ಹನುಮಂತನ ಉಪಾಸನೆಯಿಂದ ತನು-ಮನ-ಧನವನ್ನು ಅರ್ಪಿಸುವ ಸಿದ್ಧತೆ ಮಾಡಿ ಹಿಂದೂ ರಾಷ್ಟ್ರದ ಮುಂಜಾವಿಗಾಗಿ ಎಡೆಬಿಡದೆ ಪ್ರಯತ್ನಿಸಿ !

ಚಿರಂಜೀವಿ ಹನುಮಂತನ ಉಪಾಸನೆಯಿಂದ ಶೂರವೀರ ಮಾವಳೆಯರಂತೆ ತನು-ಮನ-ಧನವನ್ನು ಅರ್ಪಿಸುವ ಸಿದ್ಧತೆ ಮಾಡಿ ಹಿಂದೂ ರಾಷ್ಟ್ರದ ಮುಂಜಾವಿಗಾಗಿ ಎಡೆಬಿಡದೆ ಪ್ರಯತ್ನಿಸಿ !

ಪ.ಪೂ. ಪಾಂಡೆ ಮಹಾರಾಜರು

೧. ಸಮರ್ಥ ರಾಮದಾಸ ಸ್ವಾಮಿಯವರು ಅಲ್ಲಲ್ಲಿ ಮಾರುತಿಯ ಸ್ಥಾಪನೆ ಮಾಡಲು ಕಾರಣಗಳು ಮತ್ತು ಅದರಿಂದಾದ ಲಾಭಗಳು !

೧ ಅ. ಹನುಮಂತನ ಗುಣವು ಜನಸಾಮಾನ್ಯರ ಮನಸ್ಸಿನಲ್ಲಿ ಮತ್ತು ಆಚರಣೆಯಲ್ಲಿ ಬರಲಿ ! : ಹನುಮಂತನು ಚಿರಂಜೀವಿಯಾಗಿದ್ದಾನೆ. ಅವನು ಕ್ಷಾತ್ರತೇಜ ಮತ್ತು ಬ್ರಾಹ್ಮತೇಜಯುಕ್ತನಾಗಿದ್ದಾನೆ, ಅದೇ ರೀತಿ ಅವನಲ್ಲಿ ದಾಸ್ಯಭಾವವೂ ಇದೆ. ಮಾರುತಿಯು ದುಷ್ಟ ಶಕ್ತಿಗಳ ಸಂಹಾರಕನಾಗಿದ್ದಾನೆ. ಹನುಮಂತನ ಈ ಗುಣವು ಜನಸಾಮಾನ್ಯರ ಮನಸ್ಸಿನಲ್ಲಿ ಮತ್ತು ಆಚರಣೆಯಲ್ಲಿ ಬರಲೆಂದು ಸಮರ್ಥ ರಾಮದಾಸಸ್ವಾಮಿಯವರು ಅಲ್ಲಲ್ಲಿ ಮಾರುತಿಯ ಸ್ಥಾಪನೆ ಮಾಡಿದರು. ಹಳ್ಳಿಯ ಗಡಿಗಳಲ್ಲಿ ಮಾರುತಿಯ ಸ್ಥಾಪನೆ ಮಾಡಿದರು. ಹಳ್ಳಿಗಳ ಗಡಿಗಳಲ್ಲಿ ಸ್ಥಾಪಿಸಿದ ಹನುಮಂತನ ಮೂರ್ತಿಯಿಂದಾಗಿ ‘ದೇವತೆಗಳು ನಮ್ಮ ರಕ್ಷಣೆಯನ್ನು ಮಾಡುತ್ತಿದ್ದಾರೆ’ ಎಂಬ ಭಾವ ಜನರ ಮನಸ್ಸಿನಲ್ಲಿ ನಿರ್ಮಾಣವಾಯಿತು.

೧ ಆ. ಜನರಲ್ಲಿ ಬಲೋಪಾಸನೆಯ ಪ್ರೇರಣೆ ಜಾಗೃತವಾಗಿ ಮನಸ್ಸಿನ ಸತ್ತ್ವಧಾರಣೆ ನಿರ್ಮಾಣವಾಗಲಿ ! : ಹನುಮಂತನಿಂದ ಶಕ್ತಿ ದೊರೆಯಲು, ಉಪಾಸನೆ ಮತ್ತು ಶಾರೀರಿಕ ಕ್ಷಮತೆ ಹೆಚ್ಚಾಗಲು ಗ್ರಾಮಗ್ರಾಮಗಳಲ್ಲಿ ಗರಡಿಶಾಲೆ ಮತ್ತು ಆಖಾಡಾ ಗಳು ಆರಂಭವಾದವು. ಅದರಿಂದ ಜನರಲ್ಲಿ ಬಲೋಪಾಸನೆಯನ್ನು ಮಾಡುವ ಪ್ರೇರಣೆ ಜಾಗೃತವಾಯಿತು. ಮನಸ್ಸಿನ ಸತ್ತ್ವಧಾರಣೆ ನಿರ್ಮಾಣವಾಗಲು ಸಮರ್ಥ ರಾಮದಾಸ ಸ್ವಾಮಿಯವರು ದಾಸಬೋಧ, ಮನಾಚೆ ಶ್ಲೋಕ, ಮಾರುತಿಸ್ತೋತ್ರದ ಮಾಧ್ಯಮದಿಂದ ಜನರ ಮನಸ್ಸನ್ನು ಸತ್ತ್ವಗುಣಿ ಯಾಗಿಸಲು ಪ್ರಯತ್ನಿಸಿದರು. ಅದರಿಂದ ೭೦೦ ವರ್ಷ ಮೊಘಲರ ರಾಜ್ಯವಿದ್ದರೂ ಹಳ್ಳಿಹಳ್ಳಿಗಳಲ್ಲಿ, ಮನೆಮನೆಗಳಲ್ಲಿ ಸಂಸ್ಕೃತಿ ಉಳಿದಿತ್ತು.

೨. ಸಂಸ್ಕೃತಿ ಮತ್ತು ಧರ್ಮಾಚರಣೆಗಳಿಂದ ದೂರವಾಗಿದ್ದರಿಂದ ಜೀವನದ ಚೈತನ್ಯ ಮತ್ತು ಸತ್ತ್ವಗುಣ ನಶಿಸುವುದು

ಈಗಿನ ಕಾಲದಲ್ಲಿ ಮನೆಮನೆಗಳ ಮೇಲೆ ಪಾಶ್ಚಾತ್ಯ ಸಂಸ್ಕೃತಿಯು ಆಕ್ರಮಣ ಮಾಡಿದೆ. ಧರ್ಮಾಚರಣೆ ಮಾಡುವುದಿಲ್ಲ. ಸಂಸ್ಕೃತಿಯ ಕಗ್ಗೊಲೆಯಾಗುತ್ತಿದೆ. ದೇವತೆ ಮತ್ತು ಧರ್ಮಕಾರ್ಯದ ಅವಹೇಳನ ವಾಗುತ್ತಿದೆ. ಜನತೆಯನ್ನು ಧರ್ಮಾಚರಣೆ ಮಾಡುವುದರಿಂದ ದೂರ ಒಯ್ಯಲಾಗುತ್ತಿದೆ. ಅವರ ಮನಸ್ಸಿನಲ್ಲಿ ಗೊಂದಲ ನಿರ್ಮಿಸಲಾಗುತ್ತಿದೆ. ಸಂಸ್ಕೃತಿ ಮತ್ತು ಧರ್ಮಾಚರಣೆಗಳಿಂದ ದೂರವಾಗಿದ್ದರಿಂದ ಜೀವನದಲ್ಲಿ ಚೈತನ್ಯ ಮತ್ತು ಸತ್ತ್ವಗುಣವು ನಶಿಸುತ್ತಿದೆ.

೩. ಸಾತ್ತ್ವಿಕತೆ ಮತ್ತು ಚೈತನ್ಯದಿಂದಾಗುವ ಕಾರ್ಯ

೩ ಅ. ಸಮರ್ಥರು ಸಮಾಜದಲ್ಲಿ ಚೈತನ್ಯ ಹೆಚ್ಚಿಸಿದ್ದರಿಂದ ಶರೀರ ಮತ್ತು ಮನಸ್ಸಿನಿಂದ ಬಲಿಷ್ಠರಾಗಿದ್ದ ಯುವಕರು ಶಿವಾಜಿ ಮಹಾರಾಜರ ಹಿಂದವೀ ಸ್ವರಾಜ್ಯ ಸ್ಥಾಪನೆಯ ಕಾರ್ಯದಲ್ಲಿ ಸಹಭಾಗಿಯಾಗುವುದು :
ಯವನರ ಕಾಲದಲ್ಲಿ ಧರ್ಮಾಚರಣೆ, ಸಂಸ್ಕೃತಿಯನ್ನು ಜೋಪಾನವಾಗಿಡುವುದರಿಂದ ಚೈತನ್ಯ ಉಳಿದಿತ್ತು. ಆದುದರಿಂದ ಅಸಾಧ್ಯ ಕಾರ್ಯವೂ ಸಾಧ್ಯವಾಗುತ್ತಿತ್ತು; ಏಕೆಂದರೆ ಚೈತನ್ಯವು ನಿಜವಾದ ಕಾರ್ಯ ಮಾಡುತ್ತದೆ. ಚೈತನ್ಯದಿಂದಾಗಿ ಕಾರ್ಯ ಪೂರ್ಣತ್ವಕ್ಕೆ ಹೋಗುತ್ತದೆ. ಚೈತನ್ಯ ಕಡಿಮೆಯಾದರೆ ಕಾರ್ಯದ ವೇಗ ಮತ್ತು ಪರಿಣಾಮವು ಕಡಿಮೆಯಾಗುತ್ತದೆ. ಸಮರ್ಥರು ಸಮಾಜದಲ್ಲಿ ಚೈತನ್ಯ ಹೆಚ್ಚಿಸಲು ಪ್ರಯತ್ನಿಸಿದರು. ಅದರಿಂದಾಗಿ ಶರೀರ ಮತ್ತು ಮನಸ್ಸು ಇವೆರಡೂ ದೃಷ್ಟಿಯಿಂದಲೂ ಬಲಿಷ್ಠರಾಗಿದ್ದ ಯುವಕರು ಛತ್ರಪತಿ ಶಿವಾಜಿ ಮಹಾರಾಜರ ಸೈನ್ಯದಲ್ಲಿ ಸೇರಿಕೊಂಡರು ಮತ್ತು ಮುಷ್ಠಿಯಷ್ಟು ಮಾವಳೆಯವರ ಬಲದಲ್ಲಿ ಛತ್ರಪತಿ ಶಿವಾಜಿ ಮಹಾರಾಜರು ಐದೂ ಬಾದಶಾಹರನ್ನು ನಾಶ ಮಾಡಿ ಹಿಂದವೀ ಸ್ವರಾಜ್ಯವನ್ನು ಸ್ಥಾಪಿಸಿದರು. ಈ ಚೈತನ್ಯದಿಂದಾಗಿ ಮಾವಳೆಯವರಲ್ಲಿ ತನು, ಮನ, ಧನ ಮತ್ತು ಪ್ರಾಣ ಹೀಗೆ ಸರ್ವಸ್ವದ ತ್ಯಾಗ ಮಾಡುವ ಸಿದ್ಧತೆ ನಿರ್ಮಾಣವಾಯಿತು. ಅವರಿಗೆ ಕಠಿಣ ಪ್ರಸಂಗದಲ್ಲಿಯೂ ಧೈರ್ಯದಿಂದ ಹೋರಾಡಲು ಸಾಧ್ಯವಾಯಿತು.

೩ ಆ. ಚೈತನ್ಯ ಮತ್ತು ಸತ್ತ್ವಗುಣ ಇರುವಲ್ಲಿ ಚಿರಂಜೀವಿ ಹನುಮಂತನ ಅಸ್ತಿತ್ವವಿರುವುದು : ತನ್ನಲ್ಲಿ  ಚೈತನ್ಯ ಹೆಚ್ಚಾದರೆ ಕಾರ್ಯ ತನ್ನಿಂದತಾನೇ ಆಗುತ್ತದೆ. ಅದಕ್ಕಾಗಿ ಅಷ್ಟಾಂಗಸಾಧನೆ ಮಾಡಿ ತನು, ಮನ ಮತ್ತು ಧನದ ಅರ್ಪಣೆ ಮಾಡುವ ಮನಸ್ಸಿನ ಸರ್ವೋಚ್ಚ ಧಾರಣೆ ನಿರ್ಮಾಣವಾದರೆ ಯಾವುದೇ ಕಾರ್ಯ ಅಸಾಧ್ಯವೆನಿಸುವುದಿಲ್ಲ. ‘ದೇವರೇ ನನ್ನಿಂದ ಕಾರ್ಯವನ್ನು ಮಾಡಿಸಿಕೊಳ್ಳುತ್ತಿದ್ದಾರೆ’, ಎಂಬ ಭಾವವನ್ನಿಟ್ಟು ಪ್ರಯತ್ನ ಮಾಡಬೇಕು. ‘ನಾನು ಮಾಡುತ್ತೇನೆ’, ಎಂದು ಹೇಳಿದರೆ ಕಾರ್ಯ ಆಗುವುದಿಲ್ಲ, ಆವರಣ ಬರುತ್ತದೆ ಮತ್ತು ಕಾರ್ಯಕ್ಷಮತೆ ಕಡಿಮೆಯಾಗುತ್ತದೆ. ಇದಕ್ಕಾಗಿ ಹೆಚ್ಚೆಚ್ಚು ಪ್ರಮಾಣದಲ್ಲಿ ತನ್ನಲ್ಲಿ ಮತ್ತು ಸಮಾಜದಲ್ಲಿ ಚೈತನ್ಯ ನಿರ್ಮಾಣವಾಗಲು ಪ್ರಯತ್ನ ಮಾಡಬೇಕು. ಹನುಮಂತನು ಚಿರಂಜೀವಿಯಾಗಿದ್ದಾನೆ. ಎಲ್ಲೆಲ್ಲಿ ಚೈತನ್ಯ ಮತ್ತು ಸತ್ತ್ವಗುಣವಿದೆಯೋ ಅಲ್ಲಲ್ಲಿ ಚಿರಂಜೀವಿ ಹನುಮಂತನ ಅಸ್ತಿತ್ವ ಇದ್ದೇ ಇರುತ್ತದೆ. ಅವನೇ ನಮ್ಮ ರಕ್ಷಣೆಯನ್ನು ಮಾಡುತ್ತಿರುತ್ತಾನೆ. ಅವನಲ್ಲಿರುವ ಶಕ್ತಿ ಮತ್ತು ಚೈತನ್ಯದಿಂದ ಆವರಣ ದೂರವಾಗಿ ಚೈತನ್ಯವೃದ್ಧಿಯಾಗುತ್ತದೆ.

೪. ಸಮಾಜ ಧರ್ಮಾಚರಣಿ ಮತ್ತು ಸಾಧನಾನಿರತವಾಗಿ ಹಿಂದೂ ರಾಷ್ಟ್ರದ ಮುಂಜಾವು ಬೇಗನೇ ಬರಲಿ, ಎಂದು ಪರಾತ್ಪರ ಗುರು ಡಾ. ಜಯಂತ ಆಠವಲೆ ಯವರ ವ್ಯಾಪಕ ಸಮಷ್ಟಿ ಕಾರ್ಯಕ್ಕಾಗಿ ವೀರ ಹನುಮಂತನಲ್ಲಿ ಪ್ರಾರ್ಥನೆ !

ವಾತಾವರಣದ ರಜ-ತಮಗಳ ಆವರಣ ಕಡಿಮೆಯಾಗಲು ಸಮಾಜದ ಜನರು ಸಾಧನೆ ಮಾಡ ಬೇಕು, ಅದರಿಂದ ಅವರಲ್ಲಿರುವ ಚೈತನ್ಯ ಹೆಚ್ಚಾಗಿ ಸಾತ್ತ್ವಿಕತೆ ಹೆಚ್ಚಾಗಬೇಕು, ಎಂದು ಸಮಾಜದ ಮನೋಭೂಮಿಕೆ ಸಿದ್ಧಗೊಳಿಸುವ ಮಹತ್ವಪೂರ್ಣ ಮತ್ತು ವ್ಯಾಪಕ ಸಮಷ್ಟಿ ಕಾರ್ಯವನ್ನು ಪರಾತ್ಪರ ಗುರು ಡಾ. ಆಠವಲೆಯವರು ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಮಾಧ್ಯಮದಿಂದ ಮಾಡುತ್ತಿದ್ದಾರೆ. ಈ ಕಾರ್ಯವು ದಿನದಿಂದ ದಿನಕ್ಕೆ ಹೆಚ್ಚಾಗಿ ಸಮಾಜ ಧರ್ಮಾಚರಣಿ ಮತ್ತು ಸಾಧನಾನಿರತವಾಗಬೇಕು, ಸಮಾಜದ ಚೈತನ್ಯ ಹೆಚ್ಚಾಗಿ ಹಿಂದೂ ರಾಷ್ಟ್ರದ ಮುಂಜಾವು ಬೇಗನೇ ಬರಲಿ, ಇದೇ ಆ ಚಿರಂಜೀವಿ ಹನುಮಂತನ ಚರಣಗಳಲ್ಲಿ ಕಳಕಳಿಯಿಂದ ಪ್ರಾರ್ಥನೆ ! ಇಂತಹ ವೀರ ಹನುಮಂತನಿಗೆ ಪ್ರಾರ್ಥನೆ ಮಾಡೋಣ,

ಮನೋಜವಂ ಮಾರುತತುಲ್ಯವೇಗಂ, ಜಿತೇಂದ್ರಿಯಮ್ ಬುದ್ಧಿಮತಾಂ ವರಿಷ್ಠಮ್ |
ವಾತಾತ್ಮಜಂ ವಾನರಯೂಥಮುಖ್ಯಂ, ಶ್ರೀರಾಮ ದೂತಂ ಶರಣಂ ಪ್ರಪದ್ಯೇ ||

ಅರ್ಥ : ಮನೋವೇಗದಿಂದ ಹೋಗುವ, ವಾಯುವಿನಂತೆ ವೇಗವುಳ್ಳ, ಜಿತೇಂದ್ರಿಯ, ಬುದ್ಧಿ ವಂತರಲ್ಲಿ ಶ್ರೇಷ್ಠ, ವಾಯುಪುತ್ರ, ವಾನರ ಸಮುದಾಯದ ಅಧಿಪತಿ ಮತ್ತು ಶ್ರೀರಾಮನ ದೂತ, ಇಂತಹ ಮಾರುತಿಗೆ ನಾನು ಶರಣಾಗಿದ್ದೇನೆ.
– ಪ.ಪೂ. ಪರಶರಾಮ ಮಾಧವ ಪಾಂಡೆ ಮಹಾರಾಜ, ಸನಾತನ ಆಶ್ರಮ, ದೇವದ, ಪನವೇಲ್. ೨೦.೪.೨೦೧೬)

ಆಧಾರ : ಸಾಪ್ತಾಹಿಕ ಸನಾತನ ಪ್ರಭಾತ

Leave a Comment