ಅ. ಆಭರಣಗಳ ಸ್ಥೂಲ ಶುದ್ಧಿ
ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ಐದು ನಿಮಿಷ ಅಂಟುವಾಳಕಾಯಿಯ ನೀರಿನಲ್ಲಿ ಮುಳುಗಿಸಿಡಬೇಕು. ಅನಂತರ ಕೈಯಿಂದ ಹಗುರವಾಗಿ ತಿಕ್ಕಿದರೆ ಅವುಗಳ ಮೇಲಿನ ಧೂಳು ಮತ್ತು ಹೊಲಸು ದೂರವಾಗಿ ಆಭರಣಗಳು ಸ್ವಚ್ಛವಾಗುತ್ತವೆ.
ಆ. ಆಭರಣಗಳ ಸೂಕ್ಷ್ಮ ಶುದ್ಧಿ

ಈಗ ಸಾಮಾನ್ಯವಾಗಿ ಎಲ್ಲರಿಗೂ ಹೆಚ್ಜು-ಕಡಿಮೆ ಪ್ರಮಾಣದಲ್ಲಿ ಕೆಟ್ಟ ಶಕ್ತಿಗಳ ತೊಂದರೆಯಿದೆ. ಕೆಟ್ಟ ಶಕ್ತಿಗಳ ತೊಂದರೆಯಿರುವ ವ್ಯಕ್ತಿಗಳು ಧರಿಸಿದ ಆಭರಣಗಳಲ್ಲಿ ಕೆಟ್ಟ ಶಕ್ತಿಗಳು ಕಪ್ಪು ಶಕ್ತಿಯನ್ನು ಸಂಗ್ರಹಿಸಿಡುತ್ತವೆ. ಈ ಕಪ್ಪು ಶಕ್ತಿಯು ಆ ವ್ಯಕ್ತಿಯ ದೇಹದಲ್ಲಿ ಪ್ರಕ್ಷೇಪಿತವಾಗುತ್ತದೆ. ಅಲ್ಲದೇ ಈ ಕಪ್ಪು ಶಕ್ತಿಯಿಂದಾಗಿ ವ್ಯಕ್ತಿಯ ಆಭರಣಗಳನ್ನು ಧರಿಸಿದ ಅವಯವಗಳು ನೋವಾಗಬಹುದು. ಆದುದರಿಂದ ಆಭರಣಗಳನ್ನು ನೋಡುವುದು ಬೇಡವೆನಿಸುತ್ತಿದ್ದರೆ ಅಥವಾ ಆಭರಣ ಧರಿಸಿದಾಗ ತೊಂದರೆಗಳಾಗುತ್ತಿದ್ದರೆ ಆ ಆಭರಣಗಳ ತೊಂದರೆಗಳ ತೀವ್ರತೆಗನುಸಾರ ಮುಂದಿನ ತತ್ತ್ವಗಳಿಂದ ಶುದ್ಧಿಯನ್ನು ಮಾಡಬೇಕು.
೧. ತೇಜತತ್ತ್ವ : ಆಭರಣಗಳಿಗೆ ಎಲ್ಲ ಬದಿಗಳಿಂದ ವಿಭೂತಿ ಹಚ್ಚಬೇಕು.
೨. ವಾಯುತತ್ತ್ವ : ಆಭರಣಗಳ ಮೇಲೆ ವಿಭೂತಿ ಊದಬೇಕು ಅಥವಾ ಸಾತ್ತ್ವಿಕ ಊದುಬತ್ತಿ ಉರಿಸಿ ಅದರ ಧೂಮ ಆಭರಣಗಳ ಮೇಲೆ ಹೋಗುವಂತೆ ಮಾಡಬೇಕು.
೩. ಆಕಾಶತತ್ತ್ವ : ಆಭರಣಗಳನ್ನು ಖಾಲಿ ಪೆಟ್ಟಿಗೆ*ಯಲ್ಲಿಡಬೇಕು
* ಖಾಲಿ ಪೆಟ್ಟಿಗೆಯಲ್ಲಿ ಟೊಳ್ಳು ಇರುತ್ತದೆ. ಟೊಳ್ಳು ನಿರ್ಗುಣ ತತ್ತ್ವದ ಪ್ರತೀಕವಾಗಿದೆ. ನಿರ್ಗುಣ ತತ್ತ್ವದಿಂದ ಕಪ್ಪು ಶಕ್ತಿಯು ನಾಶವಾಗುತ್ತದೆ.
(ಸನಾತನ ನಿರ್ಮಿತ ಗ್ರಂಥ ‘ಸ್ತ್ರೀ-ಪುರುಷರ ಆಭರಣಗಳು’)
ವಿವಾಹಿತ ಸ್ತ್ರೀಯು ಕೊರಳಿನಲ್ಲಿ ಕಂಠಮಣಿ ಮತ್ತು ಹೃದಯದವರೆಗೆ ಉದ್ದವಾದ ಮಂಗಳಸೂತ್ರವನ್ನು ಧರಿಸುವುದರಿಂದ ಆಗುವ ಆಧ್ಯಾತ್ಮಿಕ ಲಾಭ
ಮೂಗುತಿ ಧರಿಸುವುದರಿಂದಾಗುವ ಲಾಭಗಳು
ಸೌಭಾಗ್ಯಾಲಂಕಾರಗಳ ಆಧ್ಯಾತ್ಮಿಕ ಮಹತ್ವ
ಮಂಗಳಸೂತ್ರ
ಭಾವನಾಪ್ರಧಾನತೆ ಹೆಚ್ಚಿರುವ ಸ್ತ್ರೀಯರು ಎಂತಹ ಆಭರಣಗಳನ್ನು ಧರಿಸಬೇಕು ?