ಹಬ್ಬ, ಉತ್ಸವ, ವ್ರತಗಳು ಮಾತ್ರವಲ್ಲ ಪ್ರತಿಯೊಂದು ದಿನಕ್ಕೆ ಸಂಬಂಧಿಸಿದ ಬಣ್ಣದ ಬಟ್ಟೆಗಳನ್ನು ಧರಿಸುವುದರಿಂದ ಆಯಾ ದೇವತೆಯ ತತ್ತ್ವದ ಲಾಭವಾಗುತ್ತದೆ. ಅದು ಹೇಗೆ ಎಂದು ತಿಳಿದುಕೊಳ್ಳೋಣ…
ವಾರದ ಏಳು ದಿನಗಳು, ಸಂಬಂಧಿಸಿದ ದೇವತೆಗಳು ಮತ್ತು ಬಣ್ಣ
ವಾರದ ಏಳು ದಿನಗಳು ಒಂದೊಂದು ದೇವತೆಯ ಉಪಾಸನೆಯ ದಿನಗಳಾಗಿವೆ. ಪ್ರತಿ ದಿನವೂ ವಾತಾವರಣದಲ್ಲಿ ಆ ದಿನಕ್ಕೆ ಸಂಬಂಧಿಸಿದ ದೇವತೆಯ ತತ್ತ್ವವು ಹೆಚ್ಚು ಪ್ರಮಾಣದಲ್ಲಿ ಕಾರ್ಯನಿರತವಾಗಿರುತ್ತದೆ. ಹಬ್ಬ, ಉತ್ಸವ ಮತ್ತು ವ್ರತಗಳ ಸಂದರ್ಭದಲ್ಲೂ ಹೀಗೆಯೇ ಇರುತ್ತದೆ. ಆ ದಿನ ಅವುಗಳಿಗೆ ಸಂಬಂಧಿಸಿದ ದೇವತೆಯ ತತ್ತ್ವವು ಹೆಚ್ಚು ಪ್ರಮಾಣದಲ್ಲಿ ಕಾರ್ಯನಿರತವಾಗಿರುತ್ತದೆ. ಆ ದೇವತೆಯ ತತ್ತ್ವಕ್ಕೆ ನಿಗದಿಪಡಿಸಿದ ಬಣ್ಣದ ಬಟ್ಟೆಗಳನ್ನು ಧರಿಸುವುದರಿಂದ ಸಂಬಂಧಿಸಿದ ದೇವತೆಯ ತತ್ತ್ವವು ಹೆಚ್ಚು ಪ್ರಮಾಣದಲ್ಲಿ ಆಕರ್ಷಿತವಾಗಲು ಸಹಾಯವಾಗುತ್ತದೆ. ಸಹಜವಾಗಿಯೇ ಇಂತಹ ಬಟ್ಟೆಗಳನ್ನು ಧರಿಸುವವರಿಗೆ ದೇವತೆಯ ತತ್ತ್ವದ ಹೆಚ್ಚು ಲಾಭ ದೊರೆಯಲು ಸಾಧ್ಯವಿದೆ.
| ವಾರ | ದೇವತೆ | ಬಟ್ಟೆಯ ಬಣ್ಣ | ಬಣ್ಣವು ಯಾವುದರ ದ್ಯೋತಕ |
|---|---|---|---|
| ಸೋಮವಾರ | ಶಂಕರ | ಬಿಳಿ | ವೈರಾಗ್ಯ |
| ಮಂಗಳವಾರ | ಅ. ಶ್ರೀ ಲಕ್ಷ್ಮಿ ಆ. ಶ್ರೀ ಗಣಪತಿ |
ಹಳದಿ ಸಿಂಧೂರ |
ಚೈತನ್ಯ ಜ್ಞಾನ |
| ಬುಧವಾರ | ಪಾಂಡುರಂಗ | ನೀಲಿ | ಭಕ್ತಿ |
| ಗುರುವಾರ | ದತ್ತ | ತಿಳಿ ಕಂದು | ವಿರಕ್ತಿ |
| ಶುಕ್ರವಾರ | ಪಾರ್ವತಿ / ಶ್ರೀ ಲಕ್ಷ್ಮಿ | ಹಳದಿ ಮಿಶ್ರಿತ ಎಣ್ಣೆಗೆಂಪು | ಬಲವರ್ಧಕ ತೇಜ |
| ಶನಿವಾರ | ಮಾರುತಿ | ಎಣ್ಣೆಗೆಂಪು | ವೇಗತ್ವ |
| ಭಾನುವಾರ | ರವಿ (ಸೂರ್ಯ) | ಕೆಂಪು | ಶಕ್ತಿ |
– ಓರ್ವ ವಿದ್ವಾಂಸರು (ಸೌ. ಅಂಜಲಿ ಗಾಡಗೀಳ ರವರ ಮಾಧ್ಯಮದಿಂದ, ೨೪.೧೨.೨೦೦೬)
ಉಪಾಸ್ಯದೇವತೆಗನುಸಾರ ಉಪಾಸಕರು ಬಳಸಬೇಕಾದ ಬಟ್ಟೆಗಳ ಬಣ್ಣ
| ಉಪಾಸ್ಯದೇವತೆ | ಬಟ್ಟೆಯ ಬಣ್ಣ |
|---|---|
| ೧. ಭಕ್ತಿಮಾರ್ಗಿಗಳ ಉಪಾಸ್ಯದೇವತೆ | |
| ಅ. ಋಷಿ | ಕೇಸರಿ |
| ಆ. ಸರ್ವಸಾಧಾರಣ ಕ್ಷುದ್ರದೇವತೆ | ಕೆಂಪು |
| ಇ. ಅಪ್ಸರೆ, ಯಕ್ಷ ಮತ್ತು ಕಿನ್ನರ ಎಂಬ ಕ್ಷುದ್ರದೇವತೆಗಳು | ಕಿತ್ತಳೆ |
| ಈ. ಉಚ್ಚದೇವತೆ | ಬಿಳಿ ಅಥವಾ ಹಳದಿ |
| ೨. ತಂತ್ರಮಾರ್ಗಿಗಳ (ತಾಂತ್ರಿಕರ) ಉಪಾಸ್ಯದೇವತೆ | |
| ಅ. ಸರ್ವಸಾಧಾರಣ ತಾಂತ್ರಿಕ | ಕಪ್ಪು |
| ಆ. ಮಾಯಾವಿ ಮಾಂತ್ರಿಕ | ಹೊಳೆಯುವ ಹಳದಿ |
| ಇ. ಮೋಹಿನಿ ಮಾಂತ್ರಿಕ | ಗುಲಾಬಿ ಮಿಶ್ರಿತ |
– ಓರ್ವ ವಿದ್ವಾಂಸರು (ಸೌ. ಅಂಜಲಿ ಗಾಡಗೀಳ ರವರ ಮಾಧ್ಯಮದಿಂದ, ಜ್ಯೇಷ್ಠ ಕೃಷ್ಣ ಷಷ್ಠಿ, ಕಲಿಯುಗ ವರ್ಷ ೫೧೧೦, ೨೬.೫.೨೦೦೮)
ಟಿಪ್ಪಣಿ: ತಾಂತ್ರಿಕ ಉಪಾಸಕರ ಬಗ್ಗೆ (ಅಘೋರಿ ಮಾರ್ಗದಲ್ಲಿ ಉಪಾಸನೆ ಮಾಡುವವರ ಬಗ್ಗೆ) ಮಾಹಿತಿ ಕೇವಲ ವಿಷಯದ ಪೂರ್ತಿಗಾಗಿ ನೀಡಲಾಗಿದೆ. ಸರ್ವಸಾಧಾರಣ ಪೂಜಕರಿಗೆ ಈ ಅಂಶ ಅನ್ವಯಿಸುವುದಿಲ್ಲ.
ಆಭರಣಗಳ ಶುದ್ಧಿ
ಬಟ್ಟೆಗಳ ಬಣ್ಣ
ಪ್ರಕೃತಿಗನುಸಾರ ಬಟ್ಟೆಗಳ ಬಣ್ಣ
ದೇವರಿಗೆ ಅರ್ಪಿಸಿದ ಹೂವು ಮತ್ತು ಮಾಲೆಗಳ ಮಹತ್ವ
ಮನಃಶಾಂತಿ ಮತ್ತು ನಿರೋಗಿ ಜೀವನ ಪ್ರದಾನಿಸುವ ಯೋಗವಿದ್ಯೆ !
ಸ್ತ್ರೀಯರ ಕೂದಲಿನ ಬೈತಲೆ ಹೇಗಿರಬೇಕು?