ಪರಾತ್ಪರ ಗುರು ಡಾ. ಜಯಂತ ಆಠವಲೆಯವರ ಅಮೃತ ಮಹೋತ್ಸವ ವರ್ಷದ ನಿಮಿತ್ತ…

ಕೇವಲ ಸಾಧಕರ ಸಾಧನೆಯಾಗಲೆಂದು ಆಧ್ಯಾತ್ಮಿಕ ತೊಂದರೆ ಹಾಗೂ ತೀವ್ರ ಪ್ರಾರಬ್ಧವನ್ನು ಕಡಿಮೆಗೊಳಿಸುವುದಕ್ಕಾಗಿ ಸ್ಥೂಲಕ್ಕಿಂತ ಸೂಕ್ಷ್ಮ ಸ್ತರದಲ್ಲಿ ಹೆಚ್ಚು ಪ್ರಯತ್ನಿಸುವ ಪ.ಪೂ. ಡಾಕ್ಟರರು !

ವೈದ್ಯ ಮಂಗಲಕುಮಾರ ಕುಲಕರ್ಣಿ

ಪ.ಪೂ. ಗುರುದೇವರ ಬಗ್ಗೆ ನನ್ನೊಳಗಿರುವ ಭಾವಭಾವನೆಗಳನ್ನು ಶಬ್ದ ರೂಪದಲ್ಲಿ ಬಿಚ್ಚಿಡುವುದು ನನ್ನಂತಹ ಬುದ್ಧಿವಾದಿಗೆ ಅಸಾಧ್ಯವಾಗಿದೆ. ನನ್ನ ಮನಸ್ಸಿನಲ್ಲಿ ಪ.ಪೂ. ಡಾಕ್ಟರರಿಗೆ ಇರುವಂತಹ ಸ್ಥಾನ ಅನಂತ ಹಾಗೂ ಶಬ್ದಾತೀತವಾಗಿದೆ. ನಮ್ಮಂತಹ ಪಾಮರರು ಅವರು ಮಾಡುತ್ತಿರುವ ಅನಂತ ಕೃಪೆಯ ಬಗ್ಗೆ ಹೇಗೆ ಬರೆಯಲು ಸಾಧ್ಯ ? ಪ್ರತಿಯೊಬ್ಬ ಸಾಧಕರು ಒಂದಲ್ಲ ಒಂದು ರೀತಿಯಿಂದ ಅವರ ಕೃಪೆಯನ್ನು ಅನುಭವಿಸಿದ್ದಾರೆ. ಕೇವಲ ಕೃತಜ್ಞತೆಯೆಂದು ಶಬ್ದಗಳ ರೂಪದಲ್ಲಿ ನಾನು ಅವರ ಚರಣಗಳಿಗೆ ಅರ್ಪಿಸುತ್ತಿದ್ದೇನೆ.

೧. ಆಧ್ಯಾತ್ಮಿಕ ತೊಂದರೆಯ ನಿವಾರಣೆಗಾಗಿ ಪ.ಪೂ. ಗುರುದೇವರು ಮಾಡುತ್ತಿರುವ ಸೂಕ್ಷ್ಮದ ಉಪಾಯಗಳ ಅರಿವಿಲ್ಲದಿರುವುದು:
ನಾನು ಸಾಧನೆಗೆ ಬಂದಾಗ ‘ನನಗೆ ಆಧ್ಯಾತ್ಮಿಕ ತೊಂದರೆ ಇದೆ’, ಎಂಬ ಅರಿವಿರಲಿಲ್ಲ. ಹಾಗೆಯೇ ಪ.ಪೂ. ಗುರುದೇವರು ನನಗಾಗಿ ಯಾವಾಗಲೂ ಸತರ್ಕರಾಗಿದ್ದು ಸೂಕ್ಷ್ಮದಿಂದ ಏನೋ ಮಾಡುತ್ತಿದ್ದಾರೆ ಎಂಬುದು ಸಹ ಎಂದೂ ನನ್ನ ಗಮನಕ್ಕೆ ಬರಲಿಲ್ಲ.

೨. ಮೀರಜ್ ಆಶ್ರಮದಲ್ಲಿ ಸೇವೆ ಮಾಡುತ್ತಿರುವಾಗ ಆಗುತ್ತಿದ್ದ ತಪ್ಪುಗಳ ಸತ್ಸಂಗದಿಂದ ಪ.ಪೂ. ಗುರುದೇವರು ನಿಜವಾದ ಅರ್ಥದಲ್ಲಿ ಅಹಂಭಾವದ ಅರಿವು ಮಾಡಿಕೊಡುವುದು.
ಸನಾತನ ಸಂಸ್ಥೆಯ ಮೂಲಕ ನಾನು ೧೯೯೭ ರಲ್ಲಿ ಸಾಧನೆಯನ್ನು ಆರಂಭಿಸಿದೆನು. ಅದರ ನಂತರ ೨೦೦೩ ರಲ್ಲಿ ನನಗೆ ಆಧ್ಯಾತ್ಮಿಕ ತೊಂದರೆಯು ಆರಂಭವಾಯಿತು. ನನಗೆ ‘ಸೇವೆ ಮಾಡುವುದು ಬೇಡ’, ಎಂದು ಅನಿಸಲಾರಂಭಿಸಿತು. ಅದಕ್ಕಾಗಿ ನನಗೆ ಮೀರಜ್ ಆಶ್ರಮದಲ್ಲಿ ಉಳಿದುಕೊಂಡು ದಿನವಿಡಿ ಸಾಮೂಹಿಕ ನಾಮಜಪ ಮಾಡಲು ಹೇಳಿದ್ದರು. ಅದರ ನಂತರ ನನಗೆ ಸೇವೆ ಮಾಡಲು ಹೇಳಿದರು. ಆಶ್ರಮದಲ್ಲಾಗುತ್ತಿದ್ದ ಸತ್ಸಂಗದಲ್ಲಿ ಪ್ರತಿದಿನ ಎಲ್ಲರ ಎದುರು ನನ್ನ ತಪ್ಪುಗಳನ್ನು ಹೇಳುತ್ತಿದ್ದರು ಹಾಗೂ ಎಲ್ಲರ ಎದುರು ಜೋರು ಮಾಡುವುದು ನನಗೆ ಹೊಸದಾಗಿತ್ತು. ಆಗ ನನ್ನಲ್ಲಿಯ ಅಹಂಭಾವದ ಅರಿವಾಗಲು ಆರಂಭವಾಯಿತು. ಆ ಸಮಯದಲ್ಲಿ ‘ಸಾಧನೆಯೆಂದರೆ ಏನು ?’ ಎಂಬುದು ತಿಳಿಯುತ್ತಿರಲಿಲ್ಲ. ಕೇವಲ ‘ಗುರುದೇವರ ಆಜ್ಞಾಪಾಲನೆ ಮಾಡುವುದು’, ಅಷ್ಟೆ ನನಗೆ ತಿಳಿದಿತ್ತು. ಒಂದು ಸಲ ಅವರು ಎಲ್ಲರ ಎದುರು ನನಗೆ, ‘ಇವರು ಕಳೆದ ಕೆಲವು ವರ್ಷಗಳಿಂದ ಕೇವಲ ಓಡಾಡುತ್ತಿದ್ದಾರೆ. ಆದರೆ ಅವರ ಸಾಧನೆಯಾಗದಿರುವುದರಿಂದ ಈಗ ನಾನೇ ಅವರ ಹಿಂದೆ ಬಿದ್ದಿದ್ದೇನೆ’ ಎಂದು ಹೇಳಿದರು.

೩. ಪ.ಪೂ. ಡಾಕ್ಟರರು ತೊಂದರೆಯಿರುವ ಸಾಧಕರ ಕಾಳಜಿಯನ್ನು ತೆಗೆದುಕೊಳ್ಳುತ್ತಿರುವುದನ್ನು ಸಮೀಪದಿಂದ ಅನುಭವಿಸುವುದು.
ನಾನು ಬೇರೆ ಸಾಧಕರ ಆಧ್ಯಾತ್ಮಿಕ ತೊಂದರೆಯನ್ನು ಆರು ತಿಂಗಳಿನಿಂದ ನೋಡುತ್ತಿದ್ದೆನು ಹಾಗೂ ಪ.ಪೂ. ಡಾಕ್ಟರರು ಪ್ರತಿಯೊಬ್ಬ ಸಾಧಕರಿಗಾಗಿ ಎಷ್ಟೆಲ್ಲ ಪರಿಶ್ರಮ ತೆಗೆದುಕೊಳ್ಳುತ್ತಿದ್ದಾರೆ, ಎಂಬುದನ್ನು ಸಮೀಪದಿಂದ ನೋಡಿದೆನು. ಯಾವ ತಾಯಿಯು ಕೂಡ ತನ್ನ ಮಗುವಿಗಾಗಿ ಅಷ್ಟು ಮಾಡಲಿಕ್ಕಿಲ್ಲ, ಅಷ್ಟು ಪ.ಪೂ.ಡಾಕ್ಟರರು ತೊಂದರೆಯಿರುವ ಸಾಧಕರ ಕಾಳಜಿ ತೆಗೆದುಕೊಳ್ಳುವುದನ್ನು ನಾನು ಬಹಳ ಸಮೀಪದಿಂದ ಅನುಭವಿಸಿದೆನು.

೪. ಆಶ್ರಮಜೀವನವನ್ನು ಆಶ್ರಯಿಸಿದ ನಂತರ ಅಹಂಭಾವ ಕಡಿಮೆಯಾಗಲು ಗುರುದೇವರಲ್ಲಿ ಪ್ರಾರ್ಥನೆಯಾಗುವುದು.
ನವೆಂಬರ್ ೨೦೦೩ ರಿಂದ ೨೦೦೬ ರ ಗುರುಪೂರ್ಣಿಮೆಯವರೆಗೆ ನಾನು ವೈಯಕ್ತಿಕ ಕಾರಣಗಳಿಂದ ಆಶ್ರಮಜೀವನದಿಂದ ದೂರವಿದ್ದೆನು. ಆದರೆ ನಂತರ ನನಗೆ ದೇವದ್ ಆಶ್ರಮಕ್ಕೆ ಸೇವೆಗಾಗಿ ಹೋಗಲು ಹೇಳಿದರು. ಆಗ ಪ್ರಸಾರದ ಸೇವೆಯಿಂದ ಒಮ್ಮೆಲೆ ಆಶ್ರಮದಲ್ಲಿ ಉಳಿದುಕೊಂಡು ಸೇವೆ ಮಾಡಲು ಸಾಧ್ಯವಾಗುತ್ತಿರಲಿಲ್ಲ ಹಾಗೂ ಸತತವಾಗಿ ಅಹಂಭಾವಕ್ಕೆ ಪೆಟ್ಟಾಗುತ್ತಿದ್ದುದರಿಂದ ನನ್ನನ್ನು ಈ ಸ್ಥಿತಿಯಿಂದ ಹೊರ ತೆಗೆಯಲು ಗುರುದೇವರಲ್ಲಿ ಸತತವಾಗಿ ಪ್ರಾರ್ಥನೆ ಯಾಗುತ್ತಿತ್ತು.

೫. ಪ.ಪೂ. ಗುರುದೇವರು ದೇವದ್ ಆಶ್ರಮದಲ್ಲಿ ವಾಸ್ತವ್ಯದಲ್ಲಿದ್ದಾಗ ವೈದ್ಯನಾದುದರಿಂದ ಅವರ ಸೇವೆಯ ಅವಕಾಶ ಲಭಿಸುವುದು ಮತ್ತು ಅವರು ಭಾವ ಹೆಚ್ಚಿಸಲು ಪ.ಪೂ. ಪಾಂಡೆ ಮಹಾರಾಜರ ಸೇವೆ ಮಾಡಲು ಹೇಳುವುದು.
ಒಮ್ಮೆ ಪ.ಪೂ. ಗುರುದೇವರು ದೇವದ್ ಆಶ್ರಮಕ್ಕೆ ವಾಸ್ತವ್ಯಕ್ಕಾಗಿ ಬಂದಿದ್ದರು. ಆ ಸಮಯದಲ್ಲಿ ಅವರ ಆರೋಗ್ಯ ಸರಿಯಿಲ್ಲದ್ದರಿಂದಾಗಿ ವೈದ್ಯನಾದುದರಿಂದ ಸ್ವಲ್ಪ ಸಮಯ ನನಗೆ ಅವರ ಸೇವೆ ಮಾಡುವ ಅವಕಾಶವು ಲಭಿಸಿತು. ಇದರಿಂದ ಪ್ರತಿದಿನ ಅವರೊಂದಿಗೆ ಸಂಭಾಷಣೆ ಯಾಗುತ್ತಿತ್ತು ಒಂದು ದಿನ ಅವರು ‘ಈಗ ಭಾವ ಹೆಚ್ಚಾಗಿದೆ, ನೀವು ಯಾವುದಕ್ಕಾಗಿ ಸಂಸ್ಥೆಗೆ ಬಂದಿರುವಿರೋ, ಅದು ನಿಮಗೆ ಸಿಗಬೇಕು. ಅದಕ್ಕಾಗಿ ನಾಳೆಯಿಂದ ೨೪ ಗಂಟೆ ಪ.ಪೂ. ಪಾಂಡೆ ಮಹಾರಾಜರ ಸೇವೆಯನ್ನು ಮಾಡಿ’ ಎಂದು ಹೇಳಿದರು. ಆಗ ನನಗೆ ಭಾವವೆಂದರೆ ಏನೆಂದೇ ತಿಳಿದಿರಲಿಲ್ಲ. ‘ಕಲ್ಲಿನಂತಹ ನನ್ನಲ್ಲಿ ಅವರೇ ಚಿಲುಮೆಯನ್ನುಂಟು ಮಾಡಿದ್ದರು’, ಎಂದು ಈಗ ಹೇಳುತ್ತೇನೆ, ಆದರೆ ಆ ಸಮಯದಲ್ಲಿ ನನಗೆ ಏನೂ ತಿಳಿಯುತ್ತಿರಲಿಲ್ಲ. ಕೇವಲ ನನ್ನ ಮೇಲೆ ಪ.ಪೂ. ಡಾಕ್ಟರರ ಕೃಪೆಯಿಂದಲೇ ಅವರು ನನ್ನನ್ನು ಈ ಸ್ಥಿತಿಗೆ ತಂದರು.

೬. ಪ.ಪೂ. ಪಾಂಡೆ ಮಹಾರಾಜರ ಸೇವೆಯಲ್ಲಿರುವಾಗ ಕೆಟ್ಟ ಶಕ್ತಿಯ ತೊಂದರೆಯು ಹೆಚ್ಚಾಗುವುದು.
ಮರುದಿನದಿಂದ ನಾನು ಪ.ಪೂ. ಪಾಂಡೆ ಮಹಾರಾಜರ ಸೇವೆಯನ್ನು ಆರಂಭಿಸಿದೆನು ಮತ್ತು ೧ ತಿಂಗಳ ಸೇವೆಯ ನಂತರ ಒಮ್ಮೆಲೆ ನನ್ನಲ್ಲಿಯ ಕೆಟ್ಟ ಶಕ್ತಿಯ ತೊಂದರೆಯು ಹೆಚ್ಚಾಯಿತು. ಆಗ ಅದರ ನಿವಾರಣೆಗಾಗಿ ಪ.ಪೂ. ಪಾಂಡೆ ಮಹಾರಾಜರು ನಾಮಜಪ ಮಾಡಿದಾಗ ತೊಂದರೆಯು ಕಡಿಮೆಯಾಯಿತು. ನನಗೆ ಅಷ್ಟು ತೊಂದರೆಯಿದೆ ಎಂದು ಮೊದಲಬಾರಿ ತಿಳಿಯಿತು. ಇದರ ಬಗ್ಗೆ ಪ.ಪೂ. ಗುರುದೇವರು ‘ಸಂತರ ಸಹವಾಸದಲ್ಲಿ ೨೪ ಗಂಟೆ ಉಳಿದುದರಿಂದ ನಿಮಗೆ ತೊಂದರೆ ನೀಡುವ ಕೆಟ್ಟ ಶಕ್ತಿಗೆ ತೊಂದರೆಯಾಯಿತು ಮತ್ತು ಇದರಿಂದ ನಿಮಗಾಗುವ ತೊಂದರೆಯು ಹೆಚ್ಚಾಯಿತು’ ಎಂದು ಹೇಳಿದರು.

೭. ಸ್ವಭಾವದೋಷದಿಂದಾಗಿ ಸಂತರ ಸೇವೆಯಿಂದ ದೂರವಾಗುವುದು ಹಾಗೂ ಇದರ ಬಗ್ಗೆ ಪ.ಪೂ. ಡಾಕ್ಟರರು ಸಮಾಧಾನ ಮಾಡುವುದು.
ಒಂದೂವರೆ ತಿಂಗಳು ಸೇವೆ ಮಾಡಿದ ನಂತರ ಒಂದು ದಿನ ನನಗೆ ಪ.ಪೂ. ಪಾಂಡೆ ಮಹಾರಾಜರ ಬಗ್ಗೆ ನಕಾರಾತ್ಮಕ ವಿಚಾರವು ಬಂದು ಕಿರಿಕಿರಿಯಾಯಿತು. ಆಗ ‘ನನ್ನ ಮನಸ್ಸಿನಲ್ಲಿ ಸಂತರ ಅವಕೃಪೆ ಯಾಗುವುದು’ ಎಂದು ಭಯವಾಯಿತು. ಈ ಪ್ರಸಂಗದ ನಂತರ ನಾನು ಸೇವೆಯಿಂದ ಹೊರಬಿದ್ದೆನು ಹಾಗೂ ನನ್ನಲ್ಲಿಯ ಭಯವನ್ನು ಪ.ಪೂ. ಡಾಕ್ಟರರಲ್ಲಿ ಹೇಳಿದೆನು. ಆಗ ಅವರು ‘ಸಂತರು ಯಾವಾಗಲೂ ಪ್ರೀತಿಯನ್ನೇ ಮಾಡುತ್ತಾರೆ, ಅವರು ಅವಕೃಪೆಯನ್ನು ಮಾಡುವುದಿಲ್ಲ. ನೀವು ಕಲಿತಿರಲ್ಲವೇ’ ಎಂದು ಹೇಳಿ ಸಮಾಧಾನ ಮಾಡಿದರು. ಅದಲ್ಲದೆ ‘ನಾನು ನಿಮ್ಮನ್ನು ಪ.ಪೂ. ಪಾಂಡೆ ಮಹಾರಾಜರ ಸೇವೆ ಮಾಡಲು ಕಳುಹಿಸಿದ ಉದ್ದೇಶ ಪೂರ್ಣವಾಯಿತು’ ಎಂದು ಹೇಳಿದರು ಆಗ ನನಗೆ ಅವರು ಏನು ಹೇಳುತ್ತಿದ್ದಾರೆಂದು ಅರ್ಥವಾಗಿರಲಿಲ್ಲ; ಆದರೆ ‘ದೇವರ ಕೃಪೆಯಿಂದ ಸಂತರ ಸೇವೆ ಲಭಿಸಿಯೂ ನಾನು ಅದರ ಲಾಭವನ್ನು ಪಡೆದುಕೊಳ್ಳಲಿಲ್ಲ’, ಎಂಬ ಪಶ್ಚಾತ್ತಾಪ ಮನಸ್ಸಿನಲ್ಲಿ ಹಾಗೆಯೇ ಉಳಿದಿತ್ತು.

೮. ಪ.ಪೂ. ಪಾಂಡೆ ಮಹಾರಾಜರ ಸೇವೆಯಲ್ಲಿಡುವ ಉದ್ದೇಶವು ತಿಳಿದ ನಂತರ ಪ.ಪೂ. ಗುರುದೇವರ ಬಗ್ಗೆ ಕೃತಜ್ಞತೆಯನ್ನು ವ್ಯಕ್ತಪಡಿಸಲು ಶಬ್ದಗಳೇ ಇಲ್ಲದಿರುವುದು.
ಸುಮಾರು ಒಂದು ವರ್ಷದ ನಂತರ ಆಶ್ರಮದಲ್ಲಿ ತೀವ್ರ ತೊಂದರೆಯಿರುವ ಸಾಧಕರಿಗೆ ಆಧ್ಯಾತ್ಮಿಕ ಉಪಾಯವನ್ನು ಪ್ರಾರಂಭಿಸಿದರು. ಹೆಚ್ಚು ಉಪಾಯಕ್ಕಾಗಿ ನಮ್ಮೆಲ್ಲರನ್ನು ರಾಮನಾಥಿ ಆಶ್ರಮಕ್ಕೆ ಕಳುಹಿಸಿದರು. ರಾಮನಾಥಿ ಆಶ್ರಮದಲ್ಲಿ ಪ.ಪೂ. ಡಾಕ್ಟರರು ‘ನೀವು ಮಾಡಿರುವ ತಪ್ಪು ತಪ್ಪಾಗಿರದೇ ಅದು ನಿಮ್ಮಲ್ಲಿದ್ದ ಕೆಟ್ಟ ಶಕ್ತಿಯ ಪ್ರಕಟೀಕರಣವಾಗಿತ್ತು, ಎಂದು ಹೇಳಿದರು. ಮೀರಜ್ ಆಶ್ರಮದಲ್ಲಿದ್ದಂದಿನಿಂದ (೨೦೦೩ ರಿಂದ) ನಿಮ್ಮ ತೊಂದರೆಯನ್ನು ಕಡಿಮೆ ಮಾಡಲು ಪ್ರಯತ್ನ ಮಾಡುತ್ತಿದ್ದೆನು. ಅದಕ್ಕಾಗಿ ನಿಮ್ಮನ್ನು ೨೪ ಗಂಟೆ ಉಚ್ಛ ಮಟ್ಟದ ಸಂತರ ಸಾನ್ನಿಧ್ಯದಲ್ಲಿಟ್ಟೆನು. ಇದರಿಂದಾಗಿ ಈಗ ನಿಮ್ಮ ತೊಂದರೆಯು ಕಡಿಮೆಯಾಗಿದೆ’ ಎಂದು ಹೇಳಿದರು. ಎಷ್ಟೊಂದು ಗುರುಗಳ ಉಪಕಾರ ! ಅವರಿಗೆ ಹೇಗೆ ಕೃತಜ್ಞತೆಯನ್ನು ವ್ಯಕ್ತಪಡಿಸಲಿ? ‘ನನ್ನ ಆಧ್ಯಾತ್ಮಿಕ ತೊಂದರೆಯು ಈ ಜನ್ಮದಲ್ಲಿಯೇ ಮುಗಿದು ಆಧ್ಯಾತ್ಮಿಕ ಪ್ರಗತಿಯಾಗಲಿ’, ಎಂಬುದಕ್ಕಾಗಿ ಪ.ಪೂ. ಡಾಕ್ಟರರು ಅನೇಕ ವರ್ಷ ನನಗೆ ತಿಳಿಯದಂತೆಯೇ ಸೂಕ್ಷ್ಮ ಹಾಗೂ ಸ್ಥೂಲದಿಂದ ಮಾಡಿದಂತಹ ಪ್ರಯತ್ನ ತಿಳಿದ ನಂತರ ನನ್ನಲ್ಲಿ ಕೃತಜ್ಞತೆಯನ್ನು ವ್ಯಕ್ತಪಡಿ ಸಲು ಶಬ್ದಗಳೇ ಇಲ್ಲವಾದವು; ಆದರೆ ಇವೆಲ್ಲದರಿಂದ ನಾನು ಮಿತಿಯಿಲ್ಲದಂತಹ ಕೃತಜ್ಞತೆಯನ್ನು ಅನುಭವಿಸಿದೆನು.

೯. ಪ.ಪೂ. ಗುರುದೇವರು ಸ್ಥೂಲ ಹಾಗೂ ಸೂಕ್ಷ್ಮ ರೂಪದಲ್ಲಿ ಮಾಡುತ್ತಿರುವ ಕೃಪೆಯ ಅರಿವಾಗಿ ಅದರಲ್ಲಿ ಹೆಚ್ಚಳವಾಗುವುದು.
ದೋಷ ಹಾಗೂ ತೊಂದರೆಯಿಂದಾಗಿ ನಾನು ಆಶ್ರಮದಲ್ಲಿಯ ಬಂಧನಯುಕ್ತ ಜೀವನಶೈಲಿಗೆ ಬೇಸರಗೊಳ್ಳುತ್ತಿದ್ದೆನು. ಆದರೆ ಪ.ಪೂ. ಗುರುದೇವರು ನನಗಾಗಿ ಸೂಕ್ಷ್ಮದಿಂದ ಏನೇನು ಮಾಡುತ್ತಿದ್ದಾರೆ ಎಂಬುದರ ಅರಿವು ನನ್ನಂತಹ ಅಜ್ಞಾನಿಗೆ ಇರಲಿಲ್ಲ. ಆದರೆ ಪ.ಪೂ. ಗುರುದೇವರು ಪ್ರತಿಯೊಬ್ಬ ಸಾಧಕರಿಗಾಗಿ ಸ್ಥೂಲ ಹಾಗೂ ಸೂಕ್ಷ್ಮದಿಂದ ಪ್ರತೀಕ್ಷಣವು ಅವಶ್ಯವಾಗಿ ಏನಾದರೂ ಪ್ರಯತ್ನ ಮಾಡುತ್ತಿರುತ್ತಾರೆ ಎಂಬುದು ಇದರಿಂದ ಕಲಿಯಲು ಸಿಕ್ಕಿತು. ನಾವು ಅಜ್ಞಾನಿಗಳಾಗಿರುವುದರಿಂದ ನಮಗೆ ಅದರ ಅರಿವಿರುವುದಿಲ್ಲ. ಮುಂದೆ ಅವರ ಕೃಪೆಯಿಂದಲೆ ಈ ಅರಿವು ಉಳಿದುಕೊಂಡಿತು ಹಾಗೂ ನಿಧಾನವಾಗಿ ಇದರಲ್ಲಿ ವೃದ್ಧಿಯಾಯಿತು.

೧೦. ಪ.ಪೂ. ಡಾಕ್ಟರರ ಕೃಪೆಯಿಂದ ಪ.ಪೂ. ಪಾಂಡೆ ಮಹಾರಾಜರ ಸೇವೆ ಮಾಡುವುದರಲ್ಲಿ ಉಳಿದಂತಹ ಸೇವೆಯನ್ನು ತಂದೆಯವರ ಸೇವೆ ಮಾಡುವ ಮುಖಾಂತರ ಪೂರ್ಣಗೊಳಿಸುವುದು.
ತಂದೆಯವರ ಅನಾರೋಗ್ಯದಿಂದಾಗಿ ೨೦೦೯ ರಲ್ಲಿ ನಾನು ಮನೆಯಲ್ಲಿದ್ದು ಅವರ ಸೇವೆಯನ್ನು ಮಾಡಲಾರಂಭಿಸಿದೆನು. ಆಗ ಪ.ಪೂ. ಡಾಕ್ಟರರು, ‘ಪ.ಪೂ. ಪಾಂಡೆ ಮಹಾರಾಜರ ಸೇವೆ ಮಾಡುತ್ತಿರುವೆನೆಂದು ತಿಳಿದುಕೊಂಡು ತಂದೆಯವರ ಸೇವೆಯನ್ನು ಮಾಡಿರಿ’ ಎಂದು ಹೇಳಿರುವ ವಿಷಯವು ತಿಳಿಯಿತು ಹಾಗೂ ೨೦೦೯ ರ ನವೆಂಬರ್‌ನಲ್ಲಿ ತಂದೆಯವರ ನಿಧನವಾಯಿತು. ನಂತರ ಪ.ಪೂ. ಗುರುದೇವರು ‘ನಿಮ್ಮದು ಪ.ಪೂ. ಪಾಂಡೆ ಮಹಾರಾಜರ ಸೇವೆಯಲ್ಲಿ ಉಳಿದಂತಹ ಸೇವೆಯು ಇಂದು ಪೂರ್ಣವಾಯಿತು’ ಎಂದು ಹೇಳಿದರು. ಈ ಪ್ರಸಂಗದಿಂದ ನನಗೆ ಪ.ಪೂ. ಡಾಕ್ಟರರ ಅನಂತ ಉಪಕಾರವನ್ನು ಹೇಳಲು ಶಬ್ದಗಳೇ ಇಲ್ಲ, ಇದಕ್ಕಾಗಿ ನಾನು ಎಷ್ಟು ಕೃತಜ್ಞತೆಯನ್ನು ವ್ಯಕ್ತಪಡಿಸಿದರೂ ಕಡಿಮೆಯಾಗುವುದು. ‘ಕೇವಲ ನಾನು ಅವರ ಆಜ್ಞಾಪಾಲನೆಯನ್ನು ಮಾಡುವುದಷ್ಟೆ ಉಳಿದಿದೆ’, ಎಂಬುದಂತೂ ತೀವ್ರವಾಗಿ ಅರಿವಾಯಿತು.

೧೧. ಆಧ್ಯಾತ್ಮಿಕ ತೊಂದರೆಯಿಂದಾಗಿ ಆಶ್ರಮದಲ್ಲಿ ಉಳಿಯುವುದು ಆವಶ್ಯಕವಿರುವುದರಿಂದ ಪ.ಪೂ. ಗುರುದೇವರ ಕೃಪೆಯಿಂದ ಅನಾರೋಗ್ಯದಲ್ಲಿದ್ದ ತಾಯಿಗೂ ಆಶ್ರಮದಲ್ಲಿ ಉಳಿಯುವ ಅವಕಾಶ ಲಭಿಸುವುದು.
ತಾಯಿಯವರ ಆರೋಗ್ಯ ಪದೇಪದೇ ಹದಗೆಡುತ್ತಿತ್ತು. ದೇವದ್ ನಿಂದ ಪುಣೆ ಸಮೀಪವಿದ್ದುದರಿಂದ ನಾನು ಹೋಗಿ ಅವರನ್ನು ನೋಡಿ ಬರುತ್ತಿದ್ದೆನು. ಆಗ ನನ್ನ ಪತ್ನಿಯು ತಾಯಿಯವರನ್ನು ನೋಡಿ ಕೊಳ್ಳುತ್ತಿದ್ದಳು. ನಂತರ ತಾಯಿಯವರಿಗೆ ತೊಂದರೆ ಹೆಚ್ಚಾದುದರಿಂದ ಅವರ ಜೀವ ಉಳಿಯುವುದು ಕಠಿಣವಾಯಿತು. ಕೆಲವು ಜ್ಯೋತಿಷ್ಯರು ಇನ್ನು ೬ ವರ್ಷ ಆಯುಷ್ಯವಿದೆ, ಕೆಲವರು ಮೃತ್ಯುವಿನ ನಂತರ ಒಳ್ಳೆಯ ಗತಿ ಸಿಗುವುದು, ಎಂದು ಹೇಳಿದ್ದರು. ಪ್ರತ್ಯಕ್ಷವಾಗಿ ನಾನು ಅವರು ಯಾವತ್ತೂ ಸಾಧನೆ ಮಾಡುವುದನ್ನು ನೋಡಿಲ್ಲದ್ದರಿಂದ ನಮಗೆ ಆ ಮಾತಿನಲ್ಲಿ ವಿಶ್ವಾಸವಿಡುವುದು ಕಠಿಣವಾಗಿತ್ತು. ಅಷ್ಟು ವರ್ಷ ಅವರನ್ನು ಹೇಗೆ ನೋಡಿಕೊಳ್ಳುವುದು ಎಂಬ ಯೋಚನೆಯಲ್ಲಿದ್ದೆವು. ಅದೇ ಸಮಯದಲ್ಲಿ ಜನವರಿ ೨೦೧೪ ರಲ್ಲಿ ಸೇವೆಯ ನಿಮಿತ್ತ ರಾಮನಾಥಿ ಆಶ್ರಮಕ್ಕೆ ಹೋಗಿದ್ದೆನು. ಅಲ್ಲಿ ಸಂತರೊಬ್ಬರ ಭೇಟಿ ಮಾಡಿದಾಗ ಅವರಲ್ಲಿ, ‘ತಾಯಿಯವರು ವಿಚಿತ್ರ ಅವಸ್ಥೆಯಲ್ಲಿದ್ದಾರೆ. ಇನ್ನು ಎಷ್ಟು ದಿನ ಮನೆಯಲ್ಲಿ ಉಳಿಯಬೇಕಾಗಬಹುದು ಎಂದು ಹೇಳಲು ಸಾಧ್ಯವಿಲ್ಲ ಹಾಗೂ ನನಗಿರುವ ಆಧ್ಯಾತ್ಮಿಕ ತೊಂದರೆಯಿಂದ ನನಗೆ ಆಶ್ರಮದಲ್ಲಿ ಉಳಿಯುವುದು ಆವಶ್ಯಕವಾಗಿದೆ. ನನ್ನ ತಾಯಿಯವರಿಗೆ ನಾನು ಎಲ್ಲ ಸಂಸಾರ ಬಿಟ್ಟು ಆಶ್ರಮದಲ್ಲಿ ಉಳಿದು ಸಾಧನೆ ಮಾಡುವುದು ಸ್ವಲ್ಪವೂ ಇಷ್ಟವಾಗುತ್ತಿರಲಿಲ್ಲ. ಇದರಿಂದ ಅವರು ಸತತ ಸಂಸ್ಥೆಗೆ ಹೆಸರಿಡುತ್ತಿದ್ದರು. ನಾನು ಡಾಕ್ಟರ್ ಆಗಿಯೂ ಅವರ ಯಾವುದೇ ಅಪೇಕ್ಷೆಯನ್ನು ಪೂರ್ಣಗೊಳಿಸಲಿಲ್ಲ ಎಂದು ತಂದೆ ಮತ್ತು ತಾಯಿಗೆ ಇಬ್ಬರಿಗೂ ಸಿಟ್ಟಿತ್ತು. ಎಲ್ಲ ರೀತಿಯಿಂದ ಸಂಸ್ಥೆಗೆ ಅವರ ವಿರೋಧವಿತ್ತು, ಎಂದು ಹೇಳಿದೆನು. ಇದನ್ನು ಕೇಳಿಸಿಕೊಂಡ ಸಂತರು, ‘ನೀವು ತಾಯಿಯವರನ್ನು ಕರೆದು ಕೊಂಡು ದೇವದ್ ಆಶ್ರಮಕ್ಕೆ ಬನ್ನಿ’ ಎಂದು ಹೇಳಿದರು. ಈ ರೀತಿ ನನ್ನಂತಹ ಒಬ್ಬ ಸಾಮಾನ್ಯ ಸಾಧಕನ ಸಾಧನೆಯಾಗಲಿ (ಆಧ್ಯಾತ್ಮಿಕ ಉಪಾಯ) ಎಂದು ಗುರುದೇವರ ಕೃಪೆಯಿಂದ ತಾಯಿಯವರಿಗೆ ಆಶ್ರಮದಲ್ಲಿ ಉಳಿಯುವ ಅನುಮತಿಯು ಸಿಕ್ಕಿತು. ಪರಮ ಪೂಜ್ಯರೇ, ನೀವು ನಿಜವಾಗಿಯೂ ಶ್ರೇಷ್ಠರೇ ಆಗಿದ್ದೀರಿ !

೧೨. ಆಶ್ರಮದಲ್ಲಿ ಉಳಿಯಲು ಆರಂಭಿಸಿದ ನಂತರ ತಾಯಿಯವರಿಗೆ ಆಧ್ಯಾತ್ಮಿಕ ಉಪಾಯವಾಗಿ ಕೆಟ್ಟ ಶಕ್ತಿಯ ತೊಂದರೆಯು ಹೆಚ್ಚಾಗುವುದು ಮತ್ತು ಕೆಲವೇ ತಿಂಗಳುಗಳಲ್ಲಿ ಪ.ಪೂ. ಡಾಕ್ಟರರ ಕೃಪೆಯಿಂದ ತಾಯಿಯವರು ಪ್ರಾರಬ್ಧವನ್ನು ಭೋಗಿಸಿ ಜೀವನಯಾತ್ರೆಯನ್ನು ಮುಗಿಸುವುದು.
ಸಂಸ್ಥೆಗೆ ವಿರೋಧ ಮಾಡುವ ಸ್ವತಂತ್ರ ಜೀವನ ನಡೆಸುವ ನನ್ನ ತಾಯಿಯವರನ್ನು ಆಶ್ರಮಕ್ಕೆ ಹೇಗೆ ಕರೆದುಕೊಂಡು ಹೋಗುವುದು ಎಂದು ನನಗೆ ಪ್ರಶ್ನೆಯಿತ್ತು. ಅವರು ಇದಕ್ಕೆ ಒಪ್ಪಿಕೊಳ್ಳುವುದಿಲ್ಲ; ಆದರೆ ‘ಆಜ್ಞಾಪಾಲನೆಯಾಗಲಿ’ ಎಂದು ನಾವು ತಾಯಿಯನ್ನು ‘ನಿಮ್ಮನ್ನು ಮುಂಬೈಯ ಡಾಕ್ಟರರಿಗೆ ತೋರಿಸಲಿಕ್ಕಿದೆ ಹಾಗೂ ಸ್ವಲ್ಪ ದಿನ ಅಲ್ಲಿಯೇ ಉಳಿಯುವ’ ಎಂದು ಹೇಳಿ ಪ್ರತೀ ಸಲ ೧೫-೨೦ ದಿನ ಆಶ್ರಮಕ್ಕೆ ಕರೆದುಕೊಂಡು ಬರಲು ಆರಂಭಿಸಿದೆವು. ಆಶ್ರಮದ ಸಾತ್ತ್ವಿಕತೆಯಿಂದಾಗಿ ಅವರಲ್ಲಿಯ ಕೆಟ್ಟ ಶಕ್ತಿಯ ತೊಂದರೆಯು ಹೆಚ್ಚಾಗಲಾರಂಭಿಸಿತು. ಆಶ್ರಮದಲ್ಲಿ ಅವರ ಮೇಲೆ ಉಪಾಯವಾಯಿತು. ನಾಲ್ಕನೇ ಸಲ ಆಶ್ರಮಕ್ಕೆ ಬಂದಾಗ ಒಮ್ಮೆಲೆ ಅವರ ಶರೀರವು ಹತೋಟಿಯನ್ನು ಕಳೆದುಕೊಂಡಿತು. ಆದರೆ ಒಳಗಿನಿಂದ ಅವರ ಮನಸ್ಸು ಜಾಗೃತವಾಗಿತ್ತು. ಯಾತನೆಯನ್ನು ಅನುಭವಿಸುವುದು ಬಿಟ್ಟು ಬೇರೇನೂ ಉಳಿದಿರಲಿಲ್ಲ. ನಳಿಕೆ ಹಾಕಿ ಹೊಟ್ಟೆಗೆ ಆಹಾರವನ್ನು ನೀಡಬೇಕಾಗುತ್ತಿತ್ತು. ಮೂತ್ರ ಹೋಗಲು ನಳಿಕೆಯನ್ನು ಹಾಕಲಾಗಿತ್ತು. ಶರೀರದ ಯಾವುದೇ ಚಲನವಲನ ಹಾಗೂ ಮಾತನಾಡಲು ಬರುತ್ತಿರಲಿಲ್ಲ. ಅವರು ಪೂರ್ಣವಾಗಿ ಅಸಹಾಯಕರಾಗಿದ್ದರು. ೫ ತಿಂಗಳ ನಂತರ ಅವರ ನಿಧನವಾಯಿತು. ಈ ೫ ತಿಂಗಳ ಕಾಲಾವಧಿಯಲ್ಲಿ ಅವರು ಅಪಾರ ಯಾತನೆಯನ್ನು ಅನುಭವಿಸಿದರು. ನಾವು ಮತ್ತು ಅವರು ೬ ವರ್ಷಗಳ ಕಾಲ ಅನುಭವಿಸ ಬೇಕಾಗಿದ್ದ ಯಾತನೆಯು ಭಗವಂತನ ಕೃಪೆಯಿಂದ ೬ ತಿಂಗಳಲ್ಲಿ ಭೋಗಿಸಿ ಮುಗಿಯಿತು. ಈ ಎಲ್ಲವನ್ನು ಅನುಭವಿಸಲು ಪ.ಪೂ. ಡಾಕ್ಟರರು ಅನಂತ ಆತ್ಮಬಲವನ್ನು ನೀಡಿದರು. ಅವರ ಕೃಪೆಯಿಂದಲೇ ಇವೆಲ್ಲವು ಸಾಧ್ಯವಾಯಿತು ಮತ್ತು ಇದೆಲ್ಲವು ಒಂದು ಚಮತ್ಕಾರವೇ ಆಗಿದೆ. ಸಮಾಜದ ಜನರಿಗೆ ಮತ್ತು ಸಂಬಂಧಿಕರಿಗೆ ಬಹಳ ಆಶ್ಚರ್ಯವಾಯಿತು.

೧೩. ಪ.ಪೂ. ಗುರುದೇವರ ಕೃಪೆಯಿಂದ ಆಶ್ರಮ ಜೀವನದಲ್ಲಿ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯನ್ನು ಮಾಡಿಸಿಕೊಂಡು ಅನೇಕ ಜನ್ಮಗಳ ಪಾಪದಿಂದ ಮುಕ್ತಗೊಳಿಸುವುದು.
ಆಶ್ರಮ ಜೀವನದ ೮ ವರ್ಷಗಳಲ್ಲಿ ಪ.ಪೂ. ಗುರುದೇವರ ಕೃಪೆಯಿಂದ ನನ್ನ ದೋಷ ಹಾಗೂ ಅಹಂ ನಿರ್ಮೂಲನೆಗಾಗಿ ಅನೇಕ ರೀತಿಯಲ್ಲಿ ಪ್ರಬೋಧನೆಯಾಯಿತು. ಎಷ್ಟೋ ಜನ್ಮದ ಪಾಪವು ಕಡಿಮೆಯಾಯಿತು ಈ ಎಲ್ಲ ಪ್ರಕ್ರಿಯೆಗಳಲ್ಲಿ ಸಹಭಾಗಿಯಾದ ಎಲ್ಲ ಸಾಧಕರಿಗೂ ನಾನು ಕೃತಜ್ಞನಾಗಿದ್ದೇನೆ. ಇವೆಲ್ಲವನ್ನು ಸವಿಸ್ತಾರವಾಗಿ ಹೇಳುವ ಕಾರಣವೇನೆಂದರೆ ಪ.ಪೂ. ಗುರುದೇವರು ಒಬ್ಬ ಸಾಧಕನ ಹಾಗೂ ಅವನ ತಾಯಿಗಾಗಿ ಸ್ಥೂಲದಿಂದ ಮತ್ತು ಸೂಕ್ಷ್ಮದಿಂದ ಎಷ್ಟೆಲ್ಲ ಮಾಡಿದರು ಎಂಬುದು ತಿಳಿಯಬೇಕು. ಈ ರೀತಿ ತಾಯಿಯನ್ನು ಮತ್ತು ನಮ್ಮೆಲ್ಲರನ್ನು ಘೋರ ಪ್ರಾರಬ್ಧದಿಂದ ಮುಕ್ತವಂತೂ ಮಾಡಿದರು; ಅದಕ್ಕಿಂತಲೂ ಸಾಧನೆಗಾಗಿ ಮುಕ್ತಗೊಳಿಸಿದರು.

೧೪. ಪ.ಪೂ. ಡಾಕ್ಟರರ ಕೃಪೆಯಿಂದ ಆದಂತಹ ಕೃಪೆಯ ಮಳೆಯಿಂದಾಗಿ ಸಾಧಕನು ವ್ಯಕ್ತಪಡಿಸಿದ ಕೃತಜ್ಞತೆಗಳು !
ಪ.ಪೂ. ಗುರುದೇವರ ಅನಂತ ಉಪಕಾರಗಳ ಬಗ್ಗೆ ನನ್ನಂತಹ ಅಜ್ಞಾನಿ ಜೀವಕ್ಕೆ ಅನೇಕ ವರ್ಷಗಳನಂತರ ಅದು ಸಹ ಅವರು ಹೇಳಿದ ನಂತರ ಸ್ವಲ್ಪ ಅಂಶಗಳಲ್ಲಿ ಗಮನಕ್ಕೆ ಬಂದಿತು. ಪ್ರತ್ಯಕ್ಷವಾಗಿ ಸೂಕ್ಷ್ಮದಿಂದ ಅನಂತ ಪಟ್ಟಿನಲ್ಲಿ ಅವರು ನನಗಾಗಿ ಏನೆಲ್ಲ ಮಾಡಿದ್ದಾರೆ ಹಾಗೂ ಅನೇಕ ಜೀವಗಳಿಗೂ ಅವರು ಮಾಡುತ್ತಿದ್ದಾರೆ ಎಂಬುದನ್ನು ಆ ಭಗವಂತನೇ ಬಲ್ಲ. ಈ ಜೀವವು ಅನುಭವಿಸಿದ ಪ.ಪೂ. ಡಾಕ್ಟರರ ಮಹಾನತೆಯನ್ನು ಅವರಿಗೆ ಕೃತಜ್ಞತೆಯೆಂದು ಈ ಲೇಖನವನ್ನು ಅರ್ಪಿಸುತ್ತೇನೆ. ಇದರಲ್ಲಿ ನನ್ನದೆಂಬುದು ಏನೂ ಇಲ್ಲ. ಎಲ್ಲವೂ ಅವರದ್ದೇ ಕೃಪೆಯಾಗಿದೆ. ಪ.ಪೂ. ಡಾಕ್ಟರರ ಆಜ್ಞೆಯಲ್ಲಿದ್ದು ಸಾಧನೆಯನ್ನು ಮಾಡುವ ಬುದ್ಧಿಯು ನಮ್ಮೆಲ್ಲರಿಗೂ ಬರಲಿ, ಎಂದು ಅವರ ಕೋಮಲ ಚರಣಗಳಲ್ಲಿ ಪ್ರಾರ್ಥನೆ. – ವೈದ್ಯ ಮಂಗಲಕುಮಾರ ಕುಲಕರ್ಣಿ, ದೇವದ ಆಶ್ರಮ, ಪನವೇಲ್. (೨೪.೬.೨೦೧೬)

 

Leave a Comment