ಆನಂದಮಯ ಜೀವನಕ್ಕಾಗಿ ಸನಾತನ ಸಂಸ್ಥೆಯಿಂದ ಕುದೂರಿನಲ್ಲಿ ಸಾರ್ವಜನಿಕ ಸಾಧನಾ ಪ್ರವಚನ !

ಆದರ್ಶ ಯುಗಾದಿ ಆಚರಣೆಯ ಪ್ರಾತ್ಯಕ್ಷಿಕೆ ಪ್ರಸ್ತುತಿ…

ಕುದೂರಿನಲ್ಲಿ ನಡೆದ ಸಾಧನಾ ಪ್ರವಚನ

ಕುದೂರು : ಈ ಜಗತ್ತಿನಲ್ಲಿ ಜನಿಸಿದ ಹುಳು ಹುಪ್ಪಟೆಗಳಿಂದ ಹಿಡಿದು ಶ್ರೇಷ್ಠವೆನಿಸಿದ ಮಾನವನ ತನಕದ ಪ್ರತಿಯೊಂದು ಜೀವಿಯೂ ಅನುಕ್ಷಣವೂ ಸುಖ ಸಿಗಬೇಕೆಂದು ಚಡಪಡಿಸುತ್ತಿರುತ್ತದೆ. ನಾವು ಏನೆಲ್ಲ ಮಾಡುತ್ತೇವೋ ಅದೆಲ್ಲವೂ ಸುಖ ಪ್ರಾಪ್ತಿಗಾಗಿಯೇ ಇದೆ. ನಮ್ಮ ಜೀವನದಲ್ಲಿ ಅನುಭವಿಸುವ ಸುಖ ಕೆಲ ಕಾಲವಷ್ಟೆ ಇರುತ್ತದೆ. ಆಧ್ಯಾತ್ಮಿಕ ಸಾಧನೆಯಿಂದ ಸಿಗುವ ಆನಂದ ಮಾತ್ರ ಚಿರಕಾಲ ಇರುತ್ತದೆ. ಹಾಗಾಗಿ ಆನಂದವನ್ನು ಪಡೆಯುವುದು ಹೇಗೆ ಈ ಬಗ್ಗೆ ದಿನಾಂಕ 28 ಮಾರ್ಚ್ 2024 ರಂದು ಕುದೂರಿನ ಶ್ರೀವಾಸವಿ ಕಲ್ಯಾಣ ಮಂಟಪದಲ್ಲಿ ಸನಾತನ ಸಂಸ್ಥೆ ವತಿಯಿಂದ ಸಾರ್ವಜನಿಕ ಸಾಧನಾ ಪ್ರವಚನ ಆಯೋಜಿಸಲಾಗಿತ್ತು. ಸನಾತನ ಸಂಸ್ಥೆಯ ಸೌ. ಸಂಗೀತ ಶಶಿಧರ್ ಆಚಾರ್ಯ ಇವರು ಉಪಸ್ಥಿತ ಜಿಜ್ಞಾಸುಗಳಿಗೆ ಮಾರ್ಗದರ್ಶನ ಮಾಡಿದರು.

ಹಿಂದೂ ಹೊಸ ವರ್ಷ ಯುಗಾದಿಯನ್ನು ಶಾಸ್ತ್ರಾನುಸಾರ ಆಚರಿಸಿ ! – ಸನಾತನ ಸಂಸ್ಥೆ

ಬ್ರಹ್ಮಧ್ವಜ ಏರಿಸುವ ಪ್ರಾತ್ಯಕ್ಷಿಕೆ

ಈ ವೇಳೆ ಯುಗಾದಿಯಂದು ಮನೆಯೆದುರು ಏರಿಸಲಾಗುವ ಬ್ರಹ್ಮಧ್ವಜದ ಮಹತ್ವ ತಿಳಿಸಿ ಅದರ ಪ್ರಾತ್ಯಕ್ಷಿಕೆ ಪ್ರಸ್ತುತ ಪಡಿಸಲಾಯಿತು. ಬ್ರಹ್ಮದೇವನು ಯುಗಾದಿ ಪಾಡ್ಯದಂದು ಸೃಷ್ಟಿಯನ್ನು ನಿರ್ಮಿಸಿದ್ದರಿಂದ ಧರ್ಮಶಾಸ್ತ್ರದಲ್ಲಿ ಈ ಧ್ವಜಕ್ಕೆ ‘ಬ್ರಹ್ಮ ಧ್ವಜ’ ಎನ್ನುತ್ತಾರೆ. ಇದಕ್ಕೆ ಕೆಲವು ಜನರು ‘ಇಂದ್ರಧ್ವಜ’ ಎಂದೂ ಹೇಳುತ್ತಾರೆ.
ಇದು ವಿಜಯದ ಮತ್ತು ಆನಂದದ ಪ್ರತೀಕವಾಗಿದೆ, ಆದುದರಿಂದ ಮನೆಮನೆಗಳಲ್ಲಿ ಬ್ರಹ್ಮಧ್ವಜವನ್ನು ನಿಲ್ಲಿಸುತ್ತಾರೆ. ವಿಜಯದ ಪ್ರತೀಕವು ಎತ್ತರವಾಗಿರುತ್ತದೆ; ಆದುದರಿಂದ ಬ್ರಹ್ಮಧ್ವಜವನ್ನು ಎತ್ತರವಾಗಿ ನಿಲ್ಲಿಸುತ್ತಾರೆ. ಸೂರ್ಯೋದಯದ ನಂತರ ಬ್ರಹ್ಮಧ್ವಜವನ್ನು ಕೂಡಲೇ ನಿಲ್ಲಿಸಬೇಕಾಗಿರುತ್ತದೆ. ಅಪವಾದಾತ್ಮಕ ಸ್ಥಿತಿಯಲ್ಲಿ (ಉದಾ.ತಿಥೀಕ್ಷಯ) ಪಂಚಾಂಗವನ್ನು ನೋಡಿ ಬ್ರಹ್ಮಧ್ವಜವನ್ನು ನಿಲ್ಲಿಸಬೇಕು.

ಯುಗಾದಿಯ ದಿನ ಬ್ರಹ್ಮಾಂಡದಲ್ಲಿನ ಪ್ರಜಾಪತಿ ದೇವತೆಯ ಲಹರಿಗಳು ಪೃಥ್ವಿಯ ಮೇಲೆ ಎಲ್ಲಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಬರುತ್ತವೆ. ಬ್ರಹ್ಮಧ್ವಜದಿಂದಾಗಿ ವಾತಾವರಣದಲ್ಲಿನ ಪ್ರಜಾಪತಿ-ಲಹರಿಗಳು ಕಲಶದ ಸಹಾಯದಿಂದ ಮನೆಯೊಳಗೆ ಪ್ರವೇಶಿಸುತ್ತವೆ. (ಇದು ದೂರದರ್ಶನದ ಆಂಟೆನಾದಂತೆ ಕಾರ್ಯವನ್ನು ಮಾಡುತ್ತದೆ.) ಮರುದಿನದಿಂದ ಈ ಕಲಶವನ್ನು ನೀರು ಕುಡಿಯಲು ಉಪಯೋಗಿಸಬೇಕು; ಪ್ರಜಾಪತಿ-ಲಹರಿಗಳ ಸಂಸ್ಕಾರವಾಗಿರುವ ಕಲಶವು ಅದೇ ರೀತಿಯ ಸಂಸ್ಕಾರಗಳನ್ನು ಕುಡಿಯುವ ನೀರಿನ ಮೇಲೆ ಮಾಡುತ್ತದೆ, ಇದರಿಂದ ನಮಗೆ ವರ್ಷವಿಡೀ ಪ್ರಜಾಪತಿ-ಲಹರಿಗಳು ಪ್ರಾಪ್ತವಾಗುತ್ತವೆ.

Leave a Comment