‘ಅಪೇಕ್ಷೆ ಮಾಡುವುದು’ ಎಂಬ ಅಹಂನ ಲಕ್ಷಣವನ್ನು ದೂರಗೊಳಿಸಲು ಸದ್ಗುರು ರಾಜೇಂದ್ರ ಶಿಂದೆಯವರು ಸಾಧಕರಿಗೆ ಮಾಡಿದ ಮಾರ್ಗದರ್ಶನ !

೨೦.೮.೨೦೨೦ ರಂದು ವ್ಯಷ್ಟಿ ಸಾಧನೆಯ ವರದಿಯಲ್ಲಿ ಓರ್ವ ಸಾಧಕಿಯು, ‘ನನಗೆ ಒಬ್ಬರ ಬಗ್ಗೆ ತುಂಬಾ ಪ್ರತಿಕ್ರಿಯೆಗಳು ಬರುತ್ತವೆ. ಈ ಪ್ರತಿಕ್ರಿಯೆಗಳು ಮುಖ್ಯವಾಗಿ ನನ್ನಲ್ಲಿರುವ ಅಪೇಕ್ಷೆ ಎಂಬ ಅಹಂನ ಲಕ್ಷಣದಿಂದಾಗಿ ಬರುತ್ತವೆ. ನಾನು ಅಹಂನ ಈ ಲಕ್ಷಣವನ್ನು ದೂರಗೊಳಿಸಲು ಪ್ರಯತ್ನಿಸುವೆನು’, ಎಂದು ಹೇಳಿದರು. ಆಗ ‘ಅಪೇಕ್ಷೆ ಮಾಡುವುದು’ ಎಂಬ ಅಹಂನ ಲಕ್ಷಣವನ್ನು ದೂರಗೊಳಿಸಲು ಯೋಜನೆ ತಯಾರಿಸಿ ಕೃತಿಯ ಸ್ತರದಲ್ಲಿ ಯಾವ ಪ್ರಯತ್ನಗಳನ್ನು ಮಾಡಬೇಕು, ಎಂಬುದರ ಬಗ್ಗೆ ಸದ್ಗುರು ರಾಜೇಂದ್ರ ಶಿಂದೆಯವರು ಮಾರ್ಗದರ್ಶನ ಮಾಡಿದರು. ಅದಕ್ಕನುಸಾರ ಸಾಧಕರು ಕೃತಿ ಮತ್ತು ಮನಸ್ಸಿನ ಸ್ತರದಲ್ಲಿ ಪ್ರಯತ್ನ ಮಾಡಿ, ಅಡಚಣೆಗಳನ್ನು ಹೇಳಿ ಇನ್ನೂ ಪ್ರಯತ್ನವನ್ನು ಮಾಡಿದರು ಇದರಿಂದ. ಅವರಲ್ಲಿ ಬದಲಾವಣೆಯಾಯಿತು.

ಸದ್ಗುರು ರಾಜೇಂದ್ರ ಶಿಂದೆ
ಸದ್ಗುರು ರಾಜೇಂದ್ರ ಶಿಂದೆ

೧. ಸದ್ಗುರು ರಾಜೇಂದ್ರ ಶಿಂದೆಯವರ ಮಾರ್ಗದರ್ಶನ

ಸದ್ಗುರು ರಾಜೇಂದ್ರ ಶಿಂದೆಯವರು, ‘ಭಾವನಾವಶರಾಗಿ ನಿರ್ಣಯವನ್ನು ತೆಗೆದುಕೊಂಡು, ಅಸ್ಪಷ್ಟವಾಗಿ ನಾನು ‘ಅಪೇಕ್ಷೆ ಮಾಡುವುದು’ ಎಂಬ ಅಹಂನ ಲಕ್ಷಣವನ್ನು ದೂರ ಮಾಡುವೆ, ಎಂದು ಸಾಧಕನು ಹೇಳಿದರೆ ಅವನ ಅಹಂ ನಿರ್ಮೂಲನೆ ಆಗುವುದಿಲ್ಲ. ಅದಕ್ಕಾಗಿ ಧ್ಯೇಯವನ್ನು ನಿಶ್ಚಯಿಸಿ, ಗಡುವು ಹಾಕಿ ಕಠೋರ ಪ್ರಯತ್ನವನ್ನು ಮಾಡಬೇಕಾಗುವುದು, ಉದಾ. ಒಂದು ತಿಂಗಳ ಗಡುವು ಹಾಕಿ ಮುಂದಿನಂತೆ ಪ್ರಯತ್ನ ಮಾಡಬಹುದು, ಎಂದು ಹೇಳಿದರು.

ಅ. ಮನಸ್ಸಿನಲ್ಲಿ ಬರುವ ಎಲ್ಲ ಪ್ರತಿಕ್ರಿಯೆಗಳನ್ನು ಬರೆದಿಡಬೇಕು.

ಆ. ಅಪೇಕ್ಷೆ ಮಾಡುವುದು ಎಂಬ ಅಹಂನ ಲಕ್ಷಣವು ಎಲ್ಲೆಲ್ಲಿ ಉಕ್ಕಿ ಬರುವುದರಿಂದ ಪ್ರಸಂಗಗಳು ಘಟಿಸುತ್ತವೆ, ಎಂಬುದರ ವ್ಯಾಪ್ತಿಯನ್ನು ತೆಗೆಯಬೇಕು, ಉದಾ. ಆಶ್ರಮದಲ್ಲಿರುವ ಸಾಧಕರ ಕೋಣೆ, ಸೇವೆಗಳನ್ನು ಮಾಡುವ ಸ್ಥಳ, ಆಶ್ರಮ ಮತ್ತು ಕೌಟುಂಬಿಕ ಜೀವನ ಮುಂತಾದ ಸ್ತರಗಳಲ್ಲಿ ವ್ಯಾಪ್ತಿಯನ್ನು ತೆಗೆಯಬಹುದು. ಪ್ರಸಾರದಲ್ಲಿರುವ ಸಾಧಕರು ಇವುಗಳ ಹೊರತಾಗಿ ‘ಪ್ರಸಾರವನ್ನು ಮಾಡುವಾಗ ಯಾರಿಂದ ಮತ್ತು ಎಲ್ಲೆಲ್ಲಿ ಅಪೇಕ್ಷೆ ಉಂಟಾಗುತ್ತದೆ ?’, ಎಂಬುದರ ವ್ಯಾಪ್ತಿಯನ್ನು ತೆಗೆಯಬಹುದು.

ಇ. ಅಹಂನ ಈ ಲಕ್ಷಣದ ಸಂದರ್ಭದಲ್ಲಿರುವ ತಪ್ಪುಗಳನ್ನು ಅಹಂನ ತಖ್ತೆಯಲ್ಲಿ ಬರೆಯಬೇಕು.

ಈ. ಅಯೋಗ್ಯ ಪ್ರತಿಕ್ರಿಯೆ ಮತ್ತು ತಪ್ಪುಗಳನ್ನು ಫಲಕದ ಮೇಲೆ ಬರೆಯಬೇಕು. (ಮನೆಯಲ್ಲಿಯೂ ಇಂತಹ ಫಲಕವನ್ನು ಹಾಕಿಡಬಹುದು)

ಉ. ಅಯೋಗ್ಯ ಪ್ರತಿಕ್ರಿಯೆ ಮತ್ತು ತಪ್ಪುಗಳನ್ನು ಸೇವೆಯ ಸಂದರ್ಭದಲ್ಲಿನ ಸತ್ಸಂಗಗಳಲ್ಲಿ ಹೇಳಬೇಕು.

ಊ. ಅಯೋಗ್ಯ ಪ್ರತಿಕ್ರಿಯೆಗಳನ್ನು ಮತ್ತು ತಪ್ಪುಗಳನ್ನು ವ್ಯಷ್ಟಿ ಸಾಧನೆಯ ವರದಿಯಲ್ಲಿ ಹೇಳಬೇಕು.

ಎ. ಸಾಧಕರು ಅಪೇಕ್ಷೆ ಮಾಡುವುದು ಈ ಸಂದರ್ಭದಲ್ಲಿನ ಪ್ರಸಂಗವನ್ನು ಆಯ್ದುಕೊಂಡು ಅದರ ಬಗೆಗಿನ ಸ್ವಯಂಸೂಚನೆಯನ್ನು ಪ್ರತಿದಿನ ಕಡಿಮೆ ಎಂದರೂ ೧೫ ಬಾರಿ ತೆಗೆದುಕೊಳ್ಳಬೇಕು, ಹಾಗೆಯೇ ಈ ಸ್ವಯಂಸೂಚನೆಯನ್ನು ಸತತವಾಗಿ ೧೦, ೨೦ ಅಥವಾ ೫೦ ಬಾರಿ ದಿನದಲ್ಲಿ ಸಾಧ್ಯವಿದ್ದಷ್ಟು ಬಾರಿ ಓದಬೇಕು.

ಏ. ಪ್ರತಿ ೩ ದಿನಗಳಿಗೊಮ್ಮೆ ಸೂಚನೆಯಲ್ಲಿನ ಪ್ರಸಂಗವನ್ನು ಬದಲಾಯಿಸಿ ಸ್ವಯಂಸೂಚನೆಯನ್ನು ತೆಗೆದುಕೊಳ್ಳಬೇಕು.

ಐ. ಮನಸ್ಸಿನಲ್ಲಿ ಪ್ರತಿಕ್ರಿಯೆ ಹುಟ್ಟುವಾಗ ತಕ್ಷಣ ಮನಸ್ಸಿಗೆ ಯೋಗ್ಯ ದೃಷ್ಟಿಕೋನ ನೀಡುವ ರೂಢಿ ಮಾಡಬೇಕು.

ಒ. ತಪ್ಪು ಯಾವ ಸಾಧಕನ ಸಂದರ್ಭದಲ್ಲಾಯಿತೋ, ಆ ಸಾಧಕನಲ್ಲಿ ಮತ್ತು ದೇವರಲ್ಲಿ ಕ್ಷಮೆ ಯಾಚಿಸಬೇಕು.

ಓ. ತಪ್ಪಾದನಂತರ ಪಾಪಕ್ಷಾಲನೆಗಾಗಿ ಪ್ರಾಯಶ್ಚಿತ್ತ ತೆಗೆದುಕೊಳ್ಳಬೇಕು.

ಔ. ಸಾಧಕನು ದೇವರಿಗೆ ಶರಣಾಗಿ ಮುಂದಿನಂತೆ ಪ್ರಾರ್ಥನೆ ಮಾಡಬೇಕು, ‘ಹೇ ಶ್ರೀಕೃಷ್ಣ, ಅಪೇಕ್ಷೆ ಮಾಡುವುದು ಎಂಬ ಅಹಂನ ಲಕ್ಷಣದ ಬಗೆಗಿನ ಪ್ರಸಂಗಗಳು ಮತ್ತು ನನ್ನಿಂದಾಗುವ ತಪ್ಪುಗಳು ನನ್ನ ಗಮನಕ್ಕೆ ಬರಲಿ. ‘ಅವುಗಳನ್ನು ಹೇಗೆ ದೂರಗೊಳಿಸಬೇಕು?’ ಎಂಬುದನ್ನೂ ನೀನೇ ನನಗೆ ಕಲಿಸು. ನನಗೆ ಆದಷ್ಟು ಬೇಗನೆ ಅಹಂನ ಈ ಲಕ್ಷಣವನ್ನು ದೂರಮಾಡಲು ಸಾಧ್ಯವಾಗಲಿ’.

ಅಂ. ಸಾಧಕನಿಗೆ ಹೇಳಿದ ನಾಮಜಪಾದಿ ಉಪಾಯಗಳನ್ನು ಅವನು ಗಾಂಭೀರ್ಯದಿಂದ ಪೂರ್ಣಗೊಳಿಸಬೇಕು; ಏಕೆಂದರೆ ನಾಮಜಪ ಮಾಡುವುದರಿಂದ ಮನಸ್ಸು ಸ್ಥಿರವಾಗಿ ಪ್ರಯತ್ನ ಮಾಡಲು ಸುಲಭವಾಗುತ್ತದೆ.

ಅಃ. ‘ಅಪೇಕ್ಷೆ ಮಾಡುವುದು’ ಎಂಬ ಅಹಂನ ಲಕ್ಷಣವನ್ನು ದೂರಗೊಳಿಸಲು ಸಾಧಕನು ‘ಪ್ರೇಮಭಾವ’ ಈ ಗುಣವನ್ನು ಹೆಚ್ಚಿಸಲು ಪ್ರಯತ್ನಿಸಬೇಕು. ಇದಕ್ಕಾಗಿ ಸಾಧಕನು ಪ್ರತಿದಿನ ನಿಶ್ಚಯಿಸಿ ಇತರರಿಗೆ ಸಹಾಯ ಮಾಡುವ ೨೫ ಕ್ಕಿಂತ ಹೆಚ್ಚು ಕೃತಿಗಳನ್ನು ಮಾಡಬೇಕು. ಸಾಧಕನು ಇತರರ ಮನಸ್ಥಿತಿಯನ್ನು ತಿಳಿದುಕೊಳ್ಳಲು ಹೆಚ್ಚೆಚ್ಚು ಪ್ರಯತ್ನಿಸಬೇಕು.

‘ಅಪೇಕ್ಷೆ ಮಾಡುವುದು’ ಎಂಬ ಅಹಂನ ಲಕ್ಷಣವನ್ನು ಹೋಗಲಾಡಿಸಲು ಸದ್ಗುರು ರಾಜೇಂದ್ರ ಶಿಂದೆಯವರು ಹೇಳಿದ ಮೇಲಿನ ಪ್ರಯತ್ನಗಳನ್ನು ಸಾಧಕರು ಇತರ ಸ್ವಭಾವದೋಷ ಮತ್ತು ಅಹಂನ ಲಕ್ಷಣಗಳನ್ನು ದೂರಗೊಳಿಸಲೂ ಉಪಯೋಗಿಸಬಹುದು.

– (ಪೂ.) ಶ್ರೀ. ಶಿವಾಜಿ ವಟಕರ, ಸನಾತನ ಆಶ್ರಮ, ದೇವದ, ಪನವೇಲ. (೩೦.೮.೨೦೨೦)

ಪ್ರತಿಯೊಂದು ಕೃತಿಯಲ್ಲಿ ಭಗವಂತನಲ್ಲಿ ಆರ್ತತೆಯಿಂದ ಮೊರೆಯಿಡಬೇಕು!

೧. ಸಾಮಾನ್ಯ ಜನರಿಗೂ ಭಿಕ್ಷುಕನ ಆರ್ತ ಯಾಚನೆಯಿಂದ ದಯೆಬಂದು ಅವರೂ ತಕ್ಷಣ ಭಿಕ್ಷೆಯನ್ನು ನೀಡುವುದು

ಭಿಕ್ಷುಕನು ಭಿಕ್ಷೆಯನ್ನು ಬೇಡುವಾಗ ತುಂಬಾ ಅಸಾಹಾಯಕನಾಗಿರುತ್ತಾನೆ, ಏಕೆಂದರೆ ಅವನಿಗೆ ಭಿಕ್ಷೆಯನ್ನು ಬೇಡದ ಹೊರತು ಬೇರೆ ಪರ್ಯಾಯವೇ ಇರುವುದಿಲ್ಲ. ಅದರಂತೆ ನಾವೂ ಸಹ ಭಗವಂತನೆದುರು ಅಸಾಹಾಯಕರಾಗಿ ಶರಣು ಹೋಗಬೇಕು. ಭಿಕ್ಷೆಯನ್ನು ಬೇಡುವಾಗ ಭಿಕ್ಷುಕನು ನಮ್ಮೆದೆರು ಸೊಂಟವನ್ನು ಬಗ್ಗಿಸಿ, ಕೈಗಳನ್ನು ಮುಂದೆ ಚಾಚಿ ಅಥವಾ ಕೆಲವೊಮ್ಮೆ ನಮಸ್ಕಾರ ಮುದ್ರೆಯಲ್ಲಿ ನಿಂತಿರುತ್ತಾನೆ. ಅವನ ಬೊಗಸೆಯೂ ಪೂರ್ಣ ತೆರೆದಿರುವುದಿಲ್ಲ. ಬೆರಳುಗಳನ್ನು ಮಡಚಿ ಹತ್ತಿರ ತಂದು ಕೈಗಳನ್ನು ತಗ್ಗಿನಂತೆ ಮಾಡಿರುತ್ತಾನೆ. ಇಷ್ಟು ನಮ್ರನಾಗಿ ಅವನು ನಮ್ಮ ಬಳಿ ಭಿಕ್ಷೆಯನ್ನು ಬೇಡುತ್ತಾನೆ. ಕೆಲವೊಮ್ಮೆ ಅವನು ಕೈಗಳಿಂದ ಸನ್ನೆ ಮಾಡಿ, ‘ನನಗೆ ತುಂಬಾ ಹಸಿವಾಗಿದೆ. ನಾನು ಬೆಳಗ್ಗಿನಿಂದ ಏನೂ ತಿಂದಿಲ್ಲ’, ಎಂದು ಹೇಳುತ್ತಾನೆ, ಆಗ ಜನರಿಗೆ ಅವನ ಬಗ್ಗೆ ದಯೆ ಬಂದು ಅವನಿಗೆ ತಕ್ಷಣ ಭಿಕ್ಷೆಯನ್ನು ನೀಡುತ್ತಾರೆ. ಸರ್ವಸಾಧಾರಣ ವ್ಯಕ್ತಿಯೂ ಸಹ ಅಪರಿಚಿತ ಭಿಕ್ಷುಕನ ಆರ್ತ ಯಾಚನೆಯನ್ನು ನೋಡಿ ದಯೆಬಂದು ತಕ್ಷಣ ಅವನಿಗೆ ಭಿಕ್ಷೆಯನ್ನು ನೀಡುತ್ತಾನೆ.

೨. ದೇವರಿಗೆ ಶರಣಾಗಿ ನಮ್ರತೆಯಿಂದ ಮೊರೆಯಿಟ್ಟಾಗ ಈಶ್ವರನು ನಮಗೆ ಸಹಾಯ ಮಾಡುವನು ಎಂಬ ಶ್ರದ್ಧೆ ನಮ್ಮಲ್ಲಿ ಇರಬೇಕು !

ನಾವು ಕೂಡ ಭಿಕ್ಷುಕನಂತೆ ಭಗವಂತನಿಗೆ ನಮ್ಮ ಸ್ವಭಾವದೋಷ ಮತ್ತು ಅಹಂನ ನಿರ್ಮೂಲನೆಯಾಗಲು, ಸಾಧನೆ ಚೆನ್ನಾಗಿ ಆಗಲು, ಸತತವಾಗಿ ಘಟಿಸುವ ತಪ್ಪುಗಳ ಕುರಿತು ಕ್ಷಮೆ ಯಾಚಿಸಲು, ಭಕ್ತಿಭಾವವನ್ನು ಹೆಚ್ಚಿಸಲು ಇತ್ಯಾದಿಗಳಿಗಾಗಿ ಭಿಕ್ಷೆಯನ್ನು ಬೇಡಬೇಕಾಗಿದೆ. ಭಗವಂತನು ತುಂಬಾ ದಯಾಳು. ಭಿಕ್ಷುಕನು ಅಸಾಹಯಕನಾಗಿ ನಮ್ರತೆಯಿಂದ ಶರಣಾಗತಿಯಿಂದ ಬೇಡಿದಾಗ ಭಗವಂತನು ಅವನಿಗೆ ಯಾರದಾದರೂಬ್ಬನ ರೂಪದಲ್ಲಿ ಸಹಾಯ ಮಾಡುತ್ತಾನೆ. ಹೀಗಿರುವಾಗ ನಾವಂತೂ ಸಾಧಕರಾಗಿದ್ದೇವೆ. ನಾವು ದೇವರಿಗೆ ಶರಣಾಗಿ ನಮ್ರತೆಯಿಂದ ಮೊರೆ ಇಟ್ಟರೆ ದೇವರು ನಮಗೆ ಸಹಾಯ ಮಾಡುವುದಿಲ್ಲವೇ ? ನಾವು ಪ್ರತಿಯೊಂದು ಕೃತಿಯನ್ನು ಮಾಡುವಾಗಲೂ ಭಗವಂತನನ್ನು ಆರ್ತತೆಯಿಂದ ಕರೆದು ಮೊರೆಯಿಡಬೇಕು. ‘ಹೇ ಭಗವಂತಾ, ನಾನು ನಿನಗೆ ಶರಣು ಬಂದಿದ್ದೇನೆ. ನಿನ್ನ ಹೊರತು ನನಗೆ ಏನೂ ಬೇಡ. ನೀನೇ ನನಗೆ ಸಹಾಯ ಮಾಡು’ ಎಂದು ಕರೆದು ನೋಡಿ. ನಂತರ ಭಗವಂತನು ನಮಗೆ ಹೇಗೆ ಸಹಾಯ ಮಾಡುತ್ತಾನೆ, ಎಂಬುದರ ಅನುಭೂತಿಯನ್ನು ಪಡೆಯಲು ಸಾಧ್ಯವಾಗುವುದು.

– (ಸದ್ಗುರು) ಶ್ರೀ. ರಾಜೇಂದ್ರ ಶಿಂದೆ, ಸನಾತನ ಆಶ್ರಮ, ದೇವದ, ಪನವೇಲ (೨೫.೧೦.೨೦೨೦)

Leave a Comment