ಶನಿಕಾಟ ನಿವಾರಣೆಗೆ ಮಾರುತಿಯ ಉಪಾಸನೆ ಹೇಗೆ ಮಾಡಬೇಕು?

ಶನಿಕಾಟವಿದ್ದಾಗ ತೊಂದರೆಗಳ ನಿವಾರಣೆಗಾಗಿ ಮಾರುತಿಯನ್ನು ಪೂಜಿಸುತ್ತಾರೆ. ಈ ಪೂಜಾವಿಧಿಯು ಮುಂದಿನಂತಿದೆ

ಬಟ್ಟಲಿನಲ್ಲಿ ಎಣ್ಣೆಯನ್ನು ತೆಗೆದುಕೊಂಡು ಅದರಲ್ಲಿ ಹದಿನಾಲ್ಕು ಕಪ್ಪು ಉದ್ದಿನ ಕಾಳುಗಳನ್ನು ಹಾಕಿ ಅದರೊಳಗೆ ತಮ್ಮ ಪ್ರತಿಬಿಂಬವನ್ನು ನೋಡಬೇಕು. ನಂತರ ಆ ಎಣ್ಣೆಯನ್ನು ಮಾರುತಿಗೆ ಅರ್ಪಿಸಬೇಕು. ಕಾಯಿಲೆಯಿರುವ ವ್ಯಕ್ತಿಯು ಮಾರುತಿಯ ದೇವಸ್ಥಾನಕ್ಕೆ ಹೋಗಲು ಸಾಧ್ಯವಿಲ್ಲದಿದ್ದರೆ, ಇದೇ ರೀತಿ ಮಾಡಬಹುದು. ಎಣ್ಣೆಯಲ್ಲಿ ಮುಖದ ಪ್ರತಿಬಿಂಬವು ಬಿದ್ದಾಗ ಕೆಟ್ಟಶಕ್ತಿಯ ಪ್ರತಿಬಿಂಬವೂ ಬೀಳುತ್ತದೆ. ಈ ಎಣ್ಣೆಯನ್ನು ಮಾರುತಿಗೆ ಅರ್ಪಿಸಿದಾಗ ಅದರಲ್ಲಿದ್ದ ಕೆಟ್ಟಶಕ್ತಿಯು ನಾಶವಾಗುತ್ತದೆ.

ನಿಜವಾದ ಗಾಣಿಗನು ಶನಿವಾರ ಎಣ್ಣೆಯನ್ನು ಮಾರುವುದಿಲ್ಲ; ಏಕೆಂದರೆ ಯಾವ ಶಕ್ತಿಯ ತೊಂದರೆಯಿಂದ ಬಿಡುಗಡೆ ಹೊಂದಲು ವ್ಯಕ್ತಿಯು ಮಾರುತಿಗೆ ಎಣ್ಣೆಯನ್ನು ಅರ್ಪಿಸುತ್ತಾನೋ, ಆ ಶಕ್ತಿಯು ಆ ಎಣ್ಣೆಯನ್ನು ಮಾರುವವನಿಗೆ ತೊಂದರೆ ಕೊಡುವ ಸಾಧ್ಯತೆಯಿರುತ್ತದೆ; ಆದುದರಿಂದ ಮಾರುತಿ ದೇವಸ್ಥಾನದ ಸಮೀಪದಲ್ಲಿ ಎಣ್ಣೆಯನ್ನು ಮಾರುತ್ತಿರುವವರಿಂದ ಎಣ್ಣೆಯನ್ನು ತೆಗೆದುಕೊಳ್ಳದೇ ಮನೆಯಿಂದಲೇ ಎಣ್ಣೆಯನ್ನು ತೆಗೆದುಕೊಂಡು ಹೋಗಿ ಅರ್ಪಿಸಬೇಕು.

(ಹಲವು ಉಪಾಸನೆಗಳಲ್ಲಿ ಒಂದು ಉಪಾಸನೆಯನ್ನು ಕೊಡಲಾಗಿದೆ.)

(ಆಧಾರ: ಸನಾತನ ಸಂಸ್ಥೆ ನಿರ್ಮಿಸಿದ ಕಿರುಗ್ರಂಥ ‘ಮಾರುತಿ)   

1 thought on “ಶನಿಕಾಟ ನಿವಾರಣೆಗೆ ಮಾರುತಿಯ ಉಪಾಸನೆ ಹೇಗೆ ಮಾಡಬೇಕು?”

Leave a Comment