ಹಿಂದೂ ಧರ್ಮದಲ್ಲಿ ಬಟ್ಟೆಗಳ ಬಣ್ಣಕ್ಕೂ ವಿಶೇಷ ಮಹತ್ವ ನೀಡಲಾಗಿದೆ.
ಶುಕ್ಲ ಶಾಂತ್ಯರ್ಥ ಜಾಣ । ರಕ್ತಾಸವೇ ವಶೀಕರಣ । ಅಭಿಚಾರೀ ಕೃಷ್ಣವರ್ಣ । ಪೀತವರ್ಣ ಧನಾಗಮೀ ।। – ಶ್ರೀ ಗುರುಗೀತೆ
ಅರ್ಥ: ಬಿಳಿ ಬಣ್ಣವು ಶಾಂತಿಯ ಪ್ರತೀಕವಾಗಿದೆ. ವಶೀಕರಣಕ್ಕಾಗಿ ಕೆಂಪು, ಹಾಗೂ ಕೆಟ್ಟ ಕೃತ್ಯಗಳನ್ನು ಮಾಡಲು ಕಪ್ಪು ಬಣ್ಣವನ್ನು ಬಳಸುತ್ತಾರೆ. ಹಳದಿ ಬಣ್ಣವು ಧನಸಂಪತ್ತಿನ ದರ್ಶಕವಾಗಿದೆ – ಎಂಬ ಶ್ಲೋಕವು ಶ್ರೀ ಗುರುಗೀತೆಯಲ್ಲಿ ಕಂಡುಬರುತ್ತದೆ.
ಋತುಗಳಿಗನುಸಾರ ಬಟ್ಟೆಗಳ ಬಣ್ಣ
| ಋತು | ಬಟ್ಟೆಗಳ ಬಣ್ಣ |
|---|---|
| ೧. ಬೇಸಿಗೆ ಮತ್ತು ಶರತ್ಕಾಲ | ಬಿಳಿ. ಬಿಳಿ ಬಟ್ಟೆಗಳು ಸೂರ್ಯಕಿರಣಗಳನ್ನು ಪರಾವರ್ತಿಸುತ್ತವೆ; ಆದ್ದರಿಂದ ಶರೀರವು ತಂಪಾಗಿರುತ್ತದೆ. |
| ೨. ಮಳೆಗಾಲ | ಬಿಳಿ ಅಥವಾ ಹಳದಿ |
| ೩. ಚಳಿಗಾಲ | ಕೆಂಪು, ಹಳದಿ ಅಥವಾ ಕಪ್ಪು. |
| ೪. ವಸಂತ ಋತು | ಕೆಂಪು ಅಥವಾ ಇತರ ಗಾಢ ಬಣ್ಣಗಳು |
ಇದರ ಹಿಂದಿನ ಅಧ್ಯಾತ್ಮಶಾಸ್ತ್ರ
೧. ಬೇಸಿಗೆ ಮತ್ತು ಶರತ್ಕಾಲ
ಈ ಕಾಲದಲ್ಲಿ ಬ್ರಹ್ಮಾಂಡದಲ್ಲಿ ಉಷ್ಣ ಲಹರಿಗಳ ಸಂಕ್ರಮಣ ಹೆಚ್ಚಿನ ಪ್ರಮಾಣದಲ್ಲಿ ಆಗುತ್ತಿರುವುದರಿಂದ, ಈ ಸಂಕ್ರಮಣದ ಪ್ರವಾಹದಲ್ಲಿ ಅನೇಕ ಪ್ರಕಾರದ ಕೆಟ್ಟ ಶಕ್ತಿಗಳೂ ಬ್ರಹ್ಮಾಂಡ ಮಂಡಲದಲ್ಲಿ ಆಗಮಿಸುತ್ತಿರುತ್ತವೆ. ಈ ಕೆಟ್ಟ ಶಕ್ತಿಗಳ ತೀವ್ರ ಆಗಮನಾತ್ಮಕ ಸಂಚಾರದಿಂದ ರಕ್ಷಣೆಯಾಗಲು ನಿರ್ಗುಣ ಸ್ತರದಲ್ಲಿ ಹೋರಾಡಲು ಸಾಧ್ಯವಾಗುವ ಬಿಳಿ ಬಣ್ಣವನ್ನು ಈ ಕಾಲದಲ್ಲಿ ಉಪಯೋಗಿಸಲಾಗುತ್ತದೆ. ಈ ಸಂಕ್ರಮಣವು ಕೆಟ್ಟ ಶಕ್ತಿಗಳ ಆಗಮನಕ್ಕೆ ಪೂರಕವಾಗಿರುವುದರಿಂದ, ಈ ಕಾಲದಲ್ಲಿ ಆಗಮನದ ಸ್ಥಿತಿಯಲ್ಲಿನ ಕೆಟ್ಟ ಶಕ್ತಿಗಳು ಹೆಚ್ಚು ಪ್ರಮಾಣದಲ್ಲಿ ಅಪ್ರಕಟ ಸ್ಥಿತಿಯಲ್ಲಿರುತ್ತವೆ. ಪ್ರಕಟ ಸ್ಥಿತಿಗಿಂತ ಅಪ್ರಕಟ ಸ್ಥಿತಿಯು ಹೆಚ್ಚು ಸೂಕ್ಷ್ಮ ಮತ್ತು ಅಪಾಯಕಾರಿಯಾಗಿರುವುದರಿಂದ, ಈ ಸೂಕ್ಷ್ಮ ಹಾಗೂ ತಿಳಿಯದ ಆಕ್ರಮಣವನ್ನು ಎದುರಿಸಲು ಬಿಳಿ ಬಣ್ಣವನ್ನು ಉಪಯೋಗಿಸಲಾಗುತ್ತದೆ.
೨. ಮಳೆಗಾಲ
ಮಳೆಗಾಲದಲ್ಲಿ ಬ್ರಹ್ಮಾಂಡದಲ್ಲಿ ಆಪ್ತತ್ತ್ವದ ಸಗುಣ ಲಹರಿಗಳ ಪ್ರವಾಹಾತ್ಮಕ ಪ್ರಾಬಲ್ಯವು ಹೆಚ್ಚಾಗಿರುವುದರಿಂದ, ಈ ಕಾಲದಲ್ಲಿ ಸಗುಣ-ನಿರ್ಗುಣ ಸ್ತರದಲ್ಲಿ ಕಾರ್ಯ ಮಾಡುವ ಅನೇಕ ಕನಿಷ್ಠ ಮತ್ತು ಉಚ್ಚ ದೇವತೆಗಳ ತತ್ತ್ವಗಳ ಆಗಮನವು ಬ್ರಹ್ಮಾಂಡ ಮಂಡಲದಲ್ಲಿ ಹೆಚ್ಚು-ಕಡಿಮೆ ಸ್ತರದಲ್ಲಿ ಆಗುತ್ತಿರುತ್ತದೆ; ಆದ್ದರಿಂದ ಈ ಕಾಲದಲ್ಲಿ ಸಗುಣ-ನಿರ್ಗುಣ ತತ್ತ್ವಗಳ ಪ್ರವಾಹಕ್ಕೆ ಪೂರಕವಾದ ಹಳದಿ ಮತ್ತು ಬಿಳಿ ಬಣ್ಣವನ್ನು ಬಳಸುವ ಪ್ರಮಾಣವು ಹೆಚ್ಚಾಗಿರುತ್ತದೆ. ಆಯಾ ಪರಿಸ್ಥಿತಿಗೆ ಪೂರಕವಾದ ಆಯಾ ಬಣ್ಣಗಳನ್ನು ಬಳಸುವುದರಿಂದ ಆಯಾ ಕಾಲದಲ್ಲಿ ಬ್ರಹ್ಮಾಂಡದಲ್ಲಿ ಸಂಚರಿಸುವ ಅವಸ್ಥೆಯಲ್ಲಿರುವ ಆಯಾ ದೇವತೆಗಳ ತತ್ತ್ವಗಳು ಗ್ರಹಣವಾಗಿ, ಆಯಾ ಕಾಲದಲ್ಲಿ ಜೀವದ ಆಧ್ಯಾತ್ಮಿಕ ಉನ್ನತಿಯು ವೇಗವಾಗಿ ಆಗಲು ಸಾಧ್ಯವಾಗುತ್ತದೆ.
೩. ಚಳಿಗಾಲ
ಚಳಿಗಾಲದಲ್ಲಿ ಶಕ್ತಿರೂಪಿ ಲಹರಿಗಳ ವಾಯುಮಂಡಲದಲ್ಲಿನ ಸಂಕ್ರಮಣವು ಹೆಚ್ಚಾಗುತ್ತದೆ. ಈ ಸಂಕ್ರಮಣದ ಒಲವು ಹೆಚ್ಚು ಪ್ರಮಾಣದಲ್ಲಿ ಘನೀಭೂತವಾಗುವ ಕಡೆಗಿರುತ್ತದೆ. ಕೆಂಪು ಬಣ್ಣವು ಶಕ್ತಿರೂಪಿ ಲಹರಿಗಳ ಘನೀಕರಣದ ಪ್ರಕ್ರಿಯೆಗೆ ಪೂರಕವಾಗಿದೆ, ಆದರೆ ಹಳದಿ ಬಣ್ಣವು ಶಕ್ತಿಯನ್ನು ಚೈತನ್ಯವನ್ನಾಗಿ ರೂಪಾಂತರಿಸಿ ಶಕ್ತಿಯ ಉಚ್ಚ ಸ್ತರದಲ್ಲಿ ಲಾಭವನ್ನು ಮಾಡಿಕೊಡುವುದರಲ್ಲಿ ಅಗ್ರೇಸರವಾಗಿದೆ. ಇದರಿಂದ ಹಳದಿ ಬಣ್ಣದ ಪ್ರಾಬಲ್ಯವೂ ಕೆಂಪು ಬಣ್ಣದೊಂದಿಗೆ ಯಾವಾಗಲೂ ಕಂಡುಬರುತ್ತದೆ; ಏಕೆಂದರೆ ಹಳದಿ ಬಣ್ಣದಲ್ಲಿನ ಸಗುಣರೂಪಿ ಚೈತನ್ಯವು ಸೂಕ್ಷ್ಮ ಸ್ತರದಲ್ಲಿ ಶಕ್ತಿರೂಪಿ ಕಾರ್ಯಕ್ಕೆ ಸತತವಾಗಿ ಚಾಲನೆ ಮತ್ತು ವೇಗವನ್ನು ಒದಗಿಸಿಕೊಡುವುದರಿಂದ ಕೆಂಪು-ಹಳದಿ ಈ ಬಣ್ಣಗಳು ಜೋಡಿಯಾಗಿ ಕಂಡುಬರುತ್ತವೆ; ಆದ್ದರಿಂದ ಅರಿಶಿನ-ಕುಂಕುಮ ಈ ಜೋಡಿಯು ಯಾವಾಗಲೂ ಪೂಜಾವಿಧಿಯಲ್ಲಿ ಲಾಭದಾಯಕವಾಗುತ್ತದೆ.
೪. ವಸಂತ ಋತು
ವಸಂತ ಋತುವಿನಲ್ಲಿ ಬ್ರಹ್ಮಾಂಡ ಮಂಡಲದಲ್ಲಿ ಗರಿಷ್ಠ ಪ್ರಮಾಣದಲ್ಲಿ ದೇವತೆಗಳ ಸಗುಣ ಲಹರಿಗಳು ವಾಸ್ತವ್ಯಕ್ಕೆ ಬರುವುದರಿಂದ, ಈ ಸಗುಣ ಲಹರಿಗಳ ಕಾರ್ಯನಿರತತೆಗೆ ಪೂರಕವಾಗಿರುವ, ಅಂದರೆ ಸಗುಣದ ಆಧಿಕ್ಯವನ್ನು ದರ್ಶಿಸುವ ಕೆಂಪು ಬಣ್ಣವನ್ನು ಬಳಸಿ ಗರಿಷ್ಠ ಪ್ರಮಾಣದಲ್ಲಿ ಸಗುಣ ಲಹರಿಗಳ ಲಾಭವನ್ನು ಪಡೆಯಲು ಸಾಧ್ಯವಾಗುತ್ತದೆ. ಗಾಢ ಬಣ್ಣಗಳೂ ಸಗುಣ ಸ್ತರದಲ್ಲಿ ಅಲ್ಪ ಪ್ರಮಾಣದಲ್ಲಿಯಾದರೂ ಶಕ್ತಿರೂಪಿ ಸ್ಪಂದನಗಳಿಂದ ಆಯಾ ದೇವತೆಯ ತತ್ತ್ವವನ್ನು ಆಕರ್ಷಿಸಲು ಪೂರಕವಾಗಿರುವುದರಿಂದ, ಕೆಂಪು ಬಣ್ಣವು ಲಭ್ಯವಾಗದಿದ್ದರೆ ಅನ್ಯ ಗಾಢ ಬಣ್ಣದ ವಸ್ತ್ರವನ್ನು ಬಳಸಲಾಗುತ್ತದೆ.
ಹಿಂದೂ ಧರ್ಮವು ಋತುಮಾನಕ್ಕನುಗುಣವಾಗಿ, ಅಂದರೆ ಕಾಲದ ಸ್ತರದಲ್ಲಿ ಕಾರ್ಯನಿರತವಾಗಿರುವ ಸೃಷ್ಟಿಚಕ್ರಗಳ ನಿಯಮಗಳಂತೆ ಆಯಾ ಕಾಲದಲ್ಲಿ ಆಯಾ ಸ್ತರದಲ್ಲಿ ಆಧ್ಯಾತ್ಮಿಕ ಲಾಭವನ್ನು ಹೆಚ್ಚು ಹೆಚ್ಚು ಪಡೆಯುವ ದೃಷ್ಟಿಯಿಂದ ಬಣ್ಣಗಳ ಬಳಕೆಯ ಯೋಜನೆಯನ್ನು ಮಾಡಿರುವುದು ಕಂಡುಬರುತ್ತದೆ.
– ಓರ್ವ ವಿದ್ವಾಂಸರು (ಸೌ. ಅಂಜಲಿಯವರ ಮಾಧ್ಯಮದಿಂದ, ಮಾಘ ಕೃಷ್ಣ ಏಕಾದಶಿ, ಕಲಿಯುಗ ವರ್ಷ ೫೧೧೦, ೩.೩.೨೦೦೮)
ಆಭರಣಗಳ ಶುದ್ಧಿ
ಪ್ರಕೃತಿಗನುಸಾರ ಬಟ್ಟೆಗಳ ಬಣ್ಣ
ನಾವು ಧರಿಸುವ ಬಟ್ಟೆಗಳ ಬಣ್ಣದ ಬಗ್ಗೆ ಶಾಸ್ತ್ರಗಳಲ್ಲಿ ಏನು ಹೇಳಲಾಗಿದೆ ?
ದೇವರಿಗೆ ಅರ್ಪಿಸಿದ ಹೂವು ಮತ್ತು ಮಾಲೆಗಳ ಮಹತ್ವ
ಮನಃಶಾಂತಿ ಮತ್ತು ನಿರೋಗಿ ಜೀವನ ಪ್ರದಾನಿಸುವ ಯೋಗವಿದ್ಯೆ !
ಸ್ತ್ರೀಯರ ಕೂದಲಿನ ಬೈತಲೆ ಹೇಗಿರಬೇಕು?