ಚಂದ್ರಾಮೃತ ರಸ (ಮಾತ್ರೆಗಳು)
ಅ. ಗುಣಧರ್ಮ ಮತ್ತು ಆಗಬಹದಾದ ಉಪಯೋಗ
ಇದು ಶ್ವಾಸಕಾಂಗವ್ಯೂಹವನ್ನು ಬಲಪಡಿಸುವ ಔಷಧಿಯಾಗಿದೆ. ರೋಗಗಳಲ್ಲಿನ ಇದರ ಉಪಯೋಗವನ್ನು ಮುಂದೆ ಕೊಡಲಾಗಿದೆ; ಆದರೆ ಪ್ರಕೃತಿ, ಪ್ರದೇಶ, ಋತು ಮತ್ತು ವ್ಯಕ್ತಿಗಿರುವ ಇತರ ರೋಗಗಳಿಗನುಸಾರ ಉಪಚಾರದಲ್ಲಿ ಬದಲಾವಣೆ ಆಗಬಹುದು. ಆದ್ದರಿಂದ ಔಷಧಿಯನ್ನು ವೈದ್ಯರ ಸಲಹೆಗನುಸಾರವೇ ತೆಗೆದುಕೊಳ್ಳಬೇಕು.
| ಉಪಯೋಗ | ಔಷಧಿಯನ್ನು ಸೇವಿಸುವ ಪದ್ಧತಿ | ಅವಧಿ |
|---|---|---|
| ಎಲ್ಲ ರೀತಿಯ ಕೆಮ್ಮು | ದಿನದಲ್ಲಿ 2-3 ಸಲ 1 ರಿಂದ 4 ಮಾತ್ರೆಗಳ ಚೂರ್ಣವನ್ನು 1 ಚಮಚ ಜೇನುತುಪ್ಪದೊಂದಿಗೆ ಬೆರೆಸಿ ನೆಕ್ಕಬೇಕು ಅಥವಾ ಅಷ್ಟೇ ಮಾತ್ರೆಗಳನ್ನು ಮಾತ್ರ ಚೀಪಿ ತಿನ್ನಬೇಕು. | 4-5 ದಿನ |
| ಶ್ವಾಸಕ್ಕೆ ಸಂಬಂಧಿಸಿದ ಎಲ್ಲ ರೋಗಗಳಲ್ಲಿ ಶ್ವಾಸಕಾಂಗವ್ಯೂಹಕ್ಕೆ ಬಲ ನೀಡಲು ಉಪಯುಕ್ತ | ದಿನದಲ್ಲಿ 2-3 ಸಲ 1-2 ಮಾತ್ರೆಗಳ ಚೂರ್ಣವನ್ನು ಅರ್ಧ ಚಮಚ ಜೇನುತುಪ್ಪದೊಂದಿಗೆ ಬೆರೆಸಿ ಅಥವಾ ನೀರಿನೊಂದಿಗೆ ಸೇವಿಸಬೇಕು | 1-3 ತಿಂಗಳು |
ಆ. ಸೂಚನೆ

1. 8 ರಿಂದ 14 ವಯಸ್ಸಿನ ಮಕ್ಕಳು ಹಿರಿಯರ ಅರ್ಧ ಪ್ರಮಾಣದಲ್ಲಿ ಮತ್ತು 3 ರಿಂದ 7 ವಯಸ್ಸಿನ ಮಕ್ಕಳು ಹಿರಿಯರ ಕಾಲು ಪ್ರಮಾಣದಲ್ಲಿ ಔಷಧಿಯ ಚೂರ್ಣವನ್ನು ತೆಗೆದುಕೊಳ್ಳಬೇಕು.
– ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (11.6.2021)
ಮಳೆಗಾಲದಲ್ಲಾಗುವ ನೆಗಡಿ, ಕೆಮ್ಮು, ಜ್ವರ ಇವುಗಳಿಗೆ ಉಪಯುಕ್ತ ಆಯುರ್ವೇದದ ಔಷಧಿಗಳು
ಮಳೆಗಾಲದಲ್ಲಿನ ರೋಗಗಳ ಮೇಲೆ ಉಪಯುಕ್ತ ಆಯುರ್ವೇದದ ಔಷಧಿಗಳು
ಕುಟಜ ಘನವಟಿ (ಮಾತ್ರೆಗಳು)
ಗಂಧರ್ವ ಹರೀತಕೀ ವಟಿ (ಮಾತ್ರೆಗಳು)
ಲಶುನಾದಿ ವಟಿ (ಮಾತ್ರೆ)
ಸೂತಶೇಖರ ರಸ (ಮಾತ್ರೆಗಳು)