ಮಾರುತಿಗೆ ತೆಂಗಿನಕಾಯಿಯನ್ನು ಏಕೆ ಮತ್ತು ಹೇಗೆ ಅರ್ಪಿಸಬೇಕು?

ತೆಂಗಿನಕಾಯಿಯು ಒಳ್ಳೆಯ ಹಾಗೂ ಕೆಟ್ಟ ಹೀಗೆ ಎರಡೂ ತರಹದ ಲಹರಿಗಳನ್ನು ಆಕರ್ಷಣೆ ಮತ್ತು ಪ್ರಕ್ಷೇಪಣೆ ಮಾಡುತ್ತದೆ. ತೆಂಗಿನಕಾಯಿಯನ್ನು ಅರ್ಪಿಸುವಾಗ ಅದರ ಜುಟ್ಟನ್ನು ಮಾರುತಿಯ ಕಡೆಗೆ ತಿರುಗಿಸಿ, ಮಾರುತಿಯ ಸಾತ್ತ್ವಿಕ ಸ್ಪಂದನಗಳು ತೆಂಗಿನಕಾಯಿಯಲ್ಲಿ ಬರುವಂತೆ ಪ್ರಾರ್ಥಿಸಬೇಕು. ಅನಂತರ ತೆಂಗಿನಕಾಯಿಯನ್ನು ಒಡೆದು ಅದರ ಅರ್ಧಭಾಗವನ್ನು ನಮ್ಮಲ್ಲಿಟ್ಟುಕೊಂಡು ಉಳಿದ ಅರ್ಧ ಭಾಗವನ್ನು ಅಲ್ಲಿನ ಸ್ಥಾನದೇವತೆಗೆ ಅರ್ಪಿಸಬೇಕು. ಇದರಿಂದ ಸ್ಥಾನದೇವತೆಯ ಮಾಧ್ಯಮದಿಂದ ದೇವಸ್ಥಾನದ ಪರಿಸರದಲ್ಲಿರುವ ತೊಂದರೆದಾಯಕ ಶಕ್ತಿ ಮತ್ತು ಕನಿಷ್ಟ ಭೂತಗಳಿಗೆ ಅನ್ನವು ದೊರಕಿ ಅವುಗಳೂ ಸಂತುಷ್ಟವಾಗುತ್ತವೆ. ನಂತರ ನಮ್ಮ ಕಡೆಯಿರುವ ತೆಂಗಿನಕಾಯಿಯ ಅರ್ಧಭಾಗವನ್ನು ನಮಗಾಗಿ ಇಟ್ಟುಕೊಳ್ಳಬೇಕು. ಇದರಿಂದ ದೇವತೆಯ ತತ್ತ್ವದ ಅಧಿಕಾಧಿಕ ಲಾಭ ಪಡೆದುಕೊಳ್ಳಬೇಕು.

(ಆಧಾರ: ಸನಾತನ ಸಂಸ್ಥೆ ನಿರ್ಮಿಸಿದ ಕಿರುಗ್ರಂಥ ‘ಮಾರುತಿ’) 

1 thought on “ಮಾರುತಿಗೆ ತೆಂಗಿನಕಾಯಿಯನ್ನು ಏಕೆ ಮತ್ತು ಹೇಗೆ ಅರ್ಪಿಸಬೇಕು?”

Leave a Comment