ಗುರುಕೃಪಾಯೋಗಾನುಸಾರ ಸಾಧನೆಯ ವಿಧಗಳು

‘ವ್ಯಷ್ಟಿ ಸಾಧನೆ’ ಮತ್ತು ‘ಸಮಷ್ಟಿ ಸಾಧನೆ’ ಇವು ಗುರುಕೃಪಾಯೋಗಾನುಸಾರ ಸಾಧನೆಯ ಎರಡು ವಿಧಗಳಾಗಿವೆ. ವ್ಯಷ್ಟಿ ಸಾಧನೆಯೆಂದರೆ ವೈಯಕ್ತಿಕ ಆಧ್ಯಾತ್ಮಿಕ ಉನ್ನತಿಗಾಗಿ ಮಾಡುವ ಪ್ರಯತ್ನ. ಸಮಷ್ಟಿ ಸಾಧನೆಯೆಂದರೆ ಸಮಾಜದ ಆಧ್ಯಾತ್ಮಿಕ ಉನ್ನತಿಗಾಗಿ ಮಾಡುವ ಪ್ರಯತ್ನ.

ಗುರುಕೃಪೆಯು ನಿರಂತರ ಹರಿಯುವ ಧಾರೆ ಅಂದರೆ ಭಾವಶಕ್ತಿ ನಿರ್ಮಾಣಗೊಳಿಸುವ ಪ್ರೇರಣೆ !

ಶಿಷ್ಯನು ಗುರುಗಳ ಬಗ್ಗೆ ಅನನ್ಯ ಶರಣಾಗತ, ಲೀನ ಮತ್ತು ಸಮರ್ಪಣೆ ಭಾವವು ಹೆಚ್ಚಿಸುವುದು, ಗುರುಗಳ ಬಗ್ಗೆ ಬಿಡಿಸಲಾಗದ ಶ್ರದ್ಧೆ ಇಡುವುದು, ಗುರುವಾಜ್ಞೆಯನ್ನು ಪಾಲಿಸುವುದು, ನಿರಂತರ ಕೃತಜ್ಞತೆ ವ್ಯಕ್ತಪಡಿಸುವುದು ಇವುಗಳಿಂದ ಗುರುಕೃಪೆಯನ್ನು ನಿರಂತರವಾಗಿ ಪಡೆಯಬಹುದು.

ಶೀಘ್ರ ಆಧ್ಯಾತ್ಮಿಕ ಉನ್ನತಿಗಾಗಿ ಅನುಸರಿಸಬೇಕಾದ ಮೂಲಭೂತ ತತ್ತ್ವಗಳು

ಬಹಳಷ್ಟು ಜನರಿಗೆ ಸಾಧನೆಯ ಹಿಂದಿನ ತತ್ತ್ವಗಳು ತಿಳಿಯದಿರುವುದರಿಂದ ಅವರು ತಪ್ಪು ಸಾಧನೆ ಮಾಡುವುದರಲ್ಲಿ ತಮ್ಮ ಆಯುಷ್ಯವನ್ನು ವ್ಯರ್ಥಗೊಳಿಸುತ್ತಾರೆ. ಹಾಗಾಗಬಾರದೆಂದು; ಮುಂದಿನ ಮಾರ್ಗದರ್ಶಕ ತತ್ತ್ವಗಳನ್ನು ತಿಳಿದುಕೊಂಡು ಅವುಗಳಿಗನುಸಾರ ಸಾಧನೆಯನ್ನು ಮಾಡುವುದು ಆವಶ್ಯಕವಾಗಿರುತ್ತದೆ.

ಗುರುಕೃಪೆಯು ಹೇಗೆ ಕಾರ್ಯ ಮಾಡುತ್ತದೆ?

ಯಾವಾಗ ಸೂರ್ಯನು ಉದಯಿಸುತ್ತಾನೆಯೋ, ಆಗ ಎಲ್ಲಾರೂ ಏಳುತ್ತಾರೆ, ಹೂವುಗಳು ಅರಳುತ್ತವೆ. ಇದು ಕೇವಲ ಸೂರ್ಯನ ಅಸ್ತಿತ್ವದಿಂದಾಗುತ್ತದೆ. ಅಂತೆಯೇ ಗುರುಕೃಪೆಯಿಂದ ಶಿಷ್ಯನ ಭಾವದ ಬಲದಿಂದ ಅವನ ಸಾಧನೆ ಮತ್ತು ಉನ್ನತಿಯಾಗುತ್ತದೆ.

ಸಾಂಪ್ರದಾಯಿಕ ಸಾಧನೆ ಮತ್ತು ಗುರುಕೃಪಾಯೋಗಾನುಸಾರ ಸಾಧನೆ

ಯಾರಾದರೂ ಯಾವುದಾದರೊಂದು ಸಂಪ್ರದಾಯಕ್ಕನುಸಾರ ಸಾಧನೆಯನ್ನು ಮಾಡುತ್ತಿದ್ದರೂ, ಅವನು ಧರ್ಮದಲ್ಲಿನ ತತ್ತ್ವಗಳನ್ನು ಅರಿತುಕೊಂಡ ನಂತರ ಅದಕ್ಕನುಸಾರ ಸಾಧನೆಯನ್ನು ಮಾಡುವುದು ಲಾಭದಾಯಕವಾಗುತ್ತದೆ.

ಅಹಂನ ಲಕ್ಷಣಗಳು

ಅಹಂನ ಕೆಲವು ಲಕ್ಷಣಗಳೆಂದರೆ ‘ಇತರರೊಂದಿಗೆ ತುಲನೆ ಮಾಡುವುದು’, ‘ಇತರರಿಗೆ ಕಲಿಸುವ ಭೂಮಿಕೆಯಲ್ಲಿರುವುದು’, ‘ನಮ್ಮ ವಿಚಾರಗಳನ್ನು ಇತರರ ಮೇಲೆ ಹೊರಿಸುವುದು’, ಇತ್ಯಾದಿ.

ನಾಮಜಪ ಅಥವಾ ಮಂತ್ರ ಪಠಣ ಏಕಾಗ್ರತೆಯಿಂದ ಆಗಲು ಇದನ್ನು ಮಾಡಿರಿ !

ಆಧ್ಯಾತ್ಮಿಕ ಉಪಾಯವೆಂದು ನಾಮಜಪ ಅಥವಾ ಮಂತ್ರಪಠಣ ಮಾಡುವ ಬಹುತೇಕ ಸಾಧಕರು ಬಹಳಷ್ಟು ಪ್ರಯತ್ನಿಸಿದರೂ ಅವರ ಮನಸ್ಸು ನಾಮಜಪ ಅಥವಾ ಮಂತ್ರಪಠಣದಲ್ಲಿ ಏಕಾಗ್ರವಾಗುವುದಿಲ್ಲ. ಮನಸ್ಸು ಏಕಾಗ್ರವಾಗದಿದ್ದರೆ ಮುಂದಿನ ಸುಲಭ ಪ್ರಯತ್ನಗಳನ್ನು ಮಾಡಬೇಕು.

‘ಗುರುಕೃಪಾಯೋಗ’ – ಕಲಿಯುಗದಲ್ಲಿ ಶೀಘ್ರ ಆಧ್ಯಾತ್ಮಿಕ ಉನ್ನತಿಯನ್ನು ಸಾಧ್ಯಗೊಳಿಸುವ ಸಾಧನಾಮಾರ್ಗ!

ಗುರುಕೃಪೆ ಮತ್ತು ಗುರುಪ್ರಾಪ್ತಿಯಾಗಲು ಮತ್ತು ಗುರುಕೃಪೆಯು ಸತತವಾಗಿ ಆಗುತ್ತಿರಲು ಮಾಡಬೇಕಾದ ಸಾಧನೆಗೆ ‘ಗುರುಕೃಪಾಯೋಗಾನುಸಾರ ಸಾಧನೆ’ ಎನ್ನುತ್ತಾರೆ.