ಗುರುಕೃಪೆಯು ಹೇಗೆ ಕಾರ್ಯ ಮಾಡುತ್ತದೆ?

ಯಾವಾಗ ಯಾವುದಾದರೊಂದು ಕಾರ್ಯವಾಗುತ್ತಿರುತ್ತದೆಯೋ, ಆಗ ಅದರಲ್ಲಿ ಕಾರ್ಯನಿರತವಾಗಿರುವ ವಿವಿಧ ಘಟಕಗಳ ಮೇಲೆ ಆ ಕಾರ್ಯವು ಎಷ್ಟು ಪ್ರಮಾಣದಲ್ಲಿ ಯಶಸ್ವಿಯಾಗಬಹುದು ಎಂಬುದು ನಿಶ್ಚಿತವಾಗುತ್ತದೆ. ಹೇಗೆ ಅಣುಬಾಂಬ್‌ಗಿಂತ ಪರಮಾಣುಬಾಂಬ್ ಹೆಚ್ಚು ಪ್ರಭಾವಶಾಲಿಯಾಗಿರುತ್ತದೆಯೋ, ಹಾಗೆಯೇ ಸ್ಥೂಲಕ್ಕಿಂತ ಸೂಕ್ಷ್ಮ ಹೆಚ್ಚು ಸಾಮರ್ಥ್ಯಶಾಲಿಯಾಗಿರುತ್ತದೆ. ಈ ತತ್ತ್ವವು ಮುಂದೆ ನೀಡಿದ ಉದಾಹರಣೆಗಳಿಂದ ಸ್ಪಷ್ಟವಾಗುತ್ತದೆ.

ಸ್ಥೂಲ (ಪಂಚಭೌತಿಕ): ಪಂಚಜ್ಞಾನೇಂದ್ರಿಯಗಳಿಗೆ ಅರಿವಾಗಿ ಸ್ಥೂಲದಲ್ಲಿ ಕಾರ್ಯ ಮಾಡುವುದು. ಬೇರೆಬೇರೆ ಕಾರ್ಯಗಳಿಗಾಗಿ ಬೇರೆಬೇರೆ ಸ್ಥೂಲ ವಿಷಯಗಳನ್ನು ಉಪಯೋಗಿಸಲಾಗುತ್ತದೆ, ಉದಾ. ರೋಗಜಂತುಗಳನ್ನು ನಾಶಗೊಳಿಸಲು ಔಷಧಗಳ ಮಾತ್ರೆ ಇತ್ಯಾದಿ. ಕೇವಲ ಸ್ಥೂಲದಿಂದ ಕಾರ್ಯವಾಗದಿದ್ದರೆ ಅದಕ್ಕೆ ಮುಂದಿನ ಹಂತದಲ್ಲಿ ಹೇಳಿದಂತೆ ಸೂಕ್ಷ್ಮದ ಜೊತೆ ನೀಡಬೇಕಾಗುತ್ತದೆ.

ಸ್ಥೂಲ (ಪಂಚಭೌತಿಕ) ಮತ್ತು ಸೂಕ್ಷ್ಮ (ಮಂತ್ರ) ಒಟ್ಟಿಗೆ ಉಪಯೋಗಿಸುವುದು: ಆಯುರ್ವೇದದಲ್ಲಿ ಮಂತ್ರಗಳನ್ನು ಹೇಳುತ್ತಾ ಔಷಧಿಗಳನ್ನು ತಯಾರಿಸುವುದರಲ್ಲಿಯೂ ಇದೇ ಉದ್ದೇಶವಿದೆ. ಆದರೆ ಕೆಲವೊಮ್ಮೆ ಸ್ಥೂಲದೊಂದಿಗೆ ಸೂಕ್ಷ್ಮವಿದ್ದರೂ ಕಾರ್ಯವಾಗುವುದಿಲ್ಲಾ. ಇಂತಹ ಸಮಯದಲ್ಲಿ ಮುಂದಿನ ಹಂತದಲ್ಲಿ ಹೇಳಿದಂತೆ ಹೆಚ್ಚು ಶಕ್ತಿಶಾಲಿ, ಮಂತ್ರವನ್ನು ಉಪಯೋಗಿಸಬೇಕಾಗುತ್ತದೆ.

ಸೂಕ್ಷ್ಮ (ಶಕ್ತಿಶಾಲಿ ಮಂತ್ರ): ಬೇರೆಬೇರೆ ವಿಷಯಗಳನ್ನು ಸಾಧ್ಯಗೊಳಿಸಲು, ಉದಾ. ಮದುವೆಯಾಗಲು, ಹಣ ಸಂಪಾದಿಸಲು ಇತ್ಯಾದಿಗಳಿಗಾಗಿ ಬೇರೆಬೇರೆ ಮಂತ್ರಗಳಿವೆ. ಕೆಲವೊಮ್ಮೆ ಮಂತ್ರದಿಂದಲೂ ಕಾರ್ಯವಾಗುವುದಿಲ್ಲಾ. ಇಂತಹ ಸಮಯದಲ್ಲಿ ಮುಂದಿನ ಹಂತವನ್ನು ಉಪಯೋಗಿಸಬೇಕಾಗುತ್ತದೆ.

ಸೂಕ್ಷ್ಮತರ (ವ್ಯಕ್ತ ಸಂಕಲ್ಪ): ‘ಯಾವುದಾದರೊಂದು ಘಟನೆಯು ಘಟಿಸಲಿ’, ಇಷ್ಟೇ ವಿಚಾರ ಆಧ್ಯಾತ್ಮಿಕ ದೃಷ್ಟಿಯಿಂದ ಉನ್ನತರಾಗಿರುವವರ ಮನಸ್ಸಿನಲ್ಲಿ ಬಂದರೆ ಸಾಕು, ಆ ವಿಷಯವು ಘಟಿಸುತ್ತದೆ. ಇದನ್ನು ಬಿಟ್ಟು ಅವರಿಗೆ ಬೇರೇ ಏನನ್ನೂ ಮಾಡಬೇಕಾಗುವುದಿಲ್ಲಾ. ಶೇ.70ಕ್ಕಿಂತ ಹೆಚ್ಚು ಮಟ್ಟವಿರುವ ಉನ್ನತರ ಸಂದರ್ಭದಲ್ಲಿ ಇದು ಸಾಧ್ಯವಾಗುತ್ತದೆ. ‘ಶಿಷ್ಯನ ಆಧ್ಯಾತ್ಮಿಕ ಉನ್ನತಿಯಾಗಲಿ’, ಎಂಬ ಸಂಕಲ್ಪವು ಗುರುಗಳ ಮನಸ್ಸಿನಲ್ಲಿ ಬಂದ ಮೇಲೆಯೇ ಶಿಷ್ಯನ ನಿಜವಾದ ಉನ್ನತಿಯಾಗುತ್ತದೆ. ಇದನ್ನೇ ‘ಗುರುಕೃಪೆ’ ಎನ್ನುತ್ತಾರೆ. ಇದಿಲ್ಲಾದೇ ಶಿಷ್ಯನ ಉನ್ನತಿಯಾಗುವುದಿಲ್ಲಾ.

ಸೂಕ್ಷ್ಮತಮ (ಅವ್ಯಕ್ತ ಸಂಕಲ್ಪ): ಇದರಲ್ಲಿ ‘ಶಿಷ್ಯನ ಆಧ್ಯಾತ್ಮಿಕ ಉನ್ನತಿಯಾಗಲಿ’, ಎಂಬ ಸಂಕಲ್ಪ ಗುರುಗಳ ಮನಸ್ಸಿನಲ್ಲಿ ಬರದಿದ್ದರೂ, ಶಿಷ್ಯನ ಉನ್ನತಿ ತಾನಾಗಿಯೇ ಆಗುತ್ತದೆ. ಇದಕ್ಕೆ ಕಾರಣವೇನೆಂದರೆ, ಇದರ ಹಿಂದೆ ಗುರುಗಳ ಅವ್ಯಕ್ತ ಸಂಕಲ್ಪವಿರುತ್ತದೆ. ಶೇ.80ಕ್ಕಿಂತ ಹೆಚ್ಚು ಮಟ್ಟವಿರುವ ಉನ್ನತರ ಸಂದರ್ಭದಲ್ಲಿ ಇದು ಸಾಧ್ಯವಾಗುತ್ತದೆ.

ಅತಿ ಸೂಕ್ಷ್ಮತಮ (ಅಸ್ತಿತ್ವ): ಈ ಅಂತಿಮ ಹಂತದಲ್ಲಿ ಕೇವಲ ಗುರುಗಳ ಅಸ್ತಿತ್ವದಿಂದ, ಸಾನಿಧ್ಯದಿಂದ/ಸತ್ಸಂಗದಿಂದ ಶಿಷ್ಯನ ಸಾಧನೆ ಮತ್ತು ಉನ್ನತಿಯು ತಾನಾಗಿಯೇ ಆಗುತ್ತಿರುತ್ತದೆ.

ಇದು ನನ್ನಿಂದಾಯಿತು; ಆದರೆ ನಾನು ಮಾಡಲಿಲ್ಲಾ, ಇದನ್ನು ಯಾವನು ಅರಿತನೋ, ಅವನು ಜನ್ಮಮೃತ್ಯುವಿನ ಚಕ್ರದಿಂದ ಬಿಡುಗಡೆಯಾದನು.
– ಜ್ಞಾನೇಶ್ವರಿ ಅಧ್ಯಾಯ 4, ದ್ವಿಪದಿ 81

ಇದರಲ್ಲಿ ‘ನನ್ನಿಂದ ಆಯಿತು’, ಅಂದರೆ ನನ್ನ ಅಸ್ತಿತ್ವದಿಂದಾಯಿತು, ಇದರಲ್ಲಿನ ‘ನಾನು’ತನವು ಪರಮೇಶ್ವರನದ್ದಾಗಿದೆ; ಆದರೆ ‘ನಾನು ಮಾಡಲಿಲ್ಲಾ’, ಅಂದರೆ ಕರ್ತೃತ್ವವು ನನ್ನಲ್ಲಿಲ್ಲಾ. ಇದರ ಒಂದು ಸುಂದರ ಉದಾಹರಣೆುಂದರೆ ಯಾವಾಗ ಸೂರ್ಯನು ಉದಯಿಸುತ್ತಾನೆಯೋ, ಆಗ ಎಲ್ಲಾರೂ ಏಳುತ್ತಾರೆ, ಹೂವುಗಳು ಅರಳುತ್ತವೆ. ಇದು ಕೇವಲ ಸೂರ್ಯನ ಅಸ್ತಿತ್ವದಿಂದಾಗುತ್ತದೆ. ಸೂರ್ಯನು ಯಾರಿಗೂ ‘ಎದ್ದೇಳಿ’ ಎಂದು ಹೇಳುವುದಿಲ್ಲಾ ಅಥವಾ ಹೂವುಗಳಿಗೆ ‘ಅರಳಿ’ ಎಂದು ಹೇಳುವುದಿಲ್ಲ.

ಶೇ.90ಕ್ಕಿಂತ ಹೆಚ್ಚಿನ ಮಟ್ಟದ ಪರಾತ್ಪರ ಗುರುಗಳು ಪರಮೇಶ್ವರನೊಂದಿಗೆ ಸಂಪೂರ್ಣ ಏಕರೂಪವಾಗಿರುವುದರಿಂದ ಅವರ ಸರ್ವವ್ಯಾಪಿ ಗುಣದಿಂದ ಮತ್ತು ಎಲ್ಲಾ ಕಡೆಯಿರುವ ಅವರ ಸೂಕ್ಷ್ಮ ಅಸ್ತಿತ್ವದಿಂದ, ಹಾಗೆಯೇ ಶಿಷ್ಯನ ಭಾವದ ಬಲದಿಂದ ಅವನ ಸಾಧನೆ ಮತ್ತು ಉನ್ನತಿಯಾಗುತ್ತಿರುತ್ತದೆ.

ಗುರುಕೃಪೆಯು ಸತತವಾಗಿ ಆಗಲು ‘ಗುರುಕೃಪಾಯೋಗಾನುಸಾರ ಸಾಧನೆ’ ಮಾಡುವುದು ಆವಶ್ಯಕವಾಗಿದೆ

ಕಾರ್ಯಾಲಯದಲ್ಲಿ ಕೆಲಸ ಮಾಡುವ ನೌಕರನಿಗೆ ಬಡ್ತಿ ಪಡೆಯುವುದಿದ್ದರೆ, ಅವನಿಗೆ ವರಿಷ್ಟರಿಗೆ ಅಪೇಕ್ಷಿತವಿರುವಂತೆ, ಕೆಲಸವನ್ನು ಮಾಡಬೇಕಾಗುತ್ತದೆ. ಅದೇ ರೀತಿ ಗುರುಪ್ರಾಪ್ತಿ ಮತ್ತು ಗುರುಕೃಪೆಯಾಗಲು ಗುರುಗಳ ಮನಸ್ಸನ್ನು ಗೆಲ್ಲುವುದು ಆವಶ್ಯಕವಾಗಿರುತ್ತದೆ. ಗುರುಕೃಪೆಯು ಸತತವಾಗಿ ಆಗಲು ಗುರುಗಳ ಮನಸ್ಸನ್ನು ಸತತವಾಗಿ ಗೆಲ್ಲಾಬೇಕಾಗುತ್ತದೆ. ಗುರು ಅಥವಾ ಸಂತರಿಗೆ ಇಷ್ಟವಾಗುವ ವಿಷಯವೆಂದರೆ ಸಾಧನೆ, ಅಂದರೆ ಗುರುಪ್ರಾಪ್ತಿಗಾಗಿ ಮತ್ತು ಸತತವಾಗಿ ಗುರುಕೃಪೆಯಾಗಲು ತೀವ್ರ ಸಾಧನೆಯನ್ನು ಸತತವಾಗಿ ಮಾಡುವುದು ಆವಶ್ಯಕವಾಗಿದೆ. ಇದೇ ‘ಗುರುಕೃಪಾಯೋಗಾನುಸಾರ ಸಾಧನೆ‘.

ಕಲಿಯುಗದಲ್ಲಿ ಗುರುಪ್ರಾಪ್ತಿ ಮತ್ತು ಗುರುಕೃಪೆಯಾಗುವುದು ಮೊದಲಿನ ಮೂರು ಯುಗಗಳಷ್ಟು ಕಠಿಣವಾಗಿಲ್ಲಾ. ಇಲ್ಲಿ ಗಮನದಲ್ಲಿ ತೆಗೆದುಕೊಳ್ಳಬೇಕಾದ ಅಂಶವೆಂದರೆ ಗುರುಕೃಪೆಯಿಲ್ಲಾದೇ ಗುರುಪ್ರಾಪ್ತಿಯಾಗುವುದಿಲ್ಲ. ಭವಿಷ್ಯತ್‌ಕಾಲದಲ್ಲಿ ತಮಗೆ ಯಾರು ಶಿಷ್ಯರಾಗುವವರಿದ್ದಾರೆ, ಎಂಬುದು ಗುರುಗಳಿಗೆ ಮೊದಲೇ ತಿಳಿದಿರುತ್ತದೆ. ಸಾಧನೆಯು ಉತ್ತಮವಾಗಿ ಆಗಲು ಶಿಷ್ಯನ ಗುಣಗಳನ್ನು ಅಳವಡಿಸಿಕೊಳ್ಳಬೇಕು. (ಈ ಗುಣಗಳ ಕುರಿತಾದ ವಿವೇಚನೆಯನ್ನು ಸನಾತನ-ನಿರ್ಮಿತ ಗ್ರಂಥ ‘ಶಿಷ್ಯ’ ಇದರಲ್ಲಿ ಕೊಡಲಾಗಿದೆ.)

ಆಧಾರ : ಸನಾತನ-ನಿರ್ಮಿತ ‘ಗುರುಕೃಪಾಯೋಗಾನುಸಾರ ಸಾಧನೆ’ ಗ್ರಂಥ

Leave a Comment