ಗುರುಪೂರ್ಣಿಮೆಯ ನಿಮಿತ್ತ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ಸಂದೇಶ (2021)

ಆಪತ್ಕಾಲದಲ್ಲಿ ಗುರುಗಳ ಪ್ರೀತಿಮಯ ಕೃಪಾಛತ್ರವನ್ನು ಅನುಭವಿಸಲು ಶಿಷ್ಯರಾಗಿರಿ !

ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ

‘ಸಾಧಕರ ಜೀವನದಲ್ಲಿ ಗುರುಗಳಿಗೆ ಅನನ್ಯ ಸಾಧಾರಣ ಮಹತ್ವವಿದೆ. ಸಾಧಕಾವಸ್ಥೆಯ ಮುಂದಿನ ಆಧ್ಯಾತ್ಮಿಕ ಹಂತವೆಂದರೆ ಶಿಷ್ಯಾವಸ್ಥೆಯನ್ನು ಪ್ರಾಪ್ತ ಮಾಡಿಕೊಳ್ಳುವುದು. ಆಜ್ಞಾಪಾಲನೆ ಮತ್ತು ತನು-ಮನ-ಧನದ ತ್ಯಾಗವನ್ನು ಮಾಡಿದ ಶಿಷ್ಯನ ಯೋಗಕ್ಷೇಮವನ್ನು ಗುರುಗಳೇ ನೋಡಿಕೊಳ್ಳುತ್ತಾರೆ. ಇಂತಹ ಶಿಷ್ಯನಿಗೆ ಯಾವುದೇ ಸಂಕಟದ ಬಿಸಿ ತಟ್ಟುವುದಿಲ್ಲ; ಏಕೆಂದರೆ ಅವನ ಮೇಲೆ ಗುರುಗಳ ಪ್ರೀತಿಮಯ ಕೃಪಾಛತ್ರ ಇರುತ್ತದೆ. ಸದ್ಯದ ಆಪತ್ಕಾಲದಲ್ಲಿ ಸಾಧಕರಿಗೆ ಗುರುಗಳ ಪ್ರೀತಿಮಯ ಕೃಪಾಛತ್ರವನ್ನು ಅನುಭವಿಸುವ ಸುವರ್ಣಾವಕಾಶವಿದೆ. ಮುಂಬರುವ ಆಪತ್ಕಾಲದಲ್ಲಿ ಸಂಕಟದ ದೊಡ್ಡ ದೊಡ್ಡ ಬೆಟ್ಟಗಳನ್ನು ದಾಟ ಬೇಕಾಗುವುದು. ಇದನ್ನು ಗಮನದಲ್ಲಿಟ್ಟುಕೊಂಡು ಈ ಆಪತ್ಕಾಲವನ್ನು ಜಯಿಸಲು ಶ್ರೀಮನ್ನಾರಾಯಣ ಸ್ವರೂಪ ಪರಾತ್ಪರ ಗುರುಗಳಿಗೆ ಅನನ್ಯ ಭಾವದಿಂದ ಶರಣಾಗೋಣ ಮತ್ತು ಅವರ ನಿಜವಾದ ಶಿಷ್ಯರಾಗಲು ಸಾಧನೆಯ ಪರಾಕಾಷ್ಠೆಯ ಪ್ರಯತ್ನಗಳನ್ನು ಮಾಡೋಣ.’

– (ಶ್ರೀಸತ್‌ಶಕ್ತಿ) ಸೌ. ಬಿಂದಾ ಸಿಂಗಬಾಳ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨೮.೪.೨೦೨೧)

ಸೂಚನೆ : ಸದ್ಗುರು (ಸೌ.) ಬಿಂದಾ ಸಿಂಗಬಾಳ ಇವರನ್ನು ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಎಂದು ಉಲ್ಲೇಖಿಸಲು ಮಹರ್ಷಿಗಳು ಹೇಳಿದ್ದಾರೆ.

Leave a Comment