ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ  ಮಾರ್ಗದರ್ಶನದ ಅಮೂಲ್ಯ ಅಂಶಗಳು

೧. ಅಧ್ಯಾತ್ಮವು ಕೀರ್ತನೆ ಅಥವಾ ಪ್ರವಚನಗಳಂತೆ ತಾತ್ತ್ವಿಕವಾಗಿರದೇ, ಕೃತಿಯ ಶಾಸ್ತ್ರವಾಗಿದೆ. ಆದ್ದರಿಂದ ಪೂಜೆಯನ್ನು ಮಾಡುವಾಗ, ಅಂದರೆ ಸಾಧನೆಯನ್ನು ಮಾಡುವಾಗ ‘ಮನಸ್ಸು ಅಲೆದಾಡುವುದು’, ಇದು ಸಾಧನೆಗಾಗಿ ಯೋಗ್ಯವಲ್ಲ.

೨. ನಮ್ಮಲ್ಲಿ ಸಾಧನೆಯ ತಳಮಳವಿದ್ದರೆ, ದೇವರು ನಮಗಾಗಿ ಎಲ್ಲವನ್ನೂ ಕೊಡುತ್ತಾನೆ !

೩. ‘ನಮ್ಮ ಮನಸ್ಸಿನಂತೆ ಆಗಬೇಕು’ ಎಂಬಂತಹ ಅಹಂಯುಕ್ತ ವಿಚಾರಗಳನ್ನು ಹೋಗಲಾಡಿಸಲು ‘ಸನಾತನ ಸಂಸ್ಥೆ’ಯಲ್ಲಿ ಕೆಲವು ಸಾಧಕರಿಗೆ ಅವರ ಮೂಲ ಕೌಶಲ್ಯ ಇಲ್ಲದಿರುವ ಸೇವೆಯನ್ನು ಮಾಡಲು ಹೇಳುತ್ತೇವೆ, ಉದಾ. ಡಾಕ್ಟರರಿಗೆ ವೈದ್ಯಕೀಯ ಸೇವೆಯನ್ನು ಹೇಳುವ ಬದಲು ಇತರ ಸೇವೆಯನ್ನು ಮಾಡಲು ಹೇಳುತ್ತೇವೆ.

೪. ಈಗ ಆಪತ್ಕಾಲವು ಸೂಕ್ಷ್ಮದಿಂದ ಬಂದಿರುವುದರಿಂದ ಸಾಧಕರ ಮನಸ್ಸಿನಲ್ಲಿ ನಕಾರಾತ್ಮಕ ವಿಚಾರಗಳು ಬರುತ್ತವೆ ಮತ್ತು ಅನೇಕ ಸಾಧಕರ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ತೊಂದರೆ ಹೆಚ್ಚಾಗುತ್ತಿದೆ. ಆದ್ದರಿಂದ ಆಧ್ಯಾತ್ಮಿಕ ಸ್ತರದಲ್ಲಿ ಉಪಾಯಗಳನ್ನು ಮಾಡುವಾಗ ದೇವರ ಅಥವಾ ಗುರುಗಳ ಬಗ್ಗೆ ಭಾವವನ್ನು ಹೆಚ್ಚಿಸಬೇಕು. ಸದ್ಯ ತೊಂದರೆ ಹೆಚ್ಚಾಗಲಿದೆ; ಆದರೆ ನಾವು ಗೆಲ್ಲುವೆವು.

೫. ‘ಯಾರಿಗೆ ತಿಳಿದುಕೊಳ್ಳಲಿಕ್ಕಿದೆ, ಅವನು ತಿಳಿದುಕೊಳ್ಳುತ್ತಾನೆ’. ಮಾಯೆಯಲ್ಲಿ ಮುಳುಗಿರುವವರಿಗೆ ತಿಳಿಸಿ ಹೇಳಲು ಸಾಧ್ಯವಿಲ್ಲ. ಯಾರಾದರೊಬ್ಬ (ಮಾಯೆಯಲ್ಲಿ ಸಿಲುಕಿರುವ) ತಾಯಿಗೆ ‘ತಮ್ಮ ಮಗ ಅಥವಾ ಮಗಳು ಸಾಧನೆಯನ್ನು ಮಾಡಬೇಕು’, ಎಂದು ಅನಿಸುತ್ತದೆಯೇ ? ತಾಯಿ-ತಂದೆ ಅಥವಾ ಆಪ್ತರು ಮಾಯೆಯ ‘ಮದುವೆ ಮಾಡು’, ಎಂದು ಹೇಳುವಾಗ ನಾವು ‘ಆಗಲಿ’, ಎಂದು ಹೇಳದೇ ‘ಹುಂ’ ಎನ್ನುತ್ತ (ಕೇವಲ ಬೆಂಬಲ ನೀಡುತ್ತ) ಕೇಳುತ್ತಿರಬೇಕು. ಮುಂದೆ ಅವರಿಗೆ ‘ನಾವು ಇವಳಿಗೆ ‘ಮದುವೆ ಮಾಡು’, ಎಂದು ಮಾಯೆಯ ವಿಷಯದ ಬಗ್ಗೆ ಏನಾದರೂ ಹೇಳಿದರೆ ಅವನಿಗೆ ಅಥವಾ ಅವಳಿಗೆ ಇಷ್ಟವಾಗುವುದಿಲ್ಲ’, ಎಂದೆನಿಸಿ ಅವರು ನಮಗೆ ಮಾಯೆಯಲ್ಲಿನ ವಿಷಯವನ್ನು ಹೇಳುವುದನ್ನು ನಿಲ್ಲಿಸುತ್ತಾರೆ.

೬. ಮಾಯೆಯ ವಿಚಾರಗಳಲ್ಲಿ (ಉದಾ. ನಕಾರಾತ್ಮಕ ವಿಚಾರ) ಏರಿಳಿತದ ಬಗ್ಗೆ ಆಧ್ಯಾತ್ಮಿಕ ಉಪಾಯವನ್ನು ಹೇಳುವವರಿಗೆ ಆಗಾಗ ಕೇಳಬೇಕು. ಕುಳಿತುಕೊಂಡು ನಾಮಜಪ ಮಾಡಲು ಆಗದಿದ್ದರೆ ನಿಂತುಕೊಂಡು ಮಾಡಬೇಕು ಮತ್ತು ನಿಂತುಕೊಂಡು ಮಾಡಲು ಆಗದಿದ್ದರೆ ಸುತ್ತಾಡುತ್ತ ಮಾಡಬೇಕು.

೭. ಸಾಧನೆಗಾಗಿ ಮಾಡುವ ಪ್ರಯತ್ನಗಳು ಬಾಹ್ಯ ಮನಸ್ಸು ಮತ್ತು ಬುದ್ಧಿಯ ಸ್ತರದಲ್ಲಿ ತಿಳಿದಿದ್ದರೂ ಆಧ್ಯಾತ್ಮಿಕ ತೊಂದರೆಗಳಿಂದ ಹಾಗೆ ಪ್ರಯತ್ನವಾಗುವುದಿಲ್ಲ, ಆ ಪ್ರಯತ್ನಗಳಿಗೆ ಸಂಬಂಧಿಸಿದ ಅಂಶಗಳನ್ನು ಓದಿ ಹಾಗೆ ಪ್ರಯತ್ನಿಸಬೇಕು.

– (ಸಚ್ಚಿದಾನಂದ ಪರಬ್ರಹ್ಮ) ಡಾ. ಆಠವಲೆ

Leave a Comment