದ ಕಲುಷಿತಗೊಂಡ ಹೊರದೇಶದವರು ಬರುವ ಸ್ಥಳ, ಟಿಕೇಟು ಕೌಂಟರ್, ಬಾಗಿಲಿನ ಹಿಡಿಕೆ, ಮೆಟ್ಟಿಲು ಅಥವಾ ಲಿಫ್ಟ್‌ನ ಹ್ಯಾಂಡಲ್‌ಗಳನ್ನು ಮುಟ್ಟಿದ ಬಳಿಕ, ಅಲ್ಲದೇ ಕೈಯನ್ನು ತೊಳೆಯದೆಯೇ ಮುಖ, ಕಣ್ಣು ಅಥವಾ ಮೂಗನ್ನು ಸ್ಪರ್ಶಿಸಿದಾಗ ಈ ರೋಗ ಹರಡುತ್ತದೆ.

ಇ. ನೇರವಾಗಿ ಗಾಳಿಯಿಂದ ರೋಗಾಣು ಹರಡುವ ಪ್ರಮಾಣ ಶೇ. ೨೦ ಕ್ಕಿಂತ ಕಡಿಮೆಯಿದೆ.

ಈ. ಈ ರೋಗಾಣು ಜನದಟ್ಟಣೆಯ ಸ್ಥಳದಲ್ಲಿ ಹರಡುತ್ತದೆ. ಶಾಲೆ, ಸಂಸ್ಥೆ, ವಿಮಾನ, ವಾತಾನುಕೂಲಿತ ಬಸ್ಸು, ವಾತಾನುಕೂಲಿತ ರೇಲ್ವೆ ಡಬ್ಬಿ ಮುಂತಾದ ಸ್ಥಳಗಳಲ್ಲಿ ಈ ರೋಗ ಹರಡುವ ಪ್ರಮಾಣ ಅಧಿಕವಿರುತ್ತದೆ.

೩. ರೋಗದ ಲಕ್ಷಣಗಳು

ರೋಗ ತಗುಲಿದ ಬಳಿಕ ಶೀಘ್ರದಲ್ಲಿ ಎಂದರೆ ಎರಡು ದಿನಗಳಲ್ಲಿ ಮತ್ತು ತಡವಾಗಿ ಎಂದರೆ ೧೪ ದಿನಗಳಲ್ಲಿ ಜ್ವರ ಬರುವುದು, ಕೆಮ್ಮು ಬರುವುದು, ಉಸಿರಾಡಲು ತೊಂದರೆಯೆನಿಸುವುದು ಹಾಗೂ ಬೇಧಿಯಾಗುವುದು ಮುಂತಾದ ಲಕ್ಷಣಗಳು ಕಂಡುಬರುತ್ತವೆ.

೪. ರೋಗ ಬರಬಾರದು ಎಂದು ಪ್ರತಿದಿನ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮ

ಅ. ಕೈಯನ್ನು ತೊಳೆಯದೆಯೇ ಕಣ್ಣು, ಮೂಗು ಮತ್ತು ಮುಖವನ್ನು ಸ್ಪರ್ಶಿಸಬಾರದು.

ಆ. ಆಹಾರವನ್ನು ಬೇಯಿಸುವ ಮೊದಲು, ಅಡುಗೆ ಮಾಡುವಾಗ ಮತ್ತು ಅಡುಗೆ ಮಾಡಿದ ಬಳಿಕ, ತಿನ್ನುವ ಮೊದಲು, ಶೌಚಾಲಯಕ್ಕೆ ಹೋಗಿ ಬಂದ ಬಳಿಕ, ಯಾವಾಗ ಕೈಗಳ ಮೇಲೆ ಬಹಳ ಧೂಳು ಇರುತ್ತದೆಯೋ, ಆಗ ನಲ್ಲಿಯ ಹರಿಯುವ ನೀರಿನ ಕೆಳಗೆ ಸಾಬೂನಿನಿಂದ ಕೈಗಳನ್ನು ತೊಳೆಯುವುದು ಅಥವಾ ಅಲ್ಕೋಹಾಲ್ ಇರುವ ‘ಹ್ಯಾಂಡ್ ಕ್ಲೀನರ್ ಉಪಯೋಗಿಸುವುದು. ಜಾನುವಾರು, ಜಾನುವಾರುಗಳ ಖಾದ್ಯ ಅಥವಾ ಜಾನುವಾರುಗಳ ಮಲಗಳ ಸಂಪರ್ಕಕ್ಕೆ ಬಂದರೆ, ಹಲ್ತಲಾಘವ ಮಾಡಿದಾಗ ಅಲ್ಲದೇ ಕೆಮ್ಮು ಅಥವಾ ಸೀನು ಬಂದ ಬಳಿಕ, ರೋಗಿಯ ಸೇವೆಯನ್ನು ಮಾಡಿದ ಬಳಿಕ ಕೈಗಳನ್ನು ತೊಳೆದುಕೊಳ್ಳಬೇಕು. ಯಾವಾಗ ಕೈಗಳ ಮೇಲೆ ಅಧಿಕ ಪ್ರಮಾಣದಲ್ಲಿ ಧೂಳು ಇದ್ದರೆ, ಆಗ ೩೦ ಸೆಕೆಂಡ್ ವರೆಗೆ ಹರಿಯುವ ನೀರಿನ ಕೆಳಗೆ ಸಾಬೂನಿನಿಂದ ಕೈಗಳನ್ನು ತೊಳೆಯಬೇಕು. ಕೈಗಳಲ್ಲಿ ಧೂಳು ಸ್ವಲ್ಪ ಪ್ರಮಾಣದಲ್ಲಿದ್ದರೆ, ಶೇ. ೭೦ ರಷ್ಟು ಅಥವಾ ಅಧಿಕ ಪ್ರಮಾಣದಲ್ಲಿ ಅಲ್ಕೋಹಾಲ್ ಇರುವ ಸಾಬೂನಿನಿಂದ (ಕೈ ತೊಳೆಯುವ ದ್ರಾವಣದಿಂದ) ಕೈಗಳನ್ನು ಸ್ವಚ್ಛಗೊಳಿಸಬೇಕು.

ಇ. ಕೆಮ್ಮುವಾಗ ಅಥವಾ ಸೀನುವಾಗ ವಹಿಸಬೇಕಾದ ಮುನ್ನೆಚ್ಚರಿಕೆ

೪. ಇ. ೧. ಕೆಮ್ಮುವಾಗ ಅಥವಾ ಸೀನುವಾಗ ಮುಖಕ್ಕೆ ಟಿಶ್ಯೂ ಪೇಪರ್ ಅಥವಾ ಕರವಸ್ತ್ರ ಅಥವಾ ಅಂಗಿಯ ತೋಳನ್ನು ಹಿಡಿಯಬೇಕು. (ಕೈಗಳನ್ನು ತಪ್ಪಿಯೂ ಉಪಯೋಗಿಸಬಾರದು)

೪. ಇ. ೨. ಉಪಯೋಗಿಸಿದ ಟಿಶ್ಯೂ ಪೇಪರ್ ತಕ್ಷಣವೇ ಕಸದ ಬುಟ್ಟಿಗೆ ಎಸೆದು ಕಸದ ಬುಟ್ಟಿಯನ್ನು ತಕ್ಷಣವೇ ಮುಚ್ಚಬೇಕು.

೪. ಇ. ೩. ರೋಗಿಯ ಸೇವೆಯನ್ನು ಮಾಡುವವರು ಕೆಮ್ಮು ಅಥವಾ ಸೀನು ಬಂದಾಗ ಕೈಗಳನ್ನು ಸಾಬೂನು ಮತ್ತು ನೀರನ್ನು ಉಪಯೋಗಿಸಿ ಅಥವಾ ಕೈಗಳಿಗೆ ಹಚ್ಚುವ ಅಲ್ಕೋಹಾಲ್ ಮಿಶ್ರಿತ ದ್ರಾವಣದಿಂದ ಸ್ವಚ್ಛಗೊಳಿಸಬೇಕು.

೪. ಇ. ೪. ಆಹಾರವನ್ನು ಬೇಯಿಸುವಾಗ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ

ಅ. ಹಸಿ ಮತ್ತು ಬೇಯಿಸಿದ ಆಹಾರವನ್ನು ಮುಟ್ಟುವ ಮೊದಲು ಕೈಗಳನ್ನು ತೊಳೆಯಬೇಕು.

ಆ. ರೋಗಪೀಡಿತ ಜಾನುವಾರು ಮತ್ತು ಹಾಳಾಗಿರುವ ಮಾಂಸದ ಸಂಪರ್ಕದಿಂದ ದೂರವಿರಬೇಕು.

ಇ. ಅಲೆಮಾರಿ ಪ್ರಾಣಿಗಳು, ಮಾರುಕಟ್ಟೆ ತ್ಯಾಜ್ಯ ಪದಾರ್ಥಗಳು ಮತ್ತು ದ್ರವ ಪದಾರ್ಥಗಳಿಂದ ದೂರವಿರಿ.

ಈ. ಜೀವಂತವಿರುವ ಕಾಡು ಪ್ರಾಣಿಗಳು, ಸಾಕುಪ್ರಾಣಿಗಳು ಅಥವಾ ಕೃಷಿಗೆ ಉಪಯುಕ್ತವಿರುವ ಪ್ರಾಣಿಗಳೊಂದಿಗೆ ಅಸುರಕ್ಷಿತ ಸಂಪರ್ಕವನ್ನು ತಪ್ಪಿಸಿ.

ಉ. ಜಾನುವಾರುಗಳು ಅಥವಾ ಜಾನುವಾರುಗಳಿಂದ ಸಿಗುವ ಉತ್ಪನ್ನಗಳನ್ನು ನಿರ್ವಹಿಸುವಾಗ ಸುರಕ್ಷೆಗಾಗಿ ಯೋಗ್ಯ ಅಂಗಿ, ಕೈಗವಸು ಅಥವಾ ಮಾಸ್ಕ್‌ಗಳನ್ನು ಧರಿಸಬೇಕು.

ಊ. ರೋಗದ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ, ಮಾಂಸದ ಉತ್ಪನ್ನಗಳನ್ನು ತಿನ್ನುವಾಗ ಜಾಗರೂಕರಾಗಿರಿ. ಈ ಆಹಾರಗಳನ್ನು ಸರಿಯಾಗಿ ಬೇಯಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಿ. ಆಹಾರವನ್ನು ತಯಾರಿಸಿದ ನಂತರ ಸರಿಯಾಗಿ ನಿರ್ವಹಿಸುವಂತೆ ಕಾಳಜಿ ವಹಿಸಬೇಕು.

ಎ. ರೋಗಿಯ ಸಂಪರ್ಕಕ್ಕೆ ಬಾರದಂತೆ ಕಾಳಜಿ ವಹಿಸಿ.

ಏ. ಸಾರ್ವಜನಿಕವಾಗಿ ಉಗುಳುವುದನ್ನು ತಪ್ಪಿಸಿ.

ಒ. ಕೆಲಸದಲ್ಲಿರುವಾಗ ಕೆಲಸ ಮುಗಿದ ಬಳಿಕ ಕೆಲಸ ಮಾಡುವಾಗ ಬಳಸುವ ಸಂರಕ್ಷಣಾತ್ಮಕ ಬಟ್ಟೆಗಳನ್ನು ತೆಗೆದಿಡಬೇಕು, ಆಪ್ರಾನ್ ಪ್ರತಿದಿನ ತೊಳೆದು ಕೆಲಸದ ಸ್ಥಳದಲ್ಲಿಡಬೇಕು.

ಔ. ಕೆಲಸದಿಂದ ಬಂದ ಬಳಿಕ ಬೆವರಿನಿಂದ ಒದ್ದೆಯಾಗಿರುವ ಬಟ್ಟೆ ಮತ್ತು ಬೂಟುಗಳ ಸಂಪರ್ಕಕ್ಕೆ ಕುಟುಂಬದ ಇತರ ಸದಸ್ಯರು ಬಾರದಂತೆ ಜಾಗ್ರತೆ ವಹಿಸಬೇಕು.

ಅಂ. ಚೀನಾ ಅಥವಾ ದಕ್ಷಿಣ ಏಶಿಯಾಗಳಂತಹ ರೋಗ ಪೀಡಿತ ಪ್ರದೇಶಗಳಲ್ಲಿ ಪ್ರಯಾಣ ಮಾಡುವುದನ್ನು ರದ್ದುಪಡಿಸಬೇಕು.

೫. ರೋಗದ ಲಕ್ಷಣಗಳು ಕಂಡು ಬಂದರೆ ಏನು ಮಾಡಬೇಕು ?

ಅ. ಜ್ವರ, ಕೆಮ್ಮು ಅಥವಾ ಉಸಿರಾಡಲು ತೊಂದರೆಯಾಗುತ್ತಿದ್ದರೆ ಕೂಡಲೇ ವೈದ್ಯಕೀಯ ಚಿಕಿತ್ಸೆಯನ್ನು ತೆಗೆದುಕೊಳ್ಳಬೇಕು.

ಆ. ರೋಗಿಯ ಪ್ರಯಾಣದ ವಿಷಯದ ಮಾಹಿತಿಯನ್ನು ತಿಳಿದುಕೊಳ್ಳಬೇಕು.

೬. ರೋಗವನ್ನು ತಡೆಗಟ್ಟಲು ಮುನ್ನೆಚ್ಚರಿಕಾ ಕ್ರಮವೆಂದು ಯಾವಾಗಲೂ ಮತ್ತು ಸೂಕ್ತ ಪದ್ಧತಿಯಿಂದ ಮಾಸ್ಕ್ ಧರಿಸುವ ಪದ್ಧತಿ

ಅ. ಶಸ್ತ್ರಚಿಕಿತ್ಸೆ ಮಾಡುವಾಗ ಉಪಯೋಗಿಸುವ ಮೂರು ಪದರುಗಳುಳ್ಳ ಮಾಸ್ಕ್ ಶೇ. ೯೦ ರಷ್ಟು ಪ್ರಭಾವಿಯಾಗಿರುತ್ತದೆ.

ಆ. ರೋಗವಿದ್ದಾಗ ಅಥವಾ ರೋಗಪೀಡಿತ ವ್ಯಕ್ತಿಯೊಂದಿಗೆ ಸಂಪರ್ಕದಲ್ಲಿದ್ದಾಗ, ಆಸ್ಪತ್ರೆಗೆ ಅಥವಾ ಜನದಟ್ಟಣೆಯ ಸ್ಥಳಕ್ಕೆ ಹೋಗಲಿಕ್ಕಿದ್ದಾಗ ಮಾಸ್ಕ್ ಉಪಯೋಗಿಸಬೇಕು.

ಇ. ಮಾಸ್ಕ್ ೪ ರಿಂದ ೬ ಗಂಟೆಗಳವರೆಗೆ ಉಪಯೋಗಿಸಿದ ಬಳಿಕ ಎಸೆಯಬೇಕು.

೭. ಇನ್ನಿತರ ಕೆಲವು ಮಹತ್ವದ ಕೃತಿಗಳು

ಅ. ರೋಗಿ ವ್ಯಕ್ತಿಯಿಂದ ಒಂದು ಕೈಯಳತೆಗಿಂತ ಹೆಚ್ಚು ದೂರದಲ್ಲಿರಬೇಕು.

ಆ. ನೈಸರ್ಗಿಕ ಪ್ರಕಾಶ ಮತ್ತು ಗಾಳಿಯಾಡುವ ಜಾಗದಲ್ಲಿರಬೇಕು.

ಇ. ನಾವು ಉಪಯೋಗಿಸುತ್ತಿರುವ ವಸ್ತುವಿನ ತಳಭಾಗವನ್ನು ಶೇ. ೧ ರಷ್ಟು ‘ಐಸೋಲ್ ಈ ದ್ರಾವಣದಿಂದ ರೋಗಾಣುಮುಕ್ತಗೊಳಿಸಬೇಕು.

ಈ. ಸಾಕಷ್ಟು ನಿದ್ರಿಸಬೇಕು.

ಉ. ಸಾಕಷ್ಟು ನೀರು ಕುಡಿಯಿರಿ ಮತ್ತು ಪೌಷ್ಠಿಕ ಆಹಾರವನ್ನು ಸೇವಿಸಿ.

– ಡಾ. ಪಾಂಡುರಂಗ ಮರಾಠೆ , ಸನಾತನ ಆಶ್ರಮ, ರಾಮನಾಥಿ, ಗೋವಾ

facebook.com/sanatan.org