ಶ್ರದ್ಧಾವಂತ ಸಮಾಜಕ್ಕೆ ಕರೆ

ಕೊರೋನಾ ವಿಷಾಣುಗಳ ವಿರುದ್ಧ ನಮ್ಮಲ್ಲಿ ಪ್ರತಿರೋಧಕ್ಷಮತೆ ಹೆಚ್ಚಿಸಲು ವೈದ್ಯಕೀಯ ಚಿಕಿತ್ಸೆಗಳೊಂದಿಗೆ ಆಧ್ಯಾತ್ಮಿಕ ಶಕ್ತಿ ಸಿಗಲು ‘ಶ್ರೀ ದುರ್ಗಾದೇವಿ, ಶ್ರೀ ದತ್ತ ಮತ್ತು ಶಿವ’ ಈ ದೇವತೆಗಳ ಒಟ್ಟಿಗಿನ ನಾಮಜಪವನ್ನು ಧ್ವನಿವರ್ಧಕದಲ್ಲಿ ಎಲ್ಲೆಡೆ ಹಾಕಲು ಆಯೋಜನೆ ಮಾಡಿ !

‘ನಾಮಜಪವು ಕೇವಲ ಆಧ್ಯಾತ್ಮಿಕ ಉನ್ನತಿಗಾಗಿ ಪೂರಕವಾಗಿರದೇ ಅದು ವಿವಿಧ ರೋಗಗಳ ನಿರ್ಮೂಲನೆಗಾಗಿಯೂ ಲಾಭದಾಯಕವಾಗಿರುತ್ತದೆ, ಎಂಬುದು ಸಾಬೀತಾಗಿದೆ. ಪ್ರಸ್ತುತ ಕೊರೋನಾ ಮಹಾಮಾರಿಯ ಕಾಲಾವಧಿಯಲ್ಲಿ ರೋಗನಿರೋಧಕ ಕ್ಷಮತೆಯನ್ನು ಹೆಚ್ಚಿಸಲು ಸಮಾಜದಲ್ಲಿ ಯೋಗಾಸನಗಳು, ಪ್ರಾಣಾಯಾಮ, ಆಯುರ್ವೇದ ಚಿಕಿತ್ಸೆ ಇತ್ಯಾದಿ ಪ್ರಯತ್ನಗಳು ಆಗುತ್ತಿವೆ. ಅದರೊಂದಿಗೆ ರೋಗನಿರೋಧಕ ಶಕ್ತಿಗೆ ಪೂರಕವಾಗಿರುವ ಆತ್ಮಬಲವನ್ನು ಹೆಚ್ಚಿಸಲು ಸಾಧನೆಯನ್ನೇ ಮಾಡಬೇಕಾಗುತ್ತದೆ.

ಕೊರೋನಾದ ಕಾಲಾವಧಿಯಲ್ಲಿ ರೋಗಿಗಳಲ್ಲಿ ಸಾಧನೆಯ ಆಧ್ಯಾತ್ಮಿಕ ಬಲವನ್ನು ಹೆಚ್ಚಿಸಲು ಅಂದರೆ ಕೊರೋನಾ ವಿಷಾಣುವಿನ ಪ್ರಭಾವವು ತಮ್ಮ ಮೇಲೆ ಆಗದಿರಲು ಅಥವಾ ಆಗಿದ್ದರೆ ಅದನ್ನು ನಾಶ ಮಾಡಲು ಆಧ್ಯಾತ್ಮಿಕ ದೃಷ್ಟಿಯಿಂದ ದೇವಿ, ದತ್ತ ಮತ್ತು ಶಿವ ಈ ಮೂರು ತತ್ತ್ವಗಳ ಅವಶ್ಯಕತೆ ಇದೆ. ಅದಕ್ಕನುಸಾರ ಕೊರೋನಾ ವಿಷಾಣುಗಳ ವಿರುದ್ಧ ನಮ್ಮಲ್ಲಿ ಪ್ರತಿರೋಧಕ್ಷಮತೆ ಹೆಚ್ಚಿಸಲು ವೈದ್ಯಕೀಯ ಚಿಕಿತ್ಸೆಗಳೊಂದಿಗೆ ಆಧ್ಯಾತ್ಮಿಕ ಬಲ ಸಿಗಲು ‘ಶ್ರೀ ದುರ್ಗಾದೇವ್ಯೈ ನಮಃ – ಶ್ರೀ ದುರ್ಗಾದೇವ್ಯೈ ನಮಃ – ಶ್ರೀ ದುರ್ಗಾದೇವ್ಯೈ ನಮಃ – ಶ್ರೀ ಗುರುದೇವ ದತ್ತ – ಶ್ರೀ ದುರ್ಗಾದೇವ್ಯೈ ನಮಃ – ಶ್ರೀ ದುರ್ಗಾದೇವ್ಯೈ ನಮಃ – ಶ್ರೀ ದುರ್ಗಾದೇವ್ಯೈ ನಮಃ – ಓಂ ನಮಃ ಶಿವಾಯ’ ಈ ನಾಮಜಪವನ್ನು ಮಾಡಿ.

ಈ ನಾಮಜಪನ್ನು ೧೦೮ ಸಲ (೧ ಮಾಲೆ) ಮಾಡಲು ೪೦ ನಿಮಿಷಗಳು ತಗಲುತ್ತದೆ. ‘ಕೊರೋನಾ ವಿಷಾಣುಗಳ ಪ್ರಭಾವ ಜಗತ್ತಿನಾದ್ಯಂತ ಇರುವವರೆಗೆ ಪ್ರತಿಬಂಧಕ ಉಪಾಯವೆಂದು ವೈದ್ಯಕೀಯ ಚಿಕಿತ್ಸೆಗಳೊಂದಿಗೆ ಸ್ವಂತದ ಆಧ್ಯಾತ್ಮಿಕ ಬಲವನ್ನು ಹೆಚ್ಚಿಸಲು ಈ ನಾಮಜಪವನ್ನು ಪ್ರತಿದಿನ ೧ ಮಾಲೆಯಷ್ಟು ಮಾಡಬೇಕು. ಕೆಲವರಿಗೆ ಕೊರೋನಾ ವಿಷಾಣುವಿನ ಸೋಂಕು ತಗಲಿರುವಂತಹ ಲಕ್ಷಣಗಳು ಕಂಡುಬಂದಲ್ಲಿ ಆಧ್ಯಾತ್ಮಿಕ ಬಲ ಹೆಚ್ಚಿನ ಪ್ರಮಾಣದಲ್ಲಿ ಹೆಚ್ಚಾಗಬೇಕೆಂದು ಅವರು ಈ ನಾಮಜಪವನ್ನು ಪ್ರತಿದಿನ ೩ ಗಂಟೆ (೬ ಮಾಲೆ) ಮಾಡಬೇಕು.

ಸನಾತನ ಸಂಸ್ಥೆಯ ಸಾಧಕರು, ಹಿತಚಿಂತಕರು, ಧರ್ಮಪ್ರೇಮಿಗಳು, ಹಿಂದುತ್ವನಿಷ್ಠರು, ‘ಸನಾತನ ಪ್ರಭಾತ’ದ ವಾಚಕರು ಈ ನಾಮಜಪವನ್ನು ಕಳೆದ ೧ ವರ್ಷದಿಂದ ಪ್ರತಿನಿತ್ಯ ಮಾಡುತ್ತಿದ್ದಾರೆ. ಅದಕ್ಕಾಗಿ ಅವರಿಗೆ ಈ ನಾಮಜಪದಿಂದ ಆತ್ಮಬಲ ಹೆಚ್ಚಾಗುತ್ತಿರುವ ಅನುಭೂತಿಯೂ ಬರುತ್ತಿದೆ.

ನಾಮಜಪದಿಂದ ಸಿಗುವಂತಹ ಸಕಾರಾತ್ಮಕ ಶಕ್ತಿ ಹಾಗೂ ಆತ್ಮಬಲ ಹೆಚ್ಚಾಗಿಸಲು ಆಗುವ ಆಧ್ಯಾತ್ಮಿಕ ಲಾಭವನ್ನು ಗಮನದಲ್ಲಿಟ್ಟುಕೊಂಡು ೩೧ ಮೇ ೨೦೨೧ ರ ತನಕ ಪಶ್ಚಿಮ ಮಹಾರಾಷ್ಟ್ರದ ಪುಣೆಯಲ್ಲಿ ೧೧೨, ಸಾತಾರಾದಲ್ಲಿ ೪೨, ಸೋಲಾಪುರದಲ್ಲಿ ೪೨, ಕೊಲ್ಲಾಪುರದಲ್ಲಿ ೪೧, ಸಾಂಗ್ಲಿಯಲ್ಲಿ ೩೨ ಹಾಗೂ ಗೋವಾ ರಾಜ್ಯದಲ್ಲಿ ೧೧ ಹೀಗೆ ಒಟ್ಟು ೨೭೯ ಸ್ಥಳಗಳಲ್ಲಿ ಈ ನಾಮಜಪವವನ್ನು ಧ್ವನಿವರ್ಧಕದಲ್ಲಿ ಹಾಕಲಾಗಿದೆ. ಈ ಜಿಲ್ಲೆಯಲ್ಲಿನ ಕೋವಿಡ್ ಕೇರ್ ಸೆಂಟರ್, ಆಸ್ಪತ್ರೆಗಳು, ಚಿಕಿತ್ಸಾಲಯಗಳು, ಔಷಧಾಲಯಗಳು, ಲ್ಯಾಬ್ ಇತ್ಯಾದಿ ಸ್ಥಳಗಳಲ್ಲಿ, ಅದೇ ರೀತಿ ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳ ಕೆಲವು ದೇವಸ್ಥಾನಗಳಲ್ಲಿಯೂ ಈ ನಾಮಜಪವನ್ನು ಹಾಕಲಾಗುತ್ತಿದೆ.

ಶ್ರದ್ಧಾವಂತ ಸಮಾಜಕ್ಕೆ ಕರೆ

ವೈದ್ಯಕೀಯ ಚಿಕಿತ್ಸೆಗಳೊಂದಿಗೆ ಆಧ್ಯಾತ್ಮಿಕ ಸಾಧನೆ ಮಾಡಿದರೆ ಸಮಾಜಕ್ಕೆ ಲಾಭವಾಗುತ್ತದೆ, ಅದಕ್ಕಾಗಿ ಭಾರತದಲ್ಲಿನ ಶ್ರದ್ಧಾವಂತ ಸಮಾಜವು ಕೊರೋನಾ ಮಹಾಮಾರಿಯ ಕಾಲಾವಧಿಯಲ್ಲಿ ಶ್ರೀ ದುರ್ಗಾದೇವ್ಯೈ ನಮಃ – ಶ್ರೀ ದುರ್ಗಾದೇವ್ಯೈ ನಮಃ – ಶ್ರೀ ದುರ್ಗಾದೇವ್ಯೈ ನಮಃ – ಶ್ರೀ ಗುರುದೇವ ದತ್ತ – ಶ್ರೀ ದುರ್ಗಾದೇವ್ಯೈ ನಮಃ – ಶ್ರೀ ದುರ್ಗಾದೇವ್ಯೈ ನಮಃ – ಶ್ರೀ ದುರ್ಗಾದೇವ್ಯೈ ನಮಃ – ಓಂ ನಮಃ ಶಿವಾಯ ! ಈ ನಾಮಜಪವನ್ನು ಮಾಡಿ. ಜೊತೆಗೆ ನಮ್ಮ ಮನೆ, ಕಛೇರಿ, ಅಂಗಡಿಗಳು, ಆಸ್ಪತ್ರೆ, ಚಿಕಿತ್ಸಾಲಯ, ಕೋವಿಡ್ ಕೇರ್ ಸೆಂಟರ್, ಔಷಧಾಲಯಗಳು, ಲ್ಯಾಬ್ ಹಾಗೂ ದೇವಸ್ಥಾನಗಳಲ್ಲಿ ಈ ನಾಮಜಪವನ್ನು ಧ್ವನಿವರ್ಧಕದಲ್ಲಿ ಹಾಕಿ ಆಧ್ಯಾತ್ಮಿಕ ಸೇವೆಯಲ್ಲಿ ಸಹಭಾಗಿಯಾಗಿ ಎಂದು ವಿನಂತಿ.

ಈ ನಾಮಜಪ ಸನಾತನ ಸಂಸ್ಥೆಯು ಧ್ವನಿಮುದ್ರಣ ಮಾಡಿದ್ದು ಅದನ್ನು ತಮ್ಮ ಸಂಪರ್ಕದಲ್ಲಿರುವ ಸನಾತನದ ಸಾಧಕರಿಂದ ಪಡೆದುಕೊಳ್ಳಬಹುದು. ತಮಗೆ ಈ ಧ್ವನಿಮುದ್ರಣ ನಾಮಜಪ ಸಿಗದೇ ಇದ್ದಲ್ಲಿ ಈ ಮುಂದಿನ ವಿಳಾಸದಲ್ಲಿ ಅಥವಾ ಸಂಚಾರವಾಣಿಯಲ್ಲಿ ಸಂಪರ್ಕಿಸಿ.

ವಿಳಾಸ – ಸೌ. ಭಾಗ್ಯಶ್ರೀ ಸಾವಂತ
ಸನಾತನ ಆಶ್ರಮ, ೨೪/ಬಿ ರಾಮನಾಥಿ, ಬಾಂದೊಡಾ, ಫೋಂಡಾ, ಗೋವಾ. ಪಿನ್‌ಕೋಡ್ ೪೦೩೪೦೧
ಸಂಚಾರವಾಣಿ ಸಂಖ್ಯೆ – ೯೩೭೯೭೭೧೭೭೧

ಅದೇರೀತಿ ಧ್ವನಿವರ್ಧಕದಲ್ಲಿ ಈ ಮೇಲಿನ ನಾಮಜಪ ಹಾಕುವ ಬಗೆಗಿನ ಈ ಅಭಿಯಾನವು ನಡೆಯುತ್ತಿದ್ದಲ್ಲಿ ಅದರ ಮಾಹಿತಿಯನ್ನು ತಮ್ಮ ಸಂಪರ್ಕದಲ್ಲಿರುವ ಸನಾತನದ ಸಾಧಕರಿಗೆ ಅಥವಾ ಸೌ. ಭಾಗ್ಯಶ್ರೀ ಸಾವಂತ ಇವರಿಗೆ ನೀಡಿ.

– (ಶ್ರೀಸತ್‌ಶಕ್ತಿ) ಸೌ. ಬಿಂದಾ ಸಿಂಗಬಾಳ, ಸನಾತನ ಆಶ್ರಮ, ರಾಮನಾಥಿ, ಗೋವಾ.(೧.೬.೨೦೨೧)

1 thought on “ಶ್ರದ್ಧಾವಂತ ಸಮಾಜಕ್ಕೆ ಕರೆ”

Leave a Comment