ಶ್ರೀರಾಮನವಮಿಯ ನಿಮಿತ್ತ ‘ರಾಮನಾಮ ಸಂಕೀರ್ತನ’ ಅಭಿಯಾನ ಆಯೋಜಿಸಿ!

Article also available in :

500 ವರ್ಷಗಳ ಸಂಘರ್ಷದ ನಂತರ ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮನ ದೇವಸ್ಥಾನ ನಿರ್ಮಾಣವಾಗಿದೆ. ಈಗ ನಮ್ಮ ಮುಂದಿನ ಧ್ಯೇಯ ‘ರಾಮರಾಜ್ಯ’ದ ಸ್ಥಾಪನೆ! ರಾಮರಾಜ್ಯದ ವ್ಯಾಪಕ ಧ್ಯೇಯ ಸಾಕಾರಗೊಳಿಸಲು ನಾವು ಸಾಕ್ಷಾತ ಪ್ರಭು ಶ್ರೀರಾಮನ ಆಶೀರ್ವಾದ ಪಡೆದುಕೊಳ್ಳಬೇಕು. ಪ್ರತ್ಯಕ್ಷ ರಾಮರಾಜ್ಯ ಸಾಕಾರವಾಗುವ ಮೊದಲು ಅದು ನಮ್ಮ ಅಂತರ್ಮಮನಸ್ಸಿನಲ್ಲಿ ನಿರ್ಮಾಣವಾಗುವುದು ಆವಶ್ಯಕವಾಗಿದೆ. ಅದಕ್ಕಾಗಿ ಸಚ್ಚಿದಾನಂದ ಪರಬ್ರಹ್ಮ (ಡಾ.) ಜಯಂತ ಆಠವಲೆಯವರು ‘ರಾಮರಾಜ್ಯ’ ಸಾಕಾರವಾಗುವವರೆಗೆ ‘ಶ್ರೀರಾಮ ಜಯ ರಾಮ ಜಯ ಜಯ ರಾಮ |’ ಎಂಬ ನಾಮಜಪ ಮಾಡುವ ದಿಶೆಯನ್ನು ನಮಗೆ ನೀಡಿದ್ದಾರೆ.

ಶ್ರೀ ಗುರುಗಳ ಸಂಕಲ್ಪದ ಹೆಚ್ಚೆಚ್ಚು ಲಾಭ ಪಡೆಯಲು ಮತ್ತು ಶ್ರೀರಾಮತತ್ತ್ವದ ಊರ್ಜೆಯು ಸಮಷ್ಟಿ ಸ್ತರದಲ್ಲಿ ಕಾರ್ಯನಿರತವಾಗಲು 26 ಮಾರ್ಚ್‌ನಿಂದ 2 ಏಪ್ರಿಲ್ 2026 ರ ಕಾಲಾವಧಿಯಲ್ಲಿ ‘ರಾಮನಾಮ ಸಂಕೀರ್ತನ’ ಅಭಿಯಾನವನ್ನು ಆಯೋಜಿಸೋಣ. ‘ರಾಮರಾಜ್ಯ’ ಸ್ಥಾಪನೆಯಾಗಲಿ ಎಂಬ ಮನೋಕಾಮನೆ ಇರುವ ಧರ್ಮನಿಷ್ಠ ಹಿಂದೂಗಳು ಸುತ್ತಮುತ್ತಲಿನ ದೇವಸ್ಥಾನಗಳಲ್ಲಿ ಒಟ್ಟಾಗಿ ಸೇರಿ ‘ಶ್ರೀರಾಮ ಜಯ ರಾಮ ಜಯ ಜಯ ರಾಮ’ ಎಂಬ ಜಪವನ್ನು ಮಾಡುವುದೇ ಈ ಅಭಿಯಾನದ ಸ್ವರೂಪವಾಗಿದೆ. ವಿವಿಧ ಆಧ್ಯಾತ್ಮಿಕ ಸಂಘಟನೆಗಳು, ಸಂಪ್ರದಾಯಗಳು, ಹಿಂದುತ್ವನಿಷ್ಠರು, ಮತ್ತು ಧರ್ಮಪ್ರೇಮಿಗಳು ಕೂಡ ತಮ್ಮ ಪರಿಸರದಲ್ಲಿ ‘ರಾಮನಾಮ ಸಂಕೀರ್ತನ’ ಅಭಿಯಾನವನ್ನು ಆಯೋಜಿಸಬೇಕು.

1. ರಾಮನಾಮ ಸಂಕೀರ್ತನದ ಸ್ವರೂಪ

ರಾಮರಾಜ್ಯಕ್ಕಾಗಿ ಪ್ರಾರ್ಥನೆ : 5 ನಿಮಿಷಗಳು
ಶ್ರೀರಾಮನಾಮದ ಜಪ : 50 ನಿಮಿಷಗಳು
ಹಿಂದೂ ರಾಷ್ಟ್ರದ ಪ್ರತಿಜ್ಞೆ : 5 ನಿಮಿಷಗಳು

ಅ. ಪ್ರಾರ್ಥನೆ:

ಪ್ರಭು ಶ್ರೀರಾಮ ಮತ್ತು …… (ಯಾವ ದೇವಸ್ಥಾನದಲ್ಲಿ ಸಂಕೀರ್ತನೆ ಮಾಡಲಿದ್ದೇವೆಯೋ, ಆ ದೇವತೆಯ ಉಲ್ಲೇಖ ಮಾಡಬೇಕು) ಇವರ ಚರಣಗಳಲ್ಲಿ ಪ್ರಾರ್ಥನೆ ಮಾಡಿ ನಾವು ಈ ಕಾರ್ಯಕ್ರಮವನ್ನು ಆರಂಭಿಸೋಣ.

ಪ್ರಭು ಶ್ರೀರಾಮ ಆದರ್ಶ ಪುತ್ರ, ಆದರ್ಶ ಸಹೋದರ, ಆದರ್ಶ ಪತಿ, ಆದರ್ಶ ಪಿತ ಎಂದು ವೈಯಕ್ತಿಕ ಜೀವನದಲ್ಲಿ ಆದರ್ಶಗಳನ್ನು ಪ್ರಸ್ಥಾಪಿಸಿದರು; ಅದರೊಂದಿಗೆ ಯಜ್ಞಯಾಗ ಮತ್ತು ಆಶ್ರಮಗಳನ್ನು ಧ್ವಂಸ ಮಾಡುತ್ತಿದ್ದ ರಾಕ್ಷಸರ ಸಂಹಾರ ಮಾಡುತ್ತಾ ಋಷಿಮುನಿಗಳ ರಕ್ಷಣೆ ಮಾಡಿದರು; ಅತ್ಯಾಚಾರಿ ರಾವಣನನ್ನು ವಧಿಸಿ ಸೀತಾಮಾತೆಯನ್ನು ಅವನ ಸೆರೆಯಿಂದ ಬಿಡಿಸುತ್ತಾ ಮಹಿಳೆಯರ ಸುರಕ್ಷತೆಯನ್ನು ಹೇಗೆ ಮಾಡಬೇಕು ಮತ್ತು ಪ್ರಜೆಯ ಮೇಲೆ ತಂದೆಯಂತೆ ಪ್ರೀತಿಯನ್ನು ಹೇಗೆ ಮಾಡಬೇಕು ಎಂಬುದನ್ನು ಪ್ರತ್ಯಕ್ಷ ಕೃತಿಯಿಂದ ನಮಗೆ ಕಲಿಸಿದ್ದಾರೆ ಮತ್ತು ಆದರ್ಶವಾದ ಧರ್ಮಾಧಿಷ್ಠಿತ ರಾಮರಾಜ್ಯದ ಸ್ಥಾಪನೆ ಮಾಡಿ ಆದರ್ಶ ರಾಜನು ಹೇಗಿರಬೇಕು ಎಂಬುದರ ಪಾಠವನ್ನು ಕಲಿಸಿಕೊಟ್ಟಿದ್ದಾರೆ. ಇಂತಹ ಪ್ರಭು ರಾಮರಾಯನ ಚರಣಗಳಿಗೆ ಶರಣಾಗಿ ಪ್ರಾರ್ಥನೆ ಮಾಡೋಣ.

‘‘ಹೇ ಪ್ರಭು ರಾಮರಾಯಾ, ಸಮಸ್ತ ಹಿಂದೂಗಳ ‘ಶ್ರೀರಾಮ ದೇವಸ್ಥಾನದ’ ಇಚ್ಛೆಯನ್ನು ತಾವು ಪೂರೈಸಿದ್ದೀರಿ, ಈಗ ನಾವು ರಾಮರಾಜ್ಯದ ಸ್ಥಾಪನೆಗಾಗಿ ಪ್ರತಿಜ್ಞೆ ಮಾಡುತ್ತಿದ್ದೇವೆ. ರಾಮರಾಜ್ಯ ನಿರ್ಮಿತಿಯ ಅಂದರೆ ಹಿಂದೂ ರಾಷ್ಟ್ರ ಸ್ಥಾಪನೆಯ ಭಗವದ್ಕಾರ್ಯ ಮಾಡಲು ನಿನ್ನ ಆಶೀರ್ವಾದ ನಮ್ಮೆಲ್ಲರ ಮೇಲೆ ಸದಾ ಇರಲಿ. ರಾಮರಾಜ್ಯ ಅಂದರೆ ಹಿಂದೂ ರಾಷ್ಟ್ರ ಸ್ಥಾಪನೆಯ ಕಾರ್ಯವನ್ನು ಮಾಡಲು ನಮ್ಮೆಲ್ಲರಿಗೂ ಭಕ್ತಿ, ಶಕ್ತಿ ಮತ್ತು ಬುದ್ಧಿಯನ್ನು ನೀಡಿ, ಎಂದು ನಿಮ್ಮ ಚರಣಗಳಲ್ಲಿ ಪ್ರಾರ್ಥಿಸುತ್ತೇವೆ.’’

ಆ. ರಾಮರಾಜ್ಯ ಅಂದರೆ ಹಿಂದೂ ರಾಷ್ಟ್ರ-ಸ್ಥಾಪನೆಯ ಪ್ರತಿಜ್ಞೆ

ನನ್ನ ರಾಮರಾಯನ ಮೇಲೆ ಮತ್ತು ನನ್ನ ಧರ್ಮದ ಮೇಲೆ ನನಗೆ ಶ್ರದ್ಧೆಯಿದೆ. ನನ್ನ ಧರ್ಮಶ್ರದ್ಧೆಗಳನ್ನು ಪಾಲಿಸುವ, ಧರ್ಮದಂತೆ ಆಚರಿಸುವ ಜನ್ಮಸಿದ್ಧ ಅಧಿಕಾರ ನನಗಿದೆ.

ಪ್ರಭು ಶ್ರೀರಾಮನ ಕೃಪೆಯಿಂದ ಭವ್ಯ ಶ್ರೀರಾಮ ಮಂದಿರದ ನಿರ್ಮಿತಿಯಾಯಿತು, ಹಾಗೆಯೇ ನಮ್ಮ ಮನಸ್ಸಿನಲ್ಲಿಯೂ ಶ್ರೀರಾಮನ ಭಕ್ತಿಯ ದೇವಸ್ಥಾನ ನಿರ್ಮಿಸಲು ನಾನು ಪ್ರಯತ್ನಿಸುವೆ ಅಂದರೆ ನಿರಂತರ ಶ್ರೀರಾಮಭಕ್ತಿ ಮಾಡುವೆ.

ಹಿಂದೂ ಸಂಸ್ಕೃತಿ, ಪರಂಪರೆ, ಹಬ್ಬ-ಉತ್ಸವಗಳ ಸಂರಕ್ಷಣೆ-ಸಂವರ್ಧನೆ-ಆಚರಣೆ ಮತ್ತು ಪ್ರಸಾರವನ್ನು ನಾನು ಸ್ವತಃ ಮಾಡುವೆ, ಹಾಗೆಯೇ ಆ ಬಗ್ಗೆ ನನ್ನ ಧರ್ಮಬಾಂಧವರಲ್ಲಿಯೂ ಜಾಗೃತಿ ಮೂಡಿಸುವೆ.

ಹೇ ರಾಮರಾಯಾ, ನೀನು ಹೇಗೆ ಧರ್ಮದ ರಕ್ಷಣೆ ಮಾಡಿದೆಯೋ, ಹಾಗೆಯೇ ಹಿಂದೂ ಧರ್ಮ, ವೇದಾದಿ ಧರ್ಮಗ್ರಂಥಗಳು, ದೇವಸ್ಥಾನಗಳು, ಗೋಮಾತೆ ಮತ್ತು ಸ್ತ್ರೀಯರ ರಕ್ಷಣೆ ಮಾಡುವುದು ನನ್ನ ಪರಮಕರ್ತವ್ಯವಾಗಿದೆ ಎಂದು ಭಾವಿಸಿ, ಇವುಗಳ ಮೇಲೆ ಆಗುವ ಆಘಾತಗಳನ್ನು ತಡೆಯಲು ನಾನು ಪ್ರಾಮಾಣಿಕವಾಗಿ ಪ್ರಯತ್ನಿಸುವೆ.

500 ವರ್ಷಗಳ ಕಾಲ ಅತಿಕ್ರಮಣಕ್ಕೊಳಗಾಗಿದ್ದ ಶ್ರೀರಾಮಜನ್ಮಭೂಮಿಯು ಹೇಗೆ ಮುಕ್ತವಾಯಿತೋ, ಅದೇ ರೀತಿ ನನ್ನ ಪುಣ್ಯ ಭಾರತಭೂಮಿಯಲ್ಲಿ ನೆಲೆಸಿರುವ ಮತ್ತು ಆಕ್ರಮಣಕಾರರಿಂದ ನಷ್ಟಗೊಂಡ ಪ್ರತಿಯೊಂದು ದೇವಸ್ಥಾನದ ಜೀರ್ಣೋದ್ಧಾರ ಮಾಡಲು ನಾನು ಪ್ರಯತ್ನಿಸುವೆ.

‘ಧರ್ಮನಿರಪೇಕ್ಷ’ ಭಾರತವನ್ನು ಮತ್ತೆ ‘ರಾಮರಾಜ್ಯ’ ಅಂದರೆ ‘ಧರ್ಮಾಧಿಷ್ಠಿತ ಹಿಂದೂ ರಾಷ್ಟ್ರ’ವನ್ನಾಗಿ ಮಾಡುವುದು ಮತ್ತು ಆದರ್ಶ-ಸುಖಿ-ಸಮೃದ್ಧ-ಸಂಪನ್ನ-ಸುರಕ್ಷಿತ-ಸುಸಜ್ಜಿತವನ್ನಾಗಿ ಮಾಡುವುದೇ ನನ್ನ ಜೀವನದ ಧ್ಯೇಯವಾಗಿರುವುದು. ಇದಕ್ಕಾಗಿ ನಾನು ಕೊನೆಯ ಉಸಿರಿರುವವರೆಗೆ ಕಾರ್ಯನಿರತನಾಗಿರುವೆ!

ಇ. ಪ್ರತಿಜ್ಞೆಯ ಕೊನೆಯಲ್ಲಿ ಕೊಡುವ ಘೋಷಣೆ

ಜಯ ಶ್ರೀರಾಮ್ !
ಸಿಯಾವರ ರಾಮಚಂದ್ರ ಕೀ ಜೈ !
ಈಗ ಒಂದೇ ಲಕ್ಷ್ಯ, ಒಂದೇ ಧ್ಯೇಯ ! ಹಿಂದೂ ರಾಷ್ಟ್ರ, ಹಿಂದೂ ರಾಷ್ಟ್ರ ! ಜಯತು ಜಯತು ಹಿಂದೂರಾಷ್ಟ್ರಮ್ ।।

2. ಅಭಿಯಾನವನ್ನು ಹೇಗೆ ನಡೆಸಬೇಕು?

ಅ. ಜಿಲ್ಲಾ ಸ್ತರದಲ್ಲಿ ಧರ್ಮಪ್ರೇಮಿಗಳು, ಸತ್ಸಂಗಕ್ಕೆ ಸೇರುವ ಜಿಜ್ಞಾಸುಗಳು, ಯುವ ಸಾಧನಾ ಸತ್ಸಂಗಕ್ಕೆ ಬರುವ ಯುವಕರು, ಇವರೆಲ್ಲರ ಮಾಧ್ಯಮದಿಂದ ಈ ಅಭಿಯಾನವನ್ನು ವ್ಯಾಪಕ ಸ್ತರದಲ್ಲಿ ನಡೆಸಬಹುದು.

ಆ. ಸಮಷ್ಟಿ ನಾಮಜಪವು ಲಯಬದ್ಧವಾಗಲು, ನಾಮಜಪದ ಸ್ಥಳದಲ್ಲಿ ಪಾಲ್ಗೊಳ್ಳುವ ಭಕ್ತರಿಗೆ ಕೇಳಿಸುವಂತಹ ಧ್ವನಿಯಲ್ಲಿ ನಾಮಜಪದ ‘ಆಡಿಯೋ’ ಹಾಕಬೇಕು. ಈ ‘ಆಡಿಯೋ’ Sanatan.org/kannada/audio-gallery ಇಲ್ಲಿ ಉಚಿತವಾಗಿ ಲಭ್ಯವಿದೆ.

ಇ. ಈ ಅಭಿಯಾನವನ್ನು ‘ಸೋಶಿಯಲ್ ಮೀಡಿಯಾ’ದಿಂದಲೂ (ಸಾಮಾಜಿಕ ಮಾಧ್ಯಮಗಳಿಂದಲೂ) ಪ್ರಸಾರ ಮಾಡಿ. ಚಿತ್ರಗಳನ್ನು ಸನಾತನ ಸಂಸ್ಥೆಯ X ಖಾತೆಯೊಂದಿಗೆ ಶೇರ್ ಮಾಡಿ.

ಬಾಂಧವರೇ, ರಾಮರಾಜ್ಯದ ಸ್ಥಾಪನೆಗಾಗಿ ‘ರಾಮನಾಮ ಸಂಕೀರ್ತನ’ ಅಭಿಯಾನದ ಮಾಧ್ಯಮದಿಂದ ನಮ್ಮ ಅಂತಃಕರಣದಲ್ಲಿ ಮತ್ತು ಮುಂದೆ ಹೋಗಿ ಸಂಪೂರ್ಣ ವಿಶ್ವದಲ್ಲಿ ರಾಮರಾಜ್ಯ ನಿರ್ಮಾಣ ಮಾಡುವ ಪಾವನ ಸಂಧಿಯು ಈಶ್ವರೀ ಕೃಪೆಯಿಂದ ಪ್ರಾಪ್ತವಾಗಿದೆ, ಈ ಸಂಧಿಯ ಲಾಭ ಪಡೆದು ಈಶ್ವರನ ಕೃಪೆಯನ್ನು ಸಂಪಾದಿಸಿ!’

Leave a Comment