ಪುನರ್ನವಾ ಚೂರ್ಣ
ಅ. ಗುಣಧರ್ಮ ಮತ್ತು ಆಗಬಹದಾದ ಉಪಯೋಗ
ಶರೀರಕ್ಕೆ ಪುನಃ ಹೊಸ ಹುರುಪನ್ನು ನೀಡುತ್ತದೆ; ಆದ್ದರಿಂದ ಇದನ್ನು ‘ಪುನರ್ನವಾ’ ಎಂದು ಕರೆಯುತ್ತಾರೆ. ಇದು ತಂಪು ಗುಣಧರ್ಮದ್ದಾಗಿದ್ದು ಕಫ ಮತ್ತು ಪಿತ್ತವನ್ನು ದೂರಗೊಳಿಸುತ್ತದೆ. ರೋಗಗಳಲ್ಲಿನ ಇದರ ಉಪಯೋಗವನ್ನು ಮುಂದೆ ಕೊಡಲಾಗಿದೆ; ಆದರೆ ಪ್ರಕೃತಿ, ಪ್ರದೇಶ, ಋತು ಮತ್ತು ವ್ಯಕ್ತಿಗಿರುವ ಇತರ ರೋಗಗಳಿಗನುಸಾರ ಉಪಚಾರದಲ್ಲಿ ಬದಲಾವಣೆ ಆಗಬಹುದು. ಆದ್ದರಿಂದ ಔಷಧಿಯನ್ನು ವೈದ್ಯರ ಸಲಹೆಗನುಸಾರವೇ ತೆಗೆದುಕೊಳ್ಳಬೇಕು.

| ಉಪಯೋಗ | ಔಷಧಿಯನ್ನು ಸೇವಿಸುವ ಪದ್ಧತಿ | ಅವಧಿ |
|---|---|---|
| 1. ಮಲಬದ್ಧತೆ, ಮೂತ್ರದಲ್ಲಿ ಕಲ್ಲು, ಮೂತ್ರನಾಳದ ರೋಗಗಳು, ಮೂತ್ರಪಿಂಡಗಳ ಕಾರ್ಯ ಸುಧಾರಿಸಲು | 1 ಚಮಚ ಪುನರ್ನವಾ ಚೂರ್ಣ 1 ಬಟ್ಟಲು ಬಿಸಿ ನೀರಿನಲ್ಲಿ ಸೇರಿಸಿ ಎರಡೂ ಸಲ ಊಟಕ್ಕಿಂತ 30 ನಿಮಿಷಗಳ ಮುಂಚೆ ಸೇವಿಸಬೇಲು | 1 ತಿಂಗಳು |
| 2. ಊತ, ಬಾವು | 1 ಚಮಚ ಪುನರ್ನವಾ ಚೂರ್ಣ 1 ಬಟ್ಟಲು ಬಿಸಿ ನೀರಿನಲ್ಲಿ ಸೇರಿಸಿ ದಿನದಲ್ಲಿ 3-4 ಸಲ ಸೇವಿಸಬೇಕು. ಪುನರ್ನವಾ ಚೂರ್ಣವನ್ನು ನೀರಿನಲ್ಲಿ ಬೆರೆಸಿ ಬಾವು ಬಂದಿರುವ ಜಾಗಕ್ಕೆ ಲೇಪಿಸಬೇಕು. 1 ಗಂಟೆಯ ನಂತರ ಉಗುರು ಬೆಚ್ಚಗಿನ ನೀರಿನಿಂದ ಅದನ್ನು ತೊಳೆಯಬೇಕು. | 7 ದಿನ |
ಆ. ಸೂಚನೆ

8 ರಿಂದ 14 ವಯಸ್ಸಿನ ಮಕ್ಕಳು ಹಿರಿಯರ ಅರ್ಧ ಪ್ರಮಾಣದಲ್ಲಿ ಮತ್ತು 3 ರಿಂದ 7 ವಯಸ್ಸಿನ ಮಕ್ಕಳು ಹಿರಿಯರ ಕಾಲು ಪ್ರಮಾಣದಲ್ಲಿ ಔಷಧಿಯ ಚೂರ್ಣವನ್ನು ತೆಗೆದುಕೊಳ್ಳಬೇಕು.
– ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (11.6.2021)
ಮಳೆಗಾಲದಲ್ಲಾಗುವ ನೆಗಡಿ, ಕೆಮ್ಮು, ಜ್ವರ ಇವುಗಳಿಗೆ ಉಪಯುಕ್ತ ಆಯುರ್ವೇದದ ಔಷಧಿಗಳು
ಮಳೆಗಾಲದಲ್ಲಿನ ರೋಗಗಳ ಮೇಲೆ ಉಪಯುಕ್ತ ಆಯುರ್ವೇದದ ಔಷಧಿಗಳು
ಕುಟಜ ಘನವಟಿ (ಮಾತ್ರೆಗಳು)
ಗಂಧರ್ವ ಹರೀತಕೀ ವಟಿ (ಮಾತ್ರೆಗಳು)
ಚಂದ್ರಾಮೃತ ರಸ (ಮಾತ್ರೆಗಳು)
ಲಶುನಾದಿ ವಟಿ (ಮಾತ್ರೆ)