ಸ್ವಭಾವದೋಷ ಮತ್ತು ಅಹಂಗಳಿಂದಾಗಿ ಮನಸ್ಸಿಗಾಗುವ ಗಾಯ ಗುಣಪಡಿಸಲು ಔಷಧರೂಪಿ ಸ್ವಯಂಸೂಚನೆಗಳ ಮಹತ್ವ

ಗುರುದೇವರ ಕೃಪೆಯಿಂದ ನನಗೆ ಸಾಧಕರ ವ್ಯಷ್ಟಿ ಸಾಧನೆಯ ವರದಿಯನ್ನು ಪಡೆಯುವ ಸೇವೆ ಇದೆ. ಅದರ ಬಗ್ಗೆ ಚಿಂತನೆ ಮಾಡುವಾಗ ಗುರುದೇವರು ನನಗೆ ಸೂಚಿಸಿದ ಅಂಶಗಳನ್ನು ಮುಂದೆ ಕೊಡುತ್ತಿದ್ದೇನೆ.

ವ್ಯಷ್ಟಿ ಸಾಧನೆಯ ಮುಖ್ಯ ಭಾಗವಾಗಿರುವ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಗಾಗಿ ಮಾಡುವ ಪ್ರಯತ್ನಗಳ ಬಗ್ಗೆ ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.
ಶ್ರೀಮತಿ ಮೀರಾ ಕರಿ

೧. ಉಷ್ಣತೆಗೆ ಕರಗುವ ಮಂಜುಗೆಡ್ಡೆಗಳಂತೆ ಸಕಾರಾತ್ಮಕ ದೃಷ್ಟಿಕೋನದ ಊರ್ಜೆಗೆ ಕರಗುವ ಸ್ವಭಾವದೋಷಗಳ ಕಲ್ಲುಗಳು

ನಾವು ನಮ್ಮ ಅಭಿಪ್ರಾಯಗಳಿಗೆ ಬದ್ಧರಾಗದೇ (ನಮ್ಮ ಮನಸ್ಸನ್ನು ಕಠೋರ ಮಾಡದೇ) ಸಚ್ಚಿದಾನಂದ ಪರಬ್ರಹ್ಮ ಗುರುದೇವರು, ಸದ್ಗುರುಗಳು, ಗುರುಗಳು, ಸಂತರು ಮತ್ತು ಜವಾಬ್ದಾರ ಸಾಧಕರು ನೀಡಿದ ದೃಷ್ಟಿಕೋನವನ್ನು ಸ್ವೀಕರಿಸಿದರೆ, ಸಾಧನೆಯನ್ನು ಮಾಡುವ ನಮ್ಮ ತಳಮಳ ತಾನಾಗಿಯೇ ಹೆಚ್ಚಾಗುತ್ತದೆ. ನಾವು ನಮ್ಮ ಸ್ವಭಾವದೋಷಗಳನ್ನು ಬಿಗಿದಪ್ಪಿಕೊಂಡರೆ ಪ್ರಸಂಗಗಳನ್ನು ಎದುರಿಸುವಾಗ ಸಂಘರ್ಷ ಎದುರಿಸಬೇಕಾಗುತ್ತದೆ. ನಮಗೆ ಕೆಟ್ಟದೆನಿಸುತ್ತದೆ. ನಾವು ನಕಾರಾತ್ಮಕ ಸ್ಥಿತಿಗೆ ಹೋಗುತ್ತೇವೆ. ಮಂಜುಗಡ್ಡೆಯು ಗಟ್ಟಿ ಮತ್ತು ಹರಿತವಾಗಿರುತ್ತದೆ; ಆದರೆ ಅದಕ್ಕೆ ಉಷ್ಣತೆ ಸಿಕ್ಕರೆ ಅದು ಕರಗಿ ನೀರಾಗುತ್ತದೆ. ಅದರಂತೆ ನಾವು ನಮ್ಮ ಮನಸ್ಸಿಗೆ ನೀಡಿದ ಸಕಾರಾತ್ಮಕ ದೃಷ್ಟಿಕೋನದ ಊರ್ಜೆ ನಮ್ಮಲ್ಲಿರುವ ಸ್ವಭಾವದೋಷಗಳ ಕಲ್ಲುಗಳನ್ನು ಕರಗಿಸುತ್ತದೆ. ಸಚ್ಚಿದಾನಂದ ಪರಬ್ರಹ್ಮ ಗುರುದೇವರು, ಸದ್ಗುರುಗಳು, ಗುರುಗಳು, ಸಂತರು ಮತ್ತು ಜವಾಬ್ದಾರ ಸಾಧಕರು ನೀಡಿದ ಬೋಧನೆಯನ್ನು ಮತ್ತು ದೃಷ್ಟಿಕೋನಗಳನ್ನು ಮನಃಪೂರ್ವಕ ಸ್ವೀಕರಿಸಿ ಆಚರಣೆಯಲ್ಲಿ ತಂದರೆ ಸ್ವಭಾವದೋಷಗಳ ಕಲ್ಲುಗಳು ಕರಗಿ ನಮ್ಮ ಮನಸ್ಸು ಗುರುಚರಣಗಳಲ್ಲಿ ಸಮರ್ಪಿತವಾಗಲು ಸಹಾಯವಾಗುತ್ತದೆ.

೨. ಒಬ್ಬಂಟಿ ಪ್ರಯತ್ನ ಮಾಡದೇ ಪರಮೇಶ್ವರನಿಗೆ ಶರಣಾದರೆ ಆವಶ್ಯಕವಿರುವ ಕ್ಷಮತೆ ಮತ್ತು ಸಕಾರಾತ್ಮಕ ವಿಚಾರಗಳು ದೊರೆತಯುತ್ತವೆ

ನಾವು ನಮ್ಮಷ್ಟಕ್ಕೇ ಪ್ರಯತ್ನ ಮಾಡದೇ ಪರಮೇಶ್ವರನಿಗೆ ಶರಣಾದರೆ ಅವನು ನಮಗೆ ಸ್ವಭಾವದೋಷಗಳನ್ನು ದೂರ ಮಾಡಲು ಆವಶ್ಯಕವಿರುವ ಕ್ಷಮತೆ ಮತ್ತು ಸಕಾರಾತ್ಮಕ ವಿಚಾರಗಳನ್ನು ನೀಡುತ್ತಾನೆ ಮತ್ತು ನಮ್ಮನ್ನು ರಕ್ಷಿಸುತ್ತಾನೆ. ನಾವು ನಮ್ಮಲ್ಲಿರುವ ಸ್ವಭಾವದೋಷಗಳಿಂದ ಯಾವುದಾದರೊಂದು ಪರಿಸ್ಥಿತಿಯಲ್ಲಿ ಸಿಕ್ಕಿಕೊಂಡರೆ ನಾವು ನಮ್ಮ ಮನಸ್ಸಿನಲ್ಲಿ, ‘ಇದು ನನ್ನಲ್ಲಿರುವ ಸ್ವಭಾವದೋಷಗಳಿಂದಾಗಿ ಆಯಿತು. ನನ್ನ ಸ್ವಭಾವದೋಷಗಳು ಪುನಃ ಪುನಃ ಪ್ರಕಟವಾಗುತ್ತಿವೆ. ನಾನು ಏನು ಮಾಡಲಿ ? ನಾನು ಇದರಿಂದ ಹೇಗೆ ಹೊರಬರಲಿ ? ಇದರಿಂದ ನಾನು ಹೇಗೆ ಬಿಡುಗಡೆಯಾಗಲಿ ? ಈ ಸ್ವಭಾವದೋಷಗಳಿಂದಾಗಿ ನನ್ನ ಸಾಧನೆ ಆಗುವುದಿಲ್ಲ. ಇದರಿಂದ ಹೊರಗೆ ಬರಲು ನಾನು ಕಡಿಮೆ ಬೀಳುತ್ತಿದ್ದೇನೆ’, ಎಂಬಂತಹ ವಿಚಾರಗಳು ಬರುತ್ತವೆ, ಇದರಿಂದ ನಮಗೆ ನಿರಾಶೆ ಬರುತ್ತದೆ. ನಾವು ಧೈರ್ಯ ಮತ್ತು ಉತ್ಸಾಹವನ್ನು ಕಳೆದುಕೊಳ್ಳುತ್ತೇವೆ. ನಮ್ಮ ಮುಖದ ಮೇಲೆ ಇದು ಸ್ಪಷ್ಟವಾಗಿ ಕಾಣಿಸುತ್ತದೆ. ನಾವು ನಕಾರಾತ್ಮಕ ಸ್ಥಿತಿಗೆ ಹೋಗಿ ಪರಮೇಶ್ವರನನ್ನು ಮರೆಯುತ್ತೇವೆ. ನಾವೇ ನಮ್ಮನ್ನು ನಿರಾಶೆಯ ಕೂಪದಲ್ಲಿ ಕೂಡಿಹಾಕುತ್ತೇವೆ. ನಮ್ಮ ಸ್ತರದಲ್ಲಿ ‘ಇದರಿಂದ ಹೇಗೆ ಹೊರಗೆ ಬರುವುದು’, ಎಂಬ ವಿಚಾರ ಮಾಡುವುದರಲ್ಲಿಯೇ ಸಾಧಕರ ಹಲವು ಗಂಟೆಗಳು, ಕೆಲವು ದಿನ ಅಥವಾ ಕೆಲವು ತಿಂಗಳುಗಳೇ ಕಳೆದು ಹೋಗುತ್ತವೆ. ನಾವು ಆನಂದದಿಂದ ವಂಚಿತರಾಗುತ್ತೇವೆ ಮತ್ತು ದುಃಖಿಯಾಗುತ್ತೇವೆ. ನಾವು ನಾವಾಗಿಯೇ ಈ ರೀತಿ ವಿಚಾರ ಮಾಡುತ್ತಾ ಕುಳಿತರೆ ಆ ಪ್ರಸಂಗದಿಂದ ಮತ್ತು ಸ್ವಭಾವದೋಷಗಳಿಂದ ಬಿಡುಗಡೆಯಾಗಲು ನಮಗೆ ಬಹಳ ಸಮಯ ಬೇಕಾಗುತ್ತದೆ. ನಾವು ನಮ್ಮ ಪ್ರಸಂಗಗಳ ಬಗ್ಗೆ ನಮ್ಮಷ್ಟಕ್ಕೆ ವಿಚಾರ ಮಾಡದೇ ಭಗವಂತನ ಸಹಾಯ ಪಡೆದುಕೊಂಡರೆ, ನಾವು ಪ್ರಸಂಗಗಳಿಂದ ಮತ್ತು ಸ್ವಭಾವದೋಷಗಳಿಂದ ಬೇಗನೆ ಹೊರಗೆ ಬರಬಹುದು.

೩. ಭಗವಂತನಿಗೆ ಶರಣಾಗಿ ಪ್ರಾರ್ಥಿಸಿದರೆ ಪ್ರಸಂಗಗಳಿಂದ ಬೇಗನೇ ಹೊರಗೆ ಬರಲು ಸಹಾಯವಾಗುವುದು

ಸಾಧಕರು ಭಗವಂತನಿಗೆ ಶರಣಾಗಿ ಪ್ರಾರ್ಥನೆ ಮಾಡಬೇಕು, ‘ಭಗವಂತಾ, ಈ ಪರಿಸ್ಥಿತಿಯಿಂದ ನಾನು ಹೇಗೆ ಹೊರಗೆ ಬರಬೇಕೆಂಬುದು ನನಗೆ ತಿಳಿಯುತ್ತಿಲ್ಲ, ನನಗೆ ನೀನೇ ಸಹಾಯ ಮಾಡು. ನನ್ನಲ್ಲಿರುವ ಸ್ವಭಾವದೋಷಗಳಿಂದಾಗಿ ಈ ಪ್ರಸಂಗದಲ್ಲಿ ನನಗೆ ನಿನ್ನ ಅನುಸಂಧಾನದಲ್ಲಿರಲು ಸಾಧ್ಯವಾಗುತ್ತಿಲ್ಲ. ನಾನು ಅಸಮರ್ಥನಾಗಿದ್ದೇನೆ. ಈ ಸ್ವಭಾವದೋಷಗಳಿಂದ ನಾನು ನನ್ನ ಆನಂದವನ್ನು ಕಳೆದುಕೊಂಡಿದ್ದೇನೆ. ಆನಂದವನ್ನು ನೀಡುವವನು ನೀನೇ ಆಗಿರುವೆ. ನನಗೆ ನೀನೆ ಸಹಾಯ ಮಾಡು, ಸಹಾಯ ಮಾಡು!’ ನಾವು ಭಗವಂತನಿಗೆ ಹೀಗೆ ಆರ್ತರಾಗಿ ಶರಣಾದರೆ, ಭಗವಂತನು ನಿಜವಾಗಿಯೂ ಯಾರಾದರೊಬ್ಬರ ಮಾಧ್ಯಮದಿಂದ ನಮ್ಮ ಕಡೆಗೆ ಬರುವನು ಅಥವಾ ನಮಗೆ ಯೋಗ್ಯ ಸಕಾರಾತ್ಮಕ ವಿಚಾರವನ್ನು ನೀಡುವನು. ಭಗವಂತನು ನಮಗೆ ನಕಾರಾತ್ಮಕ ವಿಚಾರವನ್ನು ದೂರ ಮಾಡಲು ಕ್ಷಮತೆಯನ್ನು ನೀಡಿ, ಯೋಗ್ಯ ವಿಚಾರವನ್ನು  ಕೃತಿಯಲ್ಲಿ ತಂದು, ಆ ಸ್ವಭಾವದೋಷದಿಂದ ನಮ್ಮನ್ನು ಮುಕ್ತಗೊಳಿಸಿ ಆ ಪರಿಸ್ಥಿತಿಯಿಂದ ಹೊರಗೆ ತೆಗೆಯುವನು.

೪. ದೇವರ ಸಹಾಯ ಪಡೆದರೆ ವಿಹಂಗಮ ಮಾರ್ಗದಿಂದ ಸಾಧನೆಯಾಗುವುದು

ವೈಯಕ್ತಿಕ ಸ್ತರದಲ್ಲಿ ಪ್ರಯತ್ನಿಸುವುದೆಂದರೆ, ಯಾವುದಾದರೊಂದು ಊರಿಗೆ ಹೋಗಲು ಎತ್ತಿನಗಾಡಿಯಲ್ಲಿ ಪ್ರಯಾಣ ಮಾಡಿದಂತೆ, ಮತ್ತು ದೇವರ ಸಹಾಯ ಪಡೆಯುವುದೆಂದರೆ ವಿಮಾನದಿಂದ ಪ್ರಯಾಣ ಮಾಡಿದಂತೆ!

೫. ಮನಸ್ಸಿಗೆ ಸಕಾರಾತ್ಮಕ ದೃಷ್ಟಿಕೋನವನ್ನು ನೀಡುವ ಸ್ವಯಂಸೂಚನೆಗಳನ್ನು ನೀಡುವುದರ ಮಹತ್ವ

ನಮ್ಮಲ್ಲಿರುವ ಸ್ವಭಾವದೋಷಗಳಿಂದ ನಮ್ಮಿಂದ ಅನೇಕ ತಪ್ಪುಗಳಾಗುತ್ತಿರುತ್ತವೆ. ಅವುಗಳಿಂದ ನಮಗೆ ಮತ್ತು ಸಮಷ್ಟಿಗೂ ತೊಂದರೆಯಾಗುತ್ತದೆ. ಕೆಲವೊಮ್ಮೆ ನಮ್ಮಲ್ಲಿರುವ ಸ್ವಭಾವದೋಷಗಳಿಂದ ನಮ್ಮ ಮನಸ್ಸಿನ ವಿರುದ್ಧ ಘಟನೆಗಳಾಗುತ್ತವೆ ಮತ್ತು ನಮ್ಮ ಮನಸ್ಸಿಗೆ ನೋವಾಗುತ್ತದೆ. ನಾವು ಅವುಗಳನ್ನು ಮರೆಯಲು ಎಷ್ಟು ಪ್ರಯತ್ನಿಸಿದರೂ ಮರೆಯಲಾಗುವುದಿಲ್ಲ. ನಾವು ದಿನದಲ್ಲಿ ೩೦ ರಿಂದ ೪೦ ನಕಾರಾತ್ಮಕ ವಿಚಾರಗಳನ್ನು ಮಾಡಿ ನಮ್ಮ ಮನಸ್ಸಿಗೆ ನಾವೇ ಚುಚ್ಚುತ್ತಿರುತ್ತೇವೆ. ನಂತರ ಮನಸ್ಸಿನಲ್ಲಿ ನಕಾರಾತ್ಮಕ ವಿಚಾರಗಳ ಕೇಂದ್ರ ವಾಸಿಯಾಗದ ಗಾಯದ ರೂಪದಲ್ಲಿ ನಮಗೆ ತೊಂದರೆಗಳನ್ನು ನೀಡತೊಡಗುತ್ತದೆ.

ಗಾಯ ದೊಡ್ಡದಾದ ನಂತರ ಅದನ್ನು ಗುಣಪಡಿಸಲು ನಾವು ಅದಕ್ಕೆ ೫-೬ ಸಲ ಆವಶ್ಯಕ ಔಷಧಿಯನ್ನು (ಸ್ವಯಂಸೂಚನೆಗಳನ್ನು ಕೊಡುತ್ತೇವೆ) ಹಚ್ಚುತ್ತೇವೆ. ಆ ಆಳವಾದ ಗಾಯಕ್ಕೆ ಮೇಲಿಂದ ಮೇಲೆ ಔಷಧೋಪಚಾರ ಮಾಡಿದರೆ ಮಾತ್ರ ಆ ಗಾಯ ಬೇಗನೆ ಗುಣವಾಗುತ್ತದೆ. ನಾವು ಪ್ರಸಂಗದ ಬಗ್ಗೆ ನಕಾರಾತ್ಮಕ ವಿಚಾರಗಳನ್ನು ಮಾಡಿದರೆ ಮನಸ್ಸಿಗೆ ದುಃಖವಾಗುತ್ತದೆ ಮತ್ತು ನಮಗೆ ದಣಿವಾಗುತ್ತದೆ. ನಾವು ಮನಸ್ಸಿಗೆ ದಿನದಲ್ಲಿ ೧೫ ರಿಂದ ೨೦ ಸಲ ಸ್ವಯಂಸೂಚನೆಗಳನ್ನು (ಔಷಧಿ) ನೀಡಿದರೆ, ಆ ಆಳವಾದ ಗಾಯ (ಸ್ವಭಾವದೋಷ) ಕಡಿಮೆ ಕಾಲಾವಧಿಯಲ್ಲಿ ಗುಣಮುಖವಾಗುತ್ತದೆ. ಮನಸ್ಸಿನಲ್ಲಿರುವ ನಕಾರಾತ್ಮಕತೆ ಎಂಬ ಗಾಯದ ಮೇಲೆ (ಸ್ವಭಾವದೋಷಗಳಿಗೆ) ಸಕಾರಾತ್ಮಕತೆ ಎಂಬ ಔಷಧಿಯನ್ನು (ಸ್ವಯಂಸೂಚನೆಗಳನ್ನು ನೀಡುವುದು) ಅನೇಕ ಸಲ ಹಚ್ಚುವುದರಿಂದ ಗಾಯವು ಬೇಗನೆ ಗುಣವಾಗುತ್ತದೆ. ಇದರಿಂದ ‘ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಸ್ವಭಾವದೋಷ ಹೆಚ್ಚಿರುವ ಸಾಧಕರಿಗೆ ದಿನದಲ್ಲಿ ೧೫ ರಿಂದ ೨೦ ಬಾರಿ ಸ್ವಯಂಸೂಚನೆಗಳನ್ನು’ ಕೊಡಲು ಹೇಳಿರುವುದರ ಮಹತ್ವ ನನ್ನ ಗಮನಕ್ಕೆ ಬಂದಿತು.

ಹೇ ಗುರುದೇವಾ, ನೀವು ಸೂಚಿಸಿದ ಈ ಅಂಶಗಳನ್ನು ನಿಮ್ಮ ಚರಣಗಳಲ್ಲಿಯೇ ಅರ್ಪಿಸುತ್ತಿದ್ದೇನೆ. ನನ್ನಿಂದ ಈ ಅಂಶಗಳನ್ನು ಬರೆಯಿಸಿಕೊಂಡಿದ್ದಕ್ಕಾಗಿ ನಾನು ನಿಮ್ಮ ಚರಣಗಳಲ್ಲಿ ಕೋಟಿ ಕೋಟಿ ಬಾರಿ ಕೃತಜ್ಞಳಾಗಿದ್ದೇನೆ.

– ಶ್ರೀಮತಿ ಮೀರಾ ಕರಿ (ಆಧ್ಯಾತ್ಮಿಕ ಮಟ್ಟಶೇ. ೬೩, ೬೫ ವರ್ಷಗಳು), ಸನಾತನ ಆಶ್ರಮ, ರಾಮನಾಥಿ, ಗೋವಾ. (೪.೧೨.೨೦೨೨)

Leave a Comment