ಗುರುಮಹಿಮೆ

೧. ಶ್ರೀ ಗುರುಸ್ತುತಿ

ಸದ್ಗುರು ಡಾ. ಚಾರುದತ್ತ ಪಿಂಗಳೆ

೧ ಅ. ಶಾಸ್ತ್ರಗಳಲ್ಲಿ ಶ್ರೀ ಗುರುಗಳ ಸ್ತುತಿಗಾಗಿ ನೀಡಿದ ಮಂತ್ರ

೧. ತೀರ್ಥಸ್ವರೂಪಾಯ ನಮಃ | ಅಂದರೆ ತೀರ್ಥ ಸ್ವರೂಪರಾಗಿರುವ ಶ್ರೀ ಗುರುಗಳಿಗೆ ನನ್ನ ನಮಸ್ಕಾರಗಳು.

೨. ಉದಾರಹೃದಯಾಯ ನಮಃ | ಅಂದರೆ ಉದಾರ ಹೃದಯವಿರುವಂತಹ ಶ್ರೀ ಗುರುಗಳಿಗೆ ನನ್ನ ನಮಸ್ಕಾರಗಳು.

೩. ಜಿತೇಂದ್ರಿಯಾಯ ನಮಃ | ಅಂದರೆ ಯಾರು ಜಿತೇಂದ್ರಿಯರಾಗಿರುತ್ತಾರೆಯೋ, ಯಾರ ಸ್ಮರಣೆಯಿಂದ ನಾವು ಸಹ ಜಿತೇಂದ್ರಿಯರಾಗುತ್ತೇವೆಯೋ, ಇಂದ್ರಿಯಗಳನ್ನು ಗೆದ್ದ ಅಂತಹ ಶ್ರೀ ಗುರುಗಳಿಗೆ ನಮಸ್ಕಾರಗಳು.

೪. ಪಾವಕಾಯ ನಮಃ | ಅಂದರೆ ಅಗ್ನಿಯಂತೆ ತೇಜಸ್ವಿಯಾಗಿರುವ ಶ್ರೀ ಗುರುಗಳಿಗೆ ನನ್ನ ನಮಸ್ಕಾರಗಳು.

೫. ಪಾವನಾಯ ನಮಃ | ಅಂದರೆ ಪವಿತ್ರರಾಗಿರುವ ಶ್ರೀ ಗುರುಗಳಿಗೆ ನನ್ನ ನಮಸ್ಕಾರಗಳು.

೬. ಭಾರತಗೌರವಾಯ ನಮಃ | ಅಂದರೆ ಯಾರು ಭಾರತದ ಗೌರವವಾಗಿರುವರೋ, ಅಂತಹ ಶ್ರೀ ಗುರುಗಳಿಗೆ ನನ್ನ ನಮಸ್ಕಾರಗಳು.

೭. ಜ್ಞಾನಮೂರ್ತಯೇ ನಮಃ | ಅಂದರೆ ಜ್ಞಾನಮೂರ್ತಿ ಯಾಗಿರುವ ಶ್ರೀ ಗುರುಗಳಿಗೆ ನನ್ನ ನಮಸ್ಕಾರಗಳು.

೮. ಜ್ಞಾನಯೋಗಿನೇ ನಮಃ | ಅಂದರೆ ಜ್ಞಾನಯೋಗಿಗಳಾದ ಶ್ರೀಗುರುಗಳಿಗೆ ನನ್ನ ನಮಸ್ಕಾರಗಳು.

೯. ಮಹರ್ಷಯೇ ನಮಃ | ಅಂದರೆ ಮಹರ್ಷಿಗಳಾಗಿರುವ ಶ್ರೀ ಗುರುಗಳಿಗೆ ನನ್ನ ನಮಸ್ಕಾರಗಳು.

೧೦. ಪರಮೇಶ್ವರಾಯ ನಮಃ | ಅಂದರೆ ಪರಮೇಶ್ವರ ಸ್ವರೂಪರಾಗಿರುವ ಶ್ರೀ ಗುರುಗಳಿಗೆ ನನ್ನ ನಮಸ್ಕಾರಗಳು.

೧ ಆ. ಜ್ಞಾನ ಮತ್ತು ಭಕ್ತಿಯನ್ನು ದಯಪಾಲಿಸುವ ಶ್ರೀ ಗುರುಗಳನ್ನು ಸ್ತುತಿಸುವ ಸುಂದರವಾದ ಮಂತ್ರಗಳು

೧. ಜನಪ್ರಿಯಾಯ ನಮಃ | ಅಂದರೆ ಎಲ್ಲರಿಗೆ ಪ್ರಿಯರಾಗಿರುವಂತಹ ಶ್ರೀ ಗುರುಗಳಿಗೆ ನಮಸ್ಕಾರಗಳು.

೨. ಮಧುರಸ್ವಭಾವಾಯ ನಮಃ | ಅಂದರೆ ಮಧುರವಾದ ಸ್ವಭಾವವಿರುವಂತಹ ಶ್ರೀ ಗುರುಗಳಿಗೆ ನಮಸ್ಕಾರಗಳು.

೩. ಸುಹೃದೇ ನಮಃ | ಅಂದರೆ ಯಾರು ಎಲ್ಲರ ಸುಹೃದ(ಮಿತ್ರ)ರಾಗಿರುವರೋ ಅಂತಹ ಶ್ರೀ ಗುರುಗಳಿಗೆ ನಮಸ್ಕಾರಗಳು. ಯಾವ ರೀತಿ ಭಗವಂತನು ಎಲ್ಲರ ಮಿತ್ರನಾಗಿರುತ್ತಾನೆಯೋ, ಹಾಗೆಯೇ ಸದ್ಗುರುಗಳು ಸಹ ಎಲ್ಲರ ಸುಹೃದ, ಅಂದರೆ ಮಿತ್ರರಾಗಿರುತ್ತಾರೆ.

೪. ಕರುಣಾಸಾಗರಾಯ ನಮಃ | ಅಂದರೆ ಕರುಣಾಸಾಗರ ರಾದಂತಹ ಶ್ರೀ ಗುರುಗಳಿಗೆ ನಮ್ಮ ನಮಸ್ಕಾರಗಳು.

೫. ಸತ್ಯಸಂಕಲ್ಪಾಯ ನಮಃ | ಅಂದರೆ ಸತ್ಯಸಂಕಲ್ಪರೂಪಿ ಶ್ರೀ ಗುರುಗಳಿಗೆ ನನ್ನ ನಮಸ್ಕಾರಗಳು.

೬. ಸಾಧವೇ ನಮಃ | ಅಂದರೆ ಯಾರು ನಿಜವಾದ ಸಾಧು ಆಗಿದ್ದಾರೆಯೋ, ವಾಸ್ತವದಲ್ಲಿ ನಿಜವಾದ ಸಂತರಾಗಿದ್ದಾರೆಯೋ ಅವರಿಗೆ ನಮ್ಮ ಪ್ರಣಾಮಗಳು.

೭. ಸನ್ಯಾಸಿನೇ ನಮಃ | ಅಂದರೆ ಸನ್ಯಾಸಿ ವೃತ್ತಿಯನ್ನು ಧಾರಣೆ ಮಾಡಿರುವ ಶ್ರೀ ಗುರುಗಳಿಗೆ ನನ್ನ ನಮಸ್ಕಾರಗಳು.

೮. ಶ್ರುತಿಪಾರಗಾಯ ನಮಃ | ಅಂದರೆ ಶ್ರುತಿ ಅಂದರೆ ವೇದ-ಉಪನಿಷತ್ತುಗಳಲ್ಲಿ ಯಾರು (ಗುರು) ಪಾರಂಗತರಾಗಿದ್ದಾರೆಯೋ, ಅವರಿಗೆ ನನ್ನ ನಮಸ್ಕಾರಗಳು.

೯. ಶ್ರೋತ್ರಿಯಾಏ ನಮಃ | ಅಂದರೆ ಎಲ್ಲ ಶಾಸ್ತ್ರಗಳ ರಹಸ್ಯವನ್ನರಿತಿರುವ ಶ್ರೀ ಗುರುಗಳಿಗೆ ನಾವು ನಮಸ್ಕರಿಸುತ್ತೇವೆ.

೧೦. ಕೃತಾತ್ಮನೇ ನಮಃ | ಅಂದರೆ ಆತ್ಮಜ್ಞಾನಿ ಶ್ರೀ ಗುರುಗಳಿಗೆ ನಮಸ್ಕಾರಗಳು.

೧೧. ಕ್ಷಮಾಶೀಲಾಯ ನಮಃ | ಅಂದರೆ ಯಾರು ಕ್ಷಮಾಶೀಲರಾಗಿರುವರೋ, ನಮ್ಮ ದೋಷಗಳನ್ನು ಕ್ಷಮಿಸುವರೋ, ಅಂತಹ ಗುರುಗಳಿಗೆ ನಮ್ಮ ನಮಸ್ಕಾರಗಳು.

೧೨. ಸಮಬುದ್ಧಯೇ ನಮಃ | ಅಂದರೆ ಗುರು ಸಮಾನತೆಯ ಬುದ್ಧಿಯವರಾಗಿರುತ್ತಾರೆ. ಅವರೆಂದೂ ಪಕ್ಷಪಾತ ಮಾಡುವುದಿಲ್ಲ.

೧೩. ಸ್ವಯಂಜ್ಯೋತಿಷೇ ನಮಃ | ಅಂದರೆ ಏನು ಮಾಡಿದರೆ ಸಾಧಕರ ಭವಿಷ್ಯ ಸುಖಪ್ರದವಾಗುವುದು, ಎಂಬುದನ್ನು ಶ್ರೀ ಗುರುಗಳು ಹೇಳುತ್ತಾರೆ.

೧೪. ಛಿನ್ನಸಂಶಯಾಯ ನಮಃ | ಅಂದರೆ ನಮ್ಮ ವಿಕಲ್ಪ (ಸಂಶಯ) ದೂರ ಮಾಡುವ ಶ್ರೀ ಗುರುಗಳಿಗೆ ನಮಸ್ಕಾರಗಳು.

೧೫. ದ್ವಂದ್ವಾತೀತಾಯ ನಮಃ | ಅಂದರೆ ದ್ವಂದ್ವಗಳ ಆಚೆಗೆ ಇರುವಂತಹ ಶ್ರೀ ಗುರುಗಳಿಗೆ ನನ್ನ ನಮಸ್ಕಾರಗಳು.

೧೬. ಬಂಧಮೋಕ್ಷಕಾಯ ನಮಃ | ಅಂದರೆ ಬಂಧನಗಳಿಂದ ಮುಕ್ತಗೊಳಿಸುವ ಶ್ರೀ ಗುರುಗಳಿಗೆ ನನ್ನ ನಮಸ್ಕಾರಗಳು.

೧೭. ಉತ್ಸಾಹವರ್ಧಕಾಯ ನಮಃ | ಅಂದರೆ ಸಾಧಕರ ಉತ್ಸಾಹ ಹೆಚ್ಚಿಸುಂತಹ ಶ್ರೀ ಗುರುಗಳಿಗೆ ನನ್ನ ನಮಸ್ಕಾರಗಳು.

೧೮. ದೃಢನಿಶ್ಚಯಾಯ ನಮಃ | ಅಂದರೆ ದೃಢನಿಶ್ಚಯದ ಪ್ರೇರಣೆ ನೀಡುವ ಶ್ರೀ ಗುರುಗಳಿಗೆ ನನ್ನ ನಮಸ್ಕಾರಗಳು.

೧೯. ಮನೋಹರಾಯ ನಮಃ | ಅಂದರೆ ನಮ್ಮ ಮನಸ್ಸನ್ನು ಅಪಹರಿಸುವ ಶ್ರೀ ಗುರುಗಳಿಗೆ ನನ್ನ ನಮಸ್ಕಾರಗಳು. ವ್ಯಕ್ತಿಯ ಅಂತರ್ಮನದಲ್ಲಿರುವ ಸಂಸಾರದ ಆಸಕ್ತಿ ನಾಶವಾಗುತ್ತದೆ ಮತ್ತು ಶ್ರೀ ಗುರು, ಈಶ್ವರ ಮತ್ತು ಈಶ್ವರನ ಹೆಸರು ಇವುಗಳ ವಿಷಯದಲ್ಲಿ ಸಹಜವಾಗಿ ಒಲವು ಉಂಟಾಗುತ್ತದೆ.

೨೦. ಸರ್ವಹಿತಚಿಂತಕಾಯ ನಮಃ | ಅಂದರೆ ಎಲ್ಲರ ಹಿತದ ಕಾಳಜಿ ವಹಿಸುವ ಮತ್ತು ಎಲ್ಲರ ಹಿತವನ್ನೇ ಮಾಡುವ ಶ್ರೀ ಗುರುಗಳಿಗೆ ನನ್ನ ನಮಸ್ಕಾರಗಳು.

೨೧. ತಾಪನಾಶನಾಯ ನಮಃ | ಅಂದರೆ ಆಧಿದೈವಿಕ, ಆಧಿಭೌತಿಕ ಮತ್ತು ಆಧ್ಯಾತ್ಮಿಕ ಎಂಬ ತ್ರಿವಿಧ ತಾಪಗಳನ್ನು ದೂರಗೊಳಿಸುವ ಶ್ರೀ ಗುರುಗಳಿಗೆ ನಮಸ್ಕಾರಗಳು.

೨೨. ಧರ್ಮಸಂಸ್ಥಾಪಕಾಯ ನಮಃ | ಅಂದರೆ ಧರ್ಮದ ರಹಸ್ಯವನ್ನು ಹೇಳುವ ಮತ್ತು ಜನರ ಹೃದಯದಲ್ಲಿ ಧರ್ಮವನ್ನು ಸ್ಥಾಪಿಸುವ ಶ್ರೀ ಗುರುಗಳಿಗೆ ನನ್ನ ನಮಸ್ಕಾರಗಳು.

೨೩. ಅದ್ವಿತೀಯಾಯ ನಮಃ | ಅಂದರೆ ಅದ್ವಿತೀಯರಾದ ಮತ್ತು ಅವರಿಗಿಂತ ಶ್ರೇಷ್ಠರಾದವರು ಬೇರೆ ಯಾರೂ ಇಲ್ಲ, ಇಂತಹ ಗುರುಗಳಿಗೆ ನಮ್ಮ ನಮಸ್ಕಾರಗಳು.

೨೪. ಸುಮನಸೇ ನಮಃ | ಅಂದರೆ ಹೂವಿನಂತೆ ಸುಂದರವಾದ ಮನಸ್ಸಿರುವ ಶ್ರೀ ಗುರುಗಳಿಗೆ ನನ್ನ ನಮಸ್ಕಾರಗಳು.

ಶ್ರೀ ಗುರುಗಳ ಮನಸ್ಸು ಸುಮನದಂತೆ, ಅಂದರೆ ಅರಳಿದ ಹೂವಿನಂತೆ ಇರುತ್ತದೆ. ಅರಳಿದ ಹೂವು ಎಲ್ಲರಿಗೂ ಹೇಗೆ ಪರಿಮಳ ನೀಡುತ್ತದೆಯೋ, ಹಾಗೆಯೇ ಶ್ರೀ ಗುರುಗಳು ಎಲ್ಲರಿಗೂ ಪರಿಮಳ ಮತ್ತು ದಿವ್ಯ ಜೀವನವನ್ನು ಜೀವಿಸುವ ಸ್ಫೂರ್ತಿಯನ್ನು ನೀಡುತ್ತಾರೆ. ಆದ್ದರಿಂದ ಗುರುಗಳನ್ನು ಸ್ತುತಿಸುವ ಮಂತ್ರದಲ್ಲಿ ಸುಮನಸೆ ನಮಃ | ಎಂದು ಹೇಳಲಾಗಿದೆ. ನಾವು ಅವರ ಸಾನಿಧ್ಯದಲ್ಲಿದ್ದರೆ ನಮ್ಮ ಮನಸ್ಸೂ ಸುಮನ, ಅಂದರೆ ಅರಳಿದ (ಆನಂದದಿಂದ) ಹೂವಿನಂತಿರುತ್ತದೆ. ಮನಸ್ಸು ಎಂದಿಗೂ ನಿರಾಶೆ, ಚಂಚಲತೆ, ಚಿಂತೆ ಅಥವಾ ತೊಂದರೆಗೊಳಗಾಗುವುದಿಲ್ಲ.

೨೫. ಪ್ರಸನ್ನಾತ್ಮನೇ ನಮಃ | ಅಂದರೆ ಯಾರು ಯಾವಾಗಲೂ ಪ್ರಸನ್ನರಾಗಿರುತ್ತಾರೆ ಮತ್ತು ಎಲ್ಲರಿಗೂ ಪ್ರಸನ್ನತೆಯನ್ನು ಹಂಚುವ ಶ್ರೀ ಗುರುಗಳಿಗೆ ನಮಸ್ಕಾರಗಳು.

೨೬. ಆನಂದಾಯ ನಮಃ | ಅಂದರೆ ಆನಂದ ಮತ್ತು ಶಾಂತಿಯ ದಾನ ನೀಡುವ ಶ್ರೀ ಗುರುಗಳಿಗೆ ನಮಸ್ಕಾರಗಳು.

೨೭. ಸಚ್ಚಿದಾನಂದಾಯ ನಮಃ | ಅಂದರೆ ಸತ್-ಚಿತ್-ಆನಂದ ಸ್ವರೂಪವಾಗಿರುವ ಶ್ರೀ ಗುರುಗಳಿಗೆ ನನ್ನ ನಮಸ್ಕಾರಗಳು.

೨೮. ಧೈರ್ಯಪ್ರದಾಯ ನಮಃ | ಅಂದರೆ ಯಾರ ದರ್ಶನದಿಂದ ತಾನಾಗಿಯೇ ಧೈರ್ಯ ಮತ್ತು ಶಾಂತಿ ಲಭಿಸುತ್ತದೆ, ಆ ಶ್ರೀ ಗುರುಗಳಿಗೆ ನನ್ನ ನಮಸ್ಕಾರಗಳು.

೨೯. ಶಾಂತಿಪ್ರದಾಯ ನಮಃ | ಅಂದರೆ ಗುರುಗಳು ಎಲ್ಲರಿಗೂ ಮನಸ್ಸಿನ ಶಾಂತಿಯನ್ನು ಪ್ರದಾನಿಸುತ್ತಾರೆ.

೩೦. ಸ್ಥಿತಪ್ರಜ್ಞಾಯ ನಮಃ | ಅಂದರೆ ಸ್ಥಿತಪ್ರಜ್ಞ ಸ್ಥಿತಿಯಲ್ಲಿರುವ ಶ್ರೀ ಗುರುಗಳಿಗೆ ನಮಸ್ಕಾರಗಳು.

೩೧. ಅವಿನಾಶಿನೇ ನಮಃ | ಅಂದರೆ ಅವಿನಾಶಿಯಾಗಿರುವ ಶ್ರೀ ಗುರುಗಳಿಗೆ (ಗುರುತತ್ತ್ವಕ್ಕೆ) ನನ್ನ ನಮಸ್ಕಾರಗಳು.

೩೨. ನಾರಾಯಣಾಯ ನಮಃ | ಅಂದರೆ ಗಂಗಾಮಾತೆ ಸಾಮಾನ್ಯ ನದಿಯಲ್ಲ ಮತ್ತು ಹನುಮಂತನು ಸಾಮಾನ್ಯ ವಾನರನಲ್ಲ, ಅದೇ ರೀತಿ ಗುರುಗಳು ಸಹ ಸಾಮಾನ್ಯ ಮನುಷ್ಯ ರಲ್ಲ, ಅವರು ಸಾಕ್ಷಾತ್ ನಾರಾಯಣರಾಗಿದ್ದಾರೆ, ಅಂತಹ ಗುರುಗಳಿಗೆ ನನ್ನ ನಮಸ್ಕಾರಗಳು.

೨. ಶ್ರೀ ಗುರುಗಳಿಗೆ ಶರಣಾಗತಿಯಿಂದ ಮಾಡಿದ ಪ್ರಾರ್ಥನೆ !

ಅನ್ಯಥಾ ಶರಣಂ ನಾಸ್ತಿ, ತ್ವಮೇವ ಶರಣಂ ಮಮ ।
ತಸ್ಮಾತ ಕಾರುಣ್ಯ ಭಾವೇನ, ರಕ್ಷಸ್ವ ಪರಮೇಶ್ವರ ॥

ಅರ್ಥ : ನಿನ್ನ ಹೊರತು ನನಗೆ ಬೇರೆ ಯಾವುದೇ ಆಧಾರವಿಲ್ಲ. ನಾನು ನಿನಗೆ ಶರಣಾಗಿದ್ದೇನೆ; ಆದ್ದರಿಂದ ಹೇ ಪರಮೇಶ್ವರಾ, ಕರುಣೆಯ ಸುರಿಮಳೆಯನ್ನು ಸುರಿಸಿ ನೀನೇ ನನ್ನನ್ನು ರಕ್ಷಿಸು.

೩. ಸರ್ವಶ್ರೇಷ್ಠವಾಗಿರುವ ಶ್ರೀ ಗುರುಗಳಿಗೆ ನಮಸ್ಕಾರಗಳು !

ಅ. ಶ್ರೀ ಗುರುಭ್ಯೋ ನಮಃ |
ಅರ್ಥ : ಶ್ರೀ ಗುರುದೇವರಿಗೆ ನಮಸ್ಕಾರಗಳು

ಆ. ಶ್ರೀ ಪರಮಗುರುಭ್ಯೋ ನಮಃ |
ಅರ್ಥ : ಸರ್ವೋಚ್ಚವಾಗಿರುವ ಶ್ರೀ ಗುರುಗಳಿಗೆ ನಮಸ್ಕಾರಗಳು.

ಇ. ಶ್ರೀ ಪರಾತ್ಪರಗುರುಭ್ಯೋ ನಮಃ |
ಅರ್ಥ : ಪರಾತ್ಪರ (ಸರ್ವಶ್ರೇಷ್ಠ) ಶ್ರೀ ಗುರುಗಳಿಗೆ ನಮಸ್ಕಾರಗಳು.

ಈ. ಶ್ರೀ ಪರಮೇಷ್ಠಿಗುರುಭ್ಯೋ ನಮಃ |
ಅರ್ಥ : ಬ್ರಹ್ಮಾ, ವಿಷ್ಣು ಮುಂತಾದ ದೇವತಾಸ್ವರೂಪವಾಗಿರುವ ಶ್ರೀ ಗುರುದೇವರಿಗೆ ನಮಸ್ಕಾರಗಳು.

(ವಿವಿಧ ಜಾಲತಾಣಗಳಿಂದ ದೊರಕಿದ ಜ್ಞಾನ.)

– (ಸದ್ಗುರು) ಡಾ. ಚಾರುದತ್ತ ಪಿಂಗಳೆ

Leave a Comment