ಹನುಮಂತನ ಉಪಾಸನೆಯಿಂದ ತನು-ಮನ-ಧನವನ್ನು ಅರ್ಪಿಸುವ ಸಿದ್ಧತೆ ಮಾಡಿ ಹಿಂದೂ ರಾಷ್ಟ್ರದ ಮುಂಜಾವಿಗಾಗಿ ಎಡೆಬಿಡದೆ ಪ್ರಯತ್ನಿಸಿ !

ಮನೋವೇಗದಿಂದ ಹೋಗುವ, ವಾಯುವಿನಂತೆ ವೇಗವುಳ್ಳ, ಜಿತೇಂದ್ರಿಯ, ಬುದ್ಧಿ ವಂತರಲ್ಲಿ ಶ್ರೇಷ್ಠ, ವಾಯುಪುತ್ರ, ವಾನರ ಸಮುದಾಯದ ಅಧಿಪತಿ ಮತ್ತು ಶ್ರೀರಾಮನ ದೂತ, ಇಂತಹ ಮಾರುತಿಗೆ ನಾನು ಶರಣಾಗಿದ್ದೇನೆ.

ಅನೇಕ ದೈವೀ ಗುಣಗಳಿಂದ ಸಂಪನ್ನ ಮತ್ತು ಪ್ರಭು ಶ್ರೀರಾಮಚಂದ್ರನ ದಾಸನಾಗಿರುವ ಮಹಾಬಲಿ ಹನುಮಾನ !

ಅಷ್ಟಾವಧಾನಿ ವ್ಯಕ್ತಿತ್ವವಿರುವ ಹನುಮಂತನ ಚರಣಗಳಲ್ಲಿ ಕೃತಜ್ಞತಾ ಭಾವದಿಂದ ನತಮಸ್ತಕರಾಗಿ ತನ್ನ, ಕುಟುಂಬದ, ಸಮಾಜದ, ರಾಷ್ಟ್ರದ, ಧರ್ಮದ ಮತ್ತು ಅಖಿಲ ವಿಶ್ವದ ಉದ್ಧಾರ ಮಾಡಲು ಕಳಕಳಿಯಿಂದ ಪ್ರಾರ್ಥನೆ ಮಾಡೋಣ !

ಮಾರುತಿ

ಸರ್ವಶಕ್ತಿವಂತ, ಮಹಾಪರಾಕ್ರಮಿ, ಜಿತೇಂದ್ರಿಯ, ಬ್ರಾಹ್ಮತೇಜ ಮತ್ತು ಕ್ಷಾತ್ರತೇಜದ ಪ್ರತೀಕ ಶ್ರೀ ಹನುಮಂತನ ಬಗ್ಗೆ ಮಾಹಿತಿಯನ್ನು ನೀಡಿದ್ದೇವೆ.

ಪಂಚಮುಖಿ ಮಾರುತಿ

ಐದು ರಾಕ್ಷಸರನ್ನು ಒಂದೇ ಸಮಯದಲ್ಲಿ ನಾಶ ಮಾಡದೇ ಮಹಿರಾವಣನ ಮರಣವಿಲ್ಲವೆಂದು, ಆ ಐದು ರಾಕ್ಷಸರನ್ನು ಒಂದೇ ಸಮಯದಲ್ಲಿ ಕೊಲ್ಲಲು ಮಾರುತಿಯು ಪಂಚಮುಖಿ ರೂಪವನ್ನು ಧರಿಸಿದನು.

ಮಾರುತಿಗೆ ತೆಂಗಿನಕಾಯಿಯನ್ನು ಏಕೆ ಮತ್ತು ಹೇಗೆ ಅರ್ಪಿಸಬೇಕು?

ತೆಂಗಿನಕಾಯಿಯನ್ನು ಅರ್ಪಿಸುವಾಗ ಅದರ ಜುಟ್ಟನ್ನು ಮಾರುತಿಯ ಕಡೆಗೆ ತಿರುಗಿಸಿ, ಮಾರುತಿಯ ಸಾತ್ತ್ವಿಕ ಸ್ಪಂದನಗಳು ತೆಂಗಿನಕಾಯಿಯಲ್ಲಿ ಬರುವಂತೆ ಪ್ರಾರ್ಥಿಸಬೇಕು.

ಶನಿಕಾಟ ನಿವಾರಣೆಗೆ ಮಾರುತಿಯ ಉಪಾಸನೆ ಹೇಗೆ ಮಾಡಬೇಕು?

ಮಾರುತಿ ದೇವಸ್ಥಾನದ ಸಮೀಪದಲ್ಲಿ ಎಣ್ಣೆಯನ್ನು ಮಾರುತ್ತಿರುವವರಿಂದ ಎಣ್ಣೆಯನ್ನು ತೆಗೆದುಕೊಳ್ಳದೇ ಮನೆಯಿಂದಲೇ ಎಣ್ಣೆಯನ್ನು ತೆಗೆದುಕೊಂಡು ಹೋಗಿ ಅರ್ಪಿಸಬೇಕು.

ಅವಿವಾಹಿತರಿಗೆ ಬ್ರಹ್ಮಚಾರಿ ಮಾರುತಿಯ ಉಪಾಸನೆ ಮಾಡಲು ಏಕೆ ಹೇಳುತ್ತಾರೆ?

ಮಾರುತಿಗೆ ಹರಕೆ ಹೊತ್ತರೆ ನಿಶ್ಚಿತವಾಗಿಯೂ ಫಲಪ್ರಾಪ್ತಿಯಾಗುತ್ತದೆ ಎಂಬ ಶ್ರದ್ಧೆ ಇರುವುದರಿಂದ ಬಹುಮಂದಿ ಸ್ತ್ರೀ-ಪುರುಷರು ವ್ರತ ಅಥವಾ ಹರಕೆಯೆಂದು ಮಾರುತಿಗೆ ಪ್ರತಿದಿನ ನಿರ್ದಿಷ್ಟ ಸಂಖ್ಯೆಯಲ್ಲಿ ಪ್ರದಕ್ಷಿಣೆಗಳನ್ನು ಹಾಕುತ್ತಾರೆ.