ಇ ೨ ಈ ಸ್ವಯಂಸೂಚನೆಯ ಪದ್ಧತಿಯಲ್ಲಿ ಜೋರಾಗಿ ಚಿವುಟಿಕೊಳ್ಳುವ ಪದ್ಧತಿಯ ಸಹಾಯದಿಂದ ತೀವ್ರ ಸ್ವಭಾವದೋಷ ಅಥವಾ ಅಹಂನ್ನು ಶೀಘ್ರವಾಗಿ ದೂರಗೊಳಿಸಬಹುದು

ಅಯೋಗ್ಯ ವಿಚಾರ, ಕೃತಿ, ಭಾವನೆ ಅಥವಾ ಪ್ರತಿಕ್ರಿಯೆಗಳಿಗೆ ೧ ತಿಂಗಳು ಸ್ವಯಂಸೂಚನೆಯನ್ನು ನೀಡಿದರೂ ಅದರಲ್ಲಿ ಅಪೇಕ್ಷಿತ ಬದಲಾವಣೆ ಆಗದಿದ್ದರೆ, ಚಿವುಟಿಕೊಳ್ಳುವ ಪದ್ಧತಿಯನ್ನು’ ಅಂದರೆ ‘ಇ ೨’ ಈ ಸ್ವಯಂಸೂಚನೆ ಪದ್ಧತಿಯನ್ನು ಉಪಯೋಗಿಸುವುದು ಆವಶ್ಯಕವಾಗಿದೆ. ಧೂಮ್ರಪಾನ ಮಾಡುವುದು (ಸಿಗರೇಟು ಸೇದುವುದು), ಮದ್ಯ ಸೇವನೆ ಇತ್ಯಾದಿ ವ್ಯಸನಗಳು, ಉಗುರು ಕಚ್ಚುವ ಚಟ, ತೊದಲುವಿಕೆ, ೮ ವರ್ಷದ ನಂತರವೂ ಹಾಸಿಗೆಯಲ್ಲಿ ಮೂತ್ರ ಮಾಡುವುದು ಇತ್ಯಾದಿಗಳಲ್ಲಿ ಬದಲಾವಣೆಯಾಗದಿದ್ದರೂ ಈ ಸ್ವಯಂಸೂಚನೆ ಪದ್ಧತಿಯನ್ನು ಉಪಯೋಗಿಸಬಹುದು. ಈ ಸ್ವಯಂಸೂಚನೆ ಪದ್ಧತಿಯಿಂದ ಯಾವ, ಯಾವ ಲಕ್ಷಣಗಳಿಗೆ ಸ್ವಯಂಸೂಚನೆಗಳನ್ನು … Read more

ವ್ಯಕ್ತಿಯ ಮನಃಸ್ಥಿತಿ ಮತ್ತು ನಕಾರಾತ್ಮಕ ವಿಚಾರಗಳೊಂದಿಗೆ ಹೋರಾಡುವ ಕ್ಷಮತೆ ಇವುಗಳ ಮೇಲೆ ಆಧ್ಯಾತ್ಮಿಕ ಗುಣಗಳಿಂದಾಗುವ ಪರಿಣಾಮಗಳು

ದೈನಂದಿನ ಜೀವನದಲ್ಲಿ ಘಟಿಸುವ ಪ್ರಸಂಗಗಳಿಗನುಸಾರ ನಮ್ಮ ಮನಸ್ಸಿನ ಸ್ಥಿತಿಯು ಬದಲಾಗುತ್ತಿರುತ್ತದೆ. ಬಾಹ್ಯ ಕಾರಣಗಳಿಂದ ಹೆಚ್ಚಾಗುವ ಮನಸ್ಸಿನ ಮೇಲಿನ ಒತ್ತಡ, ವ್ಯಕ್ತಿತ್ವದಲ್ಲಾಗುವ ಬದಲಾವಣೆ ಮತ್ತು ಸ್ವಭಾವವನ್ನು ಬದಲಾಯಿಸಲು ಉಂಟಾಗುವ ಮಾನಸಿಕ ವಿರೋಧಗಳಿಂದಾಗಿ ನಮ್ಮ ಮನಸ್ಸಿನ ಸ್ಥಿತಿಯಲ್ಲಿ ಏರಿಳಿತಗಳು ಬರುತ್ತಿರುತ್ತವೆ.

ಪ್ರಗತಿಯ ಬಗ್ಗೆ ಸೂಚನೆ

ಸುಮಾರು ಒಂದು ವಾರ, ಮೂರು ಸ್ವಭಾವದೋಷಗಳಿಗೆ ಅಥವಾ ಸ್ವಭಾವದೋಷಗಳ ಮೂರು ಅಭಿವ್ಯಕ್ತಿಗಳಿಗೆ ಸ್ವಯಂಸೂಚನೆಗಳನ್ನು ನೀಡಿದ ನಂತರ ಆ ಸ್ವಭಾವದೋಷಗಳಲ್ಲಾಗಿರುವ ಸುಧಾರಣೆ ಅಥವಾ ಪ್ರಗತಿಯನ್ನು ಗಮನಿಸಿ, ಪ್ರಗತಿಯ ಸೂಚನೆಯನ್ನು ತಯಾರಿಸಬೇಕು.

ಹಂತ ೪. ಸ್ವಭಾವದೋಷಗಳ ಪಟ್ಟಿಯನ್ನು ತಯಾರಿಸುವುದು

ದಿನವಿಡೀ ಘಟಿಸಿದ ಪ್ರಸಂಗಗಳ ಅಧ್ಯಯನವನ್ನು ಮಾಡಿ ಅಯೋಗ್ಯ ಕೃತಿಗಳ ಮತ್ತು ಅಯೋಗ್ಯ ಪ್ರತಿಕ್ರಿಯೆಗಳ ವಿಶ್ಲೇಷಣೆಯನ್ನು ಮಾಡಬೇಕು. ಅದರಿಂದ ಮೂಲ ಅಥವಾ ಮೂಲಭೂತ ಸ್ವಭಾವ ದೋಷಗಳನ್ನು ಕಂಡುಹಿಡಿದು ಅವುಗಳ ಪಟ್ಟಿಯನ್ನು ತಯಾರಿಸಬೇಕು

ಹಂತ ೩. ಮನಸ್ಸಿಗೆ ಯೋಗ್ಯ ಪ್ರಶ್ನೆಗಳನ್ನು ಕೇಳಿ ಅಯೋಗ್ಯ ಕೃತಿ ಮತ್ತು ಅಯೋಗ್ಯ ಪ್ರತಿಕ್ರಿಯೆಗಳ ಮೂಲ ಕಾರಣವನ್ನು ಹುಡುಕುವುದು

ಮನಸ್ಸಿಗೆ ಯೋಗ್ಯ ಪ್ರಶ್ನೆಗಳನ್ನು ಕೇಳಿ ಪ್ರಸಂಗಗಳಿಗನುಸಾರ ಅಯೋಗ್ಯ ಕೃತಿ ಮತ್ತು ಅಯೋಗ್ಯ ಪ್ರತಿಕ್ರಿಯೆಗಳ ವಿಶ್ಲೇಷಣೆಯನ್ನು ಮಾಡಿ ಮೂಲ ಸ್ವಭಾವದೋಷವನ್ನು ಕಂಡುಹಿಡಿಯುವುದು ಹೇಗೆ ಎಂದು ಇಲ್ಲಿ ಉದಾಹರಣೆ ಸಾಹಿತಿ ನೀಡಲಾಗಿದೆ.

ಹಂತ ೨ : ಅಯೋಗ್ಯ ಕೃತಿ / ಪ್ರತಿಕ್ರಿಯೆಗಳ ಅಧ್ಯಯನ ಮಾಡಿ ಯೋಗ್ಯ ಕೃತಿಗಳನ್ನು ನಿರ್ಧರಿಸುವ ಪದ್ಧತಿ

ಘಟನೆಗಳ ಹಾಗೂ ಅಯೋಗ್ಯ ಕೃತಿ ಮತ್ತು ಅಯೋಗ್ಯ ಪ್ರತಿಕ್ರಿಯೆಗಳ ಅಧ್ಯಯನ ಮಾಡಿ ಆಯಾ ಪ್ರಸಂಗಗಳಿಗನುಸಾರ ಯೋಗ್ಯ ಕೃತಿ ಮತ್ತು ಯೋಗ್ಯ ಪ್ರತಿಕ್ರಿಯೆಗಳನ್ನು ನಿರ್ಧರಿಸುವುದು

‘ಸ್ವಭಾವದೋಷ ನಿರ್ಮೂಲನ’ ತಖ್ತೆಯನ್ನು ಬರೆಯುವಾಗ ತಡೆಗಟ್ಟಬೇಕಾದ ತಪ್ಪುಗಳು

ಅ. ತಖ್ತೆಯನ್ನು ಬರೆಯಲು ಬೇಸರಿಸುವುದು: ಬಹಳಷ್ಟು ಜನರು ‘ನಮಗೆಲ್ಲವೂ ತಿಳಿಯುತ್ತ್ತದೆ ಮತ್ತು ಗಮನದಲ್ಲಿರುತ್ತದೆ’ ಎಂದೆನಿಸಿ ತಖ್ತೆಯನ್ನು ಬರೆಯುವುದಿಲ್ಲ. ಆ. ತಪ್ಪು ಘಟಿಸಿದ ನಂತರ ಕೂಡಲೇ ಅದರ ನೋಂದಣಿಯನ್ನು ತಖ್ತೆಯಲ್ಲಿ ಮಾಡದಿರುವುದು: ಇ. ತಖ್ತೆಯಲ್ಲಿನ ಎಲ್ಲ ಸ್ತಂಭಗಳನ್ನು ತುಂಬದಿರುವುದು: ಕೆಲವರು ಕೋಷ್ಟಕದಲ್ಲಿನ ಎಲ್ಲ ಸ್ತಂಭಗಳನ್ನು ತುಂಬಿಸದೇ ಕೇವಲ ತಪ್ಪುಗಳನ್ನಷ್ಟೇ ಬರೆಯುತ್ತಾರೆ; ಇದರಿಂದ ಅಯೋಗ್ಯ ಕೃತಿ ಮತ್ತು ಅಯೋಗ್ಯ ಪ್ರತಿಕ್ರಿಯೆಗಳಿಗೆ ಕಾರಣವಾಗಿರುವ ನಮ್ಮಲ್ಲಿರುವ ಸ್ವಭಾವದೋಷ ಗಳು ಹಾಗೂ ಅವುಗಳನ್ನು ದೂರಗೊಳಿಸಲು ಅವಶ್ಯಕವಿರುವ ಯೋಗ್ಯ ಕೃತಿ ಮತ್ತು ಯೋಗ್ಯ ಪ್ರತಿಕ್ರಿಯೆಗಳ ಬಗ್ಗೆ ವಿಚಾರವಾಗುವುದಿಲ್ಲ. … Read more

ಸಮಷ್ಟಿ ಜೀವನ ಸುಖಿಯಾಗಲು ಸ್ವಭಾವದೋಷ ನಿರ್ಮೂಲನೆಯ ಮಹತ್ವ

ಸಮಷ್ಟಿ ಸ್ತರದಲ್ಲಿನ ಸಮಸ್ಯೆಗಳನ್ನು ಬಿಡಿಸಲು ಸಮಾಜದಲ್ಲಿನ ಇತರ ಘಟಕಗಳ ಅಯೋಗ್ಯ ವರ್ತನೆಗೆ ಕಾರಣವಾಗಿರುವ ಸ್ವಭಾವದೋಷಗಳ ನಿರ್ಮೂಲನೆ ಮಾಡುವುದು ಅನಿವಾರ್ಯವಾಗಿದೆ.