ವ್ಯಕ್ತಿಯ ಮನಃಸ್ಥಿತಿ ಮತ್ತು ನಕಾರಾತ್ಮಕ ವಿಚಾರಗಳೊಂದಿಗೆ ಹೋರಾಡುವ ಕ್ಷಮತೆ ಇವುಗಳ ಮೇಲೆ ಆಧ್ಯಾತ್ಮಿಕ ಗುಣಗಳಿಂದಾಗುವ ಪರಿಣಾಮಗಳು
ದೈನಂದಿನ ಜೀವನದಲ್ಲಿ ಘಟಿಸುವ ಪ್ರಸಂಗಗಳಿಗನುಸಾರ ನಮ್ಮ ಮನಸ್ಸಿನ ಸ್ಥಿತಿಯು ಬದಲಾಗುತ್ತಿರುತ್ತದೆ. ಬಾಹ್ಯ ಕಾರಣಗಳಿಂದ ಹೆಚ್ಚಾಗುವ ಮನಸ್ಸಿನ ಮೇಲಿನ ಒತ್ತಡ, ವ್ಯಕ್ತಿತ್ವದಲ್ಲಾಗುವ ಬದಲಾವಣೆ ಮತ್ತು ಸ್ವಭಾವವನ್ನು ಬದಲಾಯಿಸಲು ಉಂಟಾಗುವ ಮಾನಸಿಕ ವಿರೋಧಗಳಿಂದಾಗಿ ನಮ್ಮ ಮನಸ್ಸಿನ ಸ್ಥಿತಿಯಲ್ಲಿ ಏರಿಳಿತಗಳು ಬರುತ್ತಿರುತ್ತವೆ.