ರಾಸಾಯನಿಕ, ಸಾವಯವ ಮತ್ತು ನೈಸರ್ಗಿಕ ಕೃಷಿ ಇವುಗಳಲ್ಲಿನ ವ್ಯತ್ಯಾಸ!

Article also available in :

ಸನಾತನದ ‘ಮನೆ ಮನೆಯಲ್ಲಿ ಕೈದೋಟ’ ಅಭಿಯಾನ
ಆಪತ್ಕಾಲದ ಪೂರ್ವತಯಾರಿಯೆಂದು ಪ್ರತಿಯೊಂದು ಮನೆಯಲ್ಲಿ ತರಕಾರಿ, ಹಣ್ಣಿನ ಗಿಡಗಳು ಮತ್ತು ಔಷಧಿ ಸಸ್ಯಗಳನ್ನು ಬೆಳೆಸುವ ಅಭಿಯಾನ – ಸನಾತನದ ‘ಮನೆ ಮನೆಯಲ್ಲಿ ಕೈದೋಟ’ ಅಭಿಯಾನ. ಹೆಚ್ಚಿನ ಮಾಹಿತಿಗಾಗಿ ಮತ್ತು ನಿಮ್ಮ ಮನೆಯಲ್ಲಿಯೂ ಕೈದೋಟ ಹೇಗೆ ಪ್ರಾರಂಭಿಸಬಹುದು ಎಂದು ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ !

 

ಗಿಡಗಳನ್ನು ಬೆಳೆಸಲು ಅವುಗಳಿಗೆ ಗೊಬ್ಬರವನ್ನು ಹಾಕಬೇಕಾಗುತ್ತದೆ ಮತ್ತು ರೋಗ ಹಾಗೂ ಕೀಟಗಳಿಂದ ರಕ್ಷಿಸಲು ಔಷಧಿಗಳನ್ನು ಸಿಂಪಡಿಸಬೇಕಾಗುತ್ತದೆ. ಗಿಡಗಳಿಗೆ ನಾವು ಯಾವ ರೀತಿಯ ಗೊಬ್ಬರ ಮತ್ತು ಔಷಧಿಗಳನ್ನು ಬಳಸುತ್ತೇವೆಯೋ, ಅದರಿಂದ ಕೃಷಿ ರಾಸಾಯನಿಕ, ಸಾವಯವ ಅಥವಾ ನೈಸರ್ಗಿಕ ಎಂಬುದು ನಿರ್ಧರಿತವಾಗುತ್ತದೆ.

ರಾಸಾಯನಿಕ ಕೃಷಿ

ಎರಡನೇ ಮಹಾಯುದ್ಧದ ನಂತರ ವಿದೇಶಗಳಲ್ಲಿ ಕೃಷಿಗಾಗಿ ದೊಡ್ಡ ಪ್ರಮಾಣದಲ್ಲಿ ವಿಷಕಾರಿ ರಾಸಾಯನಿಕಗಳ ಬಳಕೆ ಪ್ರಾರಂಭವಾಯಿತು ಮತ್ತು ಕ್ರಮೇಣ ಭಾರತದಲ್ಲಿಯೂ ಅದರ ಪ್ರಸಾರವಾಯಿತು. ರಾಸಾಯನಿಕ ಕೃಷಿಯಲ್ಲಿ ಮನುಷ್ಯರು ತಯಾರಿಸಿದ ವಿಷಕಾರಿ ರಾಸಾಯನಿಕ ಗೊಬ್ಬರ ಮತ್ತು ಔಷಧಗಳನ್ನು ಬಳಸಲಾಗುತ್ತದೆ. ಇವುಗಳನ್ನು ಉಪಯೋಗಿಸುವುದರಿಂದ ವಾತಾವರಣದ ಮೇಲೆ, ಹಾಗೆಯೇ ನಮ್ಮ ಆರೋಗ್ಯದ ಮೇಲೆಯೂ ಅನೇಕ ಭೀಕರ ದುಷ್ಪರಿಣಾಮಗಳಾಗುತ್ತವೆ. ವಿಷಕಾರಿ ರಾಸಾಯನಿಕ ಗೊಬ್ಬರಗಳನ್ನು ಮತ್ತು ಔಷಧಗಳನ್ನು ದೊಡ್ಡ ದೊಡ್ಡ ಕಾರಖಾನೆಗಳಲ್ಲಿ ತಯಾರಿಸುತ್ತಾರೆ. ಆದುದರಿಂದ ಆಪತ್ಕಾಲದಲ್ಲಿ ಅವು ಸಿಗಲಾರವು, ಹಾಗೆಯೇ ಆರೋಗ್ಯದ ದೃಷ್ಟಿಯಿಂದ ಈ ಪದ್ಧತಿಯು ಅಯೋಗ್ಯವಾಗಿದೆ.

ಸಾವಯವ ಕೃಷಿ

ನಿರುಪಯುಕ್ತ ನೈಸರ್ಗಿಕ ಪದಾರ್ಥಗಳ ಮೇಲೆ ಅನೇಕ ಪ್ರಕ್ರಿಯೆಗಳನ್ನು ಮಾಡಿ ಸಾವಯವ ಗೊಬ್ಬರಗಳನ್ನು ತಯಾರಿಸಲಾಗುತ್ತದೆ. ಕಂಪೋಸ್ಟ್ ಗೊಬ್ಬರ, ಎರೆಹುಳ ಗೊಬ್ಬರ, ಮಾರುಕಟ್ಟೆಯಲ್ಲಿನ ತರಕಾರಿಗಳ ಕಸ, ನಗರಗಳಲ್ಲಿನ ಕಸ, ಕಸಾಯಿಖಾನೆಯ ತ್ಯಾಜ್ಯ, ಪ್ರಾಣಿಗಳ ಎಲುಬಿನ ಚೂರುಗಳು, ಮೀನಿನ ಗೊಬ್ಬರ, ಕೋಳಿಯ ಹಿಕ್ಕೆಗಳು, ಪೇಟೆಯಲ್ಲಿ ಸಿಗುವ ಸಾವಯವ ಗೊಬ್ಬರಗಳು ಸಾವಯವ ಕೃಷಿಗಾಗಿ ಉಪಯೋಗಿಸಲಾಗುವ ಗೊಬ್ಬರಗಳ ಉದಾಹರಣೆಗಳಾಗಿವೆ. ಪೇಟೆಯಲ್ಲಿ ದೊರಕುವ ಎಲ್ಲಕ್ಕಿಂತ ಪ್ರಚಲಿತ ಸಾವಯವ ಗೊಬ್ಬರವೆಂದರೆ ‘ಸ್ಟೆರಾಮೀಲ್’. ಇದರಲ್ಲಿ ಎಲುಬುಗಳ ಪುಡಿಯೂ ಇರುತ್ತದೆ. ‘ಕಂಪೋಸ್ಟ್ ಗೊಬ್ಬರ’ ಎಂದರೆ ಬೇರೆಬೇರೆ ರೀತಿಯ ಕಸವನ್ನು ಒಂದರಮೇಲೊಂದು ಹಾಕಿ ಅದನ್ನು ಕೊಳೆಸಿ ತಯಾರಿಸಿದ ಪದಾರ್ಥ ಎಂದು ಹೇಳಬಹುದು.

ಸಾವಯವ ಕೃಷಿಗಳಲ್ಲಿ ಈ ರೀತಿ ಹೆಚ್ಚು ಪ್ರಕ್ರಿಯೆಯನ್ನು ಮಾಡಿದ ಗೊಬ್ಬರಗಳನ್ನು ಬಳಸುವುದರಿಂದ ಆ ಗೊಬ್ಬರಗಳು ತುಂಬಾ ದುಬಾರಿ ಆಗಿರುತ್ತವೆ, ಹಾಗೆಯೇ ಅವುಗಳಲ್ಲಿ ಆರ್ಸೆನಿಕ್, ಸೀಸಗಳಂತಹ ವಿಷಕಾರಿ ಧಾತುಗಳ ಪ್ರಮಾಣವೂ ಹೆಚ್ಚಿರುತ್ತದೆ. ಈ ಧಾತುಗಳಿಂದ ಶರೀರದ ಮೇಲೆ ದುಷ್ಪರಿಣಾಮವಾಗಬಹುದು. ಈ ಪದ್ಧತಿಯೂ ಪರಾವಲಂಬಿಯಾಗಿರುವುದರಿಂದ ಆಪತ್ಕಾಲಕ್ಕಾಗಿ ಉಪಯುಕ್ತವಾಗಿಲ್ಲ.

ರಾಸಾಯನಿಕ ಕೃಷಿಯ ಭೀಕರ ದುಷ್ಪರಿಣಾಮಗಳು ಗಮನಕ್ಕೆ ಬಂದ ನಂತರ ವಿದೇಶಗಳಲ್ಲಿ ಸಾವಯವ ಕೃಷಿ ಪ್ರಾರಂಭವಾಯಿತು. ಅನಂತರ ಈ ಪದ್ಧತಿಯು ಭಾರತದಲ್ಲಿ ಬಂದಿತು. ಇದು ಮೂಲ ಭಾರತೀಯ ಪದ್ಧತಿಯಲ್ಲ !

ನೈಸರ್ಗಿಕ ಕೃಷಿ

ಪ್ರಾಚೀನ ಕಾಲದಿಂದಲೂ ಭಾರತೀಯರು ನೈಸರ್ಗಿಕ ಕೃಷಿಯನ್ನೇ ಅವಲಂಬಿಸುತ್ತಿದ್ದರು. ಈ ಪದ್ಧತಿಯಲ್ಲಿ ನೈಸರ್ಗಿಕ ಪದಾರ್ಥಗಳ ಮೇಲೆ ಅತ್ಯಲ್ಪ ಪ್ರಕ್ರಿಯೆಯನ್ನು ಮಾಡಲಾಗುತ್ತದೆ. ಆಪತ್ಕಾಲದಲ್ಲಿ ರಾಸಾಯನಿಕ ಅಥವಾ ಸಾವಯವ ಗೊಬ್ಬರಗಳು ದೊರಕುವುದು ಕಠಿಣವಾಗಿದೆ. ನೈಸರ್ಗಿಕ ಕೃಷಿಯು ಸಂಪೂರ್ಣ ಸ್ವಾವಲಂಬಿ ಕೃಷಿಯಾಗಿದ್ದು ಆಪತ್ಕಾಲಕ್ಕಾಗಿ, ಹಾಗೆಯೇ ಇತರ ಸಮಯದಲ್ಲಿಯೂ ಅತ್ಯಂತ ಉಪಯುಕ್ತವಾಗಿದೆ. ನೈಸರ್ಗಿಕ ಪದ್ಧತಿಯಿಂದ ಬೆಳೆಸಿದ ತರಕಾರಿ, ಹಣ್ಣುಗಳು, ಹಾಗೆಯೇ ಔಷಧಿ ವನಸ್ಪತಿಗಳು ಸಂಪೂರ್ಣ ವಿಷರಹಿತ ಮತ್ತು ಆರೋಗ್ಯಕರವಾಗಿರುತ್ತವೆ. ಪದ್ಮಶ್ರೀ ಪುರಸ್ಕಾರದಿಂದ ಸನ್ಮಾನಿತ ಶ್ರೀ. ಸುಭಾಷ ಪಾಳೇಕರ ಇವರು ‘ಸುಭಾಷ ಪಾಳೇಕರ ನೈಸರ್ಗಿಕ ಕೃಷಿ’ ಈ ಕೃಷಿತಂತ್ರವನ್ನು ದೊಡ್ಡ ಪ್ರಮಾಣದಲ್ಲಿ ಪ್ರಸಾರ ಮಾಡಿದರು.ಇದರಲ್ಲಿ ದೇಶಿ ಹಸುವಿನ ಸೆಗಣಿ ಮತ್ತು ಗೊಮೂತ್ರ, ಹಾಗೆಯೇ ಸಹಜವಾಗಿ ದೊರಕುವ ನೈಸರ್ಗಿಕ ವಿಷಯಗಳನ್ನು ಉಪಯೋಗಿಸಿ ಜೀವಾಮೃತ, ಬೀಜಾಮೃತ ಇವುಗಳಂತಹ ಗೊಬ್ಬರ ಮತ್ತು ಔಷಧಿಗಳನ್ನು ತಯಾರಿಸಿ ಉಪಯೋಗಿಸಲಾಗುತ್ತದೆ.’ – ಓರ್ವ ಕೃಷಿತಜ್ಞರು, ಪುಣೆ (೧೭. ೧೧. ೨೦೨೧ )

Leave a Comment