ಶಿಕ್ಷಕ ಮತ್ತು ಗುರು

Article also available in :

ಗುರುಗಳು ದಿನದ ಇಪ್ಪತ್ತನಾಲ್ಕು ಗಂಟೆಯೂ ಶಬ್ದ ಮತ್ತು ಶಬ್ದಾತೀತ ಎಂಬ ಎರಡೂ ಮಾಧ್ಯಮಗಳಿಂದ ಶಿಷ್ಯನಿಗೆ ಸತತವಾಗಿ ಮಾರ್ಗದರ್ಶನ ಮಾಡುತ್ತಿರುತ್ತಾರೆ. ಶಿಷ್ಯನ ಐಹಿಕ ಸುಖದತ್ತ ಗುರುಗಳ ಲಕ್ಷ್ಯವಿರದೆ, ಕೇವಲ ಆಧ್ಯಾತ್ಮಿಕ ಉನ್ನತಿಯತ್ತ ಇರುತ್ತದೆ. ಆದರೆ ಶಿಕ್ಷಕರು ನಿರ್ದಿಷ್ಟ ಸಮಯದವರೆಗೆ ಮಾತ್ರ ಕಲಿಸುತ್ತಾರೆ ಮತ್ತು ವಿದ್ಯಾರ್ಥಿಯಿಂದ ಶುಲ್ಕ (ಫೀ) ಸಿಕ್ಕಿದ ಮೇಲೆ ದೂರವಾಗುತ್ತಾರೆ. ಗುರುಗಳು ನೀಡಿದ ಜ್ಞಾನಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಆದ್ದರಿಂದ ಶಿಷ್ಯನು ಗುರುಗಳಿಗೆ ಸದಾ ಋಣಿಯಾಗಿರುತ್ತಾನೆ. ಶಿಕ್ಷಕ ಮತ್ತು ಗುರುಗಳ ನಡುವಿನ ಇಂತಹ ಇತರ ವ್ಯತ್ಯಾಸಗಳನ್ನು ಮುಂದಿನ ಕೋಷ್ಟಕದಲ್ಲಿ ನೀಡಲಾಗಿದೆ.

‘ಗುರು’ ಎಂಬ ಪರಿಕಲ್ಪನೆಯು ಭಾರತೀಯವಾದೆ. ಪಾಶ್ಚಾತ್ಯ ಭಾಷೆಗಳಲ್ಲಿ ಗುರು ಎಂಬ ಪದಕ್ಕೆ ಸಮಾನಾರ್ಥಕ ಪದವಿಲ್ಲ.

 

ಶಿಕ್ಷಕ ಗುರು
೧. ವೈಶಿಷ್ಟ್ಯ ಸರ್ವಸಾಮಾನ್ಯ ಅಸಾಧಾರಣ
ಅ. ಜ್ಞಾನವು ಇತರರಿಂದ ಪಡೆದಿದ್ದೋ ಅಥವಾ ಸ್ವಂತದ್ದೋ? ಜ್ಞಾನವನ್ನು ಇತರರಿಂದ ಪಡೆದಿರುತ್ತಾರೆ ಸ್ವತಃ ಅನುಭೂತಿಯಿಂದ ಪಡೆದಿರುತ್ತಾರೆ
ಆ. ಜ್ಞಾನದಿಂದ ತನ್ನ ಮೇಲೆ ಉಂಟಾಗುವ ಪರಿಣಾಮ ಜ್ಞಾನವನ್ನು ಪಡೆಯುವುದು ಮತ್ತು ಪಂಡಿತನಾಗುವುದು ಸ್ವತಃ ರೂಪಾಂತರಗೊಳ್ಳುವುದು
ಇ. ತಾತ್ತ್ವಿಕ ಮಾಹಿತಿ ಮತ್ತು ಜೀವನದ ನಡುವಿನ ಸಂಬಂಧ ಯಾವುದನ್ನು ತಿಳಿದಿದ್ದಾರೋ, ಹೆಚ್ಚಾಗಿ ಅದರಂತೆ ಬದುಕದಿರುವುದು ಯಾವುದನ್ನು ತಿಳಿದಿದ್ದಾರೋ, ಅದರಂತೆ ಬದುಕಿ ತೋರಿಸುವುದು
ಈ. ಆಚರಣೆ ನೀತಿಶಾಸ್ತ್ರವನ್ನು ಕಲಿಸುವುದು; ಆದರೆ ಬಹುತೇಕ ಅಂತಹ ಆಚರಣೆ ಇಲ್ಲದಿರುವುದು ನುಡಿದಂತೆ ನಡೆಯುವುದು
ಉ. ಅಹಂಕಾರ ಹೆಚ್ಚುವುದು ಕಡಿಮೆಯಾಗುವುದು
೨. ಕಲಿಸುವುದು
ಅ. ಸಂಬಂಧವು ಯಾವುದರೊಂದಿಗೆ? ಬುದ್ಧಿಯೊಂದಿಗೆ ತಮ್ಮ ಗುರುಗಳೊಂದಿಗೆ ಅಥವಾ ಆತ್ಮದೊಂದಿಗೆ, ಹೃದಯ, ಪ್ರೇಮ
ಆ. ಕಲಿಸುವ ವಿಷಯ ಅ. ಯಾವುದನ್ನು ತಿಳಿದಿದ್ದಾರೋ ಅದು ಅ. ಯಾವುದು ಆವಶ್ಯಕವೋ ಅದು
ಆ. ವ್ಯಾವಹಾರಿಕ ಆ. ಆಧ್ಯಾತ್ಮಿಕ
ಇ. ಕಲಿಸುವ ಸ್ವರೂಪ ಮಾಹಿತಿಯನ್ನು ನೀಡುವುದು ಅನುಭೂತಿಯನ್ನು ನೀಡುವುದು
ಈ. ಶಿಕ್ಷಣದ ಮಹತ್ವ ಅ. ಪ್ರಮಾಣಪತ್ರ ಪಡೆಯುವುದು ಅ. ಎಲ್ಲ ಸಮಸ್ಯೆಗಳ ನಿವಾರಣೆ
ಆ. ಹಣ ಗಳಿಸುವ ಸಾಧನ ಲಭ್ಯವಾಗುವುದು ಆ. ಜನ್ಮ-ಮೃತ್ಯು ಚಕ್ರದಿಂದ ಮುಕ್ತವಾಗುವುದು
ಉ. ಶ್ರದ್ಧೆಯ ಆವಶ್ಯಕತೆ ಇಲ್ಲದಿರುವುದು ಇರುವುದು
೩. ವಿದ್ಯಾರ್ಥಿ / ಶಿಷ್ಯನೊಂದಿಗಿನ ಸಂಬಂಧ
ಅ. ಬುದ್ಧಿಯ ವಿನಿಮಯ ಆಗುವುದು ಇಲ್ಲ
ಗುರುಗಳು ನೀಡುವುದು ಮತ್ತು ಶಿಷ್ಯನು ಸ್ವೀಕರಿಸುವುದು
ಆ. ಸಂಬಂಧದ ಪ್ರಮಾಣ ಅಂಶಮಾತ್ರ ಪರಿಪೂರ್ಣ
ಇ. ಸಂಬಂಧದ ಸ್ವರೂಪ ವಿಷಯಕ್ಕೆ ಸೀಮಿತ, ವೃತ್ತಿಪರ ಸಂಪೂರ್ಣ ಜೀವನದೊಂದಿಗೆ ಸಂಬಂಧ
ಈ. ಸಂಬಂಧದ ಕಾಲಾವಧಿ ಶಿಕ್ಷಣ ನಡೆಯುವವರೆಗೆ ಮಾತ್ರ ಸಂಬಂಧ ಅಖಂಡ, ಸಮಗ್ರ ಮತ್ತು ಸತತ
ಉ. ಮರುಪಾವತಿ ಸಾಧ್ಯ.
ಶಿಕ್ಷಣದ ಬದಲಾಗಿ ಹಣ ನೀಡುವುದು
ಅಸಾಧ್ಯ.
ಗುರುಗಳು ನೀಡುವುದಕ್ಕೆ ಪ್ರತಿಯಾಗಿ ಏನನ್ನೂ ನೀಡಲು ಸಾಧ್ಯವಿಲ್ಲ
ಊ. ಗೌರವದ ಸ್ವರೂಪ ಔಪಚಾರಿಕ ಮನಸ್ಸಿನಿಂದ ಗೌರವಿಸುವುದು
೪. ಪರಿಣಾಮ
ಅ. ಸಂಸ್ಕಾರ ಮನಸ್ಸಿನ ಮೇಲೆ ಸಂಸ್ಕಾರವಾಗುವುದು ಸಂಸ್ಕಾರಗಳಿಂದ ಮುಕ್ತವಾಗುವುದು
ಆ. ಕಲಿಕೆ ಹೊಸತನ್ನು ಕಲಿಯುವುದು ಕಲಿತದ್ದನ್ನು ಮರೆಯಲು ಕಲಿಸುವುದು

– ಸದ್ಗುರು (ಡಾ.) ವಸಂತ ಬಾಳಾಜಿ ಆಠವಲೆ (೧೯೯೦)

Leave a Comment