ಸನಾತನದ ಸಂತರ ಬೋಧನೆ ಮತ್ತು ಸಾಧಕರಿಗೆ ಕಲಿಯಲು ಸಿಕ್ಕಿದ ಅಂಶಗಳು

ಸಾಧಕರ ವ್ಯಷ್ಟಿಯೊಂದಿಗೆ ಸಮಷ್ಟಿ ಸಾಧನೆಯ ಪ್ರಯತ್ನವು ತಳಮಳದಿಂದ ಮತ್ತು ಭಾವಪೂರ್ಣವಾಗಲು ಅವರಿಗೆ ದಿಶೆ ನೀಡಿ ಎಲ್ಲ ರೀತಿಯಿಂದ ಸಿದ್ಧಪಡಿಸುವ ಸದ್ಗುರು ರಾಜೇಂದ್ರ ಶಿಂದೆ !

                          ಸದ್ಗುರು ರಾಜೇಂದ್ರ ಶಿಂದೆ
                       ವೈದ್ಯ (ಕು.) ಮಾಯಾ ಪಾಟೀಲ

ಸದ್ಗುರು ರಾಜೇಂದ್ರ ಶಿಂದೆಯವರು ದೇವದ ಆಶ್ರಮದಲ್ಲಿನ ಸಾಧಕರ ವ್ಯಷ್ಟಿ ಸಾಧನೆಯ ವರದಿ ತೆಗೆದುಕೊಳ್ಳುತ್ತಾರೆ. ಸದ್ಗುರು ರಾಜೇಂದ್ರ ಶಿಂದೆಯವರು ತೆಗೆದುಕೊಳ್ಳುತ್ತಿದ್ದ ವರದಿಯಿಂದ ಸಾಧಕರಲ್ಲಿ ಅಮೂಲಾಗ್ರ ಬದಲಾವಣೆಯಾಗುತ್ತಿರುವುದರ ಅರಿವಾಗುತ್ತಿದೆ. ಪರಾತ್ಪರ ಗುರುದೇವರ ಕೃಪೆಯಿಂದಾಗಿ ನನಗೆ ಸದ್ಗುರು ರಾಜೇಂದ್ರ ಶಿಂದೆಯವರು ತೆಗೆದುಕೊಳ್ಳುತ್ತಿರುವ ಸಾಧಕರ ವ್ಯಷ್ಟಿ ಸಾಧನೆಯ ವರದಿಯಲ್ಲಿ ಕಲಿಯಲು ಕುಳಿತುಕೊಳ್ಳುವ ಅವಕಾಶ ಸಿಕ್ಕಿತು. ನನಗೆ ವರದಿಯಲ್ಲಿ ಅನೇಕ ವಿಷಯಗಳು ಕಲಿಯಲು ಸಿಕ್ಕಿದವು. ನಾನು ಸ್ವಭಾವದೋಷ ಮತ್ತು ಅಹಂ ಇವುಗಳ ನಿರ್ಮೂಲನೆಯ ಪ್ರಕ್ರಿಯೆಯೆಡೆಗೆ ಸಹಜವಾಗಿ ನೋಡುತ್ತಿದ್ದೆನು, ಎಂದು ನನ್ನ ಗಮನಕ್ಕೆ ಬಂದಿತು ಮತ್ತು ಸದ್ಗುರು ದಾದಾರವರು  ಕಲಿಸಿದಂತೆ ಸಾಧಕರು ಗಾಂಭೀರ್ಯದಿಂದ ಈ ಪ್ರಕ್ರಿಯೆ ಮಾಡಿದರೆ ಗುರುದೇವರ ಅಪೇಕ್ಷೆಯಂತೆ ಸಾಧಕರಲ್ಲಿ ಶೀಘ್ರವಾಗಿ ಬದಲಾವಣೆಯಾಗುವುದು ಎಂದು ನನಗೆ ಅನಿಸಿತು. ಸದ್ಗುರು ದಾದಾರವರು ಎಲ್ಲ ಸಾಧಕರ ವರದಿ ತೆಗೆದುಕೊಳ್ಳಲು ಆಗುವುದಿಲ್ಲ; ಆದರೆ ಅವರು ಹೇಳಿದ ಅಂಶಗಳನ್ನು ಎಲ್ಲ ಸಾಧಕರವರೆಗೆ ತಲುಪಿ ಅವರು ಸ್ವತಃ ಬದಲಾವಣೆ ಮಾಡಿಕೊಂಡರೆ ಎಲ್ಲರೂ ಆನಂದದಿಂದ ಇರಬಹುದು. ಸದ್ಗುರು ದಾದಾರವರು ಹೇಳಿದಂತೆ ಪ್ರಯತ್ನಿಸಿದರೆ ಸಾಧಕರ ವ್ಯಷ್ಟಿ ಸಾಧನೆಯ ಪ್ರಯತ್ನವು ನಿಯಮಿತವಾಗುವುದು ಮತ್ತು ಅವರು ಗುರುದೇವರ ಅಪೇಕ್ಷೆಯಂತೆ ಆನಂದವನ್ನು ಅನುಭವಿಸಬಹುದು. ನಾನು ಈ ಅಂಶಗಳನ್ನು ಅವರ ಚರಣಗಳಲ್ಲಿ ಕೃತಜ್ಞತಾಭಾವದಿಂದ ಅರ್ಪಿಸುತ್ತೇನೆ.

ಹೇ ಶ್ರೀಕೃಷ್ಣಾ, ಸದ್ಗುರು ದಾದಾರವರ ವರದಿಯಲ್ಲಿನ ಎಲ್ಲ ಅಂಶಗಳು ನಿನ್ನ ಅಪೇಕ್ಷೆಯಂತೆ ಎಲ್ಲರಿಗೂ ತಿಳಿಯಲಿ ಮತ್ತು ಅದರಂತೆ ಸಾಧಕರಿಂದ ಪ್ರಯತ್ನವಾಗಲಿ ಎಂದು ನಿನ್ನ ಚರಣಗಳಲ್ಲಿ ಪ್ರಾರ್ಥನೆ !

ಆಧುನಿಕ ವೈದ್ಯ (ಕು.) ಮಾಯಾ ಪಾಟೀಲರವರು ಸದ್ಗುರು ರಾಜೇಂದ್ರ ಶಿಂದೆಯವರು ತೆಗೆದುಕೊಳ್ಳುತ್ತಿದ್ದ ವ್ಯಷ್ಟಿ ಸಾಧನೆಯ ವರದಿಯ ವಿಷಯದಲ್ಲಿನ ಅತ್ಯುತ್ತಮ ಲೇಖನವನ್ನು ಬರೆದಿದ್ದಾರೆ. ಈ ಅತ್ಯುತ್ತಮ ಲೇಖನದ ಬಗ್ಗೆ ಅವರನ್ನು ಎಷ್ಟು ಪ್ರಶಂಸಿಸಿದರೂ ಕಡಿಮೆಯೇ ಆಗಿದೆ. ಹಾಗೆಯೇ ಸದ್ಗುರು ರಾಜೇಂದ್ರ ಶಿಂದೆಯವರು ಸ್ವಭಾವದೋಷ ಮತ್ತು ಅಹಂ ಇವುಗಳ ನಿರ್ಮೂಲನೆ ಪ್ರಕ್ರಿಯೆಯ ಉತ್ತಮ ವಿಧಾನವನ್ನು ಹುಡುಕಿದ್ದಾರೆ. ಈ ಲೇಖನವನ್ನು ನಾವು ಗ್ರಂಥದಲ್ಲಿ ತೆಗೆದುಕೊಳ್ಳುವರಿದ್ದೇವೆ, ಇದರಿಂದ ಸದ್ಗುರು ರಾಜೇಂದ್ರ ಶಿಂದೆಯವರ ಬೋಧನೆಯು ಯಾವಾಗಲೂ ಎಲ್ಲರಿಗೂ ಸಿಗುವುದು. ಸಾಧಕರು ಈ ಲೇಖನವನ್ನು ಕೇವಲ ಓದದೇ ಅದರಲ್ಲಿ ಹೇಳಿರುವಂತೆ ಪ್ರಯತ್ನಿಸಿದರೆ ಶೀಘ್ರ ಪ್ರಗತಿಯಾಗುವುದು. ಸಾಧಕರು ಈ ಲೇಖನವನ್ನು ಸಂಗ್ರಹಿಸಬೇಕು. ಆಗಾಗ ಅದರ ಅಧ್ಯಯನ ಮಾಡಬೇಕು ಮತ್ತು ಇತರ ಸಾಧಕರಿಗೂ ಹೇಳಬೇಕು. – (ಪರಾತ್ಪರ ಗುರು) ಡಾ. ಆಠವಲೆ

೧. ವ್ಯಷ್ಟಿ ಸಾಧನೆಯ ವರದಿಯಲ್ಲಿ ಕುಳಿತುಕೊಳ್ಳುವ ಮೊದಲು ಮತ್ತು ನಂತರದ ಸಾಧಕರ ಸ್ಥಿತಿ

ಸದ್ಗುರು ದಾದಾರವರು ತೆಗೆದುಕೊಳ್ಳುತ್ತಿದ್ದ ವರದಿಯಲ್ಲಿನ ಎಲ್ಲ ಅಂಶಗಳನ್ನು ನಾವು ಸ್ವತಃ ವರದಿ ಸೇವಕರಿದ್ದೇವೆ ಎಂಬ ಭಾವವಿಟ್ಟು ಕೃತಿಯಲ್ಲಿ ತಂದರೆ ನಮಗೆ ಅದರಿಂದ ತುಂಬಾ ಲಾಭವಾಗುವುದು. ನನಗೆ ಸದ್ಗುರು ದಾದಾರವರು ತೆಗೆದುಕೊಳ್ಳುತ್ತಿದ್ದ ಸಾಧಕರ ವ್ಯಷ್ಟಿ ಸಾಧನೆಯ ವರದಿಯಲ್ಲಿ ಕುಳಿತುಕೊಳ್ಳುವ ಅವಕಾಶ ಸಿಕ್ಕಿರುವುದರಿಂದ ವರದಿಗೆ ಬರುವ ಮೊದಲು ಸಾಧಕರ ಸ್ಥಿತಿ, ಸದ್ಗುರು ದಾದಾರವರು ಅವರಿಂದ ಮಾಡಿಸಿಕೊಂಡ ಪ್ರಯತ್ನ ಮತ್ತು ಸಾಧಕರಲ್ಲಾದ ಬದಲಾವಣೆಯು ನನಗೆ ಹತ್ತಿರದಿಂದ ಅನುಭವಿಸಲು ಸಿಕ್ಕಿತು.

೧ ಅ. ವರದಿಗೆ ಬರುವ ಮೊದಲು ಸಾಧಕರ ವ್ಯಷ್ಟಿ ಸಾಧನೆ ಬಗ್ಗೆ ಇದ್ದ ಉದಾಸೀನತೆ  : ಸದ್ಗುರು ದಾದಾರವರು ತೆಗೆದುಕೊಳ್ಳುತ್ತಿರುವ ವ್ಯಷ್ಟಿ ಸಾಧನೆಯ ವರದಿಗೆ ಕುಳಿತುಕೊಳ್ಳುವ ಮೊದಲು ಸಾಧಕರಿಂದ ವ್ಯಷ್ಟಿ ಸಾಧನೆಯ ಪ್ರಯತ್ನವು ನಿಯಮಿತವಾಗಿ ಆಗುತ್ತಿರಲಿಲ್ಲ. ಹೀಗಾಗಿ ಅನೇಕ ಸಾಧಕರ ಮನಸ್ಸಿನಲ್ಲಿ ಕೀಳರಿಮೆ ಇರುತ್ತಿತ್ತು. ನಮ್ಮಿಂದ ಪ್ರಯತ್ನವಾಗುವುದಿಲ್ಲವೆಂದು ಪ್ರತಿಯೊಬ್ಬ ಸಾಧಕನಿಗೆ ಖೇದವೆನಿಸುತ್ತಿತ್ತು. ಕೆಲವರ ಮನಸ್ಸಿನಲ್ಲಿಯೂ ಅದರ ಬಗ್ಗೆ ಸ್ವಲ್ಪ ಪ್ರಮಾಣದಲ್ಲಿ ನಕಾರಾತ್ಮಕವಿತ್ತು. ಕೆಲವು ಸಾಧಕರಿಗೆ ನಮಗೆ ಇದೆಲ್ಲ ಆಗುವುದಿಲ್ಲ ಎಂದು ಅನಿಸುತ್ತಿತ್ತು. ಕೆಲವರಿಗೆ ನಮಗೆ ತುಂಬಾ ಸೇವೆಯಿರುವುದರಿಂದ ಸಾಧನೆಯ ಎಲ್ಲ ಪ್ರಯತ್ನಗಳನ್ನು ಮಾಡಲು ಆಗುವುದಿಲ್ಲ, ಎಂದು ಎನಿಸುತ್ತಿತ್ತು.

೧ ಆ. ಸದ್ಗುರು ರಾಜೇಂದ್ರ ಶಿಂದೆಯವರು ವ್ಯಷ್ಟಿ ಸಾಧನೆಯ ವರದಿ ತೆಗೆದುಕೊಳ್ಳಲು ಪ್ರಾರಂಭಿಸಿದ ಮೇಲೆ ಕೆಲವು ದಿನಗಳಲ್ಲಿಯೇ ಸಾಧಕರಲ್ಲಾದ ಸಕಾರಾತ್ಮಕತೆ  : ಸದ್ಗುರು ದಾದಾರವರು ಮೊದಲು ಸಾಧಕರಿಗೆ ಸಕಾರಾತ್ಮಕ ಮತ್ತು ಒತ್ತಡಮುಕ್ತ ಮಾಡುತ್ತಿದ್ದರು. ಅವರು ಸಾಧಕರಿಗೆ ಮನಸ್ಸಿಗೆ ವ್ಯಷ್ಟಿ ಸಾಧನೆ ಮಾಡುವ ಅಭ್ಯಾಸ ಹೇಗೆ ಮಾಡಿಕೊಳ್ಳಬೇಕು ?, ಎಂಬುದನ್ನು ಕಲಿಸುತ್ತಾರೆ. ಸಾಧಕರಿಂದ ವ್ಯಷ್ಟಿ ಸಾಧನೆಯ ಪ್ರಯತ್ನವು ನಿಯಮಿತವಾಗಿ ಆಗದಿದ್ದರೆ ಅದಕ್ಕಾಗಿ ನಿಯಮಿತವಾಗಿ ಹೇಗೆ ಪ್ರಯತ್ನಿಸಬೇಕು ? , ಎಂಬುದನ್ನು ಕಲಿಸುತ್ತಾರೆ. ಹೀಗಾಗಿ ಸಾಧಕರಿಗೆ ಸತತವಾಗಿ ಪ್ರಯತ್ನಿಸುವ ಸ್ಫೂರ್ತಿ ದೊರೆತು ಕೆಲವು ದಿನಗಳಲ್ಲಿ ಅವರಲ್ಲಿ ಅಮೂಲಾಗ್ರ ಸಕಾರಾತ್ಮಕ ಬದಲಾವಣೆಯಾಗುತ್ತದೆ. ಸಾಧಕರು ವ್ಯಷ್ಟಿ ಸಾಧನೆಯ ಪ್ರಯತ್ನಗಳನ್ನು ಇಷ್ಟಪಟ್ಟು ಮಾಡುತ್ತಾರೆ.

೨. ಸದ್ಗುರು ರಾಜೇಂದ್ರ ದಾದಾರವರು ವರದಿಯ ಮೂಲಕ ಸಾಧಕರ ವ್ಯಷ್ಟಿ ಸಾಧನೆಯು ಸರಿಯಾಗಲು ಮಾಡುತ್ತಿದ್ದ ಸಹಾಯ

೨ ಅ. ಸಾಧಕರಿಗೆ ಕೃತಿ ಮಾಡಲು ಪ್ರೋತ್ಸಾಹ ನೀಡುವುದು : ಸದ್ಗುರು ರಾಜೇಂದ್ರ ದಾದಾರವರು ಸಾಧಕರಿಗೆ ಮುಂದಿನಂತೆ ಸಹಾಯ ಮಾಡುತ್ತಾರೆ.

೧. ಸಾಧಕರು ಯಾವ ಸ್ಥಿತಿಯಲ್ಲಿದ್ದಾರೋ ಹಾಗೆಯೇ ಅವರನ್ನು ಸ್ವೀಕರಿಸಿ ಅವರಿಗೆ ಮುಂದಿನ ದಿಶೆ ನೀಡಿ ಪ್ರಯತ್ನ ಮಾಡಲು ಹೇಳುವುದು

೨. ಸಾಧಕರಿಗೆ ಕೃತಿಶೀಲರಾಗಲು ಸತತ ಪ್ರೋತ್ಸಾಹಿಸುವುದು

೩. ಸಾಧಕರಿಗೆ ಆರಂಭದಲ್ಲಿ ಭಾವ ಪ್ರಯೋಗ ಮತ್ತು ಸ್ವಯಂಸೂಚನೆ ಸತ್ರಗಳನ್ನು ಹೆಚ್ಚೆಚ್ಚು ಆಗುವಂತೆ ಪ್ರಯತ್ನಿಸಲು ಹುರಿದುಂಬಿಸುವುದು ಹಾಗೂ ಅದರ ಮಹತ್ವವನ್ನು ಸಾಧಕರ ಮನಸ್ಸಿನಲ್ಲಿ ಬಿಂಬಿಸುವುದು

೪. ವ್ಯಷ್ಟಿ ಸಾಧನೆಯ ಅಂತರ್ಗತ ಯಾವ ಪ್ರಯತ್ನ ಮಾಡುವಿರಿ ? ಎಂದು ಸಾಧಕನಿಗೆ ಧ್ಯೇಯ ನಿಶ್ಚಯಿಸಲು ಹೇಳುವುದು

೫. ಸಾಧಕನ ಮನಸ್ಸಿನಲ್ಲಿ ಅಯೋಗ್ಯ ದೃಷ್ಟಿಕೋನವಿದ್ದರೆ ಅವನಿಗೆ ಅದರ ಬಗ್ಗೆ ಚಿಂತನೆ ಮಾಡಲು ಹೇಳಿ ಸಕಾರಾತ್ಮಕ ಮಾಡುವುದು

೬. ಆಧ್ಯಾತ್ಮಿಕ ತೊಂದರೆಯಿರುವ ಸಾಧಕರಿಗೆ ಅವರನ್ನು ಅರಿತುಕೊಂಡು ಅವರಿಗೆ ನಿಯಮಿತವಾಗಿ ಮತ್ತು ಪರಿಣಾಮಕಾರಿಯಾಗಿ ಉಪಾಯಗಳನ್ನು ಮಾಡಲು ಹೇಳುವುದು

೨ ಆ. ಸಾಧಕರ ಮನಃಸ್ಥಿತಿಯನ್ನು ಅರಿತುಕೊಳ್ಳುವುದು : ಸದ್ಗುರು ದಾದಾರವರು ಮೊದಲ ವರದಿಯಲ್ಲಿ ಎಲ್ಲರೊಂದಿಗೆ ಅರ್ಧಗಂಟೆ ಮಾತನಾಡುತ್ತಾರೆ. ಅವರು ಸಾಧಕರಿಗೆ ಕೃತಿ ಮಾಡಲು ಪ್ರೇರಣೆ ನೀಡುತ್ತಾರೆ. ಅವರು ಪ್ರತಿಯೊಬ್ಬ ಸಾಧಕನಿಗೆ ಅವನ ವ್ಯಷ್ಟಿ ಸಾಧನೆಯ ಸ್ಥಿತಿಯನ್ನು ಬರೆದುಕೊಡಲು ಹೇಳಿ ಅವರಲ್ಲಿರುವ ತೀವ್ರ ಮತ್ತು ಮಧ್ಯಮ ಸ್ವರೂಪದ ಸ್ವಭಾವ ದೋಷ ಮತ್ತು ಅಹಂ ಇವುಗಳನ್ನು ಪಟ್ಟಿ ಮಾಡಲು ಹೇಳುತ್ತಾರೆ. ಅವರು ಸಾಧಕರಿಗೆ ಬಂದ ಅಡಚಣೆ, ಅವರ ಮನಸ್ಸಿನಲ್ಲಿರುವ ಒತ್ತಡದ ವಿಚಾರಗಳು, ಸಾಧಕರ ಸ್ವಭಾವದೋಷ ಹಾಗೂ ಅವರು ನೀಡುತ್ತಿರುವ ಸೂಚನೆ, ಹಾಗೆಯೇ ಸಾಧಕರು ಎಲ್ಲಿ ಸಿಲುಕಿಕೊಂಡಿದ್ದಾರೆ, ಎಂಬುದರ ಬಗ್ಗೆ ಚಿಂತನೆ ಇತ್ಯಾದಿಗಳ ವಿಷಯಗಳನ್ನು ಬರೆದುಕೊಡಲು ಹೇಳುತ್ತಾರೆ. ಇದರಿಂದ ಅವರಿಗೆ ಸಾಧಕರ ಸ್ಥಿತಿ ತಿಳಿಯುತ್ತದೆ.

೨ ಇ. ಸಾಧಕರಿಗೆ ವರದಿಯಲ್ಲಿ ಒತ್ತಡ ಬಂದಿದ್ದರೆ ಅದರ ಕಾರಣವನ್ನು ತಿಳಿದುಕೊಂಡು ಅವರನ್ನು ಒತ್ತಡಮುಕ್ತರನ್ನಾಗಿ ಮಾಡುವುದು : ಅವರು ಸಾಧಕರಿಗೆ ನಾನು ವರದಿ ತೆಗೆದುಕೊಳ್ಳುತ್ತೇನೆಂದು ಯಾರಿಗಾದರೂ ಒತ್ತಡವಾಗುತ್ತಿದೆಯೇ ? ಎಂದು ಕೇಳುತ್ತಾರೆ ಮತ್ತು ಸಾಧಕರಿಗೆ ಬಂದ ಒತ್ತಡವನ್ನು ದೂರಗೊಳಿಸುತ್ತಾರೆ. ಆಗ ಸಾಧಕರಿಗೆ ಒತ್ತಡವಾಗದೇ ಆನಂದವೇ ಸಿಗುತ್ತಿದೆ ಎಂದು ಗಮನಕ್ಕೆ ಬಂದಿತು. ಸಾಧಕರಿಗೆ ನಂತರ ಎಂದಿಗೂ ಯಾವುದೇ ಕಾರಣಕ್ಕೂ ಪುನಃ ಒತ್ತಡ ಬಂದರೆ ಅವರು ತಕ್ಷಣ ಅದರ ಬಗ್ಗೆ ಮಾತನಾಡಲು ಹೇಳುತ್ತಾರೆ. ಅವರು ಸಾಧಕರನ್ನು ಮೊದಲ ವರದಿಯಲ್ಲಿಯೇ ಒತ್ತಡಮುಕ್ತರನ್ನಾಗಿ ಮಾಡುತ್ತಾರೆ ಮತ್ತು ನಿಯಮಿತವಾಗಿ ಪ್ರಯತ್ನಿಸಿದರೆ ನೀವು ಆನಂದದಲ್ಲಿರಬಹುದು ಎಂದು ಹೇಳಿ ಸಾಧಕರಿಗೆ ಭರವಸೆ ನೀಡುತ್ತಾರೆ.

೨ ಈ. ವ್ಯಷ್ಟಿ ಸಾಧನೆಯ ಪ್ರಯತ್ನ ಮಾಡುವ ಧ್ಯೇಯವನ್ನಿಟ್ಟುಕೊಳ್ಳಲು ಹೇಳುವುದು : ಅವರು ಸಾಧಕರನ್ನು ವ್ಯಷ್ಟಿ ಸಾಧನೆಯ ಯಾವ ಪ್ರಯತ್ನ ಮಾಡುವಿರಿ ?, ಎಂದು ಕೇಳಿಕೊಳ್ಳುತ್ತಾರೆ. ಸಾಧಕರಿಗೆ ತಮಗೆ ಸಾಧ್ಯವಾಗುವಂತಹ ಪ್ರಯತ್ನ ಮಾಡುವ ಧ್ಯೇಯವನ್ನು ಹೇಳುತ್ತಾರೆ ಮತ್ತು ಅದನ್ನು ಮಾಡಲು ಪ್ರೋತ್ಸಾಹಿಸುತ್ತಾರೆ.

೨ ಉ. ಸಾಧಕರಿಗೆ ಸಹಜವಾಗಿ ಸಾಧ್ಯವಾಗುವ ಪ್ರಯತ್ನವನ್ನು ಮಾಡಲು ಹೇಳುವುದು : ಸದ್ಗುರು ರಾಜೇಂದ್ರದಾದಾರವರು ವ್ಯಷ್ಟಿ ಸಾಧನೆಯ ವರದಿಯಲ್ಲಿ ಮೊದಲು ಒಂದು ತಿಂಗಳು ಯಾರಿಗೂ ಯಾವುದೇ ಬಂಧನ ಹಾಕುವುದಿಲ್ಲ. ಅವರು ಪ್ರತಿಯೊಬ್ಬರಿಗೆ ವ್ಯಷ್ಟಿ ಸಾಧನೆಯ ಅಂತರ್ಗತ ಯಾವ ಪ್ರಯತ್ನವನ್ನು ಸಹಜವಾಗಿ ಮಾಡಲು ಸಾಧ್ಯವಿದೆಯೋ ಅದನ್ನು ಮತ್ತು ಅದರ ವರದಿಯನ್ನು ಪ್ರತಿದಿನ ವಾಟ್ಸ್‌ಆಪ್‌ನಲ್ಲಿ ಕಳುಹಿಸಲು ಹೇಳುತ್ತಾರೆ. ಸದ್ಗುರು ದಾದಾರವರು ಸಾಧಕರ ಮೇಲೆ ಯಾವುದೇ ಬಂಧನ ಹಾಕುವುದಿಲ್ಲ, ಆದರೂ ಪ್ರತಿಯೊಬ್ಬ ಸಾಧಕನಿಗೆ ವ್ಯಷ್ಟಿ ಸಾಧನೆಯ ಪ್ರಯತ್ನ ಮಾಡಬೇಕೆನಿಸುತ್ತದೆ.

೨ ಊ. ಭಾವಜಾಗೃತಿಯ ಪ್ರಯತ್ನ ಮಾಡುವ ಮಹತ್ವವನ್ನು ಮನಸ್ಸಿನಲ್ಲಿ ಬಿಂಬಿಸುವುದು : ಅವರು ಸಾಧಕರಿಗೆ ಭಾವಜಾಗೃತಿಯ ಪ್ರಯತ್ನವನ್ನು ನಿಯಮಿತವಾಗಿ ಮತ್ತು ಹೆಚ್ಚೆಚ್ಚು ಹೇಗೆ ಮಾಡುವುದು ? ಎಂಬುದರ ಕಡೆಗೆ ಗಮನವಿಡಲು ಹೇಳುವುದು, ಅವರು ಸಾಧಕರ ಮನಸ್ಸಿಗೆ ಭಾವ ಜಾಗೃತಿಯ ಪ್ರಯತ್ನ ಮಾಡಲು ಬಿಂಬಿಸುವಾಗ ವಿವಿಧ ಉದಾಹರಣೆಗಳನ್ನು ನೀಡುತ್ತಾರೆ. ಭಾವಜಾಗೃತಿಗಾಗಿ ಮಾಡಿದ ಪ್ರತಿಯೊಂದು ಪ್ರಯತ್ನದಿಂದ ಮನಸ್ಸಿಗೆ ಸಕಾರಾತ್ಮಕ ಶಕ್ತಿ ಸಿಗುತ್ತದೆ.

೨ ಎ. ದೇವರ ಅನುಸಂಧಾನದಲ್ಲಿರಲು ಧ್ಯೇಯವನ್ನಿಟ್ಟು ಪ್ರಯತ್ನ ಮಾಡಲು ಹೇಳುವುದು : ಅವರು ಸಾಧಕರಿಗೆ ಮನಸ್ಸಿಗೆ ವ್ಯಷ್ಟಿ ಸಾಧನೆ ಮಾಡಲು ಅಭ್ಯಾಸ ಮಾಡುವುದು, ಗುರುದೇವರ ಸ್ಮರಣೆ ಮಾಡುವುದು, ೫ ರಿಂದ ೧೦ ಸೆಕೆಂಡ್‌ನ ವರೆಗೆ ಭಾವಪ್ರಯೋಗವನ್ನು ಮಾಡುವುದು, ಹಾಗೆಯೇ ಪ್ರತಿಯೊಂದು ಕೃತಿ ಮಾಡುವಾಗ ದೇವರ ಬಗ್ಗೆ ವಿಚಾರ ಮಾಡುವುದು ಮುಂತಾದವುಗಳನ್ನು ಮಾಡಲು ಪ್ರೇರೇಪಿಸುವುದು

೩. ಒಂದೇ ತಿಂಗಳಿನಲ್ಲಿ ಸಾಧಕರಲ್ಲಿ ಅಮೂಲಾಗ್ರ ಬದಲಾವಣೆಯಾಗಿ ಸಾಧಕರು ವ್ಯಷ್ಟಿ ಸಾಧನೆಯ ಪ್ರಯತ್ನ ಮಾಡಲು ಸಕಾರಾತ್ಮಕವಾಗುವುದು

ಸಾಧಕರು ಒಂದು ತಿಂಗಳು ಈ ಅಂಶಗಳಿಗನುಸಾರ ಪ್ರಯತ್ನ ಮಾಡಿದ ಮೇಲೆ ಸಾಧಕರಲ್ಲಿ ಅಮೂಲಾಗ್ರ ಬದಲಾವಣೆಯಾಗುತ್ತದೆ ಎಂಬುದು ಗಮನಕ್ಕೆ ಬಂದಿತು. ವ್ಯಷ್ಟಿ ಸಾಧನೆಯ ಪ್ರಯತ್ನವನ್ನು ನಿಯಮಿತವಾಗಿ ಮಾಡಲು ಸಾಧ್ಯವಾಗದ ಸಾಧಕರಿಗೂ ಕೆಲವು ವಾರಗಳಲ್ಲಿಯೇ ಪ್ರಯತ್ನ ಮಾಡಲು ಸಾಧ್ಯವಾಯಿತು. ಸಾಧಕರ ಮನಸ್ಸಿನಲ್ಲಿ ನಕಾರಾತ್ಮಕ ವಿಚಾರ ಬರುವ ಪ್ರಮಾಣವು ಕಡಿಮೆಯಾಗುತ್ತದೆ. ಸಾಧಕನು ಕೆಲವು ವಾರಗಳಲ್ಲಿಯೇ ಸಕಾರಾತ್ಮಕನಾಗುತ್ತಾನೆ. ಇತರ ಸಾಧಕರೂ ಮೇಲಿನ ಅಂಶಗಳಿಗನುಸಾರ ತಮ್ಮ ಸ್ಥಿತಿಯನ್ನು ಬರೆದು ನಾವು ಎಲ್ಲಿ ಕಡಿಮೆ ಬೀಳುತ್ತೇವೆ ?, ಎಂಬುದನ್ನು ನಿಖರವಾಗಿ ಅಧ್ಯಯನ ಮಾಡಿ ಪ್ರಯತ್ನಿಸಿದರೆ ಮತ್ತು ಭಾವಜಾಗೃತಿಯ ಪ್ರಯತ್ನಗಳನ್ನು ಹೆಚ್ಚಿಸಿದರೆ ಅವರ ಸ್ಥಿತಿಯಲ್ಲಿಯೂ ಬದಲಾವಣೆಯಾಗಬಹುದು. ಸತತ ಭಾವಜಾಗೃತಿಯ ಪ್ರಯತ್ನ ಮಾಡುವುದರಿಂದ ಮನಸ್ಸು ಸಕಾರಾತ್ಮಕವಾಗಲು ಸಹಾಯವಾಗುತ್ತದೆ.

೪. ಸದ್ಗುರು ರಾಜೇಂದ್ರ ಶಿಂದೆ ಇವರು ಸಾಧಕರ ವ್ಯಷ್ಟಿ ಸಾಧನೆಯ ವರದಿ ತೆಗೆದುಕೊಳ್ಳುವ ವೈಶಿಷ್ಟ್ಯಪೂರ್ಣ ಪದ್ಧತಿ !

೪ ಅ. ವರದಿ ತೆಗೆದುಕೊಳ್ಳುವ ಮೊದಲು ಸಾಧಕರು ಬರೆದ ಸ್ವಭಾವದೋಷ ಪಟ್ಟಿಯನ್ನು ಓದಿ ಸಾಧಕರು ವರದಿಯಲ್ಲಿ ಹೇಳುವ ತಪ್ಪುಗಳನ್ನು ನಿಶ್ವಯಿಸುವುದು : ಸದ್ಗುರು ದಾದಾರವರು ವರದಿಯಲ್ಲಿ ಹಿಂದಿನ ದಿನ ಸಾಧಕರು ಬರೆದ ಸ್ವಭಾವದೋಷ ಮತ್ತು ಅಹಂ ಇವುಗಳ ಪಟ್ಟಿಯನ್ನು ಪರಿಶೀಲಿಸುತ್ತಾರೆ. ಇದರಿಂದಾಗಿ ಆ ವಾರ ಸಾಧಕರ ಮನಸ್ಸಿನ ಸ್ಥಿತಿಯು ಗಮನಕ್ಕೆ ಬರುತ್ತದೆ. ಅದರಿಂದ ಅವರು ವರದಿ ಸತ್ಸಂಗದಲ್ಲಿ ಸಾಧಕರು ಹೇಳುವ ತಪ್ಪುಗಳ ಮೇಲೆ ಗುರುತು ಹಾಕಿ ಅವರಿಗೆ ದಿಶೆ ನೀಡುತ್ತಾರೆ. ಸಾಧಕರು ತಪ್ಪು ಸರಿಯಾಗಿ ಬರೆಯದಿದ್ದರೆ, ಯೋಗ್ಯ ಸ್ವಭಾವದೋಷವನ್ನು ಆಯ್ಕೆ ಮಾಡದಿದ್ದರೆ, ಸ್ವಯಂಸೂಚನೆಯನ್ನು ಯೋಗ್ಯ ರೀತಿಯಲ್ಲಿ ಬರೆಯದಿದ್ದರೆ ಅಥವಾ ಒಂದೇ ಪ್ರಕಾರದ ಸ್ವಭಾವದೋಷದಿಂದ ಹೆಚ್ಚು ತಪ್ಪುಗಳಾಗಿದ್ದರೆ ಅವರು ಆ ಜಾಗದಲ್ಲಿ ಗುರುತು ಮಾಡುತ್ತಾರೆ ಮತ್ತು ನಂತರ ಎಲ್ಲಿ ಸಾಧಕರಿಂದ ತಪ್ಪಾಯಿತು ? ಎಂದು ಹೇಳಿ ಸಾಧಕನಿಗೆ ಆ ತಪ್ಪುಗಳನ್ನು ವರದಿಯಲ್ಲಿ ಹೇಳಲು ಹೇಳುತ್ತಾರೆ.

೪ ಆ. ವರದಿಯಲ್ಲಿ ಎಲ್ಲ ಸಾಧಕರ ವಿಚಾರ ಪ್ರಕ್ರಿಯೆಯನ್ನು ತಿಳಿದು ಅವರಿಗೆ ಮಾರ್ಗದರ್ಶನ ನೀಡುವುದು : ಸತ್ಸಂಗದಲ್ಲಿ ಸಾಧಕರು ತಪ್ಪುಗಳನ್ನು ಓದಿ ಹೇಳುವಾಗ ಅವರು ಮೊದಲು ಸಾಧಕರಿಂದಾದ ತಪ್ಪುಗಳನ್ನು ಸರಿಪಡಿಸಲು ಏನು ಪ್ರಯತ್ನ ಮಾಡುವಿರಿ ?, ಎಂದು ಕೇಳುತ್ತಾರೆ. ಅದರಲ್ಲಿ ಸಾಧಕರಿಂದ ಏನಾದರೂ ಹೇಳುವುದು ಉಳಿದಿದ್ದರೆ ಸದ್ಗುರು ದಾದಾರವರು ಸ್ವತಃ ಹೇಳುತ್ತಾರೆ. ಈ ರೀತಿಯ ತಪ್ಪು ಪುನಃ ಆಗಬಾರದೆಂಬುದಕ್ಕಾಗಿ ಪ್ರಯತ್ನಗಳ ಬಗ್ಗೆ ವರದಿಯಲ್ಲಿ ವಿಸ್ತಾರವಾಗಿ ಚರ್ಚೆಯಾಗುತ್ತದೆ. ಸದ್ಗುರು ದಾದಾರವರು ಎಲ್ಲ ಸಾಧಕರಿಗೆ ಈ ಚರ್ಚೆಯಲ್ಲಿ ಸಹಭಾಗಿಯನ್ನಾಗಿಸುತ್ತಾರೆ. ಹೀಗಾಗಿ ಓರ್ವ ಸಾಧಕರು ತಪ್ಪು ಹೇಳುವಾಗ ಎಲ್ಲ ಸಾಧಕರಿಗೆ ಕಲಿಯಲು ಸಿಗುತ್ತದೆ. ವರದಿ ನಡೆಯುತ್ತಿರುವಾಗ ಸದ್ಗುರು ದಾದಾರವರು ಹೆಚ್ಚು ಮಾತನಾಡುವುದಿಲ್ಲ, ಆದರೆ ಸಾಧಕರಿಗೆ ಎಲ್ಲ ಹೇಳಲು ಹೇಳುತ್ತಾರೆ. ಈ ರೀತಿ ಅವರು ಸಾಧಕರನ್ನು ನಿರ್ಮಾಣ ಮಾಡುತ್ತಾರೆ.

೪ ಇ. ಯೋಗ್ಯ ರೀತಿಯಿಂದ ತಪ್ಪುಗಳನ್ನು ಬರೆಯುವ ಮಹತ್ವವನ್ನು ಸಾಧಕರ ಮನಸ್ಸಿನಲ್ಲಿ ಬಿಂಬಿಸುವುದು : ಅವರು ಸಾಧಕರಿಗೆ ತಪ್ಪುಗಳನ್ನು ಯೋಗ್ಯ ರೀತಿಯಿಂದ ಹೇಗೆ ಬರೆಯಬೇಕು ?, ಎಂಬುವುದನ್ನು ಹೇಳುತ್ತಾರೆ. ಹೆಚ್ಚಿನ ಬಾರಿ ಸಾಧಕರು ಯಾವ ರೀತಿ ತಪ್ಪಾಗಿದೆ ಹಾಗೆ ಬರೆಯದೇ ನಿಷ್ಕರ್ಷದಿಂದ ಅಥವಾ ಸಾರಾಂಶ ಸ್ವರೂಪದಲ್ಲಿ ಬರೆಯುತ್ತಾರೆ. ಅದರಿಂದಾಗಿ ಸಾಧಕರ ಯಾವ ಹಂತದಲ್ಲಿ ತಪ್ಪಾಗಿದೆ ?, ಎಂಬುದು ಗಮನಕ್ಕೆ ಬರುವುದಿಲ್ಲ, ಉದಾ. ಓರ್ವ ಸಾಧಕನು ನಾನು ಬೆಳಗ್ಗೆ ಸೇವೆಗಾಗಿ ಹೋಗಲು ತಡವಾಯಿತು ಎಂಬ ತಪ್ಪು ಬರೆದಿದ್ದನು ಮತ್ತು ಸ್ವಭಾವದೋಷ-ಸಮಯ ಪಾಲನೆಯ ಕೊರತೆ ಎಂದು ಬರೆದಿದ್ದನು. ಸದ್ಗುರು ದಾದಾರವರು ಆ ಸಾಧಕನಿಗೆ ಅದರ ಬಗ್ಗೆ ಕೇಳಿದ ನಂತರ ಆ ಸಾಧಕನು ರಾತ್ರಿ ತಡವಾಗಿ ಮಲಗಿದ್ದರಿಂದ ಬೆಳಗ್ಗೆ ತಡವಾಗಿ ಎದ್ದನು. ಆ ಸಾಧಕನು ರಾತ್ರಿ ಅನಾವಶ್ಯಕ ಮಾತನಾಡುವುದರಲ್ಲಿ ಸಮಯ ಕಳೆದಿರುವುದರಿಂದ ಅವನಿಗೆ ಮಲಗಲು ತಡವಾಗಿತ್ತು. ಆ ಸಾಧಕನು ತಪ್ಪು ಸರಿಯಾದ ರೀತಿಯಿಂದ ಬರೆಯದಿರುವುದರಿಂದ ಅವನು ಆಯ್ಕೆ ಮಾಡಿದ ಸ್ವಭಾವದೋಷವೂ ಸರಿಯಾಗಿ ಇರಲಿಲ್ಲ ಮತ್ತು ಅದಕ್ಕಾಗಿ ಕೊಟ್ಟ ಸೂಚನೆಯೂ ಸರಿ ಇರಲಿಲ್ಲ. ತಪ್ಪುಗಳನ್ನು ಯೋಗ್ಯ ರೀತಿಯಿಂದ ಬರೆದರೆ ಸ್ವಭಾವದೋಷಗಳ ಮೂಲದವರೆಗೆ ಹೋಗಬಹುದು ಮತ್ತು ನಂತರ ಅದಕ್ಕೆ ಯೋಗ್ಯ ಉಪಾಯಯೋಜನೆ ಹುಡುಕಿ ಅದರಂತೆ ಸೂಚನೆ ಸಿದ್ಧಪಡಿಸಬಹುದು. ಸಾಧಕರು ಯೋಗ್ಯ ಸೂಚನೆ ಕೊಟ್ಟರೆ ಅವರಲ್ಲಿ ಶೀಘ್ರವಾಗಿ ಬದಲಾವಣೆಯಾಗುತ್ತದೆ. ಸಾಧಕರು ತಪ್ಪುಗಳನ್ನು ಮತ್ತು ಅವುಗಳಿಗೆ ನೀಡುವ ಸ್ವಯಂಸೂಚನೆ ಸರಿಯಾದ ರೀತಿಯಲ್ಲಿ ಬರೆಯುವುದು ಪ್ರಕ್ರಿಯೆಯಲ್ಲಿ ಎಷ್ಟು ಮಹತ್ವವಿದೆ ಎಂಬುದನ್ನು ಅವರು ಎಲ್ಲರ ಮನಸ್ಸಿನಲ್ಲಿ ಬಿಂಬಿಸಿದರು.

೪ ಈ. ಸ್ವಯಂಸೂಚನೆ ಯೋಗ್ಯರೀತಿಯಿಂದ ಸಿದ್ಧಪಡಿಸಲು ಕಲಿಸುವುದು

೪ ಈ ೧. ಸ್ವಯಂಸೂಚನೆಯು ಯೋಗ್ಯವಾಗಿದ್ದರೆ ಮನಸ್ಸಿನ ಸ್ತರದಲ್ಲಿ ಶೀಘ್ರವಾಗಿ ಬದಲಾವಣೆಯಾಗುತ್ತದೆ ಎಂಬುದನ್ನು ಉದಾಹರಣೆಯೊಂದಿಗೆ ಸ್ಪಷ್ಟಪಡಿಸುವುದು : ಸ್ವಯಂಸೂಚನೆ ಕೊಡುವುದು, ಎಂದರೆ ಯೋಗ್ಯ ವಿಚಾರ ಮತ್ತು ಮನಸ್ಸಿಗೆ ಕೃತಿ ಮಾಡಲು ಪುನಃ ಪುನಃ ನೆನಪಿಸುವುದು. ಈ ವಿಚಾರಗಳು ಅಥವಾ ಕೃತಿಗಳು ಎಷ್ಟು ಸುಸ್ಪಷ್ಟವಾಗಿರುತ್ತದೆಯೋ, ಅಷ್ಟು ಮನಸ್ಸಿನ ಸ್ತರದಲ್ಲಿ ಬದಲಾವಣೆಯು ವೇಗವಾಗಿ ಆಗುತ್ತದೆ. ಇದರಲ್ಲಿ ನಿರುಪಯುಕ್ತವಾಗಿದ್ದರೆ ಅಥವಾ ಅನುಭವಿಸಲು ಬರದಿರುವ ದೃಷ್ಟಿಕೋನವಿದ್ದರೆ, ಬದಲಾವಣೆಯಾಗಲು ಸಮಯ ತಗಲುತ್ತದೆ ಎಂದು ಸದ್ಗುರು ದಾದಾರವರು ಉದಾಹರಣೆ ನೀಡಿ ಸ್ಪಷ್ಟಪಡಿಸಿದರು.

೪ ಈ ೨. ಸ್ವಯಂಸೂಚನೆ ಪರಿಣಾಮಕಾರಿಯಾಗಿರಬೇಕು  : ಅವರು ಸಾಧಕರ ಮನಸ್ಸಿನಲ್ಲಿ ಸ್ವಯಂಸೂಚನೆಯಲ್ಲಿರುವ ಪ್ರತಿಯೊಂದು ಶಬ್ದಗಳು ಮತ್ತು ವಾಕ್ಯಗಳನ್ನು ಯೋಗ್ಯ ರೀತಿಯಿಂದ ಬರೆಯುವ ಮಹತ್ವವನ್ನು ಬಿಂಬಿಸಿದರು. ಆದುದರಿಂದ ತಪ್ಪು, ಪ್ರಸಂಗ, ಅದರಲ್ಲಿರುವ ಸ್ವಭಾವದೋಷ ಮತ್ತು ತಪ್ಪು ಘಟಿಸುವಾಗ ಮನಸ್ಸಿನ ಸ್ಥಿತಿ ಎಲ್ಲ ರೀತಿಯಿಂದ ಅಭ್ಯಾಸ ಮಾಡಿ ಯೋಗ್ಯರೀತಿಯಿಂದ ಸ್ವಯಂಸೂಚನೆ ಸಿದ್ಧಪಡಿಸಿದರೆ ಅದರ ಪರಿಣಾಮವು ಮನಸ್ಸಿನ ಮೇಲೆ ಬೇಗನೆ ಆಗುತ್ತದೆ ಎಂಬುದನ್ನು ಕಲಿಯಲು ಸಿಕ್ಕಿತು ಮತ್ತು ಸ್ವಯಂಸೂಚನೆ ಸಿದ್ಧಪಡಿಸುವಾಗ ಯಾವ ತಪ್ಪುಗಳನ್ನು ತಪ್ಪಿಸಬೇಕು ?, ಎಂಬುದು ಗಮನಕ್ಕೆ ಬಂದಿತು.

೪ ಈ ೩. ಸುಲಭ ಭಾಷೆಯಲ್ಲಿ ಸ್ವಯಂಸೂಚನೆಯನ್ನು ಸಿದ್ಧ ಪಡಿಸುವುದು : ಸ್ವಯಂಸೂಚನೆಯು ಯಾವಾಗಲೂ ಸಾಮಾನ್ಯ ಮತ್ತು ಸುಲಭ ಭಾಷೆಯಲ್ಲಿರಬೇಕು, ಉದಾ. ಅಪೇಕ್ಷೆ ಪಡುವ ಅಹಂ ಲಕ್ಷಣಕ್ಕೆ ಸ್ವಯಂಸೂಚನೆಯನ್ನು ಸಿದ್ಧಪಡಿಸುವಾಗ ಸಾಧಕರು ಅನೇಕ ಬಾರಿ ನಾನು ನಿರಪೇಕ್ಷವಾಗಿ ಹೇಳುವೆನು, ಎಂದು ಬರೆಯುತ್ತಾರೆ. ನಿರಪೇಕ್ಷಾ ಎಂದರೆ ಏನು ?, ಎಂಬುದು ಮನಸ್ಸಿಗೆ ಗೊತ್ತಿರುವುದಿಲ್ಲ. ನಮ್ಮಿಂದಾದ ತಪ್ಪಿಗನುಸಾರ ನಾನು ಪ್ರೀತಿಯಿಂದ ಹೇಳುವೆನು, ಶಾಂತ ರೀತಿಯಿಂದ ಹೇಳುವೆನು, ಮನಮುಕ್ತವಾಗಿ ಹೇಳುವೆನು, ಸ್ಪಷ್ಟವಾಗಿ ಮತ್ತು ಪುನಃ ಪುನಃ ಹೇಳುವೆನು ಈ ರೀತಿ ಯೋಗ್ಯ ಕೃತಿ ಬರೆದರೆ ಮನಸ್ಸಿಗೆ ಯೋಗ್ಯ ಕೃತಿ ಏನು ಮಾಡುವುದು ?, ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ ಮತ್ತು ಇದರಿಂದಾಗಿ ಶೀಘ್ರ ಬದಲಾವಣೆಯಾಗುತ್ತದೆ.

೪ ಈ ೪. ಸ್ವಯಂಸೂಚನೆಯಲ್ಲಿರುವ ದೃಷ್ಟಿಕೋನವು ಮನಸ್ಸಿಗೆ ಅರ್ಥವಾಗುವಂತೆ ಮತ್ತು ಸ್ವೀಕರಿಸಲು ಆಗುವಂತೆ ಇರಬೇಕು : ಸ್ವಯಂಸೂಚನೆಯಲ್ಲಿ ದೃಷ್ಟಿಕೋನವನ್ನು ಕೊಡುವಾಗ ಅದರ ಕೃತಿಯಂತೆಯೇ ಮಾನಸಿಕ ಸ್ತರದಲ್ಲಿಯೂ ಅನುಭವಿಸಲು ಸಾಧ್ಯವಾಗುವಂತೆ ಕೊಡಬೇಕು, ಉದಾ. ಸಾಧಕರು ‘ಶ್ರೀಕೃಷ್ಣನೇ ನನಗೆ ಸಹ ಸಾಧಕರ ಮೂಲಕ ಹೇಳುತ್ತಿದ್ದಾನೆ’ ಎಂಬ ದೃಷ್ಟಿಕೋನವಿಡುವೆನು ಎಂದು ಬರೆಯುತ್ತಾರೆ. ಸಾಧಕರು ಶ್ರೀಕೃಷ್ಣನು ಸಹಸಾಧಕರ ಮೂಲಕ ಹೇಳುತ್ತಿದ್ದಾನೆ ಎಂಬ ಸ್ಥಿತಿಯನ್ನು ಯಾವತ್ತೂ ಅನುಭವಿಸಿರುವುದಿಲ್ಲ ಹಾಗೆಯೇ ಸಹಸಾಧಕರು ಯಾವಾಗಲೂ ಯೋಗ್ಯ ರೀತಿಯಿಂದ ಹೇಳುವರು, ಎಂಬ ಸ್ಥಿತಿಯೂ ಇರುವುದಿಲ್ಲ. ಹೀಗಾಗಿ ಸಹಸಾಧಕನು ಏನು ಹೇಳುತ್ತಾರೆಯೋ, ಅದನ್ನು ಸ್ವೀಕರಿಸುವ ಸ್ಥಿತಿಯು ನಮ್ಮ ಮನಸ್ಸಿಗೆ ಬರುವುದಿಲ್ಲ. ತದ್ವಿರುದ್ಧ ಶ್ರೀಕೃಷ್ಣನೇ ಸಹಸಾಧಕನಿಗೆ ನನ್ನ ಸ್ವಭಾವದೋಷ ಹೋಗಲು ನನಗೆ ಸಹಾಯ ಮಾಡಲು ಕಳುಹಿಸಿದ್ದಾನೆ, ಎಂಬ ಭಾವವಿಟ್ಟು ನಾನು ಅವನ ಮಾತು ಕೇಳುವೆನು, ಈ ರೀತಿ ಮನಸ್ಸಿಗೆ ಒಪ್ಪುವಂತಹ ಮತ್ತು ತಿಳಿಯುವಂತೆ, ಆಯಾಯ ತಪ್ಪಿಗನುಸಾರ ದೃಷ್ಟಿಕೋನವನ್ನು ನೀಡಿದರೆ ಮನಸ್ಸು ಅದನ್ನು ಸ್ವೀಕರಿಸುತ್ತದೆ ಮತ್ತು ನಂತರ ಮನಸ್ಸು ಶೀಘ್ರವಾಗಿ ಬದಲಾವಣೆಯಾಗಲು ಸಿದ್ಧವಾಗುತ್ತದೆ.

೪ ಈ ೫. ತಾತ್ತ್ವಿಕ ಸ್ತರದ ಬದಲು ಮಾನಸಿಕ ಸ್ತರದಲ್ಲಿ ದೃಷ್ಟಿಕೋನವನ್ನು ನೀಡುವ ಸ್ವಯಂಸೂಚನೆಗಳಿಂದ ಹೆಚ್ಚು ಲಾಭವಾಗುವುದು : ನಾವು ಮನಸ್ಸಿಗೆ ಕೆಲವೇ ಪ್ರಸಂಗಗಳಲ್ಲಿ ಆಧ್ಯಾತ್ಮಿಕ ಸ್ತರದಲ್ಲಿ ದೃಷ್ಟಿಕೋನ ನೀಡಬಹುದು, ಇಲ್ಲದಿದ್ದರೆ ಮನಸ್ಸಿಗೆ ಆ ಸ್ಥಿತಿಗೆ ಹೋಗಲು ಸಾಧ್ಯವಾಗುವಂತಹ ಮಾನಸಿಕ ಸ್ತರದ ದೃಷ್ಟಿಕೋನವನ್ನೇ ನೀಡಬೇಕು. ಆಧ್ಯಾತ್ಮಿಕ ಸ್ತರದಲ್ಲಿನ ದೃಷ್ಟಿಕೋನವು ಓದುವಾಗ ಒಳ್ಳೆಯದೆನಿಸುತ್ತದೆ; ಆದರೆ ನಮಗೆ ಆ ಸ್ಥಿತಿಗೆ ಹೋಗಲು ಆಗದಿರುವುದರಿಂದ ಅದರ ಲಾಭ ಕಡಿಮೆಯಾಗುತ್ತದೆ. ಮನಸ್ಸಿಗೆ ಎಷ್ಟು ಸುಲಭ ರೀತಿಯಿಂದ, ನಿಖರವಾಗಿ ಮತ್ತು ಸ್ಪಷ್ಟವಾಗಿ ಹೇಳುತ್ತೇವೆಯೋ ಅಷ್ಟು ಅದಕ್ಕೆ ತಿಳಿಯುತ್ತದೆ ಮತ್ತು ನಂತರ ನಮ್ಮಿಂದ ಕೃತಿಯಾಗುತ್ತದೆ, ಇಲ್ಲದಿದ್ದರೆ ಸೂಚನೆ ತಾತ್ತ್ವಿಕ ಸ್ತರದಲ್ಲಿಯೇ ಇರುತ್ತವೆ ಎಂಬುದನ್ನು ಅವರು ಪ್ರತಿಯೊಬ್ಬ ಸಾಧಕನಿಗೆ ಅನುಭವಿಸುವಂತೆ ಮಾಡಿದರು. ನಾವು ಸಿದ್ಧಪಡಿಸಿದ ಸ್ವಯಂಸೂಚನೆಗಳು ಶೇ. ೯೦ ರಿಂದ ೯೫ ರಷ್ಟು ಬಾರಿ ಅಯೋಗ್ಯವಾಗಿರುತ್ತದೆ. ಆದುದರಿಂದ ಆ ಸೂಚನೆಗಳಿಂದ ನಮ್ಮ ಮನಸ್ಸಿನಲ್ಲಿ ಯೋಗ್ಯ ಪರಿಣಾಮವಾಗುತ್ತಿರಲಿಲ್ಲ. ನಾವು ಸೂಚನೆ ಕೊಟ್ಟಿದ್ದೇವೆ ಎಂದು ನಮಗೆ ಅನಿಸುತ್ತದೆ; ಆದರೆ ನಾವು ಮನಸ್ಸಿಗೆ ಕೊಡುತ್ತಿರುವ ಸ್ವಯಂ ಸೂಚನೆಗಳು ಯೋಗ್ಯವಿಲ್ಲದಿರುವುದರಿಂದ ಅಪೇಕ್ಷಿತ ಅವಧಿಯಲ್ಲಿ ಬದಲಾವಣೆಯಾಗುವುದಿಲ್ಲ ಎಂಬುದು ನಮ್ಮ ಗಮನಕ್ಕೆ ಬರುವುದಿಲ್ಲ. ಇದರಿಂದಾಗಿ ನಮ್ಮ ಪ್ರಕ್ರಿಯೆಯಲ್ಲಿನ ಆಸಕ್ತಿ ಕಡಿಮೆಯಾಗಿತ್ತು ಮತ್ತು ಪ್ರಕ್ರಿಯೆ ಕೇವಲ ಮಾಡಬೇಕೆಂದು ಮಾಡಲ್ಪಡುತ್ತದೆ.

೪ ಉ. ದೇವರಿಗೆ ಏನು ಇಷ್ಟವಾಗುತ್ತದೆ ? ಮತ್ತು ದೇವರ ಸಹಾಯ ಪಡೆಯಬೇಕು, ಎಂಬ ಎರಡು ವಿಚಾರಗಳ ಸಂಸ್ಕಾರಗಳನ್ನು ಮನಸ್ಸಿನಲ್ಲಿ ಬಿಂಬಿಸಲು ಸಾಧಕರಿಗೆ ಉತ್ತೇಜಿಸುವುದು ಮತ್ತು ಸದ್ಗುರು ದಾದಾರವರ ತಳಮಳದಿಂದ ಸಾಧಕರಿಗೆ ದೇವರ ಸಹಾಯ ದೊರಕಿ ಅವರ ಸ್ಥಿತಿಯಲ್ಲಿ ಬದಲಾವಣೆಯಾಗುವುದು : ಸದ್ಗುರು ದಾದಾರವರು ಸಾಧಕರು ಯಾವುದರಿಂದಾಗಿ ನಿರುತ್ಸಾಹಿಗಳಾಗುತ್ತಾರೆ ?, ಎಂಬುದರ ಬಗ್ಗೆ ಆಳವಾಗಿ ಅಭ್ಯಾಸ ಮಾಡಿದ್ದಾರೆ. ಅವರು ಯಾವ ವಿಷಯದಿಂದಾಗಿ ಸಾಧಕರ ಮನಸ್ಸು ನಿರುತ್ಸಾಹವಾಗುತ್ತದೆಯೋ ಆ ವಿಷಯವನ್ನು ಸಂಪೂರ್ಣವಾಗಿ ತಡೆದು ಸಕಾರಾತ್ಮಕವಿದ್ದು ಹೇಗೆ ಪ್ರಯತ್ನಿಸಬೇಕು ?, ಎಂಬುದನ್ನು ಪ್ರಾಯೋಗಿಕ ಸ್ತರದಲ್ಲಿ ತುಂಬಾ ಸುಲಭ ರೀತಿಯಲ್ಲಿ ಹೇಳುತ್ತಾರೆ. ಹೀಗಾಗಿ ಪ್ರತಿಯೊಬ್ಬ ಸಾಧಕರಲ್ಲಿ ಆತ್ಮವಿಶ್ವಾಸವೆನಿಸುತ್ತದೆ. ಸಾಧಕರು ಎಷ್ಟೇ ತಪ್ಪುಗಳನ್ನು ಮಾಡಿದರೂ, ಏನೂ ಮಾಡದಿದ್ದರೂ ಅಥವಾ ಅವನಿಗೆ ಏನೂ ಮಾಡಲು ಇಚ್ಛೆ ಇಲ್ಲದಿದ್ದರೂ ಸಾಧಕರಲ್ಲಿ ಸಕಾರಾತ್ಮಕ ಬದಲಾವಣೆಯಾಗುತ್ತಿತ್ತು. ಇದರ ಹಿಂದಿನ ಮಹತ್ವದ ರಹಸ್ಯವೆಂದರೆ, ಅವರು ಪ್ರತಿಯೊಬ್ಬ ಸಾಧಕನಿಗೆ ದೇವರಿಗೆ ಏನು ಇಷ್ಟವಾಗುತ್ತದೆ ? ಮತ್ತು ದೇವರ ಸಹಾಯ ಪಡೆಯಬೇಕು ಎಂಬ ಎರಡು ವಿಚಾರಗಳ ಸಂಸ್ಕಾರಗಳನ್ನು ಮಾಡಲು ಹೇಳುತ್ತಾರೆ. ಆದುದರಿಂದ ದೇವರೇ ಬಂದು ಸಾಧಕರ ಸ್ಥಿತಿಯಲ್ಲಿ ಬದಲಾವಣೆ ಮಾಡುತ್ತಾನೆ ಎಂಬುದು ಗಮನಕ್ಕೆ ಬಂದಿತು. ಸದ್ಗುರು ದಾದಾರವರ ತಳಮಳವೇ ಹೆಚ್ಚೆಚ್ಚು ಇರುವುದರಿಂದ ಸಾಧಕರಿಗೂ ದೇವರ ಸಹಾಯ ಬೇಗ ಲಭಿಸುತ್ತದೆ. ಸಾಧಕರಿಗೆ ಅದಕ್ಕಾಗಿ ವಿಶೇಷ ಪ್ರಯತ್ನ ಮಾಡಬೇಕಾಗುವುದಿಲ್ಲ. ಸಾಧಕನು ಎಷ್ಟೇ ಅಶಾಂತ, ನಿರಾಶೆ ಅಥವಾ ನಕಾರಾತ್ಮಕವಿದ್ದರೂ ಸದ್ಗುರು ದಾದಾರವರು ಕೆಲವು ದಿನಗಳಲ್ಲಿ ಆ ಸಾಧಕನು ಸಕಾರಾತ್ಮಕ, ಉತ್ಸಾಹಿ ಮತ್ತು ವ್ಯಷ್ಟಿ ಸಾಧನೆಯ ಪ್ರಕ್ರಿಯೆ ಆನಂದದಿಂದ ಮಾಡುವ ಸ್ಥಿತಿಗೆ ತರುತ್ತಾರೆ. ಇದು ಕೇವಲ ಅವರಲ್ಲಿರುವ ಸಾಧಕರ ಮೇಲಿರುವ ಪ್ರೀತಿಯಿಂದಲೇ ಸಾಧ್ಯವಾಗುತ್ತದೆ.

೪ ಊ. ಸಾಧಕರ ಅಯೋಗ್ಯ ಮಾನಸಿಕತೆಯನ್ನು ಗುರುತಿಸಿ ಅದರ ಬಗ್ಗೆ ಚಿಂತನೆ ಮಾಡಲು ಹೇಳಿ ಕೃತಿಶೀಲರನ್ನಾಗಿಸುವುದು

೪ ಊ ೧. ಸಾಧಕರಿಗೆ ಚಿಂತನೆ ಮಾಡಲು ವಿಷಯ ನೀಡಿ ಅದಕ್ಕನುಸಾರ ಕೃತಿ ಮಾಡಲು ಹೇಳುವುದು : ಸಾಧಕರ ವ್ಯಷ್ಟಿ ಸಾಧನೆಯ ವರದಿ ತೆಗೆದುಕೊಳ್ಳಲು ಪ್ರಾರಂಭಿಸಿದ ನಂತರ ಸದ್ಗುರು ದಾದಾರವರಿಗೆ ಸಾಧಕರ ಅಯೋಗ್ಯ ವಿಚಾರಗಳು ಗಮನಕ್ಕೆ ಬರುತ್ತವೆ. ಸಾಧಕರು ಯಾವ ವಿಷಯಗಳ ಬಗ್ಗೆ ಅಥವಾ ಅಂಶಗಳ ಬಗ್ಗೆ ಅಯೋಗ್ಯ ಮಾನಸಿಕತೆ ಇದೆ ?, ಎಂಬುದನ್ನು ಗಮನಿಸಿ ಅವರು ಸಾಧಕರಿಗೆ ಅದರಂತೆ ಪ್ರತಿವಾರದಲ್ಲಿ ಗೃಹಪಾಠ ನೀಡುತ್ತಾರೆ. ಸಾಧಕರಿಗೆ ಮುಂದಿನಂತೆ ಒಂದು ವಿಷಯ ನೀಡಿ ಅದರಂತೆ ಚಿಂತನೆ ಮಾಡಲು ಹೇಳಿ ಅದರಂತೆ ಕೃತಿ ಮಾಡಲು ಹೇಳುತ್ತಾರೆ.
ಅ. ಇತರರಿಗೆ ತಪ್ಪು ಹೇಳುವ ಲಾಭ ಮತ್ತು ಹೇಳದಿರುವುದರಿಂದಾಗುವ ಹಾನಿ
ಆ. ತಪ್ಪು ಹೇಳದಿರುವುದರ ಹಿಂದಿನ ಅಯೋಗ್ಯ ವಿಚಾರಗಳು, ಅದಕ್ಕೆ ದೃಷ್ಟಿಕೋನ ಮತ್ತು ಉಪಾಯ ಯೋಜನೆ
ಇ. ಪರಿಸ್ಥಿತಿಯಿಂದಾಗಿ ತಪ್ಪುಗಳಾಗುತ್ತಿವೆಯೋ ? ಪರಿಸ್ಥಿತಿಯಿಂದ ಆಗದಿದ್ದರೆ, ಅದು ಬೇರೆ ಯಾವ ಕಾರಣದಿಂದ ಆಗುತ್ತವೆ ?, ಮುಂತಾದವುಗಳ ಅಭ್ಯಾಸ ಮಾಡುವುದು
ಈ. ಪರಿಸ್ಥಿತಿ ಸ್ವೀಕರಿಸುವುದು
ಉ. ವಿಭಿನ್ನ ವಿಚಾರ ಮತ್ತು ವಿಭಿನ್ನ ಪ್ರಕೃತಿಯಿರುವ ಸಾಧಕರಿಗೆ ಸೇವೆ ಮಾಡಲು ದೇವರು ಒಂದೆಡೆಗೆ ಏಕೆ ಸೇರಿಸುತ್ತಾನೆ ?, ಎಂಬ ವಿಚಾರ ಮಾಡುವುದು.

೪ ಊ ೨. ತಾತ್ತ್ವಿಕ ಮತ್ತು ಪ್ರಾಯೋಗಿಕ ಭಾಗಗಳನ್ನು ಜೊತೆಗೊಡಿಸುವುದು : ಈ ರೀತಿಯ ವಿಷಯಗಳನ್ನು ಚಿಂತನೆ ಮಾಡಲು ಕೊಟ್ಟಿರುವುದರಿಂದ ಸಾಧಕರಿಗೆ ಮೊದಲು ತಾತ್ತ್ವಿಕ ಅಭ್ಯಾಸವಾಗುತ್ತದೆ ಮತ್ತು ಇದರಿಂದ ಅವರಿಗೆ ಪ್ರಾಯೋಗಿಕ ಭಾಗ ಮಾಡಲು ಸುಲಭವಾಗುತ್ತದೆ. ಅವರು ಸಾಧಕರಿಗೆ ಅದೇ ರೀತಿ ಮಾಡಲು ಎಲ್ಲಿ ಸಾಧ್ಯವಾಯಿತು ಮತ್ತು ಎಲ್ಲಿ ಸಾಧ್ಯವಾಗಲಿಲ್ಲ ?, ಎಂಬ ವರದಿ ಕೊಡಲು ಹೇಳುತ್ತಾರೆ. ಈ ಗೃಹಪಾಠದಿಂದ ಎಲ್ಲ ಸಾಧಕರಿಗೆ ತುಂಬಾ ಲಾಭವಾಗುತ್ತದೆ. ಎಷ್ಟು ಸೂಚನೆ ಕೊಟ್ಟರೂ ಕಡಿಮೆಯಾಗದ ಸ್ವಭಾವದೋಷ ಅಥವಾ ಅಯೋಗ್ಯ ವಿಚಾರಗಳು ಇವುಗಳ ಚಿಂತನೆಯಿಂದಾಗಿ ಒಂದು ಹಂತದ ವರೆಗೆ ತಕ್ಷಣ ಕಡಿಮೆಯಾಗುತ್ತವೆ.

೫. ಸದ್ಗುರು ರಾಜೇಂದ್ರ ಶಿಂದೆಯವರ ಮಾರ್ಗದರ್ಶನಕ್ಕನುಸಾರ ಪ್ರಯತ್ನ ಮಾಡಿರುವುದರಿಂದ ಸಾಧಕರಿಗಾದ ಲಾಭ

೫ ಅ. ಹಂತಹಂತವಾಗಿ ಮತ್ತು ಸಹಜವಾಗಿ ಸಾಧ್ಯವಾಗುವ ಪ್ರಯತ್ನಗಳನ್ನು ಮಾಡಿಸಿಕೊಂಡಿರುವುದರಿಂದ ಸಾಧಕರಲ್ಲಿ ಸಕಾರಾತ್ಮಕತೆ ನಿರ್ಮಾಣವಾಗುವುದು : ಸಾಧಕರ ವ್ಯಷ್ಟಿ ಸಾಧನೆಯ ಅಂತರ್ಗತ ಏನೂ ಪ್ರಯತ್ನವಾಗದಿದ್ದರೂ ಸದ್ಗುರು ದಾದಾರವರು ಆ ಸಾಧಕನ ಸ್ಥಿತಿಗನುಸಾರ ಹಂತಹಂತವಾಗಿ ಪ್ರಯತ್ನಿಸಲು ಪ್ರೋತ್ಸಾಹ ನೀಡುತ್ತಾರೆ, ಉದಾ. ೫ ರಿಂದ ೧೦ ಸೆಕೆಂಡು ಭಾವಪ್ರಯೋಗ ಮಾಡುವ ಧ್ಯೇಯ ನಿಶ್ಚಯಿಸುವುದು, ಪ್ರಾರ್ಥನೆ, ಕೃತಜ್ಞತೆ ಮತ್ತು ಅವಶ್ಯಕತೆಗನುಸಾರ ನಾಮಜಪ ಮಾಡುವುದು. ಇದರಿಂದಾಗಿ ಸಾಧಕರಿಗೆ ನಿರಾಶೆಯಾಗದೆ ಅವರು ಭಾವಜಾಗೃತಿಯ ಪ್ರಯತ್ನ ಮಾಡುತ್ತಾರೆ. ಹೀಗಾಗಿ ದೇವರೇ ಅವರಲ್ಲಿ ಸಕಾರಾತ್ಮಕತೆ ನಿರ್ಮಾಣ ಮಾಡುತ್ತಾನೆ. ಸದ್ಗುರು ದಾದಾರವರು ಸಾಧಕನಿಗೆ ತಖ್ತೆ ಬರೆಯುವುದು, ಸ್ವಯಂಸೂಚನೆ ಸತ್ರಗಳು ಮತ್ತು ಚಿಂತನಾ ಕೋಷ್ಟಕದಲ್ಲಿರುವ ಇತರ ಅಂಶಗಳೂ ಅವನಿಗೆ ಸಾಧ್ಯವಿರುವಷ್ಟು ಮಾಡಲು ಹೇಳುತ್ತಾರೆ. ಸಾಧಕನು ಭಾವಪ್ರಯೋಗವನ್ನು ಮಾಡಿದ ಮೇಲೆ ಎರಡು ವಾರಗಳಲ್ಲಿಯೇ ಅವನಿಗೆ ಮನಸ್ಸಿನ ಸ್ತರದಲ್ಲಿ ಸಕಾರಾತ್ಮಕವಾಗುತ್ತಾನೆ. ಅವನಿಗೆ ವ್ಯಷ್ಟಿ ಸಾಧನೆಯಲ್ಲಿನ ಯಾವ ಅಂಶಗಳನ್ನು ಮಾಡಲು ಅಸಾಧ್ಯವೆನಿಸುತ್ತಿತ್ತೋ, ಅದು ಅವರಿಂದ ಸಹಜವಾಗಿ ಆಗುತ್ತಿತ್ತು. ಅವನ ತಖ್ತೆ ಬರೆಯುವುದು ಮತ್ತು ಸತ್ರಗಳು ನಿಯಮಿತವಾಗಿ ಹೆಚ್ಚಾಗುತ್ತಿದ್ದವು.
೫ ಆ. ಸಾಧಕರ ಆತ್ಮವಿಶ್ವಾಸ ಹೆಚ್ಚಾಗಿ ಅವರ ಮುಖದಲ್ಲಿ ಬದಲಾವಣೆ ಕಂಡುಬರುವುದು : ಈ ರೀತಿ ಸಾಧಕರು ಪ್ರಯತ್ನ ಮಾಡಿರುವುದರಿಂದ ಅವರ ಆತ್ಮವಿಶ್ವಾಸ ಹೆಚ್ಚಾಗುತ್ತಿತ್ತು. ಇದರಿಂದಾಗಿ ಸಾಧಕರಲ್ಲಿ ಬದಲಾವಣೆಯಾಗಲು ಆರಂಭವಾಯಿತು. ಇದುವರೆಗೆ ಅಸಾಧ್ಯವಾಗದ ವಿಷಯಗಳು ಸಹಜವಾಗಿ ಆಗುತ್ತಿರುವುದರಿಂದ ಸಾಧಕರ ಮುಖದ ಮೇಲಿನ ಭಾವ ಬದಲಾಗುತ್ತದೆ.

೬. ಸಾಧಕರ ವ್ಯಷ್ಟಿಯೊಂದಿಗೆ ಸಮಷ್ಟಿ ಸಾಧನೆಯೂ ಉತ್ತಮವಾಗಲು ಮಾಡಿದ ಪ್ರಯತ್ನ !

೬ ಅ. ಎಲ್ಲ ರೀತಿಯಿಂದ ಸಾಧಕರನ್ನು ನಿರ್ಮಿಸುವುದೇ ವರದಿ ತೆಗೆದುಕೊಳ್ಳುವ ಹಿಂದಿನ ಮುಖ್ಯ ಉದ್ದೇಶವಿರುವುದು : ಸದ್ಗುರು ದಾದಾರವರು ತೆಗೆದುಕೊಳ್ಳುತ್ತಿರುವ ವರದಿಯು ಒಂದು ನಿಶ್ಚಯಿಸಿದ ಚೌಕಟ್ಟು ಅಲ್ಲ. ಪ್ರತಿಯೊಬ್ಬ ಸಾಧಕನು ತನ್ನಲ್ಲಿನ ಸ್ವಭಾವದೋಷ ಮತ್ತು ಅಹಂ ಇವುಗಳ ನಿರ್ಮೂಲನೆ ಮಾಡಿ ಆನಂದದಿಂದಿರುವುದು, ಇದೊಂದೇ ಅದರ ಹಿಂದಿನ ಉದ್ದೇಶವಾಗಿರದೆ ಅದರೊಂದಿಗೆ ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಎಲ್ಲ ಸ್ತರದಲ್ಲಿ ಅಯೋಗ್ಯ ವಿಷಯ ಯೋಗ್ಯವಾಗಲು ಪ್ರಯತ್ನಿಸುವುದು ಮತ್ತು ಸರ್ವಾಂಗಗಳಿಂದ ಸಾಧಕರು ನಿರ್ಮಾಣವಾಗಬೇಕು ಎಂಬುದೇ ಸಾಧಕರ ವರದಿ ತೆಗೆದುಕೊಳ್ಳುವ ಅವರ ಉದ್ದೇಶವಾಗಿದೆ. ಆದುದರಿಂದ ಅವರು ಸಾಧಕರ ಸ್ಥಿತಿ, ಅವರಿಗೆ ಆಗುತ್ತಿರುವ ತೊಂದರೆ ಮತ್ತು ಅವರ ವಯಸ್ಸು ಇವುಗಳಿಗನುಸಾರ ಸಾಧಕರಿಂದ ವ್ಯಷ್ಟಿ ಸ್ತರದಲ್ಲಿ ಬೇರೆಬೇರೆ ಪ್ರಯೋಗವನ್ನು ಮಾಡಿಸಿಕೊಂಡು ಮತ್ತು ಉಪಾಯಗಳನ್ನು ಹೇಳಿ ಸಹಾಯ ಮಾಡುತ್ತಾರೆ.
೬ ಆ. ಸಮಷ್ಟಿ ಸ್ತರದಲ್ಲಿ ಆಶ್ರಮ ಮತ್ತು ಪ್ರಸಾರ ಇವುಗಳ ಸೇವೆಗಳು ಸುವ್ಯವಸ್ಥಿತವಾಗಿರಲು ಮಾರ್ಗದರ್ಶನ ನೀಡಿ ಸಾಧಕರಲ್ಲಿ ವ್ಯಾಪಕತೆ ಎಂಬ ಗುಣವನ್ನು ಅಂಗೀಕರಿಸುವುದು : ಸದ್ಗುರು ದಾದಾರವರು ಸಮಷ್ಟಿ ಸ್ತರದಲ್ಲಿ ಆಶ್ರಮ ಮತ್ತು ಪ್ರಸಾರ ಇವುಗಳ ಸೇವೆ ಉತ್ತಮ ರೀತಿಯಿಂದ ಆಗಲು ದಿಶೆ ತೋರಿಸುತ್ತಾರೆ. ಸಾಧಕರು ಕೇವಲ ತನ್ನಲ್ಲಿರುವ ಸ್ವಭಾವದೋಷ ಮತ್ತು ಅಹಂ ಇವುಗಳ ನಿರ್ಮೂಲನೆಯ ಧ್ಯೇಯವನ್ನಿಟ್ಟುಕೊಳ್ಳದೇ, ಪರಾತ್ಪರ ಗುರುದೇವರ ಹಿಂದೂ ರಾಷ್ಟ್ರದ ಸ್ಥಾಪನೆ ಮಾಡುವ ಧ್ಯೇಯವನ್ನು ಪೂರ್ಣಗೊಳಿಸಲು ಸಂಬಂಧಪಟ್ಟ ಎಲ್ಲ ಸ್ತರದಲ್ಲಿ ಯೋಗ್ಯವಾಗಲು ಪ್ರಯತ್ನಿಸುವುದೇ ನಮ್ಮ ಕರ್ತವ್ಯವಾಗಿದೆ ಎಂಬ ಅರಿವನ್ನು ಸಾಧಕರಿಗೆ ಮಾಡಿಕೊಡುತ್ತಾರೆ ಮತ್ತು ಅದಕ್ಕನುಸಾರ ಹೇಗೆ ಪ್ರಯತ್ನಿಸಬೇಕು ?, ಎಂಬುದನ್ನೂ ಅವರು ಸಾಧಕರಿಗೆ ಹೇಳುತ್ತಾರೆ. ಹೀಗಾಗಿ ಸಾಧಕರಲ್ಲಿ ಈಶ್ವರನ ವ್ಯಾಪಕತೆ ಎಂಬ ಗುಣವು ಬರತೊಡಗುತ್ತದೆ. ಇವೆಲ್ಲವುದರ ಪರಿಣಾಮವೆಂದು ಸಾಧಕರಲ್ಲಿ ಕಡಿಮೆ ಸಮಯದಲ್ಲಿ ಬದಲಾವಣೆಯಾಗುತ್ತದೆ, ಹಾಗೆಯೇ ಉತ್ತಮ ರೀತಿಯಿಂದ ಸೇವೆ ಮಾಡುವ ಪ್ರಕ್ರಿಯೆಯು ಪ್ರಾರಂಭವಾಗುತ್ತದೆ, ಎಂಬುದು ಅರಿವಾಯಿತು. ಸಾಧಕರು ಸೇವೆ ಮಾಡುವಾಗ ಅವರಿಂದಾದ ತಪ್ಪುಗಳನ್ನು ಪಟ್ಟಿ ಯಲ್ಲಿ ಬರೆಯುತ್ತಾರೆ. ಆ ಪ್ರಸಂಗಗಳು ಸಮಷ್ಟಿಯೊಂದಿಗೆ ಸಂಬಂಧವಿರುತ್ತದೆ. ಸಮಷ್ಟಿ ಸ್ತರದಲ್ಲಿ ಅಯೋಗ್ಯ ವಿಷಯಗಳನ್ನು ದೂರಗೊಳಿಸಲು ನಾವು ಒಂದು ಮಾಧ್ಯಮವಾಗಿದ್ದೇವೆ. ಆ ಪ್ರಸಂಗಗಳಲ್ಲಿ ಸಮಷ್ಟಿಯಲ್ಲಿನ ಅಯೋಗ್ಯ ಭಾಗವನ್ನು ದೂರ ಮಾಡಲು ಹೇಗೆ ಪ್ರಯತ್ನಿಸಬೇಕು ?, ಎಂದು ದಿಶೆ ನೀಡಿದ್ದರಿಂದ ಕ್ರಮೇಣ ಸಮಷ್ಟಿಯಲ್ಲಿನ ಅಯೋಗ್ಯ ಪ್ರಸಂಗಗಳೂ ಕಡಿಮೆಯಾಗುವುದು ಗಮನಕ್ಕೆ ಬಂದಿತು.

೭. ವ್ಯಷ್ಟಿ ಮತ್ತು ಸಮಷ್ಟಿ ಸ್ತರದಲ್ಲಿನ ದೃಷ್ಟಿಕೋನವನ್ನು ಉದಾಹರಣೆ ಸಹಿತ ವಿವರಿಸಿ ಹೇಳುವುದು

೭ ಅ. ಪ್ರಸಂಗ : ಕೆಲವು ಸಾಧಕರು ರೈಲು ನಿಲ್ದಾಣಕ್ಕೆ ಹೋಗಿ ರೈಲಿನಿಂದ ಸಾಹಿತ್ಯ ತರುವುದರ ಸಂದೇಶ ಬಂದ ಮೇಲೆ ಒತ್ತಡ ಬಂದಿತು. ಸಾಧಕರು ಕೊನೆಕ್ಷಣದಲ್ಲಿ ಈ ಸೇವೆ ಏಕೆ ಹೇಳುತ್ತಾರೆ ?, ಎಂಬ ಪ್ರತಿಕ್ರಿಯೆ ಬಂದಿತು, ಎಂದು ಪಟ್ಟಿಯಲ್ಲಿ ಬರೆಯುತ್ತಾರೆ. ಇಲ್ಲಿ ಸಾಧಕನಿಂದ ಆ ಸಾಹಿತ್ಯಗಳನ್ನು ತರುವುದನ್ನು ಬಿಟ್ಟು ಬೇರೆ ಪರ್ಯಾಯವಿಲ್ಲ. ರೈಲುಗಾಡಿ ನಿಲ್ದಾಣದಲ್ಲಿ ಬರುವ ಮೊದಲೇ ಅಲ್ಲಿ ತಲುಪಬೇಕಾಗುತ್ತದೆ; ಏಕೆಂದರೆ ಸಾಹಿತ್ಯ ತರುವ ಸಾಧಕನು ಸ್ಟೇಶನ್‌ನಲ್ಲಿ ಇಳಿಯುವುದಿಲ್ಲ. ರೈಲು ನಿಲ್ದಾಣಕ್ಕೆ ಹೋಗಲು ಇತರ ಸಾಧಕರು ಉಪಲಬ್ಧವಿರುವುದಿಲ್ಲ. ಆಕಸ್ಮಿಕ ಮತ್ತು ಕೊನೆಕ್ಷಣದಲ್ಲಿ ಬಂದ ಈ ಪ್ರಸಂಗದ ಮೇಲೆ ಹೇಗೆ ಉಪಾಯಯೋಜನೆ ತೆಗೆಯಬೇಕು ?, ಎಂಬ ಕುರಿತು ಸಾಧಕನಿಗೆ ಒತ್ತಡ ಬರುತ್ತದೆ.

೭ ಅ ೧. ವ್ಯಷ್ಟಿ ಸ್ತರದ ದೃಷ್ಟಿಕೋನ
೭ ಅ ೧ ಅ. ಜವಾಬ್ದಾರ ಸಾಧಕರನ್ನು ಕೇಳಿ ಅದಕ್ಕೆ ಉಪಾಯಯೋಜನೆ ತೆಗೆಯುವುದು : ನಮಗೆ ಪ್ರತಿಯೊಂದು ಪರಿಸ್ಥಿತಿ ಶಾಂತವಾಗಿ ಸ್ವೀಕರಿಸಬೇಕಾಗಿದೆ, ಅದರಿಂದ ದೇವರಿಗೆ ನಮ್ಮನ್ನು ನಿರ್ಮಾಣ ಮಾಡಬೇಕಾಗಿರುತ್ತದೆ. ನಾವು ಗುರುಕಾರ್ಯಕ್ಕಾಗಿ ಸಮರ್ಪಿತರಾಗಿದ್ದೇವೆ. ಆದುದರಿಂದ ಇಂತಹ ಪ್ರಸಂಗಗಳಲ್ಲಿ ಮನಸ್ಸಿನಲ್ಲಿ ಪ್ರತಿಕ್ರಿಯೆ ಬರಬಾರದು. ಒತ್ತಡವಾದರೆ ಸಮಸ್ಯೆ ಬಗೆಹರಿಯದೆ ಇನ್ನಷ್ಟು ಜಟಿಲವಾಗುತ್ತದೆ. ನಮಗೆ ಸಮಸ್ಯೆ ಬಿಡಿಸಲು ಆಗದಿದ್ದರೆ ನಾವು ನಮ್ಮ ಜವಾಬ್ದಾರ ಸಾಧಕರಲ್ಲಿ ಪರಿಹಾರವನ್ನು ಕೇಳಿದರೆ ಒತ್ತಡವಾಗುವುದಿಲ್ಲ.
೭ ಅ ೧ ಆ. ಸಾಧಕನು ಕೊನೇಕ್ಷಣಕ್ಕೆ ಏಕೆ ಹೇಳಿದನು ?, ಎಂಬುದನ್ನು ತಿಳಿದುಕೊಳ್ಳುವುದು : ಅವರು ಸಾಧಕರಿಗೆ ಸಮಷ್ಟಿಯ ದೃಷ್ಟಿಯಿಂದ ಮುಂದಿನ ಪ್ರಕ್ರಿಯೆ ಮಾಡಲು ಹೇಳುತ್ತಾರೆ. ಇಲ್ಲಿ ಕೊನೇಕ್ಷಣಕ್ಕೆ ಸಾಧಕರು ಏಕೆ ಹೇಳಿದರು ?, ಎಂಬುದನ್ನು ತಿಳಿದುಕೊಳ್ಳಬೇಕು. ಸಾಧಕನಿಗೆ ಕೊನೇ ಕ್ಷಣದಲ್ಲಿ ಅಡಚಣೆ ಬಂದಿರುವುದರಿಂದ ಈ ನಿರ್ಧಾರವನ್ನು ತೆಗೆದುಕೊಳ್ಳಬೇಕಾಯಿತು ಎಂದು ತಿಳಿದ ಮೇಲೆ ನಮ್ಮ ಮನಸ್ಸಿನಲ್ಲಿರುವ ಪ್ರತಿಕ್ರಿಯೆ ಕಡಿಮೆಯಾಗುತ್ತವೆ.

೭ ಅ ೨. ಸಮಷ್ಟಿ ಸ್ತರದಲ್ಲಿ ಇಟ್ಟುಕೊಳ್ಳಬೇಕಾದ ದೃಷ್ಟಿಕೋನ
೭ ಅ ೨ ಅ. ಸಾಧಕರು ಜವಾಬ್ದಾರ ಸಾಧಕರಿಗೆ ಹೇಳುವುದು : ಸಾಧಕನ ಸ್ವಭಾವದಿಂದಾಗಿ ತಪ್ಪಾಗಿದ್ದರೆ ಆ ಸಾಧಕನು ಜವಾಬ್ದಾರ ಸಾಧಕನಿಗೆ ಮತ್ತು ಆಶ್ರಮದಲ್ಲಿನ ಸಂಬಂಧಪಟ್ಟ ಸೇವೆಗಳ ಜವಾಬ್ದಾರಿಯಿರುವ ಸಾಧಕರಿಗೆ ಈ ಪ್ರಸಂಗವನ್ನು ಬರೆದುಕೊಡಬೇಕು. ಇದರಿಂದಾಗಿ ಆ ಸಾಧಕನಿಗೂ ಸಾಧನೆಯಲ್ಲಿ ಸಹಾಯವಾಗುತ್ತದೆ. ಒಬ್ಬ ಸಾಧಕನ ಸಂದರ್ಭದಲ್ಲಿ ಇಂತಹ ಪ್ರಸಂಗಗಳು ಸತತವಾಗಿ ಘಟಿಸುತ್ತಿದ್ದರೆ ಮುಂದೆ ಆಶ್ರಮದಲ್ಲಿನ ಜವಾಬ್ದಾರ ಸಾಧಕರಿಗೂ ತಿಳಿಸಬೇಕು. ಈ ರೀತಿ ಕೇವಲ ವ್ಯಷ್ಟಿ ಸ್ತರದಲ್ಲಿಯಲ್ಲದೆ ಎಲ್ಲ ಸ್ತರದಲ್ಲಿಯೂ ವ್ಯವಸ್ಥಿತವಾಗಲು ಪ್ರಯತ್ನಿಸುವುದೇ ನಮ್ಮ ಸಮಷ್ಟಿ ಸಾಧನೆಯಾಗಿದೆ. ಹೀಗೆ ಹೇಳುವುದರಿಂದ ಸಾಧಕರು ತಮ್ಮ ವಿಷಯದಲ್ಲಿ ನಿರ್ಮಾಣವಾದ ಪ್ರಸಂಗದಲ್ಲಿಯೂ ವ್ಯಾಪಕ ಸ್ತರದಲ್ಲಿ ವಿಚಾರ ಮಾಡಿ ಕೃತಿ ಮಾಡುತ್ತಾರೆ.

೭ ಆ. ಎರಡನೇ ಪ್ರಸಂಗ : ಆಶ್ರಮ ಸೇವೆಗಾಗಿ ಆಶ್ರಮದಲ್ಲಿನ ಜವಾಬ್ದಾರ ಸಾಧಕರು ಕೊನೇಕ್ಷಣದಲ್ಲಿ ಕೇಳುತ್ತಾರೆ. ಆಗ ಮನಸ್ಸಿನಲ್ಲಿ ಇದು ಅವರ ನಿಯಮಿತ ಸೇವೆಯ ಆಯೋಜನೆ ಇರುವುದಿಲ್ಲವೇ ? ಎಂದು ಪ್ರತಿಕ್ರಿಯೆ ಬರುತ್ತದೆ. ಇಲ್ಲಿ ಕೆಲವೊಮ್ಮೆ ಸಾಧಕರು ಸೇವೆಯನ್ನು ಸ್ವೀಕರಿಸುತ್ತಾರೆ, ಕೆಲವೊಮ್ಮೆ ಸ್ವೀಕರಿಸುವುದಿಲ್ಲ.
೭ ಆ ೧. ವ್ಯಷ್ಟಿ ಸ್ತರದ ದೃಷ್ಟಿಕೋನ
೭ ಆ ೧ ಅ. ಅಡಚಣೆ ಇಲ್ಲದಿದ್ದರೆ ಕೃತಜ್ಞತಾಭಾವದಿಂದ ಸೇವೆ ಸ್ವೀಕರಿಸುವುದು : ವ್ಯಷ್ಟಿ ಸಾಧನೆಯ ಸಂದರ್ಭದಲ್ಲಿ ನಮಗೆ ಯಾವ ಅಡಚಣೆ ಇಲ್ಲದಿದ್ದರೆ, ಸೇವೆಯನ್ನು ಸ್ವೀಕರಿಸಬೇಕು. ಸೇವೆಯನ್ನು ಸ್ವೀಕರಿಸುವಾಗ ಪ್ರತಿಕ್ರಿಯೆ ಬಂದರೆ ಸಾಧನೆಯೆಂದು ಕಡಿಮೆ ಲಾಭವಾಗುತ್ತದೆ. ಆದುದರಿಂದ ಸಾಧಕರು ಕೃತಜ್ಞತಾಭಾವದಿಂದ ಸೇವೆ ಸ್ವೀಕರಿಸಿ ಅದನ್ನು ಮಾಡಬೇಕು.
೭ ಆ ೨. ಸಮಷ್ಟಿ ಸ್ತರದ ದೃಷ್ಟಿಕೋನ
೭ ಆ ೨ ಅ. ಆಶ್ರಮದ ಸೇವೆ ಮಾಡುವ ಸಾಧಕರಿಗೆ ತಿಳಿಸುವುದು : ಈ ಪ್ರಸಂಗಗಳು ಆಶ್ರಮದಲ್ಲಿನ ಜವಾಬ್ದಾರ ಸಾಧಕರಿಗೆ ಬರೆದುಕೊಡಬೇಕು. ಹೀಗೆ ಮಾಡಿದರೆ ಆ ಸಾಧಕರ ಅಡಚಣೆಗಳನ್ನು ಅವರ ಜವಾಬ್ದಾರ ಸಾಧಕರು ಬಿಡಿಸಬಹುದು. ಈ ರೀತಿ ನಾವು ಪ್ರಯತ್ನಿಸಿದರೆ ವ್ಯಷ್ಟಿ ಸ್ತರದಲ್ಲಿ ದೃಷ್ಟಿಕೋನ ತೆಗೆದುಕೊಳ್ಳುವುದು, ಸ್ವಭಾವದೋಷಕ್ಕೆ ಸ್ವಯಂಸೂಚನೆಯನ್ನು ನೀಡುವುದು, ಇದರೊಂದಿಗೆ ಸಮಷ್ಟಿ ಸ್ತರದಲ್ಲಿ ಪ್ರಯತ್ನಗಳನ್ನು ಮಾಡಿದರೆ ಸಮಷ್ಟಿಯಲ್ಲಿಯೂ ಬದಲಾವಣೆಯಾಗುವುದು ಹಾಗೆಯೇ ತಪ್ಪು ಕಡಿಮೆಯಾಗುವುದರಿಂದ ಎಲ್ಲರಿಗೂ ಸಾಧನೆಗಾಗಿ ಅನುಕೂಲ ವಾತಾವರಣ ನಿರ್ಮಾಣವಾಗುವುದು.

೮. ಸದ್ಗುರು ರಾಜೇಂದ್ರ ಶಿಂದೆ ಇವರು ನೀಡಿದ ಇತರ ಸ್ಫೂರ್ತಿದಾಯಕ ದೃಷ್ಟಿಕೋನ

ಅ. ನಾವು ಈಶ್ವರಪ್ರಾಪ್ತಿಗಾಗಿ ಎಲ್ಲವನ್ನು ಬಿಟ್ಟು ಬಂದಿದ್ದೇವೆ. ಹಾಗಾದರೆ ನಮಗೆ ದಿನವಿಡಿ ಎಷ್ಟು ಬಾರಿ ದೇವರ ನೆನಪಾಗಬೇಕು ?, ಎಂಬ ಅಭ್ಯಾಸ ಮಾಡಿ ನಾವು ಅದರಂತೆ ಭಾವಪ್ರಯೋಗಗಳ ಸಂಖ್ಯೆಯನ್ನು ನಿಶ್ಚಯಿಸಬೇಕು. ಅವರ ಈ ಒಂದು ವಾಕ್ಯದಿಂದ ಸಾಧಕರ ಸ್ಥಿತಿಯು ಅಂತರ್ಮುಖವಾಗಿ ಪ್ರತಿಯೊಬ್ಬರು ಹೆಚ್ಚೆಚ್ಚು ಭಾವಪ್ರಯೋಗ ಮತ್ತು ದೇವರ ಸ್ಮರಣೆಯಾಗಲು ಪ್ರಯತ್ನಿಸುತ್ತಾರೆ.
ಆ. ನಮ್ಮ ಮನಸ್ಸು ಚಿಕ್ಕಮಕ್ಕಳಂತಿದೆ. ಅದಕ್ಕೆ ಸ್ವಯಂಸೂಚನೆಗಳ ಮೂಲಕ ಸಂಸ್ಕಾರ ಮಾಡಬೇಕಾಗಿದೆ, ಎಂಬುದನ್ನು ಗಮನದಲ್ಲಿ ತಂದು ಪ್ರಯತ್ನಿಸಬೇಕು.
ಇ. ನಮ್ಮ ಚಿತ್ತದಲ್ಲಿ ಅನೇಕ ಜನ್ಮಗಳ ಸಂಸ್ಕಾರಗಳಿವೆ. ಅದನ್ನು ನಾಶ ಮಾಡಲು ಹೆಚ್ಚು ಸಮಯ ತಗಲುತ್ತದೆ. ನಾವು ಎಷ್ಟು ಹೆಚ್ಚು ಸ್ವಯಂಸೂಚನೆ ಸತ್ರಗಳನ್ನು ನೀಡುತ್ತೇವೆಯೋ, ಅಷ್ಟು ಬೇಗ ಈ ಸಂಸ್ಕಾರಗಳು ಕಡಿಮೆಯಾಗುವುದು.
ಈ. ಪ್ರಕ್ರಿಯೆಯು ಕಲಿಯುವ ವಿಷಯವಾಗಿದೆ. ನಾವು ಅದರಲ್ಲಿನ ಪ್ರತಿಯೊಂದು ವಿಷಯವನ್ನು ಕಲಿಯುವ ಬಗ್ಗೆ ಗಮನಿಸಬೇಕು.

೯. ವರದಿಯ ಮೂಲಕ ಸಾಧಕರಿಗೆ ಆಧಾರ ನೀಡುವ ಸದ್ಗುರು ರಾಜೇಂದ್ರ ಶಿಂದೆ !

೯ ಅ. ಸಾಧಕರು ತಪ್ಪು ಅಥವಾ ಅಡಚಣೆ ಇವುಗಳಲ್ಲಿ ಸಿಲುಕಿಕೊಳ್ಳದೇ ಉಪಾಯಯೋಜನೆಗಳನ್ನು ಹುಡುಕುವುದರಿಂದ ಸಾಧಕರು ಮನಮುಕ್ತವಾಗಿ ಮಾತನಾಡುವುದು : ಸಾಧಕರು ಅವರಿಂದಾದ ತಪ್ಪುಗಳು ಅಥವಾ ಅಡಚಣೆಗಳನ್ನು ಸದ್ಗುರು ದಾದಾರವರಿಗೆ ಹೇಳಿದ ನಂತರ ಅವರು ಸಾಧಕರಿಗೆ ತಪ್ಪು ಅಥವಾ ಅಡಚಣೆ ಇವುಗಳಲ್ಲಿ ಸಿಲುಕಿಕೊಳ್ಳದೇ ಅವುಗಳಿಗೆ ಉಪಾಯಯೋಜನೆ ಹೇಗೆ ತೆಗೆಯುವುದು ?, ಎಂಬ ಬಗ್ಗೆ ವಿಸ್ತಾರವಾಗಿ ಮತ್ತು ಸರ್ವಾಂಗದಿಂದ ಹೇಳುತ್ತಾರೆ. ಅದರಲ್ಲಿನ ಯಾವ ವಿಷಯ ಮೊದಲಿನ ಹಂತದಲ್ಲಿ ಮಾಡಲು ಸಾಧ್ಯವಿದೆಯೋ, ಅವುಗಳನ್ನು ಮಾಡಲು ಹೇಳುವುದರಿಂದ ಸಾಧಕರಿಗೆ ಕೃತಿ ಮಾಡಲು ಸುಲಭವಾಗುತ್ತದೆ. ಇದರಿಂದಾಗಿ ಸಾಧಕರು ಅವರೊಂದಿಗೆ ಮನಮುಕ್ತವಾಗಿ ಮಾತನಾಡುತ್ತಾರೆ.
೯ ಆ. ಸದ್ಗುರು ದಾದಾರವರಿಗೆ ಸಾಧಕರ ಬಗ್ಗೆ ನಕಾರಾತ್ಮಕ ವಿಚಾರವಿರದೆ ಅವರಿಗೆ ಸಹಾಯ ಮಾಡುವ ವಿಚಾರ ಹೆಚ್ಚು ಇರುವುದರಿಂದ ಸಾಧಕರಿಗೆ ಅವರು ಆಧಾರವೆನಿಸುವುದು : ಸದ್ಗುರು ದಾದಾರವರ ಮನಸ್ಸಿನಲ್ಲಿ ಸಾಧಕರು ಏನು ಪ್ರಯತ್ನ ಮಾಡುವುದಿಲ್ಲ, ಎಂಬ ನಕಾರಾತ್ಮಕ ವಿಚಾರಗಳು ಇರುವುದಿಲ್ಲ. ಸಾಧಕರಲ್ಲಿರುವ ಸ್ವಭಾವದೋಷಗಳಿಂದ ಅವರ ಮೇಲೆ ಯಾವ ಪರಿಣಾಮವೂ ಆಗದಿರುವುದರಿಂದ ಸಾಧಕರು ನಿರಾಶರಾಗುವುದಿಲ್ಲ. ಸಾಧಕರಿಂದ ಪ್ರಯತ್ನವಾಗದಿದ್ದರೆ ಸದ್ಗುರು ದಾದಾರವರು ಅದರ ಬಗ್ಗೆ ಅಭ್ಯಾಸ ಮಾಡುತ್ತಾರೆ. ಆ ಸಾಧಕರಿಗೆ ಅವನ ಸ್ತರಕ್ಕೆ ಹೋಗಿ ಹೇಗೆ ಸಹಾಯ ಮಾಡಬಹುದು ?, ಎಂಬ ಅವರ ವಿಚಾರ ಹೆಚ್ಚಿರುವುದರಿಂದ ಸಾಧಕನಿಗೆ ಕೃತಿಮಾಡಲು ಸಾಧ್ಯವಾಗಬಹುದು, ಎಂಬ ಉಪಾಯಯೋಜನೆಯನ್ನು ಹೇಳುತ್ತಾರೆ. ಆ ಸಮಯದಲ್ಲಿ ಸದ್ಗುರು ದಾದಾರವರು ನೀವು ಏನೂ ಪ್ರಯತ್ನಿಸುವುದಿಲ್ಲ, ಎಂದು ಹೇಳುವುದಿಲ್ಲ ಅಥವಾ ಅವರ ನಡೆನುಡಿಗಳಲ್ಲಿಯೂ ವ್ಯಕ್ತವಾಗುವುದಿಲ್ಲ. ಇದರಿಂದಾಗಿ ಸಾಧಕರಿಗೆ ಅವರು ಆಧಾರವೆನಿಸುತ್ತದೆ.

ಪರಾತ್ಪರ ಗುರುದೇವಾ, ಸನಾತನದ ಸಂತರು ಕೇವಲ ಸಂತರೇ ಅಲ್ಲ, ಗುರುಗಳೇ ಆಗಿದ್ದಾರೆ ಎಂಬ ವಾಕ್ಯದ ಅನುಭೂತಿಯು ಸದ್ಗುರು ರಾಜೇಂದ್ರದಾದಾರವರ ವರದಿಯಿಂದ ನಾವು ಪಡೆಯುತ್ತಿದ್ದೇವೆ. ತಮ್ಮ ಕೃಪೆಯಿಂದಲೇ ಸದ್ಗುರು ದಾದಾರವರು ನಮ್ಮೆಲ್ಲ ಸಾಧಕರಿಗೆ ಸಾಧನೆಯಲ್ಲಿ ಸಹಾಯ ಮಾಡುತ್ತಿದ್ದಾರೆ. ಅದಕ್ಕಾಗಿ ನಾವೆಲ್ಲ ಸಾಧಕರು ತಮ್ಮ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ. ನಮ್ಮ ಪ್ರಗತಿಯಾಗಲು ಸದ್ಗುರು ದಾದಾರವರು ಯಾವ ಸಹಾಯ ಮಾಡುತ್ತಿರುವರೋ, ಅದಕ್ಕನುಸಾರ ನಮ್ಮಿಂದ ಕೃತಿಯಾಗಲಿ, ಎಂದು ಭಗವಾನ ಶ್ರೀಕೃಷ್ಣ ಮತ್ತು ತಮ್ಮ ಚರಣಗಳಲ್ಲಿ ಪ್ರಾರ್ಥನೆ !

– ವೈದ್ಯ (ಕು.) ಮಾಯಾ ಪಾಟೀಲ, ಸನಾತನ ಆಶ್ರಮ, ದೇವದ, ಪನವೇಲ. (೨೬.೭.೨೦೧೮)

Leave a Comment