ಗುರುಗಳಿಲ್ಲದೇ ಜನ್ಮವೇ ವ್ಯರ್ಥ

ಪ್ರಸ್ತುತ ಜನ್ಮದಲ್ಲಿನ ಸಣ್ಣ ಸಣ್ಣ ವಿಷಯಗಳಿಗೂ ಪ್ರತಿಯೊಬ್ಬರು ಶಿಕ್ಷಕ, ವೈದ್ಯ (ಡಾಕ್ಟರ) ಇತ್ಯಾದಿ ಇತರರ ಮಾರ್ಗದರ್ಶನ ಪಡೆಯುತ್ತಾರೆ. ಆದರೆ ‘ಜನ್ಮ-ಮೃತ್ಯುವಿನ ಚಕ್ರದಿಂದ ಮುಕ್ತಿ ನೀಡುವ ಗುರುಗಳ ಮಹತ್ವ ಎಷ್ಟಿರಬಹುದು’, ಎಂಬುದರ ಕಲ್ಪನೆ ಮಾಡಲು ಸಾಧ್ಯವಿಲ್ಲ ! ಆದ್ದರಿಂದ …..

ಯಾರ ಬಳಿ ಗುರುಗಳ ಜ್ಞಾನವಿಲ್ಲ | ಅವನಿಗೆ ಪರಿಹಾರವೇ ಇಲ್ಲ |
ಆತ ಶ್ರೀಹರಿಗೂ ಇಷ್ಟವಾಗುವುದಿಲ್ಲ | ಅವನ ಜನ್ಮ ವ್ಯರ್ಥವಾಗುವುದು ||
– ಜ್ಞಾನದೇವಗಾಥಾ, ಅಭಂಗ ೬೯೮, ಸಾಲು ೧
ಅರ್ಥ : ಯಾರಿಗೆ ಶ್ರೀ ಗುರುಗಳಿಂದ ಜ್ಞಾನಪ್ರಾಪ್ತಿ ಆಗಿರುವುದಿಲ್ಲವೋ, ಅವನನ್ನು ಕಾಪಾಡಲು ಯಾವುದೇ ಉಪಾಯ ಇರುವುದಿಲ್ಲ. ಅವನು ಶ್ರೀಹರಿಗೂ ಇಷ್ಟವಾಗದಿರುವುದರಿಂದ ಅವನ ಜನ್ಮವು ವ್ಯರ್ಥವಾದಂತೆ ಇದೆ.

ಜೀವನದಲ್ಲಿನ ಸರ್ವೋಚ್ಚ ಆನಂದದತ್ತ ಕೊಂಡೊಯ್ಯುವ, ಈಶ್ವರಪ್ರಾಪ್ತಿಯ ಮಾರ್ಗವನ್ನು ತೋರಿಸುವ ಗುರುಗಳ ಬಗ್ಗೆ ಕೃತಜ್ಞತೆಯನ್ನು ಸಲ್ಲಿಸುವ ದಿನ ಅಂದರೆ ಗುರುಪೂರ್ಣಿಮೆ !

ಜಗತ್ತಿನಲ್ಲಿ ಎಲ್ಲಿಯೂ ಕಾಣದಂತಹ ವೈಶಿಷ್ಟ್ಯ ಎಂದರೆ ಭಾರತದ ಗುರು-ಶಿಷ್ಯ ಪರಂಪರೆ ! ಗುರುತತ್ತ್ವವು ಎಲ್ಲೆಡೆ ಒಂದೇ ಇರುತ್ತದೆ. ಆ ದಿನ ಆದಿಗುರು ವ್ಯಾಸರ ಪೂಜೆ ಮಾಡುತ್ತಾರೆ. ಗುರುಚರಣಗಳಲ್ಲಿ ಲೀನವಾಗಿ ಹೆಚ್ಚೆಚ್ಚು ಕೃತಜ್ಞತೆಯನ್ನು ವ್ಯಕ್ತಪಡಿಸುವ ಮತ್ತು ಶರಣಾಗತಭಾವದಿಂದ ಗುರುಗಳೊಂದಿಗೆ ಅನುಸಂಧಾನವನ್ನಿಡುವ ದಿನ ! ಈ ದಿನ ಪ್ರತಿಯೊಬ್ಬರು ಅಂತರ್ಮುಖರಾಗಿ ಮತ್ತು ಕೃತಜ್ಞತೆಯನ್ನು ವೃದ್ಧಿಸಿ ಗುರುತತ್ತ್ವದ ಲಾಭ ಪಡೆದುಕೊಳ್ಳೋಣ !

ಗುರುಪೂರ್ಣಿಮೆ ಎಂದರೆ ಗುರುಚರಣಗಳ ಹತ್ತಿರ ಹೋಗುವ ಸುವರ್ಣಾವಕಾಶ !

ಗುರುಪೂರ್ಣಿಮೆಯ ಅವಧಿಯಲ್ಲಿ ನಾವು ಎಷ್ಟು ತಳಮಳದಿಂದ ಸೇವೆ ಮಾಡುವೆವೊ, ಅಷ್ಟು ನಮಗೆ ಅದರಿಂದ ಹೆಚ್ಚು ಲಾಭವಾಗುತ್ತದೆ. ನಾವು ಮೈಮರೆತು ಸೇವೆ ಮಾಡಿದರೆ, ಗುರುಗಳ ಚರಣಗಳ ಹತ್ತಿರ ಬೇಗನೆ ತಲುಪಬಹುದು. ವ್ಯವಹಾರದಲ್ಲಿ ಶಿಕ್ಷಣ ಪಡೆಯುವಾಗ ವಾರ್ಷಿಕ ಪರೀಕ್ಷೆ ಸಮೀಪಿಸಿದಾಗ ನಾವು ಉಳಿದ ಎಲ್ಲ ವಿಷಯಗಳನ್ನು ಪಕ್ಕಕ್ಕಿಟ್ಟು ೧-೨ ತಿಂಗಳು ಕೇವಲ ಅಧ್ಯಯನದ ಕಡೆಗೆ ಗಮನ ನೀಡುತ್ತೇವೆ. ಅದೇ ರೀತಿ ಪ್ರಯತ್ನ ಗುರುಪೂರ್ಣಿಮೆಯ ಸೇವೆ ಮಾಡುವಾಗ ಮಾಡಿದರೆ ನಾವು ಗುರುಪೂರ್ಣಿಮೆಯ ಪರೀಕ್ಷೆಯಲ್ಲಿ ಖಂಡಿತ ತೇರ್ಗಡೆಯಾಗಿ ನಾವು ಮಾಡಿದ ಸೇವೆಯ ಫಲ ಗುರುಗಳು ನಮಗೆ ಕೊಡುವರು.

ಗುರುಪೂರ್ಣಿಮೆ ನಿಮಿತ್ತ ಹೆಚ್ಚೆಚ್ಚು ಸೇವೆ ಮತ್ತು 
ತ್ಯಾಗ ಮಾಡಿ ಗುರುಪೂರ್ಣಿಮೆಯ ಲಾಭ ಪಡೆಯಿರಿ !

ಸಾಧನೆಯಲ್ಲಿ ತ್ಯಾಗಕ್ಕೆ ಶೇ. ೩೦ ಮಹತ್ವವಿದೆ. ಆದುದರಿಂದ ಗುರುಪೂರ್ಣಿಮೆಯ ನಿಮಿತ್ತ ತನು, ಮನ, ಸಮಯ, ಬುದ್ಧಿ ಮತ್ತು ಅಹಂ ಇವುಗಳನ್ನು ಸಾಧನೆಗೆ ಹೆಚ್ಚೆಚ್ಚು ತ್ಯಾಗ ಮಾಡಬೇಕು. ಯಾವ ಗುರುಕೃಪೆಯಿಂದ ಕಳೆದ ವರ್ಷದಲ್ಲಿ ನಮಗೆ ಸಾಧನೆ ಮತ್ತು ಆಧ್ಯಾತ್ಮಿಕ ಉನ್ನತಿ ಮಾಡಲು ಸಾಧ್ಯವಾಯಿತೊ, ಆ ಬಗ್ಗೆ ಕೃತಜ್ಞತೆಯನ್ನು ವ್ಯಕ್ತಪಡಿಸಲು ಗುರುಪೂರ್ಣಿಮೆಯು ಏಕಮೇವ ಅವಕಾಶವಿದೆ. ಆ ಕೃತಜ್ಞತೆಯನ್ನು ಗುರುಪೂರ್ಣಿಮೆಯ ನಿಮಿತ್ತ ಉತ್ಕೃಷ್ಟವಾದ ಸೇವೆಯ ಮೂಲಕವೇ ವ್ಯಕ್ತಪಡಿಸಬಹುದು. ಯಾರಲ್ಲಿ ಭಕ್ತಿಭಾವ, ಗುರುಗಳ ಕಾರ್ಯದ ಬಗ್ಗೆ ತಳಮಳ ಇದೆ ಮತ್ತು ಯಾವ ಸಾಧಕರು ಪ್ರಾರ್ಥನೆ ಮತ್ತು ನಾಮಜಪ ಹೆಚ್ಚೆಚ್ಚು ಮಾಡುವರೊ, ಅಂತಹ ಸಾಧಕರ ಕಡೆಗೆ ಈ ಗುರುತತ್ತ್ವ ಹೆಚ್ಚು ಪ್ರಮಾಣದಲ್ಲಿ ಆಕರ್ಷಿತಗೊಳ್ಳುತ್ತದೆ. ‘ಸತ್ಪಾತ್ರೆ ದಾನ’ ಮಾಡಲು ವರ್ಷದಲ್ಲಿನ ದುರ್ಲಭ ಅವಕಾಶ ಇರುತ್ತದೆ. ಗುರುಪೂರ್ಣಿಮೆಯ ನಿಮಿತ್ತದಿಂದ ಗುರುಕಾರ್ಯಕ್ಕಾಗಿ ಮಾಡಿದ ಅರ್ಪಣೆ ಸಾಧಕನ ದೃಷ್ಟಿಯಿಂದ ಸರ್ವೋತ್ಕೃಷ್ಟವಾಗಿರುತ್ತದೆ.

ಗುರುಪೂರ್ಣಿಮೆಯ ದಿನದ ವೈಶಿಷ್ಟ್ಯಗಳು

೧. ಗುರುಪೂರ್ಣಿಮೆಯ ದಿನ ಕೇವಲ ಭೂಲೋಕದಲ್ಲಿ ಮಾತ್ರವಲ್ಲ, ಸಪ್ತಲೋಕಗಳಲ್ಲಿಯೂ ಗುರುತತ್ತ್ವ ಕಾರ್ಯನಿರತ ಇರುತ್ತದೆ. ಆದುದರಿಂದ
 ಯಾವ ಶಿಷ್ಯರು ಭೂತಲ, ಇತರ ಲೋಕಗಳಲ್ಲಿದ್ದು ಸಾಧನೆ ಮಾಡುತ್ತಿರುತ್ತಾರೆ, ಅವರಿಗೂ ಗುರುತತ್ತ್ವದ ಲಾಭವಾಗುತ್ತದೆ ಮತ್ತು ಅವರ ಉನ್ನತಿಯಾಗುತ್ತದೆ.
೨. ಶಿಷ್ಯನಿಗೆ ಈ ದಿನದಂದು ೧ ಸಾವಿರಪಟ್ಟು ಅಧಿಕ ಲಾಭವಾಗುತ್ತದೆ.
೩. ಸಾಧಕನಿಂದ ಶಿಷ್ಯ, ಶಿಷ್ಯನಿಂದ ಅಂತರ್ಯಾಮಿ ಶಿಷ್ಯ ಮತ್ತು ಅಂತರ್ಯಾಮಿ ಶಿಷ್ಯನಿಂದ ಸಂತ ಹೀಗೆ ಪ್ರಯಾಣ ಮಾಡಲು ಈ ದಿನವು ಅಧಿಕ ಲಾಭದಾಯಕವಾಗಿದೆ.
೪. ಗುರು ಶಿಷ್ಯನಿಗೆ ಆತ್ಮಜ್ಞಾನ ನೀಡುತ್ತಾರೆ ಮತ್ತು ಅವನ ಉನ್ನತಿ ಮಾಡಿಸಿಕೊಳ್ಳುತ್ತಾರೆ.
೫. ಶಿಷ್ಯನು ಮಾಯೆಯ ಅನೇಕ ಸಂಬಂಧಗಳನ್ನು ತ್ಯಜಿಸಿ ‘ಗುರು-ಶಿಷ್ಯ’ ಎಂಬ ಏಕೈಕ ಸತ್ಯ ಸಂಬಂಧದ ಆಧಾರದಿಂದ ಜೀವನದ ಮಾರ್ಗಕ್ರಮಣ ಮಾಡತೊಡಗುತ್ತಾನೆ ಮತ್ತು ಗುರು ಅವನಿಗೆ ಮೋಕ್ಷದವರೆಗೆ ಕೊಂಡೊಯ್ಯುತ್ತಾರೆ.
– ಕು. ಪ್ರಿಯಾಂಕಾ ಲೋಟಲೀಕರ, ಸನಾತನ ಆಶ್ರಮ, ರಾಮನಾಥಿ, ಗೋವಾ.

1 thought on “ಗುರುಗಳಿಲ್ಲದೇ ಜನ್ಮವೇ ವ್ಯರ್ಥ”

  1. ಗುರುವೇ ಪರಮಪೂಜ್ಯ ಗುರುವಿಲ್ಲದೆ ಮೋಕ್ಷವಿಲ್ಲ ಹರಿಯ ಸಾಕ್ಷಾತ್ಕಾರಕ್ಕೆ ಗುರುವೇ ಮೂಲ ಪರಮಪಾವನವಾದ ಗುರು ಪಾದಾರವಿಂದಗಳಿಗೆ ನಾವು ಮಾಡುವ ಸೇವಾ ಕೈಂಕರ್ಯದಲ್ಲಿ ನಮ್ಮ ಪುನರ್ಜನ್ಮದ ಪ್ರಾಪ್ತಿಯಾಗುತ್ತದೆ ನಾವು ಮಾಡುವ ಸೇವಾ ಕಾರ್ಯದಿಂದ ನಮಗೆ ಪುಣ್ಯ ಪ್ರಾಪ್ತಿಯಾಗುತ್ತದೆ ಮೋಕ್ಷದ ಹಾದಿಯು ದೊರೆಯುತ್ತದೆ

    Reply

Leave a Comment