ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ
ಪೃಥ್ವಿಯ ಮೇಲೆ ಅಧರ್ಮ ಬಲಾಢ್ಯವಾದಾಗ ಈಶ್ವರನು ಅವತರಿಸುತ್ತಾನೆ ಮತ್ತು ಭಕ್ತರ ರಕ್ಷಣೆಯನ್ನು ಮಾಡುತ್ತಾನೆ. ‘ನ ಮೆ ಭಕ್ತಃ ಪ್ರಣಶ್ಯತಿ|’ (ನನ್ನ ಭಕ್ತರು ನಾಶವಾಗುವುದಿಲ್ಲ) ಎಂದು ಭಗವಾನ ಶ್ರೀಕೃಷ್ಣನು ಭಕ್ತರಿಗೆ ವಚನವನ್ನು ನೀಡಿದ್ದಾನೆ. ಅವನು ಶ್ರೀರಾಮ-ಶ್ರೀಕೃಷ್ಣ ಮುಂತಾದ ಅವತಾರಗಳಲ್ಲಿ ಅನೇಕ ಲೀಲೆಗಳನ್ನು ಮಾಡಿ ಭಕ್ತರನ್ನು ರಕ್ಷಿಸಿದನು. ಪ್ರಭು ಶ್ರೀರಾಮಚಂದ್ರನು ಸಮಸ್ತ ಜೀವಗಳ ಕಲ್ಯಾಣ ಮಾಡುವ ರಾಮರಾಜ್ಯವನ್ನು ಸ್ಥಾಪಿಸಿದನು. ಭಗವಾನ ಶ್ರೀಕೃಷ್ಣನು ದುಷ್ಟ ಕೌರವರನ್ನು ಪರಾಭವಗೊಳಿಸಿ ಧರ್ಮರಾಜ್ಯವನ್ನು ಸ್ಥಾಪಿಸಿದನು. ಕಲಿಯುಗದಲ್ಲಿಯೂ ಧರ್ಮಸಂಸ್ಥಾಪನೆಯ ಮಹಾನ್ ಕಾರ್ಯವನ್ನು ಶ್ರೀಮನ್ನಾರಾಯಣಸ್ವರೂಪ ಪರಾತ್ಪರ ಗುರು ಡಾಕ್ಟರರು ಪ್ರಾರಂಭಿಸಿದ್ದಾರೆ. ಹೇಗೆ ಶ್ರೀರಾಮನ ಕಾರ್ಯದಲ್ಲಿ ವಾನರ ಸೇನೆಯು ಸಹಭಾಗಿಯಾಗಿ ತಮ್ಮ ಉದ್ಧಾರವನ್ನು ಮಾಡಿಕೊಂಡಿತೋ, ಹಾಗೆಯೇ ಪರಾತ್ಪರ ಗುರು ಡಾಕ್ಟರರ ಧರ್ಮಸ್ಥಾಪನೆಯ ಈ ದೈವೀ ಕಾರ್ಯದಲ್ಲಿ ಸಹಭಾಗಿಗಳಾಗಿ ಜೀವನವನ್ನು ಸಾರ್ಥಕಪಡಿಸಿಕೊಳ್ಳಿರಿ !’
– ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ, ಸನಾತನ ಆಶ್ರಮ, ರಾಮನಾಥಿ (೨೮.೪.೨೦೨೧)
ಸೂಚನೆ : ಸದ್ಗುರು (ಸೌ.) ಅಂಜಲಿ ಗಾಡಗೀಳ ಇವರಿಗೆ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಎಂದು ಉಲ್ಲೇಖಿಸಲು ಮಹರ್ಷಿಗಳು ಹೇಳಿದ್ದಾರೆ.