ಸಾಂಪ್ರದಾಯಿಕ ಸಾಧನೆ ಮತ್ತು ಗುರುಕೃಪಾಯೋಗಾನುಸಾರ ಸಾಧನೆ

ಯಾರಾದರೂ ಯಾವುದಾದರೊಂದು ಸಂಪ್ರದಾಯಕ್ಕನುಸಾರ ಸಾಧನೆಯನ್ನು ಮಾಡುತ್ತಿದ್ದರೂ, ಅವನು ಧರ್ಮದಲ್ಲಿನ ತತ್ತ್ವಗಳನ್ನು ಅರಿತುಕೊಂಡ ನಂತರ ಅದಕ್ಕನುಸಾರ ಸಾಧನೆಯನ್ನು ಮಾಡುವುದು ಲಾಭದಾಯಕವಾಗುತ್ತದೆ. ಗುರುಕೃಪಾಯೋಗಾನುಸಾರ ಸಾಧನೆಯನ್ನು ಮಾಡಿದರೆ ಧರ್ಮದ ಶಿಕ್ಷಣ ಪರಿಪೂರ್ಣವಾಗಿ ದೊರಕುತ್ತದೆ. ಗುರುಕೃಪಾಯೋಗಾನುಸಾರ ಸಾಧನೆಯನ್ನು ಮಾಡಿದರೆ ಆಧ್ಯಾತ್ಮಿಕ ಉನ್ನತಿಯು ಬೇಗನೆ ಆಗುತ್ತದೆ, ಸಾಂಪ್ರದಾಯಿಕ ಸಾಧನೆ ಮತ್ತು ಗುರುಕೃಪಾಯೋಗಾನುಸಾರ ಸಾಧನೆ ಇವುಗಳಲ್ಲಿನ ಶಿಕ್ಷಣದ ವೈಶಿಷ್ಟ್ಯವನ್ನು ದರ್ಶಿಸುವ ಕೋಷ್ಟಕವನ್ನು ಇಲ್ಲಿ ನೀಡುತ್ತಿದ್ದೇವೆ.

ಸಾಧನೆ ಸಾಂಪ್ರದಾಯಿಕ ಸಾಧನೆ  ಗುರುಕೃಪಾಯೋಗಾನುಸಾರ ಸಾಧನೆ
೧. ಕಲಿಸುವ ವಿಷಯ
೧. ಅ. ಧರ್ಮ ಹೆಚ್ಚು ಕಡಿಮೆ ಪರಿಪೂರ್ಣ
೧ ಆ. ಅಧ್ಯಾತ್ಮ ತಾತ್ತ್ವಿಕ ಹೆಚ್ಚು ಮತ್ತು ಪ್ರಾಯೋಗಿಕ ಅಲ್ಪವಿರುತ್ತದೆ ಪ್ರಾಯೋಗಿಕ ಹೆಚ್ಚು ಮತ್ತು ತಾತ್ತ್ವಿಕ ಅಲ್ಪವಿರುತ್ತದೆ.
೧ ಇ. ಸೂಕ್ಷ್ಮ ಜಗತ್ತು, ಉದಾ. ವಿವಿಧ ದೇವತೆಗಳು ಮತ್ತು ಅನಿಷ್ಟ ಶಕ್ತಿಗಳು ಬಹುತಾಂಶ ಇರುವುದಿಲ್ಲ ಅಥವಾ ಅತ್ಯಂತ ಅಲ್ಪ ಪ್ರಮಾಣದಲ್ಲಿರುತ್ತದೆ. ಬಹಳ ಮತ್ತು ವಿಸ್ತೃತ ಸ್ವರೂಪದಲ್ಲಿರುತ್ತದೆ.
೨. ಮಹತ್ವ ಏತಕ್ಕೆ – ಗುರುಗಳ ಸಗುಣ / ನಿರ್ಗುಣ ಸೇವೆಗೆ ?  ದೇಹಧಾರಿ ಗುರುಗಳ ಸಗುಣ ಸೇವೆಗೆ. ಗುರುಗಳ ಸೂಕ್ಷ್ಮ ರೂಪದ ನಿರ್ಗುಣ ಸೇವೆಗೆ.
೩. ಸಾಧನೆಯ ವೈಶಿಷ್ಟ್ಯಗಳು
೩ ಅ. ಕಾಲಾನುಸಾರ ಸಾಧನೆ ಇರುವುದಿಲ್ಲ. ಕಾಲಾನುಸಾರ ಸಾಧನೆಯನ್ನು ಹೇಳಲಾಗಿದೆ.
೩ ಆ. ಪ್ರಕೃತಿಗನುಸಾರ ಸಾಧನೆ ಎಲ್ಲರಿಗೂ ಒಂದೇ ಸಾಧನೆಯನ್ನು ಹೇಳಿದುದರಿಂದ ಪ್ರಕೃತಿಗನುಸಾರ ಸಾಧನೆಯನ್ನು ಹೇಳಲಾಗುವುದಿಲ್ಲ. ‘ವ್ಯಕ್ತಿಗಳೆಷ್ಟೋ ಅಷ್ಟು ಪ್ರಕೃತಿ ಮತ್ತು ಅಷ್ಟು ಸಾಧನಾಮಾರ್ಗಗಳು’, ಇವುಗಳಿಗನುಸಾರ ಪ್ರತಿಯೊಬ್ಬರ ಪ್ರಕೃತಿಗನುಸಾರ ವಿವಿಧ ರೀತಿಯ ಸಾಧನೆಯನ್ನು ಹೇಳಲಾಗುತ್ತದೆ.
೩ ಇ. ಸಂಬಂಧಿತ ಯೋಗಮಾರ್ಗ ಒಂದು ಅನೇಕ ಯೋಗಮಾರ್ಗಗಳ ಸಂಗಮ
೪. ಯಾವ ಜಪ ?  ಗುರುಮಂತ್ರದ ಕುಲದೇವಿ, ದತ್ತ ಮತ್ತು ಕಾಲಾನುಸಾರ ಆವಶ್ಯಕವಿರುವ ಅಥವಾ ಆಧ್ಯಾತ್ಮಿಕ ಉಪಾಯಗಳಿಗಾಗಿ ಉಪಯುಕ್ತವಾಗಿರುವ ಜಪ
೫. ಸ್ವಭಾವದೋಷ ಮತ್ತು ಅಹಂ ಇವುಗಳ ನಿರ್ಮೂಲನೆಯಾಗುವುದು/ಆಗದಿರುವುದು  ಸ್ವಭಾವದೋಷ ಮತ್ತು ಅಹಂ ಇವುಗಳ ನಿರ್ಮೂಲನೆಯ ಕಡೆಗೆ ಗಮನವಿರದಿರುವುದರಿಂದ ಅವುಗಳ ನಿರ್ಮೂಲನೆಯಾಗದಿರುವುದು ಮತ್ತು ಸ್ವಭಾವದೋಷ ಹಾಗೂ ಅಹಂಗೆ ಪೆಟ್ಟಾಗದಂತೆ ಕಾಪಾಡುವುದು ಸ್ವಭಾವದೋಷ ಮತ್ತು ಅಹಂ ಇವುಗಳ ನಿರ್ಮೂಲನೆಯ ಕಡೆಗೆ ಕಟಾಕ್ಷದಿಂದ ಗಮನ ನೀಡುವುದರಿಂದ ಅವುಗಳ ನಿರ್ಮೂಲನೆಯಾಗುತ್ತದೆ.
೬. ಏಕಾಂಗಿ / ಬಹುಅಂಗಿ  ಏಕಾಂಗಿ ಅಷ್ಟಾಂಗ ಯೋಗಾನುಸಾರ ಸಾಧನೆ ಹೇಳಿದುದರಿಂದ ಬಹುಅಂಗಿ
೮. ಸಾಧನೆಯಲ್ಲಿ ಅಪೂರ್ಣತ್ವ/ಪೂರ್ಣತ್ವ  ಅಪೂರ್ಣತ್ವ ಸಾಧಕನ ಪ್ರವಾಸ ಸ್ಥೂಲದಿಂದ ಸೂಕ್ಷ್ಮದ ಕಡೆಗೆ, ಸಗುಣದಿಂದ ನಿರ್ಗುಣದ ಕಡೆಗೆ ಮತ್ತು ವ್ಯಷ್ಟಿಯೊಂದಿಗೆ ಸಮಷ್ಟಿ ಸ್ತರದಲ್ಲಿ ಆದುದರಿಂದ ಸಾಧನೆಗೆ ಪೂರ್ಣತ್ವ ಪ್ರಾಪ್ತವಾಗುತ್ತದೆ.
೯. ಸೂಕ್ಷ್ಮ ಅಹಂನ್ನು ಜೋಪಾಸನೆ ಮಾಡುವುದು/ ಮಾಡದಿರುವುದು  ಸಾಂಪ್ರದಾಯಿಕ ಸಾಧನೆಯನ್ನು ಮಾಡಿದುದರಿಂದ ಸೂಕ್ಷ್ಮ ಅಹಂ ಜಾಗೃತವಿರುತ್ತದೆ. ಸಾಂಪ್ರದಾಯಿಕ ಸಾಧನೆ ಮಾಡದಿರುವುದರಿಂದ ಸೂಕ್ಷ್ಮ ಅಹಂ ನಷ್ಟವಾಗುತ್ತದೆ.
೧೦. ಮೋಸ ಅಥವಾ ಹಾನಿ ಯಾಗುವುದು /ಆಗದಿರುವುದು  ಕೇವಲ ವ್ಯಷ್ಟಿ ಸಾಧನೆಯನ್ನು ಮಾಡುವುದರಿಂದ ಸಮಷ್ಟಿ ಸಾಧನೆಯ ಅನುಭವ ಇಲ್ಲದಿರುವುದು, ಸ್ಥೂಲಕ್ಕೆ ಮಹತ್ವ ನೀಡಿದುದರಿಂದ ಸೂಕ್ಷ್ಮದ ಬಗ್ಗೆ ತಿಳಿಯದಿರುವುದು, ಗುರುಗಳ ಸಗುಣ ರೂಪದಲ್ಲಿ ಸಿಲುಕುವುದು, ಈ ರೀತಿಯ ಅನೇಕ ರೀತಿಯ ಹಾನಿಯಾಗುತ್ತದೆ. ಗುರುಕೃಪಾಯೋಗನುಸಾರ ಅಷ್ಟಾಂಗ ಸಾಧನೆಯನ್ನು ಮಾಡುವುದರಿಂದ ಯಾವುದೇ ರೀತಿಯ ಹಾನಿಯಾಗದೇ ಎಲ್ಲ ಯೋಗಮಾರ್ಗಗಳಿಗನುಸಾರ ಸಾಧನೆಯನ್ನು ಮಾಡುವುದರ ಫಲ ಪ್ರಾಪ್ತವಾಗುತ್ತದೆ.
೧೧. ಅಪೂರ್ಣತ್ವದ ಅರಿವು ಇರುವುದು/ಇರದಿರುವುದು  ಇರುವುದಿಲ್ಲ. ಆದುದರಿಂದ ಸಹಸಾಧಕರು, ಇತರ ಯೋಗಮಾರ್ಗದಲ್ಲಿನ ಸಾಧಕರು, ಪ್ರಸಂಗ, ಪರಿಸ್ಥಿತಿ, ಇತರರಿಂದ ಕಲಿಯುವ ವೃತ್ತಿ ಕಡಿಮೆಯಿರುತ್ತದೆ. ಇರುತ್ತದೆ. ಆದುದರಿಂದ ಸತತವಾಗಿ ಸಹಸಾಧಕರು, ಇತರ ಯೋಗಮಾರ್ಗದಲ್ಲಿನ ಸಾಧಕರು, ಪ್ರಸಂಗ, ಪರಿಸ್ಥಿತಿ, ಇತರರಿಂದ ಕಲಿಯುವ ಪ್ರಯತ್ನವಾಗುತ್ತದೆ.
೧೨. ಶಿಷ್ಯ
೧೨ ಅ. ಅವಸ್ಥೆ ಪ್ರಾಥಮಿಕ ಉಚ್ಚ
೧೨ ಆ. ಮಾನಸಿಕತೆ ಸಂಕುಚಿತ ವ್ಯಾಪಕ
೧೨ ಇ. ಸ್ವಾವಲಂಬಿ/ಪರಾವಲಂಬಿ ಪರಾವಲಂಬಿ ಸ್ವಾವಲಂಬಿ
೧೨ ಈ. ಸೂಕ್ಷ್ಮದಲ್ಲಿನ ಅರಿಯುವ ಕ್ಷಮತೆ ಅಲ್ಪ ಹೆಚ್ಚು
೧೩. ಆಧ್ಯಾತ್ಮಿಕ ಉನ್ನತಿಯ ವೇಗ ನಿಧಾನ ಬೇಗ
೧೪. ಪ್ರಾಪ್ತಿ ಮುಕ್ತಿ ಮೋಕ್ಷ

ಸಾಧಕರಿಗೆ ಸಾಂಪ್ರದಾಯಿಕ ಸಾಧನೆಗನುಸಾರ ಗುರುಮಂತ್ರವನ್ನು ನೀಡದೇ ಗುರುಕೃಪಾಯೋಗಾನುಸಾರ ಸಾಧನೆಯನ್ನು ಮಾಡುವ ಶಿಕ್ಷಣವನ್ನು ನೀಡುವ ಪರಾತ್ಪರ ಗುರು ಡಾ. ಆಠವಲೆಯವರ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳು.

-ಕು. ಮಧುರಾ ಭೋಸಲೆ (ಸೂಕ್ಷ್ಮದಿಂದ ದೊರೆತ ಜ್ಞಾನ), ಸನಾತನ ಆಶ್ರಮ, ರಾಮನಾಥಿ, ಗೋವಾ. ೧೦.೧೦.೨೦೧೭, ರಾತ್ರಿ ೧೧.೧೫)

Leave a Comment