ಚಿದಂಬರಮ್ : ಆಕಾಶತತ್ತ್ವಕ್ಕೆ ಸಂಬಂಧಿಸಿದ ಶಿವಕ್ಷೇತ್ರ

ನಾವು ೧೦.೮.೨೦೧೬ ರಂದು ಚಿದಂಬರಮ್ ಕ್ಷೇತ್ರದ ನಟರಾಜ ದೇವಸ್ಥಾನಕ್ಕೆ ದರ್ಶನಕ್ಕಾಗಿ ಹೋಗಿದ್ದೆವು. ಇದು ಆಕಾಶತತ್ತ್ವಕ್ಕೆ ಸಂಬಂಧಿಸಿದ ಶಿವಕ್ಷೇತ್ರವಾಗಿದೆ. ಈ ದೇವಸ್ಥಾನವು ಶಿವನ ಒಂದು ರಹಸ್ಯಮಯ ಸ್ಥಾನವಾಗಿದೆ. ಇದನ್ನೇ ‘ಚಿದಂಬರಮ್ ರಹಸ್ಯ’ ಎಂದು ಕರೆಯುತ್ತಾರೆ. ಇದು ಶಿವನ ನಿರ್ಗುಣ ತತ್ತ್ವಕ್ಕೆ ಸಂಬಂಧಿಸಿದ ಕ್ಷೇತ್ರವಾಗಿದೆ.

೨. ದೇವಸ್ಥಾನದ ಸ್ಥಾನ ಮಹಾತ್ಮೆ

೨ಅ. ವ್ಯಾಘ್ರಪಾದ ಮಹರ್ಷಿ ಮತ್ತು ಪತಂಜಲಿ ಮಹರ್ಷಿಯವರ ತಪೋಸ್ಥಾನ : ಇಲ್ಲಿ ಹಿಂದೆ ಅರಣ್ಯವಿತ್ತು. ಈ ಅರಣ್ಯದಲ್ಲಿ ವ್ಯಾಘ್ರಪಾದ ಮಹರ್ಷಿ ಮತ್ತು ಪತಂಜಲಿ ಮಹರ್ಷಿಗಳು ತಪಶ್ಚರ್ಯ ಮಾಡುತ್ತಿದ್ದರು. ಒಮ್ಮೆ ಇವರಿಬ್ಬರೂ ಶಿವನಿಗೆ ‘ಹೇ ದೇವರೇ, ನಾವು ನಿನ್ನ ತಾಂಡವ ನೃತ್ಯವನ್ನು ನೋಡಲು ಬಯಸುತ್ತೇವೆ’, ಎಂದು ಪ್ರಾರ್ಥನೆ ಮಾಡಿದರು.

೨ಆ. ಶಿವ – ಪಾರ್ವತಿಯರು ಇಬ್ಬರು ಮಹರ್ಷಿಗಳಿಗಾಗಿ ಪ್ರತ್ಯಕ್ಷ ಕೈಲಾಸದಿಂದ ಪೃಥ್ವಿಯ ಮೇಲೆ ಬಂದು ತಾಂಡವನೃತ್ಯದ ದರ್ಶನ ನೀಡುವುದು : ಆಗ ಕೈಲಾಸದಿಂದ ಶಿವ- ಪಾರ್ವತಿಯರು ಪ್ರತ್ಯಕ್ಷ ಪೃಥ್ವಿಯ ಮೇಲೆ ಇಳಿದು ಬಂದರು. ಅವರಿಬ್ಬರೂ ಮಹರ್ಷಿಗಳಿಗೆ ಇದೇ ಸ್ಥಳದಲ್ಲಿ ಒಟ್ಟಿಗೆ ಸೇರಿ ಆನಂದ ತಾಂಡವವನ್ನು ಮಾಡಿ ತೋರಿಸಿದರು. ಇದೇ ಸ್ಥಳದಲ್ಲಿ ಅವರು ಇಬ್ಬರಿಗೂ ರುದ್ರತಾಂಡವ ನೃತ್ಯದ ದರ್ಶನವನ್ನೂ ಮಾಡಿಸಿದರು.

ಆನಂದ ತಾಂಡವ ನೃತ್ಯ ಮಾಡುವಾಗ ಶಿವ ಮತ್ತು ಪಾರ್ವತಿಯವರ ದೃಶ್ಯವಿರುವ ದೇವಸ್ಥಾನದ ಚಿತ್ರ

೨ಇ. ಶಿವನು ತನ್ನ ಸಗುಣ ಗುರುತು ಎಂದು ಪ್ರತ್ಯಕ್ಷ ನಟರಾಜ ಮೂರ್ತಿಯ ರೂಪದಲ್ಲಿ ಪ್ರಕಟವಾಗುವುದು ಮತ್ತು ಈ ನಟರಾಜ ಮೂರ್ತಿಯು ಚಿದಂಬರಮ್ ಕ್ಷೇತ್ರದಲ್ಲಿರುವುದು : ತಾಂಡವನೃತ್ಯವನ್ನು ಕಂಡು ಮೈಮರೆತ ಮಹರ್ಷಿಗಳು ಶಿವನಿಗೆ ಪ್ರಾರ್ಥನೆ ಮಾಡಿದರು, ಹೇ ದೇವಾ, ನಿಮ್ಮ ಈ ನೃತ್ಯದ ಅಸ್ತಿತ್ವದ ಗುರುತು ಎಂದು ನಮಗೆ ಸಗುಣರೂಪದಲ್ಲಿ ನೋಡಲು ಏನಾದರೂ ದಯಪಾಲಿಸಿ ! ಆಗ ಸ್ವತಃ ಶಿವನು ನಟರಾಜ ರೂಪದಲ್ಲಿ ಮೂರ್ತಿಯಲ್ಲಿ ಪ್ರಕಟವಾದನು. ಇಲ್ಲಿ ಪ್ರಕಟವಾಗಿದ್ದ ಪ್ರತ್ಯಕ್ಷ ಮೂರ್ತಿಯ ದರ್ಶನವು ನಮಗಾಯಿತು.

೨ಈ. ಚಿದಂಬರಮ್ ದೇವಸ್ಥಾನದಲ್ಲಿ ಶಿವನು ಪ್ರತ್ಯಕ್ಷ ನೀಡಿರುವ ಚಂದ್ರಮೌಳೇಶ್ವರ ಎಂಬ ಸ್ಫಟಿಕ ಲಿಂಗವನ್ನು ಪೂಜಿಸುವುದು : ಇದೇ ಸ್ಥಳದಲ್ಲಿ ಪ್ರತ್ಯಕ್ಷ ಶಿವನು ಸ್ವತಃ ಚಂದ್ರಮೌಳೇಶ್ವರ ಸ್ಫಟಿಕ ಲಿಂಗವನ್ನೂ ಅಭಿಷೇಕಕ್ಕಾಗಿ ವ್ಯಾಘ್ರಪಾದ ಋಷಿಗಳಿಗೆ ಕೊಟ್ಟನು. ಶಿವನ ತಲೆಯ ಮೇಲಿರುವ ಚಂದ್ರನಿಂದ ಈ ಸ್ಫಟಿಕಲಿಂಗ ಉತ್ಪನ್ನವಾಗಿದ್ದರಿಂದ ಇದನ್ನು ಚಂದ್ರಮೌಳೇಶ್ವರ ಎನ್ನುತ್ತಾರೆ. ನಮಗೆ ಈ ಸಮಯದಲ್ಲಿ ಈ ಸ್ಫಟಿಕ ಲಿಂಗದ ಅಭಿಷೇಕವೂ ನೋಡಲು ಸಿಕ್ಕಿತು. ‘ನ ಭೂತೊ ನ ಭವಿಷ್ಯತಿ’, ಎನ್ನುವಂತೆ ನಮಗೆ ಮಹರ್ಷಿಗಳ ಕೃಪೆಯಿಂದ ದರ್ಶನವಾಯಿತು.

೨ ಉ. ಸ್ಫಟಿಕ ಲಿಂಗದ ಮೇಲೆ ಪ.ಪೂ. ಡಾಕ್ಟರರ ವತಿಯಿಂದ ಅಭಿಷೇಕ ಮಾಡುವಾಗ ಪ್ರತ್ಯಕ್ಷ ವರುಣನ ಆಶೀರ್ವಾದ ಲಭಿಸುವುದು : ಲಿಂಗದ ಮೇಲೆ ಅಭಿಷೇಕ ಮಾಡುವಾಗ ನಮಗೆ ಇಲ್ಲಿ ವರುಣನ ಆಶೀರ್ವಾದವೂ ಲಭಿಸಿತು. ಸ್ಫಟಿಕ ಲಿಂಗದ ಮೇಲೆ ಮಾಡಲಾಗುವ ವಿಭೂತಿಯ ಅಭಿಷೇಕದ ವಿಭೂತಿಯೂ ನಮಗೆ ಸಿಕ್ಕಿತು.

೨ ಊ. ಬ್ರಹ್ಮಲೋಕದಿಂದ ಬಂದ ಮಾಣಿಕ್ಯ, ರತ್ನದ ಶಿವಮೂರ್ತಿಯೂ ಚಿದಂಬರಮ್ ಕ್ಷೇತ್ರದಲ್ಲಿರುವುದು : ಇದೇ ಸಮಯದಲ್ಲಿ ಬ್ರಹ್ಮಲೋಕ ದಿಂದ ಬ್ರಹ್ಮದೇವನು ಮಾಣಿಕ್ಯದ ಶಿವಮೂರ್ತಿಯನ್ನೂ ಮಹರ್ಷಿಗಳಿಗೆ ಕೊಟ್ಟನು. ಇದನ್ನು ‘ರತ್ನಾಧಿರಾಜ’ ಎಂದು ಕರೆಯುತ್ತಾರೆ. ಈ ಶಿವ ಮೂರ್ತಿಯೂ ಇಲ್ಲಿ ನಟರಾಜನ ಮೂರ್ತಿಯ ಚರಣಗಳಲ್ಲಿ ಒಂದು ಪೆಟ್ಟಿಗೆಯಲ್ಲಿ ಮುಚ್ಚಿಟ್ಟಿರುವುದು ಕಂಡುಬರುತ್ತದೆ.

೨ ಎ. ದೇವಸ್ಥಾನದಲ್ಲಿ ಚಿದಂಬರಮ್ ರಹಸ್ಯವೆಂದರೆ ಶಿವಯಂತ್ರ ಮತ್ತು ಶ್ರೀ ಯಂತ್ರಗಳ ಸಂಗಮವಾಗಿ ಸಿದ್ಧವಾಗಿರುವ ಸಮ್ಮೇಲನ ಯಂತ್ರ ಮತ್ತು ಕ್ಷೇತ್ರದಲ್ಲಿ ಕೇವಲ ಒಂದು ಟೊಳ್ಳು ಇರುತ್ತದೆ, ಎಂದು ಪುರಾಣ ಕಾಲದಿಂದ ಹೇಳಲ್ಪಡುವುದು : ಪ್ರತ್ಯಕ್ಷ ಶಿವ ಮತ್ತು ಪಾರ್ವತಿಯರ ಆನಂದ ತಾಂಡವ ವಾಗಿದ್ದ ಸ್ಥಳದ ಗೂಢ ರಹಸ್ಯವು ಇದು ವರೆಗೆ ಯಾರಿಗೂ ತಿಳಿಯಲಿಲ್ಲ. ಇಲ್ಲಿ ಶಿವಯಂತ್ರ ಮತ್ತು ಶ್ರೀ ಯಂತ್ರಗಳ ಸಂಗಮವಾಗಿ ಸಿದ್ಧವಾಗಿರುವ ಸಮ್ಮೇಲನ ಯಂತ್ರವೂ ಪುರಾಣಕಾಲದಿಂದ ಇದೆ. ಈ ಸ್ಥಳದಲ್ಲಿ ಕೇವಲ ಒಂದು ಟೊಳ್ಳು ಇದೆ, ಎಂದು ಹೇಳಲಾಗುತ್ತದೆ. ದೇವಸ್ಥಾನಕ್ಕೆ ಹಚ್ಚಿದ ಹಿತ್ತಾಳೆಯ ಜಾಳಿಗೆಯಿಂದ ಈ ಚಿದಂಬರಮ್ ರಹಸ್ಯದ ದರ್ಶನವಾಗುತ್ತದೆ. ಆ ಸಮಯದಲ್ಲಿ ಅಲ್ಲಿ ಅರ್ಪಿಸಿದ ಚಿನ್ನದ ಬಿಲ್ವಪತ್ರಗಳು ಕಾಣಿಸುತ್ತವೆ; ಆದರೆ ಒಳಗಡೆ ಏನಿದೆ, ಎನ್ನುವುದು ಗೊತ್ತಾಗುವುದಿಲ್ಲ. ಎಲ್ಲರ ಅಭಿಪ್ರಾಯದಂತೆ ಇದನ್ನೇ ನಿರ್ಗುಣ ಈಶ್ವರನೆಂದು ಕರೆಯಲಾಗುತ್ತದೆ.

ಪ್ರಾರ್ಥನೆ : ನಾವು ಈ ನಿರ್ಗುಣ ಈಶ್ವರನಿಗೆ ನಮ್ಮ ಎಲ್ಲ ಇಷ್ಟಾರ್ಥ ಗಳನ್ನು ಪೂರ್ಣಗೊಳಿಸಲು ಪ್ರಾರ್ಥನೆ ಮಾಡಿದೆವು.

೨ ಐ. ರುದ್ರತಾಂಡವದ ಸಮಯದಲ್ಲಿ ಶಿವನೊಡನೆ ನೃತ್ಯ ಮಾಡುವಾಗ ಪಾರ್ವತಿಯು ಮಹಾಕಾಳಿಯ ರೂಪಧಾರಣೆ ಮಾಡುವುದು, ನೃತ್ಯ ಮಾಡುವಾಗ ಶಿವನಂತೆ ಒಂದು ಮುದ್ರೆ ಮಾಡಲು ಬರಲಿಲ್ಲವೆಂದು ಸೋತು ಅಲ್ಲಿಂದ ಕಾಳಿಯು ಹೊರಗೆ ಹೋಗುವುದು ಮತ್ತು ಈಗಲೂ ಮಹಾಕಾಳಿಯ ಈ ಸ್ಥಾನವು ಚಿದಂಬರಮ್ ಕ್ಷೇತ್ರದ ಹೊರಗಡೆಯೇ ಇದೆ : ಶಿವ ಮತ್ತು ಪಾರ್ವತಿಯವರು ರುದ್ರತಾಂಡವವನ್ನು ಮಾಡಿದ ಸ್ಥಳದಲ್ಲಿ ಆಗ ಶಿವ ಮತ್ತು ಪಾರ್ವತಿಯ ನಡುವೆ ನೃತ್ಯಕ್ಕೆ ಸಂಬಂಧಪಟ್ಟ ಸ್ಪರ್ಧೆ ನಡೆಯಿತು. ಆ ಸ್ಪರ್ಧೆಯ ಏರಿಳಿತವು ಎಷ್ಟೊಂದು ಮೋಹಕವಾಗಿತ್ತೆಂದರೆ, ದೇವಿಯು ಸಾಕ್ಷಾತ್ ಮಹಾಕಾಳಿಯ ರೂಪ ತಳೆದು ರುದ್ರ ನರ್ತನ ಮಾಡಲಾರಂಭಿಸಿದಳು. ನೃತ್ಯ ಮಾಡುವಾಗ ಶಿವನ ಕಿವಿಯೋಲೆ ಕೆಳಗೆ ಬಿದ್ದುದರಿಂದ ಕುಣಿಯುತ್ತ ಕುಣಿಯುತ್ತ ಶಿವನು ಒಂದು ಕಾಲಿನಿಂದ ಆ ಕಿವಿಯೋಲೆ ಎತ್ತಿ ಆ ಕಾಲು ಮೇಲೆ ಮಾಡಿ ಹಿಗ್ಗಿಸಿ ಅದನ್ನು ಕಿವಿಗೆ ಹಾಕಿಕೊಂಡನು. ತುಂಬಿದ ಸಭೆಯಲ್ಲಿ ಶಿವನು ಒಂದು ಕಾಲನ್ನು ಊರ್ಧ್ವ ದಿಕ್ಕಿಗೆ ಮಾಡಿದ್ದರಿಂದ ಹೀಗೆ ಮುದ್ರೆ ಮಾಡಲು ಪಾರ್ವತಿಗೆ ಸಾಧ್ಯವಿಲ್ಲ ವೆಂದು ಅವಳು ಸೋತಳು. ಹಾಗೆಯೇ ಅಲ್ಲಿಂದ ಕಾಳಿಯ ರೂಪದಲ್ಲಿ ಹೊರಟು ಹೋದಳು. ಇಲ್ಲಿಯೂ ಕಾಳಿದೇವಿಯ ದೇವಸ್ಥಾನವು ಊರ ಹೊರಗಡೆಯೇ ಇದೆ. ಆದುದರಿಂದ ಈ ಕ್ಷೇತ್ರವು ಶಿವ-ಪಾರ್ವತಿಯರ ನೃತ್ಯಕ್ಕೆ ಸಂಬಂಧಪಟ್ಟಿದೆ ಎಂದು ಹೇಳಲಾಗುತ್ತದೆ. ಶಿವ-ಪಾರ್ವತಿಯರ ನೃತ್ಯವೆಂದರೆ ಸಂಪೂರ್ಣ ಬ್ರಹ್ಮಾಂಡಕ್ಕೆ ಪ್ರಾಪ್ತಿಯಾಗುವ ಗತಿಯಾಗಿರುವುದ ರಿಂದ ಇದಕ್ಕೆ ವಿಶೇಷ ಮಹತ್ವವಿದೆ.

ರುದ್ರತಾಂಡವವನ್ನು ಮಾಡುವಾಗ ಶಿವನು ಕೆಳಗೆ ಬಿದ್ದ ಕಿವಿಯೋಲೆಯನ್ನು ಕಾಲಿನಿಂದ ಮೇಲೆತ್ತಿ ಪುನಃ ಕಿವಿಯಲ್ಲಿ ಹಾಕಿಕೊಂಡ ಮುದ್ರೆಯನ್ನು ತೋರಿಸಿದ್ದ ದೇವಸ್ಥಾನದ ಚಿತ್ರ.

೨ ಒ. ದೇವಸ್ಥಾನದ ಶಿಖರ ಮತ್ತು ಅದರ ರಚನೆ ಇವು ಪ್ರತ್ಯಕ್ಷ ಮಾನವನ ದೇಹಕ್ಕೆ ಸಂಬಂಧಿಸಿರುವುದು ಮತ್ತು ಅದರ ವಿಶ್ಲೇಷಣೆ : ಈ ದೇವಸ್ಥಾನದ ಶಿಖರವು ಬಂಗಾರದಿಂದ ಮಾಡಲ್ಪಟ್ಟಿದೆ. ಈ ಶಿಖರದ ಮೇಲೆ ನಮ್ಮ ದೇಹದಲ್ಲಿನ ನವದ್ವಾರಗಳ ಪ್ರತೀಕವೆಂದು ಒಂಬತ್ತು ಕಳಸಗಳನ್ನು ಕೂರಿಸಲಾಗಿದೆ. ನಮ್ಮ ಶರೀರದಲ್ಲಿ ೭೨ ಸಾವಿರ ನಾಡಿಗಳಿರುವುದರಿಂದ ಅಷ್ಟು ಮೊಳೆಗಳನ್ನೂ ಇದರಲ್ಲಿ ಕೂಡಿಸಲಾಗಿವೆ. ಅಲ್ಲದೇ ನಮ್ಮ ಉಸಿರಾಟವು ದಿನಕ್ಕೆ ೨೨ ಸಾವಿರ ಬಾರಿ ಆಗುತ್ತಿರುವುದರಿಂದ ಅಷ್ಟು ಬಂಗಾರದ ಪಟ್ಟಿಗಳನ್ನೂ ಈ ಶಿಖರದಲ್ಲಿ ಅಳವಡಿಸಲಾಗಿರುವುದು ನಮಗೆ ಕಂಡು ಬರುತ್ತದೆ. ಆದುದರಿಂದ ಈ ದೇವಸ್ಥಾನವೆಂದರೆ ನಮ್ಮ ಸಂಪೂರ್ಣ ಶರೀರದ ಪ್ರತೀಕವಾಗಿದೆ ಎನ್ನುವುದು, ಗಮನಕ್ಕೆ ಬರುತ್ತದೆ.

ಮಾನವನ ದೇಹದ ನವದ್ವಾರಗಳ ಪ್ರತೀಕವೆಂದು ನಟರಾಜ ದೇವಸ್ಥಾನದ ಮೇಲೆ ಕುಳ್ಳಿರಿಸಿದ ಒಂಬತ್ತು ಕಲಶಗಳು

೨ ಔ. ಚಿದಂಬರಮ್ ಕ್ಷೇತ್ರ ಎಂದರೆ ಶಿವನ ಪ್ರತ್ಯಕ್ಷ ಹೃದಯಸ್ಥಾನ ! : ಈ ದೇವಸ್ಥಾನವೆಂದರೆ ಪ್ರತ್ಯಕ್ಷ ಶಿವನ ಹೃದಯ ಸ್ಥಾನವಾಗಿದೆ, ಎಂದು ತಿಳಿಯಲಾಗುತ್ತದೆ. ತಿರುವಣ್ಣಮಲೈ ಕ್ಷೇತ್ರವು ಅಗ್ನಿಕ್ಷೇತ್ರ, ಅಂದರೆ ಶಿವನ ನೇತ್ರಸ್ಥಾನವಾಗಿದೆ ಮತ್ತು ತಿರುವನೈಕೊಯಿಲದಲ್ಲಿರುವ ಜಂಬುಕೇಶ್ವರ ದೇವಸ್ಥಾನವೆಂದರೆ ಶಿವನ ಹಣೆಯಾಗಿದೆ, ಎಂದು ಹೇಳಲಾಗುತ್ತದೆ.

೨ ಅಂ. ವ್ಯಾಘ್ರಪಾದ, ಪತಂಜಲಿ ಮತ್ತು ಜೈಮಿನಿ ಋಷಿಗಳಿಗೆ ಕೃತಜ್ಞತೆಗಳು ! : ಇದೇ ಸ್ಥಳದಲ್ಲಿ ನಮಗೆ ವ್ಯಾಘ್ರಪಾದ, ಪತಂಜಲಿ ಮತ್ತು ಜೈಮಿನಿ ಋಷಿಗಳೆಲ್ಲರೂ ಮಾಡಿದ ತಪಸ್ಸಿನ ಸ್ಥಾನದ ದರ್ಶನವೂ ಆಗುತ್ತದೆ. ಯಾರ ಕೃಪೆಯಿಂದ ಸಾಕ್ಷಾತ್ ಶಿವ-ಪಾರ್ವತಿಯರ ತಾಂಡವನೃತ್ಯದ ಸಾತ್ತ್ವಿಕತೆಯನ್ನು ನಟರಾಜಮೂರ್ತಿಯ ರೂಪದಲ್ಲಿ ಚಿದಂಬರಮ್ ಕ್ಷೇತ್ರ ದಲ್ಲಿ ಕಾಪಾಡಲು ಸಾಧ್ಯವಾಯಿತೋ, ಅಂತಹ ಮಹರ್ಷಿಗಳ ಚರಣಗಳಿಗೆ ಕೃತಜ್ಞತೆ ವ್ಯಕ್ತವಾಯಿತು.

೩. ಮಹರ್ಷಿಗಳು ಹೇಳಿದಂತೆ ಈ ಕ್ಷೇತ್ರದಲ್ಲಿ ಪ್ರಾರ್ಥನೆಯಾಗುವುದು

ಈ ಕ್ಷೇತ್ರಕ್ಕೆ ಹೋದಾಗ ಆಕಾಶತತ್ತ್ವದ ಅಧಿಪತಿಯಾಗಿರುವ ಸಾಕ್ಷಾತ್ ಶಿವನ ಚರಣಗಳಲ್ಲಿ ಪ್ರಾರ್ಥನೆ ಮಾಡಿರಿ, ಎಂದು ಮಹರ್ಷಿಗಳು ಹೇಳಿದ್ದರು. ಅಲ್ಲಿ ಹೋದನಂತರ ಪ.ಪೂ. ಡಾಕ್ಟರರ ಹೆಸರಿನಲ್ಲಿ ಸಂಕಲ್ಪ ಮಾಡಿ ಅಲ್ಲಿನ ಸ್ಫಟಿಕ ಲಿಂಗದ ಮೇಲೆ ನಾವು ಅಭಿಷೇಕ ಮಾಡಿದೆವು. ಆ ಸಮಯದಲ್ಲಿ ದರ್ಶನ ಪಡೆದು ನಿಜವಾಗಿಯೂ ನಾವು ಧನ್ಯರಾದೆವು.

ಸ್ಫಟಿಕ ರೂಪದ ಶಿವನನ್ನು ಕಂಡು ನಮ್ಮ ಎಲ್ಲ ಮನೋಕಾಮನೆಗಳು ಇಲ್ಲಿಯೇ ಪೂರ್ಣಗೊಳ್ಳುವವು, ಎಂದೆನಿಸಿತು. ಮಹರ್ಷಿಗಳ ಕೃಪೆಯಿಂದ ನಮಗೆ ಚಿದಂಬರಮ್ ಈ ಮಹತ್ವದ ಶಿವಕ್ಷೇತ್ರದ ದರ್ಶನದ ಭಾಗ್ಯವು ಲಭಿಸಿತಲ್ಲದೇ ಕಾರ್ಯಕ್ಕೆ ಅಲ್ಲಿನ ಸಾತ್ತ್ವಿಕತೆ ಲಭಿಸಿದ್ದರಿಂದ ಮಹರ್ಷಿಗಳ ಚರಣಗಳಲ್ಲಿ ಕೃತಜ್ಞತೆ ವ್ಯಕ್ತವಾಯಿತು.

ಜಯ ಶಂಭೋ ಶಿವ ! ಜಯ ಶಂಭೋ ಶಿವ !

– (ಸದ್ಗುರು) ಸೌ. ಅಂಜಲಿ ಗಾಡಗೀಳ, ತಿರುಚಾನೂರ, ಆಂಧ್ರಪ್ರದೇಶ (೧೨.೮.೨೦೧೬, ರಾತ್ರಿ ೯.೨೦)

Leave a Comment