‘ಗುರುಗಳೇ ನಮ್ಮ ಚಿಂತೆಯನ್ನು ಹೊರುತ್ತಾರೆ’, ಎಂದು ಶಿಷ್ಯನಿಗೆ ಪೂರ್ಣ ಖಾತ್ರಿ ಇರುವುದು !
ಶಿಷ್ಯನ ಹಿಂದಿನ ಜನ್ಮದ ಪುಣ್ಯದಿಂದಾಗಿ ಗುರುಗಳು ಸಾಧಕನ ಜೀವನದಲ್ಲಿ ಬರುವುದು !
ಶಿಷ್ಯನ ಹಿಂದಿನ ಜನ್ಮದ ಪುಣ್ಯದಿಂದಾಗಿ ಗುರುಗಳು ಸಾಧಕನ ಜೀವನದಲ್ಲಿ ಬರುವುದು !
ಗುರುಗಳು ಸ್ವತಃ ಷಡ್ರಿಪುಗಳ ಆಚೆಗೆ ಹೋಗಿರುವುದರಿಂದ ಜಡಬುದ್ಧಿಯಿಂದ ಅವರನ್ನು ಅರಿತುಕೊಳ್ಳುವುದು ಅಸಾಧ್ಯವಾಗಿದೆ.
ಸಂತರು ಹೇಗೆ ಮಾತನಾಡುತ್ತಾರೋ, ಅದೇರೀತಿ ನಡೆದುಕೊಳ್ಳುತ್ತಾರೆ; ಆದ್ದರಿಂದ ಅವರು ಮಹಾನ್ ಆಗಿದ್ದಾರೆ. ಅಂತಹವರಿಗೆ ನಮಸ್ಕಾರ ಮಾಡಿರಿ.
ಗುರುತತ್ತ್ವವು ಜೀವದಲ್ಲಿನ ಅಜ್ಞಾನವನ್ನು ಜ್ಞಾನದ ಮೂಲಕ, ತಮ್ಮ ಶಕ್ತಿಯ ಮೂಲಕ ಇಲ್ಲವಾಗಿಸಿ ಸಾಧಕರಿಗೆ ಆತ್ಮಸ್ವರೂಪದ ಪರಿಚಯ ಮಾಡಿಸಿಕೊಡುತ್ತದೆ.
ಗುರುಗಳ ಚರಣಗಳಲ್ಲಿ ನಾಲ್ಕು ಪುರುಷಾರ್ಥಗಳು, ಅಂದರೆ ನಾಲ್ಕು ಮುಕ್ತಿಗಳಿರುತ್ತವೆ; ಆದರೆ ಯಾವ ಸ್ಥಾನದಲ್ಲಿ ಶಿವ-ಶಕ್ತಿಯರ ಐಕ್ಯ ಅಥವಾ ಸಾಮರಸ್ಯವಾಗುತ್ತದೆಯೋ, ಅದನ್ನೇ ಶ್ರೇಷ್ಠ ಗುರುಪಾದುಕೆ ಎನ್ನುತ್ತಾರೆ.
ತಂದೆ ಪುತ್ರನಿಗೆ ಜನ್ಮವನ್ನು ಮಾತ್ರ ಕೊಡುತ್ತಾನೆ, ಆದರೆ ಗುರುಗಳು ಅವನನ್ನು ಜನ್ಮಮೃತ್ಯುವಿನ ಚಕ್ರದಿಂದ ಮುಕ್ತಗೊಳಿಸುತ್ತಾರೆ. ಆದ್ದರಿಂದಲೇ ತಂದೆಗಿಂತಲೂ ಗುರುಗಳನ್ನು ಶ್ರೇಷ್ಠವೆಂದು ಪರಿಗಣಿಸಲಾಗಿದೆ.
ಗುರುಗಳು ಜ್ಞಾನಿಗಳ ರಾಜರಾಗಿದ್ದಾರೆ ಎಂದು ಸಂತ ತುಕಾರಾಮರು ಹೇಳಿದ್ದಾರೆ. ಯಾರು ಜ್ಞಾನವನ್ನು ಕೊಡುತ್ತಾರೆಯೋ, ಅವರೇ ಗುರುಗಳು ! ಶಿಲೆಯಿಂದ ಶಿಲ್ಪವು ತಯಾರಾಗಬಹುದು; ಆದರೆ ಅದಕ್ಕೆ ಶಿಲ್ಪಿ ಬೇಕಾಗುತ್ತಾನೆ. ಅದೇರೀತಿ ಸಾಧಕರು ಮತ್ತು ಶಿಷ್ಯರು ಈಶ್ವರನನ್ನು ಪ್ರಾಪ್ತಗೊಳಿಸಿಕೊಳ್ಳಬಲ್ಲರು; ಆದರೆ ಅದಕ್ಕೆ ಗುರುಗಳ ಆವಶ್ಯಕತೆಯಿರುತ್ತದೆ. ಗುರುಗಳು ತಮ್ಮ ಬೋಧಾಮೃತದಿಂದ ಸಾಧಕರ ಮತ್ತು ಶಿಷ್ಯರ ಅಜ್ಞಾನವನ್ನು ದೂರಗೊಳಿಸಿದ ನಂತರವೇ ಅವರಿಗೆ ಈಶ್ವರಪ್ರಾಪ್ತಿಯಾಗುತ್ತದೆ. ಪ್ರಸ್ತುತ ಲೇಖನದಲ್ಲಿ ನಾವು `ಸಂತರು ಮತ್ತು ಗುರುಗಳು’, ‘ಅವಿದ್ಯಾಮಾಯೆ ಮತ್ತು ಗುರುಮಾಯೆ’, ‘ಈಶ್ವರ ಮತ್ತು ಗುರುಗಳು’, ‘ದೇವತೆಗಳು ಮತ್ತು … Read more
ಗುರು ಶಕ್ತಿಪಾತದ ಮೂಲಕ ಶಿಷ್ಯನ ಕುಂಡಲಿನಿ ಶಕ್ತಿಯನ್ನು ಜಾಗೃತಗೊಳಿಸಿ ಅದನ್ನು ಉರ್ಧ್ವಗಾಮಿನಿ ಆಗಿಸುತ್ತಾರೆ. ಈ ಮೂಲಕ ಮುಂದಿನ ಪ್ರಗತಿಯಾಗಿ ಅವನ ಜ್ಞಾನ ಜಾಗೃತವಾಗುತ್ತದೆ.
೧. ಪೃಥ್ವಿ : ಪೃಥ್ವಿಯಂತೆ ಸಹನಶೀಲ ಹಾಗೂ ತಾಳ್ಮೆಯುಳ್ಳವನಾಗಿರಬೇಕು. ೨. ವಾಯು : ವಾಯುವಿನಂತೆ ವಿರಕ್ತನಾಗಿರಬೇಕು. ಹೇಗೆ ವಾಯುವು ಶೀತೋಷ್ಣತೆಗಳಲ್ಲಿ ಸಂಚರಿಸುತ್ತಿರುವಾಗಲೂ ಅವುಗಳ ಗುಣ ದೋಷಗಳಲ್ಲಿ ಸಿಲುಕಿಕೊಳ್ಳುವುದಿಲ್ಲವೋ, ಹಾಗೆಯೇ ಮುಮುಕ್ಷುವು ಯಾರ ಗುಣದೋಷಗಳನ್ನೂ ನೋಡದೇ ಶ್ರುತಿ ಪ್ರತಿಪಾದಿತ ಮಾರ್ಗದಲ್ಲಿ ಬಹಳ ಶೀತೋಷ್ಣವಿರುವ ಪ್ರದೇಶದಲ್ಲಿ ಮಾರ್ಗಕ್ರಮಣ ಮಾಡಬೇಕು. ೩. ಆಕಾಶ : ಆತ್ಮವು ಆಕಾಶದಂತೆ ಎಲ್ಲ ಚರಾಚರ ವಸ್ತುಗಳನ್ನು ವ್ಯಾಪಿಸಿದೆ, ಆದರೂ ಅದು ನಿರ್ವಿಕಾರ, ಎಲ್ಲರೊಂದಿಗೆ ಸಮಾನತೆಯನ್ನಿಟ್ಟುಕೊಳ್ಳುವ, ನಿಃಸಂಗ, ಅಭೇದ, ನಿರ್ಮಲ, ನಿರ್ವೈರ, ಅಲಿಪ್ತ, ಅಚಲ ಮತ್ತು ಒಂದಾಗಿದೆ. … Read more
ಸಾಧಕರು ಸ್ಥೂಲ ಜಗತ್ತಿನಲ್ಲಿ ಸಿಲುಕಬಾರದೆಂದು ಅವನು ಸಗುಣದೊಂದಿಗೆ ನಿರ್ಗುಣತತ್ತ್ವದ ಉಪಾಸಣೆ ಮಾಡುವುದು ಆವಶ್ಯಕವಾಗಿದೆ. ಗುರುಪ್ರಾಪ್ತಿಯಾದ ಮೇಲೆ ಸಗುಣದಲ್ಲಿನ ನಿರ್ಗುಣದ, ಅಂದರೆ ಮಾಯೆಯಲ್ಲಿನ ಬ್ರಹ್ಮನ ಅನುಭೂತಿ ಬರಲಿಕ್ಕಾಗಿ ಸಗುಣದಲ್ಲಿನ ಗುರುಗಳ ಸೇವೆ ಮಾಡುವುದು ಅವಶ್ಯಕವಾಗಿದೆ.