ಪ್ರಗತಿಯ ಬಗ್ಗೆ ಸೂಚನೆ

ಸ್ವತಃ, ಅದರಂತೆಯೇ ಇತರರಿಂದ ಸ್ವಭಾವದೋಷಗಳ ಪ್ರಗತಿಯ ವರದಿಯನ್ನು ತೆಗೆದುಕೊಂಡು ಪ್ರಗತಿಯ ಬಗ್ಗೆ ಸೂಚನೆಯನ್ನು ತಯಾರಿಸುವುದು

ಸುಮಾರು ಒಂದು ವಾರ, ಮೂರು ಸ್ವಭಾವದೋಷಗಳಿಗೆ ಅಥವಾ ಸ್ವಭಾವದೋಷಗಳ ಮೂರು ಅಭಿವ್ಯಕ್ತಿಗಳಿಗೆ ಸ್ವಯಂಸೂಚನೆಗಳನ್ನು ನೀಡಿದ ನಂತರ ಆ ಸ್ವಭಾವದೋಷಗಳಲ್ಲಾಗಿರುವ ಸುಧಾರಣೆ ಅಥವಾ ಪ್ರಗತಿಯನ್ನು ಗಮನಿಸಬೇಕು.

ಪ್ರಗತಿಯ ವರದಿಯನ್ನು ತೆಗೆದುಕೊಳ್ಳುವಾಗ ಗಮನದಲ್ಲಿಡಬೇಕಾದ ಅಂಶಗಳು

ವರದಿಯನ್ನು ತೆಗೆದುಕೊಳ್ಳುವಾಗ ಸ್ವಭಾವದೋಷ ನಿರ್ಮೂಲನ ತಖ್ತೆಯ ಸಹಾಯವನ್ನು ತೆಗೆದುಕೊಳ್ಳಬೇಕು. ಅದರಲ್ಲಿನ ಅಯೋಗ್ಯ ಕೃತಿ ಮತ್ತು ಅಯೋಗ್ಯ ಪ್ರತಿಕ್ರಿಯೆ, ಅಯೋಗ್ಯ ಕೃತಿಗಳ ಅಥವಾ ಅಯೋಗ್ಯ ಪ್ರತಿಕ್ರಿಯೆಗಳ ಕಾಲಾವಧಿ, ಸ್ವಭಾವದೋಷ ಮತ್ತು ಪ್ರಗತಿಯ ಕೋಣೆಯಲ್ಲಿ ಬರೆದಿರುವ ಮಾಹಿತಿಯನ್ನು ಪ್ರಾಮಾಣಿಕವಾಗಿ ಮತ್ತು ತಟಸ್ಥರಾಗಿ (ಮೂರನೆಯವರ ಭೂಮಿಕೆಯಿಂದ) ಅಧ್ಯಯನ ಮಾಡಿ ಸ್ವಭಾವದೋಷಗಳಲ್ಲಿನ ಸುಧಾರಣೆಯನ್ನು ನಿರ್ಧರಿಸಬೇಕು. ಪ್ರಕ್ರಿಯೆಗಾಗಿ ಆರಿಸಿದ ಸ್ವಭಾವದೋಷಗಳಲ್ಲಿನ ಸುಧಾರಣೆ ಅಥವಾ ಪ್ರಗತಿಯನ್ನು ಮುಂದಿನ ಘಟಕಗಳಿಂದ ನಿರ್ಧರಿಸಬೇಕು.

ಅ. ಅಯೋಗ್ಯ ಕೃತಿ ಅಥವಾ ಅಯೋಗ್ಯ ಪ್ರತಿಕ್ರಿಯೆಗಳ ಸ್ಥಾನವನ್ನು ಅನುಕ್ರಮವಾಗಿ ಯೋಗ್ಯ ಕೃತಿ ಅಥವಾ ಯೋಗ್ಯ ಪ್ರತಿಕ್ರಿಯೆಗಳು ತೆಗೆದುಕೊಳ್ಳುವುದು 

ಆ. ಅಯೋಗ್ಯ ಕೃತಿ ಮತ್ತು ಅಯೋಗ್ಯ ಪ್ರತಿಕ್ರಿಯೆಗಳ ಬಗೆಗಿನ ಅರಿವು

ಹಂತ ೧. ಅಯೋಗ್ಯ ಕೃತಿ ಘಟಿಸಿದ ನಂತರ ಸ್ವಂತಕ್ಕೆ ಅರಿವಾಗುವುದು.

ಹಂತ ೨. ಅಯೋಗ್ಯ ಕೃತಿ ಘಟಿಸುತ್ತಿರುವಾಗ ಸ್ವಂತಕ್ಕೆ ಅರಿವಾಗುವುದು.

ಹಂತ ೩. ಅಯೋಗ್ಯ ಕೃತಿ ಘಟಿಸುವ ಮೊದಲೇ ಸ್ವಂತಕ್ಕೆ ಅರಿವಾಗುವುದು.

ಹಂತ ೪. ಅಯೋಗ್ಯ ಕೃತಿಯ ಹಿಂದಿನ ಅಯೋಗ್ಯ ವಿಚಾರ ಮತ್ತು ಅಯೋಗ್ಯ ಸಂಸ್ಕಾರವು ನಾಶವಾಗುವುದು ಅಥವಾ ಚಿತ್ತದಲ್ಲಿ ಗುಣದ ಸಂಸ್ಕಾರವು ನಿರ್ಮಾಣವಾಗುವುದು.

ಇ. ಅಯೋಗ್ಯ ಕೃತಿ ಮತ್ತು ಅಯೋಗ್ಯ ಪ್ರತಿಕ್ರಿಯೆಗಳ ಸಂಖ್ಯೆ ಮತ್ತು ಮರುಕಳಿಸುವಿಕೆಯಲ್ಲಾದ ಕಡಿತ

ಈ. ಅಯೋಗ್ಯ ಪ್ರತಿಕ್ರಿಯೆಗಳ ಕಾಲಾವಧಿ ಕಡಿಮೆಯಾಗುವುದು

ಉ. ನಮ್ಮ ಸಂಪರ್ಕಕ್ಕೆ ಬರುವ ವ್ಯಕ್ತಿಗಳಿಂದ ಪ್ರಗತಿಯ ವರದಿಯನ್ನು ತೆಗೆದುಕೊಳ್ಳುವುದು

ಪ್ರಗತಿಯ ಸೂಚನೆಯ ಉದಾಹರಣೆ

ಸೌ. ನೀಲಾರವರು ಸ್ವಭಾವದೋಷ ನಿರ್ಮೂಲನ ಪ್ರಕ್ರಿಯೆಗಾಗಿ ‘ನಕಾರಾತ್ಮಕ ವಿಚಾರಗಳನ್ನು ಮಾಡುವುದು’, ‘ಕಿರಿಕಿರಿ’ ಮತ್ತು ‘ಅವಸರಪ್ರವೃತ್ತಿ’ ಎಂಬ ಮೂರು ಸ್ವಭಾವ ದೋಷಗಳನ್ನು ಆರಿಸಿದ್ದರು. ಸತತವಾಗಿ ಒಂದು ವಾರ ಸ್ವಯಂಸೂಚನೆಗಳನ್ನು ನೀಡಿ ಅವುಗಳ ಅಧ್ಯಯನವನ್ನು ಮಾಡಿದರು. ‘ನಕಾರಾತ್ಮಕ ವಿಚಾರಗಳನ್ನು ಮಾಡುವುದು’ ಮತ್ತು ‘ಕಿರಿಕಿರಿ’ ಎಂಬ ಸ್ವಭಾವದೋಷಗಳಲ್ಲಿ ಬಹಳ ಸುಧಾರಣೆಯಾಗಿದೆ ಮತ್ತು ‘ಅವಸರ ಪ್ರವೃತ್ತಿ’ಯಲ್ಲಿ ಮಧ್ಯಮ ಪ್ರಮಾಣದಲ್ಲಿ ಸುಧಾರಣೆಯಾಗಿದೆ ಎಂದು ಅವರ ಗಮನಕ್ಕೆ ಬಂದಿತು. ಆಗ ಅವರು ಮುಂದಿನಂತೆ ಪ್ರಗತಿಯ ಸೂಚನೆಯನ್ನು ನೀಡಿದರು.

ಕಳೆದ ವಾರದಲ್ಲಿ ಸ್ವಯಂಸೂಚನೆಗಳನ್ನು ನೀಡಿದುದರಿಂದ ‘ನಕಾರಾತ್ಮಕ ವಿಚಾರಗಳನ್ನು ಮಾಡುವುದು’ ಮತ್ತು ‘ಕಿರಿಕಿರಿ’ ಎಂಬ ಸ್ವಭಾವದೋಷಗಳಲ್ಲಿ ಬಹಳ ಸುಧಾರಣೆಯಾಗಿದೆ ಮತ್ತು ಅವಸರಪ್ರವೃತಿಯಿಂದಾಗುವ ಅಯೋಗ್ಯ ಕೃತಿಗಳನ್ನು ನನಗೆ ಅರ್ಧದಷ್ಟು ತಡೆಗಟ್ಟಲು ಸಾಧ್ಯವಾಗಿದೆ. ನಾನು ನಿಯಮಿತವಾಗಿ ಸೂಚನಾಸತ್ರಗಳನ್ನು ಮಾಡಿದರೆ ನನಗೆ ಉಳಿದ ದೋಷಗಳನ್ನೂ ದೂರಗೊಳಿಸಲು ಸಾಧ್ಯವಾಗುವುದು.

(ಸವಿಸ್ತಾರ ಮಾಹಿತಿಗಾಗಿ ಓದಿ ಸನಾತನ ನಿರ್ಮಿತ ‘ಸ್ವಯಂಸೂಚನೆಗಳ ಮೂಲಕ ಸ್ವಭಾವದೋಷ ನಿರ್ಮೂಲನೆ’ ಗ್ರಂಥ)

Leave a Comment