ಇಂಡೊನೇಶಿಯಾದಲ್ಲಿ ಹೆಜ್ಜೆ ಹೆಜ್ಜೆಗೂ ಕಂಡುಬರುವ ಪ್ರಾಚೀನ ಹಿಂದೂ ಸಂಸ್ಕೃತಿಯ ಅವಶೇಷಗಳು

ಸದ್ಗುರು (ಸೌ.) ಅಂಜಲಿ ಗಾಡಗೀಳ ಇವರಿಂದ ಬಾಲಿಯ ಭಾರತೀಯ ರಾಯಭಾರಿ ಕಛೇರಿಯ ಮುಖ್ಯಾಧಿಕಾರಿ ಶ್ರೀ. ಸುನೀಲ ಬಾಬೂ ಇವರ ಭೇಟಿ !
ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಕಾರ್ಯವು ಶ್ಲಾಘನೀಯ ! – ಶ್ರೀ. ಸುನೀಲ ಬಾಬೂ

ಎಡದಿಂದ ಸದ್ಗುರು (ಸೌ.) ಅಂಜಲಿ ಗಾಡಗೀಳ್, ಶ್ರೀ. ಸುನೀಲ ಬಾಬೂ ಮತ್ತು ಶ್ರೀ. ವಿನಾಯಕ್ ಶಾನಭಾಗ್

ಬಾಲಿ (ಇಂಡೊನೇಶಿಯಾ) – ಇಲ್ಲಿನ ಬಾಲಿ ದ್ವೀಪದಲ್ಲಿ ಶೇ. ೮೭ ರಷ್ಟು ಜನಸಂಖ್ಯೆ ಹಿಂದೂಗಳದ್ದಾಗಿದೆ. ಈ ದ್ವೀಪದಲ್ಲಿ ಭಾರತೀಯ ರಾಯಭಾರಿ ಕಛೇರಿ ಇದೆ. ೨೦.೩.೨೦೦೧೮ ರಂದು ಬಾಲಿಗೆ ಪ್ರಯಾಣ ಮಾಡುವಾಗ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸದ್ಗುರು (ಸೌ.) ಅಂಜಲಿ ಗಾಡಗೀಳ ಇವರು ಇಲ್ಲಿಯ ರಾಯಭಾರಿ ಕಚೇರಿಯ ಮುಖ್ಯ ಅಧಿಕಾರಿಗಳಾದ ಶ್ರೀ. ಸುನೀಲ ಬಾಬೂ ಇವರನ್ನು ಭೇಟಿಯಾದರು. ಆಗ ಸದ್ಗುರು (ಸೌ.) ಗಾಡಗೀಳ ಇವರು ಶ್ರೀ. ಬಾಬೂ ಇವರಿಗೆ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯವು ಮಾಡುತ್ತಿರುವ ಕಾರ್ಯದ ಕುರಿತು ಮಾಹಿತಿ ನೀಡಿದರು ಮತ್ತು ಭಾರತಕ್ಕೆ ಬಂದ ನಂತರ ಸನಾತನದ ರಾಮನಾಥಿ ಆಶ್ರಮಕ್ಕೆ ಭೇಟಿ ನೀಡಲು ಆಮಂತ್ರಿಸಿದರು. ಇದಕ್ಕೆ ಶ್ರೀ. ಬಾಬೂ ಇವರು, “ನಿಮ್ಮ ಕಾರ್ಯ ಅತ್ಯಂತ ಶ್ಲಾಘನೀಯವಾಗಿದೆ, ಸದ್ಯ ಸಮಾಜದಲ್ಲಿ ಇಂತಹ ಕಾರ್ಯಕ್ರಮಗಳ ಆವಶ್ಯಕತೆ ಇದೆ. ಹಿಂದೂ ಸಂಸ್ಕೃತಿಯ ಪ್ರಸಾರ ಮಾಡುವ ಬಹುಮೂಲ್ಯ ಕಾರ್ಯವನ್ನು ನೀವು ಮಾಡುತ್ತಿದ್ದೀರಿ” ಎಂದು ಹೇಳಿದರು. ಶ್ರೀ. ಸುನೀಲ ಬಾಬೂ ಇವರು ಸದ್ಗುರು (ಸೌ.) ಅಂಜಲಿ ಗಾಡಗೀಳ ಮತ್ತು ಇವರೊಂದಿಗೆ ಅಧ್ಯಯನ ಮಾಡಲು ಹೋಗಿದ್ದ ವಿದ್ಯಾರ್ಥಿ ಸಾಧಕರನ್ನು ಭಾರತೀಯ ರಾಯಭಾರಿ ಕಛೇರಿಗೆ ಕರೆದಿದ್ದರು. ಶ್ರೀ. ಬಾಬೂ ಇವರು ಮೂಲತಃ ಕೇರಳದವರಾಗಿದ್ದಾರೆ.

ಅವರೊಂದಿಗೆ ಮಾತನಾಡುವಾಗ ಸದ್ಗುರು (ಸೌ.) ಗಾಡಗೀಳ ಇವರು ಮಾರನೇ ದಿನ ಅಲ್ಲಿಯ ಬೇಸಾಖಿ ಎಂಬ ಹಿಂದೂಗಳ ಪವಿತ್ರ ದೇವಸ್ಥಾನಕ್ಕೆ ಭೇಟಿ ನೀಡುವುದಾಗಿ ಹೇಳಿದರು. ಅದಕ್ಕೆ ಶ್ರೀ. ಬಾಬೂ ಅವರು, “ಮಾತಾಜೀ, ನಿಜಕ್ಕೂ ನೀವು ಭಾಗ್ಯಶಾಲಿಗಳಾಗಿದ್ದೀರಿ. ಬೇಸಾಖಿ ದೇವಸ್ಥಾನವು ಅಗುಂಗ ಜ್ವಾಲಾಮುಖಿಯ ಮೇಲೆ ನೆಲೆಸಿರುವುದರಿಂದ ಕಳೆದ ವರ್ಷವಿಡಿ ಅದರ ಸಮೀಪ ಹೋಗಲು ನಿರ್ಬಂಧ ಹೇರಲಾಗಿತ್ತು. ಎರಡು ವಾರಗಳ ಹಿಂದೆ ಆ ನಿರ್ಬಂಧವನ್ನು ತೆಗೆದುಹಾಕಲಾಗಿದೆ. ನಾನು ಇಲ್ಲಿ ಬಂದು ಒಂದು ವರ್ಷವಾಯಿತು, ಆದರೂ ಇನ್ನುವರೆಗೆ ನಾನೂ ಆ ದೇವಸ್ಥಾನಕ್ಕೆ ಹೋಗಿಲ್ಲ. ಅಗುಂಗ ಪರ್ವತವು ೩ ಸಾವಿರ ೧೫೦ ಮೀಟರ ಎತ್ತರದಲ್ಲಿದೆ. ಅದು ಇಂಡೋನೆಶಿಯಾದ ಎಲ್ಲಕ್ಕಿಂತ ಜಾಗೃತ ಜ್ವಾಲಾಮಖಿಯಾಗಿದೆ. ಸಮುದ್ರಮಂಥನದ ಸಮಯದಲ್ಲಿ ಸುಮೇರು ಪರ್ವತದ ಒಂದು ಭಾಗ ಬಾಲಿ ದ್ವೀಪದ ಮೇಲೆ ಬಿತ್ತು. ‘ಅದೇ ಅಗುಂಗ ಪರ್ವತ’ ಎಂಬುದು ಇಲ್ಲಿನ ಹಿಂದೂಗಳಲ್ಲಿ ಶ್ರದ್ಧೆಯಾಗಿದೆ. ಬಾಲಿಯ ಹಿಂದೂಗಳಿಗೆ ಅಗುಂಗ ಪರ್ವತವೇ ದೇವರಾಗಿದೆ. ಅವರ ಮನೆ, ಅಂಗಡಿ ಮತ್ತು ಕಛೇರಿಗಳಲ್ಲಿ ದೇವರ ಕೋಣೆಯ ದಿಕ್ಕು ಅಗುಂಗ ಪರ್ವತದ ದಿಕ್ಕಿಗೆ ಇರುತ್ತದೆ” ಎಂದರು.

ಇಂಡೊನೇಶಿಯಾದಲ್ಲಿನ ಬಾಲಿ ದ್ವೀಪದಲ್ಲಿ ಸಂರಕ್ಷಿಸಲಾದ ಹಿಂದೂ ಸಂಸ್ಕೃತಿ

ಬಾಲಿ ದ್ವೀಪದಲ್ಲಿನ ವಿಮಾನ ನಿಲ್ದಾಣದ ಮುಂಭಾಗದಲ್ಲಿ ಓಂ ಸ್ವಸ್ತಿಅಸ್ತು ಎಂದು ಬರೆದು ಪ್ರಯಾಣಿಕರ ಸ್ವಾಗತ !

ನಿನ್ನೆ ಬೆಳಗ್ಗೆ ೧೨ ಗಂಟೆಗೆ ನಾವು ಇಂಡೊನೇಶಿಯಾದ ಬಾಲಿ ದ್ವೀಪಕ್ಕೆ ತಲುಪಿದೆವು. ವಿಮಾನದಿಂದ ಇಳಿದ ನಂತರ ವಿಮಾನ ನಿಲ್ದಾಣದಲ್ಲಿ ಹೋಗುವಾಗ, ಆ ವಿಮಾನ ನಿಲ್ದಾಣವನ್ನು ಬಾಲಿಯಲ್ಲಿರುವ ದೇವಸ್ಥಾನಗಳ ಗೋಪುರದಂತೆ ಕಟ್ಟಲಾಗಿದೆ ಎಂದು ಗಮನಕ್ಕೆ ಬಂತು. ವಿಮಾನ ನಿಲ್ದಾಣದ ಒಳಗಡೆ ಹೋಗುವಾಗ ನಮಸ್ಕಾರದ ಬದಲು ಅವರು ಓಂ ಸ್ವಸ್ತಿಅಸ್ತು ಎಂದು ಬರೆದಿದ್ದಾರೆ. ಬಾಲಿ ದ್ವೀಪದ ಶೇ. ೮೭ ಜನರು ಹಿಂದೂಗಳಾಗಿದ್ದಾರೆ. ಪರಸ್ಪರರನ್ನು ಭೇಟಿಯಾದಾಗ ‘ಓಂ ಸ್ವಸ್ತಿಅಸ್ತು ಎಂದು ಹೇಳಿ ಕೈಜೋಡಿಸಿ ನಮಸ್ಕಾರ ಮಾಡುತ್ತಾರೆ. – ಸದ್ಗುರು (ಸೌ.) ಅಂಜಲಿ ಗಾಡಗೀಳ, ಇಂಡೊನೇಶಿಯಾ.

Leave a Comment