ಸ್ವಭಾವದೋಷ ಮತ್ತು ಅಹಂನ ನಿರ್ಮೂಲನೆಗಾಗಿ ಪ್ರಯತ್ನಿಸುವಾಗ ಪ್ರತಿದಿನ ಪ್ರಗತಿಯ ಸ್ವಯಂಸೂಚನೆಯನ್ನೂ ತೆಗೆದುಕೊಳ್ಳಿ

೧. ಕೆಟ್ಟ ಶಕ್ತಿಗಳು ಮುಖ್ಯವಾಗಿ ನಕಾರಾತ್ಮಕ ವಿಚಾರಗಳ ಮೂಲಕ ತೊಂದರೆ ನೀಡುವುದು

ಕೆಟ್ಟ ಶಕ್ತಿಗಳು ಮುಖ್ಯವಾಗಿ ನಕಾರಾತ್ಮಕ ವಿಚಾರಗಳ ಮೂಲಕ ತೊಂದರೆಯನ್ನು ನೀಡುತ್ತವೆ. ಮನಸ್ಸಿನಲ್ಲಿ ನಕಾರಾತ್ಮಕ ವಿಚಾರಗಳು ಬರುತ್ತಿದ್ದರೆ ಭಾವಪೂರ್ಣ ನಾಮಜಪವಾಗುವುದಿಲ್ಲ. ಆದುದರಿಂದ ಆಧ್ಯಾತ್ಮಿಕ ತೊಂದರೆಗಳಲ್ಲಿ ಹೆಚ್ಚಳವಾಗಿ ದೇಹ, ಮನಸ್ಸು ಮತ್ತು ಬುದ್ಧಿಯ ಕ್ಷಮತೆ ಕಡಿಮೆಯಾಗುತ್ತದೆ. ಈ ರೀತಿ ಕೆಟ್ಟ ಶಕ್ತಿಗಳಿಗೆ ವ್ಯಕ್ತಿಯ ಮೇಲೆ ನಿಯಂತ್ರಣ ಪಡೆಯಲು ಸುಲಭವಾಗುತ್ತದೆ. ಆದುದರಿಂದ ಇಂತಹವರು ಸ್ವಭಾವದೋಷ ನಿರ್ಮೂಲನೆಯ ಪ್ರಕ್ರಿಯೆಗೆ ಸಂಬಂಧಿಸಿದಂತೆ ವರದಿಸೇವಕರೊಂದಿಗೆ ಮಾತನಾಡಿ ‘ಪ್ರಗತಿಯ ಸ್ವಯಂಸೂಚನೆ’ಯನ್ನು ತೆಗೆದುಕೊಳ್ಳುವ ಕಾಲಾವಧಿಯನ್ನು ನಿರ್ಧರಿಸಬೇಕು.

೨. ಪ್ರಗತಿಯ ಸ್ವಯಂಸೂಚನೆಯ ಮಹತ್ವ

ಅ. ಸ್ವಭಾವದೋಷ ಮತ್ತು ಅಹಂನ ನಿರ್ಮೂಲನೆಗಾಗಿ ಪ್ರಯತ್ನಿಸುವಾಗ ಪ್ರಗತಿಯ ಸ್ವಯಂಸೂಚನೆಯನ್ನು ಪ್ರತಿ ದಿನ ತೆಗೆದುಕೊಳ್ಳುವುದರಿಂದ ಮನಸ್ಸಿನಲ್ಲಿ ನಕಾರಾತ್ಮಕ ವಿಚಾರಗಳು ಬರುವುದಿಲ್ಲ ಅಥವಾ ಮನಸ್ಸಿನಲ್ಲಿ ನಕಾರಾತ್ಮಕ ವಿಚಾರಗಳ ಪ್ರಮಾಣ ಬಹಳ ಕಡಿಮೆಯಾಗುತ್ತವೆ. ಈ ಸಂದರ್ಭದಲ್ಲಿ ಆಧ್ಯಾತ್ಮಿಕ ತೊಂದರೆ ಇರುವ ಸಾಧಕರೊಂದಿಗೆ ಮಾತನಾಡಿದಾಗ ‘೬ ರಲ್ಲಿ ೫ ಸಾಧಕರು ಪ್ರಗತಿಯ ಸ್ವಯಂಸೂಚನೆಯನ್ನು ಕೊಡುವುದಿಲ್ಲ ಮತ್ತು ಅವರ ಮನಸ್ಸಿನಲ್ಲಿ ಅನೇಕ ಬಾರಿ ನಕಾರಾತ್ಮಕ ವಿಚಾರಗಳು ಬರುತ್ತವೆ’, ಎಂದು ನನ್ನ ಗಮನಕ್ಕೆ ಬಂತು.

ಆ. ಪ್ರಗತಿಯ ಸ್ವಯಂಸೂಚನೆಯ ಸಂದರ್ಭದಲ್ಲಿ ಓರ್ವ ಮಾನಸೋಪಚಾರ ತಜ್ಞರು, ”ಸ್ವಭಾವದೋಷ ಮತ್ತು ಅಹಂನ ನಿರ್ಮೂಲನೆಗಾಗಿ ಇರುವ ಸ್ವಯಂಸೂಚನೆಯನ್ನು ಯಾವುದಾದರೊಂದು ದಿನ ಕೆಲವು ಅಡಚಣೆಗಳಿಂದಾಗಿ ತೆಗೆದು ಕೊಳ್ಳದಿದ್ದರೂ, ಪ್ರಗತಿಯ ಸ್ವಯಂಸೂಚನೆಯ ಸತ್ರವನ್ನು ಪ್ರತಿದಿನ ಕೊಡಲೇಬೇಕು. ಏಕೆಂದರೆ ಪ್ರಗತಿಯ ಸೂಚನೆಯನ್ನು ನೀಡುವುದರಿಂದ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯ ಪ್ರಯತ್ನಗಳಲ್ಲಿ ಸಾತತ್ಯವಿರಿಸಲು ಬೇಕಾದ ಉತ್ಸಾಹ ಉಳಿಯಲು ಸಹಾಯವಾಗುತ್ತದೆ” ಎಂದು ಹೇಳಿದರು.

೩. ಪ್ರಗತಿಯ ಸ್ವಯಂಸೂಚನೆಯನ್ನು ತಯಾರಿಸುವ ಪದ್ಧತಿ

೩ ಅ. ನಾನು ಸ್ವಭಾವದೋಷ ಮತ್ತು ಅಹಂನ ನಿರ್ಮೂಲನೆಗಾಗಿ ಪ್ರಯತ್ನವನ್ನು ನಿಯಮಿತವಾಗಿ ಮಾಡಿದರೆ ನನ್ನಲ್ಲಿನ… ಈ ಸ್ವಭಾವದೋಷ ಶೇ. ೫೦ ರಷ್ಟು, …. ಈ ಸ್ವಭಾವದೋಷ ಶೇ. ೩೦ ರಷ್ಟು ಮತ್ತು ….ಈ ಸ್ವಭಾವದೋಷ ಶೇ. ೨೫ ರಷ್ಟು ಕಡಿಮೆಯಾಗಿದೆ ಮತ್ತು ನನ್ನ ಆನಂದದಲ್ಲಿ ಹೆಚ್ಚಳವಾಗಿದೆ. ಆದುದರಿಂದ ನಾನು ಸ್ವಭಾವದೋಷ ಮತ್ತು ಅಹಂನ ನಿರ್ಮೂಲನೆಗಾಗಿ ನಿಯಮಿತವಾಗಿ ಪ್ರಯತ್ನಿಸುವೆನು.

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.

೩ ಆ. ನಾನು ಸ್ವಭಾವದೋಷ ಮತ್ತು ಅಹಂನ ನಿರ್ಮೂಲನೆಗಾಗಿ ನಿಯಮಿತವಾಗಿ ಪ್ರಯತ್ನಿಸಿದುದರಿಂದ ನನಗೆ ಮುಂದಿನ ಲಾಭಗಳಾಗಿವೆ.

೧. ನನಗೀಗ ಸ್ವಯಂಸೂಚನೆಯನ್ನು ಕಡಿಮೆ ಸಮಯದಲ್ಲಿ ತಯಾರಿಸಲು ಬರುತ್ತದೆ.

೨. ಸ್ವಯಂಸೂಚನೆಯ ಸತ್ರಗಳನ್ನು ನೀಡಿದ ನಂತರ ಮನಸ್ಸಿಗೆ ಉತ್ಸಾಹವೆನಿಸುತ್ತದೆ.

೩. ಒಂದು ಪ್ರಸಂಗದಲ್ಲಿ ತಪ್ಪಿನ ಮೂಲಕ್ಕೆ ಹೋಗಿ ಸ್ವಭಾವದೋಷವನ್ನು ಕಂಡು ಹಿಡಿಯಲು ಸಾಧ್ಯವಾದಾಗ ನನ್ನ ಮನಸ್ಸು ಹಗುರವಾಯಿತು.

೪. ಪ್ರಸಂಗಗಳು ಘಟಿಸುವಾಗ ಮನಸ್ಸಿನಲ್ಲಿ ವಿಚಾರಗಳ ರೂಪದಲ್ಲಿ ಉಕ್ಕೇರುವ ಅಥವಾ ಕೃತಿಯಿಂದ ವ್ಯಕ್ತವಾಗುವ ಸ್ವಭಾವದೋಷಗಳ ಅರಿವಾಗಿ ಮನಸ್ಸಿಗೆ ತೀವ್ರ ಖೇದವಾಗುತ್ತದೆ.

೫. ಸ್ವಂತ ಅಥವಾ ಇತರರ ಪ್ರಸಂಗಗಳಲ್ಲಿ ನಾನು ಸಿಲುಕುವ ಪ್ರಮಾಣ ಕಡಿಮೆಯಾಯಿತು. ಆದುದರಿಂದ ವಿಚಾರಗಳಲ್ಲಿ ಖರ್ಚಾಗುವ ಮನಸ್ಸಿನ ಊರ್ಜೆ ಉಳಿಯಿತು.

೬. ಸಾಧಕರ ಗುಣಗಳ ಬಗ್ಗೆ ತಕ್ಷಣ ಅವರೆದುರು ಮತ್ತು ಇತರ ಸಾಧರೆದುರು ಮೆಚ್ಚುಗೆ ವ್ಯಕ್ತ ಪಡಿಸಿದುದರಿಂದ ನನಗೆ ಸಕಾರಾತ್ಮಕತೆಯ ಆನಂದ ಸಿಗುತ್ತದೆ.

೭. ಚಿಕ್ಕ ಚಿಕ್ಕ ಪ್ರಸಂಗಗಳಲ್ಲಿ ದೇವರ ಕೃಪೆ ಮತ್ತು ಸಾಧಕರು ಮಾಡುತ್ತಿರುವ ಸಹಾಯದ ಅರಿವಾಗಿ ಮನಸ್ಸಿನಲ್ಲಿ ಅವರ ಬಗ್ಗೆ ಕೃತಜ್ಞತಾಭಾವವು ಜಾಗೃತವಾಗುತ್ತದೆ. ಆದುದರಿಂದ ನಾನು ಸ್ವಭಾವದೋಷ ಮತ್ತು ಅಹಂನ ನಿರ್ಮೂಲನೆಗಾಗಿ ನಿಯಮಿತವಾಗಿ ಪ್ರಯತ್ನಿಸುವೆನು.

೩ ಇ. ಪ್ರಗತಿಯ ಸ್ವಯಂಸೂಚನೆಯನ್ನು ಮುಂದಿನ ವಿಷಯಗಳ ಆಧಾರದಲ್ಲಿಯೂ ತಯಾರಿಸಬಹುದು.

೧. ಸಂತ, ಸದ್ಗುರು, ಹಾಗೆಯೇ ಪರಾತ್ಪರ ಗುರು ಡಾ. ಆಠವಲೆಯವರು ಮಾಡಿದ ಪ್ರಶಂಸೆ.

೨. ಒಳ್ಳೆಯ ಅನುಭೂತಿಗಳು, ಇತ್ಯಾದಿ.

– ಶ್ರೀ. ಗಿರಿಧರ ಭಾರ್ಗವ ವಝೆ, ಸನಾತನ ಆಶ್ರಮ, ರಾಮನಾಥಿ, ಗೋವಾ. (೧೩.೧೦.೨೦೨೩)

Leave a Comment