ಪ್ರಕೃತಿಗನುಸಾರ ಬಟ್ಟೆಗಳ ಬಣ್ಣ

Article also available in :

ಸಾಮಾನ್ಯವಾಗಿ ಬಟ್ಟೆಗಳನ್ನು ಖರೀದಿಸುವಾಗ ಇಷ್ಟವಾಗುವಂತಹ ಬಣ್ಣಗಳನ್ನು ಆರಿಸುತ್ತೇವೆ. ಅದೇ ನಮ್ಮ ಆವಶ್ಯಕತೆ ಮತ್ತು ಪ್ರಕೃತಿಗನುಸಾರ ಯಾವ ಬಟ್ಟೆಗಳನ್ನು ಬಳಸಬೇಕು ಹಾಗೂ ಬಟ್ಟೆಯ ಬಣ್ಣವನ್ನು ಆಯ್ಕೆ ಮಾಡಬೇಕು ಎಂಬುವುದರ ಹಿಂದಿರುವ ಆಧ್ಯಾತ್ಮಿಕ ದೃಷ್ಟಿಕೋನವನ್ನು ತಿಳಿದುಕೊಂಡರೆ, ಆ ಬಟ್ಟೆಗಳಿಂದ ನಮಗೆ ಆಧ್ಯಾತ್ಮಿಕ ಸ್ತರದಲ್ಲಿ ಲಾಭವಾಗುತ್ತದೆ.

೧. ಆಯುರ್ವೇದದ ಪ್ರಕಾರ ಪ್ರಕೃತಿ

ಪ್ರಕೃತಿ ಬಟ್ಟೆಯ ಪ್ರಕಾರ ಬಟ್ಟೆಯ ಬಣ್ಣ
೧. ವಾತ ಹತ್ತಿ ಅಥವಾ ರೇಷ್ಮೆ ಕೆಂಪು ಅಥವಾ ಹಳದಿ
೨. ಪಿತ್ತ ಹತ್ತಿ ಬಿಳಿ, ಹಸಿರು ಅಥವಾ ನೀಲಿ
೩. ಕಫ ಉಣ್ಣೆ ಕೆಂಪು

೨. ತ್ರಿಗುಣಗಳಿಗನುಸಾರ ಪ್ರಕೃತಿ

ನಮ್ಮ ಇಷ್ಟಾನಿಷ್ಟಗಳು ನಮ್ಮ ಪ್ರಕೃತಿಗೆ ಅನುಗುಣವಾಗಿರುತ್ತವೆ ಮತ್ತು ಪ್ರಕೃತಿಯು ನಮ್ಮಲ್ಲಿರುವ ಸತ್ತ್ವ, ರಜ ಮತ್ತು ತಮ ಎಂಬ ತ್ರಿಗುಣಗಳ ಮೇಲೆ ಅವಲಂಬಿತವಾಗಿರುತ್ತದೆ.

ಪ್ರಕೃತಿಯಲ್ಲಿನ ಪ್ರಧಾನ ಗುಣ ಪ್ರಕೃತಿಯ ಲಕ್ಷಣ ತೋರಿಸುವ ಗುಣ / ದೋಷ ಇಷ್ಟವಾಗುವ ಬಣ್ಣಗಳು
೧. ಸತ್ತ್ವ ಹೊಂದಾಣಿಕೆ, ನಮ್ರತೆ, ಏಕಾಗ್ರತೆ ಇತ್ಯಾದಿ ಬಿಳಿ, ಹಳದಿ ಮತ್ತು ನೀಲಿ
೨. ರಜ ಧೈರ್ಯಶಾಲಿ, ಸ್ವಾಭಿಮಾನಿ, ಸತತ ಕಾರ್ಯನಿರತ, ಮಹತ್ವಾಕಾಂಕ್ಷಿ ಇತ್ಯಾದಿ ಕೆಂಪು ಮತ್ತು ಕೇಸರಿ
೩. ತಮ ಸಿಡುಕುತನ, ಸಂಕುಚಿತ ಸ್ವಭಾವ, ಲೋಭಿ, ಆಲಸಿ ಇತ್ಯಾದಿ ಬೂದು, ಕಡು ಕೆಂಪು, ನೇರಳೆ ಮತ್ತು ಕಪ್ಪು

ಅ. ಯಾವ ಗುಣದ ಪ್ರಭಾವ ಹೆಚ್ಚಿರುತ್ತದೆಯೋ, ಆ ಗುಣದ ಬಣ್ಣ ಇಷ್ಟವಾಗುತ್ತದೆ.

ಆ. ಆಧ್ಯಾತ್ಮದಲ್ಲಿ ಸತ್ತ್ವಗುಣವು ಆವಶ್ಯಕವಾಗಿದೆ. ವ್ಯಕ್ತಿಯ ಆಧ್ಯಾತ್ಮಿಕ ಉನ್ನತಿ ಹೆಚ್ಚಾದಂತೆ, ಅವನಲ್ಲಿರುವ ಸತ್ತ್ವಗುಣವು ಹೆಚ್ಚಾಗಿ ರಜ-ತಮ ಗುಣಗಳು ಕಡಿಮೆಯಾಗುತ್ತಾ ಹೋಗುತ್ತವೆ. ‘ಅನೇಕದಿಂದ ಏಕಕ್ಕೆ ಸಾಗುವುದು’ ಎಂಬುದೂ ಅಧ್ಯಾತ್ಮದ ಒಂದು ಮುಖ್ಯ ತತ್ತ್ವವಾಗಿದೆ. ವ್ಯಕ್ತಿಯ ಆಧ್ಯಾತ್ಮಿಕ ಉನ್ನತಿಯಾದಂತೆ ‘ಅನೇಕದಿಂದ ಏಕಕ್ಕೆ’ ಸಾಗುತ್ತಾರೆ; ಉದಾ. ವಿವಿಧ ದೇವತೆಗಳ ಉಪಾಸನೆಯಿಂದ ಒಂದು ದೇವತೆಯ ಉಪಾಸನೆಗೆ ಬರುತ್ತಾರೆ. ಇದೇ ತತ್ತ್ವ ಬಟ್ಟೆಗಳಿಗೂ ಅನ್ವಯಿಸುತ್ತದೆ. ಸಾತ್ತ್ವಿಕ ವ್ಯಕ್ತಿಯು ಬಿಳಿ ಅಥವಾ ಅಂತಹ ತಿಳಿ ಬಣ್ಣದ ಬಟ್ಟೆಗಳನ್ನು ಬಳಸುತ್ತಾನೆ, ಆದರೆ ತಮೋಗುಣ ಹೆಚ್ಚಿರುವ ವ್ಯಕ್ತಿಯು ಸಪ್ತವರ್ಣಗಳ ಮತ್ತು ಸಪ್ತವರ್ಣಗಳ ವಿವಿಧ ಮಿಶ್ರಣಗಳಿಂದ ತಯಾರಿಸಲ್ಪಟ್ಟ ಬಟ್ಟೆಗಳನ್ನು ಬಳಸುತ್ತಾನೆ.

೩. ಉದ್ದೇಶಕ್ಕನುಸಾರ ಬಟ್ಟೆಯ ಬಣ್ಣ

ಇದರ ಎರಡು ಉದಾಹರಣೆಗಳನ್ನು ನೋಡೋಣ :

ಅ. ಊಟ ಮಾಡುವುದನ್ನು ಯಜ್ಞಕ್ಕೆ ಸರಿಸಮಾನವೆಂದು ಪರಿಗಣಿಸಲಾಗಿದೆ. ಇದರಲ್ಲಿ ಆಹಾರ ಸೇವಿಸುವುದರ ಮಹತ್ವ ತಿಳಿದು ಬರುತ್ತದೆ. ಬಿಳಿ ಬಣ್ಣವು ಪಾವಿತ್ರ್ಯದ ಸಂಕೇತವಾಗಿದೆ; ಆದ್ದರಿಂದಲೇ ಹಿಂದೆ ಸ್ತ್ರೀಯರು ಅಡುಗೆ ಮಾಡುವಾಗ ಮತ್ತು ಊಟ ಬಡಿಸುವಾಗ ಬಿಳಿ ಬಣ್ಣದ ಸೀರೆಯನ್ನು ಉಡುತ್ತಿದ್ದರು ಮತ್ತು ಪುರುಷರು ಊಟದ ಸಮಯದಲ್ಲಿ ಬಿಳಿ ಪಂಚೆಯನ್ನು ಉಟ್ಟು ಮೈಮೇಲೆ ಉತ್ತರೀಯ ಹೊದ್ದುಕೊಳ್ಳುತ್ತಿದ್ದರು.

ಆ. ಅಂತ್ಯಯಾತ್ರೆಯಲ್ಲಿ ಭಾಗವಹಿಸುವವರು ಬಿಳಿ ಬಣ್ಣದ ಬಟ್ಟೆಗಳನ್ನು ಧರಿಸುತ್ತಾರೆ; ಏಕೆಂದರೆ ಬಿಳಿ ಬಣ್ಣವು ವೈರಾಗ್ಯದ ದರ್ಶಕವಾಗಿದೆ.

೪. ಬಟ್ಟೆಗಳ ಬಣ್ಣಗಳ ಇಷ್ಟಾನಿಷ್ಟಗಳು ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಸ್ತರಗಳಲ್ಲಿ ಇರುವುದು

ಅ. ದೈಹಿಕ ಸ್ತರ

ಯಾವ ಬಣ್ಣಗಳು ಚರ್ಮದ ಬಣ್ಣಕ್ಕೆ ಹೊಂದುವುದಿಲ್ಲವೋ, ಆ ಬಣ್ಣಗಳು ವ್ಯಕ್ತಿಗೆ ಸಾಮಾನ್ಯವಾಗಿ ಇಷ್ಟವಾಗುವುದಿಲ್ಲ. ಉದಾಹರಣೆಗೆ, ಕಪ್ಪು ಬಣ್ಣದ ವ್ಯಕ್ತಿಗೆ ಕೆಂಪು ಬಣ್ಣದ ಬಟ್ಟೆಯು  ಕಾಣಿಸುತ್ತದೆ.

ಆ. ಮಾನಸಿಕ ಸ್ತರ

ಮನಸ್ಸಿನ ವಿವಿಧ ಭಾವಗಳಿಗನುಸಾರ ಬಣ್ಣಗಳ ಇಷ್ಟಾನಿಷ್ಟಗಳು ಬದಲಾಗುತ್ತಿರುತ್ತವೆ. ಈ ಬದಲಾವಣೆಯು ತಾತ್ಕಾಲಿಕವಾಗಿರುತ್ತದೆ. ಇದಕ್ಕೆ ಕೆಲವು ಉದಾಹರಣೆಗಳು ಈ ಕೆಳಗಿನಂತಿವೆ:

೧. ಪ್ರವಾಸಕ್ಕೆ ಹೋಗುವಾಗ ಜನರು ರಂಗುರಂಗಿನ ಬಟ್ಟೆಗಳನ್ನು ಧರಿಸುತ್ತಾರೆ.

೨. ಯೌವನದಲ್ಲಿ ಗುಲಾಬಿ ಬಣ್ಣ ಇಷ್ಟಪಡುವವರ ಪ್ರಮಾಣ ಹೆಚ್ಚಿರುತ್ತದೆ ಮತ್ತು ವಯಸ್ಸಾದಂತೆಲ್ಲಾ ಆ ಬಣ್ಣದ ಮರೆವು ಉಂಟಾಗುತ್ತದೆ.

೩. ಯಾವುದೋ ಇಷ್ಟದ ವ್ಯಕ್ತಿತ್ವದ ಪ್ರಭಾವದಿಂದ ಬಣ್ಣಗಳ ಆಯ್ಕೆ ಬದಲಾಗಬಹುದು. ನಟ-ನಟಿಯರು ಧರಿಸುವ ಬಣ್ಣದ ಬಟ್ಟೆಗಳನ್ನು ಯುವ ಪೀಳಿಗೆಯು ಕೆಲವು ಕಾಲ ‘ಫ್ಯಾಷನ್’ ಎಂದು ಬಳಸುತ್ತದೆ.

೪. ಪಾಕಿಸ್ತಾನವನ್ನು ದ್ವೇಷಿಸುವ ಭಾರತೀಯರಿಗೆ ಹಸಿರು ಬಣ್ಣದ ಬಗ್ಗೆ ಸಿಟ್ಟು ಬರುತ್ತದೆ, ಹಾಗೆಯೇ ಹಿಂದೂಗಳನ್ನು ದ್ವೇಷಿಸುವ ಕೆಲವು ಕೋಮಿನವರಿಗೆ ಕೇಸರಿ ಬಣ್ಣದ ಬಗ್ಗೆ ಸಿಟ್ಟು ಬರುತ್ತದೆ.

ಇ. ಆಧ್ಯಾತ್ಮಿಕ ಮಟ್ಟ

೧. ತ್ರಿಗುಣಗಳಿಗನುಸಾರ ಇರುವ ಪ್ರಕೃತಿಗೆ ತಕ್ಕಂತೆ ಬಣ್ಣಗಳ ಆಯ್ಕೆ ಇರುತ್ತದೆ.

೨. ಸಾಧನೆಯ ಮಟ್ಟಕ್ಕನುಸಾರವೂ ಬಣ್ಣಗಳ ಆಯ್ಕೆ ಬದಲಾಗುತ್ತದೆ. ಸಾಧಕನು ಭಾವದ ಸ್ತರದಲ್ಲಿದ್ದಾಗ ಅವನಿಗೆ ನೀಲಿ ಬಣ್ಣ ಇಷ್ಟವಾಗುತ್ತದೆ. ಸಾಧಕನು ಚೈತನ್ಯದ ಸ್ತರದಲ್ಲಿದ್ದಾಗ ಅವನಿಗೆ ಹಳದಿ ಬಣ್ಣ ಇಷ್ಟವಾಗುತ್ತದೆ. ಮುಂದೆ ಅವನು ಶಾಂತಿಯ ಸ್ತರಕ್ಕೆ ತಲುಪಿದಾಗ ಅವನಿಗೆ ಬಿಳಿ ಬಣ್ಣ ಇಷ್ಟವಾಗುತ್ತದೆ.
– ಸೌ. ಜಾಹ್ನವಿ ಶಿಂದೆ, ಚಿತ್ರಕಾರ-ಸಾಧಕಿ, ಸನಾತನ ಸಂಸ್ಥೆ.

೫. ಬಟ್ಟೆಯ ಬಣ್ಣ ಆಯ್ಕೆ ಮಾಡುವ ಹಿಂದಿರುವ ಸಾಮಾನ್ಯ ಆಧ್ಯಾತ್ಮಿಕ ದೃಷ್ಟಿಕೋನ

ಬಟ್ಟೆಯ ಬಣ್ಣವು ಸಾತ್ತ್ವಿಕವಾಗಿರಬೇಕು. ಬಿಳಿ, ಹಳದಿ, ನೀಲಿ ಮತ್ತು ಅವುಗಳಂತಹ ಸಾತ್ತ್ವಿಕ ಬಣ್ಣದ ಬಟ್ಟೆಗಳನ್ನು ಆರಿಸಬೇಕು.

ಅ. ಬಟ್ಟೆಯ ಬಣ್ಣವು ಗಾಢವಾಗಿರಬಾರದು

ಗಾಢವಾದ ಬಣ್ಣವು ತಮೋಗುಣದ ಲಕ್ಷಣವಾಗಿದೆ. ಗಾಢವಾದ ಬಣ್ಣದ ಬಟ್ಟೆ ಧರಿಸುವವನು ಕಾಲಕ್ರಮೇಣ ತಮೋಗುಣಿಯಾಗುತ್ತಾನೆ.

ಆ. ಬಟ್ಟೆಗಳು ಒಂದೇ ಬಣ್ಣದ್ದಾಗಿರಬೇಕು

ಒಂದೇ ರೀತಿಯ ಆಧ್ಯಾತ್ಮಿಕ ಬಣ್ಣದ ವಸ್ತ್ರವು ಹೆಚ್ಚು ಪ್ರಮಾಣದಲ್ಲಿ ಪಾರದರ್ಶಕತೆಯನ್ನು ತೋರಿಸುವುದರಿಂದ, ಅದು ಆಧ್ಯಾತ್ಮಿಕ ದೃಷ್ಟಿಯಿಂದ ಹೆಚ್ಚು ಸಾತ್ತ್ವಿಕ ಎಂದು ತಿಳಿಯಬಹುದು.

ಇ. ಬಟ್ಟೆಯ ಬಣ್ಣಗಳು ಪರಸ್ಪರ ಪೂರಕವಾಗಿರಲಿ

ಎರಡು ಬೇರೆ ಬೇರೆ ಬಣ್ಣದ ಬಟ್ಟೆಗಳನ್ನು ಧರಿಸುವುದಿದ್ದರೆ, ಆ ಬಣ್ಣಗಳು ಪರಸ್ಪರ ಪೂರಕವಾಗಿರಬೇಕು ಅಂದರೆ ಕನಿಷ್ಠಪಕ್ಷ ಶೇ. ೨೦ ರಷ್ಟು ಒಂದಕ್ಕೊಂದು ಹೊಂದಾಣಿಕೆಯಾಗುವಂತಿರಬೇಕು. ಉದಾಹರಣೆಗೆ, ಎರಡು ಸಾತ್ತ್ವಿಕ ಬಣ್ಣಗಳ ಜೋಡಿಯು ಆಧ್ಯಾತ್ಮಿಕ ದೃಷ್ಟಿಯಿಂದ ಹೆಚ್ಚು ಯೋಗ್ಯವಾಗಿರುತ್ತದೆ. ಅಂತಹ ಜೋಡಿಗಳಿಗೆ ಉದಾಹರಣೆಗಳು: ೧. ಬಿಳಿ ಮತ್ತು ತಿಳಿ ನೀಲಿ ೨. ಕಡು ನೀಲಿ ಮತ್ತು ತಿಳಿ ನೀಲಿ

ಈ. ಬಟ್ಟೆಯ ಎರಡು ಬಣ್ಣಗಳ ನಡುವ ಅಸಂಗತತೆ ಇರಬಾರದು

ಒಟ್ಟಿಗೆ ಇರುವ ಎರಡು ಬಣ್ಣಗಳಲ್ಲಿ ಅಸಂಗತತೆ ಇದ್ದರೆ ಅಯೋಗ್ಯ ಸ್ಪಂದನಗಳು ನಿರ್ಮಾಣವಾಗುತ್ತವೆ; ಆದ್ದರಿಂದ ಬಟ್ಟೆಯ ಎರಡು ಬಣ್ಣಗಳಲ್ಲಿ ಅಸಂಗತತೆ ಇರಬಾರದು. ಉದಾಹರಣೆಗೆ, ಹಳದಿ (ಸಾತ್ತ್ವಿಕ) ಮತ್ತು ಹಸಿರು (ರಾಜಸಿಕ) ಜೋಡಿ ಬೇಡ. ಹಸಿರು ಬಣ್ಣದಲ್ಲಿ ಹಳದಿ ಬಣ್ಣದ ಕಡೆಗೆ ಒಲವಿರುವ ಛಾಯೆ ಇದ್ದರೆ ನಡೆಯುತ್ತದೆ; ಏಕೆಂದರೆ ಅದರಲ್ಲಿ ಹಳದಿ ಬಣ್ಣದ ಪ್ರಮಾಣ ಹೆಚ್ಚಿರುವುದರಿಂದ ಆ ಛಾಯೆಯು ಸಾತ್ತ್ವಿಕವೇ ಆಗಿರುತ್ತದೆ.

೬. ರಾಜಸಿಕ ಬಣ್ಣವನ್ನು ಸಾತ್ತ್ವಿಕ ಬಣ್ಣದೊಂದಿಗೆ ಅಲ್ಪ ಪ್ರಮಾಣದಲ್ಲಿ ಬಳಸಿದರೆ ಆ ಬಟ್ಟೆಯಿಂದ ಉತ್ತಮ ಸ್ಪಂದನಗಳು ಬರುವುದು

ಬಿಳಿ ಬಣ್ಣದ ಬಟ್ಟೆಯ ಮೇಲೆ ಒಂದು ವೇಳೆ ಕೆಂಪು ಛಾಯೆಯ ಹೂವಿನ ನಕ್ಷೆ ಇದ್ದರೆ, ಆ ಬಟ್ಟೆಯಿಂದ ಒಟ್ಟಾರೆ ಉತ್ತಮ ಸ್ಪಂದನಗಳು ಹೊರಹೊಮ್ಮುತ್ತವೆ. ಇದರರ್ಥ ಬಟ್ಟೆಯಲ್ಲಿ ಸಾತ್ತ್ವಿಕ ಬಣ್ಣದ ಪ್ರಮಾಣವು ರಾಜಸಿಕ ಬಣ್ಣಕ್ಕಿಂತ ಹೆಚ್ಚಾಗಿದ್ದರೆ, ರಾಜಸಿಕ ಬಣ್ಣದ ಪರಿಣಾಮವು ಕಡಿಮೆಯಾಗುತ್ತದೆ. ಸಂಕ್ಷಿಪ್ತವಾಗಿ ಬಟ್ಟೆಯ ಬಣ್ಣಗಳಿಂದ ಬರುವ ಸ್ಪಂದನಗಳು ‘ಬಟ್ಟೆಯಲ್ಲಿ ಸಾತ್ತ್ವಿಕ ಮತ್ತು ರಾಜಸಿಕ ಬಣ್ಣಗಳನ್ನು ಶೇಕಡಾವಾರು ಎಷ್ಟು ಬಳಸಲಾಗಿದೆ’ ಎಂಬುದರ ಮೇಲೆ ಅವಲಂಬಿತವಾಗಿರುತ್ತವೆ.
– ಸೌ. ಜಾಹ್ನವಿ ಶಿಂದೆ, ಚಿತ್ರಕಾರ-ಸಾಧಕಿ, ಸನಾತನ ಸಂಸ್ಥೆ.

Leave a Comment