ಪರಾತ್ಪರ ಗುರು ಡಾ. ಜಯಂತ ಆಠವಲೆಯವರ ಅಮೃತ ಮಹೋತ್ಸವ ವರ್ಷದ ನಿಮಿತ್ತ…

ಜೀವನದಲ್ಲಿ ಪರಾತ್ಪರ ಗುರು ಡಾ. ಆಠವಲೆಯವರ ರೂಪದಲ್ಲಿ ‘ಓರ್ವ ಶ್ರೇಷ್ಠ ಆಧ್ಯಾತ್ಮಿಕ ಗುರು’ಗಳು ದೊರೆತ ಬಗ್ಗೆ ಕೃತಜ್ಞತೆಯೆನಿಸಿ ಗುರುಗಳ ಶೋಧನೆ ನಿಲ್ಲುವುದು ಮತ್ತು ಅವರ ಸಹವಾಸದಲ್ಲಿರುವಾಗ ಕಲಿತ ಅಂಶಗಳು

ಶ್ರೀ. ಕೊಂಡಿಬಾ ಜಾಧವ

೧. ರಾಷ್ಟ್ರ, ಧರ್ಮ ಮತ್ತು ಅಧ್ಯಾತ್ಮಕ್ಕಾಗಿ ಏನಾದರೂ ಮಾಡುವ ವಿಚಾರಗಳ ಬೀಜವು ಪ.ಪೂ. ಡಾಕ್ಟರರ ಮನಸ್ಸಿನಲ್ಲಿ ಬಿತ್ತಲ್ಪಡುವುದು ಹಾಗೂ ೨೦೧೬ರ ಒಳಗೆ ಅದು ವಟವೃಕ್ಷವಾಗಿ ರೂಪಾಂತರವಾಗುವುದು

ಪ.ಪೂ. ಡಾಕ್ಟರರು ವಿದೇಶದಲ್ಲಿದ್ದಾಗ ‘ರಾಷ್ಟ್ರಮತ್ತು ಧರ್ಮದ ಕುಸಿದಿರುವ ಸ್ಥಿತಿಯನ್ನು ನೋಡಿ ಅವರ ಮನಸ್ಸಿನಲ್ಲಿ ‘ರಾಷ್ಟ್ರ, ಧರ್ಮ ಮತ್ತು ಅಧ್ಯಾತ್ಮಕ್ಕಾಗಿ ಎಂತಹ ಒಂದು ಕೃತಿ ಮಾಡಬೇಕೆಂದರೆ ಅದರಿಂದ ಹಿಂದೂಸ್ಥಾನದ ಹಿಂದೂಗಳು ಜಗತ್ತಿನಲ್ಲಿ ಸನ್ಮಾನದಿಂದ ಇರಬೇಕು ಎಂಬ ನಿಶ್ಚಯದ ಬೀಜವು ಅಂಕುರಿಸಿರಬೇಕು. ಸ್ವಾಮಿ ವಿವೇಕಾನಂದರ ಒಂದು ಸುವಿಚಾರವಿದೆ, ‘ಒಂದು ವೇಳೆ ನಿಮ್ಮ ಮನಸ್ಸಿನಲ್ಲಿ ಯಾವುದೇ ಒಂದು ಕಾರ್ಯ ಮಾಡುವ ವಿಚಾರ ಬಂದು ಅದರೊಂದಿಗೆ ಶೇ. ೧೦೦ ರಷ್ಟು ಸತ್ಯ ಹಾಗೂ ನಿಸ್ವಾರ್ಥದ ಜೊತೆಯಿದ್ದರೆ, ಅಲ್ಲಿ ಈಶ್ವರನ ಸಹಾಯ ಶೇ. ೧೦೦ ರಷ್ಟು ಸಿಗುವುದು ಖಚಿತ. ೧೯೯೦ ರಲ್ಲಿನ ಸಂಸ್ಥೆಯ ಕಾರ್ಯ ಮತ್ತು ೨೦೧೬ ರಲ್ಲಿನ ಅದರ ವಿಸ್ತಾರವನ್ನು ನೋಡಿದರೆ ಇದರ ಕಲ್ಪನೆ ಬರುತ್ತದೆ. ಇಂದು ನಮಗೆ ‘ರಾಷ್ಟ್ರ, ಧರ್ಮ ಮತ್ತು ಅಧ್ಯಾತ್ಮದ ಸಣ್ಣ ಒಂದು ಬೀಜವು ವಟವೃಕ್ಷವಾಗಿ ರೂಪಾಂತರವಾಗಿರುವುದು ಕಾಣಿಸುತ್ತದೆ.

೨. ಉಚ್ಚ ಶಿಕ್ಷಿತ ಮಾನಸೋಪಚಾರ ತಜ್ಞರಾಗಿದ್ದರೂ ಗೌರವ, ಪ್ರತಿಷ್ಠೆಯನ್ನು ಬದಿಗೊತ್ತಿ ಕೇವಲ ಗುರುಗಳ ಆಜ್ಞಾಪಾಲನೆ ಮಾಡುವ ಪ. ಪೂ. ಡಾಕ್ಟರ್ !

ಪ. ಪೂ. ಡಾಕ್ಟರರು ಇದಕ್ಕಾಗಿ ತುಂಬ ಪರಿಶ್ರಮಿಸಿದರು. ಪ. ಪೂ. ಭಕ್ತರಾಜ ಮಹಾರಾಜರ ಸಹವಾಸದಲ್ಲಿರುವಾಗ ಅವರ ಭಕ್ತರೊಂದಿಗೆ ನಮ್ರತೆಯಿಂದ ಹೊಂದಾಣಿಕೆ ಮಾಡಿಕೊಳ್ಳುವುದು ಅಷ್ಟು ಸುಲಭದ ವಿಷಯವಾಗಿರಲಿಲ್ಲ. ಏಕೆಂದರೆ, ಪ. ಪೂ. ಡಾಕ್ಟರರು ಉಚ್ಚ ಶಿಕ್ಷಿತರು ಹಾಗೂ ವಿದೇಶದಿಂದ ‘ಮಾನಸೋಪಚಾರದ ವಿಷಯದಲ್ಲಿ ಸಂಶೋಧನೆ ಮಾಡಿ ಬಂದವರಾಗಿದ್ದರು. ಇದರಿಂದ ಹಾಗೂ ಭಜನೆ-ಕೀರ್ತನೆಯಲ್ಲಿ ರಮಿಸುವ ಪ. ಪೂ. ಭಕ್ತರಾಜರ ಭಕ್ತರಲ್ಲಿ ಬೌದ್ಧಿಕ ಹಾಗೂ ಶೈಕ್ಷಣಿಕ ವ್ಯತ್ಯಾಸವು ಬಹಳಷ್ಟಿತ್ತು. ಹೀಗಿದ್ದರೂ ಪ. ಪೂ. ಡಾಕ್ಟರರು ತಮ್ಮ ಸಮಾಜದಲ್ಲಿನ ಸ್ಥಾನ, ಶೈಕ್ಷಣಿಕ ಅರ್ಹತೆ, ಮಾನಸೋಪಚಾರ ತಜ್ಞರೆಂದು ಜಗತ್ತಿನಾದ್ಯಂತ ತಮ್ಮ ಹೆಸರಿನ ಸುತ್ತಲಿದ್ದ ಕೀರ್ತಿಯ ವಲಯವನ್ನು ಬದಿಗಿಟ್ಟು ಅವರು ಪ. ಪೂ. ಭಕ್ತರಾಜ ಮಹಾರಾಜರ ಆಜ್ಞಾಪಾಲನೆ ಮಾಡಿದರು. ಅವರ ಇಂತಹ ವರ್ತನೆಗೆ ‘ನಮ್ರತೆ ಹಾಗೂ ಲೀನತೆ ಎಂಬ ಶಬ್ದವೂ ಕಡಿಮೆಯೆನಿಸುವುದು.

೩. ಪ. ಪೂ. ಡಾಕ್ಟರರ ಮಾಸಿಕ ಅಭ್ಯಾಸವರ್ಗದಲ್ಲಿ ಕಲಿಯಲು ಸಿಕ್ಕಿದ ಅಂಶಗಳು

೩ ಅ. ಪ. ಪೂ. ಡಾಕ್ಟರರ ಕಲಿಸುವ ಪದ್ಧತಿ, ವಿಷಯದ ಬಗ್ಗೆ ಮಾಡಿದ ಆಳವಾದ ಅಧ್ಯಯನ ಹಾಗೂ ಸಮರ್ಪಕ ವಿಶ್ಲೇಷಣೆಯು ಆಶ್ಚರ್ಯಚಕಿತಗೊಳಿಸುವಂತಿರುವುದು : ಪ. ಪೂ. ಡಾಕ್ಟರರ ಪರಿಪೂರ್ಣ ಆಯೋಜನೆ ಮತ್ತು ಅವರು ಮಾಡಿದ ಸಾಧಕರ ಸಂಘಟನೆಯನ್ನು ನೋಡಿ ಈ ಲೇಖನವನ್ನು ಬರೆಯುವಾಗ (ದೇವರೇ ಅದನ್ನು ಬರೆಯಿಸಿಕೊಂಡರು) ಪ. ಪೂ. ಡಾಕ್ಟರರ ಒಂದು ಮಹತ್ವದ ಗುಣವೈಶಿಷ್ಟ್ಯವು ನನಗೆ ಮುಖ್ಯವಾಗಿ ಅರಿವಾಗುತ್ತಿತ್ತು. ಅದೇನೆಂದರೆ, ಅವರಲ್ಲಿನ ‘ನಿಶ್ಚಯಾಚಾ ಮಹಾಮೇರೂ | ಸಕಳ ಜನಾಂಚಾ ಕೈವಾರೂ || ಎನ್ನುವ ವೃತ್ತಿ. ೧೯೯೩ ಸೆಪ್ಟೆಂಬರ್ ತಿಂಗಳಿನಲ್ಲಿ ಸನಾತನ ಸಂಸ್ಥೆಯೊಂದಿಗೆ ನನ್ನ ಸಂಪರ್ಕವಾಯಿತು. ಜಿಜ್ಞಾಸೆಯಿಂದ ‘ಅಧ್ಯಾತ್ಮವನ್ನು ತಿಳಿದುಕೊಳ್ಳುವುದು ಹಾಗೂ ಉತ್ತಮ ಸಾಧಕನಾಗುವುದು ಹೇಗೆ ಎಂಬುದನ್ನು ಕಲಿಯುವ ವಿಚಾರದಿಂದ ನಾನು ಸನಾತನ ಸಂಸ್ಥೆಯೊಂದಿಗೆ ಜೋಡಿಸಲ್ಪಟ್ಟೆನು. ಆ ಸಮಯದಲ್ಲಿ ಸಂಸ್ಥೆಯ ಅಧ್ಯಾತ್ಮದ ಅಭ್ಯಾಸವರ್ಗವು ತಿಂಗಳಿಗೊಮ್ಮೆ ಬೆಳಗ್ಗೆ ೧೦ ರಿಂದ ಸಾಯಂಕಾಲ ೫ ಗಂಟೆಯ ವರೆಗೆ ಹೀಗೆ ಪೂರ್ಣ ದಿನ ಇರುತ್ತಿತ್ತು. ಈ ಅಭ್ಯಾಸವರ್ಗದಲ್ಲಿ ನನಗೆ ಪ. ಪೂ. ಡಾಕ್ಟರರ ಕಲಿಸುವ ಪದ್ಧತಿ ಮತ್ತು ಯಾವುದೇ ವಿಷಯದಲ್ಲಿ ಅವರು ಮಾಡಿದ ಆಳವಾದ ಹಾಗೂ ಸಮರ್ಪಕ ವಿಶ್ಲೇಷಣೆಯು ಇಷ್ಟವಾಯಿತು. ನನಗೆ ಮಾತ್ರವಲ್ಲ, ಸಂಪೂರ್ಣ ವರ್ಗವನ್ನೇ ಅದು ಆಶ್ಚರ್ಯಚಕಿತಗೊಳಿಸುವಂತದ್ದಾಗಿತ್ತು. ಅವರು ವರ್ಗದಲ್ಲಿನ ಜಿಜ್ಞಾಸುಗಳಿಗೆ ಆಧ್ಯಾತ್ಮಿಕ ಸ್ತರದಲ್ಲಿ ಸಂಪೂರ್ಣ ಸಂದೇಹನಿವಾರಣೆ ಮಾಡಿ ಅವರನ್ನು ಮುಂದುಮುಂದಿನ ಹಂತಕ್ಕೆ ಹೋಗಲು ಪ್ರೋತ್ಸಾಹಿಸುತ್ತಿದ್ದರು. ಮಹತ್ವದ ವಿಷಯವೆಂದರೆ ಅವರು ವರ್ಗಕ್ಕೆ ಬರುವ ಪರಸ್ಪರರನ್ನು ಪ್ರೇಮದಿಂದ ಜೋಡಿಸುತ್ತಿದ್ದರು.
೩ ಆ. ಪ. ಪೂ. ಡಾಕ್ಟರರು ಅಭ್ಯಾಸವರ್ಗದಲ್ಲಿ ಸಾಧನೆಯಲ್ಲಿನ ಪ್ರಾಯೋಗಿಕ ಹಾಗೂ ತಾತ್ತ್ವಿಕ ಭಾಗಗಳ ವಿವೇಚನೆಯನ್ನು ಮಾಡುವುದು ಹಾಗೂ ವರ್ಗದಲ್ಲಿ ಎಲ್ಲರಿಗೂ ಜ್ಞಾನದ ಅಜ್ಞಾತ ರಹಸ್ಯವು ತಿಳಿದ ಬಗ್ಗೆ ಆನಂದವಾಗುವುದು : ಅಧ್ಯಾತ್ಮ ಮತ್ತು ಸ್ಪಂದನಶಾಸ್ತ್ರದ ಪರಸ್ಪರ ಸಂಬಂಧವು ಇಷ್ಟು ಹೆಚ್ಚಿದೆ ಎಂಬುದು ಅಷ್ಟರವರೆಗೆ ನನಗೆ ತಿಳಿದಿರಲಿಲ್ಲ. ‘ಒಳ್ಳೆಯದೆನಿಸುವುದು ಎಂದರೇನು ? ಮತ್ತು ‘ತೊಂದರೆದಾಯಕ ವೆನಿಸುವುದು ಎಂದರೇನು? ಎಂಬುದರ ಸ್ಪಷ್ಟ ಅರಿವು ನನಗೆ ಅಧ್ಯಾತ್ಮವರ್ಗದಲ್ಲಿ ಪರೀಕ್ಷಣೆಗಾಗಿ ಇಟ್ಟಿರುವ ವಸ್ತುಗಳಿಂದ ಆಯಿತು. ಅಧ್ಯಾತ್ಮವು ಕೃತಿಯ ಶಾಸ್ತ್ರವಾಗಿದೆ ಹಾಗೂ ಯಾವ ಪದ್ಧತಿಯಿಂದ ಆ ಕೃತಿಯನ್ನು ಮಾಡಬೇಕೆಂಬುದು ಇಲ್ಲಿ ಕಲಿಯಲು ಸಿಗುತ್ತಿತ್ತು. ಪ. ಪೂ. ಡಾಕ್ಟರರು ವರ್ಗದಲ್ಲಿ ಸಾಧನೆಯಲ್ಲಿನ ಪ್ರಾಯೋಗಿಕ ಮತ್ತು ತಾತ್ತ್ವಿಕ ಭಾಗಗಳ ವಿವೇಚನೆಯನ್ನು ಮಾಡುತ್ತಿದ್ದಾಗ ಜ್ಞಾನದ ಅಜ್ಞಾತ ರಹಸ್ಯವು ತಿಳಿದ ಬಗ್ಗೆ ಆನಂದವಾಗುತ್ತಿತ್ತು.

೩ ಇ. ಅಭ್ಯಾಸವರ್ಗದಲ್ಲಿ ಒಬ್ಬ ವ್ಯಕ್ತಿ ಕುಚೋದ್ಯದಿಂದ ನಾಮಜಪದ ವಿಷಯದಲ್ಲಿ ಅಯೋಗ್ಯ ಪ್ರಶ್ನೆ ಕೇಳುವುದು ಹಾಗೂ ಇದು ಹೀಗೆ ಏನಾದರೂ ಸಾಧ್ಯಗೊಳಿಸುವ ಸ್ಥಳವಲ್ಲ, ಎಂದು ವರ್ಗದಲ್ಲಿ ಯಾರೋ ಹೇಳುವುದು : ಒಂದು ವರ್ಗದಲ್ಲಿ ಪ. ಪೂ. ಡಾಕ್ಟರರು ನಾಮಜಪದ ಮಹತ್ವ, ಅದರಲ್ಲಿನ ಸೂಕ್ಷ್ಮತೆಯ ಬಗ್ಗೆ ವಿವರಿಸುತ್ತಿದ್ದರು. ಸಂಪೂರ್ಣ ವರ್ಗವು ಗಮನವಿಟ್ಟು ಕೇಳುತ್ತಿತ್ತು. ಕೊನೆಗೆ ‘ಯಾರಿಗಾದರೂ ಸಂದೇಹಗಳಿವೆಯೇ ? ಎಂದು ಪ. ಪೂ. ಡಾಕ್ಟರರು ವಿಚಾರಿಸಿದರು. ಕೆಲವರು ಸಂದೇಹಗಳನ್ನು ಕೇಳಿದರು. ಅವರಿಗೆ ಅದರ ಉತ್ತರ ಸಿಕ್ಕಿತು; ಆದರೆ ಒಬ್ಬ ವ್ಯಕ್ತಿಯು ನಾಮಜಪದ ವಿಷಯದಲ್ಲಿ ಒಂದು ಅಯೋಗ್ಯ ಪ್ರಶ್ನೆಯನ್ನು ಕೇಳಿದನು. ಅವನು ‘ನಾನು ‘ಶ್ರೀದೇವಿ (ಓರ್ವ ನಟಿ) ಯ ಜಪ ಮಾಡಿದರೆ ಅವಳು ನನಗೆ ಸಿಗುವಳೇ ? ಎಂದು ಕೇಳಿದನು. ವರ್ಗದಲ್ಲಿ ಎಲ್ಲರೂ ಅವನತ್ತ ತಿರುಗಿದರು. ‘ಇವನು ಇದೆಂತಹ ಪ್ರಶ್ನೆ ಕೇಳುತ್ತಿದ್ದಾನೆ ? ಎಂಬ ವಿಚಾರದಿಂದ ಎಲ್ಲರ ಮುಖದಲ್ಲಿ ಬೇಸರ ಎದ್ದು ಕಾಣುತ್ತಿತ್ತು. ಪ. ಪೂ. ಡಾಕ್ಟರರು ಈ ಪ್ರಶ್ನೆಯಿಂದ ಒಂದು ಕ್ಷಣ ಸ್ತಬ್ಧರಾದರು. ಆಗ ವರ್ಗದಲ್ಲಿನ ಯಾರೋ ನಮ್ರತೆಯಿಂದ, ‘ಶ್ರೀದೇವಿ ಸಿಗುವಳೇ ಎಂದು ಗೊತ್ತಿಲ್ಲ; ಆದರೆ ಇದು ಅಂತಹದ್ದೇನೂ ಸಾಧಿಸುವ ಸ್ಥಳವಲ್ಲ ಎಂದರು. ನಂತರ ಮಧ್ಯಾಹ್ನದ ಸತ್ರದಲ್ಲಿ ಆ ವ್ಯಕ್ತಿ ಬರಲಿಲ್ಲ. ಆ ಬಗ್ಗೆ ಪ. ಪೂ. ಡಾಕ್ಟರರು ಏನೂ ಉಲ್ಲೇಖಿಸದೆ ನಾಮಜಪದ ಮುಂದಿನ ಭಾಗವನ್ನು ಸಂತೋಷದಿಂದ ಕಲಿಸಿದರು.

೩ ಈ. ಸಾಮಾನ್ಯ ಜಿಜ್ಞಾಸು ಮತ್ತು ಅವರ ಸಾಧನೆಯಲ್ಲಿನ ಅಜ್ಞಾನ ಎಂಬ ಅಂಶವನ್ನು ಪ. ಪೂ. ಡಾಕ್ಟರರು ಅತ್ಯಂತ ಪ್ರಭಾವಿಯಾಗಿ ವಿವರಿಸಿ ಹೇಳಿದುದರಿಂದ ಸಂಪೂರ್ಣ ಸಂದೇಹ ನಿವಾರಣೆಯಾಗುವುದು ಹಾಗೂ ಜೀವನದಲ್ಲಿ ‘ಓರ್ವ ಶ್ರೇಷ್ಠ ಆಧ್ಯಾತ್ಮಿಕ ಗುರು ಸಿಕ್ಕಿರುವುದರ ಸಮಾಧಾನವೆನಿಸಿ ಗುರುಗಳನ್ನು ಹುಡುಕುವ ಅಲೆದಾಟವು ನಿಲ್ಲುವುದು : ನನ್ನಲ್ಲಿ ಎಷ್ಟು ಅಜ್ಞಾನವಿತ್ತೆಂದರೆ, ನನಗೆ ಸಂತಸಾಹಿತ್ಯ ಹಾಗೂ ಅಧ್ಯಾತ್ಮದಲ್ಲಿನ ಶಬ್ದಾರ್ಥ ಮತ್ತು ಭಾವಾರ್ಥಗಳನ್ನು ಹೇಗೆ ತಿಳಿದು ಕೊಳ್ಳುವುದೆಂದು ಗೊತ್ತಿರಲಿಲ್ಲ. ಮುಂದಿನ ೫ ತಿಂಗಳು ನನಗೆ ಪ. ಪೂ. ಡಾಕ್ಟರರ ೫ ಅಭ್ಯಾಸವರ್ಗಗಳ ಲಾಭ ದೊರೆಯಿತು. ಅದು ನನ್ನ ಜೀವನಕ್ಕೆ ಯೋಗ್ಯವಾದ ದೃಷ್ಟಿಕೋನವನ್ನು ನೀಡುವ ದೊಡ್ಡ ಪರ್ವವೇ ಆಗಿತ್ತು. ಅಷ್ಟರವರೆಗೆ ನನಗೆ ಸಂತಸಾಹಿತ್ಯ ಮತ್ತು ಅಧ್ಯಾತ್ಮದ ಬಗ್ಗೆ ಅನೇಕ ಪ್ರಶ್ನೆಗಳಿದ್ದವು; ಆದರೆ ಅವುಗಳ ಸಂದೇಹ ನಿವಾರಣೆಯಾಗಿರಲಿಲ್ಲ.
ಆ ಪ್ರಶ್ನೆಗಳನ್ನು ನಾನು ಅಭ್ಯಾಸವರ್ಗಗಳಲ್ಲಿ ಕೇಳುವ ಪ್ರಮೇಯವೇ ಬರಲಿಲ್ಲ; ಏಕೆಂದರೆ ‘ಸಾಮಾನ್ಯ ಜಿಜ್ಞಾಸು ಮತ್ತು ಅವರ ಸಾಧನೆಯಲ್ಲಿನ ಅಜ್ಞಾನ ಈ ಅಂಶವನ್ನು ಪ. ಪೂ. ಡಾಕ್ಟರರು ವರ್ಗದಲ್ಲಿ ಅತ್ಯಂತ ಪ್ರಭಾವಿಯಾಗಿ ವಿವರಿಸಿ ಹೇಳಿದ್ದರು. ಆದ್ದರಿಂದ ನನ್ನ ಸಂಪೂರ್ಣ ಸಂದೇಹ ನಿವಾರಣೆಯಾಯಿತು ಹಾಗೂ ‘ಸಾಧನೆಯನ್ನು ಸರ್ವಾಂಗದಿಂದ ವಿಚಾರ ಮಾಡಿ ಹೇಗೆ ಮಾಡಬೇಕು ಎಂಬ ವಿಷಯದಲ್ಲಿ ಮಾರ್ಗದರ್ಶನ ಸಿಕ್ಕಿತು. ನನ್ನ ಸಾಧನೆಯಲ್ಲಿನ ಅಜ್ಞಾನ ಹಾಗೂ ಅಯೋಗ್ಯ ಅನುಕರಣೆಯು ನನಗೆ ಅರಿವಾಯಿತು. ಅವರು ನನ್ನನ್ನು ಯೋಗ್ಯವಾದ ಆಧ್ಯಾತ್ಮಿಕ ಪಥದಲ್ಲಿ ತಂದುಬಿಟ್ಟರು. ನನಗೆ ನನ್ನ ಜೀವನದಲ್ಲಿ ‘ಒಬ್ಬ ಶ್ರೇಷ್ಠ ಆಧ್ಯಾತ್ಮಿಕ ಗುರುಗಳು ಲಭಿಸಿದ ಸಮಾಧಾನ ದೊರಕಿತು ಹಾಗೂ ನನ್ನ ಗುರುಗಳನ್ನು ಹುಡುಕುವ ಅಲೆದಾಟವು ನಿಂತಿತು. ಆದ್ದರಿಂದ ಬಹಳಷ್ಟು ಕೃತಜ್ಞತೆ ವ್ಯಕ್ತವಾಯಿತು.

ಸದ್ಗುರುವಿಣ ಜನ್ಮ ನಿರ್ಫಳ | ಸದ್ಗುರುವಿಣ ದುಃಖ ಸಕಳ |
ಸದ್ಗುರುವಿಣ ತಳಮಳ | ಜಾಣಾರ್ ನಾಹೀ ||
ಎಂದರೆ
ಸದ್ಗುರುವಿಲ್ಲದೇ ಜೀವನ ನಿಷ್ಫಲ | ಸದ್ಗುರುವಿಲ್ಲದೇ ಎಲ್ಲ ದುಃಖಮಯ |

ಸದ್ಗುರುವಿಲ್ಲದೇ ಶಾಂತವಾಗದು ತಳಮಳ ||

೩ ಉ. ಪ.ಪೂ. ಡಾಕ್ಟರರು ಅಭ್ಯಾಸವರ್ಗದಲ್ಲಿ ಸೇವೆಯ ಮಹತ್ವವನ್ನು ತಿಳಿಸಿದ್ದರಿಂದ ವರ್ಗಕ್ಕೆ ಬರುವ ಜಿಜ್ಞಾಸುಗಳು ಸೇವೆ ಮಾಡಲು ಉತ್ಸುಕರಾಗುವುದು : ಎರಡು ಅಭ್ಯಾಸವರ್ಗಗಳ ಬಳಿಕ ಠಾಣಾದಲ್ಲಿ ನಮ್ಮ ಸಾಧಕರ ೧೦ ಜನರ ಗುಂಪು ಸಿದ್ಧಗೊಂಡಿತು. ಪ.ಪೂ. ಡಾಕ್ಟರರು ಅಭ್ಯಾಸವರ್ಗದಲ್ಲಿ ಸೇವೆಯ ಮಹತ್ವ ತಿಳಿಸಿದರು. ಅವರ ಪ್ರಭಾವಿವಾಣಿಯಿಂದ ನಾವು ಸೇವೆ ಮಾಡಲು ಉತ್ಸುಕರಾದೆವು. ಪ.ಪೂ. ಡಾಕ್ಟರರು ಮತ್ತು ಅವರೊಂದಿಗೆ ಮುಂಬಯಿಯಿಂದ ಬರುವ ೫-೬ ಜನರು ಅಭ್ಯಾಸವರ್ಗಕ್ಕೆ ಸಹಾಯ ಮಾಡುವವರಿಗಾಗಿ ಮಧ್ಯಾಹ್ನದ ಊಟದ ಡಬ್ಬವನ್ನು ತೆಗೆದುಕೊಂಡು ಠಾಣೆಗೆ ಬರುತ್ತಿದ್ದರು. ಮುಂಬಯಿಯ ಸಾಧಕರು ಅಭ್ಯಾಸವರ್ಗದ ೮-೧೦ ದಿನ ಮೊದಲೇ ಠಾಣೆಯ ನಗರಗಳಲ್ಲಿ ಮೂಲೆಮೂಲೆಯಲ್ಲಿ ಸರಿಸುಮಾರು ೨೦ ಪ್ರಚಾರ ಫಲಕಗಳನ್ನು ರಾತ್ರಿಯೇ ಬಂದು ಅಂಟಿಸಿ ಹೋಗುತ್ತಿದ್ದರು. ಇವರೆಲ್ಲರೂ ತಮ್ಮ ಸಾಧನೆಯಾಗಬೇಕೆಂದು ಈ ಕಾರ್ಯವನ್ನು ಮಾಡುತ್ತಿದ್ದಾರೆ ಎನ್ನುವುದು ನಮಗೆ ಅರಿವಾಯಿತು. ನಾವು ೧೦ ಜನರು ಇದರ ವಿಚಾರವನ್ನು ಮಾಡಿ, ಈ ಸೇವೆಯನ್ನು ನಾವು ಕೇಳಿ ಪಡೆದುಕೊಂಡೆವು.

೩ ಊ. ಎಲ್ಲರೊಂದಿಗೆ ಭೋಜನವನ್ನು ಮಾಡುತ್ತ ಪ.ಪೂ. ಡಾಕ್ಟರರು ಪ.ಪೂ. ಭಕ್ತರಾಜ ಮಹಾರಾಜರ ನೆನಪು ಮತ್ತು ಸಾಧನೆಯ ಸೂಕ್ಷ್ಮತೆಯನ್ನು ತಿಳಿಸುವುದು : ಆ ಸಮಯದಲ್ಲಿ ನಾವು ವರ್ಗದಲ್ಲಿಯೇ ಗೋಲಾಕಾರವಾಗಿ ಕುಳಿತು ಮಧ್ಯಾಹ್ನದ ಭೋಜವನ್ನು ಮಾಡುತ್ತಿದ್ದೆವು. ಪ.ಪೂ. ಡಾಕ್ಟರರು ಅಭ್ಯಾಸವರ್ಗದಲ್ಲಿ ತುಂಬ ಮನಸ್ಸುಬಿಚ್ಚಿ ಮಾತನಾಡುತ್ತಿದ್ದರು. ಆ ಸಮಯದಲ್ಲಿ ಪ.ಪೂ. ಡಾಕ್ಟರರು ನಮಗೆ ಪ.ಪೂ. ಭಕ್ತರಾಜ ಮಹಾರಾಜರ ನೆನಪುಗಳನ್ನು ಹೇಳುತ್ತಿದ್ದರು. ಅವರ ಆ ದಿನಗಳ ಸಹವಾಸದ ಸಂಪೂರ್ಣ ಲಾಭವನ್ನು ನಮಗೆ ದೊರಕಿಸಿ ಕೊಡುತ್ತಿದ್ದರು. ಅಭ್ಯಾಸವರ್ಗದ ದಿನವೆಂದರೆ ನಮಗೆ ಹಬ್ಬವೇ ಆಗಿರುತ್ತಿತ್ತು.

೩ ಋ. ಪ.ಪೂ. ಡಾಕ್ಟರರು ಅಭ್ಯಾಸವರ್ಗದಲ್ಲಿ ತಪ್ಪುಗಳ ಅರಿವು ಮಾಡಿಕೊಡುವುದು ಮತ್ತು ಆಗ ‘ಸಾಧನೆಯಲ್ಲಿ ಎಷ್ಟು ಜಾಗರೂಕರಾಗಿರಬೇಕು ಎನ್ನುವುದು ಪ್ರಥಮಬಾರಿಗೆ ಅರಿವಾಗುವುದು : ಒಮ್ಮೆ ನಾವು ಪ.ಪೂ. ಭಕ್ತರಾಜ ಮಹಾರಾಜರ ಮೋರಚೊಂಡಿ ಎಂಬಲ್ಲಿಯ ಉತ್ಸವಕ್ಕೆ ಹೋಗಿದ್ದೆವು. ಮರಳಿ ಬರುವಾಗ ನಮ್ಮ ಕೆಲವು ಯುವಕರು ಬಸ್ಸಿನಲ್ಲಿ ಧಕ್ಕೆಯಾಗಬಾರದೆಂದು ಹಿಂದುಗಡೆ ಕುಳಿತುಕೊಳ್ಳದೆ ಮುಂದೆ ಕುಳಿತುಕೊಂಡರು. ಆಗ ವಯಸ್ಸಿನಲ್ಲಿ ಹಿರಿಯರು ಹಿಂದೆ ಕುಳಿತು ಕೊಳ್ಳಬೇಕಾಯಿತು. ಇದು ನಮ್ಮಿಂದಾದ ಮೊದಲ ತಪ್ಪು. ಎರಡನೇ ತಪ್ಪೆಂದರೆ ಪನವೇಲ್‌ನ ನಂತರ ಬಸ್‌ನಲ್ಲಿ ಮುಂಬಯಿಯ ೪೦ ಜನ ಸಾಧಕರಿದ್ದರು. ಆದರೆ ಠಾಣೆಯ ೮ ಜನರಾದ ನಮ್ಮನ್ನು ಬಿಡಲು ಬಸ್ಸನ್ನು ಠಾಣೆಯ ಮಾರ್ಗದಲ್ಲಿ ತರಲಾಯಿತು. (ಇದರಿಂದ ಸಮಯ ಮತ್ತು ಹಣ ಎರಡೂ ಅಪವ್ಯಯವಾಯಿತು.) ಇವೆರಡು ತಪ್ಪುಗಳು ನಮ್ಮಿಂದಾದವು. ಇದು ನಮ್ಮ ಗಮನಕ್ಕೆ ಬರಲೇ ಇಲ್ಲ. ಪ.ಪೂ. ಡಾಕ್ಟರರು ನಮಗೆ ಅಭ್ಯಾಸ ವರ್ಗದಲ್ಲಿ ಇದರ ಅರಿವು ಮಾಡಿಕೊಟ್ಟರು. ಆಗ ಮೊದಲ ಬಾರಿ ‘ಸಾಧನೆ ಮಾಡುವಾಗ ಎಷ್ಟು ಜಾಗರೂಕರಾಗಿರಬೇಕು ಎಂದು ನಮಗೆ ಅರಿವಾಯಿತು.

೩ ಎ. ಪ.ಪೂ. ಡಾಕ್ಟರರು ಬುದ್ಧಿವಾದಿಗಳ ಸಂದೇಹವನ್ನು ಸಮರ್ಪಕವಾಗಿ ನಿವಾರಿಸಿದ್ದರಿಂದ ಅವರ ಬಗ್ಗೆ ಗೌರವವೆನಿಸುವುದು : ಒಮ್ಮೆ ಡೊಂಬಿವಲಿಯಲ್ಲಿ ನಡೆದ ಅಧ್ಯಾತ್ಮದ ಅಭ್ಯಾಸ ವರ್ಗದಲ್ಲಿ ಬಹಳಷ್ಟು ಬುದ್ಧಿಜೀವಿಗಳ ಗುಂಪು ಬಂದಿತ್ತು. ಅವರು ಅನೇಕ ಸಂದೇಹಗಳನ್ನು ಕೇಳಿದರು. ವರ್ಗದಲ್ಲಿ ಅವರ ಸಂದೇಹಗಳೆಲ್ಲ ಯೋಗ್ಯ ರೀತಿಯಲ್ಲಿ ನಿವಾರಣೆಯಾದವು. ವರ್ಗ ಮುಗಿದ ಬಳಿಕ ಅವರು ತಮ್ಮತಮ್ಮೊಳಗೆ, ಸಾಧನೆಯ ಮಾಹಿತಿ ಮತ್ತು ಸೂಕ್ಷ್ಮತೆಗಳನ್ನು ಇಂದು ನಾವು ಮೊದಲ ಬಾರಿ ಕೇಳಿದ್ದೇವೆ. ಇದನ್ನು ಕೇಳಿ ನಮಗೆ ಪ.ಪೂ. ಡಾಕ್ಟರರ ವಿಷಯದಲ್ಲಿ ವಿಶೇಷವಾಗಿ ಆತ್ಮೀಯತೆ ಮತ್ತು ಗೌರವವೆನಿಸತೊಡಗಿತು, ಎನ್ನುತ್ತಿದ್ದರು.

೪. ‘ಗುರುಗಳ ಬಗ್ಗೆ ಭಾವ ಹೇಗಿರಬೇಕು ? ಎಂದು ಪ.ಪೂ. ಡಾಕ್ಟರರು ಪ.ಪೂ. ಭಕ್ತರಾಜ ಮಹಾರಾಜರ ಭಕ್ತ ಪಾಂಡೋಬಾರವರ ಉದಾಹರಣೆಯಿಂದ ಕಲಿಸುವುದು

ಒಮ್ಮೆ ವರ್ಗದಲ್ಲಿ ಪ.ಪೂ. ಡಾಕ್ಟರರು “ಗುರುಗಳ ಬಗ್ಗೆ ಸಾಧಕರ ಭಾವ ಹೇಗಿರಬೇಕು ? ಎಂದು ವಿಶ್ಲೇಷಿಸಿದರು. ಆ ಸಮಯದಲ್ಲಿ ಉದಾಹರಣೆಯೆಂದು ಅವರು ಪ.ಪೂ. ಭಕ್ತರಾಜ ಮಹಾರಾಜರ (ಪ.ಪೂ. ಬಾಬಾರವರ) ಮೋರಚೊಂಡಿಯ ಭಕ್ತ ಪಾಂಡೋಬಾರವರ ಈ ಕೆಳಗಿನ ಗುಣವೈಶಿಷ್ಟ್ಯಗಳನ್ನು ತಿಳಿಸಿದರು – ಒಮ್ಮೆ ಅಕಸ್ಮಿಕವಾಗಿ ಪ.ಪೂ. ಭಕ್ತರಾಜ ಮಹಾರಾಜರಿಗೆ ಪಾಂಡೋಬಾರವರ ಮನೆಯಲ್ಲಿ ವಾಸ್ತವ್ಯ ಮಾಡಬೇಕಾಯಿತು ಮತ್ತು ಪ.ಪೂ. ಭಕ್ತರಾಜ ಮಹಾರಾಜರು ಪಾಂಡೋಬಾರವರ ಮನೆಯಲ್ಲಿ ತಮ್ಮ ಸ್ಥಾನವನ್ನೇ ನಿರ್ಮಾಣ ಮಾಡಿದರು. ಗುರು-ಶಿಷ್ಯರ ಜೋಡಿ ಸೇರಿತು. ಪಾಂಡೋಬಾರವರು ಅಲ್ಪಸ್ವಲ್ಪ ನಾಲ್ಕನೇ ತರಗತಿಯವರೆಗೆ ಶಿಕ್ಷಣವನ್ನು ಪಡೆದು, ಅರಣ್ಯಇಲಾಖೆಯಲ್ಲಿ ಸಿಪಾಯಿ ನೌಕರಿಯನ್ನು ಮಾಡುತ್ತಿದ್ದರು ಮತ್ತು ನಗರದೊಂದಿಗೆ ಯಾವುದೇ ಸಂಬಂಧವಿಲ್ಲದ ಸಾಮಾನ್ಯ ವ್ಯಕ್ತಿಯಾಗಿದ್ದರು. ಅವರ ಪರಿಸ್ಥಿತಿ ಬಹಳ ಬಡತನದ್ದಾಗಿತ್ತ್ತು.
ಆದರೆ ಗುರುಗಳ ಬಗ್ಗೆ ಪಾಂಡೋಬಾರವರಲ್ಲಿ ತುಂಬ ಭಾವವಿತ್ತು. ಪ.ಪೂ. ಬಾಬಾರವರು ಅವರ ಮನೆಯಲ್ಲಿ ಕುಳಿತ ಸ್ಥಳದಲ್ಲಿ ಒಂದು ಕಟ್ಟೆಯನ್ನು ಕಟ್ಟಿಸಿದರು. ಪ.ಪೂ. ಬಾಬಾರವರಿಗೆ ಕಟ್ಟೆ ಗಟ್ಟಿಯೆನಿಸದೇ ಮೃದುವೆನಿಸಬೇಕೆಂದು ಅದರ ಮೇಲೆ ಕಂಬಳಿಯನ್ನು ಹಾಸಿಡುತ್ತಿದ್ದರು. ಚಳಿಗಾಲದ ದಿನಗಳಲ್ಲಿ ತಮಗೆ ಹೊದಿಯಲು ಏನೂ ಇಲ್ಲದಿರುವಾಗಲೂ ಪ.ಪೂ.ಬಾಬಾರವರಿಗೆ ಚಳಿಯಾಗಬಾರದೆಂದು ಅದರ ಮೇಲೆ ಅವರು ಒಂದು ಕಂಬಳಿಯನ್ನೂ ಇಡುತ್ತಿದ್ದರು. ‘ಅಲ್ಲಿ ಪ್ರತೀದಿನ ಬಾಬಾರವರ ಅಸ್ತಿತ್ವವಿದೆ ಎಂದು ತಿಳಿದುಕೊಂಡು ಪಾಂಡೋಬಾರವರು ತಮ್ಮ ಮನೆಯಲ್ಲಿ ಓಡಾಡುತ್ತಿದ್ದರು. ಬೆಳಗ್ಗೆ ಚಹಾ ಮಾಡಿದ ಬಳಿಕ ಚಹಾದ ಕಪ್ಪನ್ನು ಕಟ್ಟೆಯ ಮೇಲೆ ಇಟ್ಟು ಪಾಂಡೋಬಾರವರು, ‘ಬಾಬಾ ಚಹಾ ತೆಗೆದುಕೊಳ್ಳಿರಿ, ಮಧ್ಯಾಹ್ನ ಊಟದ ಸಮಯದಲ್ಲಿ ಊಟದ ತಟ್ಟೆಯನ್ನು ಕಟ್ಟೆಯ ಮೇಲಿಟ್ಟು ‘ಬಾಬಾ ಊಟ ತಂದಿದ್ದೇನೆ, ಊಟ ಮಾಡಿರಿ ಎಂದು ಹೇಳುತ್ತಿದ್ದರು. ಇದು ದಿನನಿತ್ಯ ನಡೆಯುವ ಕ್ರಮವಾಗಿತ್ತು. ಸತ್ಸಂಗ ಮತ್ತು ಸಂತ ಸಾಹಿತ್ಯಗಳಿಂದ ಬಹಳ ದೂರವಿರುವ ಒಬ್ಬ ಸಾಮಾನ್ಯ ವ್ಯಕ್ತಿ ಭಾವದ ಸ್ತರದಲ್ಲಿ ಏನು ಮಾಡ ಬಲ್ಲನು, ಎನ್ನುವುದು ನಮಗೆ ಪಾಂಡೋಬಾರವರ ಉದಾಹರಣೆಯಿಂದ ತಿಳಿಯಿತು. ‘ಅವರ ಸ್ಥಳದಲ್ಲಿ ನಾವಿದ್ದರೆ, ನಾವು ಬುದ್ಧಿಯ ಸ್ತರದಲ್ಲಿ ಏನು ಮಾಡುತ್ತಿದ್ದೆವು ಎನ್ನುವುದು ಆಗ ನಮಗೆ ಅರಿವಾಯಿತು.

೫. ಮಹಾಶಿವರಾತ್ರಿಯ ಉತ್ಸವದ ನಿಮಿತ್ತ ಮೋರಚೊಂಡಿಗೆ ಹೋದ ಬಳಿಕ
ಪ.ಪೂ. ಭಕ್ತರಾಜ ಮಹಾರಾಜರು ಮತ್ತು ಪಾಂಡೋಬಾರವರ ಭೇಟಿಯಾಗುವುದು
ಮತ್ತು ಜೀವನದಲ್ಲಿ ಮೊದಲಬಾರಿ ಆನಂದದಾಯಕ ಉತ್ಸವವು ಅನುಭವಿಸಲು ದೊರೆಯುವುದು.

ಶ್ರೀ. ಪಾಂಡೋಬಾರವರ ಬಗೆಗಿನ ವಿಷಯವನ್ನು ಕೇಳಿ ನಮಗೆ ಪಾಂಡೋಬಾರವರನ್ನು ಭೇಟಿಯಾಗುವ ತೀವ್ರ ಇಚ್ಛೆಯಾಯಿತು. ಬಳಿಕ ಪ.ಪೂ. ಡಾಕ್ಟರರು ೧೯೯೪ರಲ್ಲಿ ನಮ್ಮನ್ನು ಮೋರಚೊಂಡಿಗೆ ಮಹಾಶಿವರಾತ್ರಿಯ ಉತ್ಸವಕ್ಕೆ ಮುಂಬಯಿಯ ಸಾಧಕರೊಂದಿಗೆ ಕರೆದುಕೊಂಡು ಹೋದರು. ಅಲ್ಲಿ ಪ.ಪೂ. ಭಕ್ತರಾಜ ಮಹಾರಾಜರು ಮತ್ತು ಪಾಂಡೋಬಾರವರ ಭೇಟಿಯಾಯಿತು. ಪಾಂಡೋಬಾರವರ ಮುಖದಲ್ಲಿ ಪ.ಪೂ. ಭಕ್ತರಾಜ ಮಹಾರಾಜರ ಬಗ್ಗೆ ಅತಿಯಾದ ಭಾವ ಕಂಡುಬರುತ್ತಿತ್ತು. ಮೋರಚೊಂಡಿಯ ಉತ್ಸವ ಬಹಳ ಆನಂದದಾಯಕ ವಾಗಿತ್ತು. ಜೀವನದಲ್ಲಿ ಮೊದಲಬಾರಿ ನಾನು ಇಂತಹ ಆನಂದವನ್ನು ಅನುಭವಿಸಿದ್ದೆನು. ಶರೀರದಲ್ಲಿ ಹೊಸ ಶಕ್ತಿಯ ಸಂಚಲನವಾಯಿತು. ನಾವೆಲ್ಲರೂ ಕೆಲವು ಸಮಯ ಬೇರೆಯೇ ವಿಶ್ವದಲ್ಲಿ ವಿಹರಿಸಿದೆವು.

೬. ಪ.ಪೂ. ಡಾಕ್ಟರರ ನಿರೀಕ್ಷಣಾ ಕ್ಷಮತೆ ಮತ್ತು ಮಿತವ್ಯಯ ಗುಣ !

ಒಮ್ಮೆ ಯಾವುದೋ ಸೇವೆಯ ನಿಮಿತ್ತ ನಾನು ಸೇವಾಕೇಂದ್ರಕ್ಕೆ ಹೋಗಿದ್ದೆನು. ಆ ಸಮಯದಲ್ಲಿ ಒಬ್ಬ ಸಾಧಕನು ಮೊರದಲ್ಲಿ ಕಸವನ್ನು ತುಂಬುತ್ತಿದ್ದನು. ಆ ಸಮಯದಲ್ಲಿ ಪ.ಪೂ.ಡಾಕ್ಟರರು ಕೋಣೆಯೊಳಗೆ ಬಂದರು ಮತ್ತು ಕಸ ತುಂಬುವ ಮೊರದ ಕಡೆಗೆ ಅವರ ಗಮನ ಹೋಯಿತು. ಅವರು ಆ ಸಾಧಕನಿಗೆ ‘ಮೊರದಲ್ಲಿ ಕೆಲವು ಗುಂಡು ಪಿನ್ನುಗಳು ಕಾಣಿಸುತ್ತಿದೆ. ಅವುಗಳನ್ನು ಕಸದಿಂದ ಬೇರ್ಪಡಿಸಿ ಉಪಯೋಗಿಸಿರಿ ಎಂದು ಹೇಳಿದರು. ಇದರಿಂದ ಪ.ಪೂ. ಡಾಕ್ಟರರ ಸೂಕ್ಷ್ಮ ನಿರೀಕ್ಷಣೆ ಮತ್ತು ಮಿತವ್ಯಯ ಗುಣಗಳು ಗಮನಕ್ಕೆ ಬಂದವು.

೭. ಪ.ಪೂ. ಡಾಕ್ಟರರ ಪ್ರೀತಿ

ಒಮ್ಮೆ ಪ.ಪೂ. ಭಕ್ತರಾಜ ಮಹಾರಾಜರ ಒಬ್ಬ ಭಕ್ತರ ಪುತ್ರನು ಬಹಳ ಅನಾರೋಗ್ಯ ಪೀಡಿತನಾಗಿದ್ದರು. ಅವನನ್ನು ಠಾಣೆಯ ಒಂದು ಆಸ್ಪತ್ರೆಯಲ್ಲಿ ಸೇರಿಸಲಾಗಿತ್ತು. ಆ ಸಮಯದಲ್ಲಿ ಪ.ಪೂ. ಡಾಕ್ಟರರು ಆ ಬಾಲಕನನ್ನು ನೋಡಲು ಹೋಗುವಾಗ ಅವನಿಗಾಗಿ ವಿಭೂತಿಯನ್ನು ತೆಗೆದುಕೊಂಡು ಹೋದರು ಮತ್ತು ಅವನ ಕುಟುಂಬದವರಿಗೂ ಧೈರ್ಯ ನೀಡಿದರು.

೮. ಯಾವುದೇ ಸೇವೆಯನ್ನು ಮಾಡಲು ಸಿದ್ಧರಾಗಿರುವುದು

ಪ.ಪೂ. ಡಾಕ್ಟರರ ಅಧ್ಯಾತ್ಮ ವರ್ಗದ ನಿಯೋಜನೆಯು ಅತ್ಯಂತ ಶಿಸ್ತುಬದ್ಧವಾಗಿರುತ್ತಿತ್ತು. ಪ್ರತಿಯೊಂದು ಕೃತಿಯಲ್ಲಿಯೂ ಅವರು ಪ್ರತ್ಯಕ್ಷವಾಗಿ ಪಾಲ್ಗೊಳ್ಳುತ್ತಿದ್ದರು. ಡೊಂಬಿವಲಿಯಲ್ಲಿ ೧೯೯೪ ರಲ್ಲಿ ಜರುಗಿದ ಮೊದಲ ಅಭ್ಯಾಸವರ್ಗದಲ್ಲಿ ಸ್ವತಃ ಪ.ಪೂ. ಡಾಕ್ಟರರೇ ಜಿಜ್ಞಾಸುಗಳಿಗಾಗಿ ಕುರ್ಚಿಗಳನ್ನು ಇಡಲು ಸಹಾಯ ಮಾಡುತ್ತಿದ್ದರು.

೯. ಸಾಧಕರ ಉನ್ನತಿಗಾಗಿ ಹಾಗೂ ಅವರ ವ್ಯಷ್ಟಿ ಸಾಧನೆಯ ದೃಷ್ಟಿಯಿಂದ ಪ್ರಸಂಗ ಬಂದಲ್ಲಿ
ಪ್ರಸಾರ ಕಾರ್ಯ ಮತ್ತು ಗುರುಪೌರ್ಣಿಮೆಯನ್ನು ಸಹ ರದ್ದುಗೊಳಿಸಿ ಸಾಧಕರಿಗೆ ಅವರ ತಪ್ಪಿನ ಅರಿವು ಮಾಡಿಸುವುದು ಮತ್ತು ಅದರಿಂದಲೇ ‘ಯಾವುದೇ ಕಾರ್ಯವನ್ನು ಭಾವನಾವಶರಾಗಿ ಮಾಡಬಾರದು ಎನ್ನುವ ಶಿಸ್ತಿನ ಪಾಠವನ್ನು ಕಲಿಸುವುದು.

೧೯೯೬ ರಲ್ಲಿ ಠಾಣೆಯ ಸಾಧಕರಲ್ಲಿ ನಿರ್ಮಾಣವಾದ ಭಿನ್ನಾಭಿಪ್ರಾಯವನ್ನು ಪ.ಪೂ. ಡಾಕ್ಟರರು ಗುರುತಿಸಿದರು. ಅವರು ಒಂದು ಮಾರ್ಗದರ್ಶನ ಸಭೆಯಲ್ಲಿ ‘ಪ್ರಸಾರದ ಕಾರ್ಯ, ಸತ್ಸಂಗ ಹಾಗೂ ಗುರುಪೂರ್ಣಿಮೆಯನ್ನು ರದ್ದುಗೊಳಿಸಿರಿ ಎಂದು ಹೇಳಿದರು ಹಾಗೂ ಕೇವಲ ಗ್ರಂಥಪ್ರದರ್ಶನ ಏರ್ಪಡಿಸುವ ಒಂದೇ ಸೇವೆಯನ್ನು ಇಟ್ಟರು. ನಮಗೆ ನಮ್ಮ ದೋಷಗಳ ಅರಿವಾಯಿತು. ‘ಇಲ್ಲಿಯವರೆಗೆ ಏನಾಯಿತೋ, ಆ ವಿಷಯದ ಬಗ್ಗೆ ಬಹಳ ದುಃಖವೆನಿಸಿತು. ಸಾಧನೆಯಿಂದ ನಾವು ದೂರ ಹೋಗುತ್ತಿದ್ದೇವೆಯೇ ? ಎಂದೆನಿಸಿತು. ಆಗಿಹೋದದ್ದನ್ನೆಲ್ಲ ಮರೆತು ನಾವು ನಮ್ಮಲ್ಲಿರುವ ಭಿನ್ನಾಭಿಪ್ರಾಯವನ್ನು ಮರೆತು, ನಮ್ಮಲ್ಲಿ ಆತ್ಮೀಯತೆ ಸಾಧಿಸಿದೆವು. ಎಲ್ಲರೂ ಗ್ರಂಥಪ್ರದರ್ಶನವನ್ನು ಏರ್ಪಡಿಸಲು ಸಾಧ್ಯವಾದಷ್ಟು ಅಧಿಕ ಪ್ರಯತ್ನಿಸಿದೆವು. ಎರಡು ತಿಂಗಳಿನಲ್ಲಿ ನಾವೆಲ್ಲರೂ ಪ್ರೀತಿಯಿಂದ ಮರಳಿ ಒಂದಾದೆವು. ನಮಗೆ ನಮ್ಮ ದೋಷಗಳ ಅರಿವಾಯಿತು. ಪ್ರಸಾರದ ಸೇವೆ ಮತ್ತು ಗುರುಪೂರ್ಣಿಮೆಯನ್ನು ಆಚರಿಸಲು ಅನುಮತಿ ದೊರಕಿತು. ‘ಅಭ್ಯಾಸವರ್ಗದಲ್ಲಿ ಏನು ಕಲಿಸಿದರೋ, ಅದನ್ನು ಸಾಧಕರು ಆಚರಣೆಯಲ್ಲಿ ತರಬೇಕು ಎಂಬುದನ್ನು ಪ.ಪೂ. ಡಾಕ್ಟರರು ನಮಗೆ ಕಲಿಸಿದರು. ಇಲ್ಲಿಯೇ ನಾವೆಲ್ಲರೂ ‘ಯಾವುದೇ ಕಾರ್ಯವನ್ನು ಭಾವನಾವಶರಾಗಿ ಮಾಡಬಾರದು ಎನ್ನುವ ಒಂದು ಶಿಸ್ತಿನ ಬಹುದೊಡ್ಡ ಪಾಠ ಕಲಿತೆವು.

೧೦. ಜಗತ್ತಿನ ಎಲ್ಲ ಧರ್ಮದ ಸಾಧಕರ ಸಾಧನೆಯ ಅಡಿಪಾಯವಷ್ಟೇ ಅಲ್ಲ, ಮೂಲಾಧಾರವೇ ಆಗಿರುವ ಮತ್ತು ಅತೀ ಸಾಮಾನ್ಯ ಜಿಜ್ಞಾಸುವಿಗೂ ಅತೀ ಸಹಜವಾಗಿ ಅರ್ಥವಾಗುವ ‘ಗುರುಕೃಪಾಯೋಗ ಎನ್ನುವ ನಾಲ್ಕನೇ ಯೋಗವನ್ನು ನಿರ್ಮಾಣ ಮಾಡುವ ಏಕಮೇವಾದ್ವಿತೀಯ ಪರಾತ್ಪರ ಗುರು ಡಾ. ಆಠವಲೆ !

ಪ.ಪೂ. ಡಾಕ್ಟರರು ಅಧ್ಯಾತ್ಮದ ಮೂಲತತ್ತ್ವಗಳನ್ನು ಕಂಡುಹಿಡಿದು ಅದರ ಆಧಾರದಲ್ಲಿ ಜಗತ್ತಿನ ಯಾವುದೇ ಧರ್ಮ ಅಥವಾ ಸಂಪ್ರದಾಯದ ಸಾಧಕರಿಗೆ ಉಪಯೋಗವಾಗುವಂತಹ ‘ಗುರುಕೃಪಾಯೋಗ ಹೆಸರಿನ ಸಾಧನೆಯ ಮಾರ್ಗವನ್ನು ಕಂಡುಹಿಡಿದರು. ಅದರ ಆಧಾರದಲ್ಲಿ ಅಧ್ಯಾತ್ಮ ಪ್ರಸಾರದ ಕಾರ್ಯಗಳು ಮುಂದುವರಿಯುತ್ತಿದ್ದವು. “ಗುರುಕೃಪಾಯೋಗ ನಿರ್ಮಾಣ ಮಾಡಲು ಅವರಿಗೆ ಕರ್ಮ, ಜ್ಞಾನ ಮತ್ತು ಭಕ್ತಿ ಈ ಯೋಗದ ಎಷ್ಟು ಗ್ರಂಥಗಳನ್ನು ಅಧ್ಯಯನ ಮಾಡಬೇಕಾಗಿರಬಹುದು ಎನ್ನುವುದನ್ನು ಕಲ್ಪನೆ ಮಾಡಲೂ ಸಾಧ್ಯವಿಲ್ಲ. ಇಲ್ಲಿಯವರೆಗೆ ಜಗತ್ತಿನಲ್ಲಿ ಅಧ್ಯಾತ್ಮದ ಮೇಲೆ ಪ್ರಭುತ್ವ ಹೊಂದಿರುವ ಯಾವುದೇ ವ್ಯಕ್ತಿಯು ಈ ರೀತಿ ಮೂರು ಯೋಗಗಳ ಸಾರವನ್ನು ಒಂದು ಯೋಗದಲ್ಲಿ ಸೇರ್ಪಡೆಗೊಳಿಸಿರುವುದನ್ನು ಕೇಳಲು, ನೋಡಲು ಅಥವಾ ಓದಲು ಸಿಗಲಿಲ್ಲ. ಆದುದರಿಂದ ಗುರುಕೃಪಾಯೋಗಾನುಸಾರ ಸಾಧನೆಯು ಜಗತ್ತಿನ ಯಾವುದೇ ಧರ್ಮದ ಸಾಧಕರ ಸಾಧನೆಯ ಅಡಿಪಾಯವಷ್ಟೇ ಅಲ್ಲ, ಮೂಲಾಧಾರವೇ ಆಗಿದೆ. ಈ ಸಾಧನೆಯ ಪದ್ಧತಿಯು ಸಾಮಾನ್ಯ ಜಿಜ್ಞಾಸುವಿಗೂ ಅರ್ಥವಾಗುವಂತಹದ್ದಾಗಿದೆ. ಇದರಿಂದ ‘ಪ.ಪೂ. ಡಾಕ್ಟರರ ಅಧ್ಯಾತ್ಮ ಪ್ರಸಾರಕ್ಕೆ ಸಂಬಂಧಿಸಿದ ಅಂಕಿ ಅಂಶಗಳು ಮತ್ತು ಆಯೋಜನೆಯು ಬಹಳ ಮೊದಲೇ ಸಿದ್ಧಗೊಂಡಿರಬೇಕು ಎಂದೆನಿಸುತ್ತದೆ.

– ಶ್ರೀ. ಕೊಂಡಿಬಾ ಜಾಧವ, ಠಾಣೆ (೧೦.೯.೨೦೧೬)

Leave a Comment